ಪೊಲೊನಿಯಮ್
Jump to navigation
Jump to search
ಪೊಲೊನಿಯಮ್ ಫ್ರಾನ್ಸ್ ನ ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿ ದಂಪತಿಗಳಿಂದ ೧೮೯೮ರಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಲೋಹಭ ಮೂಲಧಾತು. ಇದಕ್ಕೆ ಮೇರಿಯವರ ಮಾತೃಭೂಮಿ ಪೋಲಂಡ್ ನ ಗೌರವಾರ್ಥ ಪೊಲೊನಿಯಮ್ ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ಪ್ರಮಾಣದಲ್ಲಿ ಯುರೇನಿಯಮ್ ಅದಿರಿನೊಂದಿಗೆ ದೊರೆತರೂ ಹೆಚ್ಚಾಗಿ ಕೃತಕವಾಗಿ ಬಿಸ್ಮತ್ ಅನ್ನು ನ್ಯೂಟ್ರಾನ್ ಇಂದ ತಾಡಿಸಿ ಪಡೆಯುತ್ತಿದ್ದಾರೆ. ಇದಕ್ಕೆ ಎಲ್ಲಾ ಮೂಲಧಾತುಗಳಿಂದ ಹೆಚ್ಚಾಗಿ ಸುಮಾರು ೨೭ ಸಮಸ್ಥಾನಿಗಳಿದ್ದು ಎಲ್ಲಾ ಸಮಸ್ಥಾನಿಗಳು ವಿಕಿರಣಶೀಲವಾಗಿವೆ. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ.