ಮೆಂಡೆಲೀವಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


101 ಫೆರ್ಮಿಯಮ್ಮೆಂಡೆಲಿವಿಯಮ್ನೊಬೆಲಿಯಮ್
ಥುಲಿಯಮ್

Md

Upu
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಮೆಂಡೆಲಿವಿಯಮ್, Md, 101
ರಾಸಾಯನಿಕ ಸರಣಿactinides
ಗುಂಪು, ಆವರ್ತ, ಖಂಡ n/a, 7, f
ಸ್ವರೂಪಮಾಹಿತಿ ಇಲ್ಲ
ಅಣುವಿನ ತೂಕ 258 g·mol−1
ಋಣವಿದ್ಯುತ್ಕಣ ಜೋಡಣೆ [ರೇಡಾನ್] 5f13 7s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 31, 8, 2
ಭೌತಿಕ ಗುಣಗಳು
ಹಂತsolid
ಕರಗುವ ತಾಪಮಾನ1100 K
(827 °C, 1521 °ಎಫ್)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪface centered cubic
ವಿದ್ಯುದೃಣತ್ವ1.3 (Pauling scale)
ಇತರೆ ಗುಣಗಳು
ಕಾಂತೀಯ ವ್ಯವಸ್ಥೆdiamagnetic
ಸಿಎಎಸ್ ನೋಂದಾವಣೆ ಸಂಖ್ಯೆ7440-11-1
ಉಲ್ಲೇಖನೆಗಳು

ಮೆಂಡೆಲೀವಿಯಮ್ ಒಂದು ವಿಕಿರಣಶೀಲ ಮೂಲಧಾತು. ಇದು ಆವರ್ತಕೋಷ್ಟಕದ ಆಕ್ಟಿನಿಯಮ್ ಶ್ರೇಣಿಯ ಧಾತುಗಳ ಪೈಕಿ ಹನ್ನೆರಡನೆಯದು. ರಾಸಾಯನಿಕ ಪ್ರತೀಕ Md. ಪರಮಾಣು ಸಂಖ್ಯೆ 101, ಈ ಧಾತು ನಿಸರ್ಗದಲ್ಲಿ ಅಲಭ್ಯ; ಸಂಶ್ಲೇಷಣೆಯಿಂದ ಮಾತ್ರ ಪಡೆಯುವುದು ಸಾಧ್ಯ.

ಮೆಂಡಲೀವಿಯಮ್ಮಿನ ಜ್ಞಾತ ಐಸೊಟೋಪುಗಳು ಐದು. ಇವುಗಳ ಪರಮಾಣು ಸಂಖ್ಯೆ ಅನುಕ್ರಮವಾಗಿ 252, 253, 254, 255 ಮತ್ತು 256. ಇವುಗಳ ಅರ್ಧಾಯು 8 ಮಿನಿಟುಗಳಿಂದ ಸುಮಾರು 54 ದಿವಸಗಳು. ಇವೆಲ್ಲವನ್ನೂ ಅಧಿಕಸಮೃದ್ಧಿ ಐಸೊಟೋಪುಗಳ ಮೇಲೆ ಆವಿಷ್ಟಕಣಗಳನ್ನು ತಾಡಿಸುವುದರಿಂದ ಉತ್ಪಾದಿಸಬಹುದು. ಉದಾಹರಣೆಗೆ

255Es + 4He → 258Md + n

ಎ. ಗಿಯೋರ್ಸೊ. ಬಿ.ಜಿ. ಹಾರ್ವೇ, ಜಿ.ಆರ್. ಚಾಪಿನ್, ಎಸ್. ಜಿ. ತಾಮ್‌ಸನ್ ಮತ್ತು ಜಿ.ಟಿ. ಸೀಬರ್ಗ್ ಎಂಬ ವಿಜ್ಞಾನಿಗಳು ಅಭಿಜಾತ ಪ್ರಯೋಗಗಳ ಒಂದು ಶ್ರೇಣಿಯನ್ನು ನಡೆಸಿದ್ದರು (1955). ಇದನ್ನು ೧೯೫೮ರಲ್ಲಿ ಅಮೆರಿಕದ ವಿಜ್ಞಾನಿಗಳು ಕಂಡುಹಿಡಿದರು.

ಪ್ರಯೋಗದಿಂದ ಮೆಂಡಲೀವಿಯಮ್‍ನ ಆವಿಷ್ಕಾರ[ಬದಲಾಯಿಸಿ]

ಇದರಿಂದ ಮೆಂಡಲೀವಿಯಮ್ಮಿನ ಆಚೆಗೆ ಇರುವ ಎಲ್ಲ ಜ್ಞಾತಧಾತುಗಳ ಆವಿಷ್ಕಾರಕ್ಕೆ ಆಧಾರ ಒದಗಿಬಂದಂತೆ ಆಯಿತು. ಪ್ರತಿಯೊಂದು ಪ್ರಯೋಗದಲ್ಲೂ ಪ್ರತಿಕ್ಷೇಪಕ್ರಿಯಾತಂತ್ರದ (ರಿಕಾಯಿಲ್ ಟೆಕ್ನಿಕ್) ಅನ್ವಯದಿಂದ ಮೆಂಡಲೀವಿಯಮ್ಮಿನ ಕೆಲವೊಂದು ಪರಿಮಾಣಗಳನ್ನು ಸಂಗ್ರಹಿಸಿ ಗುರುತಿಸಲಾಯಿತು. ಮುಂದೆ ಅವರು ಸೈಕ್ಲೊಟ್ರಾನ್ ವೇಗೋತ್ಕರ್ಷಕ ಯಂತ್ರದಿಂದ ವೇಗೋತ್ಕರ್ಷಕಗೊಂಡ ಹೀಲಿಯಮ್ ಅಯಾನುಗಳಿಂದ ಅಲ್ಪಗಾತ್ರದ ಐನ್‌ಸ್ಟೈನಿಯಮವನ್ನು (253) ತಾಡಿಸಿದರು. ಐನ್‌ಸ್ಟೈನಿಯಮ್ ಮತ್ತು ಹೀಲಿಯಮ್ ನ್ಯೂಕ್ಲಿಯಸ್ಸುಗಳು ಒಗ್ಗೂಡಿ 255 ಆಗಿದ್ದುದನ್ನು ಲೆಕ್ಕಾಚಾರಗಳಿಂದ ನಿರ್ಧರಿಸಿದರು. ಈ ಪ್ರಯೋಗಗಳಿಂದ 101ನೆಯ ಧಾತುವಿನ ಆವಿಷ್ಕಾರವಾಗಿ ಆವರ್ತಕೋಷ್ಟಕದ ಜನಕ ಎಂದು ಖ್ಯಾತಿಗಳಿಸಿದ್ದ ರಷ್ಯದ ರಸಾಯನವಿಜ್ಞಾನಿ ಡ್ಮಿಟ್ರಿ ಐವನೋವಿಚ್ ಮೆಂಡಲೀವನ (1834-1907) ಗೌರವಾರ್ಥ ಈ ಧಾತುವಿಗೆ ಮೆಂಡಲೀವಿಯಮ್ ಎಂದು ನಾಮಕರಣವಾಯಿತು.

ಪ್ರಯೋಗಗಳಿಂದ ಲಭ್ಯವಾಗುವ ಮೆಂಡಲೀವಿಯಮ್ಮಿನ ಪರಿಮಾಣ ಬಲು ಅಲ್ಪ. ಏಕೆಂದರೆ ತಾಡನಗಳು ಮೆಂಡಲೀವಿಯಮ್ಮಿನ ಐಸೊಟೋಪುಗಳನ್ನು ಉತ್ಪಾದಿಸುವುದರ ಬದಲಿಗೆ ವಿದಳನೋತ್ಪನ್ನಗಳನ್ನು ಉಂಟುಮಾಡುತ್ತದೆ. ಹೀಗಾಗಿ ರಾಸಾಯನಿಕ ಅಧ್ಯಯನ ಮತ್ತು ನ್ಯೂಕ್ಲಿಯರ್ ಗುಣಲಕ್ಷಣಗಳ ಪರೀಕ್ಷೆಗಾಗಿ ಉತ್ಪಾದನೆಯಾಗುವ ಮೆಂಡಲೀವಿಯಮ್ಮಿನ ಮೊತ್ತ ಸುಮಾರು 19 ದಶಲಕ್ಷ ಪರಮಾಣುಗಳಿಗಿಂತಲೂ ಕಡಿಮೆ.

ಗುಣಗಳು[ಬದಲಾಯಿಸಿ]

ಮೆಂಡಲೀವಿಯಮ್ಮಿನ ರಾಸಾಯನಿಕ ಗುಣಗಳ ಅಧ್ಯಯನ ಅನುರೇಖಣಮಾನಕಕ್ಕೆ (ಟ್ರೇಸರ್ ಸ್ಕೇಲ್) ಸೀಮಿತವಾಗಿದೆ. ಅಯಾನ್-ವಿನಿಮಯ ಕ್ರೊಮಟಾಗ್ರಫಿಯಲ್ಲಿಯ ಇದರ ವರ್ತನೆಯಾದರೂ ಆಕ್ಟಿನೈಡ್ ಶ್ರೇಣಿಯ ಧಾತುಗಳ 3+ ಉತ್ಕರ್ಷಣಸ್ಥಿತಿಯಲ್ಲಿ ಮೂಲಭೂತವಾಗಿ ಇದು ಇರುವುದನ್ನು ತೋರಿಸುತ್ತದೆ. ಹೀಗಿದ್ದರೂ ಇದಕ್ಕೆ 2+ ಉತ್ಕರ್ಷಣಸ್ಥಿತಿ ಉಂಟು. ಇದರ ಉತ್ಕರ್ಷಣ ವಿಭವ 6.2 ವೋಲ್ಟ್. 3+ ಸ್ಥಿತಿಯಲ್ಲಿ ಇದು ಆಕ್ಟಿನೈಡ್ ಧಾತುಗಳ ಪ್ರರೂಪಿ ತ್ರೈಧನಾತ್ಮಕ (ಟಿಪಿಕಲ್ ಟ್ರೈಪಾಸಿಟಿವ್) ವರ್ತನೆಯನ್ನು ಪ್ರದರ್ಶಿಸುತ್ತದೆ. ಕೇಟಯಾನ್ ವಿನಿಮಯರಾಳದಿಂದ, ಇತರ ಆಕ್ಟಿನೈಡುಗಳಿಗಿಂತ ಭಿನ್ನವಾಗಿರುವುದರಲ್ಲಿ ಇದು ಪ್ರತಿಶೋಷಣಗೊಳ್ಳುತ್ತದೆ (ಡಿಸಾರ್ಬ್ಡ್). ಇತರ ಆಕ್ಟಿನೈಡ್ ಧಾತುಗಳ ಸಾನ್ನಿಧ್ಯದಲ್ಲಿ ಮೆಂಡಲೀವಿಯಮ್ಮನ್ನು ಪ್ರತ್ಯೇಕವಾಗಿ ಗುರುತಿಸಿ ಬೇರ್ಪಡಿಸುವ ಕೆಲಸಕ್ಕೆ ಈ ಪ್ರತಿಶೋಷಣೆ ಮೂಲಭೂತ ಆಧಾರ ಒದಗಿಸುತ್ತದೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Hoffman, D.C., Ghiorso, A., Seaborg, G. T. The transuranium people: the inside story, (2000), 201–229
  • Morss, L. R., Edelstein, N. M., Fuger, J., The chemistry of the actinide and transactinide element, 3, (2006), 1630–1636
  • A Guide to the Elements – Revised Edition, Albert Stwertka, (Oxford University Press; 1998) ISBN 0-19-508083-1

ಹೊರಗಿನ ಕೊಂಡಿಗಳು[ಬದಲಾಯಿಸಿ]