ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಲಾವೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಾಒಸ್ ಇಂದ ಪುನರ್ನಿರ್ದೇಶಿತ)
Lao People's Democratic Republic
ສາທາລະນະລັດ ປະຊາທິປະໄຕ ປະຊາຊົນລາວ
Sathalanalat Paxathipatai Paxaxon Lao
Flag of Laos
Flag
Coat of arms of Laos
Coat of arms
Motto: "ສັນຕິພາບ ເອກະລາດ ປະຊາທິປະໄຕ ເອກະພາບ ວັດທະນາຖາວອນ"
"Peace, Independence, Democracy, Unity and Prosperity"
Anthem: Pheng Xat Lao
Location of ಲಾವೋಸ್ (green) in ASEAN (dark grey)  –  [Legend]
Location of ಲಾವೋಸ್ (green)

in ASEAN (dark grey)  –  [Legend]

Capital
and largest city
Vientiane
Official languagesLao
Official scriptsLao script
Demonym(s)Laotian, Lao
GovernmentSocialist republic,
Single-party communist state
• President
Lt. Gen. Choummaly Sayasone
Bounnhang Vorachith
Bouasone Bouphavanh
Thongsing Thammavong
Khammi Sayavong
Independence 
• Date
19 July, 1949
Area
• Total
236,800 km2 (91,400 sq mi) (83rd)
• Water (%)
2
Population
• 2009 estimate
6,320,000[] (101st)
• 1995 census
4,574,848
• Density
26.7/km2 (69.2/sq mi) (177th)
GDP (PPP)2008 estimate
• Total
$13.310 billion[] (129th)
• Per capita
$2,127[] (137th)
GDP (nominal)2008 estimate
• Total
$5.374 billion[]
• Per capita
$859[]
Gini (2008)34.6
medium
HDI (2007)Increase 0.619[]
Error: Invalid HDI value · 133rd
CurrencyKip (LAK)
Time zoneUTC+7
Driving sideright
Calling code856
ISO 3166 codeLA
Internet TLD.la

ಅಧಿಕೃತವಾಗಿ ಲಾವೊ ಪೀಪಲ್ಸ್ ಡೆಮೋಕ್ರಟಿಕ್ ರಿಪಬ್ಲಿಕ್ ಎಂದು ಕರೆಯುವ ಲಾವೋಸ್‌‌ (pronounced /ˈlɑː.oʊs/, /ˈlaʊ/ ಅಥವಾ /ˈleɪ.ɒs/) ಆಗ್ನೇಯ ಏಷ್ಯಾಸಂಪೂರ್ಣವಾಗಿ ನೆಲಾವೃತವಾದ ಒಂದು ರಾಷ್ಟ್ರವಾಗಿದೆ. ಇದು ವಾಯವ್ಯದಲ್ಲಿ ಬರ್ಮಾ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ(ಪ್ರಜಾಪ್ರಭುತ್ವ ಚೀನಾ), ಪೂರ್ವದಲ್ಲಿ ವಿಯೆಟ್ನಾಂ, ದಕ್ಷಿಣದಲ್ಲಿ ಕಾಂಬೋಡಿಯ ಹಾಗೂ ಪಶ್ಚಿಮದಲ್ಲಿ ಥೈಲೆಂಡ್‌ ದೇಶಗಳ ಗಡಿಗಳಿಂದ ಆವೃತವಾಗಿದೆ. ಲಾವೋಸ್‌‌ 14ರಿಂದ 18ನೇ ಶತಮಾನದವರೆಗೆ ಅಸ್ತಿತ್ವದಲ್ಲಿದ್ದ ಲ್ಯಾನ್-ಕ್ಸಾಂಗ್‌‌ ಸಾಮ್ರಾಜ್ಯ ಅಥವಾ ದಶಲಕ್ಷ ಆನೆಗಳನ್ನು ಹೊಂದಿದ್ದ ನೆಲ ಎಂಬ ಹೆಸರಿನಲ್ಲಿ ಅದರ ಇತಿಹಾಸವನ್ನು ನಿರೂಪಿಸುತ್ತದೆ.

ಫ್ರೆಂಚ್‌ ರಕ್ಷಿತ ಪ್ರದೇಶ ಅವಧಿಯ ನಂತರ ಇದು 1949ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೀರ್ಘಕಾಲದ ಆಂತರಿಕ ಯುದ್ಧವು ಕಮ್ಯೂನಿಸ್ಟ್ ಪ್ಯಾಥೆಟ್ ಲಾವೊ ಆಂದೋಲನದ ನಾಯಕತ್ವ 1975ರಲ್ಲಿ ಅಧಿಕಾರಕ್ಕೆ ಬಂದಾಗ ಅಧಿಕೃತವಾಗಿ ಕೊನೆಗೊಂಡಿತು. ಆದರೆ ಬಣಗಳ ನಡುವಿನ ಪ್ರತಿಭಟನೆಗಳು ಅನೇಕ ವರ್ಷಗಳ ಕಾಲ ಮುಂದುವರಿಯಿತು. ಇಲ್ಲಿನ ಜನಸಂಖ್ಯೆಯ ನಲವತ್ತನಾಲ್ಕು ಪ್ರತಿಶತ ಜನರು 2006ರ ಅಂಕಿಅಂಶದಂತೆ ದಿನವೊಂದಕ್ಕೆ US$1.25ಕ್ಕೆ ಸಮಾನವಾಗಿರುವ ಅಂತಾರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗಡೆ ಬದುಕುತ್ತಿದ್ದಾರೆ. ಆದರೂ CIA ವರ್ಲ್ಡ್ ಫ್ಯಾಕ್ಟ್‌ಬುಕ್ ಈ ಅಂಕಿಅಂಶವನ್ನು ಪ್ರಸ್ತುತ 26%ನಷ್ಟು ಎಂದಿದೆ.[]

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ಲಾವೊ ಭಾಷೆಯಲ್ಲಿ ರಾಷ್ಟ್ರದ ಹೆಸರು "ಮಿಯಾಂಗ್ ಲಾವೊ (ເມືອງລາວ)" ಎಂದಿದೆ, ಇದರ ವಾಚ್ಯಾರ್ಥ "ಲಾವೊ ರಾಷ್ಟ್ರ". 1893ರಲ್ಲಿ ಮ‌ೂರು ಪ್ರತ್ಯೇಕ ಲಾವೊ ರಾಜ್ಯಗಳನ್ನು ಫ್ರೆಂಚ್‌ ಇಂಡೊಚೀನಾದಲ್ಲಿ ಒಟ್ಟಗೂಡಿಸಿದ ಫ್ರೆಂಚ್‌, ಅನೇಕ ಲಾವೊ ಸಾಮ್ರಾಜ್ಯಗಳ ಏಕತೆಯನ್ನು ಸೂಚಿಸಲು ಆ ರಾಷ್ಟ್ರದ ಹೆಸರಿನ ಕೊನೆಯ "s" ಅಕ್ಷರವನ್ನು ಉಚ್ಚಾರಣರಹಿತವಾಗಿ ಹೇಳುತ್ತಿತ್ತು (ಲಾವೊ ಬಾಷೆಯಲ್ಲಿ ಕೊನೆಗೆ "s" ಎಂಬ ಉಚ್ಚಾರಣೆ ಇಲ್ಲದಿರುವುದರಿಂದ ಲಾವೊ ಜನರು ಇದನ್ನು ಅವರ ಮಾತೃಭಾಷೆಯಲ್ಲಿ ಹಾಗೆಯೇ ಉಚ್ಚರಿಸುತ್ತಾರೆ. ಆದರೂ ಕೆಲವರು ವಿಶೇಷವಾಗಿ ಹೊರದೇಶದಲ್ಲಿ ವಾಸಿಸುವವರು "s"ನಲ್ಲಿ ಕೊನೆಗೊಳ್ಳುವ ಉಚ್ಚಾರಣೆಯನ್ನು ಬಳಸುತ್ತಾರೆ). ಸಾಮಾನ್ಯ ಗುಣವಾಚಕ ರೂಪವೆಂದರೆ "ಲಾವೊ". ಉದಾ. "ಲಾವೊ ಆರ್ಥಿಕ ವ್ಯವಸ್ಥೆ" ಸರಿ "ಲಾವೋಷಿಯನ್" ಆರ್ಥಿಕ ವ್ಯವಸ್ಥೆಯಲ್ಲ, ಆದರೂ ಲಾವೊ ಜನಾಂಗೀಯಗುಂಪಿನ ಜತೆ ಗೊಂದಲವನ್ನು ದೂರಮಾಡುವುದಕ್ಕಾಗಿ "ಲಾವೋಷಿಯನ್"ಅನ್ನು ಲಾವೋಸ್‌‌‌ನ ಜನರ ಬಗ್ಗೆ ವಿವರಿಸಲು ಬಳಸಲಾಗುತ್ತದೆ. 1975ರಿಂದ ಈಚೆಗಿನ ಅಧಿಕೃತ ರಾಷ್ಟ್ರದ ಹೆಸರು ಲಾವೊ PDR.

ಇತಿಹಾಸ

[ಬದಲಾಯಿಸಿ]

ಲಾವೋಸ್‌‌ ಅದರ ಇತಿಹಾಸವನ್ನು 14ನೇ ಶತಮಾನ (1353)ದಲ್ಲಿ ಫಾ ಗಮ್‌ನಿಂದ ಸ್ಥಾಪಿಸಲ್ಪಟ್ಟ ಲ್ಯಾನ್-ಕ್ಸಾಂಗ್‌‌ಸಾಮ್ರಾಜ್ಯದವರೆಗೆ ನಿರೂಪಿಸುತ್ತದೆ. ಫಾ ಗಮ್ ಸ್ವತಃ ಸುದೀರ್ಘ ಸಾಲಿನ ಲಾವೋ ರಾಜರ ವಂಶಜನಾಗಿದ್ದು, ಕೌನ್ ಬೌಲಮ್‌ವರೆಗೂ ವಂಶಜರ ಜಾಡು ಸಿಗುತ್ತದೆ. ಲ್ಯಾನ್-ಕ್ಸಾಂಗ್ ರಾಜ್ಯವು ಮೂರು ಸಂಸ್ಥಾನಗಳಾಗಿ ವಿಭಾಗವಾಗಿ ಸಿಯಾಮೆಸೆ ಸಾರ್ವಭೌಮತ್ವದಡಿಯಲ್ಲಿ ಆಳ್ವಿಕೆಗೆ ಬರುವವರೆಗೆ 18ನೇ ಶತಮಾನದವರೆಗೆ ಏಳಿಗೆ ಹೊಂದಿದನು.

19ನೇ ಶತಮಾನದಲ್ಲಿ ಲ್ವಾಂಗ್ ಪ್ರಬಂಗ್‌ ಫ್ರೆಂಚ್‌-ಇಂಡೊಚೀನಾದ 'ರಕ್ಷಣೆ'ದೊಂದಿಗೆ ಏಕೀಕೃತವಾಯಿತು. ಸ್ವಲ್ಪ ಕಾಲದ ನಂತರ [[ಚಂಪಾಸಕ್‌ನ ಸಾಮ್ರಾಜ್ಯ ಮತ್ತು ವಿಯೆಂಟಿಯಾನ್‌|ಚಂಪಾಸಕ್‌ನ ಸಾಮ್ರಾಜ್ಯ ಮತ್ತು ವಿಯೆಂಟಿಯಾನ್‌]] ಪ್ರದೇಶಗಳೂ ಅದರ ಆಡಳಿತಕ್ಕೆ ಒಳಪಟ್ಟವು. ಫ್ರೆಂಚ್‌ ಆಳ್ವಿಕೆಯಡಿಯಲ್ಲಿ ವಿಯೆಂಟಿಯಾನ್‌ ಮತ್ತೊಮ್ಮೆ ಏಕೀಕೃತ ಲಾವೊ ರಾಜ್ಯಗಳ ರಾಜಧಾನಿಯಾಯಿತು.

ವಿಶ್ವ ಸಮರ IIರ ಸಂದರ್ಭದಲ್ಲಿ ಜಪಾನ್‌‌ನ ಸಂಕ್ಷಿಪ್ತ ಆಕ್ರಮಣದ ನಂತರ ರಾಷ್ಟ್ರವು 1945ರಲ್ಲಿ ಅದರ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಆದರೆ ಚಾರ್ಲ್ಸ್ ಡಿ ಗಾಲೆಯ ಆಡಳಿತಡಿಯಲ್ಲಿ ಫ್ರೆಂಚರು ಅದರ ನಿಯಂತ್ರಣವನ್ನು ಪುನಃದೃಢಪಡಿಸಿಕೊಂಡಿತು ಹಾಗೂ 1950ರಲ್ಲಿ ಮಾತ್ರ ಲಾವೋಸ್‌‌‌ಗೆ ಫ್ರೆಂಚ್‌ ಒಕ್ಕೂಟದಡಿಯಲ್ಲಿ "ಸಂಘಟಿತ ರಾಜ್ಯ"ವಾಗಿ ಅರೆ-ಸ್ವಾಯತ್ತೆಯನ್ನು ನೀಡಲಾಯಿತು. ಫ್ರೆಂಚ್‌ 1954ರವರೆಗೆ ಲಾವೋಸ್‌‌ ಸಂವಿಧಾನಿಕ ರಾಜಪ್ರಭುತ್ವವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವವರೆಗೆ ವಸ್ತುತಃ ನಿಯಂತ್ರಣವನ್ನು ಇರಿಸಿಕೊಂಡಿತು.

ಜಿನೇವಾ ಒಪ್ಪಂದದ ವಿಶೇಷ ವಿನಾಯಿತಿಯಡಿಯಲ್ಲಿ ಫ್ರೆಂಚ್‌ ಸೇನಾ ತರಬೇತಿ ಸಂಸ್ಥೆಯೊಂದು ರಾಯಲ್ ಲಾವೋಸ್‌‌ ಸೇನೆಗೆ ಬೆಂಬಲ ನೀಡುವುದನ್ನು ಮುಂದುವರೆಸಿತು. 1955ರಲ್ಲಿ U.S. ರಕ್ಷಣಾ ವಿಭಾಗವು, U.S. ಪ್ರಭಾವ ನಿರೋಧ ನೀತಿಯ ಭಾಗವಾಗಿ ಕಮ್ಯೂನಿಸ್ಟ್ ಪ್ಯಾಥೆಟ್ ಲಾವೊ ವಿರುದ್ಧ ಹೋರಾಟಕ್ಕೆ ರಾಯಲ್ ಲಾವೊ ಆರ್ಮಿಗೆ ನೀಡುತ್ತಿದ್ದ ಫ್ರೆಂಚ್‌ ಬೆಂಬಲದ ಬದಲಾಗಿ ವಿಶೇಷ ಕಾರ್ಯಕ್ರಮಗಳ ಮೌಲ್ಯಮಾಪನ ಕಚೇರಿಯನ್ನು ರಚಿಸಿತು.

ಲಾವೋಸ್‌‌ ವಿಯೆಟ್ನಾಂ ಕದನದಲ್ಲಿ ಒತ್ತಾಯಪೂರ್ವಕವಾಗಿ ಭಾಗವಹಿಸಬೇಕಾಯಿತು. ರಾಷ್ಟ್ರದ ಪೂರ್ವ ದಿಕ್ಕಿನ ಪ್ರದೇಶಗಳು ಉತ್ತರ-ವಿಯೆಟ್ನಾಂನ್ನು ಅನುಸರಿಸಿದವು ಹಾಗೂ ಉತ್ತರ-ವಿಯೆಟ್ನಾಂನ್ನು ಸೋದರ ರಾಷ್ಟ್ರವಾಗಿ ಒಪ್ಪಿಕೊಂಡಿತು. ದಕ್ಷಿಣ ವಿಯೆಟ್ನಾಂ ವಿರುದ್ಧದ ಉತ್ತರ-ವಿಯೆಟ್ನಾಂನ ಕದನಕ್ಕೆ ಲಾವೋಸ್‌‌ ಅದರ ಭೂಪ್ರದೇಶವನ್ನು ಪೂರೈಕೆಯ ಮಾರ್ಗವಾಗಿ ಬಳಸಲು ಅನುವು ಮಾಡಿಕೊಟ್ಟಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನವು ಉತ್ತರ ವಿಯೆಟ್ನಾಂನ ವಿರುದ್ಧ ಬಾಂಬ್ ದಾಳಿಯ ಕಾರ್ಯಾಚರಣೆಯೊಂದನ್ನು ಆರಂಭಿಸಿತು. ಲಾವೋಸ್‌‌ನಲ್ಲಿ ನಿಯಮಿತ ಮತ್ತು‌ ಅನಿಯಮಿತ ಕಮ್ಯೂನಿಸ್ಟ್-ವಿರೋಧಿ ಶಕ್ತಿಗಳಿಗೆ ಹಾಗೂ ದಕ್ಷಿಣ ವಿಯೆಟ್ನಾಂನಿಂದ ಲಾವೋಸ್‌ ದಾಳಿಗೆ ಬೆಂಬಲ ನೀಡಿತು‌. ಈ ಕಾರ್ಯಾಚರಣೆಯ ಪರಿಣಾಮವಾಗಿ ಕ್ಷಿಪ್ರ-ಕ್ರಾಂತಿಯ ಸರಣಿಯೇ ಆರಂಭವಾದವು. ಅಂತಿಮವಾಗಿ ರಾಜಪ್ರಭುತ್ವದ ಲಾವೋಷಿಯನ್ ಸರಕಾರ ಮತ್ತು ಕಮ್ಯೂನಿಸ್ಟ್ ಪ್ಯಾಥೆಟ್ ಲಾವೊ ನಡುವಿನ ಲಾವೋಷಿಯನ್ ಆಂತರಿಕ ಯುದ್ಧಕ್ಕೆ ಕಾರಣವಾಯಿತು.

ಈ ಆಂತರಿಕ ಯುದ್ಧದಲ್ಲಿ ಪ್ಯಾಥೆಟ್‌ ಲಾವೊ ಬಂಡಾಯದ ಹಿಂದೆ ಇದ್ದ ನಿಜವಾದ ಶಕ್ತಿಯೆಂದರೆ ಭಾರಿ ಫಿರಂಗಿ ಮತ್ತು ಆಯುಧಸಜ್ಜಿತ ಟ್ಯಾಂಕುಗಳನ್ನು ಹೊಂದಿದ್ದ ಉತ್ತರ ವಿಯೆಟ್ನಾಂ ಸೈನ್ಯ. 1968ರಲ್ಲಿ ಉತ್ತರ ವಿಯೆಟ್ನಾಂ ಸೇನೆಯು ರಾಯಲ್ ಲಾವೊ ಆರ್ಮಿಯ ವಿರುದ್ಧ ಹೋರಾಡಲು ಕಮ್ಯೂನಿಸ್ಟ್‌ ಪ್ಯಾಥೆಟ್‌ ಲಾವೊಗೆ ಸಹಾಯ ಮಾಡುವಂಥ ಬಹು-ವಿಭಾಗಗಳ ದಾಳಿಯನ್ನು ಆರಂಭಿಸಿತು. ಈ ದಾಳಿಯಿಂದಾಗಿ ಸೇನೆಯು ವಿಸರ್ಜನೆಗೊಂಡು, ಸಂಘರ್ಷವನ್ನು ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಥೈಲೆಂಡ್‌‌ನಿಂದ ಹುಟ್ಟಿಕೊಂಡ ಅನಿಯಮಿತ ಪಡೆಗಳಿಗೆ ಬಿಟ್ಟುಕೊಡುವಂತೆ ಮಾಡಿತು. ಈ ದಾಳಿಯು ಹಲವಾರು ಮಂದಿಯ ಪ್ರಾಣಹಾನಿಗೆ ಕಾರಣವಾಯಿತು.

