ವಿಷಯಕ್ಕೆ ಹೋಗು

ಉತ್ತರ ಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತರ ಪ್ರದೇಶ
ಉತ್ತರ ಪ್ರದೇಶ
उत्तर प्रदेश
اتر پردیش
state
Nickname: 
ಗಂಗೆ ಮತ್ತು ಜಮುನೆಯ ನೆಲ
Uttar Pradesh14 November 18342
 • Rank5th
Population
 • Total೧೯,೦೮,೯೧,೦೦೦
 • Rank1st
Websitewww.upgov.nic.in
1 The decision to possibly create additional districts is pending.

2,[][][]
- 14 November 1834 : Presidency of Agra.
- 1 January 1836 : North-Western Provinces.
- 3 April 1858 : Oudh taken under British control, Delhi taken away from NWP & merged into Punjab.
- 1 April 1871 : Ajmer, Merwara & Kekri made separate commissionership.
- 15 February 1877 : Oudh added to North-Western Provinces.
- 22 March 1902 : Renamed United Provinces of Agra and Oudh.
- 3 January 1921 : Renamed United Provinces of British India.
- 1 April 1937 : Renamed United Provinces
- 1 April 1946 : Self rule granted.
- 15 August 1947 : Part of independent India.
- 26 January 1950 : Renamed Uttar Pradesh


- 9 November 2000 : Uttaranchal state created from part of Uttar Pradesh.

ಉತ್ತರ ಪ್ರದೇಶವು ನಿಶ್ಚಿತವಾಗಿ "ಉತ್ತರ ಭಾಗದ ಪ್ರಾಂತ್ಯ"[ಆಗಾಗ್ಗೆ ಇದನ್ನು U.P. ಎಂದೂ ಸಹ ಉಲ್ಲೇಖಿಸುವರು] ಭಾರತದ ಉತ್ತರ ಭಾಗದಲ್ಲಿ ನೆಲೆಸಿರುವ ಒಂದು ರಾಜ್ಯವಾಗಿದೆ. ಸುಮಾರು 190 ಮಿಲಿಯದಷ್ಟು ಜನಸಂಖ್ಯೆಯನ್ನು ಹೊಂದಿದೆ, ಇದು ಭಾರತದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ರಾಜ್ಯವಾಗಿದೆ, ಹಾಗೆಯೇ ಪ್ರಪಂಚದಲ್ಲೇ ಹೆಚ್ಚಿನ ಜನಸಂಖ್ಯೆಯು ಈ ರಾಷ್ಟ್ರದ ಒಳಗೆ ಇರುವುದು.

ಜೊತೆಗೆ ಉತ್ತರ ಪ್ರದೇಶವು ಹೆಚ್ಚಾಗಿ ಫಲವತ್ತಾದ ಒಂದು ದೊಡ್ಡ ಭಾಗದ ಪ್ರದೇಶವನ್ನು ಆವರಿಸಿದೆ ಮತ್ತು ಗಂಗಾನದಿಯ ಸಮ ತಲ ಪ್ರದೇಶದಲ್ಲಿ ಜನನಿಬಿಡತೆ ಹೊಂದಿದೆ. ಅಂತರಾಷ್ಟ್ರೀಯ ಸರಹದ್ದನ್ನು ಉತ್ತರದಲ್ಲಿ ನೇಪಾಳದೊಂದಿಗೆ ಭಾರತ ರಾಜ್ಯದ ಉತ್ತರಕಾಂಡವು ಅದನ್ನು ಹಂಚಿಕೊಂಡಿದೆ. ಉತ್ತರ-ಪಶ್ಚಿಮಕ್ಕೆ ಹಿಮಾಚಲ ಪ್ರದೇಶವು, ಪಶ್ಚಿಮದಲ್ಲಿ ಹರಿಯಾಣ, ದೆಹಲಿ, ಮತ್ತು ರಾಜಾಸ್ತಾನ್,ದಕ್ಷಿಣದಲ್ಲಿ ಮಧ್ಯ ಪ್ರದೇಶವು,ಚತ್ತಿಸ್ ಗಡ ಮತ್ತು ಜಾರ್ ಖಂಡ್ ದಕ್ಷಿಣದ ಪೂರ್ವದಲ್ಲಿ ಮತ್ತು ಪೂರ್ವದಲ್ಲಿ ಬಿಹಾರ್ ಭಾರತದ ರಾಜ್ಯಗಳಿವೆ. ಉತ್ತರ ಪ್ರದೇಶದ ಆಡಳಿತದ ಹಾಗೂ ಶಾಸಕಾಂಗದ ರಾಜಧಾನಿ ಲಖನೌ ಮತ್ತು ಹಣಕಾಸಿನ ಆಡಳಿತ ಹಾಗೂ ಔದ್ಯೋಗಿಕ ರಾಜಧಾನಿ ಕಾನಪುರ್. ಈ ರಾಜ್ಯದ ಉಚ್ಚ ನ್ಯಾಯಾಲಯ ಅಲಹಾಬಾದ್‌ನಲ್ಲಿ ಸ್ಥಾಪಿಸಿದ್ದೂ, ಒಂದು ನ್ಯಾಯಾಧೀಶರ ಪೀಠ ರಾಜ್ಯದ ರಾಜಧಾನಿಯಾದ ಲಖನೌನಲ್ಲಿ ಕೂಡ ಇದೆ. ಇದು ವಾರನಾಸಿ ಹಾಗೂ ಆಗ್ರಾ ಅಂತಹ ಅನೇಕ ಐತಿಹಾಸಿಕ ನಗರಗಳ ಮನೆಯಾಗಿದೆ. ಇಲ್ಲಿನ ದೊಡ್ಡ ನಗರ ಎಂದರೆ ಕಾನಪುರ; ಗೋರಖಪುರ, ಮೀರಟ್, ಆಗ್ರಾ, ಅಲಿಘರ್, ಬರೇಲಿ, ಅಲಹಾಬಾದ್‌, ಘಾಜಿಯಾಬಾದ್ ಹಾಗೂ ನೋಯಿಡಾ ಇತರ ದೊಡ್ಡ ನಗರಗಳು.

ಭಾರತದ ಸಂಸ್ಕೃತಿಯಲ್ಲಿ ಉತ್ತರ ಪ್ರದೇಶದ ಸ್ಥಾನ ಮಹತ್ವದಾಗಿದೆ; ಇದು ಹಿಂದುತ್ವದ ಜನ್ಮಸ್ಥಾನ ಎಂದು ನಂಬಲಾಗಿದೆ, ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದ ಸದಸ್ಯತ್ವ ಹೊಂದಿರುವ, ಶಿಕ್ಷಣ ಹಾಗೂ ಸಂಸ್ಕೃತಿಯ ನೆಲೆಯಾಗಿದ್ದು ಹಲವು ಮುಖ್ಯ ಹಿಂದೂ ತೀರ್ಥಯಾತ್ರೆಗಳ ತಾಣವಾಗಿದೆ. ಬೌದ್ಧ ಧರ್ಮಕ್ಕೂ ಈ ರಾಜ್ಯ ಬಹಳ ಮುಂಚೆಯಿಂದ ಮುಖ್ಯವಾದ ಸ್ಥಳವಾಗಿದೆ. ಬುದ್ಧ ತನ್ನ ಅನುಯಾಯಿಗಳನ್ನು ಮೊದಲ ಬಾರಿಗೆ ಚೌಖಂಡಿ ಸ್ತುಪದಲ್ಲಿ ಭೇಟಿಯಾಗಿದ್ದರು. ಸರಾನಾಥಿನ ಧಾಮೆಕ್ ಸ್ತೂಪ ಬುದ್ಧರು ಮೊದಲು ಧರ್ಮೋಪದೇಶ ನೀಡಿದ ಸ್ಥಳವೆಂದು ಸ್ಮಾರಕೋತ್ಸವ ನಡೆಸುತ್ತಾರೆ. ಖುಷಿನಗರದಲ್ಲಿ ಗೌತಮ ಬುದ್ಧರು ದೈವಾಧೀನರಾದರು. ಕೊನೆಯವರೆಗೆ ಇದರ ಇತಿಹಾಸದಲ್ಲೇ, ಉತ್ತರ ಪ್ರದೇಶ ರಾಜ್ಯದ

ಪ್ರದೇಶವನ್ನು ಮಧ್ಯದಲ್ಲಿಯೇ ಭಾಗಗಳನ್ನಾಗಿಸುವುದು ಮತ್ತು ಕೆಲಕಾಲದಲ್ಲಿ ಅದರ ಪೂರ್ವ ಅಥವಾ ಪಶ್ಚಿಮದ ಪ್ರಮುಖ ಭಾಗಗಳಲ್ಲಿ ದೊಡ್ಡದಾದ ಸಾಮ್ರಾಜ್ಯಗಳನ್ನು ರಚಿಸಲು ಮಗಧರು, ನಂದರು ,ಮೌರ್ಯನ್ನರು ,ಸುಂಗಾ , ಕುಶಾನರು ,ಗುಪ್ತರು, ಪಾಲರು.ಮತ್ತು ಮೊಘಲರು ಒಳಗೊಂಡು ಪ್ರೇರೇಪಿಸುತ್ತಿದ್ದರು.

ಹಿಂದೂ-ಗಂಗಾನದಿಯ ಸಮತಲ ಪ್ರದೇಶವು, ಹೆಚ್ಚಿನ ರಾಜ್ಯಗಳಿಗೆ ಸೇತುವೆಯಾಗಿದೆ, ಹಾಗೂ ಮಧ್ಯ ಕಾಲೀನದಲ್ಲಿ ಹಿಂದೂ-ಇಸ್ಲಾಮಿಕ್ ಭಾಷೆಗಳ ಸಂಸ್ಕೃತಿಯನ್ನೇ ಇಳಿಮುಖವಾಯಿಸಿತು. ಪಿತ್ರಾಜಿತವಾದ ಮೊಘಲ್ ಸಾಮ್ರಾಜ್ಯವು ಪ್ರಂಪಚದಲ್ಲೇ ಹೆಸರಾಂತ ಮ್ಯೂಸಿಯಂ, ಶಹಜಹಾನ್ ಕಟ್ಟಿಸಿದ ತಾಜ್ ಮಹಲ್, ಮೊಘಲ್ ಸಾಮ್ರಾಜ್ಯದ ಪ್ರಖ್ಯಾತ ದೂರೆ ಅಕ್ಬರ್ ನು ಆಗ್ರಾದಲ್ಲಿ ಕಟ್ಟಿಸಿದ ಭವ್ಯವಾದ ಗೋಪುರ ಮತ್ತು ಫತೆಪುರ್ ಸಿಕ್ರಿ ಯಲ್ಲಿ ಇರು ಅಕ್ಬರನ ರಾಜಧಾನಿಯ-ಅರಮನೆಯು ಹೆಚ್ಚಿನ ಸ್ವಾಧೀನ ಪಡೆದುಕೊಂಡಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದು ರಾಷ್ಟ್ರೀಯತೆಯ ಮಧ್ಯ ಭಾಗವಾಗಿತ್ತು ಮತ್ತು ಭಾರತೀಯದ ರಾಜಕೀಯ ಹಾಗೂ ಸಾಂಸ್ಕೃತಿಕ ಚಳುವಳಿಗಳು ಪ್ರಮುಖವಾದ ಪಾತ್ರವನ್ನು ವಹಿಸಿತು. ರಾಜ್ಯದಲ್ಲಿ ಹೆಸರಾಂತ ಶ್ರೇಷ್ಠ ಪರಂಪರೆಯ ಹಸ್ತ ಕೌಶಲ್ಯಗಳು ಮತ್ತು ಗುಡಿ ಕೈಗಾರಿಕೆಗಳು ವಿವಿಧ ತರಹದ ಅತ್ಯಂತ ನಿಪುಣರಾದ ಕುಶಲ ಕರ್ಮಿಗಳು ಮತ್ತು ಕಲಾ ನೈಪುಣ್ಯರನ್ನು ಹೊಂದಿದೆ. ಈ ರಾಜ್ಯದಲ್ಲಿ 98% ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಹಿಂದುಗಳು ಹಾಗೂ ಮುಸ್ಲೀಮರು ಜೊತೆಯಾಗಿ ನೆಲೆಯಾಗಿರುವರು. ಉಳಿದವರಲ್ಲಿ ಸುಮಾರು 2% ಸಿಕ್ಕರು, ಜೈನರು, ಬೌದ್ಧರು ಮತ್ತು ಕ್ರಿಶಿಯನ್ನರು ಹಾಗೂ ಅದರ ಜೊತೆ ಬುಡ ಕಟ್ಟಿನ ಜನಾಂಗದವರು.

ಉತ್ತರ ಪ್ರದೇಶ ದೇವಸ್ಥಾನ

ಉತ್ತರ ಪ್ರದೇಶ ರಾಜ್ಯ ಹಿಂದೂ ಧರ್ಮದ ಪ್ರಮುಖ ಪುರಾತಾತ್ವಿಕ ಸ್ಥಳಗಳಿಗೆ ಹಾಗೂ ಪವಿತ್ರ ದೇವಸ್ಥಾನಗಳಿಗೆ ಅನೇಕ ದರ್ಶನೀಯ ಸ್ಥಳಗಳನ್ನು ಹೊಂದಿದೆ. ಅದರಲ್ಲಿ ಅತ್ಯಂತ ಪ್ರಮುಖವಾದುದೇ ಅಯೋಧ್ಯಾ. ಇದು ದೇವರಾಜ ರಾಮಚಂದ್ರನ ಜನ್ಮಸ್ಥಳವಾದ ಹಳ್ಳಿಯಾಗಿದ್ದು, ಅನೇಕ ಶತಮಾನಗಳ ಕಾಲ ಪೂಜ್ಯವಾದ ದೇವಸ್ಥಾನದಿಂದ ಕೂಡಿದೆ.

ಅಯೋಧ್ಯಾದಲ್ಲಿ ನಿರ್ಮಾಣಗೊಂಡ ರಾಮ ಮಂದಿರ ಹಿಂದೂಗಳ ಅತ್ಯಂತ ಪವಿತ್ರ ದೇವಸ್ಥಾನಗಳಲ್ಲೊಂದು. ಇದು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇದು ಹಿಂದೂ ಧರ್ಮದ ಏಕಮಾತ್ರ ಅವತಾರ ಪುರುಷ ಶ್ರೀರಾಮಚಂದ್ರನ ಪೂಜೆಗೆ ಮೂಲಸ್ಥಾನವಾಗಿದೆ.

ರಾಮ ಮಂದಿರವು ಅತ್ಯುನ್ನತ ದರ್ಜೆಯ ಸ್ಥಳಗಳಲ್ಲೊಂದು ಎಂದು ಪ್ರಮಾಣಪೂರ್ಣವಾಗಿ ಹೇಳಬಹುದು. ಇದು ವಾಸ್ತುಶಿಲ್ಪದ ಕಲೆಯ ಪರಮ ಉದಾಹರಣವಾಗಿದ್ದು, ವಿಶ್ವಾಸಿಗರ ಮನಸ್ಸನ್ನು ಮೋಹಿಸುತ್ತದೆ. ಮಂದಿರದ ಗೋಪುರಗಳು ಅದ್ಭುತ ಕಲಾಕೌಶಲವನ್ನು ಪ್ರದರ್ಶಿಸುತ್ತವೆ, ಹಿಂದೂ ಸಾಹಿತ್ಯ ಮತ್ತು ಇತಿಹಾಸದ ಅಮೂಲ್ಯ ಕನ್ನಡಿಗಳನ್ನು ಹೊತ್ತಿವೆ.

ಅಯೋಧ್ಯಾ ಶಹರದಲ್ಲಿ ರಾಮ ಮಂದಿರ ನಿರ್ಮಾಣವಾಗುವ ಪೂಜೆಯ ಕಾರಣದಿಂದ ಇಡೀ ಪ್ರದೇಶ ಧಾರ್ಮಿಕ ಮತ್ತು ಪವಿತ್ರವಾಗಿದೆ. ದರ್ಶನೀಯ ಸ್ಥಳಗಳ ಕೊಡುಗೆಗಳು ಇಲ್ಲಿ ಇನ್ನೂ ಬೇಕಾದಷ್ಟು ಹೊಂದಲ್ಪಟ್ಟಿವೆ, ಅದರಲ್ಲೂ ಅಯೋಧ್ಯಾ ದರ್ಬಾರ್ ಕೊಡುಗೆಗೆ ಹಿಂದೂ ಸಮಾಜದ ಅಭಿಮಾನ ಬೀರಿದೆ.

ಉತ್ತರ ಪ್ರದೇಶ ದೇವಸ್ಥಾನಗಳು ಹಿಂದೂ ಧರ್ಮ ಹಾಗೂ ಸಂಸ್ಕೃತಿಗೆ ಒಂದು ಹೊಸದೊಂದು ಅಭಿವೃದ್ಧಿ ಸಾಧಿಸುತ್ತವೆ. ಇವು ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಪ್ರಾಮುಖ್ಯವನ್ನು ಹೊತ್ತ ಸ್ಥಳಗಳಾಗಿವೆ, ಮತ್ತು ಭಕ್ತರ ಸಂಕೀರ್ಣ ಆದರ್ಶಗಳಾಗಿವೆ.

ಇತಿಹಾಸ

[ಬದಲಾಯಿಸಿ]

ರಾಜ್ಯದ ವಿಕಸನ

[ಬದಲಾಯಿಸಿ]

೧೯ನೇ ಶತಮಾನದಿಂದ ಈ ಪ್ರದೇಶದ ಕುರಿತು ಹಲವು ಬೇರೆಬೇರೆ ತರಹದ ವಿವರಣೆಗಳಿವೆ, ಮತ್ತು ಮೊದಲು ಹೆಸರುಗಳಿವೆ ಹಾಗು ರಾಜ್ಯದ ಸರಹದ್ದುಗಳಿವೆ, ಅಂದರೆ, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಪ್ರಾಬಲ್ಯದ ಅಡಿಯಲ್ಲಿ ಗಂಗಾ ನದಿಯ ಸಮತಲದಲ್ಲಿ ಸ್ಥಾಪಿತಗೊಳಿಸಿದ ನಂತರ. 1833 ರಲ್ಲಿ ಬೆಂಗಾಲ್ ನ ಅಧಿಪತ್ಯದ ಕಂಪನಿ ಸರ್ಕಾರವು ಎರಡು ಭಾಗವಾಗಿ ವಿಂಗಡಣೆಯಾಯಿತು. ಅವುಗಳಲ್ಲಿ ಒಂದು ಆಗ್ರಾದ ಅಧಿಪತ್ಯವಾಯಿತು. 1836 ರಲ್ಲಿ ಆಗ್ರಾ ಪ್ರದೇಶವನ್ನು ಉತ್ತರ-ಪಶ್ಚಿಮಗಳ ನಾಡೆಂದು ಹೆಸರಿಸಲಾಯಿತು ಹಾಗೂ ಕಂಪನಿ ಸರ್ಕಾರವು ಲೆಫ್‌ಟಿನೆಂಟ್ ಗೌರ್ವನರ್‌ನ ಆಡಳಿತದ ಅಡಿಯಲ್ಲಿ ಬಂದಿತು. 1877 ರಲ್ಲಿ ಕಂಪನಿ ಸರ್ಕಾರವು ಆಗ್ರಾ ಮತ್ತು ಔಧ್ ಎಂಬ ಎರ‍ಡು ಪ್ರಾಂತಗಳನ್ನು (1858ರಲ್ಲಿ, ಔಧ್ ಅನ್ನು ಕಂಪನಿ ಸರ್ಕಾರವು ತನ್ನಲ್ಲಿ ವಶಪಡಿಸಿಕೊಂಡಿತು.) ಬ್ರಿಟಿಷ್ ವಸಾಹತಿನ ಆಡಳಿತದ ಅಡಿಯಲ್ಲಿ ನಡೆಸಲಾಗುತ್ತಿತ್ತು. ಅವರನ್ನು ಉತ್ತರ-ಪಶ್ಚಿಮದ ಲೆಫ್ ಟಿನೆಂಟ್ ಗೌವರ್ನರ್ ಎಂದು ಕರೆಯಲಾಗುತ್ತಿತ್ತು ಮತ್ತು ಆತ ಔಧ್‌ನ ಇಲಾಖೆಯ ಮುಖ್ಯಾಧಿಕಾರಿಯೂ ಕೂಡ ಆಗಿದ್ದರು. ಇದರ ಹೆಸರು 1902 ರಲ್ಲಿ ಆಗ್ರಾ ಮತ್ತು ಔಧ್ ಸಂಯುಕ್ತ ಸಂಸ್ಥಾನವೆಂದು ಬದಲಾಯಿತು ಲೆಫ್ಟಿನೆಂಟ್ ಗವರ್ನರ್ ಆಗ್ರಾ ಮತ್ತು ಅವಧ್ ಸಂಯುಕ್ತ ಸಂಸ್ಥಾನದ ಅಧಿಕಾರ ಹಿಡಿದ. 1921 ರಲ್ಲಿ ಲೆಫ್ಟಿನೆಂಟ್ ಗವರ್ನರ್ ಎಂಬ ಹುದ್ದೆಯು ಗೌವರ್ನರ್ ಎಂದು ಆಯಿತು ಹಾಗೂ ಸಂಸ್ಥಾನದ ಹೆಸರುಗಳನ್ನು ಬ್ರಿಟಿಷ್ ಭಾರತದ ಸಂಯುಕ್ತ ಸಂಸ್ಥಾನ ಎಂದು ಬದಲಿಸಲಾಯಿತು. 1935, ರಲ್ಲಿ ಇದರ ಹೆಸರನ್ನು ಕುಂಠಿತಗೊಳಿಸಿ ಸಂಯುಕ್ತ ಸಂಸ್ಥಾನಗಳೆಂದು ಕರೆಯಲಾಯಿತು. 1947 ರಲ್ಲಿ, ಬ್ರಿಟಿಷ್‌ರ ವಸಾಹತಿನ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ವೈಭವದಿಂದ ಕೂಡಿದ ರಾಜ್ಯಗಳಾದ ರಾಂಪುರ, ಬನಾರಸ್ ಹಾಗೂ ತೆಹರಿ-ಗರ್‌ವಾಲ್ ಗಳನ್ನು ಸಂಯುಕ್ತ ಸಂಸ್ಥಾನಗಳಿಗೆ ಒಗ್ಗೂಡಿಸಲಾಯಿತು. 195೦ರಲ್ಲಿ, ಸಂಯುಕ್ತ ಸಂಸ್ಥಾನವೆಂಬ ಹೆಸರನ್ನು ಬದಲಿಸಿ ಉತ್ತರ ಪ್ರದೇಶವೆಂದು ಕರೆಯಲಾಯಿತು. 1999 ರಲ್ಲಿ ಪ್ರತ್ಯೇಕವಾದ ಹಿಮಾಲಯ ರಾಜ್ಯ, ಉತ್ತರಾಂಚಲ್, (ಇತ್ತೀಚಿನ ಹೆಸರು ಉತ್ತರಾಖಂಡ), ಗಳನ್ನು ಉತ್ತರ ಪ್ರದೇಶದಿಂದ ರೂಪಿಸಲಾಯಿತು.

ಇತಿಹಾಸಪೂರ್ವ, ದಂತಕತೆಗಳು ಮತ್ತು ಪ್ರಾಚೀನ ಕಾಲ

[ಬದಲಾಯಿಸಿ]

ಉತ್ತರಪ್ರದೇಶದಲ್ಲಿನ ಪ್ರಾಕ್ತನ ಶಾಸ್ತ್ರದ ಸಂಶೋಧನೆಗಳ ಪ್ರಕಾರ ಇಲ್ಲಿ ಶಿಲಾಯುಗದ ಹೋಮೋ ಸೇಪಿಯನ್ ಬೇಟೆಗಾರ-ಸಂಗ್ರಹಕಾರರು ಜನರು 85±11 ಮತ್ತು 72±8 kyr ವರ್ಷಗಳ ನಡುವೆ (ಸಾವಿರಾರು ವರ್ಷಗಳ ಹಿಂದೆ) ಛಾತರ್ಫಾಲಿಯಾ, ಮಾಹುಘರ್, ಪಾರಿಸ್ಧಿಯಾ, ಲಲಿತ್‌ಪುರ್, ನಿಹಿ ಮತ್ತು ಗೋಪಿಪುರ,[][][][] ದಲ್ಲಿದ್ದರು; ಮಧ್ಯ ಶಿಲಾಯುಗಕ್ಕೆ ಸಂಬಂಧಿಸಿದ ಮತ್ತು ನಂತರದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ 21–31 kyr BP ಯಷ್ಟು ಹಳೆಯದಾದ ಉಪಕರಣಗಳು; [12] ಮಧ್ಯಶಿಲಾಯುಗದ/ಮೈಕ್ರೋಶಿಲೆಯ ಯುಗದ ಬೇಟೆಗಾರ-ಸಂಗ್ರಹಕಾರರ ವಸತಿಗಳು ಪ್ರತಾಪ್‌ಘರ್ ಸಮೀಪದಲ್ಲಿ ಸುಮಾರು 10,550–9550 B.C.[] ವರ್ಷ ಹಿಂದಿನವು ದೊರೆತಿವೆ; ಹಳ್ಳಿಗಳು, ಸಾಕಿದ ಜಾನುವಾರುಗಳು, ಕುರಿ, ಹೋತಗಳು ಮತ್ತು ಸಸ್ಯಗಳು ಮತ್ತು ಸುಮಾರು 6000 B.C. ಯಷ್ಟು ಹಿಂದಿನ ಕಾಲದಲ್ಲಿಯೇ ನಡೆದಿರಬಹುದಾದ ಕೃಷಿಯ ಕುರುಹುಗಳು - ಹೆಚ್ಚಿನವು c. 4000 ಮತ್ತು 1500 B.C.ರ ನಡುವಿನ ಸಮಯದವಾದರೂ - ಇವೆಲ್ಲವೂ ಸಹರಾನ್‌ಪುರ ವಿಭಾಗದಲ್ಲಿ ಕಾಣುವ ಸಿಂಧೂ ನದಿ ಕಣಿವೆ ನಾಗರೀಕತೆ ಮತ್ತು ಹರಪ್ಪಾ ಸಂಸ್ಕೃತಿ ಯಿಂದ ವೇದಗಳ ಕಾಲದ ಮೂಲಕ ಮಾನವ ಸಂಸ್ಕೃತಿಯ ಉಗಮವಾದ ಶಿಲಾಯುಗಕ್ಕೆ,[೧೦][೧೧][೧೨] ಕರೆದೊಯ್ಯುತ್ತವೆ.

’ಮಹಾಕಾವ್ಯ ಅವಧಿ’ಯ ಸಂದರ್ಭದಲ್ಲಿ ಪುರಾತನ ರಾಜ್ಯಗಳ ಭೂಪಟ

4000 ವರ್ಷಗಳ ಹಿಂದೆ ಹೋದಲ್ಲಿ ಉತ್ತರ ಪ್ರದೇಶದ ಇತಿಹಾಸವನ್ನು ತಿಳಿದಂತೆ, ಆರ್ಯನ್ನರು ಮೊದಲು ಅವರ ನೆಲೆಯನ್ನು 2000 BC ಯಲ್ಲಿ ಸ್ಥಾಪಿಸಿದ್ದರು, ಇದು ಭಾರತದ ನಾಗರಿಕತೆಯಲ್ಲಿ ವೈಧಿಕ ಯುಗದ ರಾಜ ಧೂತನೆಂದೆನಿಸಿತು. ಆರ್ಯನ್ನರು ಅವರ ಮೂಲ ನೆಲೆ ಪಂಜಾಬ್ ಪ್ರದೇಶದಿಂದ ಸೋಸಿ ಹೋಗಿ ಡೋಬ್ ಪ್ರದೇಶಗಳಲ್ಲಿ ಹಾಗೂ ಗಾಗ್ರ ಸಮತಲ ಪ್ರದೇಶ ಹಾಗೂ ವಿವಿಧ ಹೆಸರಲ್ಲಿ ಕರೆಯಲ್ಪಡುವ ಮಧ್ಯ ದೇಶ (ಮಿಡ್ ಲ್ಯಾಂಡ್), ಆರ್ಯಾವರ್ತ(ಆರ್ಯನ್ನರ ಪ್ರದೇಶ) ಹಾಗೂ ಭಾರತವರ್ಷ (ಪ್ರಮುಖ ಆರ್ಯನ್ನರ ರಾಜನು ಭಾರತವನ್ನಾಳುವ ದೇಶ) ಗಳಲ್ಲಿ ನೆಲೆಸಿದರು. ಪ್ರಾಚೀನ ಹಿಂದೂ-ಆರ್ಯನ್ನರ ಸಾನಿಧ್ಯವು ,[೧೩] ಪ್ರಾಚೀನ ವಸ್ತು ಶಾಸ್ತ್ರ ಶೋಧನೆಯಲ್ಲಿ ಮಾಸಲು ಬಣ್ಣದ ಕುಡಿಕೆ ತಯಾರಿಕೆಗಳ ಸಾನಿಧ್ಯದ ಭಾಗದಲ್ಲಿ ಬಹುಶಃ ಸಮಕೂಡುತ್ತಿತ್ತು.

ಕಾಲಾ ನಂತರದಲ್ಲಿ, ಆರ್ಯನ್ನರು ಭಾರತದ ಒಳ ಭೂಖಂಡದ ಬೇರೆ ಬೇರೆ ಭಾಗಳಲ್ಲಿ ಹರಡಿಕೊಂಡರು, ದೂರ ದಕ್ಷಿಣದ ಕೇರಳ ಮತ್ತು ಶ್ರೀಲಂಕಾಗಳಲ್ಲಿ ಹೋಗಿ ಸೇರಿಕೊಂಡರು, ಹಾಗೂ ಸಕಾಲ ಮಾರ್ಗದಲ್ಲಿ, ಹಲವು ದೊಡ್ಡ ಜನಸಂಖ್ಯೆಯ ಕೇಂದ್ರಗಳಲ್ಲಿ ಪ್ರಾಚೀನ ರಾಜ್ಯಗಳು (ಮಹಾಜನಪದರು) ಉದಯಿಸಿದವು. ಪ್ರಾಚೀನ ಮಹಾಜನಪದ ಕಾಲದ ಅಯೋಧ್ಯೆಯ ಕೋಸಲ ಸಾಮ್ರಾಜ್ಯವು - ಇಲ್ಲಿಯೇ ಹಿಂದೂ ಪುರಾಣದ ಅವತಾರ ಪುರುಷನಾದ ರಾಮಾಯಣದ ರಾಮ ರಾಜ್ಯಭಾರ ಮಾಡಿದ್ದ - ಇಲ್ಲಿಯೇ ಇದೆ. ಕೃಷ್ಣ - ಹಿಂದೂ ಪುರಾಣದ ಮತ್ತೊಬ್ಬ ಅವತಾರ ಪುರುಷ ಮತ್ತು ಮಹಾಭಾರತ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರವಹಿಸಿದವ ಹಾಗೂ ಹಿಂದೂ ದೇವತೆ ಮಹಾವಿಷ್ಣುವಿನ ಎಂಟನೆಯ ಅವತಾರವಾದವನು - ಇಲ್ಲಿಯ ಮಥುರಾ ನಗರದಲ್ಲಿಯೇ ಜನಿಸಿದನು. ಮಹಾಭಾರತ ಯುದ್ಧದ ನಂತರದ ಪಾಂಡವ ಅರಸು ಯುಧಿಷ್ಠಿರನ ಆಳ್ವಿಕೆಯಲ್ಲಿನ ಘಟನೆಗಳು ಇಲ್ಲಿಯ ಪಶ್ಚಿಮ ಉತ್ತರ ಪ್ರದೇಶದ ದೋಬ್ ಪ್ರದೇಶ ಮತ್ತು ದೆಹಲಿಯ ನಡುವೆ ನಡೆದಿರುವವೆಂದು (ಕುರು ಮಹಾಜನಪದದಲ್ಲಿ) ನಂಬಲಾಗಿದೆ. ಕುರು ಸಾಮ್ರಾಜ್ಯವು ಕಪ್ಪು ಮತ್ತು ಕೆಂಪು ಸರಂಜಾಮುಗಳಿಗೆ ಮತ್ತು ಚಿತ್ರಿಸಿದ ಬೂದು ಸರಂಜಾಮುಗಳ ಸಂಸ್ಕೃತಿಗೆ ಸಂಬಂಧಿಸಿದೆ ಮತ್ತು ಇದು ಭಾರತದ ವಾಯುವ್ಯ ಭಾಗದಲ್ಲಿ ಕಬ್ಬಿಣದ ಯುಗವು ಸುಮಾರು 1000 BCEರಲ್ಲಿ ಆರಂಭವಾಗಿರುವುದನ್ನು ಸೂಚಿಸುತ್ತದೆ. ಬ್ರಹ್ಮಪುರಾಣ ಮತ್ತು ವಿಶ್ವಕ್ಸೇನ ಸಂಹಿತದಲ್ಲಿ ದೇವರ ಅವತಾರವೆಂದು ಹೇಳಲಾಗಿರುವ ಸ್ವಾಮಿನಾರಾಯಣ ಛಾಪಿಯಾ[೧೪] ಎಂಬ ಹಳ್ಳಿಯಲ್ಲಿ ಜನಿಸಿದರು. ಪೂರ್ವ ಮತ್ತು ಪಶ್ಚಿಮದಿಂದ ಮಾಡಲ್ಪಟ್ಟ ಉತ್ತರ ಭಾರತದಲ್ಲಿನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಗಳು ವಿಶಾಲವಾದ ಗಂಗಾ ನದಿಯ ಬಯಲಿನ ಮೂಲಕವೇ ಆಗಬೇಕಾಗಿತ್ತು, ಮತ್ತು ಆ ಬಯಲೇ ಈಗ ಉತ್ತರ ಪ್ರದೇಶವಾಗಿದೆ. ಮೌರ್ಯ(320-200 BCE), ಕುಶಾನ(೧೦೦-೨೫೦ CE), ಗುಪ್ತ(350-600 C.E.) ಸಾಮ್ರಾಜ್ಯ ಸೇರಿದಂತೆ ಭಾರತದ ಎಲ್ಲ ಪ್ರಧಾನ ಸಾಮ್ರಾಜ್ಯಗಳ ಶಕ್ತಿ ಮತ್ತು ಸ್ಥಿರತೆಗಾಗಿ ಈ ಪ್ರದೇಶದ ಮೇಲಿನ ಹಿಡಿತ ಸಾಧಿಸುವುದು ಅತಿ ಮಹತ್ವದ್ದಾಗಿತ್ತು

ಉತ್ತರ ಪ್ರದೇಶದ ಮಥುರಾ ಕುಶಾನ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಗುಪ್ತರ ಸಾಮ್ರಾಜ್ಯವನ್ನು ಮುರಿದ ಹನ್ ದಾಳಿಗಳ ತರುವಾಯ ಗಂಗಾ-ಯಮುನ ಸಂಗಮ ಪ್ರದೇಶವು ಕನೌಜ್ ಉದಯವಾಗುವುದನ್ನು ಕಂಡಿತು. ಹರ್ಷವರ್ಧನನ(590- 647 CE) ಆಳ್ವಿಕೆಯ ಕಾಲದಲ್ಲಿ ಕನೌಜ್ ಸಾಮ್ರಾಜ್ಯವು ತನ್ನ ಉತ್ತುಂಗದ ಸ್ಥಿತಿಯಲ್ಲಿತ್ತು. ಇದು ಪಂಜಾಬ್ ಮತ್ತು ಗುಜರಾತ್ ನಿಂದ ಬೆಂಗಾಲ್ ಮತ್ತು ಒರಿಸ್ಸಾವರೆಗೆ ತನ್ನ ವಿಸ್ತಾರವನ್ನು ಹೊಂದಿದ್ದು, ಕೇಂದ್ರ ಭಾರತದ ಹಾಗೂ ನರ್ಮದಾ ನದಿಯ ಉತ್ತರ ಭಾಗಗಳನ್ನೊಳಗೊಂಡಂತೆ ಒಟ್ಟಾರೆ ಇದು ಇಡೀ ಸಿಂಧೂ-ಗಂಗಾ ತಪ್ಪಲು ಪ್ರದೇಶವನ್ನು ಆಕ್ರಮಿಸಿತ್ತು. ಬೌದ್ಧಧರ್ಮದ ಆಶ್ರಯದಾತ ಹಾಗೂ ನಳಂದದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹರ್ಷವರ್ಧನನು ಧರ್ಮಶಾಸ್ತ್ರದ ಕುರಿತಾಗಿ ಚರ್ಚೆಗಳಿಗೆ, ಕಲೆ ಮತ್ತು ಸಾಹಿತ್ಯಕ್ಕೆ ಆಶ್ರಯದಾತನಾಗಿದ್ದ. ತಾನೇ ಅತ್ಯುತ್ತಮ ಬರಹಗಾರನಾಗಿದ್ದ ಹರ್ಷನು ಮೂರು ಸಂಸ್ಕೃತ ನಾಟಕಗಳನ್ನು ಬರೆದಿದ್ದನು. ಭಾರತದಲ್ಲಿನ ಅನೇಕ ಸಮುದಾಯಗಳು ತಾವು ಕನೋಜ್‌ನಿಂದ ವಲಸೆ ಬಂದವರ ಸಂತತಿಯವರೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಆಗಿನ ಕನೋಜ್‌ನ ವೈಭವವನ್ನು ಸೂಚಿಸುತ್ತದೆ.[೧೫] ಹರ್ಷವರ್ಧನನ ಸಾವಿನ ನಂತರ ಆತನ ಸಾಮ್ರಾಜ್ಯ ಅನೇಕ ರಾಜ್ಯಗಳಾಗಿ ಒಡೆದುಹೋಯಿತು, ಮತ್ತು ಇದನ್ನು ಹೆಚ್ಚಾಗಿ ರಜಪೂತರು ಆಳಿದರು. ಅವರು ಬಂಗಾಳದ ಶಕ್ತಿಯುತವಾದ ಪಾಲ ಸಾಮ್ರಾಜ್ಯವು ಈ ಪ್ರದೇಶದಲ್ಲಿ ಹೊಂದಿದ್ದ ನಿಯಂತ್ರಣಕ್ಕೂ ಸವಾಲು ಹಾಕಿದರು.

ಮಧ್ಯಯುಗ

[ಬದಲಾಯಿಸಿ]
ಉತ್ತರ ಪ್ರದೇಶದ ಆಗ್ರಾ ಮತ್ತು ಫತೇಹ್‌ಪುರ್ ಸಿಕ್ರಿ ಪ್ರಸಿದ್ದ ಅಕ್ಬರ್‌ನ ರಾಜಧಾನಿ ನಗರಗಳಾಗಿದ್ದವು.

ತುರ್ಕಿಯ-ಅಫಘಾನ್ ಮುಸಲ್ಮಾನ್‌ ಅಧಿಕಾರಿಗಳ ಆಗಮನ ಹರ್ಷವರ್ಧನದ ನಂತರದ ರಜಪೂತ ರಾಜರ ಪಥನಕ್ಕೆ ಕಾರಣವಾಯಿತು ಹಾಗೂ ಇಂದು ನಾವೂ ಏನು ಉತ್ತರ ಪ್ರದೇಶ ಎಂದು ಕರೆಯುವ ಸ್ಥಳವಿದೆ, ಅದು ನಂತರದ ಹಲವು ಘಟನೆಗಳಿಗೆ ಪರಿವರ್ತನಕಾರಿಯಾಯಿತು; 1000 ADಯ ನಂತರ ಈ ರಾಜ್ಯದ ಹೆಚ್ಚು ಭಾಗ ಇಂಡೋ-ಇಸ್ಲಾಮ್ ಸಾಮ್ರಾಜ್ಯಕ್ಕೆ (ಸುಲ್ತಾನೇಟ್ಸ್) ಹೋಯಿತು ಹಾಗೂ ಅವರ ರಾಜಧಾನಿಯಾದ ದೆಹಲಿಯಿಂದ ಆಳಲ್ಪಟ್ಟಿತು. ನಂತರ ಮುಘಲ್‌ರ ಕಾಲದಲ್ಲಿ, U.P. ಅವರ ವ್ಯಾಪಕ ಸಾಮ್ರಾಜ್ಯದ ಹೃದಯದ ಭಾಗವಾಯಿತು; ಅವರು ಈ ಸಾಮ್ರಾಜ್ಯಕ್ಕೆ ’ಹಿಂದೂಸ್ಥಾನ್’ ಎಂದು ಕರೆಯಲಾರಂಭಿಸಿದರು. ಇಂದಿಗೂ ಹಲವು ಭಾಷೆಗಳಲ್ಲಿ ಭಾರತಕ್ಕೆ ನಾವು ಇದೇ ಹೆಸರನ್ನು ಬಳಸುತ್ತೇವೆ. ಆಗ್ರಾ ಹಾಗೂ ಫತೆಹ್‌ಪುರ್ ಸಿಕ್ರಿ ಭಾರತದ ಶ್ರೇಷ್ಠ ಮುಘಲ್‌ ಸಾರ್ವಭೌಮನಾದ ಅಕ್ಬರ್‌ನ ರಾಜಧಾನಿ ನಗರಗಳಾಗಿದ್ದವು. ಔರಂಗಜೇಬ್‌ನ ಆಢಳಿತದ ಪರಾಕಾಷ್ಠೆಯ ಸಮಯದಲ್ಲಿ ಮುಘಲ್ ಸಾಮ್ರಾಜ್ಯವೂ ಭಾಗಶಃ ಸಂಪೂರ್ಣ ಭಾರತ ಉಪಖಂಡವನ್ನು ಆವರಿಸಿತ್ತು (ಇಂದಿನ ಅಫಘಾನಿಸ್ತಾನ್, ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶವನ್ನು ಸೇರಿಸಿ), ಇದನ್ನು ಬೇರೆ ಬೇರೆ ಸಮಯದಲ್ಲಿ ದೆಹಲಿ, ಆಗ್ರಾ ಹಾಗೂ ಅಲಹಾಬಾದ್‌‌ಗಳಿಂದ ಆಳಲಾಗಿತ್ತು.

ಮುಘಲ್ ಸಾಮ್ರಾಜ್ಯ ಅಸಂಘಟಿತವಾದಾಗ, ಅವರ ಕೊನೆಯ ರಾಜ್ಯಕ್ಷೇತ್ರ ಹಿಂದೂಸ್ತಾನ ಹಾಗೂ ದೆಹಲಿಯ ಡೊಬ್ ಪ್ರದೇಶಕ್ಕೆ ನಿರ್ಬಂಧಿತವಾಗಿತ್ತು. ಭಾರತದ (U.P.) ಇತರ ಪ್ರದೇಶಗಳು ಈಗ ಹಲವು ಅಧಿಕಾರಿಗಳಿಂದ ಆಳಲಾಗಿತ್ತು: ಔದ್ಧನ್ನು ಔದ್ಧಿನ ನವಾಬರು ಆಳುತ್ತಿದ್ದರು, ರೋಹಿಲ್‌ಖಂಡ್ ಅಫಘಾನ್‌ರಿಂದ, ಬುಂದೇಲ್‌ಖಂಡ್ ಮರಾಠರಿಂದ ಮತ್ತು ಬನಾರಸ್ ಅದರದೇ ಸ್ವಂತ ರಾಜರಿಂದ ಆಳಲ್ಪಟ್ಟಿತು. ಅದೇ ಸಮಯದಲ್ಲಿ ನೇಪಾಲ್ ಕುಮೊನ್-ಘರವಾಲ್‌ನ್ನು ವ್ಯಾಪಕ ನೇಪಾಲಿನ ಭಾಗವೆಂದು ನಿಯಂತ್ರಿಸುತಿತ್ತು. ಈ ರಾಜ್ಯದ ರಾಜಧಾನಿ ನಗರ ಲಖನೌ ಅನ್ನು ಔದ್ಧಿನ ಮುಸ್ಲಿಮ್ ನವಾಬ್‌ರು 18ನೇಯ ಶತಮಾನದಲ್ಲಿ ಸ್ಥಾಪಿಸಿದ್ದರು.

