ಆರ್ಸೆನಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
33 germaniumarsenicselenium
P

As

Sb
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ arsenic, As, 33
ರಾಸಾಯನಿಕ ಸರಣಿmetalloid
ಗುಂಪು, ಆವರ್ತ, ಖಂಡ 15, 4, p
ಸ್ವರೂಪmetallic grey
ಚಿತ್ರ:Arsen 1a.jpg.jpg
ಅಣುವಿನ ತೂಕ 74.921595(6) g·mol−1
ಋಣವಿದ್ಯುತ್ಕಣ ಜೋಡಣೆ [Ar] 3d10 4s2 4p3
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 5
ಭೌತಿಕ ಗುಣಗಳು
ಹಂತsolid
ಸಾಂದ್ರತೆ (ಕೋ.ತಾ. ಹತ್ತಿರ)5.727 g·cm−3
ದ್ರವಸಾಂದ್ರತೆ at ಕ.ಬಿ.5.22 g·cm−3
ತ್ರಿಗುಣ ಬಿಂದು1090 K, 3628 kPa
ಕ್ರಾಂತಿಬಿಂದು1673 K, ? MPa
ಸಮ್ಮಿಲನದ ಉಷ್ಣಾಂಶ(grey) 24.44 kJ·mol−1
ಭಾಷ್ಪೀಕರಣ ಉಷ್ಣಾಂಶ? 34.76 kJ·mol−1
ಉಷ್ಣ ಸಾಮರ್ಥ್ಯ(25 °C) 24.64 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 553 596 646 706 781 874
ಅಣುವಿನ ಗುಣಗಳು
ಸ್ಪಟಿಕ ಸ್ವರೂಪsimple trigonal
ಆಕ್ಸಿಡೀಕರಣ ಸ್ಥಿತಿಗಳು5, 3, 2, 1,[೧] −3
((a mildly acidic oxide))
ವಿದ್ಯುದೃಣತ್ವ2.18 (Pauling scale)
ಅಣುವಿನ ತ್ರಿಜ್ಯ119 pm
ತ್ರಿಜ್ಯ ಸಹಾಂಕ119±4 pm
ವಾನ್ ಡೆರ್ ವಾಲ್ಸ್ ತ್ರಿಜ್ಯ185 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆdiamagnetic
ವಿದ್ಯುತ್ ರೋಧಶೀಲತೆ(20 °C) 333Ω·m
ಉಷ್ಣ ವಾಹಕತೆ(300 K) 50.2 W·m−1·K−1
ಯಂಗ್ ಮಾಪಾಂಕ8 GPa
ಸಗಟು ಮಾಪನಾಂಕ22 GPa
ಮೋಸ್ ಗಡಸುತನ3.5
ಬ್ರಿನೆಲ್ ಗಡಸುತನ1440 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-38-2
Selected isotopes
Main article: Isotopes of arsenic
iso NA half-life DM DE (MeV) DP
73As syn 80.3 d ε 73Ge
γ 0.05D, 0.01D, e
74As syn 17.78 d ε 74Ge
β+ 0.941 74Ge
γ 0.595, 0.634
β 1.35, 0.717 74Se
75As 100% 75As is stable with 42 neutrons
ಉಲ್ಲೇಖನೆಗಳು

