ವಿಷಯಕ್ಕೆ ಹೋಗು

ಯುರೋಪಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


63 ಸಮಾರಿಯಮ್ಯುರೋಪಿಯಮ್ಗ್ಯಾಡೊಲಿನಿಯಮ್
-

Eu

ಅಮೇರಿಶಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಯುರೋಪಿಯಮ್, Eu, 63
ರಾಸಾಯನಿಕ ಸರಣಿlanthanide
ಗುಂಪು, ಆವರ್ತ, ಖಂಡ n/a, 6, f
ಸ್ವರೂಪಬೆಳ್ಳಿಯ ಬಿಳಿ ಬಣ್ಣ
ಅಣುವಿನ ತೂಕ 151.964 g·mol−1
ಋಣವಿದ್ಯುತ್ಕಣ ಜೋಡಣೆ [Xe] 4f7 6s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 25, 8, 2
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)5.264 g·cm−3
ದ್ರವಸಾಂದ್ರತೆ at ಕ.ಬಿ.5.13 g·cm−3
ಕರಗುವ ತಾಪಮಾನ1099 K
(826 °C, 1519 °ಎಫ್)
ಕುದಿಯುವ ತಾಪಮಾನ1802 K
(1529 °C, 2784 °F)
ಸಮ್ಮಿಲನದ ಉಷ್ಣಾಂಶ9.21 kJ·mol−1
ಭಾಷ್ಪೀಕರಣ ಉಷ್ಣಾಂಶ176 kJ·mol−1
ಉಷ್ಣ ಸಾಮರ್ಥ್ಯ(25 °C) 27.66 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 863 957 1072 1234 1452 1796
ಅಣುವಿನ ಗುಣಗಳು
ಸ್ಪಟಿಕ ಸ್ವರೂಪsimple cubic (body centered)
ಆಕ್ಸಿಡೀಕರಣ ಸ್ಥಿತಿಗಳು3, 2
(base oxide)
ವಿದ್ಯುದೃಣತ್ವ? 1.2 (Pauling scale)
ಅಣುವಿನ ತ್ರಿಜ್ಯ185 pm
ಅಣುವಿನ ತ್ರಿಜ್ಯ (ಲೆಖ್ಕಿತ)231 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ವಿದ್ಯುತ್ ರೋಧಶೀಲತೆ0.900 MΩ·m
ಉಷ್ಣ ವಾಹಕತೆ(300 K) 13.9 (ಅಂದಾಜು) W·m−1·K−1
ಉಷ್ಣ ವ್ಯಾಕೋಚನ(25 °C) 35.0 µm·m−1·K−1
ಯಂಗ್ ಮಾಪಾಂಕ18.2 GPa
ವಿರೋಧಬಲ ಮಾಪನಾಂಕ7.9 GPa
ಸಗಟು ಮಾಪನಾಂಕ8.3 GPa
ವಿಷ ನಿಷ್ಪತ್ತಿ 0.152
Vickers ಗಡಸುತನ167 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-53-1
ಉಲ್ಲೇಖನೆಗಳು

ಯುರೋಪಿಯಮ್ ಒಂದು ವಿರಳ ಭಸ್ಮ ಮೂಲಧಾತು ಲೋಹ. ಆವರ್ತಕೋಷ್ಟಕದ ಲ್ಯಾಂತೆನಮ್ ಶ್ರೇಣಿಯ ಧಾತುಗಳ ಪೈಕಿ ಒಂದು. ಇದರ ರಾಸಾಯನಿಕ ಪ್ರತೀಕ Eu. ಪರಮಾಣು ಸಂಖ್ಯೆ 63. ಪರಮಾಣು ತೂಕ 151.96. ಇದನ್ನು ೧೯೦೧ರಲ್ಲಿ ಫ್ರಾನ್ಸ್ ನ ಯೂಜಿನ್ ಡೆಮಾರ್ಕೆ ಎಂಬ ವಿಜ್ಞಾನಿ ಕಂಡುಹಿಡಿದರು. ಯೂರೋಪ್ ಖಂಡದ ಗೌರವಾರ್ಥ ಇದಕ್ಕೆ ಯುರೋಪಿಯಮ್ ಎಂಬ ಹೆಸರು ಇಟ್ಟಿದ್ದಾರೆ.[೧]

ಇಂಗ್ಲಿಷ್ ರಸಾಯನ ಹಾಗೂ ಭೌತವಿಜ್ಞಾನಿ ಸರ್ ವಿಲಿಯಮ್ ಕ್ರೂಕ್ಸ್ (1832-1919) ಸಾಮರ್‌ಸ್ಕೈಟ್ ಎಂಬ ಖನಿಜದ ರೋಹಿತ ರೇಖೆಗಳ ಅಧ್ಯಯನದಲ್ಲಿ ತೊಡಗಿದ್ದಾಗ ಅದರ ರೋಹಿತದಲ್ಲಿ ಅವಶೋಷಣಾ ಪಟ್ಟೆ (ಅಬ್‌ಸಾರ್ಬ್‌ಷನ್ ಬ್ಯಾಂಡ್) ಇರುವುದನ್ನು ವೀಕ್ಷಿಸಿ ಈ ಲೋಹೀಯ ಧಾತುವಿನ ಅಸ್ತಿತ್ವವನ್ನು ಮೊತ್ತಮೊದಲಿಗೆ (1859) ಶಂಕಿಸಿದ.[೨] ಹೊಸಧಾತುವಿಗೆ ಈ ಅವಶೋಷಣ ಪಟ್ಟಿಯನ್ನು ಆರೋಪಿಸಿ, ಧಾತುವಿಗೆ ಯೂಜಿನ್ ಅನಟೋಲಿ ಡೀಮಾರ್ಕೆ (1852-1904) ಈ ಧಾತುವನ್ನು ಆವಿಷ್ಕರಿಸಿದನು. ಅನಂತರ S ಧಾತುವೂ ಯುರೋಪಿಯಮ್ ಧಾತುವೂ ಒಂದೇ ಎಂಬುದು ಸ್ಥಿರಪಟ್ಟಿತು.

ಯುರೋಪಿಯಮ್ ಆಕ್ಸೈಡ್ ಮತ್ತು ಲ್ಯಾಂತನಮ್ ಲೋಹಗಳ ಮಿಶ್ರಣವನ್ನು ನಿರ್ದ್ರವ್ಯ ಅಸವನಕ್ಕೆ ಈಡುಮಾಡುವುದರಿಂದ ಲೋಹವನ್ನು ತಯಾರಿಸಬಹುದು. ಇದರ ವಹನಪಟ್ಟೆಗಳಲ್ಲಿ (ಕಂಡಕ್ಷನ್ ಬ್ಯಾಂಡ್ಸ್) ಎರಡು ಎಲೆಕ್ಟ್ರಾನುಗಳು ಮಾತ್ರ ಇರುತ್ತವೆ.

ಭೌತಿಕ ಗುಣಗಳು[ಬದಲಾಯಿಸಿ]

ಇದರ ಬಣ್ಣ ಉಕ್ಕು - ಬೂದುಬಣ್ಣ. ದ್ರವನ ಬಿಂದು 1100-13000 ಸೆ. ನೈಸರ್ಗಿಕವಾಗಿ ದೊರೆಯುವ ಈ ಧಾತು ಸ್ಥಿರ ಐಸೋಟೋಪುಗಳಾಗಿರುವ 151 Eu. (52.18%) ಗಳಿಂದ ಕೂಡಿದೆ.

ಈ ಧಾತು ವಿರಳಭಸ್ಮ ಧಾತುಗಳ ಪೈಕಿ ಅತ್ಯಂತ ಬಾಷ್ಪಶೀಲವಾಗಿರುವುವಲ್ಲಿ ಎರಡನೆಯ ಸ್ಥಾನ ಪಡೆದಿರುವುದು ಮಾತ್ರವಲ್ಲದೇ ದ್ರವಬಿಂದುವಿನಲ್ಲಿ ಗಮನಾರ್ಹ ಬಾಷ್ಪ ಸಂಮರ್ದವನ್ನು ಹೊಂದಿದೆ ಕೂಡ. ಲೋಹ ಬಲು ಮೆದು.

ಯುರೋಪಿಯಮ್ ಸೀಸವನ್ನು ಹೋಲುವ ಕಠಿಣತೆಯನ್ನು ಹೊಂದಿರುವ ಮೆತುವಾದ ಲೋಹ. ಇದು ದೇಹ-ಕೇಂದ್ರಿತ ಘನ ಜಾಲರಿಯಾಗಿ ಸ್ಫಟಿಕೀಕರಣಗೊಳ್ಳುತ್ತದೆ.[೩] ಯುರೋಪಿಯಮ್‍ನ ಕೆಲವು ಗುಣಗಳು ಅದರ ಅರ್ಧ ತುಂಬಿದ ಎಲೆಕ್ಟ್ರಾನ್ ಶೆಲ್‍ನಿಂದ ಬಲವಾಗಿ ಪ್ರಭಾವಿತವಾಗಿವೆ. ಯುರೋಪಿಯಮ್ ಎಲ್ಲ ವಿರಳ ಭಸ್ಮಧಾತುಗಳ ಪೈಕಿ ಎರಡನೇ ಅತಿ ಕಡಿಮೆ ಕರಗುವ ಬಿಂದುವನ್ನು ಮತ್ತು ಅತಿ ಕನಿಷ್ಠ ಸಾಂದ್ರತೆಯನ್ನು ಹೊಂದಿದೆ.

ಯುರೋಪಿಯಮ್ಮನ್ನು 1.8 K ಕೆಳಗೆ ತಂಪಾಗಿಸಿದಾಗ ಮತ್ತು 80 GPa ಮೇಲೆ ಸಂಕುಚಿಸಿದಾಗ ಅದು ಅಧಿವಾಹಕವಾಗುತ್ತದೆ. ಇದು ಏಕೆಂದರೆ ಲೋಹೀಯ ಸ್ಥಿತಿಯಲ್ಲಿ ಯುರೋಪಿಯಮ್ ದ್ವಿವೇಲನ್ಸೀಯವಾಗಿರುತ್ತದೆ,[೪] ಮತ್ತು ಒತ್ತಡವನ್ನು ಪ್ರಯೋಗಿಸಿದಾಗ ತ್ರಿವೇಲನ್ಸೀಯ ಸ್ಥಿತಿಗೆ ಪರಿವರ್ತಿತವಾಗುತ್ತದೆ. ದ್ವಿವೇಲನ್ಸೀಯ ಸ್ಥಿತಿಯಲ್ಲಿ, ಶಕ್ತಿಯುತವಾದ ಸ್ಥಳೀಯ ಕಾಂತೀಯ ಮಹತ್ವವು (J = 7/2) ಅಧಿವಾಹಕತೆಯನ್ನು ನಿಗ್ರಹಿಸುತ್ತದೆ. ಇದು ಈ ಸ್ಥಳೀಯ ಮಹತ್ವವನ್ನು ವರ್ಜಿಸುವುದರಿಂದ ಚೋದಿತವಾಗುತ್ತದೆ (Eu3+ ನಲ್ಲಿ J = 0).[೫]

ರಾಸಾಯನಿಕ ಗುಣಗಳು[ಬದಲಾಯಿಸಿ]

ರಸಾಯನ ವಿಜ್ಞಾನಿಗಳಾದ ಜಿ. ಉರ್ಬೈನ್ ಮತ್ತು ಎಚ್. ಲಾಕೋಂಬೇ ಎಂಬವರು ಇದರ ಸಂಯುಕ್ತಗಳನ್ನು ಸಾಕಷ್ಟು ಶುದ್ಧರೂಪದಲ್ಲಿ ತಯಾರಿಸಿದರು (19-4). ಈ ಧಾತುವಿನ ತ್ರಿಬಂಧನ (ಟ್ರೈವೇಲೆಂಟ್) ಲವಣಗಳು ಬಹಳಷ್ಟು ಮಂದ ಕಡುಗೆಂಪು ಬಣ್ಣದಿಂದ ಕೂಡಿರುತ್ತವೆ; ಸಂಯುಕ್ತಗಳ ದ್ವಿಬಂಧನ (ಟೈವೇಲೆಂಟ್) ಶ್ರೇಣಿಯ ಬಗ್ಗೆ ಮಾಹಿತಿ ಇದೆ. ನೈಸರ್ಗಿಕವಾಗಿ ದೊರೆಯುವ ವಿರಳತರಧಾತುಗಳ ಪೈಕಿ ಯುರೋಪಿಯಮ್ ಒಂದು. ದ್ವಿಬಂಧನ ಯುರೋಪಿಯಮ್ ಲವಣಗಳನ್ನು ತಯಾರಿಸುವ ವಿಧಾನಗಳನ್ನು 1936-41ರ ಅವಧಿಯಲ್ಲಿ ಎಚ್. ಎನ್.ಮ್ಯಾಕ್‌ಕಾಯ್ ಎಂಬವ ತನ್ನ ಪ್ರಬಂಧಗಳಲ್ಲಿ ನಿರೂಪಿಸಿದ್ದ.

ಕ್ಯಾಲ್ಸಿಯಮ್ ಇಲ್ಲವೇ ಕ್ಷಾರೀಯ ಲೋಹಗಳೊಂದಿಗೆ ಯುರೋಪಿಯಮ್ ಲವಣಗಳ ಅಪಕರ್ಷಣ ದ್ವಿಬಂಧನ ಯುರೋಪಿಯಮ್ ಲವಣಗಳನ್ನು ಉಂಟುಮಾಡುತ್ತದೆ. ಯುರೋಪಿಯಮ್ ಅತ್ಯಂತ ಪ್ರತಿಕ್ರಿಯಾಶೀಲ ವಿರಳ ಭಸ್ಮಧಾತುವಾಗಿದೆ. ಇದು ಗಾಳಿಯಲ್ಲಿ ಕ್ಷಿಪ್ರವಾಗಿ ಉತ್ಕರ್ಷಿಸುತ್ತದೆ, ಒಂದು ಸೆಂಟಿಮೀಟರ್ ಗಾತ್ರದ ಮಾದರಿಯ ರಾಶಿ ಉತ್ಕರ್ಷಣವು ಹಲವಾರು ದಿನಗಳೊಳಗೆ ನಡೆಯುತ್ತದೆ.[೬] ನೀರಿನೊಂದಿಗೆ ಇದರ ಪ್ರತಿಕ್ರಿಯಾತ್ಮಕತೆಯನ್ನು ಕ್ಯಾಲ್ಸಿಯಂ ಜೊತೆ ಹೋಲಿಸಬಹುದು.

ಇದರ ಅಧಿಕ ಪ್ರತಿಕ್ರಿಯಾತ್ಮಕತೆಯ ಕಾರಣದಿಂದ, ಘನ ಯುರೋಪಿಯಮ್‍ನ ಮಾದರಿಗಳು ಅಪರೂಪವಾಗಿ ತಾಜಾ ಲೋಹದ ಹೊಳೆಯುವ ನೋಟವನ್ನು ಹೊಂದಿರುತ್ತವೆ, ಖನಿಜ ತೈಲದ ರಕ್ಷಣಾತ್ಮಕ ಪದರದಿಂದ ಲೇಪಿಸಿದಾಗಲೂ. ಯುರೋಪಿಯಮ್ ಗಾಳಿಯಲ್ಲಿ 150 ರಿಂದ 180° C ನಲ್ಲಿ ದಹಿಸಿ ಯುರೋಪಿಯಮ್ (III) ಆಕ್ಸೈಡನ್ನು ರಚಿಸುತ್ತದೆ.

ಯುರೋಪಿಯಮ್ ದುರ್ಬಲ ಗಂಧಕಾಮ್ಲದಲ್ಲಿ ಸರಾಗವಾಗಿ ಕರಗಿ ಹೈಡ್ರೀಕೃತ Eu (III) ಯ ತಿಳಿ ಗುಲಾಬಿ ದ್ರಾವಣಗಳನ್ನು ರಚಿಸುತ್ತದೆ. ಇವು ನೋನಾ ಹೈಡ್ರೇಟ್ ಆಗಿ ಇರುತ್ತವೆ.

ಸಾಮಾನ್ಯವಾಗಿ ತ್ರಿವೇಲನ್ಸೀಯವಾದರೂ, ಯುರೋಪಿಯಮ್ ಸುಲಭವಾಗಿ ದ್ವಿವೇಲನ್ಸೀಯ ಸಂಯುಕ್ತಗಳನ್ನು ರೂಪಿಸುತ್ತದೆ. ಈ ವರ್ತನೆಯು ಬಹುತೇಕ ವಿರಳ ಭಸ್ಮಧಾತುಗಳಿಗೆ ಅಸಾಮಾನ್ಯವಾಗಿದೆ, ಉಳಿದವು ಬಹುತೇಕ +3 ಉತ್ಕರ್ಷಣ ಸ್ಥಿತಿಯೊಂದಿಗೆ ಸಂಯುಕ್ತಗಳನ್ನು ರಚಿಸುತ್ತವೆ. ಅರ್ಧ ತುಂಬಿದ f-ಶೆಲ್ ಹೆಚ್ಚು ಸ್ಥಿರತೆಯನ್ನು ನೀಡುವುದರಿಂದ, +2 ಸ್ಥಿತಿಯು 4f7 ಎಲೆಕ್ಟ್ರಾನ್ ಸಂರಚನೆಯನ್ನು ಹೊಂದಿದೆ. +2 ಸ್ಥಿತಿಯು ಬಹಳವಾಗಿ ಅಪಕರ್ಷಕವಾಗಿದೆ. ಗಾತ್ರ ಮತ್ತು ಸಂಯೋಜನ ಸಂಖ್ಯೆಯ ವಿಷಯದಲ್ಲಿ, ಯುರೋಪಿಯಮ್ (ii) ಮತ್ತು ಬೇರಿಯಂ (II) ಹೋಲುತ್ತವೆ. ಉದಾಹರಣೆಗೆ, ಬೇರಿಯಂ ಮತ್ತು ಯುರೋಪಿಯಮ್ (II) ಎರಡರ ಸಲ್ಫೆಟ್‍ಗಳೂ ನೀರಿನಲ್ಲಿ ಬಹಳ ಅದ್ರಾವ್ಯವಾಗಿವೆ.[೭] ದ್ವಿವೇಲನ್ಸೀಯ ಯುರೋಪಿಯಮ್ ಸೌಮ್ಯ ಅಪಕರ್ಷಣಕಾರಿಯಾಗಿದ್ದು ಗಾಳಿಯಲ್ಲಿ ಉತ್ಕರ್ಷಿಸಿ Eu (III) ಸಂಯುಕ್ತಗಳನ್ನು ರಚಿಸುತ್ತದೆ. ಗಾಳಿಯಿಲ್ಲದ, ಮತ್ತು ವಿಶೇಷವಾಗಿ ಭೂಶಾಖ ಪರಿಸ್ಥಿತಿಗಳಲ್ಲಿ, ದ್ವಿವೇಲನ್ಸೀಯ ರೂಪ ಸಾಕಷ್ಟು ಸ್ಥಿರವಾಗಿದ್ದು, ಕ್ಯಾಲ್ಸಿಯಂ ಮತ್ತು ಇತರ ಕ್ಷಾರ ಮೃತ್ತಿಕೆಯ ಖನಿಜಗಳೊಳಗೆ ಒಂದುಗೂಡುತ್ತದೆ. ಈ ಅಯಾನು ವಿನಿಮಯ ಪ್ರಕ್ರಿಯೆಯು "ಋಣಾತ್ಮಕ ಯುರೋಪಿಯಮ್ ಅಸಂಗತತೆ"ಯ ಆಧಾರವಾಗಿದೆ (ಕಾಂಡ್ರೈಟ್‍ನ ಸಮೃದ್ಧಿಗೆ ತುಲನಾತ್ಮಕವಾಗಿ ಮೋನಜ಼ೈಟ್‍ನಂತಹ ಅನೇಕ ಲ್ಯಾಂಥನೈಡ್ ಖನಿಜಗಳಲ್ಲಿ ಯುರೋಪಿಯಮ್ ಅಂಶ ಕಡಿಮೆಯಿರುವುದು). ಮೋನಜ಼ೈಟ್‍ಗಿಂತ ಬಾಸ್ಟ್‌ನಾಸೈಟ್ ಕಡಿಮೆ ಋಣಾತ್ಮಕ ಯುರೋಪಿಯಮ್ ಅಸಂಗತತೆಯನ್ನು ತೋರಿಸುತ್ತದೆ, ಹಾಗಾಗಿ ಇದು ಇಂದು ಯುರೋಪಿಯಮ್‍ನ ಪ್ರಧಾನ ಮೂಲವಾಗಿದೆ. ದ್ವಿವೇಲೆನ್ಸೀಯ ಯುರೋಪಿಯಮ್ಮನ್ನು ಇತರ (ತ್ರಿವೇಲೆನ್ಸೀಯ) ವಿರಳ ಭಸ್ಮಧಾತುಗಳಿಂದ ಪ್ರತ್ಯೇಕಿಸಲು ಸುಲಭ ವಿಧಾನಗಳ ಅಭಿವೃದ್ಧಿಯು ಯುರೋಪಿಯಮ್ಮನ್ನು ಸುಲಭಲಭ್ಯವಾಗಿಸಿದೆ, ಅದು ಕಡಿಮೆ ಪ್ರಮಾಣದಲ್ಲಿದ್ದರೂ.

ಉಪಯೋಗಗಳು[ಬದಲಾಯಿಸಿ]

ಈ ಧಾತು ನ್ಯೂಟ್ರಾನುಗಳಿಗೆ ಅಧಿಕ ಅವಶೋಷಣ ಅಡ್ಡ ಕೊಯ್ತವನ್ನು (ಹೈ ಅಬ್‌ಸಾರ್ಬ್‌ಷನ್ ಕ್ರಾಸ್-ಸೆಕ್ಷನ್) ಹೊಂದಿರುವುದು ಮಾತ್ರವಲ್ಲದೇ ನ್ಯೂಟ್ರಾನುಗಳನ್ನು ಸೇರಿಸಿದಾಗ ಹೆಚ್ಚಿನ ಸಂಖ್ಯೆಯ ಸಮಸ್ಥಾನಿಗಳು ಉಂಟುಮಾಡಿಕೊಳ್ಳಬಲ್ಲುದು ಕೂಡ. ಈ ಲಕ್ಷಣದಿಂದಾಗಿ ಪರಮಾಣು ಉದ್ಯಮದಲ್ಲಿ ಇದರ ಬಳಕೆ ಇದೆ. ಇದನ್ನು ಕೆಲವು ವಿಶೇಷವಾದ ದೂರದರ್ಶನ (television) ಪರದೆಯನ್ನು ತಯಾರಿಸಲು ಬಳಸುತ್ತಾರೆ.

ಯುರೋಪಿಯಮ್ ಆಕ್ಸೈಡಿಗೆ 1964ರಿಂದ ಗಮನಾರ್ಹ ಕೈಗಾರಿಕಾ ಪ್ರಾಮುಖ್ಯ ಬಂದಿದೆ. ದೂರದರ್ಶನದಲ್ಲಿ ಯುರೋಪಿಯಮ್ ಪ್ರಚೋದಿತ ಇಟ್ರಿಯಮ್ - ಆರ್ತೊವೆನಡೈಟುಗಳನ್ನು ಸ್ಫುರದೀಪ್ತಿ ವಸ್ತುಗಳಾಗಿ ಬಳಸುವುದಿದೆ. ಇನ್ನಿತರ ಯುರೋಪಿಯಮ್ ಆಧರಿತ ಸ್ಫುರದೀಪ್ತಿ ವಸ್ತುಗಳ ಬಗ್ಗೆಯೂ ಅಧ್ಯಯನ-ಸಂಶೋಧನೆ ನಡೆಸಿ ಕೆಲವೊಂದರ ಏಕಸ್ವವನ್ನು ಪಡೆಯಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Periodic Table: Europium". Royal Society of Chemistry.
  2. Crookes, W. (1905). "On the Phosphorescent Spectra of S δ and Europium". Proceedings of the Royal Society of London. 76 (511): 411–414. Bibcode:1905RSPSA..76..411C. doi:10.1098/rspa.1905.0043. JSTOR 92772.
  3. Holleman, A. F.; Wiberg, E. "Inorganic Chemistry" Academic Press: San Diego, 2001. ISBN 0-12-352651-5.
  4. Johansson, Börje; Rosengren, Anders (1975). "Generalized phase diagram for the rare-earth elements: Calculations and correlations of bulk properties". Physical Review B. 11 (8): 2836–2857. Bibcode:1975PhRvB..11.2836J. doi:10.1103/PhysRevB.11.2836.
  5. Debessai, M.; Matsuoka, T.; Hamlin, J.; Schilling, J.; Shimizu, K. (2009). "Pressure-Induced Superconducting State of Europium Metal at Low Temperatures". Phys. Rev. Lett. 102 (19): 197002. Bibcode:2009PhRvL.102s7002D. doi:10.1103/PhysRevLett.102.197002. PMID 19518988.
  6. Hamric, David (November 2007). "Rare-Earth Metal Long Term Air Exposure Test". elementsales.com. Retrieved 2009-08-08.
  7. Cooley, Robert A.; Yost, Don M.; Stone, Hosmer W. (1946). "Europium(II) Salts". Inorganic Syntheses. Vol. 2. pp. 69–73. doi:10.1002/9780470132333.ch19. ISBN 978-0-470-13233-3.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: