ವಿಷಯಕ್ಕೆ ಹೋಗು

ಲ್ಯುಟೇಶಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲುಟೆಶಿಯಮ್ ಇಂದ ಪುನರ್ನಿರ್ದೇಶಿತ)

ಲ್ಯೂಟೇಶಿಯಮ್ ಒಂದು ಲೋಹ ಮೂಲಧಾತು. ಆವರ್ತ ಕೋಷ್ಟಕದಲ್ಲಿ ಇದು ಸಂಕ್ರಮಣ ಧಾತುಗಳ ಜೊತೆಗೆ ಇದ್ದರೂ, ಇದರ ರಾಸಾಯನಿಕ ಗುಣಗಳಿಂದ ಇದನ್ನು ಲ್ಯಾಂಥನೈಡ್ ಗುಂಪಿಗೆ ಸೇರಿಸಲಾಗುತ್ತದೆ. ಇದು ವಿರಳ ಭಸ್ಮ ಲೋಹಗಳಲ್ಲಿ ಅತ್ಯಂತ ಭಾರವಾದುದು ಮತ್ತು ಗಟ್ಟಿಯಾದುದಾಗಿದೆ.ಲ್ಯುಟೇಶಿಯಮ್ ಸಂಕೇತ Lu ಮತ್ತು ಪರಮಾಣು ಸಂಖ್ಯೆ 71,ಒಣ ಗಾಳಿಯಲ್ಲಿ ತುಕ್ಕು ನಿರೋಧಿಸುತ್ತದೆ ಮತ್ತು ಆದರೆ ತೇವಾಂಶವುಳ್ಳ ಗಾಳಿಯಲ್ಲಿ ನಿರೋಧಿಸುವದಿಲ್ಲ .[]

ಇದು ೧೯೦೭ರಲ್ಲಿ ಮೂರು ವಿಜ್ಞಾನಿಗಳಿಂದ ಸ್ವತಂತ್ರವಾಗಿ ಕಂಡುಹಿಡಿಯಲ್ಪಟ್ಟಿತು. ಇದರ ಹೆಸರು ಲ್ಯಾಟಿನ್ ಭಾಷೆಯಲ್ಲಿ ಪ್ಯಾರಿಸ್ ನಗರದ ಹೆಸರಾದ "ಲ್ಯುಟೇಶಿಯ" ಇಂದ ಬಂದಿದೆ. ಇದು ಅತೀ ದುಬಾರಿಯಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ. ಲ್ಯುಟೇಶಿಯಮ್ ಒಂದು ನಿರ್ದಿಷ್ಟವಾಗಿ ಅಸಾಮಾನ್ಯವಾದ ಅಂಶ ಆದರೂ ಭೂಮಿಯ ಹೊರಪದರದಲ್ಲಿ ಬೆಳ್ಳಿಯಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ. ಇದು ಕೆಲವು ನಿರ್ದಿಷ್ಟ ಬಳಕೆಗಳನ್ನು ಹೊಂದಿದೆ. ಲ್ಯುಟೇಶಿಯಮ್-೧೭೬ ತುಲನಾತ್ಮಕವಾಗಿ ಹೇರಳವಾಗಿರುವ (೨.೫%) ವಿಕಿರಣಶೀಲ, ಇದರ ಅರ್ಧ ಕಾಲ ೩೮ ಶತಕೋಟಿ ವರ್ಷಗಳು ಆದ್ದರಿಂದ ಉಲ್ಕೆಗಳ ವಯಸ್ಸುಗಳಾನ್ನು ಕಂಡುಹಿಡಿಯಲು ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Atomic weights of the elements 2013 (IUPAC Technical Report)" (PDF). www.degruyter.com ,18 May 2017.