ಆರ್ಸೆನಿಕ್ ಒಂದು ಮೂಲಧಾತು.ಇದನ್ನು ಅರೆಲೋಹವೆನ್ನಬಹುದು.ಇದು ಒಂದು ತೀಕ್ಷ್ಣವಾದ ವಿಷ.ಇದರ ಉಪಯೋಗ ಅನಾದಿ ಕಾಲದಿಂದ ಇದ್ದರೂ ೧೨೫೦ರಲ್ಲಿ ಜರ್ಮನಿ ಯ ವಿದ್ವಾಂಸ ಅಲ್ಬರ್ಟ್ಸ್ ಮ್ಯಾಗ್ನಸ್ ಎಂಬವರು ಶುದ್ಧ ರೂಪದಲ್ಲಿ ಬೇರ್ಪಡಿಸಿದರು.ಇದು ಕೀಟನಾಶಕ,ಔಷದ,ಇಲಿಪಾಷಾಣ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ಒಂದು ಮೂಲವಸ್ತು. ತಾಳಕ ಪರ್ಯಾಯನಾಮ. ರಾಸಾಯನಿಕ ಚಿಹ್ನೆ As. ಪರಮಾಣು ಸಂಖ್ಯೆ 33. ಪರಮಾಣು ತೂಕ 74.9216. ಬಹುಹಿಂದಿನಿಂದಲೂ ವಿಷವಸ್ತುವೆಂದು ತಿಳಿದಿದೆ. ಅನೇಕ ಸಂದರ್ಭಗಳಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಪ್ರಾಣಾಪಾಯ ಮಾಡಲು ಘೋರ ವಿಷವಾಗಿ ಪ್ರಯೋಗವಾಗಿರುವ ಕರಾಳ ಸ್ವರೂಪದ ರಾಸಾಯನಿಕ. ಇದು ಪ್ರಕೃತಿಯಲ್ಲಿ ಅಲ್ಪಾಂಶದಲ್ಲಿ ಪ್ರಸರಿಸಿರುವುದಾದರೂ ವಿಶೇಷವಾಗಿ ಗಂಧಕದೊಡನೆ ಸಂಯೋಜಿತವಾಗಿ ಸಲ್ಫೈಡ್ ರೂಪದಲ್ಲಿ ದೊರೆಯುತ್ತದೆ. ಅವುಗಳಲ್ಲಿ ಕೆಂಪು ಬಣ್ಣವುಳ್ಳ ರಿಯಲ್ಗರ್ (As2S2) ಮತ್ತು ಹಳದಿ ಬಣ್ಣದ ಆರ್ಪಿಮೆಂಟ್ (As2S3) ಮುಖ್ಯವಾದವು. ಇತರ ಅದಿರುಗಳು ಮಿಸ್ಪಿಕೆಲ್ (FcAsS) ಮತ್ತು ಕೋಬಾಲ್ಟ್ ಗ್ಲಾನ್ಸ್ (CoAsS).

ಉತ್ಪಾದನೆ[ಬದಲಾಯಿಸಿ]