ಆಧುನಿಕ-ವಸಾಹತೀಕರಣ ಕಾಲ

[ಬದಲಾಯಿಸಿ]

18ನೇಯ ಶತಮಾನದ ಮಧ್ಯದಲ್ಲಿ ಬಂಗಾಳದಿಂದ ಆರಂಭಗೊಂಡ ಉತ್ತರ ಭಾರತದ ಪ್ರದೇಶಗಳ ಯುದ್ಧ ಸರಣಿಯು ಕೊನೆಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ರಾಜ್ಯದ ಭೂಪ್ರದೇಶಗಳ ಅಧಿಕಾರ ಸ್ವೀಕೃತಿಯ ಪ್ರಕ್ರಿಯೆಗೆ ದಾರಿ ಮಾಡಿ ಕೊಟ್ಟಿತು - ಬುಂದೇಲ್‍ಖಂಡ್, ಕುಮೌನ್ ಹಾಗೂ ಬನಾರಸ್ ಅಧಿಕಾರಿಗಳ ಪ್ರದೇಶಗಳನ್ನು ಸೇರಿಸಿ ಮತ್ತು ಮುಘಲರ ಕೊನೆಯ ಭೂಪ್ರದೇಶಗಳಾದ ಡೋಬ್ ಹಾಗೂ ದೆಹಲಿ. ಅಜಮೇರ್ ಹಾಗೂ ಜೈಪುರ್ ಸಾಮ್ರಾಜ್ಯಗಳನ್ನು ಕಂಪನಿ ಉತ್ತರ ಭೂಪ್ರದೇಶಗಳಲ್ಲಿ ಸೇರಿಸಿದಾಗ, ಅದನ್ನು ಅವರು (ಆಗ್ರಾದ) ಉತ್ತರ-ಪಶ್ಚಿಮ ಪ್ರಾಂತಗಳೆಂದು ಹೆಸರಿಸಿದರು. ಇಂದು, ಈ ರಾಜ್ಯದ ವಿಸ್ತಾರ ಗಣತಂತ್ರ ಭಾರತದ ಇತರ ಪ್ರಸ್ತುತ ’ಸಣ್ಣ-ರಾಜ್ಯಗಳನ್ನು’ ಹೋಲಿಸಿದರೆ ದೊಡ್ಡದೆನಿಸಬಹುದು, ಆದರೆ ಆರಂಭದ ಬ್ರಿಟಿಷರ ಸಮಯದ ’ವಿಭಜನೆ’ಯನ್ನು ಗಮನಿಸಿದರೆ ಇದು ಬ್ರಿಟಿಷರ ಸಣ್ಣ ಪ್ರಾಂತಗಳಲ್ಲೊಂದು. ಇದರ ರಾಜಧಾನಿ ಎರಡು ಬಾರಿ ಆಗ್ರಾ ಹಾಗೂ ಅಲಹಾಬಾದ್‌ ನಡುವೆ ಸ್ಥಳಾಂತರವಾಯಿತು.

ಮಂಗಾಲ್ ಪಾಂಡೆ

ವಿದೇಶೀ ಕಂಪನಿಯ ನಿಯಮದ ಕಾರ್ಯನೀತಿಗಳ ಬಗ್ಗೆ ಅಸಮಾಧಾನದಿಂದಾಗಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಒಂದು ಗಂಭೀರ ಬಂಡಾಯ ಹೊರಗೆದ್ದಿತು; ಮೀರತ್ ಲಷ್ಕರಿನ ಸಿಪಾಯಿ, ಮಂಗಲ್ ಪಾಂಡೆ ಇದನ್ನು ಆರಂಭಿಸಿದನು ಎಂದು ಗಣ್ಯತೆ ಪಡೆದಿದ್ದಾನೆ. ಇದನ್ನು 1857ರ ಭಾರತೀಯ ಬಂಡಾಯ ಎಂದು ತಿಳಿಯಬಹುದು. ಇದರ ಪಥನದ ನಂತರ, ಗೊಂದಲ ಸ್ಥಿರಗೊಂಡ ಮೇಲೆ, ಹತಾಶೆಯರಾಗಿ ಬ್ರಿಟಿಷರು ಬಂಡಾಯ ಪ್ರದೇಶಗಳ ಜನರ ಅಂಗಾಗಳನ್ನು-ಕಡಿದು ಹಾಕಲು ಒಂದು ದೊಡ್ಡ ಪರಿಷ್ಕರಿಸಿದ ಉಪಾಯ ಮಾಡಿದರು: ಅವರು ದೆಹಲಿ ಪ್ರದೇಶವನ್ನು ’ಆಗ್ರಾದ NWFP’ಯಿಂದ ಕತ್ತರಿಸಿ ಪಂಜಾಬಿನ ಜೊತೆ ಸೇರಿಸಿದರು ಮತ್ತು ಅಜಮೇರ್ - ಮಾರವಾರ್ ಪ್ರದೇಶ ರಜಪೂತಾನದ ಜೊತೆ ಸೇರಿಸಿದರು; ಇದೇ ಸಮಯದಲ್ಲಿ ಅವರು ಔದ್ಧನ್ನು ರಾಜ್ಯದೊಳಗೆ ಸೇರಿಸಿಕೊಂಡರು. ಈ ಹೊಸ ರಾಜ್ಯವನ್ನು ’ಆಗ್ರಾ ಹಾಗೂ ಔದ್ಧಿನ ಉತ್ತರ ಪಶ್ಚಿಮ ಪ್ರಾಂತ್ಯಗಳು’ ಎಂದು ಕರೆಯಲಾಯಿತು, ಇದನ್ನೇ 1902ರಲ್ಲಿ ಅಗ್ರಾ ಹಾಗೂ ಔದ್ಧಿನ ಸಂಯುಕ್ತ ಪ್ರಾಂತಗಳು ಎಂದು ಹೊಸ ಹೆಸರಿಡಲಾಯಿತು. ಇದನ್ನು ಸಾಮಾನ್ಯವಾಗಿ ಸಂಯುಕ್ತ ಪ್ರಾಂತಗಳು ಅಥವಾ ಅದರ ಸಂಕ್ಷಿಪ್ತರೂಪ UP ಎಂದು ಉಲ್ಲೇಖಿಸಲಾಗುತಿತ್ತು.

1903ರಲ್ಲಿ ಸಂಯುಕ್ತ ಪ್ರಾಂತಗಳಾದ ಆಗ್ರಾ ಮತ್ತು ಔದ್

1920ರಲ್ಲಿ ಈ ಪ್ರಾಂತದ ರಾಜಧಾನಿ ಅಲಹಾಬಾದ್‌‍ನಿಂದ ಲಖನೌಗೆ ಸ್ಥಳಾಂತರಿಸಲಾಯಿತು. ಉನ್ನತ ನ್ಯಾಯಲಯ ಅಲಹಾಬಾದ್‌‍ನಲ್ಲೇ ಮುಂದುವರೆಯಿತು ಆದರೆ ಒಂದು ನ್ಯಾಯಾಧೀಶರ ಪೀಠವನ್ನು ಲಖನೌನಲ್ಲಿ ಸ್ಥಾಪಿಸಲಯಿತು. ಅಲಹಾಬಾದ್‌ ಉತ್ತರ ಪ್ರದೇಶದ ಮುಖ್ಯ ಆಡಳಿತದ ತಳವೆಂದು ಇಂದಿಗೂ ಮುಂದುವರೆದಿದೆ ಹಾಗೂ ಹಲವು ಆಡಳಿತಾತ್ಮಕ ರಾಜಧಾನಿಗಳು ಕೂಡ ಇಲ್ಲಿವೆ. ಉತ್ತರ ಪ್ರದೇಶ ಭಾರತದ ರಾಜನೀತಿಯ ಕೇಂದ್ರ ಎಂದು ಮುಂದುವರೆಯಿತು ಮತ್ತು ವಿಶೇಷವಾಗಿ ಆಧುನಿಕ ಭಾರತದ ಇತಿಹಾಸದ ಭಾರತ ಸ್ವತಂತ್ರ ಚಳುವಳಿ ಹಾಗೂ ಪಾಕಿಸ್ತಾನ್‌ ಚಳುವಳಿಗಳ ಬಿಸಿಗೊಂಡ ಪಾತಿಗಳ ಕಾರಣ ಮುಖ್ಯವಾಗಿತ್ತು. ರಾಷ್ಟ್ರೀಯ ಘನತೆ ಹಾಗೂ ದೃಢಸಂಕಲ್ಪ ಉಳ್ಳಂತಹ ಜವಾಹರಲಾಲ್ ನೆಹರು ಅವರು UPನ ಚಳುವಳಿಯ ನಾಯಕರಾಗಿದ್ದರು. ಏಪ್ರಿಲ್ 11, 1936ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಯಿನ ಲಖನೌ ಸಮಾವೇಶದಲ್ಲಿ ಆಲ್ ಇಂಡೀಯಾ ಕಿಸಾನ್ ಸಭಾ (AIKS) ರೂಪಗೊಂಡಿತು. ಅತಿ ಪ್ರಸಿದ್ಧವಾದ ರಾಷ್ಟ್ರೀಯತಾವಾದಿ ಸ್ವಾಮಿ ಸಹಜಾನಂದ ಸರಸ್ವತಿ ಇದರ ಮೊದಲ ರಾಷ್ಟ್ರಪತಿಯಾಗಿ ಚನಾಯಿತರಾದರು.[೧೬] ಅವರು ಬಹು ಕಾಲದಿಂದ ಉಳಿದಿದ್ದ ರೈತ ಸಮುದಾಯದ ದೂರುಗಳ ಪ್ರತಿಉತ್ತರ ನೀಡಿದರು ಹಾಗೂ ರೈತರನ್ನು ಜಮೀನುದಾರ ಮಾಲೀಕರ ಸ್ವಾಧೀನತೆಯ ಹಕ್ಕುಗಳ ದಾಳಿ ವಿರುದ್ಧ ಸಜ್ಜುಗೊಳಿಸಿದರು. ಹೀಗೆ ಅವರು ರೈತರ ಚಳುವಳಿಯ ಕಿಡಿಯನ್ನು ಭಾರತದಲ್ಲಿ ಹೊತ್ತಿಸಿದರು.[೧೭][೧೮]

ಸ್ವಾತಂತ್ರ್ಯದ ನಂತರ

[ಬದಲಾಯಿಸಿ]

ಸ್ವಾತಂತ್ರ್ಯದ ನಂತರ, ಈ ರಾಜ್ಯವನ್ನು ಉತ್ತರ ಪ್ರದೇಶ ("ಉತ್ತರ ಪ್ರಾಂತ") ಎಂದು ಇದರ ಮೊದಲ ಮುಖ್ಯಮಂತ್ರಿ ಗೋವಿಂದ್ ಬಲಭ್ ಪಂತ್‌ರಿಂದ ಮರು ಹೆಸರಿಸಲಾಯಿತು. ಪಂತ್‌ರವರು ಜವಾಹರಲಾಲ್ ನೆಹರುಯೊಂದಿಗೆ (ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ) ಚೆನ್ನಾಗಿ ಪರಿಚಿತರಿದ್ದರು ಹಾಗೂ ಹತ್ತಿರದವರಾಗಿದ್ದರು ಮತ್ತು ಕಾಂಗ್ರೆಸ್ ಪಾರ್ಟಿಯಲ್ಲಿ ಕೂಡ ಜನಪ್ರಿಯರಾಗಿದ್ದರು; ಇವರು ಲಖನೌನಲ್ಲಿ ಬಹಳ ಒಳ್ಳೆಯ ಹೆಸರು ಪಡೆದ ಕಾರಣ ನೆಹರುರವರು ಇವರನ್ನು ದೇಶದ ರಾಜಧಾನಿ ಹಾಗೂ ಕೇಂದ್ರ ಸರ್ಕಾರದ ಮುಖ್ಯಾಲಯ ಆದ ದೆಹಲಿಗೆ ಕರೆದು ಡಿಸೆಂಬರ್ 27, 1954ರಲ್ಲಿ ಗೃಹ ಮಂತ್ರಿಯಾಗಿ ನೇಮಿಸಿದರು. ಇವರ ನಂತರ ಡಾ. ಸಂಪೂರ್ಣಾನಂದರವರು 1957ರವರೆಗೆ ಮುಖ್ಯಮಂತ್ರಿಗಳಾಗಿದ್ದರು, ಇವರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ಸಂಸ್ಕೃತದ ಪರಿಣಿತ ವಿದ್ವಾಂಸರಾಗಿದ್ದರು. ಆನಂತರ ಇವರು ರಾಜಸ್ಥಾನಿನ ರಾಜ್ಯಪಾಲರಾದರು.

ಸುಚೇತ ಕೃಪಲಾನಿಯವರು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಕ್ಟೋಬರ್ 1963ಯಿಂದ ಮಾರ್ಚ್ 1967ರವರೆಗೆ ಸೇವೆ ಸಲ್ಲಿಸಿದರು, ರಾಷ್ಟ್ರದ ಕಾರ್ಮಿಕರ ಎರಡು ತಿಂಗಳುಗಳ ದೀರ್ಘ ಮುಷ್ಕರದ ಕಾರಣ ಅವರು ತಮ್ಮ ಸ್ಥಾನ ತ್ಯಾಗ ಮಾಡಬೇಕಾಯಿತು. ಅವರ ನಂತರ ಚಂದ್ರ ಭಾನು ಗುಪ್ತಾರವರು ಮುಖ್ಯಮಂತ್ರಿಗಳ ಕಾರ್ಯಾಲಯವನ್ನು ವಹಿಸಿಕೊಂಡರು, ಇವರೊಂದಿಗೆ ಲಕ್ಷ್ಮಿ ರಾಮಾನ್ ಆಚಾರ್ಯ ಹಣಕಾಸು ಮಂತ್ರಿಯಾಗಿದ್ದರು. ಆದರೆ ಅಸ್ತವ್ಯಸ್ತತೆ ಹಾಗೂ ಗೊಂದಲತೆಯಿಂದ ಈ ಸರ್ಕಾರ ಬರೀ ಎರಡು ವರ್ಷಗಳಲ್ಲೇ ಅಂತ್ಯವಾಯಿತು, ಪರಿಣಾಮವಾಗಿ ಚರಣ್ ಸಿಂಗ್‌ರವರು ಕಾಂಗ್ರೆಸ್‌ಯಿಂದ ಶಾಸಕರ ಒಂದು ಸಣ್ಣ ಗುಂಪಿನ ಜೊತೆಗೆ ಪಕ್ಷಾಂತರ ಹೋದರು; ಅವರು ಜನ ಕಾಂಗ್ರೆಸ್ ಎಂಬ ಒಂದು ಪಾರ್ಟಿ ನಿರ್ಮಿಸಿದರು, U.P.ಯಲ್ಲಿ ಇದು ಮೊದಲ ಕಾಂಗ್ರೆಸ್ ಅಲ್ಲದ ಸರ್ಕಾರವಾಗಿತ್ತು ಹಾಗೂ ಇದು ಒಂದು ವರ್ಷಗಿಂತ ಹೆಚ್ಚು ಸಮಯದವರೆಗೆ U.P.ಯನ್ನು ಆಳಿತು. 1970ರ ಕಾಲದ ಒಂದು ಭಾಗದಲ್ಲಿ ಹೇಮ್‌ವತಿ ನಂದನ್ ಬಹುಗುಣ ಕಾಂಗ್ರೆಸ್ ಪಾರ್ಟಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. ಇವರನ್ನು ಇಂದಿರಾ ಗಾಂಧಿಯವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಹಲವು ಇತರ ಕಾಂಗ್ರೆಸ್ ಅಲ್ಲದ ಮುಖ್ಯಮಂತ್ರಿಗಳ ಜೊತೆ ವಜಾಮಾಡಿತು, ಸ್ವಲ್ಪ ಸಮಯದಲ್ಲೇ ಅಪ್ರಿಯವಾದ ತುರ್ತು ಪರಿಸ್ಥಿತಿ ವಿಧಿಸಲಾದಾಗ ನಾರಾಯಣ್ ದತ್ತ್ ತಿವಾರಿ ಮುಖ್ಯಮಂತ್ರಿಯಾದರು. ಇವರು ಉತ್ತರಖಂಡದ ನಂತರದ ಮುಖ್ಯಮಂತ್ರಿ ಸಹಾ ಆದರು. 1977ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ದೊಡ್ಡ ಸೋಲನ್ನು ಎದುರಿಸಿತು, ಇದರ ಅನುಸರಣೆಯಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆಯಲಾಯಿತು. ಆದರೆ 1980ರಲ್ಲಿ ಕಾಂಗ್ರೆಸ್ ಪುನಃ ಹಿಂದಿರುಗಿತು ಹಾಗೂ ಇಂದಿರಾ ಗಾಂಧಿಯವರು V.P. ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದರು. ನಂತರ ಇವರು ಇಂದಿರಾರವರ ಮಗನ ಪ್ರಮುಖ ಎದುರಾಳಿಯಾದರು. ನವೆಂಬರ್ 9, 2000ರಲ್ಲಿ ಘರವಾಲ್ ಹಾಗೂ ಕುಮೌನ್ ವಿಭಾಗಗಳು ಮತ್ತು ಹರಿದ್ವಾರ್ ಜಿಲ್ಲೆಯನ್ನೊಳಗೊಂಡು, ರಾಜ್ಯದಲ್ಲಿನ ಹಿಮಾಲಯದ ಭಾಗವನ್ನು ಒಂದು ಹೊಸ ರಾಜ್ಯವಾಗಿ ಸೃಷ್ಟಿಸಲಾಯಿತು. ಈಗ ಈ ರಾಜ್ಯವನ್ನು ಉತ್ತರಾಖಂಡ್ (ಉತ್ತರಾಖಂಡ)ಎನ್ನುತ್ತಾರೆ, ಇದರ ಅರ್ಥ ’ಉತ್ತರ ಖಂಡ’ದ ರಾಜ್ಯ.

ಪ್ರಾದೇಶಿಕತೆ

[ಬದಲಾಯಿಸಿ]

ಉತ್ತರ ಪ್ರದೇಶ ನೇಪಾಳದೊಂದಿಗೆ ಅಂತರಾಷ್ಟ್ರೀಯ ಗಡಿ ಹಂಚಿಕೊಂಡಿದೆ ಹಾಗೂ ಭಾರತದ ರಾಜ್ಯಗಳಾದ ಉತ್ತರಾಖಂಡ್, ಹಿಮಾಚಲ್ ಪ್ರದೇಶ, ಹರಿಯಾಣಾ, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್‌ಗಡ್, ಝಾರ್‌ಖಂಡ್ ಹಾಗೂ ಬಿಹಾರ ಅಂತಹ ರಾಜ್ಯಗಳಿಂದ ಆವೃತವಾಗಿದೆ. ಈ ರಾಜ್ಯವನ್ನು ಎರಡು ಬೇರೆ ಬೇರೆ ನಿಮ್ನೋನ್ನತಿ ಪ್ರದೇಶಗಳಾಗಿ ವಿಭಜಿಸಬಹುದು:- ದೊಡ್ಡದಾದ ಗಂಗಾ ಬಯಲು ಪ್ರದೇಶ ಉತ್ತರದಲ್ಲಿದೆ: ಗಂಗ-ಯಮುನಾ ಒಟ್ಟುಗೂಡುವ ನಡುವಣ ಪ್ರದೇಶ, ಗಂಗಾ ನದಿಯ ಬಯಲುಗಳು ಹಾಗೂ ಟೆರೈ ಇದರಲ್ಲಿ ಸೇರಿಕೊಂಡಿವೆ. ಇಲ್ಲಿ ಹಲವು ಕೊಳಗಳು, ಸರೋವರಗಳು ಹಾಗೂ ನದಿಗಳಿಂದ ಕೂಡಿದ ಹೆಚ್ಚು ಫಲವತ್ತಾದ ಮೆಕ್ಕಲು ಮಣ್ಣು ಹಾಗೂ ಸಮತಲ ಲಕ್ಷಣದ ಪ್ರದೇಶವಿದೆ - (ಇಳಿಜಾರು 2 m/km). ಚಿಕ್ಕದಾದ ವಿಂಧ್ಯಾ ಗುಡ್ಡಗಳು ಹಾಗೂ ಏರುಪೇರಿಲ್ಲದ ಸಮಸ್ಥಿತಿಯ ಪ್ರದೇಶ ದಕ್ಷಿಣದಲ್ಲಿದೆ: ಇದು ಗಟ್ಟಿ ಬಂಡೆಗಳ ಸ್ತರ ಮತ್ತು ಗುಡ್ಡಗಳು, ಬಯಲುಗಳು, ಕಣಿವೆಗಳು ಹಾಗೂ ಏರುಪೇರಿಲ್ಲದ ಸಮಸ್ಥಿತಿಯ ಹಲವು ಪ್ರದೇಶಗಳ-ವಿವರಣೆಗಳಿಂದ ಕೂಡಿದೆ; ನಿಯಂತ್ರಿತ ನೀರಿನ ಲಭ್ಯತೆಯು ಈ ಪ್ರದೇಶವನ್ನು ತುಲನಾತ್ಮಕವಾಗಿ ಬಂಜರಾಗಿಸಿದೆ.

ಸಸ್ಯ ಮತ್ತು ಜೀವ ವೈವಿದ್ಯ

[ಬದಲಾಯಿಸಿ]

ಈಗ ಉತ್ತರ ಪ್ರದೇಶದಲ್ಲಿ 12.8% ರಷ್ಟು ಭೂಭಾಗವನ್ನು ಕಾಡುಗಳು ಆವರಿಸಿದೆ. ಬೆಚ್ಚುಬೀಳುವಷ್ಟು ಅರಣ್ಯನಾಶ ಹಾಗೂ ವನ್ಯ ಜೀವಿಗಳ ಅನುಮತಿಯಿಲ್ಲದೆ ಬೇಟೆಯಾಗಿದ್ದರೂ ಕೂಡ ಇಲ್ಲಿ ಸಸ್ಯ ಮತ್ತು ಜೀವಿಗಳ ವೈವಿಧ್ಯಮಯತೆ ಇದೆ. ಹಲವು ತಳಿಯ ಮರಗಳು, ಸ್ತನಿವರ್ಗದ ಪ್ರಾಣಿಗಳು, ಉರಗ ವರ್ಗದ ಪ್ರಾಣಿಗಳು ಹಾಗೂ ಹುಳುಗಳನ್ನು ಸಮಶೀತೋಷ್ಣದ ಮೇಲಿನ ಗುಡ್ಡಗಾಡು ವನಗಳ ಪಟ್ಟಿಯಲ್ಲಿ ಕಾಣಬಹುದು; ಔಷಧೀಯ ಗಿಡಗಳು ಕೂಡ ಈ ಕಾಡುಗಳಲ್ಲಿ ಲಭ್ಯವಿರುತ್ತದೆ ಅಥವಾ ಇತ್ತೀಚೆಗೆ ತೋಟಗಳಲ್ಲಿ ಬೆಳೆಸಲಾಗುತ್ತಿದೆ. ಟೆರೈ-ಡ್ವರ್ ಸವನ್ನಾ ಹಾಗೂ ಹುಲ್ಲು ಪ್ರದೇಶ ಜಾನುವಾರುಗಳಿಗೆ ಬೆಂಬಲಿಸುತ್ತದೆ. ತೇವವಾಗಿರುವ ಉದುರೆಲೆ ಅರಣ್ಯದ ಮರಗಳು ಮೇಲಿನ ಗಂಗೆಯ ಬಯಲುಗಳಲ್ಲಿ ಹಾಗೂ ನದಿಯ ದಡಗಳಲ್ಲಿ ಕೂಡ ಬೆಳೆಯುತ್ತವೆ. ವಾಸ್ತವದಲ್ಲಿ ಈ ವಿಶಾಲ ಬಯಲು ಎಷ್ಟು ಫಲವತ್ತು ಹಾಗೂ ಜೀವ ಬೆಂಲಿಕವಿದೆ ಎಂದರೆ ಏನಾದರೂ, ಎಲ್ಲಾದರೂ ಜೀವಿಸಬಲ್ಲದು ಅಥವಾ ಬೆಳೆಯಬಲ್ಲದೊ ಅದು ಇಲ್ಲಿ ಆಗುತ್ತದೆ. ಗಂಗಾ ಮತ್ತು ಅದರ ಉಪನದಿಗಳು ಹಲವು ಬಗೆಯ ದೊಡ್ಡ ಹಾಗೂ ಚಿಕ್ಕ ಉರಗ ವರ್ಗದ ಪ್ರಾಣಿಗಳ, ನೆಲಜಲ ವಾಸಿಗಳ, ತಾಜಾ-ನೀರಿನ ಮೀನು ಹಾಗೂ ಏಡಿಗಳ ನೆಲೆಯಾಗಿದೆ. ಹೆಚ್ಚಾಗಿ ಮೋಟು ಗಿಡಗಳು, ಬಬೂಲ್ ಅಂತಹ ಮರಗಳು ಹಾಗೂ ಚಿಂಕಾರ ಅಂತಹ ಪ್ರಾಣಿಗಳು ಬಂಜರು ವಿಂಧ್ಯಾಗಳಲ್ಲಿ ಕಂಡು ಬರುತ್ತವೆ.[೧೯][೨೦] ರಾಜ್ಯದ ಮುಖ್ಯವಾದ ಗಿಡಗಳು ಹಾಗೂ ಪ್ರಾಣಿಗಳು ಈ ರೀತಿ ಇವೆ:- ಮರಗಳು: ಪೀತದಾರು ಮರ, ದೊಡ್ಡ ಹೂವು ಬಿಡುವ ನಿತ್ಯ ಹಸುರಿನ ಗುಲ್ಮ, ಫರ್ ಮರ, ದೇವದಾರು ಮರ, ಸಾಲ್ ಮರ, ಓಕ್‌ಮರ, ತೇಗದ ಮರ, ಶೀಶೆಮ್ ಮರ, ಮಾವಿನ ಮರ, ಬೇವಿನ ಮರ, ಆಲದ ಮರ, ಅಶ್ವತ್ಥ ಮರ, ಹುಣಸೇ ಮರ, ನೇರಳೆ ಮರ, ಮಹುವ ಮರ, ಸಿಮಲ್ ಮರ, ಗುಲಾರ್ ಮರ ಹಾಗೂ ಢಕ್ ಮರ.