ಅಮೇರಿಕಾ ಸಂಯುಕ್ತ ಸಂಸ್ಥಾನವು ಭಾರಿ ಪ್ರಮಾಣದಲ್ಲಿ ವಿಮಾನದಿಂದ ಬಾಂಬ್ ದಾಳಿಗಳನ್ನು ನಡೆಸಿತು. ಲಾವೋಸ್‌‌ 1964ರಿಂದ 1973ರವರೆಗೆ ದಿನದಲ್ಲಿ 24 ಗಂಟೆ ಪ್ರತಿ ಎಂಟು ನಿಮಿಷಗಳಿಗೊಮ್ಮೆ ಸುಮಾರು ಸರಾಸರಿ ಒಂದು B-52 ಬಾಂಬ್-ತೂಕದ ದಾಳಿಗೆ ತುತ್ತಾಗುತ್ತಿತ್ತು ಎಂದು ದ ಗಾರ್ಡಿಯನ್‌ ವರದಿ ಮಾಡಿದೆ. ಈ ಅವಧಿಯಲ್ಲಿ US ಬಾಂಬ್‌ದಾಳಿ ವಿಮಾನಗಳು ಲಾವೋಸ್‌‌ ಮೇಲೆ ಎರಡನೇ ವಿಶ್ವ ಸಮರದ ಸಂಪೂರ್ಣ ಅವಧಿಯಲ್ಲಿ ಹಾಕಿದ್ದಕ್ಕಿಂತ ಹೆಚ್ಚು ಶಸ್ತ್ರಗಳನ್ನು ಎಸೆದಿವೆ. ಗುರಿಯಿರಿಸಿದ 260 ದಶಲಕ್ಷ ಬಾಂಬ್‌ಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಕ್ಸಿಯಾಂಗ್‌ಖೌಯಾಂಗ್‌ ಪ್ರಾಂತದ ಮೇಲೆ ಬೀಳಿಸಿದ 80 ದಶಲಕ್ಷ ಬಾಂಬ್‌ಗಳು ಸಿಡಿಯದೆ ವಿಫಲವಾಗಿ ಮಾರಕ ಪರಂಪರೆಯನ್ನು ಉಳಿಸಿತು.[] ಇದರಿಂದಾಗಿ ಪ್ರಪಂಚದಲ್ಲೇ ಹೆಚ್ಚು ಬಾಂಬ್‌ದಾಳಿಗೆ ಒಳಗಾದ ರಾಷ್ಟ್ರವೆಂಬ ಸಂದೇಹಪೂರಿತ ಹೆಸರನ್ನು ಪಡೆದುಕೊಂಡಿತು.

ವಿಯೆಂಟಿಯಾನ್‌ನಲ್ಲಿರುವ ಫಾ ಥಾಟ್ ಲುವಂಗ್, ಇದು ಲಾವೋಸ್‌‌ನ ರಾಷ್ಟ್ರಲಾಂಛನ

1975ರಲ್ಲಿ ವಿಯೆಟ್ನಾಂ ಪೀಪಲ್ಸ್ ಆರ್ಮಿಜತೆಕಮ್ಯೂನಿಸ್ಟ್‌ ಪ್ಯಾಥೆಟ್‌ ಲಾವೋಸ್‌‌ ಸೋವಿಯತ್ ಒಕ್ಕೂಟದ ಬೆಂಬಲದೊಂದಿಗೆ, ರಾಜ ಸವಂಗ್ ವತ್ತಾನನನ್ನು 1975ರ ಡಿಸೆಂಬರ್ 2ರಲ್ಲಿ ಅಧಿಕಾರ ತೊರೆಯುವಂತೆ ಬಲವಂತಪಡಿಸಿ ರಾಜಪ್ರಭುತ್ವದ ಲಾವೊ ಸರಕಾರವನ್ನು ಪದಚ್ಯುತಿಗೊಳಿಸಿತು. ಅವನು ನಂತರ ಸೆರೆಯಲ್ಲಿರುವ ಅವಧಿಯಲ್ಲಿ ಸಾವನ್ನಪ್ಪಿದನು.

ರಾಷ್ಟ್ರದ ಹತೋಟಿಯನ್ನು ತನ್ನ ಕೈಗೆ ತೆಗೆದುಕೊಂಡ ನಂತರ ಪ್ಯಾಥೆಟ್‌ ಲಾವೊ ಸರಕಾರವು ರಾಷ್ಟ್ರವನ್ನು "ಲಾವೊ ಪೀಪಲ್ಸ್ ಡೆಮೋಕ್ರಟಿಕ್ ರಿಪಬ್ಲಿಕ್" ಎಂದು ಮರುಹೆಸರಿಸಿತು. ಶಸ್ತ್ರಸಜ್ಜಿತ ಪಡೆಯನ್ನು ಸ್ಥಾಪಿಸುವ ಮತ್ತು ರಾಷ್ಟ್ರದ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡುವಂತಹ ಸಲಹೆಗಾರರನ್ನು ನೇಮಿಸುವ ಹಕ್ಕನ್ನು ವಿಯೆಟ್ನಾಂಗೆ ನೀಡುವ ಒಪ್ಪಂದಗಳಿಗೆ ಸಹಿಹಾಕಿತು. 1970ರ ಉತ್ತರಾರ್ಧದಲ್ಲಿ ವಿಯೆಟ್ನಾಂ ಲಾವೋಸ್‌‌‌ಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗಿನ ಸಂಬಂಧವನ್ನು ಕೊನೆಗೊಳಿಸುವಂತೆ ಹೇಳಿತು. ಇದರಿಂದಾಗಿ ಚೀನಾ, USA ಮತ್ತು ಅವುಗಳ ಮಿತ್ರರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಪರ್ಕವು ಕಡಿದುಹೋಯಿತು. ಸಾಮಾಜೀಕರಣವು 1980ರ ಸಂದರ್ಭದಲ್ಲಿ ಆರ್ಥಿಕ ನಿರ್ಬಂಧಗಳ ಸಡಿಲಿಕೆಯಿಂದಾಗಿ ನಿಧಾನವಾಗಿ ಸ್ಥಾನಪಡೆಯಿತು ಹಾಗೂ ಇದು 1997ರಲ್ಲಿ ASEANಗೆ ಪ್ರವೇಶ ಪಡೆಯಿತು.

ಭೂಗೋಳಶಾಸ್ತ್ರ

[ಬದಲಾಯಿಸಿ]
ಲಾವೋಸ್‌‌ನ ನಕ್ಷೆ

ಲಾವೋಸ್‌‌ ಆಗ್ನೇಯ ಏಷ್ಯಾದ ಸಂಪೂರ್ಣವಾಗಿ ನೆಲಾವೃತವಾದ ಒಂದು ರಾಷ್ಟ್ರ. ದಟ್ಟವಾದ ಕಾಡುಗಳಿಂದ ಆವೃತವಾದ ಭೂಪ್ರದೇಶವು ಕಡಿದಾದ ಪರ್ವತಗಳನ್ನು ಬಹುತೇಕ ಹೊಂದಿವೆ. ಕೆಲವು ಸಮತಟ್ಟಾದ ಪ್ರದೇಶ ಮತ್ತು ಪ್ರಸ್ತಭೂಮಿಗಳೊಂದಿಗೆ ಕೂಡಿ ಪರ್ವತಗಳಲ್ಲಿ ಅತಿಎತ್ತರವಾದುದು 9,242 ಅಡಿ (2,817 ಮೀ)ಯಿರುವ ಫೌ ಬಿಯಾ. ಮೆಕಾಂಗ್‌ ನದಿಯು ಥೈಲೆಂಡ್‌ನೊಂದಿಗಿನ ಪಶ್ಚಿನ ದಿಕ್ಕಿನ ಸೀಮೆಯ ಹೆಚ್ಚಿನ ಭಾಗವನ್ನು ಆವರಿಸುತ್ತದೆ. ಅನ್ನಾಮೈಟ್ ಚೈನ್ ಪರ್ವತಗಳು ವಿಯೆಟ್ನಾಂನೊಂದಿಗಿನ ಪೂರ್ವ ದಿಕ್ಕಿನ ಸೀಮೆಯಾಗಿ ರೂಪುಗೊಂಡಿವೆ. ಇದು ಉಷ್ಣವಲಯದ, ಮಾನ್ಸೂನ್ ವಾಯುಗುಣವನ್ನು ಹೊಂದಿದೆ.

ಇಲ್ಲಿ ಡಿಸೆಂಬರ್‌ನಿಂದ ಎಪ್ರಿಲ್‌ವರೆಗಿನ ಶುಷ್ಕ ಕಾಲದ ನಂತರ ಮೇಯಿಂದ ನವೆಂಬರ್‌ನವರೆಗೆ ಭಿನ್ನವಾದ ಮಳೆಗಾಲವಿರುತ್ತದೆ. ವಾಯುಗುಣಶಾಸ್ತ್ರೀಯವಾಗಿ ನಿರೂಪಿಸಿದ ಕೊನೆಯ ಎರಡು ತಿಂಗಳ ಶುಷ್ಕಕಾಲವು ಆರಂಭದ ನಾಲ್ಕು ತಿಂಗಳಿಗಿಂತ ಹೆಚ್ಚು ಬಿಸಿಯಾಗಿರುವುದರಿಂದ ಸ್ಥಳೀಯ ಸಂಪ್ರದಾಯದಲ್ಲಿ ಮ‌ೂರು ಋತುಗಳಿರುವುದಾಗಿ (ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಕಾಲ) ಹೇಳುತ್ತದೆ. ವಿಯೆಂಟಿಯಾನ್‌ ಲಾವೋಸ್‌ನ‌ ರಾಜಧಾನಿ ಮತ್ತು ಅತಿದೊಡ್ಡ ನಗರ. ಇತರ ಪ್ರಮುಖ ನಗರಗಳೆಂದರೆ ಲ್ವಾಂಗ್ ಪ್ರಬಂಗ್‌, ಸವನ್ನಾಖೆಟ್‌ ಮತ್ತು ಪ್ಯಾಕ್ಸೆ.

1993ರಲ್ಲಿ ಲಾವೋಸ್‌‌ ಸರಕಾರವು ರಾಷ್ಟ್ರದ ಭೂಪ್ರದೇಶದ 21%ನಷ್ಟು ಸ್ವಾಭಾವಿಕ ನೆಲೆಗಳ ಸಂರಕ್ಷಣೆಗಾಗಿ ಪ್ರತ್ಯೇಕವಾಗಿಟ್ಟಿದೆ[ಸೂಕ್ತ ಉಲ್ಲೇಖನ ಬೇಕು]. ಈ ರಾಷ್ಟ್ರವು ಅಫೀಮು ಪಾಪಿ ಬೆಳೆಯುವ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಒಂದಾದ "ಗೋಲ್ಡನ್ ಟ್ರಿಯಾಂಗಲ್‌"ಅನ್ನು ಹೊಂದಿದೆ. ಅಕ್ಟೋಬರ್ 2007ರ UNODC ಸತ್ಯಸಂಗತಿಯ ಪುಸ್ತಕದ ಪ್ರಕಾರ "ಆಗ್ನೇಯ ಏಷ್ಯಾದ ಅಫೀಮು ಪಾಪಿ ಬೆಳೆಯುವ" ಪ್ರದೇಶವು 15 square kilometres (3,700 acres)ರಷ್ಟಿತ್ತು. ಇದು 2008ರ 18 square kilometres (4,400 acres)ರಷ್ಟು ಪ್ರದೇಶಕ್ಕಿಂತ ಕಡಿಮೆಯಾಗಿದೆ.