ಮೇಲ್ಕಂಡ ಯಾವ ಅದಿರನ್ನಾದರೂ, ವಾಯುರಹಿತವಾದ ಆವರಣದಲ್ಲಿ, ಚೆನ್ನಾಗಿ ಕಾಯಿಸಿದ್ದೇ ಆದರೆ, ಆರ್ಸೆನಿಕ್ ಅನಿಲರೂಪದಲ್ಲಿ ಬಿಡುಗಡೆಯಾಗುವುದು. ಈ ಅನಿಲವನ್ನು ದ್ರವೀಕರಿಸುವುದರಿಂದ ಘನರೂಪದ ಆರ್ಸೆನಿಕ್ ಶೇಖರಣೆಯಾಗುತ್ತದೆ. ಗಾಳಿಯ ಸಂಪರ್ಕದೊಡನೆ ಮೇಲ್ಕಂಡ ಅದಿರುಗಳನ್ನು ಕಾಯಿಸಿದಲ್ಲಿ, ಬಿಳುಪಾದ, ಆರ್ಸೆನಿಕ್ ಆಕ್ಸೈಡ್ (As2O3) ದೊರೆಯುತ್ತದೆ. ಇದನ್ನು ಇದ್ದಿಲುಪುಡಿಯೊಡನೆ ಮಿಶ್ರಮಾಡಿ ಕಾಯಿಸುವುದರಿಂದ ಆರ್ಸೆನಿಕ್ ಅನಿಲರೂಪದಲ್ಲಿ ಬಿಡುಗಡೆಯಾಗುತ್ತದೆ. ಇದನ್ನು ಘನರೂಪಕ್ಕೂ ತಂದುಕೊಳ್ಳಬಹುದು. ಆರ್ಸೆನಿಕ್ ಗಂಧಕದಂತೆ ಬಹುರೂಪತ್ವವನ್ನು ಹೊಂದಿರುವ ವಸ್ತು. ಸಾಮಾನ್ಯವಾಗಿ ದೊರಕುವ ಲೋಹದ ಆರ್ಸೆನಿಕ್ ಕಂದು ಬಣ್ಣದ ಪೆಡಸಾದ ಹರಳಿನ ರೂಪದ್ದು; ಮತ್ತು ಲೋಹಕ್ಕೆ ಸಹಜವಾದ ಮೆರುಗನ್ನು ಹೊಂದಿದೆ. ಒಳ್ಳೆಯ ವಿದ್ಯುತ್ವಾಹಕ. ಕಾಯಿಸಿದಾಗ ಸುಮಾರು 8000 ಸೆಂ.ಗ್ರೇ. ಮೇಲ್ಪಟ್ಟು ಶಾಖದಲ್ಲಿ ಇದು ನೇರವಾಗಿ ಆವಿಯಾಗುತ್ತದೆ. ನೀರು ಅಥವಾ ಇಂಗಾಲದ ಡೈಸಲ್ಫೈಡ್ನಲ್ಲಿ (Cs2) ಅದ್ರಾವ್ಯ. ಸಾಮಾನ್ಯ ಉಷ್ಣತೆಯಲ್ಲಿ ಸ್ಥಿರ. ಇದನ್ನು γ (ಗ್ಯಾಮ) ಬಹುರೂಪಿ ಎನ್ನಬಹುದು. ಪುಡಿಯ ರೂಪದಲ್ಲಿರುವ ಮತ್ತೊಂದು ಬಗೆಗೆ β (ಬೀಟ) ಆರ್ಸೆನಿಕ್ ಎಂದೂ ಹಳದಿ ಬಣ್ಣದಲ್ಲಿರುವ ಬೇರೊಂದು ಬಗೆಗೆ α (ಆಲ್ಫ) ಎಂದೂ ಕರೆದಿದೆ. ಈ ಎರಡು ಬಗೆಗಳೂ ಅಷ್ಟು ಸ್ಥಿರವಾಗಿರದೆ, γ ರೂಪಕ್ಕೆ ಕ್ರಮೇಣ ಪರಿವರ್ತನೆ ಹೊಂದುತ್ತವೆ. ಎಲ್ಲ ಬಗೆಗಳೂ ಪ್ರಬಲ ವಿಷವಸ್ತುಗಳು.

ಸಂಯುಕ್ತಗಳು[ಬದಲಾಯಿಸಿ]

ಪ್ರಬಲ ನೈಟ್ರಿಕ್ ಆಮ್ಲ. ಆರ್ಸೆನಿಕ್ನೊಡನೆ ವರ್ತಿಸಿ ಆರ್ಸೆನಿಕ್ ಆಮ್ಲ (H3AsO4) ಉತ್ಪತ್ತಿಯಾಗುತ್ತದೆ. ಕ್ಲೋರಿನ್ ಅನಿಲ ಸುಲಭವಾಗಿ ಆರ್ಸೆನಿಕ್ನೊಂದಿಗೆ ಸಂಯೋಗ ಹೊಂದಿ ಆರ್ಸೆನಿಕ್ ಕ್ಲೋರೈಡ್ (AsCl3) ದೊರೆಯುವುದಲ್ಲದೆ, ಸಂಯೋಗ ಸಂಬಂಧದಲ್ಲಿ ಉಂಟಾದ ಹೆಚ್ಚಿನ ಉಷ್ಣ ಕಿಡಿಗಳ ರೂಪದಲ್ಲಿ ಕಾಣುತ್ತದೆ.

ಆರ್ಸೆನಿಕ್ ವಿಷಬಾಧೆ[ಬದಲಾಯಿಸಿ]

ಆರ್ಸೆನಿಕ್ ಅನೇಕ ರೂಪಗಳಲ್ಲಿ ಅಲ್ಲದೆ ಬಳಕೆಯಲ್ಲಿ ಸುಲಭವಾಗಿ ಉಪಯೋಗಿಸಲ್ಪಡುವ ಧಾತುವಾದ್ದರಿಂದ, ಹಲವಾರು ವಿಧಗಳಿಂದ ಇದರ ಬಾಧೆಯುಂಟಾಗುತ್ತದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಆರ್ಸೆನಿಕ್ ಲವಣಗಳು ಬಣ್ಣರಹಿತ ಮತ್ತು ರುಚಿರಹಿತ. ಆದ್ದರಿಂದ ಪುರ್ವಕಾಲದಿಂದಲೂ ಪಾತಕ ಕಾರ್ಯಕ್ಕೆ ಬಳಸಲ್ಪಡುತ್ತಿವೆ. ಈ ಪಾಷಾಣಬಾಧೆ ತೀವ್ರತರ ಇಲ್ಲವೆ ಜಡತರದ್ದಾಗಿ ಕಂಡುಬರಬಹುದು. ಆರ್ಸೆನಿಕ್ ಲವಣಗಳಾದ ಬಿಳಿ ಆರ್ಸೆನಿಕ್, ಸೀಸದ ಆರ್ಸೆನೈಟ್, ತಾಮ್ರದ ಆರ್ಸೆನೈಟ್ ಮುಂತಾದವುಗಳು ಕ್ರಿಮಿಕೀಟ, ಹೆಗ್ಗಣ, ಬೆಳೆಯಲ್ಲಿಯ ಕಳೆ, ಪರೋಪಜೀವಿ ಇವುಗಳ ನಾಶಕ್ಕೆ ಉಪಯೋಗಿಸಲ್ಪಡುತ್ತವೆ. ಆದರೆ ಇಂಥ ವಿಷವಸ್ತುಗಳು ಆಕಸ್ಮಿಕವಾಗಿಯಾಗಲಿ ಉದ್ದೇಶಪುರ್ವಕವಾಗಿಯಾಗಲಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಲ್ಪಟ್ಟರೆ ಆರ್ಸೆನಿಕ್ ವಿಷಬಾಧೆಯುಂಟಾಗುತ್ತದೆ. ಆಗ ಪೀಡಿತ ಜೀವಿಗಳಲ್ಲಿ ಯಾತನಾಪುರ್ವಕ ಹೊಟ್ಟೆನೋವು, ಉತ್ಕ್ಷೇಪನ, ವಾಂತಿ, ತೀವ್ರ ಅತಿಸಾರ, ಸ್ನಾಯುಗಳಲ್ಲಿ ಚಳಕು ಮುಂತಾದ ತೀವ್ರ ಲಕ್ಷಣಗಳು ಕಂಡುಬಂದು ಸಕಾಲದಲ್ಲಿ ಚಿಕಿತ್ಸೆಯಾಗದಿದ್ದರೆ ಕೆಲವು ಗಂಟೆಗಳಲ್ಲಿಯೇ ಅವು ಸಾಯುತ್ತವೆ. ಆರ್ಸೆನಿಕ್ ಶರೀರದಿಂದ ಅಷ್ಟು ಸುಲಭವಾಗಿ ವಿಸರ್ಜಿಸಲ್ಪಡದೆ ಶರೀರದ ನಾಡಿಕೂಟದಲ್ಲಿ ಶೇಖರಿಸಲ್ಪಡುವ ವಸ್ತುವಾದ್ದರಿಂದ ಆರ್ಸೆನಿಕ್ಯುಕ್ತ ಔಷಧಗಳನ್ನು ಚಿಕಿತ್ಸೆಗಾಗಿ ಆಗಾಗ ಉಪಯೋಗಿಸಿದರೆ ಇಲ್ಲವೆ ಆರ್ಸೆನಿಕ್ ಯಾವುದೇ ಕಾರಣದಿಂದಾಗಿ ಸಣ್ಣ ಪ್ರಮಾಣದಲ್ಲಿ ಬಹುಕಾಲದವರೆಗೆ ದೇಹದೊಳಕ್ಕೆ ಸೇರಿದರೆ ಆರ್ಸೆನಿಕ್ನ ತೀವ್ರ (ಕ್ರಾನಿಕ್) ವಿಷಬಾಧೆಯುಂಟಾಗುತ್ತದೆ. ಈ ಬಾಧೆಯನ್ನು ಗುರುತಿಸುವುದು ಕಷ್ಟಕರ. ಆದರೂ ಜಡತರದ ಭೇದಿ, ಕೂದಲು ಉದುರುವುದು, ಉಸಿರು, ಬೆವರಿನಲ್ಲಿ ಬೆಳ್ಳುಳ್ಳಿಯ ವಾಸನೆ ಮೊದಲಾದ ಚಿಹ್ನೆಗಳು ಈ ವಿಷಬಾಧೆಯ ಸೂಚಕಗಳಾಗಿವೆ. ತೀವ್ರ ವಿಷಬಾಧೆಯಿಂದ ನರಳುವ ಜೀವಿಗಳ ಮಲ, ಮೂತ್ರ, ರಕ್ತಾದಿಗಳನ್ನು ರಾಸಾಯನಿಕ ವಿಚ್ಛೇದನೆಗೊಳಪಡಿಸಿದರೆ ತಾಳಕದ (ಆರ್ಸೆನಿಕ್) ವಿಷಬಾಧೆಯ ಸಾಧ್ಯತೆಯನ್ನು ದೃಢೀಕರಿಸುವುದು ಸುಲಭ. ಬಿ.ಏ.ಎಲ್ನ್ನು (ಬ್ರಿಟಿಷ್ ಆ್ಯಂಟಿ ಲೆವಿಸೈಟ್) ಸೂಜಿಮದ್ದಾಗಿ ಕೊಡುವುದು ಈ ವಿಷಬಾಧೆಗೆ ಪ್ರಮುಖವಾದ ಚಿಕಿತ್ಸೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಗುಂಪು → ೧೦ ೧೧ ೧೨ ೧೩ ೧೪ ೧೫ ೧೬ ೧೭ ೧೮
↓ ಆವರ್ತ
1
H

2
He
3
Li
4
Be

5
B
6
C
7
N
8
O
9
F
10
Ne
11
Na
12
Mg

13
Al
14
Si
15
P
16
S
17
Cl
18
Ar
19
K
20
Ca
21
Sc
22
Ti
23
V
24
Cr
25
Mn
26
Fe
27
Co
28
Ni
29
Cu
30
Zn
31
Ga
32
Ge
33
As
34
Se
35
Br
36
Kr
37
Rb
38
Sr
39
Y
40
Zr
41
Nb
42
Mo
43
Tc
44
Ru
45
Rh
46
Pd
47
Ag
48
Cd
49
In
50
Sn
51
Sb
52
Te
53
I
54
Xe
55
Cs
56
Ba
*
72
Hf
73
Ta
74
W
75
Re
76
Os
77
Ir
78
Pt
79
Au
80
Hg
81
Tl
82
Pb
83
Bi
84
Po
85
At
86
Rn
87
Fr
88
Ra
**
104
Rf
105
Db
106
Sg
107
Bh
108
Hs
109
Mt
110
Ds
111
Rg
112
Cn
113
Nh
114
Uuq
115
Uup
116
Uuh
117
Uus
118
Uuo

* ಲ್ಯಾಂಥನೈಡ್ಗಳು 57
La
58
Ce
59
Pr
60
Nd
61
Pm
62
Sm
63
Eu
64
Gd
65
Tb
66
Dy
67
Ho
68
Er
69
Tm
70
Yb
71
Lu
** ಆಕ್ಟಿನೈಡ್ಗಳು 89
Ac
90
Th
91
Pa
92
U
93
Np
94
Pu
95
Am
96
Cm
97
Bk
98
Cf
99
Es
100
Fm
101
Md
102
No
103
Lr


ಉಲ್ಲೇಖಗಳು[ಬದಲಾಯಿಸಿ]

  1. Ellis, Bobby D.; MacDonald, Charles L. B. (2004). "Stabilized Arsenic(I) Iodide: A Ready Source of Arsenic Iodide Fragments and a Useful Reagent for the Generation of Clusters". Inorganic Chemistry. 43 (19): 5981–6. doi:10.1021/ic049281s. PMID 15360247.