ಔಷಧೀಯ ಗಿಡಗಳು : ಹಿಂಗನ್,[೨೧] ಢಕ್,[೨೨] ರಾವೊಲ್ಫಿಯಾ, ಸೆಪೆಂಟಿನ, ಹೆಕ್ಸಾಂಡ್ರಮ್, ವೈಯಾಲ ಸರಪೆನ್ಸ್, ಪೊಡೊಫೈಲಮ್, ಇಪೆಕ್ರಾ ಗೆರಾರ್‌ಡೈಯಾನ. ದೊಡ್ಡ ಬೆನ್ನುಮೂಳೆಯುಳ್ಳ ಜೀವಿಗಳು : ಆನೆ, ಹುಲಿ, ಕರಡಿ, ನೀಲಿ ಜಿಂಕೆ, ಕಾಡು ಹಂದಿ, ಜಿಂಕೆ, ತೋಳ, ಜಂಬುಕ, ನರಿ, ಲಾಂಗೊರ್. ಪಕ್ಷಿಗಳು : ನವಿಲು, ಮುಳ್ಳುಹಂದಿ, ಬೂದು ಬಣ್ಣದ ಲಾವಕ್ಕಿ, ಪಾರಿವಾಳ, ಸ್ವಾಲೋ ಎಂಬ ವಲಸೆ ಹೋಗುವ ಒಂದು ಪುಟ್ಟ ಹಕ್ಕಿ, ಮೈನಾ, ಭಾರತದ ಉದ್ದ ತೋಕೆಯ ಸಣ್ಣ ಗಿಳಿ, ಕಾಗೆ ಹಾಗೂ ಬಾತುಕೋಳಿ. ಉರಗ ವರ್ಗದ ಪ್ರಾಣಿ : ಮೊಸಳೆ, ಘರಿಯಾಲ್, ಗೊಹ್, ಹಾವುಗಳು, ಓತಿಕೇತ ಹಾಗೂ ಇತರ ಹಲ್ಲಿಗಳು. ಮೀನುಗಳು : ರೋಹು, ಕಾಟ್ಲಾ, ಖುಸಾ, ಪರಹಾನ್, ಪತ್ರಾ, ಮೊಯಿ, ಕೊರೌಚ್ ಹಾಗೂ ಸಿಂಘಿ. ಹಿಂದು ಪುರಾಣ ಕಥೆ ಅನುಸಾರ, ಪ್ರಭು ರಾಮನ ಯೋಧ ಭಕ್ತ ಹಾನುಮಾನ ಜೀವ ಕಾಪಾಡುವ ಸಂಜೀವಿನಿ ವನಸ್ಪತಿಗಳನು ಇದೇ ಪ್ರದೇಶ ಅಥಾವಾ ತುಂಡಾದ ಉತ್ತರಾಖಂಡದ ಪ್ರದೇಶದ ಗುಡ್ಡಗಳಿಂದ ತಂದಿದ್ದನು.

ಹವಾಗುಣ

[ಬದಲಾಯಿಸಿ]

ಉತ್ತರ ಪ್ರದೇಶದ ಹವಾಗುಣ ಮುಖ್ಯವಾಗಿ ಉಷ್ಣವಲಯದ ಕೆಳಗಿನದಾಗಿದೆ, ಆದರೆ ವಾತವರಣ ಸ್ಥಳದ ಹಾಗೂ ಋತುಗಳ ಅನುಗುಣವಾಗಿ ಗಮನಾರ್ಹವಾಗಿ ಬದಲಾಗುತ್ತವೆ:- ಉಷ್ಣಾಂಶ : ಔನತ್ಯದ ಮೇಲೆ ಅವಲಂಬಿಸಿ, ಉಷ್ಣಾಂಶ ಸಾಧಾರಣವಾಗಿ ಜನವರಿಯಲ್ಲಿ 12.5–17.5 °C (54.5–63.5 °F) ರಿಂದ ಮೇ ಹಾಗೂ ಜೂನ್ ನಲ್ಲಿ 27.5–32.5 °C (81.5–90.5 °F)ರವೆರೆಗೂ ಮಾರ್ಪಡಾಗುತ್ತದೆ. ಅತಿ ಹೆಚ್ಚು ಉಷ್ಣಾಂಶ ರಾಜ್ಯದ 49.9 °C (121.8 °F) ಗೋಂಡಾದಲ್ಲಿ ಮೇ 8, 1958ರಲ್ಲಿ ದಾಖಲಿಸಲಾಯಿತು. ಮಳೆಯ ಸುರಿತ : ರಾಜ್ಯದಲ್ಲಿ ಮಳೆಯ ಸುರಿತದ ಪರಿಮಿತಿ ಪೂರ್ವದಲ್ಲಿ 1,000–2,000 mm (39–79 in) ಹಾಗೂ ಪಶ್ಚಿಮದಲ್ಲಿ 600–1,000 mm (24–39 in). ಶೇಖಡ 90ರಷ್ಟು ಮಳೆ ದಕ್ಷಿಣಪಶ್ಚಿಮ ಮಳೆಗಾಲದಲ್ಲೇ ಆಗುತ್ತದೆ, ಇದು ಜೂನ್‌ನಿಂದ ಸೆಪ್ಟೆಂಬರ್‌ರವರೆಗೆ ಇರುತ್ತದೆ. ಬಹಳಷ್ಟು ಮಳೆಸುರಿತ ಈ ನಾಲ್ಕು-ತಿಂಗಳ ಕಾಲ ಕೇಂದ್ರೀಕರಿಸಿದ ಕಾರಣ, ಪ್ರವಾಹಗಳು ಒಂದು ಪುನರಾವರ್ತ ಸಮಸ್ಯೆಯಾಗಿದೆ ಮತ್ತು ಧಾನ್ಯಗಳ, ಜೀವ ಹಾಗೂ ಆಸ್ತಿಯ ಹೆಚ್ಚು ನಷ್ಟಕ್ಕೆ ಕಾರಣವಾಗಿದೆ. ಇವೆಲ್ಲಾ ವಿಶೇಷವಾಗಿ ಹೆಚ್ಚಾಗಿ ಹಿಮಾಲಯ-ಮೂಲದ ನದಿಗಳ ಅತಿ ಕಡಿಮೆ ಉತ್ತರ-ದಕ್ಷಿಣ ಇಳಿಜಾರಿನ ಪ್ರಮಾಣ ಇರುವ ರಾಜ್ಯದ ಪೂರ್ವ ಭಾಗದಲ್ಲಿ ಕಾಣಬಹುದು. ಹಿಮಪಾತ : ರಾಜ್ಯದ ಹಿಮಾಲಯ ಪ್ರದೇಶದಲ್ಲಿ , ಪ್ರತಿ ವರ್ಷ ಹಿಮಪಾತ ಸಾಧಾರಣವಾಗಿ 3 ರಿಂದ 5 ಮೀಟರ್‌ಗಳು (10 ರಿಂದ 15 ಅಡಿಗಳಷ್ಟು) ಡಿಸೆಂಬರ್ ಹಾಗೂ ಮಾರ್ಚಿನ ಮಧ್ಯದಲ್ಲಿ ಆಗುವುದು ಸಾಮಾನ್ಯ. ಬರಗಳು : ಕಾಲ ಕಾಲಕ್ಕೆ ಮಳೆಗಾಲದ ವೈಫಲ್ಯ, ಬರ ಪರಿಸ್ಥಿತಿ ಹಾಗೂ ಬೆಳೆ ವೈಫಲ್ಯದ ಕಾರಣವಾಗುತ್ತವೆ.

ಚುನಾವಣಾ ಕ್ಷೇತ್ರಗಳು

[ಬದಲಾಯಿಸಿ]
ಉತ್ತರ ಪ್ರದೇಶ ಪ್ರಾಂತ್ಯಗಳು

ಈ ರಾಜ್ಯವು ಹಲವು ಬೇರೆ ಬೇರೆ ಪ್ರದೇಶಗಳನ್ನೊಳಗೊಂಡಿದೆ:-

  • ಡೊಬ್ ಪ್ರದೇಶ UP ರಾಜ್ಯದ ಪಶ್ಚಿಮ ಗಡಿಯ ಉದ್ದ ಉತ್ತರದಿಂದ ದಕ್ಷಿಣದವರೆಗೆ ವಿಸ್ತರಿಸಿದೆ, ಈ ಪ್ರದೇಶ ಇನ್ನು ಮೂರು ಕ್ಷೇತ್ರಗಳಲ್ಲಿ ವಿಭಜಿಸಲಾಗಿದೆ:
    • ಮೇಲಿನ ಡೊಬ್ ಉತ್ತರ-ಪಶ್ಚಿಮದಲ್ಲಿ,
    • ಮದ್ಯ ಡೊಬ್ ಪಶ್ಚಿಮದಲ್ಲಿ,
    • ಕೆಳಗಿನ ಡೊಬ್ ಮಧ್ಯ-ದಕ್ಷಿಣದಲ್ಲಿ,
  • ಉತ್ತರದಲ್ಲಿ ರೊಹಿಲ್‌ಖಂಡ್ ಪ್ರದೇಶ;
  • ಅವಧ (ಅಥವಾ ಔದ್ಧ), ಕೊಸಲರ ಐತಿಹಾಸಿಕ ದೇಶ ಮಧ್ಯದಲ್ಲಿ;
  • ದಕ್ಷಿಣದಲ್ಲಿ ಬುಂದೆಲ್‌ಖಂಡಿನ ಉತ್ತರ ಭಾಗಗಳು;
  • ದಕ್ಷಿಣ-ಪೂರ್ವದಲ್ಲಿ ಬಾಗೇಲ್‌ಖಂಡಿನ ಉತ್ತರ ಭಾಗಗಳು; ಮತ್ತು
  • ಪೂರ್ವದಲ್ಲಿ ಭೊಜಪುರ್ ದೇಶದ ದಕ್ಷಿಣಪಶ್ಚಿಮ ಭಾಗ, ಸಾಮಾನ್ಯವಾಗಿ ಪೂರ್ವಾಂಚಲ್ ಎಂದು ಕರೆಯಲಾದ ("ಪೂರ್ವದ ಪ್ರಾಂತ")

ಆಡಳಿತದ ವಿಭಜನೆಗಳು ಹಾಗೂ ಜಿಲ್ಲೆಗಳು (2007ರ ಪ್ರಕಾರ)

[ಬದಲಾಯಿಸಿ]

ಉತ್ತರ ಪ್ರದೇಶ ರಾಜ್ಯ ಎಪ್ಪತ್ತು ಜಿಲ್ಲೆಗಳನ್ನು ಒಳಗೊಂಡಿದೆ, ಇವುಗಳ ಹದಿನೆಂಟು ವಿಭಜನೆಗಳ ಗುಂಪು ಕಟ್ಟಲಾಗಿದೆ:- ಆಗ್ರಾ ವಿಭಜನೆ, ಅಲಿಘರ್ ವಿಭಜನೆ, ಅಲಹಾಬಾದ್‌ ವಿಭಜನೆ, ಆಜಂಘರ್ ವಿಭಜನೆ, ಬರೇಲಿ ವಿಭಜನೆ, ಬಸ್ತಿ ವಿಭಜನೆ, ಚಿತ್ರಕೂಟ್ ವಿಭಜನೆ, ದೇವಿಪಟನ್ ವಿಭಜನೆ, ಫೈಜಾಬಾದ್ ವಿಭಜನೆ, ಗೊರಖ್‌ಪುರ್ ವಿಭಜನೆ, ಝಾಂಸಿ ವಿಭಜನೆ, ಕಾನಪುರ್ ವಿಭಜನೆ, ಲಖನೌ ವಿಭಜನೆ, ಮೀರಟ್ ವಿಭಜನೆ, ಮಿರ್ಜಾಪುರ್ ವಿಭಜನೆ, ಮೊರಾದಬಾದ ವಿಭಜನೆ, ಸಹರಾನಪುರ್ ವಿಭಜನೆ ಮತ್ತು ವಾರಾಣಾಸಿ ವಿಭಜನೆ. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ ಲಖಿಮ್‌ಪುರ್ ಖೇರಿ. ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಜಿಲ್ಲೆ ಅಲಹಾಬಾದ್‌, ನಂತರ ಕಾನಪುರ್ (2007ರ ಜನಗಣನೆ).

ಜನಸಂಖ್ಯಾ ವಿಚಾರ

[ಬದಲಾಯಿಸಿ]

ಉತ್ತರ ಪ್ರದೇಶ ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಉಳ್ಳ ರಾಜ್ಯ, ಇದರ ಜನಸಂಖ್ಯ ಜುಲೈ 1, 2008ರಲ್ಲಿ 190 ಮಿಲಿಯನ್‌ಗಿಂತ ಹೆಚ್ಚಾಗಿತ್ತು. ಇದು ಒಂದು ಪ್ರತ್ಯೇಕ ದೇಶವಾಗಿದ್ದರೆ, ಉತ್ತರ ಪ್ರದೇಶ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಇರುವ ಐದನೆಯ ದೇಶವಾಗುತಿತ್ತು, ಕ್ರಮೇಣವಾಗಿ ಚೈನಾ, ಭಾರತ, ಸಂಯುಕ್ತ ರಾಷ್ಟ್ರಾದ ಅಮೇರಿಕಾ ಹಾಗೂ ಇಂಡೋನೇಷಿಯಾದ ನಂತರ. ಭಾರತದ 2001ರ ಜನಗಣನೆಯ ಪ್ರಕಾರ, ಸ್ವಲ್ಪ ಮಟ್ಟಕ್ಕೆ ಉತ್ತರ ಪ್ರದೇಶದ ಶೇಖಡ 80%ಗಿಂತ ಹೆಚ್ಚು ಜನಸಂಖ್ಯೆ ಹಿಂದುಗಳದಾಗಿದ್ದು, 18%ರಷ್ಟು ಜನಸಂಖ್ಯೆಯವರು ಮುಸ್ಲಿಮರಾಗಿದ್ದಾರೆ. ಉಳಿದ ಜನಸಂಖ್ಯೆಯವರು ಸಿಖ್‌ಗಳು, ಬೌದ್ಧ ಧರ್ಮದವರು, ಕ್ರಿಶ್ಚಿಯನರು ಹಾಗೂ ಜೈನರು.[೨೫]

ಸಾಮಾಜಿಕ ಸ್ವರೂಪ

[ಬದಲಾಯಿಸಿ]

ಉತ್ತರ ಪ್ರದೇಶದ ಜನಸಂಖ್ಯೆಯನ್ನು ಹಲವು ಜಾತಿಗಳು ಹಾಗೂ ಉಪ-ಜಾತಿಗಳಲ್ಲಿ ವಿಭಜಿಸಲಾಗಿದೆ. ಐತಿಹಾಸಿಕವಾಗಿ, ಹಿಂದು ಸಮಾಜ ನಾಲ್ಕು ಉಪ-ವಿಭಾಗಗಳಲ್ಲಿ ಅಥವಾ ವರ್ಣಗಳಲ್ಲಿ ವಿಭಜಿಸಲಾಗಿದೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಹಾಗೂ ಶೂದ್ರರು, ಇನ್ನು ಐದನೆಯ ಗುಂಪು ಜಾತಿಯ ಹೊರಗೆ ಎಂದು ಪರಿಗಣಿಸಲಾದ ದಲಿತರದು. ವಾಸ್ತವದಲ್ಲಿ, ಉತ್ತರ ಪ್ರದೇಶದ ಸಮಾಜ ಜಾತಿಗಳು ಎಂದು ಉಲ್ಲೇಖಿಸಿದ ಹಲವು ಚಿಕ್ಕ ಗುಂಪುಗಳಲ್ಲಿ ವಿಭಜಿಸಲಾಗಿದೆ. ರಾಜ್ಯದ ಪ್ರಮುಖ ಬ್ರಾಹ್ಮಣ ಜಾತಿಗಳಲ್ಲಿ ಭಾರ್ಗವ, ಭಟ್, ಭೂಮಿಹರ್, ಗಂಗಪುತ್ರ, ಗೌರ್, ಜೋಷಿ, ಕನ್ಯಕುಬ್ಜಾ, ಮೈಥಿಲ್, ನಗರ ಸೇರಿವೆ. ಸಕಲ್‌ದ್ವಿಪಿಯ, ಸಂಧ್ಯಾ, ಸರ್ಯುಪರೀನ್, ಶ್ರೀಮಲಿ ಹಾಗೂ ತ್ಯಾಗಿ. ಹಾಗೆಯೇ, ಕ್ಷತ್ರಿಯ ವರ್ಣದಲ್ಲಿ ಹಲವು ಗುಂಪುಗಳು ಸೇರಿವೆ, ಇದರಲ್ಲಿ ರಜಪೂತ್ ಪ್ರಮುಖವಾದದ್ದು. ವೈಶ್ಯದ ಪ್ರಮುಖ ಜಾತಿಗಳು ಸಾಂಪ್ರದಾಯಿಕವಾಗಿ ವ್ಯಾಪಾರದಲ್ಲಿ ತೊಡಗಿರುತ್ತಾರೆ, ಅವುಗಳಲ್ಲಿ ಅಗ್ರಹಾರಿ, ಅಗ್ರವಾಲ್, ಬಾರ್ನವಾಲ್, ಘಾಟೆ ಬನಿಯ, ಹಲ್ವಾಯಿ, ಜೈಸ್ವಾಲ್, ಕಲ್ವಾರ್, ಕೇಸರ್ವಾನಿ, ಮಹೇಶ್ವರಿ, ಮಾಥುರ್, ಒಮಾರ್, ಓಸ್ವಾಲ್, ಪರ್ವಾರ್, ಪಟ್ವಾ, ರಸ್ತೋಗಿ, ಸಧ್ ಹಾಗೂ ತೇಲಿ ಸೇರಿವೆ. ಇವೆಲ್ಲಾ ಜಾತಿಗಳ ಜೊತೆ ಸಾಂಪ್ರದಾಯಿಕವಾಗಿ ಗುಮಾಸ್ತ ವೃತ್ತಿಯಲ್ಲಿ ತೊಡಗಿದ ಕಯಸ್ತಾ ಜಾತಿ ಕೂಡ ರಾಜ್ಯದ ಜನಸಂಖ್ಯೆಯಲ್ಲಿ ಒಂದು ಮುಖ್ಯ ಭಾಗವಾಗಿದೆ. ವೈಶ್ಯ ಜಾತಿಗಳು ಸಾಂಪ್ರದಾಯಿಕವಾಗಿ ಬೇಸಾಯದಲ್ಲಿ ತೊಡಗಿರುತ್ತಾರೆ, ಅವುಗಳಲ್ಲಿ ಅಹಿರ್, ಗಡೇರಿಯಾ, ಗೌರ್ವಾ, ಗುಜ್ಜರ್, ಜಟ್, ಕಚ್ಚಿ, ಕಂಬೊಜ್, ಕೊಯಿರಿ, ಕುರ್ಮಿ, ಮುರಾವ್, ಮಾಲಿ, ರಾವೆ ಹಾಗೂ ರೊರ್ ಸೇರಿವೆ. ಪ್ರಮುಖ ಶೂದ್ರ ಜಾತಿಗಳಲ್ಲಿ ಬರಹೈ, ಬರ್ವಾರ್, ಬೆಲ್ದಾರ್, ಧಾಗಿ, ಧೋಬಿ, ದುಸಧ್, ಜೋಗಿ, ಕಹರ್, ಕೇವಟ್, ನಾಯಿ ಹಾಗೂ ಥಾಥೇರಾ. ಉತ್ತರ ಪ್ರದೇಶದ ಹೊರವಲಯದ ಕ್ಷೇತ್ರಗಳು, ಹಲವು ಆದಿವಾಸಿ ಸಮುದಾಯಗಳಿಗೆ ಮನೆಯಾಗಿದೆ, ಅವುಗಳಲ್ಲಿ ಅಗಾರಿಯ, ಬೈಗಾ, ಭಾರ್, ಭೊಕ್ಸಾ, ಬಿಂದ್, ಚೇರೊ, ಗೊಂಡ್, ಕೋಲ್ ಹಾಗೂ ಕೊರ್ವಾ ಸೇರಿವೆ. ಇವುಗಳಲ್ಲಿ ಐದು ಆದಿವಾಸಿ ಸಮುದಾಯಗಳು ಭಾರತ ಸರ್ಕಾರದಿಂದ ಅನುಕೂಲವಿಲ್ಲದ ಹಿಂದುಳಿದ ಪಂಗಡಗಳು ಎಂದು ಗುರುತಿಸಲ್ಪಟ್ಟಿವೆ, ಎಂದರೆ ಥಾರುಗಳು, ಭೊಕ್ಸಾಗಳು, ಭೊಟಿಯಾಗಳು, ಜೌನಸ್ವರಿಗಳು ಹಾಗೂ ರಾಜಿಗಳು.[೨೬] ಉತ್ತರ ಪ್ರದೇಶದ ಮುಸ್ಲಿಮ್ ಸಮುದಾಯದಲ್ಲಿ ಸಗೋತ್ರವಿವಾಹ ಗುಂಪುಗಳು ಬಿರಾದರಿಗಳೆಂಬ ಉಲ್ಲೇಖನವಿದೆ. ಸಂಪ್ರಾದಾಯಕವಾಗಿ ಸಯ್ಯದ, ಸಿದ್ಧಿಕಿ, ಶೆಖ್, ಶೆಖ್‌ಜಾದಾ, ಮುಘಲ್ ಹಾಗೂ ಪಠಾಣ್, ಈ ಐದು ಸಮುದಾಯಗಳು ಇತರ ಪರದೇಶಗಳಿಂದ ಭಾರತಕ್ಕೆ ಸ್ಥಾಯಿಯಾದ ಗುಂಪುಗಳಲ್ಲಿ ಸಭ್ಯ ಎಂದು ತೋರುತ್ತದೆ. ಈ ಗುಂಪುಗಳ ಜೊತೆ ಹತ್ತಿರದ ಸಂಬಂಧ ಇರುವ ಸಮುದಾಯಗಳು ಸಭ್ಯ ಎಂದು ತೋರುವವರು ರಜಪೂತ ಸಮುದಾಯದಿಂದ, ಡೋಗರ್, ಗರ್ಹಾ, ಗುಜ್ಜರ್, ಜೊಜಾ, ಖಾನ್‌ಜಾದಾ, ಮ್ಮಲ್‌ಕಾನಾ, ಮೆವಾಟಿ, ರಾನ್‌ಘರ್ ಹಾಗೂ ಮುಸ್ಲಿಮ್ ತಿಯಾಗಿಗಳು. ಇತರ ಪ್ರಮುಖ ಮುಸ್ಲಿಮ್ ಬಿರಾದರಿಗಳು ಅನ್ಸಾರಿ, ಬಂಜಾರ, ಬಿಸಾಟಿ, ಧೋಬಿ ಗಡ್ಡಿ, ಘೋಸಿ, ಹಜ್ಜಾಮ್, ಮನಿಹಾರ್, ಮುಸ್ಲಿಮ್ ಕಯಸ್ಥಾಗಳು, ಸೈಫಿ ಹಾಗೂ ತೆಲಿ.[೨೬]

ರಾಜಕೀಯ

[ಬದಲಾಯಿಸಿ]
1989ರಿಂದ ಯುಪಿ ಅಸೆಂಬ್ಲಿ ಚುನಾವಣೆಗಳ ಫಲಿತಾಂಶ

ರಾಜ್ಯದ ಸಂಸತ್ತು (ವಿಧಾನ ಸಭಾ) 403 ಚುನಾವಣಾ ಘಟಕಗಳನ್ನು ಹೊಂದಿದೆ. ಉತ್ತರ ಪ್ರದೇಶದ 2007ರ ಚುನಾವಣೆಗಳಲ್ಲಿ ಮಾಯಾವತಿಯ ಬಹುಜನ್ ಸಮಾಜ ಪಾರ್ಟಿ ಅನಿರೀಕ್ಷಿತ ಬಹುಮತ ಸ್ಥಾನ ಪಡೆಯಿತು, ಇದು ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಕಾರಣವಾಯಿತು. 1991ರಲ್ಲಿ ಭಾರತೀಯ ಜನತಾ ಪಾರ್ಟಿ (BJP) ಬಹುಮತ ಪಡೆದ ನಂತರ ಇದೇ ಮೊದಲ ಬಾರಿಗೆ ಒಂದು ಪ್ರತ್ಯೇಕ ಪಾರ್ಟಿ ಸಂಪೂರ್ಣವಾದ ಬಹುಮತ ಪಡೆದದ್ದು; ಕಳೆದ ಎರಡು ದಶಕಗಳಲ್ಲಿ ಸಮಾಜವಾದಿ ಪಾರ್ಟಿ, ಭಾರತೀಯ ಜನತಾ ಪಾರ್ಟಿ ಹಾಗೂ ಬಹುಜನ್ ಸಮಾಜ ಪಾರ್ಟಿ ಇಂತಹ ಪಾರ್ಟಿಗಳ ನಡುವೆ ಹಲವು ಸಮ್ಮಿಶ್ರಣ ಸರ್ಕಾರಗಳ ಆಡಳಿತವೇ ಪ್ರಬಲವಾಗಿತ್ತು. BSPಯ 2007ರ ಜಯದ ಒಂದು ಕಾರಣ ಎಂದರೆ ಬ್ರಾಹ್ಮಣರ ವೋಟುಗಳ ಈ ದಲಿತ ಪ್ರಧಾನವಾಗಿರುವ ಪಾರ್ಟಿಯಲ್ಲಿ ಮಿಶ್ರಣ.[೨೭] ಮುಂಚಿನ ದಶಕಗಳಲ್ಲಿ ಮತದಾರರ ವಿಭಜನೆಯ ಪ್ರವೃತ್ತಿ ತುಂಬ ಆಳವಾಗಿ ಬೇರೂರಿತ್ತು, ದಲಿತರು, ಮೇಲಿನ ಜಾತಿಯವರು, ಮುಸ್ಲಿಮರು ಹಾಗೂ ಹಲವು OBC ಗುಂಪುಗಳ ನಡುವೆ ಈ ರಾಜ್ಯದಲ್ಲಿ ವೋಟುಗಳು ಪ್ರತಿಬಂಧಿತವಾಗಿದ್ದವು. ಮಾಯಾವತಿ, 206 ಸೀಟುಗಳಿಂದ ಜಯವಾಗಿ, UPಯ ಮುಂದಿನ CM ಆಗಿ 13 ಮೇ 2007ರಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಅವರು 19 ಕ್ಯಾಬಿನೆಟ್ ದರ್ಜೆಯ ಮಂತ್ರಿಗಳ ಜೊತೆಗೆ, 21 ರಾಜ್ಯದ ಮಂತ್ರಿಗಳು ಕೂಡ ಸ್ವಂತಂತ್ರ ಹೊಣೆಗಾರಿಕೆಯನ್ನು ಪಡೆದು ರಾಜ್ಯಪಾಲ T.V. ರಾಜೇಶ್ವರ್‌ ರಿಂದ ವಚನಬದ್ಧತೆಯನ್ನು ಸ್ವೀಕರಿಸಿದರು. ಅವರ ಪ್ರಮುಖ ಕ್ಯಾಬಿನೆಟ್ ಸಹೋದ್ಯೋಗಿಗಳ ಹೆಸರು: ಅವಧಪಾಲ್ ಸಿಂಗ್, ಬಾಬು ಸಿಂಗ್ ಕುಷಾವಾಹ, ಬಾದ್‌ಶಾಹ ಸಿಂಗ್, ನಸೀಮುದ್ದೀನ್ ಸಿದ್ಧಿಕಿ, ರಾಕೇಶ್ ಧಾರ್ ತ್ರಿಪಾಠಿ, ರತನಲಾಲ್ ಅಹಿರ್ವಾರ್ ಹಾಗೂ ಸುಧೀರ್ ಗೋಯಲ್. ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್‌ರ ಸಮಾಜವಾದಿ ಪಾರ್ಟಿ ರಾಜ್ಯದಲ್ಲಿ 97 ಸೀಟುಗಳಿಂದ ಎರಡನೆಯ ಸ್ಥಾನ ಪಡೆಯಿತು.

ವಿವಾದಗಳು

[ಬದಲಾಯಿಸಿ]

ಇತ್ತೀಚಿನ ಸಮಯದಲ್ಲಿ ಆಪಾದನೆಯನ್ನು ಹೊತ್ತ ಜನರ ವ್ಯಾಪಕವಾದ ನುಸುಳಿಕೆಯಿಂದ ಉತ್ತರ ಪ್ರದೇಶದ ರಾಜಕೀಯ ಪ್ರತಿಬಿಂಬ ಹೆಸರು ಕೆಡಿಸಿಕೊಂಡಿದೆ. ಇಂತಹ ಜನರ ಯಶಸ್ಸು ಪ್ರಶ್ನಿಸುವಂತಹದಾಗಿರುತ್ತದೆ ಅಥವಾ ಇವರು ಹಿಂಸಾಚಾರ ಪ್ರವೃತ್ತಿಯನ್ನು ಹುರಿದುಂಬಿಸಿಕೊಂಡಿರುತ್ತಾರೆ. ಆದರೆ, ಕಳೆದ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗ ಫಲಪ್ರದವಾಗಿ ತೃಪ್ತಿಕರವಾದ ಚುನಾವಣೆಯನ್ನು ನಿರ್ವಹಿಸಿದೆ ಎಂದು ಗ್ರಹಿಸಿಕೊಂಡಿತು - ಅತ್ಯಂತ ಶಿಸ್ತಿನ ಸುರಕ್ಷತೆಯನ್ನು ನಿಯೋಗಿಸುತ್ತಾ ಮತಗಟ್ಟೆ-ಆಕ್ರಮಣ, ನಕಲಿ ವೋಟುಗಳು ಹಾಗೂ ಇತರ ದುರುಪಯೋಗಗಳನ್ನು ತಡೆಯಿತು. ಆದರೂ, ಅಪರಾಧಿ-ರಾಜಕಾರಣಿಗಳು ಭಾಗವಹಿಸುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಇದಕ್ಕೆ ಮುಖ್ಯವಾದ ಕಾರಣ ಅವರ ಹಿಂದಿನ ಯಶಸ್ಸು. 2002ರ U.P. ಸಂಸತ್ತಿನ ಚುನಾವಣೆಯಲ್ಲಿ, ಅಪರಾಧಿ ದಾಖಲೆಗಳನ್ನುಳ್ಳ ಅಭ್ಯರ್ಥಿಗಳು ಸಂಸತ್ತಿನಲ್ಲಿ 403 ಸೀಟುಗಳಲ್ಲಿ 206 ಸೀಟುಗಳನ್ನು ಗೆದ್ದರು, ಇದರ ಅರ್ಥ ಒಳ್ಳೆಯ ಹೆಸರಿನ ರಾಜಕಾರಣಿಗಳಿಗಿಂತ ಹೆಚ್ಚು ಅಪರಾಧಿಗಳು ಚುನಾಯಿತರಾಗಿದ್ದರು.[೨೮] 2007ರ ಚುನಾವಣೆಗಳಲ್ಲಿ, ಅಪರಾಧಿಗಳ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಾಯಿತು.

ರಾಜಕೀಯ ನಾಯಕತ್ವ

[ಬದಲಾಯಿಸಿ]

ಈ ರಾಜ್ಯ ರಾಷ್ಟ್ರಕ್ಕೆ ನಾಯಕರನ್ನು ಒದಗಿಸುವ ದಾಖಲೆಯನ್ನು ಪಡೆದಿದೆ; ಭಾರತದ ಹದಿನಾಲ್ಕು ಪ್ರಧಾನ ಮಂತ್ರಿಗಳಲ್ಲಿ ಎಂಟು ಜನ ಉತ್ತರ ಪ್ರದೇಶದಿಂದ ಇದ್ದರು. ಅವರು: ಜವಾಹರಲಾಲ್ ನೆಹರು, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಚೌಧರಿ ಚರಣ ಸಿಂಗ್, ವಿಶ್ವನಾಥ ಪ್ರತಾಪ್ ಸಿಂಗ್, ಚಂದ್ರಶೇಖರ್ ಹಾಗೂ ಅಟಲ್ ಬಿಹಾರಿ ವಾಜ್‌ಪೇಯಿ. ಅಟಲ್ ಬಿಹಾರಿ ವಾಜ್‌ಪೇಯಿ ಅವರು ಗ್ವಾಲಿಯರನಲ್ಲಿ ಜನಿಸಿದ್ದರೂ ಕೂಡ UP ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸಿದರು. ಸಮಕಾಲೀನ ರಾಜಕೀಯ ದೃಶ್ಯ ಕೂಡ ರಾಷ್ಟ್ರದ ಸನ್ನಿವೇಶದಲ್ಲಿ ಕುತೂಹಲಕಾರಿಯಾಗಿದೆ. ನೆಹರು-ಗಾಂಧಿ ಮೆನೆತನದ ಉತ್ತರಾಧಿಕಾರಿಗಳು U.P.ಯನ್ನು ತಮ್ಮ ತವರು ರಾಜ್ಯವೆಂದು ಒಪ್ಪಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪ್ರಧಾನಿ ಸೋನಿಯಾ ಗಾಂಧಿ ರಾಯ ಬರೇಲಿಯನ್ನು ಪ್ರತಿನಿಧಿಸುತ್ತಾರೆ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅಮೇಥಿ, ಸುಲ್ತಾನ್‌ಪುರ್ ವನ್ನು ಪ್ರತಿನಿಧಿಸುತ್ತಾರೆ. ಇಂದಿರಾ ಗಾಂಧಿಯವರೊಂದಿಗೆ ವೈಮನಸ್ಯ ಹೊಂದಿದ ಸೊಸೆ ಮೇನಕಾ ಗಾಂಧಿಯವರು BJP ಸಂಸತ್ತಿನ ಸದಸ್ಯೆ ಹಾಗೂ ಇವರ ಮಗ ವರುಣ ಗಾಂಧಿ ಕೂಡ BJP ರಾಜಕಾರಣಿಯಾಗಿ ಹಾಗೂ ಲೋಕಸಭೆಯ ಸದಸ್ಯರಾಗಿ ರಂಗಪ್ರವೇಶಿಸಿದ್ದಾರೆ. ಇತರ ಮುಖ್ಯ ರಾಜಕೀಯ ನಾಯಕರು BJP ನಾಯಕ ಹಾಗೂ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಗಳಾದ ಡಾ. ಮುರಲಿ ಮನೋಹರ್ ಜೋಶಿ, SP ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್, BSP ಪ್ರಧಾನಿ ಹಾಗೂ ಈಗಿನ ನಾಲ್ಕನೇಯ ವೇಳೆಯ ಮುಖ್ಯ ಮಂತ್ರಿ ಮಾಯಾವತಿ, BJP ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಜನಾಥ ಸಿಂಗ್, ಮಾಜಿ BJP ಮುಖ್ಯ ಮಂತ್ರಿ ಕಲ್ಯಾಣ ಸಿಂಗ್, ರಾಷ್ಟ್ರೀಯ ಲೊಕದಳ ಮುಖ್ಯಸ್ಥ ಅಜೀತ ಸಿಂಗ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ನಂತರ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿ, ಭಾರತೀಯ ಸರ್ಕಾರದ ಮಾಜಿ ಮಾಹಿತಿ ಹಾಗೂ ಪ್ರಸಾರಣ ಮಂತ್ರಿ ಮುಖ್ತಾರ ಅಬ್ಬಾಸ್ ನಖ್ವಿ, UP ಸರ್ಕಾರದ ಶಿಕ್ಷಣ ಮಂತ್ರಿ ಜಾಫರ ಅಲಿ ನಖ್ವಿ, ಮತ್ತಿತರರು. ರಾಜಕೀಯದ ಗೋಪುರಾಕೃತಿಯ ಕಟ್ಟಡದ ಅತ್ಯಂತ ಕೆಳಗಿನ ಶ್ರೇಣಿಯಲ್ಲಿ ಈ ರಾಜ್ಯ ಹಲವು ಗ್ರಾಮ ಮಂಡಳಿಗಳನ್ನು ಹೊಂದಿದೆ, ಇದನ್ನು ಪಂಚಾಯಿತಿಗಳೆಂದು ಉಲ್ಲೇಖಿಸುತ್ತಾರೆ. ಭಾರತದ ಇತರ ರಾಜ್ಯಗಳಲ್ಲೂ ಇದೇ ತರಹದ ವ್ಯವಸ್ಥೆ ಇದೆ.

ಶಿಕ್ಷಣ

[ಬದಲಾಯಿಸಿ]
IIM ಲಕ್ನೊ
ಲಾ ಮಾರ್ಟಿನೆರೆ ಕಾಲೇಜ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಆವರಣ, ಲಕ್ನೊ

ಉತ್ತರ ಪ್ರದೇಶದ ಕ್ಷೇತ್ರದಲ್ಲಿ ಕಲಿಯುವಿಕೆಯ ದೊಡ್ಡ ಸಂಪ್ರದಾಯವೇ ಇತ್ತು, ಆದರೂ ಇದು ಬರೀ ವಿಶಿಷ್ಟರ ಹಾಗೂ ಧಾರ್ಮಿಕ ಪ್ರತಿಷ್ಠಾನದವರಿಗೆ ಮಾತ್ರ ಸಿಮಿತವಾಗಿತ್ತು. ವೇದ ಕಾಲದಿಂದ ಗುಪ್ತ ಕಾಲದವರೆಗಿನ ಅಧ್ಯಯನ ಒಳಗೊಂಡಿದ ಸಂಸ್ಕೃತ ಆಧಾರಿತ ಶಿಕ್ಷಣ, ನಂತರದ ಪಾಲಿ ಜ್ಞಾನ ಗ್ರಂಥ ಸಂಗ್ರಹ ಹಾಗೂ ಪುರಾತನದಿಂದ ಮಧ್ಯಕಾಲದವರೆಗಿನ ಅಧ್ಯಯನ ಪರ್ಷಿಯನ್/ಅರೆಬಿಕ್ ಭಾಷೆಗಳಲ್ಲಿರುವ ಸಂಗ್ರಹ, ಇವೆಲ್ಲವೂ ಬ್ರಿಟೀಷರು ಆಡಳಿತಕ್ಕೆ ಬರುವ ಮುನ್ನ ಹಿಂದೂ-ಬೌದ್ಧ-ಮುಸ್ಲಿಮ್ ಶಿಕ್ಷಣದ ಮಹಾಸೌಧವಾಗಿತ್ತು. ಈಗಿನ ಶಾಲೆಯಿಂದ ವಿಶ್ವವಿದ್ಯಾಲಯದ ಪಶ್ಚಿಮ ಶಿಕ್ಷಣದ ಪದ್ಧತಿಯ ಆರಂಭ ಹಾಗೂ ಅಭಿವೃದ್ಧಿ ಇಲ್ಲಿಯೇ ಆಗಿದ್ದು, ದೇಶದ ಇತರ ಭಾಗಗಳಲ್ಲಿ ವಿದೇಶೀಯ ಕ್ರಿಸ್ತಧರ್ಮಪ್ರಚಾರಕರಿಂದ ಹಾಗೂ ಬ್ರಿಟಿಷ್ ವಲಸೆ ನಾಡಿನವರ ಆಡಳಿತದಿಂದ ಈ ಪದ್ಧತಿ ಅಳವಡಿಸಿಕೊಳ್ಳಲಾಯಿತು. ಅಲಿಗಡ್ ಮುಸ್ಲಿಮ್ ವಿಶ್ವವಿದ್ಯಾಲಯ ಒಂದು ವಾಸದ ಮನೆಗಳಿರುವ ಸೈದ್ಧಾಂತಿಕವಾದ ಸಂಸ್ಥೆ. ಬ್ರಿಟಿಷ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮಾದರಿಯಂತೆ 1875ರಲ್ಲಿ ಸರ್ ಸೈಯದ್ ಅಹಮದ್ ಖಾನ್ ಇವರಿಂದ ಸ್ಥಾಪಿಸಲಾಗಿತ್ತು - ನಂತರ ಇದನ್ನು ಮೊಹಮದನ್ ಆಂಗ್ಲೊ-ಒರಿಯಂಟಲ್ ಕಾಲೇಜ್ ಎಂದು ಹೆಸರಿಸಲಾಯಿತು - ಮತ್ತು 1920ರಲ್ಲಿ ಇದಕ್ಕೆ ಕೇಂದ್ರ ವಿಶ್ವವಿದ್ಯಾಲಯ ಎಂಬ ದರ್ಜೆಯನ್ನು ಭಾರತದ ಸಂಸತ್ತು ನೀಡಿತು. ಭಾರತದಲ್ಲಿನ ಉತ್ತರ ಪ್ರದೇಶದ ಅಲಿಗಡ್‌ನಲ್ಲಿ ಸ್ಥಾಪಿತ ಈ ವಿಶ್ವವಿದ್ಯಾಲಯ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರೂಪಗೊಂಡ ಮೊದಲನೆಯ ಉಚ್ಚ ಅಧ್ಯಯನ ಸಂಸ್ಥೆಯಾಗಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಭಾರತದ ವಾರಾಣಾಸಿಯಲ್ಲಿ ಸ್ಥಾಪಿತವಾದ ಒಂದು ಕೇಂದ್ರ ವಿಶ್ವವಿದ್ಯಾಲಯ.[೨೯] ಇದು ವಾರಾಣಾಸಿಯ ಕೇಂದ್ರ ಹಿಂದೂ ಕಾಲೇಜಿನಿಂದ ಪ್ರಕಟವಾಯಿತು, ಇದನ್ನು ಆನ್ನಿ ಬೆಸೆಂಟ್ ಒಬ್ಬ ಐರಿಷ್ ವಂಶದ ಬ್ರಿಟಿಷ್ ಮಹಿಳೆ ಸ್ಥಾಪಿಸಿದ್ದರು, ಇವರು ಏಪ್ರಿಲ್ 1911ರಲ್ಲಿ ವಾರಾಣಾಸಿಯಲ್ಲಿ ಒಂದು ಸಮಾನವಾದ ಹಿಂದೂ ವಿಶ್ವವಿದ್ಯಾಲಯಕ್ಕೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರೊಂದಿಗೆ ಕೈಗೂಡಿಸಿದರು. ಕ್ರಮೇಣವಾಗಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ 1 ಅಕ್ಟೋಬರ್ 1917ರಿಂದ ಕೇಂದ್ರ ಹಿಂದೂ ಕಾಲೇಜ್‌ನ್ನು ತನ್ನ ಮೊದಲ ಘಟಕವಾಗಿಸಿಕೊಂಡು ಕಾರ್ಯಾರಂಭಿಸಿತು. ವಿಶ್ವವಿದ್ಯಾಲಯಕ್ಕೆ ಹಣ ಹೆಚ್ಚಾಗಿ ಹಿಂದೂ ರಾಜಕುಮಾರರಿಂದ ಬರುತ್ತಿತ್ತು ಹಾಗೂ ಇವತ್ತಿನ 1,350-acre (5.5 km2) ಆವರಣವನ್ನು ಕಾಶಿ ನರೇಶರು ದಾನ ನೀಡಿದ ಜಮೀನಿನಲ್ಲಿ ಕಟ್ಟಲಾಗಿತ್ತು. ಏಷ್ಯಾದಲ್ಲೇ ಅತಿ ದೊಡ್ಡ ವಾಸದ ಮನೆಗಳಿರುವ ವಿಶ್ವವಿದ್ಯಾಲಯ ಎಂದು ಮನ್ನಣೆ ಪಡೆದಿದೆ,[೩೦] ಇಲ್ಲಿ 128ಗಿಂತ ಹೆಚ್ಚು ಬೋಧಿಸುವ ಇಲಾಖೆಗಳಿವೆ; ವಿಜ್ಞಾನ, ಭಾಷಾಧ್ಯಯನ, ಕಾನೂನು, ಇಂಜಿನಿಯರಿಂಗ್ (IT-BHU) ಹಾಗೂ ವೈದ್ಯಕೀಯ (IMS-BHU) ಸೇರಿದಂತೆ ಇಲ್ಲಿನ ಹಲವು ಕಾಲೇಜುಗಳು ಭಾರತದ ಶ್ರೇಷ್ಠ ಕಾಲೇಜುಗಳ ದರ್ಜೆಯನ್ನು ಪಡೆದಿದ್ದವು.[೩೧] ಈ ವಿಶ್ವವಿದ್ಯಾಲಯದ ಒಟ್ಟು ದಾಖಲಾತಿಗಳು ವಿದೇಶೀ ವಿಧ್ಯಾರ್ಥಿಗಳನ್ನು ಸೇರಿಸಿ 15,000ಕ್ಕಿಂತಲೂ ಹೆಚ್ಚು. 2010ರ ಶೈಕ್ಷಣಿಕ ಕಾಲಾವಧಿಯಿಂದ IIT ಕಾಲೇಜಾದ IT-BHU ಹೊಂದಿರುವ ಭಾರತದಲ್ಲಿನ ಏಕ ಮಾತ್ರ ವಿಶ್ವವಿದ್ಯಾಲಯ ಇದು.[೩೨] ಭಾರತದ ನಿರ್ವಹಣ ಸಂಸ್ಥೆ ಲಖನೌ ಭಾರತದ ನಿರ್ವಹಣ ಶಾಲೆಗಳಲ್ಲಿ ಪ್ರಮುಖವಾಗಿದೆ. ಭಾರತದ ತಂತ್ರಜ್ಞಾನದ ಸಂಸ್ಥೆ ಕಾನಪುರ್ - 1960ರಲ್ಲಿ ಉದ್ಯೋಗ ನಗರಿ ಕಾನಪುರ್‌ನಲ್ಲಿ ಸ್ಥಾಪಿತವಾಗಿದ್ದೂ ಅಂತರರಾಷ್ಟ್ರೀಯವಾಗಿ ಮನ್ನಣೆ ಪಡೆದ ಭಾರತದ ತಂತ್ರಜ್ಞಾನದ ಸಂಸ್ಥೆ; ಈಗ IIT-ಕಾನಪುರ್ ಅಥವಾ 'IITK' ಎಂದು ಪ್ರಚಲಿತವಾಗಿದೆ. ಇದು ಪ್ರಾಥಮಿಕವಾಗಿ ಪದವಿಪೂರ್ವದ ಶಿಕ್ಷಣವನ್ನು ಇಂಜಿನೀಯರಿಂಗ್ ಮತ್ತು ಸಂಬಂಧಪಟ್ಟ ವಿಜ್ಞಾನಗಳು ಹಾಗೂ ತಂತ್ರಜ್ಞಾನಗಳು ಹಾಗೂ ಇದೇ ಕ್ಷೇತ್ರದ ಸಂಶೋಧನೆಗಳನ್ನು ಬೋಧಿಸುವ ನಿಟ್ಟಿನಲ್ಲಿ ಕೇಂದ್ರೀಕರಿಸುತ್ತವೆ. ಪ್ರಸಿದ್ಧ ಲಾ ಮಾರ್ಟಿನೇರ್ ಕಾಲೇಜು ಸೇರಿದಂತೆ ರಾಜ್ಯದ ರಾಜಧಾನಿ ಲಖನೌನಲ್ಲಿ ಹಲವು ಒಳ್ಳೆಯ ಹೆಸರು ಪಡೆದ ಶಾಲೆಗಳು ಇವೆ.

ಆರ್ಥಿಕತೆ

[ಬದಲಾಯಿಸಿ]

ಭಾರತದ ಆರ್ಥಿಕತೆಯಲ್ಲಿ [೩೩] ಉತ್ತರ ಪ್ರದೇಶ ಎರಡನೇಯ ದೊಡ್ಡ ರಾಜ್ಯವಾಗಿದ್ದು, ಮೊದಲನೆಯದು ಮಹಾರಾಷ್ಟ್ರ. ಇದು ಭಾರತದ ಒಟ್ಟು GDP ಗೆ 8.17% ಒದಗಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] 1999 ಹಾಗೂ 2008ರ ನಡುವಿನಲ್ಲಿ, ಆರ್ಥಿಕತೆ ಕೇವಲ 4.4% ಪ್ರತಿ ವರ್ಷದ ಅನುಸಾರ ಬೆಳೆಯಿತು. ಇದು ಭಾರತದಲ್ಲಿ ಅತಿ ಕಡಿಮೆ ದರಗಳ ಶ್ರೇಣಿಯಲ್ಲಿ ಒಂದಾಗಿತ್ತು.[೩೪] ರಾಜ್ಯದ ಮಹತ್ವದ ಆರ್ಥಿಕ ಚಟುವಟಿಕೆ ಬೇಸಾಯವಾಗಿದ್ದು, 1991ರಲ್ಲಿ ರಾಜ್ಯದ 73% ರಷ್ಟು ಜನಸಂಖ್ಯೆಯವರು ಬೇಸಾಯದಲ್ಲಿ ತೊಡಗಿದ್ದರು ಹಾಗೂ ರಾಜ್ಯದ 46% ಆದಾಯವನ್ನು ಬೇಸಾಯದಿಂದ ಪಡೆಯಲಾಗಿದೆ ಎಂದು ಲೆಕ್ಕ ಹಾಕಲಾಗಿತ್ತು. ಉತ್ತರ ಪ್ರದೇಶವು ದೇಶದಲ್ಲಿ ಆಹಾರ-ಹೆಚ್ಚಳವಿರುವ ರಾಜ್ಯ ಎಂಬ ತನ್ನ ಹಿಂದಿನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಚಿಕ್ಕ ಪ್ರಮಾಣದ ಉದ್ಯೋಗ ಘಟಕಗಳಿಗೆ ಮನೆಯಾಗಿದೆ, ಅಂದರೆ 12% ಅಂತೆ 2.3 ಮಿಲಿಯನ್‌ಗಿಂತ ಹೆಚ್ಚು ಘಟಕಗಳಿವೆ.[೩೫] ಆದರೆ ಔದ್ಯೋಗಿಕ ಉತ್ಪಾದನೆಯ ಮೇಲೆ ಈ ರಾಜ್ಯದ ವಿದ್ಯುತ್ ಮಂಡಳಿಯ ಕ್ರಮವಿಲ್ಲದ ವಿದ್ಯುತ್ ಸರಬರಾಜು ಬಹಳ ಪರಿಣಾಮ ಬೀರಿದೆ ಹಾಗೂ ಪೂರ್ಣ ಉತ್ಪಾದಕ ಸಾಮರ್ಥ್ಯದಗಿಂತ ಬಹಳ ಕೆಳಗೆ ಉಳಿದಿದೆ. ಸ್ಪರ್ಧಾತ್ಮಕ ಬೆಲೆಗಳಲ್ಲಿ ಬೇಕಾಗುವಷ್ಟು ಕಚ್ಚಾ ವಸ್ತುಗಳ ಲಭ್ಯವಿಲ್ಲದಿರುವಿಕೆ ಕೂಡ ಇನ್ನೊಂದು ನಕಾರಾತ್ಮಕ ಅಂಶವಾಗಿದೆ. ಭಾರತದ ಹಲವು ಭಾಗಗಳಂತೆ ಇಲ್ಲಿಯೂ ಕೂಡ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು ಹೆಚ್ಚು ಲಾಭ ಪಡೆಯುತ್ತಾರೆ ಮತ್ತು ಕಾರ್ಮಿಕ ವರ್ಗದವರ ಜೀವನ ಜೀವನೋಪಾಯ ಮಟ್ಟಕ್ಕೆ ಮಾತ್ರ ಉಳಿದಿರುತ್ತದೆ. ಅದಾಗ್ಯೂ, ಕಾರ್ಮಿಕ ಸಾಮರ್ಥ್ಯ UPಯಲ್ಲಿ ರಾಷ್ಟ್ರದ ಸರಾಸರಿಯನ್ನು (25) ಹೋಲಿಸಿದರೆ (26) ಹೆಚ್ಚಾಗಿದೆ.[೩೫] ರಾಜ್ಯದ ಕೆಲವು ಮುಖ್ಯ ಔದ್ಯೋಗಿಕ ಮುಖ್ಯ ಸ್ಥಳಗಳು ಈ ರೀತಿ ಇವೆ:-

  • ಕಾನ್ಪುರ ದೇಶದಲ್ಲೇ ದೊಡ್ಡ ಪಾದರಕ್ಷೆ-ಉತ್ಪಾದಕ ಕೇಂದ್ರ.
  • ನೋಯಿಡಾ ಹಾಗೂ ಲಖನೌ ದೇಶದ ಉನ್ನತ IT (ಮಾಹಿತಿ ತಂತ್ರಜ್ಞಾನದ) ತಾಣಗಳಲ್ಲೊಂದು.
  • ಮೀರತ್ ಕ್ರೀಡಾ ಉತ್ಪನ್ನಗಳ, ಕತ್ರಿಯಂತಹ ಹರಿತವಾದ ಸಲಕರಣೆಗಳ ಹಾಗೂ ಚಿನ್ನದ ಆಭರಣಗಳ ಉತ್ಪಾದಕ ಕೇಂದ್ರ, ಈ ನಗರ ದೇಶದಲ್ಲೇ ನಿಯತವಾಗಿ ಕರ-ಸಲ್ಲಿಸುವ ನಗರಗಳಲ್ಲಿ ಉನ್ನತ ಸ್ಥಾನ ಪಡೆದಿದೆ.[೩೬]
  • ಮಿರ್ಜಾಪುರ್‌ಹಾಗೂ ಭಾದೋಹಿಜಮಖಾನೆಗಳ ಹಾಗೂ ಹತ್ತಿಯ ದರಿಗಳ ಉತ್ಪಾದಕ ಕೇಂದ್ರಗಳು ಹಾಗೂ ವಿಶ್ವದಾದ್ಯಂತ ಇದರ ನಿರ್ಯಾತಕರು.
  • ಮೊರಾದಾಬಾದ್, ಸಾಂಪ್ರಾದಾಯಿಕ ’ಮೊರಾದಾಬಾದಿ’ ಧಾತುಗಳ ವಸ್ತುವಿನ ಉತ್ಪಾದನೆಯಲ್ಲಿ ಪ್ರಸಿದ್ಧವಾಗಿದೆ, ಈಗ ತುಕ್ಕು ಹಿಡಿಯದ ಉಕ್ಕಿನ ಗೃಹೋಪಕರಣಗಳ ಪ್ರಮುಖ ಉತ್ಪಾದಕ ಹಾಗೂ ನಿರ್ಯಾತಕವಾಗಿ ಪ್ರಕಟಗೊಂಡಿದೆ.
  • ಅಲಿಗಡ್ ಹಿತ್ತಾಳೆ, ತವರ, ಅಲ್ಯೂಮಿನಿಯಮ್ ಹಾಗೂ ಕಬ್ಬಿಣದ ಬಾಗಿಲು ಹೊಂದಿಕೆಗಳ ಉತ್ಪಾದನೆಯ ಮುಖ್ಯ ಸ್ಥಳವಾಗಿದೆ ಮತ್ತು ಇದು ಜೋಲು ಬೀಗಗಳಿಗೂ ಪ್ರಸಿದ್ಧವಾಗಿದೆ. ಈ ಸಾಮಾನುಗಳನ್ನು ವಿಶ್ವದಾದ್ಯಂತ ಸರಬರಾಜು ಮಾಡಲಾಗುತ್ತದೆ. ಅಲಿಗಡ್ ಪ್ಲಾಸ್ಟಿಕ್ಕಿನ ಆಟಿಕೆ ಬಂದೂಕುಗಳ ಉತ್ಪಾದನೆಯ ಮುಖ್ಯ ಸ್ಥಳವೂ ಹೌದು.

2006ರಲ್ಲಿ 8 ಮಿಲಿಯನ್ ಸ್ಥಳೀಯರು ಹಾಗೂ 825,000ರಷ್ಟು ವಿದೇಶೀಯರು ಆಗ್ರಾದ ಪ್ರವಾಸ ಮಾಡಿದರು, ಇದನ್ನು ಅನುಸರಿಸಿ ವಾರಣಾಸಿ, ಲಖನೌ, ಅಲ್ಹಾಬಾದ್, ವ್ರಿಂದಾವನ್ ಹಾಗೂ ಮಥುರಾ ಮುಂತಾದವುಗಳೂ ಸಹಾ ಪ್ರವಾಸ ಮಾಡಲ್ಪಟ್ಟವು.

ಉತ್ತರ ಪ್ರದೇಶದ ಆಗ್ರಾದಲ್ಲಿ ಫತೇಹಬಾದ್ ರಸ್ತೆಯಲ್ಲಿ ವ್ಯಾಪಾರ ಮಳಿಗೆ ನೆಲೆಗೊಂಡಿದೆ.
ಯುಪಿಯ ನೊಯ್ಡಾ ಮೈದಾನದಲ್ಲಿ ಉಪ ಮಳಿಗೆಗಳಿರುವ ವಲಯ-18 ಜಂಕ್ಷನ್ ಅನ್ನು ದೃಶ್ಯಗಳು ತೋರಿಸಿವೆ.

ಮಾಧ್ಯಮದ ಮೂಲಕ ಜಾಗತೀಕರಣ ಅಲ್ಲದೇ ಪಾಶ್ಚಿಮಾತ್ಯ ಪ್ರಭಾವ ಉತ್ತರ ಪ್ರದೇಶದ ಜೀವನ ಶೈಲಿಯ ಮೇಲೆ ಮಹತ್ತರ ಪರಿಣಾಮ ಬೀರುತ್ತಿದೆ ಮತ್ತು ಆರ್ಥಿಕತೆ ಹೊಸ ಅಭಿರುಚಿಗಳನ್ನು ಹಾಗೂ ಗ್ರಾಹಕೀಕರಣವನ್ನು ಒದಗಿಸಲು ತಾನೇ ಸಜ್ಜಾಗುತ್ತಿದೆ. ಇದರ ಸ್ಪಷ್ಟ ಸೂಚನೆಯನ್ನು ದೊಡ್ಡ ನಗರಗಳ ಉನ್ನತ ಸ್ಥಳಗಳಲ್ಲಿ ಮನೋಹರವಾದ ವ್ಯಾಪಾರದ ಮಾಲ್‌ಗಳ ಪ್ರಕಟವಾಗುವಿಕೆ ಇಂದ ನೋಡಬಹುದು. ರಾಜ್ಯದ ಪ್ರವಾಸೋದ್ಯಮದ ದುಡಿಮೆಯಿಂದ ಕೂಡ ಆರ್ಥಿಕತೆ ಒಳ್ಳೆ ಲಾಭ ಪಡೆಯುತ್ತಿದೆ.

ಪ್ರವಾಸೋದ್ಯಮ

[ಬದಲಾಯಿಸಿ]

ಉತ್ತರ ಪ್ರದೇಶ ಹಲವು ರಾಷ್ಟ್ರಿಯ ಹಾಗೂ ಅಂತರರಾಷ್ಟ್ರಿಯ ಸಂದರ್ಶಕರನ್ನು ಸೆಳೆಯುತ್ತದೆ; 2003ರಲ್ಲಿ 71 ಮಿಲಿಯನ್‌ಗಿಂತ ಹೆಚ್ಚು ಸ್ಥಳಿಯ ಪ್ರವಾಸಿಗರು ಹಾಗೂ 25% ರಷ್ಟು ಇಡಿ ಭಾರತದ ವಿದೇಶೀ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದರು, ಇದು ಭಾರತದಲ್ಲಿನ ಒಂದು ಉನ್ನತ ಪ್ರವಾಸಿ ತಾಣ.[೩೫] ಈ ರಾಜ್ಯದಲ್ಲಿ ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಎರಡು ತಾಣಗಳಿವೆ, ಅವು ಆಗ್ರಾ ಪ್ರಯಾಣ ಹಾಗೂ ಹಿಂದೂ ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ .

  • ಆಗ್ರಾ ನಗರವು ಮೂರು ವಿಶ್ವ ಸಂರಕ್ಷಣಾ ಸ್ಮಾರಕಗಳ ಪ್ರವೇಶ ಸ್ಥಾನವಾಗಿದೆ: ತಾಜ್ ಮಹಲ್, ಆಗ್ರಾ ಕೋಟೆ ಹಾಗೂ ಹತ್ತಿರದ ಫತೆಹ್‍ಪುರ್ ಸಿಕ್ರಿ:
    • ತಾಜ್ ಮಹಲ್ ಒಂದು ಮುಸ್ಲಿಮರ ಸಮಾಧಿ, ಇದನ್ನು ಮುಘಲ್ ಚಕ್ರವರ್ತಿ ಶಾಹ ಜಹಾನ್ ತನ್ನ ಪ್ರಿಯ ಪತ್ನಿ ಮುಮ್‌ತಾಜ್ ಮಹಲ್ ಸ್ಮರಣೆಯಲ್ಲಿ ನಿರ್ಮಿಸಿದ್ದರು. ಇದನ್ನು "ಭರತದಲ್ಲಿ ಮುಸ್ಲಿಮರ ಕಲೆಯ ಅನರ್ಘ್ಯ ರತ್ನ ಹಾಗೂ ವಿಶ್ವಾದ್ಯಂತ ಪ್ರಶಂಸಿಸಲಾದ ವಿಶ್ವ ಸಂಸ್ಕೃತಿಯ ಉತ್ಕೃಷ್ಟ ಕೃತಿ" ಎಂದು ಗುರುತಿಸಲಾಗಿದೆ.
    • ಆಗ್ರಾ ದುರ್ಗ ತನ್ನ ಹೆಚ್ಚು ಪ್ರಸಿದ್ಧ ಭಗಿನಿ ತಾಜ್ ಮಹಲ್‌ಯಿಂದ 2.5 km ಉತ್ತರಪಶ್ಚಿಮದಲ್ಲಿದೆ. ಈ ದುರ್ಗವನ್ನು ಗೋಡೆಗಳುಳ್ಳ ಅರಮನೆಯಂತಹ ನಗರ ಎಂದು ಇನ್ನು ಖಚಿತವಾಗಿ ವರ್ಣಸಬಹುದು.
    • ಫತೆಹ್‌ಪುರ್ ಸಿಕ್ರಿ 16ನೇಯ ಶತಮಾನದಲ್ಲಿನ ಆಗ್ರಾದ ಬಳಿಯ ವಿಶ್ವ ಪ್ರಸಿದ್ಧ ರಾಜಧಾನಿ ನಗರವಾಗಿತ್ತು, ಇದನ್ನು ಮುಘಲ್ ಚಕ್ರವರ್ತಿ ಮಹಾನ್ ಅಕ್ಬರ್ ನಿರ್ಮಿಸಿದ್ದರು. ಇವರ ಮುಸ್ಲಿಮ್ ಸಮಾಧಿ ಆಗ್ರಾದಲ್ಲಿದ್ದು ಇದು ಕೂಡ ಭೇಟಿ ನೀಡುವ ಪ್ರಮುಖ ಸ್ಥಾನದಲ್ಲೊಂದು.

ಆಗ್ರಾದಲ್ಲೇ ದಯಾಲ್ ಬಾಗ್ ಹಲವರು ವೀಕ್ಷಿಸುವ ಆಧುನಿಕ ಸಮಯದಲ್ಲಿ ನಿರ್ಮಿಸಲಾದ ಒಂದು ದೇವಸ್ಥಾನ. ಇದು ಇನ್ನು ನಿರ್ಮಾಣ ಹಂತದಲ್ಲಿದ್ದು ಪೂರ್ಣಗೊಳ್ಳಲು ಒಂದು-ಶತಮಾನವಾಗಬಹುದು. ಅದರ ಜೀವಂತ ಎನಿಸುವ ಅಮೃತಶಿಲೆಯ ಶಿಲ್ಪಕಲೆಗಳು ಭಾರತದಲ್ಲಿ ಅದ್ವಿತೀಯವೆನಿಸಿದೆ. ಆಗ್ರಾದ ನಂಬಲಾಗದ ಆಧುನಿಕ ಆಕರ್ಷಣೆಗಳ್ಳಲ್ಲಿ ಏಷ್ಯಾದ ಅತಿ ದೊಡ್ಡ ಸ್ಪಾ (ರೋಗನಿವಾರಕವಾದ ಖನಿಜಜಲಗಳ ಊಟೆ) ಮತ್ತು ಏಷ್ಯಾದ ಮೊದಲ ಹಾಗೂ ಏಕಮಾತ್ರ 6D ಚಿತ್ರಮಂದಿರ ಇವೆ.

ವಾರಾಣಾಸಿಯನ್ನು ಜಗತ್ತಿನ ಪುರಾತನ ನಗರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಇದು ತನ್ನ ಘಾಟಿಗಳಿಗೆ ಪ್ರಸಿದ್ಧವಾಗಿದೆ (ನದಿಯ ದಡದ ಉದ್ದಕ್ಕೂ ಮೆಟ್ಟಲುಗಳಿದ್ದು ಅಲ್ಲಿ ಜನರು ಸ್ನಾನ ಮಾಡುತ್ತಾರೆ), ಇಲ್ಲಿ ವರ್ಷಪೂರ್ತಿ ಭಾರತದಾದ್ಯಂತ ಹಾಗೂ ಹೊರದೇಶಗಳಿಂದಲೂ ಕೂಡ ಬರುವ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಅವರು ಈ ಗಂಗಾ ನದಿಯಲ್ಲಿ ಪವಿತ್ರ ಮುಳುಗು ಹಾಕಲು ಬರುತ್ತಾರೆ. ಮಥುರಾ ತನ್ನ ಆಕರ್ಷಕವಾದ ಹೋಲಿ ಆಚರಣೆಗೆ ಜಗತ್ತಿನಲ್ಲೆ ಪ್ರಸಿದ್ಧವಾಗಿದೆ, ಇದು ಹಲವಾರು ಪರ್ಯಟಕರನ್ನು ಕೂಡ ಆಕರ್ಷಿಸುತ್ತದೆ. ನಮ್ಮ ಭಾರತೀಯ ಚಲನಚಿತ್ರ ಉದ್ಯಮವು ಸ್ವಲ್ಪ ಹೆಚ್ಚಾಗಿ ಈ ಉತ್ಸವದ ಸಮಾಜಿಕ-ಧಾರ್ಮಿಕತೆಯನ್ನು ಮನರಂಜನೆಯ ರೂಪದಲ್ಲಿ ದರ್ಶಿಸಿದ್ದಾರೆ. ಪ್ರತಿ ವರ್ಷ, ಸಾವಿರಾರು ಜನರು ಮಘ ಜಾತ್ರೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಅಲ್ಹಾಬಾದಿನಲ್ಲಿ ಒಟ್ಟುಗೂಡುತ್ತಾರೆ. ಇದನ್ನು ಗಂಗಾ ನದಿಯ ದಡದ ಮೇಲೆ ಆಚರಿಸಲಾಗುತ್ತದೆ. ಇದೇ ಹಬ್ಬವನ್ನು 12 ವರ್ಷಕ್ಕೊಂದು ಸಲ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿ ಕುಂಭ ಜಾತ್ರೆ ಎನ್ನುತ್ತಾರೆ, ಇಲ್ಲಿ 10 ಮಿಲಿಯನ್‌ಗಿಂತ ಹೆಚ್ಚು ಹಿಂದೂ ಭಕ್ತಾದಿಗಳು ಒಟ್ಟುಸೇರುತ್ತಾರೆ - ಜಗತ್ತಿನಲ್ಲೆ ಮಾನವರ ಅತಿ ಹೆಚ್ಚು ಒಗ್ಗೂಡುವಿಕೆ. ವಾರಣಾಸಿಯ ಹತ್ತಿರವೆ ಐತಿಹಾಸಿಕವಾಗಿ ಮುಖ್ಯವಾದ ನಗರಗಳಾದ ಸಾರಾನಾಥ ಹಾಗೂ ಕುಶಿನಗರ ಸ್ಥಾಪಿತವಾಗಿವೆ. ಗೌತಮ ಬುದ್ಧ ಜ್ಞಾನೋದಯವಾದ ಮಲೇ ತನ್ನ ಮೊದಲ ಧರ್ಮೋಪದೇಶವನ್ನು ಸಾರಾನಾಥನಲ್ಲಿ ನೀಡಿದರು ಹಾಗೂ ಅವರು ಕುಶಿನಗರದಲ್ಲಿ ದೈವಾಧೀನರಾದರು; ಹೀಗಾಗಿ ಎರಡು ಸ್ಥಾನಗಳು ಬೌದ್ಧರಿಗೆ ಪ್ರಮುಖ ತೀರ್ಥಯಾತ್ರೆಯ ತಾಣಗಳು. ಸಾರಾನಾಥದಲ್ಲಿ ಅಶೋಕನ ಕಂಭಗಳಿವೆ ಹಾಗೂ ಅಶೋಕನ ಸಿಂಹ ರಾಜಧಾನಿ ಇದೆ, ಎರಡು ಪುರಾತತ್ವ ಶಾಸ್ತ್ರದ ಉಪಕರಣಗಳೆಂದು ರಾಷ್ಟ್ರಿಯ ಮಹತ್ವದ ಪ್ರಾಮುಖ್ಯತೆಯನ್ನು ಪಡೆದಿದೆ. ವಾರಾಣಾಸಿಯಿಂದ 80 km ದೂರದಲ್ಲಿನ ಘಾಜಿಪುರ್ ತನ್ನ ಗಂಗೆಯ ಘಾಟ್‌ಗಳಿಗಲ್ಲದೆ ಬ್ರಿಟಿಷಿನ ಪ್ರಬಲವಾದ ದೊರೆ ಲಾರ್ಡ್ ಕಾರ್ನ್‌ವಾಲ್ಲಿಸ್‌ನ ಸಮಾಧಿಗೆ ಕೂಡ ಪ್ರಸಿದ್ಧವಾಗಿದೆ, ಈ ಸಮಾಧಿಯ ಉಸ್ತುವಾರಿಯನ್ನು ಭಾರತದ ಪುರಾತತ್ವ ಶಾಸ್ತ್ರ ಸರ್ವೇಕ್ಷಣೆಯವರು ನೋಡಿಕೊಳ್ಳುತ್ತಾರೆ. ಉತ್ತರ ಪ್ರದೇಶದ ರಾಜಧಾನಿಯಾದ ಲಖನೌನಲ್ಲಿ ಕೂಡ ಬರ ಇಮಾಂಬರ ಹಾಗೂ ಛೋಟಾ ಇಮಾಂಬರ ಅಂತಹ ಹಲವಾರು ಸುಂದರ ಐತಿಹಾಸಿಕ ಸ್ಮಾರಕಗಳಿವೆ. ಔಧ-ಕಾಲದ ಬ್ರಿಟಿಷರು ವಾಸಿಸುವ ವಸತಿಗಳ ನಾಶಗೊಂಡ ಅನೇಕ ಭಾಗಗಳು ಕೂಡಿ ಇರುವ ಸ್ಥಳವನ್ನು ಕೂಡ ಇಲ್ಲಿ ಸಂರಕ್ಷಿಸಲಾಗಿದೆ, ಇವುಗಳನ್ನು ಈಗ ಪುನಃ ಸ್ಥಾಪಿಸಲಾಗುತ್ತಿದೆ. ದುಧ್ವಾ ರಾಷ್ಟ್ರೀಯ ಉಪವನ ಹುಲಿಗಳಿಗೆ ಎಂದು ಇರುವ ದೇಶದ ಉತ್ತಮ ಮೀಸಲು ಪ್ರದೇಶಗಳಲ್ಲೊಂದು. ಲಖಿಮಪುರ್ ಖೇರಿ - ಹುಲಿಗಳ ಮನೆಯಾದ ಮಿಸಲು ಪ್ರದೇಶ ಮತ್ತು ಕಟೆರಿನೈಘಾಟ್ ವನ್ಯಜೀವಿ ಅಭಯಧಾಮ - ಭಾರತದಲ್ಲೇ ಅತಿ ಹೆಚ್ಚು ವನ್ಯಜೀವಿಗಳು ಒಂದೆಡೆ ಸೇರಿರುವ ಅಭಯಧಾಮ ಅದರಲ್ಲಿಯೂ ಹುಲಿಗಳ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ, ಇದು ಬಹ್‌ರೈಚ್‌ನಲ್ಲಿದ್ದು ನೇಪಾಳಿನ ಗಡಿ ಭಾಗದಲ್ಲಿದೆ ಹಾಗೂ ಪ್ರೇಕ್ಷಣೀಯ ಸ್ಥಳ. ವಿದೇಶೀಯರಿಗೆ ಕೆಲವು ಪ್ರದೇಶಗಳಲ್ಲಿ ಪ್ರವಾಸ ಮಾಡಲು ವಿಶೇಷ ಪರವಾನಗಿ ಪತ್ರ ಪಡೆಯ ಬೇಕಾಗುತ್ತದೆ.

ಸಾರಿಗೆ ವ್ಯವಸ್ಥೆ

[ಬದಲಾಯಿಸಿ]
ವೇಗವಾದ ರಸ್ತೆ
ಚಿತ್ರ:Bridge2.JPG
ಎರಡನೆ ಯಮುನ ಬ್ರಿಡ್ಜ್

ಈ ರಾಜ್ಯದಲ್ಲಿ ಹಲವು ಮಾದರಿಯ ಸಾರಿಗೆಯ ದೊಡ್ಡ ಸಂಪರ್ಕ ಪದ್ಧತ್ತಿ ಇದೆ:- ವಾಯುಯಾನ : ಈ ರಾಜ್ಯದಲ್ಲಿ ನಾಲ್ಕು ಮುಖ್ಯ ವಿಮಾನ ನಿಲ್ದಾಣಗಳು ಹಾಗೂ 23 ವಿಮಾನ ಇಳಿಯುವ ದಾರಿಗಳಿವೆ. ಲಖನೌ, ಅಗ್ರಾ, ಕಾನಪುರ್ ಹಾಗೂ ವಾರಾಣಾಸಿ ನಗರಗಳಲ್ಲಿ ರಾಷ್ಟ್ರ ಮಟ್ಟದ ಒಳ್ಳೆಯ ಸಂಪರ್ಕದ ದೇಶೀಯ ವಿಮಾನ ನಿಲ್ದಾಣಗಳಿವೆ. ಲಖನೌ ರಾಜ್ಯದಲ್ಲಿ ಅತಿ ದೊಡ್ಡ ಹಾಗೂ ಬಹಳ ಮುಖ್ಯ ವಿಮಾನ ನಿಲ್ದಾಣ. (ಬರೇಲಿಯ ತ್ರಿಶೂಲ್ ವಾಯು-ತಳವನ್ನು ದೇಶೀಯ ವಿಮಾನ-ನಿಲ್ದಾಣವಾಗಿ ಉನ್ನತೀಕರಿಸುವ ಕಾರ್ಯ ಕೂಡ ನಡೆದಿದೆ.) ರೈಲುಮಾರ್ಗಗಳು : ಪ್ರಾಯಶಃ ರಾಜ್ಯದ ಎಲ್ಲಾ ದೊಡ್ಡ ಹಾಗೂ ಸಣ್ಣ ನಗರಗಳು ರೈಲು ಮಾರ್ಗದ ಸಂಪರ್ಕ ಹೊಂದಿದ್ದಾರೆ. ದೇಶದಲ್ಲೇ ಅತಿ ದೊಡ್ಡ ರೈಲಿನ ಸಂಪರ್ಕ ಇಲ್ಲಿದೆ; ಒಟ್ಟು ರೈಲು ಮಾರ್ಗದ ಉದ್ದ 8,546 km (2006 ಪ್ರಕಾರ) ಹಾಗೂ ಹೆಚ್ಚು ರೈಲುಮಾರ್ಗಗಳ ನಿಬಿಡತೆಯಲ್ಲಿ ಆರನೆಯ ಸ್ಥಾನ ಪಡೆದಿದೆ. ರಸ್ತೆಮಾರ್ಗಗಳು : ದೇಶದಲ್ಲೇ ಮಹಾರಾಷ್ಟ್ರದ ನಂತರ ಈ ರಾಜ್ಯದಲ್ಲಿ ಅತಿ ದೊಡ್ಡ ರಸ್ತೆ ಸಂಪರ್ಕವಿದೆ. ಇಲ್ಲಿ 31 ರಾಷ್ಟ್ರೀಯ ಹೆದ್ದಾರಿಗಳಿವೆ (NH) ಎಂಬ ಹೆಮ್ಮೆ ಇದರದು, ಇದರ ಒಟ್ಟು ಉದ್ದ 4,942 km (ಭಾರತದ ಒಟ್ಟು NHಗಳ ಉದ್ದದ 8.5%). ಭಾರತದ ರಸ್ತೆ ನಿಬಿಡತೆಯಲ್ಲಿ ಏಳನೆಯ ಸ್ಥಾನ ಪಡೆದಿದೆ, (1,027 km ಪ್ರತಿ 1,000 km,2 2002ರ ಪ್ರಕಾರ) ಹಾಗೂ ದೇಶದಲ್ಲಿನ ನಗರ ಪ್ರದೇಶದ ಅತಿ ದೊಡ್ಡ ಮೇಲ್ಪದರದ ರಸ್ತೆ ಸಂಪರ್ಕ ಇಲ್ಲಿದೆ (50,721 km, 2002ರ ಪ್ರಕಾರ). ಕಾನಪುರ್, ಲಖನೌ, ಬರೇಲಿ, ಅಲ್ಹಾಬಾದ್, ವಾರಾಣಾಸಿ, ಝಾಂಸಿ, ಗೋರಖಪುರ್, ಆಗ್ರಾ ಹಾಗೂ ಘಾಜಿಪುರ್ ನಗರಗಳು ಹಲವು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಪಡೆದಿದ್ದಾವೆ. ಈಗಾಗಲೆ ಲಖನೌ ಹಾಗೂ ಕಾನಪುರ್ ಮಧ್ಯೆ ನಗರದ ಮೋಟಾರುದಾರಿ ಇದೆ, ಇನ್ನು ಹೊಸ ನಗರದ ಮೋಟಾರುದಾರಿಗಳು ಆಗ್ರಾ ಹಾಗೂ ನೋಯಿಡಾ ಮಧ್ಯೆ ಮತ್ತು ನೋಯಿಡಾ ಹಾಗೂ ಬಾಲಿಯಾ ಮಧ್ಯೆ ಬರಲಿದೆ (ಘಾಜಿಪುರ್ ಬಳಿ). ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಕಂಪನಿ UPSRTC-ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದಲ್ಲಿನ ರಾಷ್ಟ್ರೀಯ ಮಾರ್ಗಗಳ ಮೂಲಕ ರಾಜ್ಯದ ಒಳಗೆ ಹಾಗೂ ರಾಜ್ಯದಿಂದ ರಾಜ್ಯದ ಸಾರಿಗೆಯ ಸೇವೆಯನ್ನು ಒದಗಿಸುತ್ತದೆ.

ಜಲಮಾರ್ಗಗಳು : ಗಂಗಾ ನದಿಯ ಉದ್ದೊಂದು ವಿಸ್ತರಣೆ ಅಲ್ಹಾಬಾದ್ (ಉತ್ತರ ಪ್ರದೇಶ) ಇಂದ ಹಲ್ದಿಯ (ಪಶ್ಚಿಮ ಬಂಗಾಳ)ದ ವರೆಗೆ ರಾಷ್ಟ್ರೀಯ ಜಲಮಾರ್ಗ ಎಂದು ಘಷಿಸಲಾಗಿದೆ (NW) -I ಹಾಗೂ NW-Iನ ಒಟ್ಟು ಉದ್ದದಲ್ಲಿನ 600 km ಉತ್ತರ ಪ್ರದೇಶದಲ್ಲಿದೆ. ಈ ರಾಜ್ಯದಲ್ಲಿ ದೊಡ್ಡ ಹಾಗೂ ವೈವಿದ್ಯ ಸಾರಿಗೆ ಸಂಪರ್ಕವಿದ್ದರೂ ಸಹ, ಅದರ ಪರಿಸ್ಥಿತಿ ಹಾಗೂ ಕಾರ್ಯಾನಿರ್ವಾಹಣೆಯನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವ ಅವಶ್ಯಕತೆ ಇದೆ.

ಸಂಸ್ಕೃತಿ

[ಬದಲಾಯಿಸಿ]

ವಾಸ್ತು ಶಿಲ್ಪ

[ಬದಲಾಯಿಸಿ]

ಉತ್ತರ ಪ್ರದೇಶ ಭಾಗದ ವಾಸ್ತುಶಿಲ್ಪಗಳು ಹಿಂದಿನ ಸಹಸ್ರವರ್ಷದ ವಿಸ್ತಾರವಾದ ಬದಲಾಗಿರುವ ಕಾಲವನ್ನು ದಾಟಿ ಉಳಿದಿವೆ. ಅವುಗಳಲ್ಲಿ ಅತಿ ಪುರಾತನವಾಗಿರುವುದು ಪುರಾತತ್ವ ಶಾಸ್ತ್ರ ಅಥವಾ ಪುರಾಣ ಸಂಗ್ರಹದ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತದೆ; ರಾಜ್ಯದಲ್ಲಿನ ಧಾರ್ಮಿಕ ಕ್ಷೇತ್ರಗಳನ್ನು ಪುರಾಣಗಳ ಕಥಾ ನಿರೂಪಣೆಗಳಲ್ಲಿ ಗುರುತಿಸಲು ಸಾಧ್ಯ ಮತ್ತು ಇತರೆ ಭಾರತೀಯ ಧರ್ಮಗಳ ಪವಿತ್ರ ಸಾಹಿತ್ಯಗಳು ಅತ್ಯಂತ ಪುರಾತನ ವಾಸ್ತುಶಿಲ್ಪದ ಮಹಾಸೌಧಗಳನ್ನು ಹೊಂದಿದೆ ಮತ್ತು ಅವುಗಳನ್ನು ಕಾಲಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಕಟ್ಟಲಾಗಿದೆ. ಮಧ್ಯಯುಗದ ರಾಜರು ಮತ್ತು ಚಕ್ರವರ್ತಿಗಳು ಸ್ಮಾರಕಗಳನ್ನು ಉಳಿಸಿ ಹೋಗಿದ್ದಾರೆ: ಕೋಟೆಗಳು, ಅರಮನೆಗಳು, ದೇವಸ್ಥಾನಗಳು, ಮಸೀದಿಗಳು ಮತ್ತು ಭವ್ಯ ಸಮಾಧಿಗಳು, ಅವುಗಳ ಬಾಹ್ಯ ಮತ್ತು ಅಂತರಿಕ ವೈಭವ ಆ ಕಾಲಗಳ ಸಮೃದ್ಧಿಯನ್ನು ನೆನೆಪಿಸುತ್ತದೆ. ಆಡಳಿತ, ನ್ಯಾಯ ಇಲಾಖೆ, ಆಸ್ಪತ್ರೆಗಳು, ಬ್ಯಾಂಕ್‍ಗಳು, ಅಂಚೆ ಸೇವೆಗಳು, ಪೋಲಿಸ್, ರೈಲ್ವೇ ಇತ್ಯಾದಿಗಳಿಗಾಗಿ ಕಟ್ಟಿದ ಬ್ರಿಟಿಷ್ ವಸಾಹತಿಗ ಕಟ್ಟಡಗಳನ್ನು ಹೆಚ್ಚಿನ ನಗರಗಳಲ್ಲಿ ಇನ್ನೂ ಸಹ ಕಾಣಬಹುದು; ಅವರ ವಾಸ್ತುಶಿಲ್ಪ ಹೆಚ್ಚಿನ ನಿದರ್ಶನಗಳಲ್ಲಿ ಕೇವಲ ಕ್ರಿಯಾತ್ಮಕವಾಗಿವೆ.

ಕಲೆ ಮತ್ತು ಕರಕೌಶಲ

[ಬದಲಾಯಿಸಿ]

ಉತ್ತರ ಪ್ರದೇಶವು ಪಿತ್ರಾರ್ಜಿತವಾಗಿ ಬಂದಂತಹ ಅದರ ಶ್ರೇಷ್ಠ ಕಲೆ ಮತ್ತು ಕರಕೌಶಲ್ಯಗಳಿಗೆ ಪ್ರಖ್ಯಾತಿಯನ್ನುಗಳಿಸಿದೆ. ಹಲವು ಪ್ರಸಿಧ್ಧ ಕೇಂದ್ರಗಳು ಕೆಳಕಂಡತಿವೆ: ಬರೇಲಿಯು ಅದರ ಝರೀ ಕೆಲಸ (ಒಂದು ವಿಧದ ದಾರದ ಅಲಂಕಾರ),ಸುರ್ಮ(ಕೋಲ್) ಮತ್ತು ಜುಮುಕಿಗಳಿಗೆ ಹೆಮ್ಮೆಪಡಬಹುದಾಗಿದೆ.

ಫಿರೋಜಾಬಾದ್, ಬಳೆಗಳ ನಗರ, ಹಾಗೆಯೇ ಇದು ಹಲವು ಬಗೆಯ ಗಾಜಿನ ಉಪಕರಣಗಳ ಕರಕೌಶಲ್ಯಗಳಿಗೆ ಮುಖ್ಯ ಸ್ಥಳವಾಗಿದೆ. ಇಲ್ಲಿನ ಕಾರ್ಖಾನೆಗಳಲ್ಲಿ ಮಾಡಿದ ಗಾಜಿನಲ್ಲಿ ಕೃತಿಗಳ ಉತ್ಪಾದನೆಯು ಆಶ್ಚರ್ಯ ಪಡುವಂತಹುದಾಗಿದ್ದು, ಇವುಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲಾಗುತ್ತಿದೆ.

ಕನೋಜ್ ಪೂರ್ವದಿಂದಲೂ ಸುಗಂಧ ದ್ರವ್ಯ, ಸುವಾಸನೆ,ಮತ್ತು ರೋಸ್ ವಾಟರ್ ಹಾಗೂ ಪರಂಪರೆಯ ತಂಬಾಕುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ.

ಕಾನ್‌ಪುರ್ ಇದರ ಚರ್ಮದ ಕರ ಕುಶಲತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ;ಇಲ್ಲಿ ತಯಾರಿಸಿದ ಚಪ್ಪಲಿಗಳು ಹಾಗೂ ಇನ್ನಿತರ ಚರ್ಮದ ವಸ್ತುಗಳನ್ನು ಹೆಚ್ಚಾಗಿ ಭಾರತದ ಮಾರುಕಟ್ಟೆ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಖುರ್ಜಾ ಇದು ತನ್ನ ಸೆರಾಮಿಕ್ ಕುಡಿಕೆಗಳಿಗೆ ಹೆಸರುವಾಸಿಯಾಗಿದೆ, ಸಂಪೂರ್ಣ ರಾಜ್ಯವು ಇದರ ಮಡಿಕೆಗಳಿಗೆ ಭಾರತವೊಂದೇ ಅಲ್ಲ ಪ್ರಪಂಚದಾದ್ಯಂತ ಕೂಡ ಹೆಸರುವಾಸಿಯಾಗಿದೆ.

ರಾಜಧಾನಿ ಲಕ್ನೋ ಇದರ ಬಟ್ಟೆಗಳ ಕುಸುರಿ ಕೆಲಸ ಹಾಗೂ ರೇಷ್ಮೆ ಮತ್ತು ಹತ್ತಿ ಉಡುಪುಗಳ ಮೇಲಿನ ಕಸೂತಿ (ಚಿಕನ್) ಕೆಲಸಕ್ಕೆ ಹೆಗ್ಗಳಿಕೆಗೆ ಅರ್ಹವಾಗಿದೆ. ಭಾದೋಹಿಯು ರತ್ನಗಂಬಳಿಗೆ ಹೆಸರುವಾಸಿಯಾಗಿದೆ ಹಾಗೂ ಪಕ್ಕದಲ್ಲಿರುವ ಡಾಲರ್ ನಗರವೆಂದೂ ಸಹ ಹೆಸರುವಾಸಿಯಾಗಿದೆ ಇದು ರಾಜ್ಯದ ಅತ್ಯಂತ ಆದಾಯವನ್ನು ಉಂಟು ಮಾಡುವಂತಹ ಜಿಲ್ಲೆಯಾಗಿದೆ. ಮುರಾದಾಬಾದ್ ಲೋಹದ ಸರಕು ವಿಶೇಷವಾಗಿ ಮನುಷ್ಯ ಕೃತಿಯ ಹಿತ್ತಳೆ ಸಾಮಾನುಗಳಿಗೆ ಹೆಸರುವಾಸಿಯಾಗಿದೆ.

