ಡರ್ಮ್ಸ್ಟಾಡ್ಟಿಯಮ್
ಗೋಚರ
(ಡರ್ಮ್ಸ್ಟಾಡ್ಟಿಯಮ್ ಇಂದ ಪುನರ್ನಿರ್ದೇಶಿತ)
| ||||||
| ಸಾಮಾನ್ಯ ಮಾಹಿತಿ | ||||||
|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಡರ್ಮ್‌ಸ್ಟಾಡ್ಟಿಯಮ್, Ds, 110 | |||||
| ರಾಸಾಯನಿಕ ಸರಣಿ | ಸಂಕ್ರಮಣ ಲೋಹ | |||||
| ಗುಂಪು, ಆವರ್ತ, ಖಂಡ | 10, 7, d | |||||
| ಸ್ವರೂಪ | ಮಾಹಿತಿ ಇಲ್ಲ | |||||
| ಅಣುವಿನ ತೂಕ | ೨೮೧ g·mol−1 | |||||
| ಋಣವಿದ್ಯುತ್ಕಣ ಜೋಡಣೆ | ಮಾಹಿತಿ ಇಲ್ಲ | |||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 32, 17, 1 | |||||
| ಭೌತಿಕ ಗುಣಗಳು | ||||||
| ಹಂತ | ಘನವಸ್ತು ಇರಬಹುದು | |||||
| ಇತರೆ ಗುಣಗಳು | ||||||
| ಸಿಎಎಸ್ ನೋಂದಾವಣೆ ಸಂಖ್ಯೆ | 54083-77-1 | |||||
| ಉಲ್ಲೇಖನೆಗಳು | ||||||
ಡರ್ಮ್ಸ್ಟಾಡ್ಟಿಯಮ್ ಒಂದು ಹೊಸ ಪೀಳಿಗೆಯ ಮೂಲಧಾತು. ಇದು ೨೦೦೩ರ ವರೆಗೂ ಮೂಲಧಾತು-೧೧೦ ಎಂದೇ ಗುರುತಿಸಲ್ಪಟ್ಟಿತ್ತು. ಇದು ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಮೂಲವಸ್ತು. ಇಷ್ಟರವರೆಗೆ ಇದರ ೪ ಸಮಸ್ಥಾನಿಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಸಮಸ್ಥಾನಿಗಳೂ ಅತ್ಯಂತ ಕ್ಷಿಪ್ರವಾಗಿ ವಿಕಿರಣ ಹೊಂದುತ್ತವಾದುದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು ಕಷ್ಟಕರ. ಇದನ್ನು ೧೯೯೪ರಲ್ಲಿ ಜರ್ಮನಿಯ ವಿಜ್ಞಾನಿಗಳು ಕಂಡುಹಿಡಿದ್ದಿದ್ದರೂ ೨೦೦೩ರಲ್ಲಷ್ಟೇ ಅಧಿಕೃತವಾಗಿ ಇದರ ಸಂಶೋಧನೆ ನಡೆದ ಊರಿನ ಹೆಸರಿನಿಂದ ನಾಮಕರಣ ಮಾಡಲಾಯಿತು.