ಸರಕಾರ ಮತ್ತು ರಾಜಕೀಯ

[ಬದಲಾಯಿಸಿ]

ಲಾವೋಸ್‌‌ ಒಂದು ಕಮ್ಯೂನಿಸ್ಟ್‌ ಏಕ-ಪಕ್ಷೀಯ ಸಮಾಜವಾದಿ ಪ್ರಜಾಪ್ರಭುತ್ವ. ಏಕಮಾತ್ರ ಕಾನೂನುಬದ್ಧ ರಾಜಕೀಯ ಪಕ್ಷವೆಂದರೆ ಲಾವೊ ಪೀಪಲ್ಸ್ ರಿವಲ್ಯೂಶನರಿ ಪಾರ್ಟಿ (LPRP). ಅಧ್ಯಕ್ಷ ಕೌಮಾಲಿ ಸಯಸೋನೆಯು ರಾಷ್ಟ್ರದ ಮುಖಂಡ ಮಾತ್ರವಲ್ಲದೆ LPRPಯ ಮಹಾಕಾರ್ಯದರ್ಶಿಯೂ(ನಾಯಕ) ಆಗಿದ್ದಾನೆ. ಸರಕಾರದ ಮುಖ್ಯಸ್ಥರು ಪ್ರಧಾನ ಮಂತ್ರಿ ಬೌಸೋನೆ ಬೌಫವಾನ್‌. ಸರಕಾರದ ನೀತಿಗಳು ಅತಿ ಪ್ರಭಾವಶಾಲಿ ಒಂಬತ್ತು ಸದಸ್ಯರ ಪಾಲಿಟ್‌ಬ್ಯೂರೋ ಮತ್ತು 49-ಸದಸ್ಯರ ಕೇಂದ್ರ ಸಮತಿಯ ಮ‌ೂಲಕ ಪಕ್ಷದಿಂದ ನಿಶ್ಚಯಿಸಲ್ಪಡುತ್ತವೆ. ಸರಕಾರದ ಪ್ರಮುಖ ನಿರ್ಧಾರಗಳು ಮಂತ್ರಿಮಂಡಲದಿಂದ ಕೂಲಂಕಷ ಪರೀಕ್ಷೆಗೊಳಗಾಗುತ್ತವೆ.

ಲಾವೋಸ್‌‌‌ನ ಮೊದಲ ಫ್ರೆಂಚ್‌-ಲಿಖಿತ ಮತ್ತು ರಾಜಪ್ರಭುತ್ವವನ್ನು ಪ್ರತಿಪಾದಿಸುವ ಸಂವಿಧಾನವನ್ನು 1947ರ ಮೇ 11ರಲ್ಲಿ ಘೋಷಿಸಲಾಯಿತು ಹಾಗೂ ಇದು ಫ್ರೆಂಚ್‌ ಒಕ್ಕೂಟದಲ್ಲಿ ಸ್ವತಂತ್ರ ರಾಷ್ಟ್ರವೆಂದು ಘೋಷಿಸಲ್ಪಟ್ಟಿತು. ಹಿಂದಿನ ವಸಾಹತುಶಾಹಿ ಅಧಿಕಾರದೊಂದಿಗಿನ ಶೈಕ್ಷಣಿಕ, ಆರೋಗ್ಯ ಮತ್ತು ತಾಂತ್ರಿಕ ನಿಕಟ ಸಂಬಂಧಗಳು ಉಳಿದಿದ್ದರೂ 1957ರ ಮೇ 11ರ ಪರಿಷ್ಕೃತ ಸಂವಿಧಾನವು ಫ್ರೆಂಚ್‌ ಒಕ್ಕೂಟದ ಉಲ್ಲೇಖವನ್ನು ಸೇರಿಸಿಕೊಳ್ಳಲಿಲ್ಲ. 1957ರ ದಾಖಲೆಯು ಕಮ್ಯೂನಿಸ್ಟ್‌ ಪೀಪಲ್ಸ್ ರಿಪಬ್ಲಿಕ್ ಘೋಷಣೆಯಾದಾಗ 1975ರ ಡಿಸೆಂಬರ್ 3ರಲ್ಲಿ ರದ್ದುಗೊಂಡಿತು. 1991ರಲ್ಲಿ ಹೊಸ ಸಂವಿಧಾನವೊಂದನ್ನು ಅಂಗೀಕರಿಸಲಾಯಿತು ಹಾಗೂ LPRPಗೆ "ಪ್ರಮುಖ ಸ್ಥಾನ"ವನ್ನು ಪ್ರತಿಷ್ಠಾಪಿಲಾಯಿತು.

ನಂತರದ ವರ್ಷದಲ್ಲಿ ಐದು-ವರ್ಷಾವಧಿಗಳಿಗೆ ರಹಸ್ಯ ಮತದಾನದಿಂದ ಚುನಾಯಿತರಾದ ಸದಸ್ಯರ ಹೊಸ 85-ಸ್ಥಾನದ ರಾಷ್ಟ್ರದ ಸಂಸತ್ತಿಗೆ ಚುನಾವಣೆಗಳನ್ನು ನಡೆಸಲಾಯಿತು. ಕಾರ್ಯಾಂಗವು ಬದ್ದತೆಯ ಶಾಸನಗಳನ್ನು ಹೊರಡಿಸುವ ಅಧಿಕಾರವನ್ನು ಹೊಂದಿದ್ದರೂ, LPRPಗೆ ರಬ್ಬರ್ ಸ್ಟಾಂಪ್‌ನಂತೆ ಕಾರ್ಯನಿರ್ವಹಿಸುವ ಈ 'ರಾಷ್ಟ್ರದ ಸಂಸತ್ತು' ಎಲ್ಲಾ ಹೊಸ ಕಾನೂನುಗಳನ್ನು ಅಂಗೀಕರಿಸುತ್ತದೆ. ಇತ್ತೀಚಿನ ಚುನಾವಣೆಯು 2006ರ ಎಪ್ರಿಲ್‌ನಲ್ಲಿ ನಡೆಯಿತು. 1997ರಲ್ಲಿ ಸಂಸತ್ತಿನ ಸದಸ್ಯರ ಸಂಖ್ಯೆಯು 99ಕ್ಕೆ ವಿಸ್ತರಿಸಲ್ಪಟ್ಟಿತು ಹಾಗೂ 2006ರ ಚುನಾವಣೆಯಲ್ಲಿ ಇದು 115ಕ್ಕೆ ಏರಿತು.

ಆಡಳಿತದ ವಿಭಾಗಗಳು

[ಬದಲಾಯಿಸಿ]
ಲಾವೋಸ್‌‌ನ ಪ್ರಾಂತಗಳು

ಲಾವೋಸ್‌‌ 16 ಪ್ರಾಂತಗಳಾಗಿ (ಕ್ವಂಗ್ ) ಮತ್ತು ವಿಯೆಂಟಿಯಾನ್‌ ರಾಜಧಾನಿಯಾಗಿ (ನಾ ಕೋನೆ ಲುವಾಂಗ್ ವಿಯೆಂಟಿಯಾನ್‌ ) ವಿಭಾಗಿಸಲ್ಪಟ್ಟಿದೆ:

ರಾಷ್ಟ್ರವು ಮತ್ತೆ ಜಿಲ್ಲೆಗಳಾಗಿ ವಿಭಜಿಸಲ್ಪಟ್ಟಿದೆ (ಮ್ವಾಂಗ್ ).

ಆರ್ಥಿಕತೆ

[ಬದಲಾಯಿಸಿ]
ಲ್ವಾಂಗ್ ಪ್ರಬಂಗ್‌ನ ಬೀದಿಯೊಂದರ ಮಾರುಕಟ್ಟೆ.
ಲಾವೋಸ್‌ನಲ್ಲಿ ನದಿಗಳು ಸಾರಿಗೆ ವ್ಯವಸ್ಥೆಯ ಪ್ರಮುಖ ಮಾರ್ಗಗಳು‌.
ಪ್ರಮುಖ ನಗರಗಳನ್ನು ಸಂಪರ್ಕಿಸುವ ಬಸ್‌ಗಳು

ಲಾವೊ ಆರ್ಥಿಕತೆಯು ಅದರ ನೆರೆರಾಷ್ಟ್ರಗಳಾದ ಥೈಲೆಂಡ್‌, ವಿಯೆಟ್ನಾಂ ಮತ್ತು ವಿಶೇಷವಾಗಿ ಉತ್ತರ ಚೀನಾದೊಂದಿಗಿನ ಹೂಡಿಕೆ ಮತ್ತು ವ್ಯಾಪಾರವನ್ನು ಬಹಳವಾಗಿ ಅವಲಂಬಿಸಿದೆ. ಪ್ಯಾಕ್ಸೆಯು ಥೈಲೆಂಡ್‌ ಮತ್ತು ವಿಯೆಟ್ನಾಂನೊಂದಿಗಿನ ಅಂತರ್-ಗಡಿ ವ್ಯಾಪಾರದ ಆಧಾರದಿಂದ ಅಭಿವೃದ್ಧಿ ಕಂಡಿತು.

ದೇಶದ ಹೆಚ್ಚಿನ ಭಾಗವು ಸಮರ್ಪಕವಾದ ಮೂಲಭೂತ ಸೌಕರ್ಯಗಳ ಅಭಾವವನ್ನು ಹೊಂದಿದೆ. ವಿಯೆಂಟಿಯಾನ್‌ಅನ್ನು ಥೈಲೆಂಡ್‌ನೊಂದಿಗೆ ಸಂಪರ್ಕ ಕಲ್ಪಿಸುವ ಥಾಯ್-ಲಾವೊ ಸ್ನೇಹ ಸೇತುವೆ ಮೇಲಿನ ಸಣ್ಣ ಸಂಪರ್ಕವನ್ನು ಬಿಟ್ಟರೆ ಲಾವೋಸ್‌‌ ಬೇರೆ ಯಾವುದೇ ರೈಲು ವ್ಯವಸ್ಥೆಯನ್ನು ಹೊಂದಿಲ್ಲ. ಪ್ರಮುಖ ನಗರ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳು ನಿರ್ದಿಷ್ಟವಾಗಿ ಮಾರ್ಗ 13 ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಮೇಲ್ದರ್ಜೆಗೇರಿವೆ. ಆದರೆ ಮುಖ್ಯ ರಸ್ತೆಗಳಿಂದ ಬಹುದೂರವಿರುವ ಹಳ್ಳಿಗಳನ್ನು ವರ್ಷವಿಡೀ ಪ್ರವೇಶಿಸಲಸಾಧ್ಯವಾದ ನೆಲಗಟ್ಟು ಮಾಡದ ರಸ್ತೆಗಳಿಂದಲೇ ತಲುಪಬೇಕಾಗುತ್ತದೆ. ಹೊರಗಿನ ಮತ್ತು ಒಳಗಿನ ದೂರಸಂಪರ್ಕ ವ್ಯವಸ್ಥೆಯು ಸೀಮಿತದಲ್ಲಿದ್ದರೂ, ಮೊಬೈಲ್ ಫೋನ್ ಗಳು ಮಾತ್ರ ನಗರ ಪ್ರದೇಶದಲ್ಲಿ ಹೆಚ್ಚು ವಿಸ್ತಾರವಾಗಿ ಬಳಕೆಯಲ್ಲಿದೆ. ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯು ಕನಿಷ್ಠ ಆಂಶಿಕವಾಗಿ ಲಭ್ಯವಾಗಿರುತ್ತದೆ. ರಾಷ್ಟ್ರದಲ್ಲಿ ಬಹುದೂರದ ಮತ್ತು ಸ್ಥಳೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಸಾಂಗ್‌ಥೇವ್‌ಗಳನ್ನು (ಆಸನಗಳನ್ನು ಹೊಂದಿರುವ ಸಣ್ಣ ತೆರೆದ ಮೋಟಾರು ಟ್ರಕ್ಕುಗಳು) ಬಳಸಲಾಗುತ್ತದೆ.

ಜೀವನಾಧಾರ ಕೃಷಿಯು GDPಯ ಅರ್ಧದಷ್ಟು ಪ್ರಮಾಣದ ಮೂಲಾಧಾರವಾಗಿದೆ ಹಾಗೂ ಇದು 80 ಪ್ರತಿಶತದಷ್ಟು ಉದ್ಯೋಗವನ್ನು ಒದಗಿಸುತ್ತದೆ. ರಾಷ್ಟ್ರದ 4.01 ಪ್ರತಿಶತದಷ್ಟು ಭೂಮಿ ಮಾತ್ರ ಬೇಸಾಯಯೋಗ್ಯವಾಗಿದೆ. 0.34 ಪ್ರತಿಶತದಷ್ಟನ್ನು ಶಾಶ್ವತ ಬೆಳೆ ಬೆಳೆಯುವ ಭೂಮಿಯಾಗಿ ಬಳಸಲಾಗುತ್ತದೆ[], ಇದರಲ್ಲಿ ಗ್ರೇಟರ್ ಮೆಕಾಂಗ್‌ ಉಪಪ್ರಾಂತದಲ್ಲಿ ಅತಿಕಡಿಮೆ ಶೇಕಡಾವಾರು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.[] ಕೃಷಿಯಲ್ಲಿ ಭತ್ತವು ಪ್ರಮುಖವಾದ ಬೆಳೆಯಾಗಿದೆ. ವ್ಯವಸಾಯಯೋಗ್ಯ ಭೂಮಿಯಲ್ಲಿ ಸುಮಾರು 80 ಪ್ರತಿಶತದಷ್ಟು ಭೂಮಿಯನ್ನು ಭತ್ತ ಬೆಳೆಯಲು ಬಳಸುತ್ತಾರೆ.[] ಲಾವೊ ಪ್ರದೇಶದ ಸರಿಸುಮಾರು 77 ಪ್ರತಿಶತದಷ್ಟು ಕೃಷಿಯಾಧಾರಿತ ಮನೆಗಳು ಭತ್ತದ ಬೆಳೆಯಲ್ಲಿ ಸ್ವಾವಲಂಬಿಯಾಗಿವೆ.[]

ಭತ್ತದ ಸುಧಾರಿತ ತಳಿಗಳ ಅಭಿವೃದ್ಧಿ, ಬಿಡುಗಡೆ ಮತ್ತು ವ್ಯಾಪಕ ಅಳವಡಿಕೆಯಿಂದ ಹಾಗೂ ಆರ್ಥಿಕ ಸುಧಾರಣೆಗಳ ಮ‌ೂಲಕ, 1990ರಿಂದ 2005ರವರೆಗಿನ ಅವಧಿಯಲ್ಲಿ ಉತ್ಪತ್ತಿಯು ವಾರ್ಷಿಕ ದರದಲ್ಲಿ 5 ಪ್ರತಿಶತದಷ್ಟು ಹೆಚ್ಚಾಯಿತು.[೧೦] ಲಾವೊ PDR 1999ರಲ್ಲಿ ಮೊದಲ ಬಾರಿಗೆ ಭತ್ತದ ಆಮದು ಮತ್ತು ರಫ್ತಿನಲ್ಲಿ ನಿವ್ವಳ ಸಮತೋಲನವನ್ನು ಕಂಡಿತು[೧೧]. ಲಾವೊ PDR ಭತ್ತದ ಅತಿಹೆಚ್ಚಿನ ತಳಿಗಳನ್ನು ಗ್ರೇಟರ್ ಮೆಕಾಂಗ್‌ ಉಪಪ್ರಾಂತದಲ್ಲಿ ಹೊಂದಿದೆ. 1995ರಿಂದ ಈಚೆಗೆ ಲಾವೊ ಸರಕಾರವು, ಲಾವೋಸ್‌‌‌ನಲ್ಲಿ ಕಂಡುಬಂದ ಸಾವಿರಾರು ಭತ್ತದ ತಳಿಗಳ ಪ್ರತಿಯೊಂದರ ಬೀಜ ಮಾದರಿಗಳನ್ನು ಸಂಗ್ರಹಿಸುವುದಕ್ಕಾಗಿ ಅಂತಾರಾಷ್ಟ್ರೀಯ ಭತ್ತ ಸಂಶೋಧನೆ ಸಂಸ್ಥೆ‌ಯೊಂದಿಗೆ ಕೆಲಸ ಮಾಡುತ್ತಿದೆ.[೧೨]

ಆರ್ಥಿಕ ವ್ಯವಸ್ಥೆಯು ಅಭಿವೃದ್ಧಿ ಸಹಾಯವನ್ನು IMF, ADB ಮತ್ತು ಇತರ ಅಂತಾರಾಷ್ಟ್ರೀಯ ಮ‌ೂಲಗಳಿಂದ ಪಡೆಯುತ್ತದೆ ಹಾಗೂ ಸಮಾಜ, ಕೈಗಾರಿಕೆ, ಜಲಶಕ್ತಿ ಹಾಗೂ ತಾಮ್ರ ಮತ್ತು ಚಿನ್ನದಂತಹ ಗಣಿಗಾರಿಕೆಯ ಅಭಿವೃದ್ಧಿಗೆ ವಿದೇಶಿ ನೇರಬಂಡವಾಳ ಹೂಡಿಕೆಯನ್ನು ಬಳಸಿಕೊಳ್ಳುತ್ತದೆ. ಪ್ರವಾಸೋದ್ಯಮವು ರಾಷ್ಟ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಆರ್ಥಿಕ ಅಭಿವೃದ್ಧಿಯು ಪ್ರತಿಭಾಪಲಾಯನದಿಂದಾಗಿ ಅಡಚಣೆಗೊಳಪಟ್ಟಿದೆ. 2000ರ ಅಂದಾಜಿನ ಪ್ರಕಾರ 37.4 ಪ್ರತಿಶತದಷ್ಟು ದರದಲ್ಲಿ ಪ್ರತಿಭಾವಂತರು ವಲಸೆಹೋಗುತ್ತಿದ್ದಾರೆ[೧೩].

ಲಾವೋಸ್‌‌‌ನಲ್ಲಿ ಖನಿಜ ಸಂಪನ್ಮೂಲಗಳು ಸಮೃದ್ಧವಾಗಿವೆ. ಆದರೆ ಅದು ಪೆಟ್ರೋಲಿಯಂ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಲೋಹಗಾರಿಕೆಯು ಇಲ್ಲಿನ ಪ್ರಮುಖ ಕೈಗಾರಿಕೆಯಾಗಿದೆ. ಸರಕಾರವು ಕಲ್ಲಿದ್ದಲು, ಚಿನ್ನ, ಬಾಕ್ಸೈಟ್, ತವರ ತಾಮ್ರ ಮತ್ತು ಇತರ ಬೆಲೆಬಾಳುವ ಲೋಹಗಳ ಗಣನೀಯ ಪ್ರಮಾಣದ ನಿಕ್ಷೇಪವನ್ನು ಅಭಿವೃದ್ಧಿಗೊಳಿಸಲು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಆಶಯವನ್ನು ಹೊಂದಿದೆ. ರಾಷ್ಟ್ರದ ಯಥೇಚ್ಛ ನೀರಿನ ಸಂಪನ್ಮೂಲ ಮತ್ತು ಪರ್ವತಗಳಿಂದ ಕೂಡಿತ ಭೂಪ್ರದೇಶವು ಜಲವಿದ್ಯುತ್ ಶಕ್ತಿಯನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಉತ್ಪತಿ ಮಾಡಲು ಮತ್ತು ರಫ್ತು ಮಾಡಲು ಸಹಾಯಕವಾಗಿದೆ. ಸರಿಸುಮಾರು 18,000 ಮೆಗಾವ್ಯಾಟ್‌‌ಗಳಷ್ಟು ವಿದ್ಯುತ್‌ಶಕ್ತಿ ಸಾಮರ್ಥ್ಯದಲ್ಲಿ ಸುಮಾರು 8,000 ಮೆಗಾವ್ಯಾಟ್‌ಗಳನ್ನು ಥೈಲೆಂಡ್‌ ಮತ್ತು ವಿಯೆಟ್ನಾಂಗೆ ರಫ್ತುಮಾಡುವ ಬದ್ಧತೆಯನ್ನು ಮಾಡಿಕೊಂಡಿದೆ.[೧೪]

1990ರಲ್ಲಿ 14,400ರಷ್ಟಿದ್ದ ಪ್ರವಾಸಿಗರು 2005ರಲ್ಲಿ 1.1 ದಶಲಕ್ಷದಷ್ಟು ಲಾವೋಸ್‌‌ಗೆ ಭೇಟಿನೀಡುವುದರೊಂದಿಗೆ ಇಲ್ಲಿನ ಪ್ರವಾಸೋದ್ಯಮ ವಿಭಾಗವು ಅತಿವೇಗವಾಗಿ ಬೆಳೆದಿದೆ. ಪ್ರವಾಸೋದ್ಯಮದಿಂದ ಬರುವ ವಾರ್ಷಿಕ ಆದಾಯವು 2020ರೊಳಗೆ $250–300 ದಶಲಕ್ಷದಷ್ಟು ಹೆಚ್ಚಾಗುವ ಸಾಧ್ಯತೆ ಇದೆ.[೧೫]

ಜನಸಾಂದ್ರತೆ

[ಬದಲಾಯಿಸಿ]
ಲ್ವಾಂಗ್ ಪ್ರಬಂಗ್‌ನಲ್ಲಿ ಮಾಂಗ್ ಮೀಟಿಂಗ್ ಉತ್ಸವದ ಸಂದರ್ಭದಲ್ಲಿನ ಒಬ್ಬ ಯುವತಿ
ಲಾವೋಸ್‌‌ನ ಉತ್ತರ ಭಾಗದ ಗ್ರಾಮೀಣ ಪ್ರದೇಶದ ಒಂದು ಪ್ರಾಥಮಿಕ ಶಾಲೆ

ರಾಷ್ಟ್ರದ 69%ನಷ್ಟು ಜನರು ಜನಾಂಗೀಯ ಲಾವೊಗಳಾಗಿದ್ದಾರೆ, ಇವರು ಪ್ರಮುಖ ತಗ್ಗು ಪ್ರದೇಶದ ನಿವಾಸಿಗಳು ಹಾಗೂ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಬಲ ಸಮುದಾಯದವರು. ಈ ಲಾವೊಗಳು ಕ್ರಿ.ಶ. ಮೊದಲ ಸಹಸ್ರಮಾನ ADಯಲ್ಲಿಚೀನಾದಿಂದ ದಕ್ಷಿಣಕ್ಕೆ ವಲಸೆಹೋಗಲು ಆರಂಭಿಸಿದ ಟಾಯ್ ಭಾಷಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 8% ಜನರು ಇತರ "ತಗ್ಗು ಪ್ರದೇಶದ" ಸಮುದಾಯಗಳಿಗೆ ಸೇರಿದವರಾಗಿದ್ದಾರೆ, ಇವರು ಲಾವೊ ಜನರೊಂದಿಗೆ ಸೇರಿ ಲಾವೊ ಲೌಮ್ಅನ್ನು ರಚಿಸಿದ್ದಾರೆ.

ಲಾವೋಸ್‌ನ ಮೋಂಗ್ (ಮಿಯಾವೊ), ಯಾವೊ (ಮೈನ್), ದಾವೊ, ಶಾನ್ ಮತ್ತು ಅನೇಕ ಟಿಬೆಟೊ-ಬರ್ಮಾ ಭಾಷೆ ಮಾತನಾಡುವ ಜನರಂತಹ ಅಲ್ಪಸಂಖ್ಯಾತ ಸಂಸ್ಕೃತಿಗಳು ಮತ್ತು ಗುಡ್ಡಗಾಡು ಜನರು ಲಾವೋಸ್‌‌ನ ಪ್ರತ್ಯೇಕ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಜೀವಿಸುತ್ತಿದ್ದಾರೆ. ಮಿಶ್ರ ಜನಾಂಗೀಯ/ಸಾಂಸ್ಕೃತಿಕ-ಭಾಷಾ ಪರಂಪರೆಯನ್ನು ಹೊಂದಿರುವ ಪರ್ವತ/ಗುಡ್ಡಗಾಡು ಬುಡಕಟ್ಟು ಜನಾಂಗದವರು ಉತ್ತರ ಲಾವೋಸ್‌‌ನಲ್ಲಿ ಕಂಡುಬಂದಿದ್ದಾರೆ. ಈ ಪ್ರದೇಶವು ಲಾವೋಸ್‌‌ನ ಸ್ಥಳೀಯರಾದ ಲುವಾ ಮತ್ತು ಕಾಮು ಜನರನ್ನೂ ಒಳಗೊಂಡಿದೆ. ಇಂದು ಲುವಾ ಜನರು ಅಪಾಯದಂಚಿನಲ್ಲಿದ್ದಾರೆ. ಒಟ್ಟಾಗಿ ಅವರನ್ನು ಲಾವೊ ಸೌಂಗ್ ಅಥವಾ ಎತ್ತರ ಪ್ರದೇಶದ ಲಾವೋಟಿಯನ್ ಎಂದು ಕರೆಯಲಾಗುತ್ತದೆ. ಮಧ್ಯ ಮತ್ತು ದಕ್ಷಿಣದ ಪರ್ವತಗಳಲ್ಲಿ, ಲಾವೊ ಥಿಯಾಂಗ್ ಅಥವಾ ಮಧ್ಯ-ಇಳಿಜಾರಿನ ಲಾವೋಷಿಯನ್ ಎಂದು ಕರೆಯುವ ಮೋನ್-ಕೇಮರ್ ಬುಡಕಟ್ಟು ಜನಾಂಗದವರು ಉಳಿದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿಯೆಟ್ನಾಂ ಮತ್ತು ಚೀನಾ ಭಾಷೆ ಮಾತನಾಡುವ ಕೆಲವರು ಹಾಗೂ ಥೈಲೆಂಡ್‌‌ನ ಥೈ ಅಲ್ಪಸಂಖ್ಯಾತರು ನಿರ್ದಿಷ್ಟವಾಗಿ ನಗರಗಳಲ್ಲಿ, ಆದರೆ ಹೆಚ್ಚಿನವರು 1940ರ ಉತ್ತರಾರ್ಧದಲ್ಲಿನ ಸ್ವಾತಂತ್ರ್ಯದ ನಂತರದ ಮತ್ತು 1975ರ ನಂತರದ ಎರಡು ಅವಧಿಗಳಲ್ಲಿ ಉಳಿದುಕೊಂಡರು.

"ಲಾವೋಟಿಯನ್‌" ಪದವು ಲಾವೊ ಭಾಷೆ, ಜನಾಂಗೀಯ ಲಾವೊ ಜನರು, ಭಾಷೆ ಅಥವಾ ಸಂಪ್ರದಾಯಗಳನ್ನು ಸೂಚಿಸಬೇಕಾದ ಅವಶ್ಯಕತೆಯಿಲ್ಲ. ಇದೊಂದು ರಾಜಕೀಯ ಪದ, ಇದು ಲಾವೋಸ್‌‌ನಲ್ಲಿನ ಜನಾಂಗೀಯವಲ್ಲದ ಲಾವೊ ಸಮುದಾಯಗಳನ್ನೂ ಒಳಗೊಂಡಿದೆ. ಅವರ ರಾಜಕೀಯ ಪೌರತ್ವದಿಂದಾಗಿ ಅವರನ್ನು "ಲಾವೋಷಿಯನ್‌" ಎಂದು ಗುರುತಿಸಲಾಗುತ್ತದೆ.

ಲಾವೋಸ್‌‌ನಲ್ಲಿರುವ ಪ್ರಧಾನ ಧರ್ಮವೆಂದರೆ ಥೇರವಡ ಬೌದ್ಧ ಧರ್ಮ. ಈ ಧರ್ಮದವರು ಪರ್ವತದ ಬುಡಕಟ್ಟು ಜನಾಂಗಗಳಲ್ಲಿ ಸಾಮಾನ್ಯವಾಗಿ ರೂಢಿಯಲ್ಲಿರುವ ಆನಿಮಿಸಂ(ಸಕಲ ಚರಾಚರ ವಸ್ತುಗಳು ಆತ್ಮವನ್ನು ಹೊಂದಿವೆಯೆಂಬ ನಂಬಿಕೆ)ಯೊಂದಿಗೆ, ಅಮ‌ೂರ್ತಚೇತನದ ಆರಾಧನೆ ಮಾಡುತ್ತಾ ಶಾಂತರೀತಿಯಲ್ಲಿ ಸಹಜೀವನ ನಡೆಸುತ್ತಿದ್ದಾರೆ. ಇಲ್ಲಿ ಅಲ್ಪಸಂಖ್ಯೆಯ ಕ್ರೈಸ್ತಧರ್ಮದವರೂ ಇದ್ದಾರೆ, ಇವರು ವಿಯೆಂಟಿಯಾನ್‌ ಪ್ರದೇಶಕ್ಕೆ ಬಹುತೇಕ ಸೀಮಿತಗೊಂಡಿದ್ದಾರೆ. ಅಲ್ಲದೆ ಮಯನ್ಮಾರ್ ಗಡಿ ಪ್ರದೇಶಕ್ಕೆ ಸೀಮಿತಗೊಂಡ ಮುಸ್ಲಿಂ ಧರ್ಮದವರೂ ಇದ್ದಾರೆ. ಕ್ರೈಸ್ತಧರ್ಮದ ಧರ್ಮಪ್ರಚಾರಕ ಕೆಲಸಗಳು ಸರಕಾರದಿಂದ ನಿಯಂತ್ರಿಸಲ್ಪಡುತ್ತವೆ.

ಲಾವೋಸ್‌ನ ಅಧಿಕೃತ ಮತ್ತು ಪ್ರಧಾನ ಭಾಷೆಯೆಂದರೆ ಲಾವೊ. ಇದು ಥೈ ಭಾಷಾ ಸಮುದಾಯದ ಧ್ವನಿಯನ್ನು ಹೊಂದಿರುವ ಭಾಷೆಯಾಗಿದೆ. ಬರವಣಿಗೆಯು ಕೇಮರ್ ಬರಹದ ಲಿಪಿಯನ್ನು ಆಧರಿಸಿದೆ. ಮಧ್ಯ ಇಳಿಜಾರಿನ ಮತ್ತು ಎತ್ತರ ಪ್ರದೇಶದ ಲಾವೊ ಜನರು ವಿವಿಧ ವರ್ಗದ ಬುಡಕಟ್ಟು ಭಾಷೆಗಳಲ್ಲಿ ಮಾತನಾಡುತ್ತಾರೆ. ಆಡಳಿತ ಮತ್ತು ವ್ಯಾಪಾರದಲ್ಲಿ ಈಗಲೂ ಸಾಮಾನ್ಯವಾಗಿರುವ ಫ್ರೆಂಚ್‌ ಭಾಷೆಯನ್ನು ಇಲ್ಲಿನ ಹೆಚ್ಚಿನವರು ಅಧ್ಯಯನ ಮಾಡಿದ್ದಾರೆ.ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (/೦)‌ದ (ASEAN) ಭಾಷೆ ಇಂಗ್ಲಿಷ್ಅನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅಧ್ಯಯನ ಮಾಡಲಾಗುತ್ತಿದೆ.

