ಸ್ಟ್ರಾನ್ಶಿಯಮ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Strontium destilled crystals.jpg

ಸ್ಟ್ರಾನ್ಶಿಯಮ್ ಒಂದು ಲೋಹ ಮೂಲಧಾತು. ಸ್ಟ್ರಾಂಷಿಯಂ ಚಿಹ್ನೆ Sr ಮತ್ತು ಪರಮಾಣು ಸಂಖ್ಯೆ ೩೮. ಇದು ಒಂದು ಕ್ಷಾರ ಭಸ್ಮ ಲೋಹ. ಇದೊಂದು ಮೃದುವಾದ ಬಿಳಿ ಬಣ್ಣದ ಲೋಹ. ಇದನ್ನು ಗಾಳಿಗೆ ಒಡ್ಡಿದಾಗ ಲೋಹವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ರಾಸಾಯನಿಕವಾಗಿ ಬಹಳ ಕ್ರಿಯಾತ್ಮಕ. ಇದನ್ನು ಅಲ್ಯೂಮಿನಿಯಮ್‍ನೊಂದಿಗೆ ಮಿಶ್ರಲೋಹದ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಅಲ್ಲದೆ ದೂರದರ್ಶನ ಪೆಟ್ಟಿಗೆಯ ಗಾಜಿನ ತಯಾರಿಕೆಯಲ್ಲೂ ಇದರ ಉಪಯೋಗವಿದೆ. ಅನೇಕ ಅರ್ಬುದ ರೋಗಗಳ ಚಿಕಿತ್ಸೆಯಲ್ಲಿ ಇದರ ವಿಕಿರಣಶಾಲಿ ಸಮಸ್ಥಾನಿಗಳನ್ನು ಉಪಯೋಗಿಸಲಾಗುತ್ತದೆ.

ಇದನ್ನು ೧೭೯೮ರಲ್ಲಿ ಥಾಮಸ್ ಚಾರ್ಲ್ಸ್ ಹೋಪ್ ಒಂದು ಮೂಲಧಾತುವೆಂದು ಗುರುತಿಸಿದ. ಸ್ಕಾಟ್ಲೆಂಡ್‍ನಲ್ಲಿ ಸ್ಟ್ರಾನ್ಶಿಯನ್ ಎಂಬ ಊರಿನ ಬಳಿ ಸಿಗುವ ಖನಿಜದಲ್ಲಿ ಇದು ಇರುವುದರಿಂದ ಇದಕ್ಕೆ ಈ ಹೆಸರು ಬಂದಿತು. ಸ್ಟ್ರಾಂಷಿಯಂನ ನೆರೆಯಿರುವ, ಕ್ಯಾಲ್ಸಿಯಂ ಮತ್ತು ಬೇರಿಯಂನ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಈ ಲೋಹವು ಹೊಂದಿದೆ. ಇದು ನೈಸರ್ಗಿಕವಾಗಿ ಖನಿಜಗಳ ಸೆಲೆಸ್ಟಿಯನ್, ಸ್ಟ್ರೋನ್ಟ್ರಿಯನಿಟ್ (strontianite) ಮತ್ತು ಪುಟ್ನಿಸೈಟ್ (putnisite) ಸಂಭವಿಸುತ್ತವೆ ಹಾಗೂ ಹೆಚ್ಚಾಗಿ ಈ ಮೊದಲ ಎರಡರಿಂದ ತೆಗೆಯಲಾಗುತ್ತದೆ.