ಥುಲಿಯಮ್
Jump to navigation
Jump to search
ಥುಲಿಯಮ್ ಒಂದು ಲ್ಯಾಂಥನೈಡ್ ಸರಣಿಯ ಲೋಹ ಮೂಲಧಾತು. ಇದು ಬೆಳ್ಳಿಯಂತಹ ಹೊಳಪುಳ್ಳ ಒಂದು ಮೃದು ಲೋಹ. ವಿರಳ ಭಸ್ಮ ಲೋಹಗಳಲ್ಲಿಯೇ ಅತ್ಯಂತ ವಿರಳವಾದ ಲೋಹವಾಗಿರುವುದರಿಂದ ಇದರ ಉಪಯೋಗಗಳು ಕಡಿಮೆ. ಇದನ್ನು ೧೮೭೯ರಲ್ಲಿ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ ಪೆರ್ ತಿಯೊಡೊರ್ ಕ್ಲೀವ್ ಪರಿಶೋಧಿಸಿದನು. ಯುರೋಪಿನ ಶಾಸ್ತ್ರೀಯ ಸಾಹಿತ್ಯದಲ್ಲಿ "ಥುಲೆ" ಪದವು ಸ್ಕ್ಯಾಂಡಿನೇವಿಯ ಪ್ರದೇಶವನ್ನು ಕೆಲವೊಮ್ಮೆ ಸೂಚಿಸುತ್ತದೆ. ಈ ಧಾತುವಿಗೆ ಈ ಪದದಿಂದ ಹೆಸರು ನೀಡಲಾಯಿತು. [೧]