ವಿಷಯಕ್ಕೆ ಹೋಗು

ಸೈಕ್ಲೊಟ್ರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೈಕ್ಲೊಟ್ರಾನ್ ಪರ್ಯಾಯಕ ವಿದ್ಯುತ್‌ಕ್ಷೇತ್ರವನ್ನು ಬಳಸಿ ಆವಿಷ್ಟಕಣಗಳನ್ನು ಸ್ಥಿರಕಾಂತಕ್ಷೇತ್ರದಲ್ಲಿ ವೃತ್ತಾರ್ಧವಾಗಿ ಬಾಗಿಸಿ ವರ್ತುಳೀಯ ಪಥದಲ್ಲಿ ವೇಗೋತ್ಕರ್ಷಿಸುವ ವೇಗೋತ್ಕರ್ಷಕ.[೧][೨] ಇದು ಅತ್ಯಂತ ಹಳೆಯ ವೇಗೋತ್ಕರ್ಷಕಗಳ ಪೈಕಿ ಒಂದು, ಅಲ್ಲದೆ ವಿವಿಧ ಹಂತಗಳ ವೇಗೋತ್ಕರ್ಷಕಗಳ ಆರಂಭಿಕ ಹಂತವಾಗಿ ಇಂದಿಗೂ ಬಳಕೆಯಲ್ಲಿದೆ.

ಸೈಕ್ಲೊಟ್ರಾನ್‍ನ ರೇಖಾಕೃತಿ. ಅಯಸ್ಕಾಂತದ ಧ್ರುವೀಯ ಚೂರುಗಳನ್ನು ವಾಸ್ತವದಲ್ಲಿರುವುದಕ್ಕಿಂತ ಚಿಕ್ಕದಾಗಿ ತೋರಿಸಲಾಗಿದೆ; ಏಕರೀತಿಯ ಕ್ಷೇತ್ರವನ್ನು ಸೃಷ್ಟಿಸಲು ಅವುಗಳು ವಾಸ್ತವಿಕವಾಗಿ ಕನಿಷ್ಠ ಪಕ್ಷ ವೇಗೋತ್ಕರ್ಷಿಸುವ ವಿದ್ಯುದ್ಧ್ರುವಗಳಷ್ಟು ("ಡೀಸ್") ಅಗಲವಾಗಿರಬೇಕು.

ವೇಗೋತ್ಕರ್ಷಿತವಾದ ಎಲೆಕ್ಟ್ರಾನ್‌ಗಳ ಮೇಲೆ ಸೈಕ್ಲೊಟ್ರಾನ್ ನಿಯಮವನ್ನು ಹೇರಿದಾಗ ಐತಿಹಾಸಿಕವಾಗಿ ಇದನ್ನು ಬೀಟಾಟ್ರಾನ್ ಎಂದು ಕರೆಯಲಾಗುತ್ತಿತ್ತು. “ಡೀಸ್” (D - ಆಕಾರದ ವಿದ್ಯುದ್ಧ್ರುವ) ನಡುವೆ ಮಾತ್ರ ಆವಿಷ್ಟಕಣಗಳ ಗತಿ ವ್ಯತ್ಯಯವಾಗುತ್ತದೆ. ಸೈಕ್ಲೊಟ್ರಾನ್ ನಿಯಮದ ಪ್ರಕಾರ ಕಣಗಳು ವೃತ್ತಾರ್ಧವನ್ನು ಪೂರ್ಣಗೊಳಿಸಿದ ಅನಂತರ ತೆರಪಿನಾದ್ಯಂತ ಹಿಮ್ಮೊಗವಾಗಿ ವೇಗೋತ್ಕರ್ಷಿಸುವ ಸಲುವಾಗಿ ವಿದ್ಯುತ್‌ಕ್ಷೇತ್ರವನ್ನು ಸೈಕ್ಲೊಟ್ರಾನ್ ಆವೃತ್ತಿಯಲ್ಲಿ (ಸೈಕ್ಲೊಟ್ರಾನ್ ಫ್ರೀಕ್ವೆನ್ಸಿ) ವಿಪರ್ಯಯಗೊಳಿಸಲಾಗುವುದು. ಆಗ ಕಣಗಳು ಉಚ್ಚಜವದೊಂದಿಗೆ ದೊಡ್ಡದಾದ ವೃತ್ತಾರ್ಧದಲ್ಲಿ ಚಲಿಸಲಾರಂಭಿಸುತ್ತವೆ. ಈ ಪ್ರಕ್ರಿಯೆ ಹಲವು ಬಾರಿ ಮರುಕಳಿಸಿದಾಗ ಉಚ್ಚಜವದೊಂದಿಗೆ ನಿರ್ಗಮದ್ವಾರದ ಮೂಲಕ ಹೊರಬರುವುವು.

ಉಲ್ಲೇಖಗಳು[ಬದಲಾಯಿಸಿ]

  1. Nave, C. R. (2012). "Cyclotron". Dept. of Physics and Astronomy, Georgia State University. Retrieved October 26, 2014.
  2. Close, F. E.; Close, Frank; Marten, Michael; et al. (2004). The Particle Odyssey: A Journey to the Heart of Matter. Oxford University Press. pp. 84–87. Bibcode:2002pojh.book.....C. ISBN 978-0-19-860943-8.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: