ಆರತಿ
ಆರತಿ | |
---|---|
ಜನನ | ಭಾರತಿ[೧] ೧೯೫೪ ಮೈಸೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ |
ವೃತ್ತಿ(ಗಳು) | ನಟಿ, ನಿರ್ದೇಶಕಿ |
ಸಕ್ರಿಯ ವರ್ಷಗಳು | ೧೯೬೯–೧೯೮೭ |
ಸಂಗಾತಿ | ಚಂದ್ರಶೇಖರ್ ದೇಸಾಯಿಗೌಡರ್ |
ಆರತಿ (ಜನನ:೧೯೫೪ ಅರಗಲ್ ಮೈಸೂರು) ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ. "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ, ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕಗಳ ಜನಪ್ರಿಯ ತಾರೆ ಎನಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಆರತಿ, ವಿಧಾನ ಪರಿಷತ್ತಿಗೂ ನಾಮನಿರ್ದೇಶನಗೊಂಡಿದ್ದರು.
ವೈಯುಕ್ತಿಕ ಜೀವನ
[ಬದಲಾಯಿಸಿ]೧೯೮೭ರಲ್ಲಿ ಚಿತ್ರ ರಂಗವನ್ನು ತೊರೆದು ಮದುವೆಯಾಗಿ ಅಮೆರಿಕದಲ್ಲಿ ನೆಲಸಿದ ಇವರು ೨೦೦೫ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು ಮಿಠಾಯಿ ಮನೆ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
ನಟಿಸಿರುವ ಚಿತ್ರಗಳು
[ಬದಲಾಯಿಸಿ]- ರಂಗನಾಯಕಿ, (೧೯೮೧)
- ಹೊಂಬಿಸಿಲು, (೧೯೭೮)
- ಉಪಾಸನೆ, (೧೯೭೪)
- ರಾಜ ನನ್ನ ರಾಜ, (೧೯೭೬)
- ಸಿಪಾಯಿರಾಮು, (೧೯೭೧)
- ನಾಗರಹಾವು, (೧೯೭೨)
- ಬಂಗಾರದ ಪಂಜರ, (೧೯೭೩)
- ಪ್ರೇಮದ ಕಾಣಿಕೆ, (೧೯೭೬)
- ಎಡಕಲ್ಲು ಗುಡ್ಡದ ಮೇಲೆ, (೧೯೭೩)
- ಸತಿ ಸಕ್ಕೂಬಾಯಿ, (೧೯೮೫)
- ಮುಳ್ಳಿನ ಗುಲಾಬಿ, (೧೯೮೨)
- ಶುಭಮಂಗಳ (೧೯೭೫)
- ವಸಂತ ಲಕ್ಷ್ಮಿ (೧೯೭೮)
- ಬಿಳಿ ಹೆಂಡ್ತಿ (೧೯೭೫)
- ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
- ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ (೧೯೮೧)
- ಭಕ್ತ ಸಿರಿಯಾಳ (೧೯೮೦)
- ಹಾವು ಏಣಿಯಾಟ (೧೯೮೫)
- ತಿರುಗುಬಾಣ (೧೯೮೩)
- ಗಂಧರ್ವ ಗಿರಿ (೧೯೮೩)
- ಬಂಗಾರದ ಜಿಂಕೆ (೧೯೮೦)
- ಮುತ್ತೈದೆ ಭಾಗ್ಯ (೧೯೮೩)
- ಕಲಿಯುಗ (೧೯೮೪)
- ಜಿದ್ದು (೧೯೮೪)
- ಪೆದ್ದ ಗೆದ್ದ (೧೯೮೨)
- ಗಣೇಶ ಮಹಿಮೆ (೧೯೮೧)
- ಸುವರ್ಣ ಸೇತುವೆ (೧೯೮೨)
- ಲಕ್ಷ್ಮಿ ಕಟಾಕ್ಷ (೧೯೮೫)
ಹಾಗೂ ಇನ್ನೂ ಅನೇಕ... ಇವುಗಳಲ್ಲಿ, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. ಕಸ್ತೂರಿ ನಿವಾಸ, ರಾಜಾ ನನ್ನ ರಾಜಾ, ಸಿಪಾಯಿ ರಾಮು, ಬಂಗಾರದ ಪಂಜರ, ಪ್ರೇಮದ ಕಾಣಿಕೆ ಮುಂತಾದ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಅಮೇರಿಕಾದಲ್ಲಿ ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "ಮಿಠಾಯಿಮನೆ" ಚಿತ್ರದ ಮೂಲಕ ಆರತಿಯವರು ಕನ್ನಡ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
ನಿರ್ದೇಶಿಸಿರುವ ಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ನಟಿ 'ಆರತಿ'ಯನ್ನು ಪರಿಚಯ ಮಾಡಿದ್ದು, ಆಮೇಲೆ ಪುಟ್ಟಣ್ಣ ಅವರನ್ನ ಮದುವೆಯಾದ ಕಥೆ / Actor S Shivaram Life Story P-4 [The Story of Aarathi's Introduction and Marriage] (in Kannada). Heggadde Studio. 20 August 2020. Event occurs at 6:07. Retrieved 8 May 2021.
{{cite AV media}}
: CS1 maint: unrecognized language (link)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಆರತಿ ಐ ಎಮ್ ಡಿ ಬಿನಲ್ಲಿ
- http://www.apgap.com/aarathi-biography-and-filmo-graphy/ Archived 2013-07-03 ವೇಬ್ಯಾಕ್ ಮೆಷಿನ್ ನಲ್ಲಿ. Aarthi Kannada Actress Rare Photos and Videos
- [೧] Archived 2013-03-03 ವೇಬ್ಯಾಕ್ ಮೆಷಿನ್ ನಲ್ಲಿ.
- [೨]