ಮಾನವ ಅಭಿವೃದ್ಧಿ ಸೂಚ್ಯಂಕ

ವಿಕಿಪೀಡಿಯ ಇಂದ
Jump to navigation Jump to search
ದೇಶವಾರು ಮಾನವ ಅಭಿವೃದ್ಧಿ ಸೂಚ್ಯಂಕದ ವರ್ಗಗಳನ್ನು ತೋರಿಸುವ ಜಾಗತಿಕ ನಕ್ಷೆ (೨೪ ಜುಲೈ ೨೦೧೪ರಂದು ಪ್ರಕಟವಾದ ೨೦೧೩ ರ ದತ್ತಾಂಶ ಮಾಹಿತಿ ಆಧಾರಿತ ).
  ಅತಿ ಉನ್ನತ
  ಉನ್ನತ
  ಮಧ್ಯಮ
  ಕೆಳಮಟ್ಟ
  ಮಾಹಿತಿ ಇಲ್ಲ

1 ವಿಶ್ವ ಏಡ್ಸ್ ದಿನ 2 ಮಾನವ ಬೆಳವಣಿಗೆ ಸೂಚಕವನ್ನು (ಎಚ್‍ಡಿಐ) ಮಾನವ ಅಭಿವೃದ್ಧಿಯ ನಾಲ್ಕು ಶ್ರೇಣಿಗಳಲ್ಲಿ ದೇಶಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ. ಇದು ಜೀವಿತಾವಧಿ, ಶಿಕ್ಷಣ, ಮತ್ತು ತಲಾ ಆದಾಯ ಸೂಚಕಗಳ ಒಂದು ಸಂಯುಕ್ತ ಅಂಕಿ ಅಂಶ ಆಗಿದೆ. ಜೀವಿತಾವಧಿ, ಶಿಕ್ಷಣ ಮಟ್ಟ, ತಲಾವಾರು ಜಿಡಿಪಿ ಹೆಚ್ಚಾದಾಗ ಒಂದು ದೇಶದ ಎಚ್‍ಡಿಐ ಅಂಕ ಹೆಚ್ಚುತ್ತದೆ. ಎಚ್‍ಡಿಐ ಅನ್ನು ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಮಹ್ಬೂಬ್ ಉಲ್ ಹಕ್ ಅಭಿವೃದ್ಧಿಪಡಿಸಿದರು. ಇದನ್ನು ಸಾಮಾನ್ಯವಾಗಿ ಜನರು ತಮ್ಮ ಜೀವನದಲ್ಲಿ ಅಪೇಕ್ಷಣೀಯ ವಿಷಯಗಳನ್ನು ಮಾಡಬಲ್ಲರಾ ಎಂಬ ಪರಿಭಾಷೆಯಲ್ಲಿ ರೂಪಿಸಲಾಗಿದೆ ಮತ್ತು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ಇದನ್ನು ಪ್ರಕಟಿಸಿತು.1 ವಿಶ್ವ ಏಡ್ಸ್ ದಿನ 2 

2010ರ ಮಾನವ ಅಭಿವೃದ್ಧಿ ವರದಿಯು ಅಸಮಾನತೆಗೆ ಹೊಂದಿಕೊಂಡ ಮಾನವ ಬೆಳವಣಿಗೆ ಸೂಚಕವನ್ನು (IHDI) ಪರಿಚಯಿಸಿತು. ಸರಳ ಎಚ್‍ಡಿಐ ಉಪಯುಕ್ತವಾಗಿ ಉಳಿದಿದೆಯಾದರೂ, IHDI ಮಾನವ ಅಭಿವೃದ್ಧಿಯ ನಿಜವಾದ ಮಟ್ಟ (ಅಸಮಾನತೆಯನ್ನು ಗಮನದಲ್ಲಿಟ್ಟುಕೊಂಡು) ಎಂದು ಇದು ಹೇಳಿತು ಮತ್ತು ಎಚ್‍ಡಿಐ ಅನ್ನು ಸಂಭಾವ್ಯ ಮಾನವ ಅಭಿವೃದ್ಧಿ ಸೂಚ್ಯಂಕ (ಅಥವಾ ಅಸಮಾನತೆ ಇಲ್ಲದಿದ್ದರೆ ಸಾಧಿಸಬಹುದಾದ ಗರಿಷ್ಠ IHDI) ಎಂದು ನೋಡಬಹುದು."[೧]

ಇದನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Technical notes Calculating the human development indices—graphical presentation