ವಿಷಯಕ್ಕೆ ಹೋಗು

ಕೊಳವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನೇಕ ಕೊಳವೆಗಳು

ಕೊಳವೆಯು (ನಳಿಕೆ, ನಾಳ) ಸ್ರವಿಗಳನ್ನು (ದ್ರವಗಳು ಅಥವಾ ಅನಿಲಗಳು) ಸಾಗಿಸಲು ಅಥವಾ ವಿದ್ಯುತ್ ಅಥವಾ ದೃಕ್ ತಂತಿಗಳು ಹಾಗೂ ಕೇಬಲ್‍ಗಳನ್ನು ರಕ್ಷಿಸಲು ಬಳಸಲಾದ ಉದ್ದನೆಯ, ಟೊಳ್ಳಾದ ಉರುಳೆಯಾಗಿರುತ್ತದೆ.

ಕೊಳವೆಯನ್ನು ಸಾಮಾನ್ಯ ಕೊಳವೆ ಗಾತ್ರ ಹೆಸರುಗಳಿಂದ ಹೆಸರಿಸಬಹುದು, ಉದಾಹರಣೆಗೆ ವಿಧ್ಯುಕ್ತ ಕೊಳವೆ ಗಾತ್ರ, ಅಥವಾ ಅಧಿಕೃತ ಬಾಹ್ಯ ಅಥವಾ ಆಂತರಿಕ ವ್ಯಾಸ ಮತ್ತು/ಅಥವಾ ಭಿತ್ತಿ ದಪ್ಪದಿಂದ. ಕೊಳವೆಯ ವಾಸ್ತವಿಕ ಅಳತೆಗಳು ಸಾಮಾನ್ಯವಾಗಿ ಅಧಿಕೃತ ಅಳತೆಗಳಾಗಿರುವುದಿಲ್ಲ: ೧ ಅಂಗುಲದ ಕೊಳವೆಯು ವಾಸ್ತವಿಕವಾಗಿ ಬಾಹ್ಯ ಅಥವಾ ಆಂತರಿಕ ವ್ಯಾಸ ಎರಡರಲ್ಲೂ ೧ ಅಂಗುಲ ಅಳತೆಯದ್ದಿರುವುದಿಲ್ಲ. ಅನೇಕ ಬಗೆಯ ಕೊಳವೆಗಳನ್ನು ವಾಸ್ತವಿಕ ಆಂತರಿಕ ವ್ಯಾಸ, ಬಾಹ್ಯ ವ್ಯಾಸ ಅಥವಾ ಭಿತ್ತಿ ದಪ್ಪದಿಂದ ಹೆಸರಿಸಲಾಗುತ್ತದೆ.

ಜಲಜನಕಗಳನ್ನು ಬಳಸುವ ಅನುಸ್ಥಾಪನಗಳಲ್ಲಿನ ತಾಮ್ರದ ಮತ್ತು ತುಕ್ಕುರಹಿತ ಉಕ್ಕಿನ ಕೊಳವೆಗಳನ್ನು ಕಾರ್ಖಾನೆಯಲ್ಲಿ ಸ್ವಚ್ಛಗೊಳಿಸಿರಬೇಕು (ಎಎಸ್‍ಟಿಎಂ ಬಿ ೨೮೦) ಅಥವಾ ಉಪಕರಣ ದರ್ಜೆಯದು ಎಂದು ಪ್ರಮಾಣೀಕರಿಸಿರಬೇಕು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಕೊಳವೆ&oldid=978762" ಇಂದ ಪಡೆಯಲ್ಪಟ್ಟಿದೆ