ಆರೋಗ್ಯ

[ಬದಲಾಯಿಸಿ]

2007ರಲ್ಲಿ ಪುರುಷರ ಜೀವಿತಾವಧಿಯು 63.2 ಹಾಗೂ ಮಹಿಳೆಯರ ಜೀವಿತಾವಧಿ 65.9 ಇತ್ತು.[೧೬] 2006ರಲ್ಲಿ ಆರೋಗ್ಯಪೂರ್ಣ ಜೀವತಾವಧಿಯು 54 ಇತ್ತು.[೧೬] 2006ರಲ್ಲಿ ಐದನೇ ಎರಡರಷ್ಟು ಜನರು ಸುದಾರಿತ ನೀರಿನ ಸಂಪನ್ಮೂಲವನ್ನು ಬಳಸಿಕೊಳ್ಳುತ್ತಿರಲಿಲ್ಲ. [೧೬] ಆರೋಗ್ಯಕ್ಕೆ ಸರಕಾರವು GDPಯ ಸುಮಾರು 4 %ರಷ್ಟನ್ನು ಖರ್ಚುಮಾಡುತ್ತದೆ.[೧೬] 2006ರಲ್ಲಿ ಇದರ ಪ್ರಮಾಣವು US$ 18 (PPP)ನಷ್ಟಿತ್ತು.[೧೬]

ಲ್ವಾಂಗ್ ಪ್ರಬಂಗ್‌ನ ವ್ಯಾಟ್ ಅಹಮ್‌ನ ಬುದ್ಧನ ಪ್ರತಿಮೆಗಳು

2005ರ ಜನಗಣತಿಯ ಪ್ರಕಾರ, ಲಾವೋಸ್‌ನ 67%ನಷ್ಟು ಜನರು ಥೇರವಡ ಬೌದ್ಧ ಧರ್ಮಕ್ಕೆ, 1.5%ನಷ್ಟು ಮಂದಿ ಕ್ರೈಸ್ತ ಧರ್ಮಕ್ಕೆ ಹಾಗೂ 31.5%ನಷ್ಟು ಜನರು ಇತರ ಅಥವಾ ಸ್ಪಷ್ಟವಾಗಿ ನಮೂದಿತವಾಗಿರದ ಧರ್ಮಕ್ಕೆ ಸೇರಿದವರಾಗಿದ್ದಾರೆ.[೧೭] ಲಾವೋಸ್‌ನಲ್ಲಿ ಬೌದ್ಧಮತೀಯರ ಪ್ರಮಾಣವು ಸುಮಾರು 85%ನಷ್ಟಿದೆ; ಈ ಧರ್ಮವು ಇಲ್ಲಿನ ಪ್ರಮುಖ ಸಾಮಾಜಿಕ ಶಕ್ತಿಗಳಲ್ಲಿ ಒಂದಾಗಿ ಉಳಿದಿದೆ.‌‌[೧೮]

ಸಂಸ್ಕೃತಿ

[ಬದಲಾಯಿಸಿ]
ಲಾವೋಸ್ ಜನರ ಅಡುಗೆಯ ಒಂದು ಉದಾಹರಣೆ

ಥೇರವಡ ಬೌದ್ಧ ಸಿದ್ಧಾಂತವು ಲಾವೊ ಸಂಸ್ಕೃತಿಯಲ್ಲಿ ಪ್ರಧಾನ ಪ್ರಭಾವ ಬೀರಿದೆ. ಇದು ರಾಷ್ಟ್ರದಾದ್ಯಂತ ಭಾಷೆಯಿಂದ ಹಿಡಿದು ದೇವಾಲಯದವರೆಗೆ, ಕಲೆ, ಸಾಹಿತ್ಯ, ಕಲಾಕೌಶಲ್ಯದ ನಿರ್ವಹಣೆ ಇತ್ಯಾದಿಗಳ ಮೇಲೆ ಪರಿಣಾಮ ಬೀರಿದೆ. ಆದರೂ ಲಾವೊ ಸಂಸ್ಕೃತಿಯ ಹೆಚ್ಚಿನ ಅಂಶಗಳು ಬೌದ್ಧ ಧರ್ಮಕ್ಕಿಂತ ಹಿಂದಿನ ಇತಿಹಾಸವನ್ನು ತೋರಿಸುತ್ತವೆ. ಉದಾಹರಣೆಗಾಗಿ ಲಾವೋಷಿಯನ್‌ ಸಂಗೀತದಲ್ಲಿ ಒಂದು ಪ್ರಕಾರದ ಬಿದಿರು ಕೊಳವೆಯಂಥ ಖೇನ್ ಎಂಬ ರಾಷ್ಟ್ರೀಯ ಸಂಗೀತ ವಾದ್ಯ ಹೆಚ್ಚಾಗಿ ಬಳಸಲಾಗುತ್ತದೆ. ಇದು ಇತಿಹಾಸಪೂರ್ವ ಮೂಲಗಳನ್ನು ಹೊಂದಿದೆ. ಖೇನ್ ಸಾಂಪ್ರದಾಯಿಕವಾಗಿ ಜಾನಪದ ಸಂಗೀತದ ಪ್ರಮುಖ ಶೈಲಿ ಲ್ಯಾಮ್‌ ನ ಗಾಯಕರನ್ನು ಜತೆಗೂಡಿರುತ್ತದೆ. ಅನೇಕ ವಿಧದ ಲ್ಯಾಮ್ ಶೈಲಿಗಳಲ್ಲಿ ಲ್ಯಾಮ್ ಸರವನೆ ಯು ಹೆಚ್ಚು ಜನಪ್ರಿಯವಾದುದು.

ಈ ದೇಶವು ಎರಡು ವಿಶ್ವ ಪರಂಪರೆ ಸ್ಥಳ‌ಗಳನ್ನು ಹೊಂದಿದೆ: ಲ್ವಾಂಗ್ ಪ್ರಬಂಗ್‌ ಮತ್ತು ವಾಟ್ ಫೌ. ಸರಕಾರವು ಪ್ಲೈನ್ ಆಫ್ ಜಾರ್ಸ್‌ಗೆ ಅದೇ ರೀತಿಯ ಸ್ಥಾನಮಾನವನ್ನು ಕೋರಿದೆ.

ಜಿಗುಟಾದ ಅಕ್ಕಿಯು ಲಾವೊ ಜನರ ವಿಶಿಷ್ಟ ಪ್ರಧಾನ ಆಹಾರ ಹಾಗೂ ಇದು ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮಲ್ಲಿಗೆಯಂಥ ಅಕ್ಕಿಗಿಂತ ಜಿಗುಟಾದ ಅಕ್ಕಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ. ಏಕೆಂದರೆ ಜಿಗುಟಾದ ಅಕ್ಕಿಯನ್ನು ತಿನ್ನುವ ಏಕೈಕ ರಾಷ್ಟ್ರದ ಮೂಲ ಲಾವೋಸ್. ವಿವಿಧ ಪರಿಸರದಲ್ಲಿ ಹಾಗೂ ಅನೇಕ ಜನಾಂಗೀಯ ಸಮುದಾಯಗಳಲ್ಲಿ ಭತ್ತದ ಉತ್ಪತ್ತಿಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯಗಳು ಮತ್ತು ಆಚರಣೆಗಳಿವೆ. ಉದಾಹರಣೆಗಾಗಿ ಲ್ವಾಂಗ್ ಪ್ರಬಂಗ್‌ನ ಖಮ್ಮು ಕೃಷಿಕರು ಖಾವೊ ಕಾಮ್ ಎಂಬ ಭತ್ತದ ತಳಿಯನ್ನು ಸಣ್ಣ ಪ್ರಮಾಣದಲ್ಲಿ ಮೃತರಾದ ಹೆತ್ತವರ ನೆನಪಿನಲ್ಲಿ ಗುಡಿಸಲಿನ ಹತ್ತಿರ ಅಥವಾ ಭತ್ತದ ಗದ್ದೆಯ ತುದಿಯಲ್ಲಿ ಹೆತ್ತವರು ಇನ್ನೂ ಬದುಕಿದ್ದಾರೆ ಎನ್ನುವುದರ ಸಂಕೇತವಾಗಿ ನೆಡುತ್ತಾರೆ.[೧೯]

ಶಿಕ್ಷಣ

[ಬದಲಾಯಿಸಿ]

ವಯಸ್ಕರ ಸಾಕ್ಷರತೆ ಪ್ರಮಾಣವು ಮ‌ೂರನೇ ಎರಡಕ್ಕಿಂತಲೂ ಹೆಚ್ಚಿದೆ.[೧೬] ಪುರುಷರ ಸಾಕ್ಷರತೆಯು ಮಹಿಳೆಯರ ಸಾಕ್ಷರತೆ ಪ್ರಮಾಣವನ್ನು ಮೀರಿಸುತ್ತದೆ.[೧೬] 2004ರಲ್ಲಿ ಒಟ್ಟು ಪ್ರಾಥಮಿಕ ಶಾಲೆಯ ದಾಖಲಾತಿಯ ಪ್ರಮಾಣವು 84 %ನಷ್ಟಿತ್ತು.[೧೬] ನ್ಯಾಷನಲ್ ಯ‌ೂನಿವರ್ಸಿಟಿ ಆಫ್ ಲಾವೋಸ್‌‌ ಎಂಬುದು ಲಾವೋಸ್‌‌ನ ರಾಷ್ಟ್ರೀಯ ವಿಶ್ವವಿದ್ಯಾನಿಲಯವಾಗಿದೆ.

ಮಾಧ್ಯಮ

[ಬದಲಾಯಿಸಿ]

ಎರಡು ವಿದೇಶಿ ಭಾಷಾ ಪತ್ರಿಕೆಗಳನ್ನೂ ಒಳಗೊಂಡಂತೆ ಎಲ್ಲಾ ವೃತ್ತಪತ್ರಿಕೆಗಳು ಸರಕಾರದಿಂದ ಪ್ರಕಟಿಸಲ್ಪಡುತ್ತವೆ, ಆ ಎರಡು ಪತ್ರಿಕೆಗಳೆಂದರೆ - ಇಂಗ್ಲಿಷ್-ಭಾಷೆಯ ದಿನಪತ್ರಿಕೆ ವಿಯೆಂಟಿಯಾನ್‌ ಟೈಮ್ಸ್ ಮತ್ತು ಫ್ರೆಂಚ್‌-ಭಾಷೆಯ ವಾರಪತ್ರಿಕೆ ಲಿ ರೆನೋವಾಟಿಯರ್ . ದೇಶದ ಅಧಿಕೃತ ಸುದ್ಧಿ ಸಂಸ್ಥೆ ಖಾವೊ ಸ್ಯಾನ್ ಪ್ಯಾಥೆಟ್‌ ಲಾವೊ ಅದರ ನಾಮಸೂಚಕ ಪತ್ರಿಕೆಯ ಇಂಗ್ಲಿಷ್ ಮತ್ತು ಫ್ರೆಂಚ್ ಆವೃತ್ತಿಗಳನ್ನು ಪ್ರಕಟಿಸುತ್ತದೆ. ಇಂಟರ್ನೆಟ್ ಕೆಫೆಗಳು ಈಗ ಪ್ರಮುಖ ಪಟ್ಟಣ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಹಾಗೂ ಇವು ಯುವಪೀಳಿಗೆಯಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಆದರೂ ಸರಕಾರವು ಕಟ್ಟುನಿಟ್ಟಾಗಿ ಮಾಹಿತಿಗಳಿಗೆ ಸೆನ್ಸರ್ ವಿಧಿಸುತ್ತದೆ ಹಾಗೂ ಪ್ರವೇಶವನ್ನು ನಿಯಂತ್ರಿಸುತ್ತದೆ[ಸೂಕ್ತ ಉಲ್ಲೇಖನ ಬೇಕು].

ಅಂತಾರಾಷ್ಟ್ರೀಯ ಶ್ರೇಣೀಕರಣ

[ಬದಲಾಯಿಸಿ]
ಸಂಸ್ಥೆ ಸಮೀಕ್ಷೆ ಶ್ರೇಯಾಂಕ
ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಆಂಡ್ ಪೀಸ್ [೧] ಜಾಗತಿಕ ಶಾಂತಿ ಸೂಚ್ಯಂಕ[೨೦] 144ರಲ್ಲಿ 45
ಹೆರಿಟೇಜ್ ಫೌಂಡೇಷನ್/ದ ವಾಲ್ ಸ್ಟ್ರೀಟ್ ಜರ್ನಲ್ ಆರ್ಥಿಕ ಸ್ವಾತಂತ್ರ್ಯದ ಸೂಚ್ಯಂಕ 157ರಲ್ಲಿ 137
ರಿಪೋರ್ಟರ್ಸ್ ವಿದೌಟ್ ಬೋರ್ಡರ್ಸ್ ವಿಶ್ವವ್ಯಾಪಿ ಪತ್ರಿಕಾಸ್ವಾತಂತ್ರ್ಯ ಸೂಚ್ಯಂಕ 173ರಲ್ಲಿ 164
ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್ ಭ್ರಷ್ಟಾಚಾರ ಪರಿಕಲ್ಪನೆ ಸೂಚ್ಯಂಕ 180ರಲ್ಲಿ 151
ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ ಮಾನವ ಅಭಿವೃದ್ಧಿ ಸೂಚ್ಯಂಕ 179ರಲ್ಲಿ 133

ಇವನ್ನೂ ಗಮನಿಸಿ

[ಬದಲಾಯಿಸಿ]

ಲಾವೋಸ್‌‌ನ ಜನಾಂಗೀಯ ಅಲ್ಪಸಂಖ್ಯಾತರ ಮುಖಂಡರು

ಟಿಪ್ಪಣಿಗಳು ಮತ್ತು ಉಲ್ಲೇಖಗಳು

[ಬದಲಾಯಿಸಿ]
  1. Department of Economic and Social Affairs Population Division (2009). "World Population Prospects, Table A.1" (.PDF). 2008 revision. United Nations. Retrieved 2009-03-12. {{cite journal}}: Cite journal requires |journal= (help); line feed character in |author= at position 42 (help)
  2. Jump up to: ೨.೦ ೨.೧ ೨.೨ ೨.೩ "Laos". International Monetary Fund. Retrieved 2009-10-01.
  3. "Human Development Report 2009. Human development index trends: Table G" (PDF). The United Nations. Retrieved 2009-10-05.
  4. ಹ್ಯೂಮನ್ ಡೆವೆಲ್ಮೆಂಟ್ ಇಂಡೀಸಸ್ , ಕೋಷ್ಟಕ 3: ಮಾನವ ಮತ್ತು ಆದಾಯದ ಅಭಾವ, ಪುಟ 35. ಜೂನ್ 1ರ 2009ರಲ್ಲಿ ಮರುಸಂಪಾದಿಸಲಾಗಿದೆ.
  5. https://www.theguardian.com/world/2008/dec/03/laos-cluster-bombs-uxo-deaths
  6. Field Listing - Land use Archived 2014-03-26 ವೇಬ್ಯಾಕ್ ಮೆಷಿನ್ ನಲ್ಲಿ., CIA World Factbook
  7. ಏಷಿಯನ್ ಡೆವೆಲಪ್‌ಮೆಂಟ್ ಬ್ಯಾಂಕ್ Archived 2010-01-31 ವೇಬ್ಯಾಕ್ ಮೆಷಿನ್ ನಲ್ಲಿ. - ಗ್ರೇಟರ್ ಮೆಕಾಂಗ್‌ ಉಪಪ್ರಾಂತದ ಬಗ್ಗೆ
  8. "ರೈಸ್, ದ ಫ್ಯಾಬ್ರಿಕ್ ಆಫ್ ಲೈಫ್ ಇನ್ ಲಾವೋಸ್‌‌" (PDF). Archived from the original (PDF) on 2007-06-28. Retrieved 2010-04-14.
  9. ಜಿನೈನ್ಲಿ ಲಾವೊ Archived 2006-10-12 ವೇಬ್ಯಾಕ್ ಮೆಷಿನ್ ನಲ್ಲಿ., ರೈಸ್ ಟುಡೆ, ಎಪ್ರಿಲ್-ಜೂನ್ 2006
  10. FIFTEEN YEARS OF SUPPORT FOR RICE RESEARCH IN LAO PDR Archived 2007-10-27 ವೇಬ್ಯಾಕ್ ಮೆಷಿನ್ ನಲ್ಲಿ.
    ^ ^ ASIA BRIEF: FILLING THE RICE BASKET IN LAO PDR PARTNERSHIP RESULTS Archived 2007-06-28 ವೇಬ್ಯಾಕ್ ಮೆಷಿನ್ ನಲ್ಲಿ.
    ^ ಜಿನೈನ್ಲಿ ಲಾವೊ Archived 2007-10-27 ವೇಬ್ಯಾಕ್ ಮೆಷಿನ್ ನಲ್ಲಿ. - IRRIನ ಇಂಟರ್‌ನ್ಯಾಷನಲ್ ಪ್ರೋಗ್ರಾಮ್ಸ್ ಮ್ಯಾನೇಜ್ಮೆಂಟ್ ಆಫಿಸ್‌ನಿಂದ ಸಿದ್ಧಪಡಿಸಲಾಗಿದೆ.
  11. ದ ಗ್ರೀನ್ ರೆವಲ್ಯೂಷನ್ ಕಮ್ಸ್ ಟು ಲಾವೋಸ್‌‌
  12. "ಎ ರೇಸ್ ಎಗೈನೆಸ್ಟ್ ಟೈಮ್" (PDF). Archived from the original (PDF) on 2007-06-14. Retrieved 2010-04-14.
  13. ಇಂಟರ್‌ನ್ಯಾಷನಲ್ ಮೈಗ್ರೇಶನ್, ರೆಮಿಟಾನ್ಸಸ್ & ದ ಬ್ರೈನ್ ಡ್ರೈನ್
  14. "ಲಾವೊ ಪೀಪಲ್ಸ್ ಡೆಮೋಕ್ರೆಟಿಕ್ ರಿಪಬ್ಲಿಕ್: ಪ್ರಿಪಾರಿಂಗ್ ದ ಕ್ಯುಮುಲೇಟಿವ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಫಾರ್ ದ ನ್ಯಾಮ್ ನ್ಗುಮ್ 3 ಹೈಡ್ರೊಪವರ್ ಪ್ರಾಜೆಕ್ಟ್" (PDF). Archived from the original (PDF) on 2011-05-15. Retrieved 2010-04-14.
  15. "ಲಾವೊ PDR ಟೂರಿಸಂ ಸ್ಟ್ರಾಟೆಜಿ 2006-2020" (PDF). Archived from the original (PDF) on 2013-01-24. Retrieved 2010-04-14.
  16. Jump up to: ೧೬.೦ ೧೬.೧ ೧೬.೨ ೧೬.೩ ೧೬.೪ ೧೬.೫ ೧೬.೬ ೧೬.೭ http://hdrstats.undp.org/en/countries/data_sheets/cty_ds_LAO.html
  17. "CIA the World Factbook". Archived from the original on 2010-12-29. Retrieved 2010-04-14.
  18. ಜಿಕ್‌ಗ್ರಾಫ್, ರಾಲ್ಫ್. ಲಾವೋಸ್‌‌ (ಸರಣಿ: ಮೇಜರ್ ವರ್ಲ್ಡ್ ನೇಷನ್ಸ್). ಫಿಲಡೆಲ್ಫಿಯಾ: ಚೆಲ್ಸಿಯಾ ಹೌಸ್ ಪಬ್ಲಿಷರ್ಸ್ (1999), ಪುಟ 9-10.
  19. "ಆನ್ ಎವಲ್ಯೂಷನ್ ಆಫ್ ಸಿಂಥೆಸಿಸ್ ಆಫ್ ರೈಸ್" (PDF). Archived from the original (PDF) on 2007-07-02. Retrieved 2010-04-14.
  20. "Vision of Humanity". Vision of Humanity. Archived from the original on 2008-07-04. Retrieved 2010-02-04.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ಸಾಮಾನ್ಯ ಮಾಹಿತಿ
  • Laos entry at The World Factbook
  • ಲಾವೋಸ್‌‌ Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ. - UCB ಲೈಬ್ರರೀಸ್ ಗೌಪಬ್ಸ್ ‌ನದ್ದು
  • ಲಾವೋಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Wikimedia Atlas of Laos
"https://kn.wikipedia.org/w/index.php?title=ಲಾವೋಸ್&oldid=1261470" ಇಂದ ಪಡೆಯಲ್ಪಟ್ಟಿದೆ