ಪಿಲಿಭಿಟ್ ತನ್ನ ಮರದ-ಕೊಳಲು ಹಾಗೂ ಮರದಲ್ಲಿ ಮಾಡಿದ ಕಾಲಿನ ಚಪ್ಪಲಿಗಳಿಗೆ ಹೆಸರುವಾಸಿಯಾಗಿದೆ(ಖಾದಾನ್). ಇಂತಹ ಕೊಳಲುಗಳನ್ನು ಯುರೋಪ್,ಅಮೇರಿಕಾ ಮತ್ತು ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಸಹರನ್‌ಪುರ್ ದಲ್ಲಿ ತಯಾರಿಸುವಂತಹ ಮರದ ಕೆತ್ತನೆಯ ವಸ್ತುಗಳು ಹೊರದೇಶದಲ್ಲಿ ಮತ್ತು ಭಾರತದೆಲ್ಲೆಡೆ ಹೆಸರುವಾಸಿಯಾಗಿವೆ. ವಾರಣಾಸಿಯು ತನ್ನ ಬನಾರಸ್ ಸೀರೆಗಳು ಮತ್ತು ರೇಷ್ಮೆಗೆ ಹೆಸರುವಾಸಿಯಾಗಿದೆ. ಒಂದು "ಬನಾರಸ್ ಸೀರೆ" ಈ ರಾಜ್ಯದ ಯಾವುದೇ ಮದುವೆಗೆ ಅವಶ್ಯಕವಾದ ಭಾಗವಾಗಿದೆ.

ಭಾಷೆ ಮತ್ತು ಸಾಹಿತ್ಯ

[ಬದಲಾಯಿಸಿ]

ಉತ್ತರ ಪ್ರದೇಶ ರಾಜ್ಯದ ಆಡಳಿತ ಭಾಷೆಯು ಹಿಂದಿ ಆಗಿರುವುದರಿಂದ, ಭಾರತದಲ್ಲಿ ಉತ್ತರ ಪ್ರದೇಶವು ಹಿಂದಿ ಭಾಷೆಯ ಕೇಂದ್ರ ಭಾಗವಾಗಿ ಪದೇ ಪದೇ ಉಲ್ಲೇಖಿಸಲ್ಪಡುತ್ತದೆ.[೩೭] 1951ರಲ್ಲಿ ಉತ್ತರ ಪ್ರದೇಶ ರಾಜ್ಯ ಭಾಷಾ ಕಾನೂನು ಕಾಯಿದೆಯ ಪ್ರಕಾರ ಹಿಂದಿ[೩೮] ಮತ್ತು ಉರ್ದು ಇವು ರಾಜ್ಯದ ಆಡಳಿತ ಭಾಷೆಯಾಗಿ ಸ್ಥಾಪಿತಗೊಂಡು ಇದೇ ವಿಷಯವು 1989ರಲ್ಲಿ ತಿದ್ದುಪಡಿ ಹೊಂದಿತು, ಜೊತೆಗೆ ರಾಜ್ಯದ ಸಾಮಾನ್ಯ ಜನತೆ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ರಾಜ್ಯದ ಮೂಲ ಭಾಷೆಗಳು ಹಿಂದಿ ಭಾಷೆಯ ಉಪ ಭಾಷೆಗಳಾಗಿ ಪರಿಗಣಿಸಲ್ಪಟ್ಟವು. ಭಾಷೆಗಳಿಗೆ ಸಂಬಂಧಪಟ್ಟಂತೆ ಹಿಂದಿ ಭಾಷೆಯು, ಉತ್ತರ ಪ್ರದೇಶ ರಾಜ್ಯದ ಹಿಂದೂ ಆರ್ಯ ಭಾಷೆಗಳ ಪ್ರದೇಶಗಳಾದ ಮಧ್ಯಭಾಗ, ಪೂರ್ವ ಮಧ್ಯಭಾಗ, ಪೂರ್ವ ವಲಯಗಳ ಮೂಲಕ ಹರಡಿದ್ದು ಅಲ್ಲಿನ ಪ್ರಧಾನ ಮೂಲ ಭಾಷೆಗಳಾದ ಭೊಜಪುರಿ, ಅವಧಿ, ಬುಂದೇಲಿ, ಬ್ರಜ್ ಭಾಷಾ, ಕನ್ನೌಜಿ ಮತ್ತು ಒಂದು ಪ್ರತ್ಯೇಕ ವರ್ಗದ ಭಾಷೆಯಾದ ಖರಿಬೋಲಿ ಇವುಗಳ ತಳಹದಿಯ ಮೇಲೆ ಉತ್ತಮ ಗುಣ ಮಟ್ಟದ ಹಿಂದಿ ಮತ್ತು ಉರ್ದು ಭಾಷೆಗಳು ರೂಪುಗೊಂಡಿವೆ. ರಾಜ್ಯದ ನೈಋತ್ಯ ಭಾಗದ ಅಂಚುಗಳಲ್ಲಿ ಮಾತನಾಡಲು ಬಾಘೆಲಿ ಭಾಷೆಯನ್ನು ಬಳಸಲಾಗುತ್ತದೆ.[೩೯] ರಾಜ್ಯ ಸರಕಾರವು ಸಾಂಸ್ಕೃತಿಕ ಉತ್ಸವಗಳ ಸಂದರ್ಭಗಳಲ್ಲಿ ಇಲ್ಲಿಯ ಪ್ರಾಂತ ಭಾಷೆಗಳನ್ನು ಪ್ರೋತ್ಸಾಹಿಸಿ ಅವುಗಳ ಬಗ್ಗೆ ತಿಳಿವಳಿಕೆನೀಡಲು ಪ್ರಯತ್ನಿಸುತ್ತದೆ, ಆದರೆ ಇದು ನಗಣ್ಯವಾಗಿದೆ. ಇದರ ಹೊರತಾಗಿ ಮಧ್ಯಕಾಲೀನ ಯುಗದ 2 ಮುಖ್ಯ ಭಾಷೆಗಳಾದ ಬ್ರಜ್ ಭಾಷಾ ಮತ್ತು ಅವಧಿ ಇವುಗಳನ್ನು ಹಿಂದಿ ಭಾಷೆಯ ಅಡಿಯಲ್ಲಿ ಸೇರಿಸಿದ ಹಾಗೆ ಪರಿಗಣಿಸಲಾಗುತ್ತಿದೆ. ಒಂದು ಕಾಲದಲ್ಲಿ ಈ ಎರಡು ಪ್ರಾಂತ ಭಾಷೆಗಳು ಆ ಪ್ರದೇಶದ ಸಾಹಿತ್ಯದ ಮುಖ್ಯ ಮಾಧ್ಯಮಗಳಾಗಿದ್ದವು ಆದರೆ ಈ ಭಾಷೆಗಳ ಅಥವಾ ಇತರ ಪ್ರಾಂತ ಭಾಷೆಗಳ ಪ್ರಗತಿ ಗಣನೀಯವಾಗಿಲ್ಲ. ಸ್ಥಳೀಯ ಭಾಷೆಗಳನ್ನು ಮಾತನಾಡುವವರ ಅಂದಾಜು ಮಾಡುವುದು ಕಷ್ಟಕರ. ಏಕೆಂದರೆ ಹಿಂದಿ ಭಾಷೆಯು ಸರ್ಕಾರ ಮತ್ತು ಶಿಕ್ಶಣ ವ್ಯವಸ್ಥೆಯಲ್ಲಿ ಬಳಕೆಯಾಗುವ ಭಾಷೆಯಾಗಿದ್ದು ನಗರ ಪ್ರದೇಶದ ವಿಧ್ಯಾಭ್ಯಾಸ ಹೊಂದಿದ ಹೆಚ್ಚಿನ ಸಂಖ್ಯೆಯ ಜನರು ಹಿಂದಿಯನ್ನು ತಮ್ಮ ಮಾತೃಭಾಷೆ ಎಂದು ಪರಿಗಣಿಸುತ್ತಾರೆ. ಅದೇ ಹಳ್ಳಿಗಳಲ್ಲಿನ ಜನರು ಭಾಷಾ ಜ್ಞಾನದ ಕೊರತೆಯಿಂದಾಗಿ ಹಿಂದಿ ಭಾಷೆಯನ್ನು ತಮ್ಮ ಭಾಷೆಯ ಮತ್ತು ಒಟ್ಟು ವರ್ಗದ ವಿಶಿಷ್ಟತೆಯನ್ನು ಸೂಚಿಸುವುದಕ್ಕಾಗಿ ಬಳಸುತ್ತಾರೆ. ಇತ್ತೀಚೆಗೆ ಭೊಜಪುರಿ ಭಾಷೆಯು, ಭಾಷಾಧ್ಯಯನದ ಸಮರ್ಥನೆಯನ್ನು ಕಂಡಿತು ಮತ್ತು ಅದೇ ವೇಳೆ ಬುಂದೆಲಿಯ ಬಗ್ಗೆ ಅಂತಹ ಕ್ರಿಯಾಚಟುವಟಿಕೆಯೇನೂ ನಡೆಯಲಿಲ್ಲ.

ಮಾಧ್ಯಮ

[ಬದಲಾಯಿಸಿ]

ಉತ್ತರ ಪ್ರದೇಶವು ರಾಷ್ಟ್ರೀಯ ಮಾಧ್ಯಮ ವ್ಯವಸ್ಥೆಯಲ್ಲಿ ಉತ್ತಮವಾಗಿ ಒಂದುಗೂಡಿದೆ. ಬಾನುಲಿಯ ಪ್ರಸಾರ :- ಬಾನುಲಿಯ ಪ್ರಸಾರವು 1936ರಲ್ಲಿ ಆಲ್ ಇಂಡಿಯ ರೇಡಿಯೊ ಮುಖಾಂತರ ಪ್ರಾರಂಭವಾಯಿತು. ( AIR ಎಂದು ಸಂಕ್ಷಿಪ್ತಗೊಳಿಸಲಾಗಿದೆ ) ಈಗ ಅಧಿಕೃತವಾಗಿ ಆಕಾಶವಾಣಿ[೪೦] ಎಂದು ಗುರುತಿಸಲ್ಪಡುತ್ತಿದೆ ಇಂದು ಇದು ದೂರದರ್ಶನದ ಸಹೋದರಿ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ, ರಾಷ್ತ್ರೀಯ ದೂರದರ್ಶನ ಪ್ರಸಾರ ಮತ್ತು ಆಲ್ ಇಂಡಿಯ ರೇಡಿಯೊ ಇವೆರಡೂ ಪ್ರಸಾರ ಭಾರತಿಯ ಶಾಖೆಗಳು. (ಭಾರತೀಯ ಪ್ರಸರಣ ನಿಗಮ) ಭಾರತ ಸರ್ಕಾರದ, ಸಚಿವ ಸಂಪುಟದ ಮಾಹಿತಿ ಮತ್ತು ಪ್ರಸರಣ ಖಾತೆಯ ಸ್ವಾಯುತ್ತ ಅಧಿಕಾರದ ನಿಗಮವಾಗಿದೆ. ಬೇರೆ ಬೇರೆ ಭಾಷೆಗಳ ಹೇಳಿಕೆ ರೂಪದ ಪ್ರಸಾರವು ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕ ಪ್ರಸಾರವಾಗುತ್ತದೆ. ದೂರದರ್ಶನ:- ಭಾರತದಲ್ಲಿ ದೂರದರ್ಶನದ ಕಾರ್ಯಕ್ರಮ ಪ್ರಸಾರವು ೧1959ರಲ್ಲಿ ಪರೀಕ್ಷೆಯ ಜೊತೆಗೆ ಶಿಕ್ಷಣದ ಪ್ರಸಾರ ಕಾರ್ಯಕ್ರಮದೊಂದಿಗೆ ನವ ದೆಹಲಿಯಲ್ಲಿ ಪ್ರಾರಂಭವಾಯಿತು. ದೂರದರ್ಶನವು ಕಿರುತೆರೆಯಲ್ಲಿ ಕಪ್ಪು ಬಿಳುಪಿನ ಕಾರ್ಯಕ್ರಮಗಳನ್ನು 1970ರಲ್ಲಿ ಪ್ರಾರಂಭಿಸಿತು ಮತ್ತು 1982ರಲ್ಲಿ ಬಣ್ಣದ ಕಿರುತೆರೆಯಾಗಿ[೪೧] ರೂಪಾಂತರಗೊಂಡಿತು. ಇಂದು ಹಲವಾರು ಖಾಸಗಿ ದೂರದರ್ಶನ ಕೇಂದ್ರಗಳು ರಾಷ್ಟೀಯ ಮಟ್ಟದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ ಮತ್ತು ಮಾಧ್ಯಮದ ಸಕ್ರಿಯ ಹಾಗೂ ಪ್ರಭಾವಶಾಲಿ ಅಂಗಗಳಾಗಿವೆ. ದೂರದರ್ಶನದ ಕಾರ್ಯಕ್ರಮಗಳು ಎಲ್ಲೆಡೆ ತಲುಪುವಲ್ಲಿ, ಉಪಗ್ರಹದ ಮೂಲಕ ಪ್ರಸಾರವು ಕ್ರಾಂತಿಕಾರಿ ಬೆಳವಣಿಗೆಯನ್ನು ತಂದಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪ್ರಮುಖ ಕ್ರಿಕೆಟ್ ಪಂದ್ಯಗಳು ಅತಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವುದಲ್ಲದೆ ರಸ್ತೆ ಬದಿಯಲ್ಲಿ ಇರಿಸಿದ ದೂರದರ್ಶನವು ಕ್ರಿಕೆಟ್ ಪ್ರೇಮಿಗಳ ಜನಸ್ತೋಮವನ್ನು ಆಕರ್ಷಿಸುತ್ತದೆ. ವೃತ್ತ ಪತ್ರಿಕೆ ಮತ್ತು ನಿಯತಕಾಲಿಕ ಮುಂತಾದವುಗಳು. ಒಂದು ನಿರ್ದಿಷ್ಟ ಸಂಖ್ಯೆಯ ನಿಯತಕಾಲಿಕಗಳು ಹಿಂದಿ, ಆಂಗ್ಲ ಮತ್ತು ಉರ್ದುವಿನಲ್ಲಿ ಪ್ರಕಾಶಿತಗೊಂಡಿವೆ ಪತ್ರಿಕೋದ್ಯಮದ ಬೆಳವಣಿಗೆಯು ಇಲ್ಲಿ ವಾಸಿಸಲು ಆರಂಭಿಸಿದ ಬ್ರಿಟನ್ ದೇಶದವರ ಕಾರಣದಿಂದ ಉಂಟಾದಷ್ಟೇ ಭಾರತೀಯ ಸ್ವಾತಂತ್ರ್ಯ ಚಳುವಳಿಯಿಂದಾಗಿ ಕೂಡ ಆಯಿತು ಮತ್ತು ಇತರ ವಾರ್ತೆಗಳ ಹಾಗೂ ಸಾಮಾಜಿಕ-ಧಾರ್ಮಿಕ ಸಂಸ್ಕರಣಗಳ ಪ್ರಚಾರ ಮಾಡಲು ಕೂಡ ಈ ಬೆಳವಣಿಗೆ ಅವಶ್ಯಕವಾಗಿತ್ತು. ದ ಪೈಯೋನಿಯರ್ ಪತ್ರಿಕೆಯನ್ನು ಅಲ್ಹಾಬಾದ್‌ನಲ್ಲಿ 1865ನಲ್ಲಿ ಜೋರ್ಜ್ ಆಲೆನ್ ಎಂಬ ಆಂಗ್ಲ ವ್ಯಕ್ತಿ ಸ್ಥಾಪಿಸಿದನು.[೪೨] 1865ಯಿಂದ 1869ರ ವರಗೆ ಇದು ವಾರದಲ್ಲಿ ಮೂರು ಸಲ ಪ್ರಕಟವಾಗುತಿತ್ತು ಮತ್ತು ನಂತರ ದೈನಿಕವಾಗಿ ಪ್ರಕಟಗೊಳ್ಳಲಾರಂಭಿಸಿತು. 1866ರಲ್ಲಿ ಪೈಯೋನಿಯರ್ ಮೇಲ್ ಎಂಬ ಬಹುತೇಕವಾಗಿ ಜಾಹಿರಾತುಗಳನ್ನುಳ್ಳ ಒಂದು ಪುರವಣಿಯನ್ನು ಇದಕ್ಕೆ ಸೇರಿಸಲಾಗಿತ್ತು. ಅಲ್ಹಾಬಾದ್‌ನಿಂದಲೇ ದ ನ್ಯಾಶನಲ್ ಹೆರಾಲ್ಡ್ ಎಂಬ ಒಂದು ರಾಷ್ಟ್ರೀಯತಾವಾದಿ ವಾರ್ತಾಪತ್ರಿಕೆ ಪ್ರಕಾಶನಗೊಳ್ಳಲು ಆರಂಭಿಸಿತು, ನೆಹರುರವರ ಹಾಗೂ ಸಂಪಾದಕರಾಗಿ M.C. ರಾವು ಇವರ ಪ್ರೋತ್ಸಾಹದೊಂದಿಗೆ ಬ್ರಿಟಿಷರ ಕಾಲದಲ್ಲಿ ಆರಂಭವಾಯಿತು. ಸಿದ್ದಕಿ ಎಂಬ ಉರ್ದು ಸಾಪ್ತಾಹಿಕ ಇದೆ ಕಾಲದಲ್ಲಿ ಹೆಚ್ಚು ಗೌರವಿಸಲಾದ ಬುದ್ಧಿಜೀವಿ ಮೌಲಾನ ಅಬ್ದುಲ್ ಮಾಜಿದ್ ದರ್ಯಾಬಾದಿ ಆರಂಭಿಸಿದರು, ಇದರ ಉದ್ದೇಶ ಹಿಂದೂ-ಇಸ್ಲಮ್ ಸಮಾಜವನ್ನು ಸಂಸ್ಕರಣಿಸುವುದಾಗಿತ್ತು. ಪ್ರಸ್ತುತ, ಎಲ್ಲಾ ಪ್ರಮುಖ ರಾಷ್ಟ್ರೀಯ ಮಟ್ಟದ ದೈನಿಕಗಳೆ ತಮ್ಮ ’ನಗರದ ಮುದ್ರಣಗಳನ್ನ’ ರಾಜ್ಯದ ಹಲವು ಪ್ರಮುಖ ನಗರಗಳಿಂದಲೇ ಪ್ರಕಾಶಿಸಲಾಗುತ್ತದೆ. ಈ ರಾಜ್ಯದ ತಮ್ಮ ’ಸ್ಥಳಿಯ’ ಪ್ರಕಾಶನಗಳು - ದೈನಿಕಗಳು/ಸಾಪ್ತಾಹಿಕಗಳು/ಮಾಸಿಕಗಳು ಹಲವಾರು ಇದ್ದು ಪ್ರಾಯಶಃ ಎಲ್ಲಾ ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿವೆ. ಕೆಲವು ಹಿಂದಿ ಭಾಷೆಯ ದೈನಿಕಗಳು, ಉದಾ. ಅಮರ ಉಜಾಲ ಹಾಗೂ ರಾಜಕೀಯದ ಬಲಪಂಥದ ದೈನಿಕ ಜಾಗರಣ್ ವ್ಯಾಪಕ ಪ್ರಸಾರ ಹೊಂದಿದ್ದು, ಅವು ಸ್ಥಳಿಯ ಮುದ್ರಣಗಳನ್ನು ಸಹಾ ಪ್ರಮುಖ ನಗರಗಳಲ್ಲಿ ಹೊಂದಿದ್ದವು. ನ್ಯಾಷನಲ್ ಹೆರಾಲ್ಡ್ ಈಗ ಉರ್ದು ಆವೃತಿಯನ್ನು ಪ್ರಕಾಶಿಸುತ್ತದೆ. ಇನ್ನು ಕೆಳ ಮಟ್ಟದಲ್ಲಿ, ಸ್ಥಳಿಯವಾಗಿ ಪ್ರಕಾಶಿತವಾದ ವಾರ್ತಾ ಪತ್ರಿಕೆಗಳು ಮತ್ತು ಸಾಹಿತ್ಯಕ ಸಾಪ್ತಾಹಿಕಗಳು ಹಾಗೂ ಮಾಸಿಕಗಳು ಅತಿ ಹೆಚ್ಚು ಸಂಖ್ಯೆಗಳಲ್ಲಿವೆ. ಶ್ರವ್ಯ-ದೃಷ್ಟಿಗೋಚರ ಉತ್ಪನ್ನಗಳ ನಿರ್ಮಾಣ : ಬೆಳ್ಳಿ ತೆರೆಗೆ ಚಲನಚಿತ್ರದ ಬಾಲಿವುಡ್‌ ಮಟ್ಟದ ಉತ್ಪನ್ನ ಗಳು ಅಥವಾ ಉತ್ತಮ ದರ್ಜೆಯ ಮಾಹಿತಿಯುಳ್ಳ ಚಿಕ್ಕ ಸಾಕ್ಷ್ಯಚಿತ್ರಗಳು ಹೆಚ್ಚಾಗಿದ್ದರೂ ಸಹ ಉತ್ತರ ಪ್ರದೇಶದಲ್ಲಿ ಇವುಗಳ ಬೆಳವಣಿಗೆ ಇಲ್ಲ. ಹೇಗಾದರೂ, ಈ ರಾಜ್ಯದಿಮ್ದ ಕಲಾಕಾರರು ಹಾಗೂ ಬರಹಗಾರರು ಸತತವಾಗಿ ಭಾರತೀಯ ಚಲನಚಿತ್ರ ಉದ್ಯಮ ಕೇಂದ್ರಗಳಲ್ಲಿ ತಮ್ಮೆ ಪ್ರತಿಭೆಯ ನೆರವನ್ನು ನೀಡುತ್ತಲೇ ಬಂದಿದ್ದಾರೆ, ಗೀತೆ ಹಾಗೂ ಕಥೆ ಬರಹಗಾರರಾಗಿ, ರಚನೆಕಾರರು ಹಾಗೂ ಸಂಗೀತಗಾರರಾಗಿ, ಗೀತಕಾರರಾಗಿ, ನಟರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಲೇ ಇರುತ್ತಾರೆ.

ನೃತ್ಯ ಮತ್ತು ಸಂಗೀತ

[ಬದಲಾಯಿಸಿ]

ಅತ್ಯಂತ ಪುರಾತನವಾದ ನೃತ್ಯ ಮತ್ತು ಸಂಗೀತಗಳಿಗೆ ಈ ರಾಜ್ಯವು ತಾಯಿ ನಾಡಾಗಿದೆ. ಆಗಿನ ಗುಪ್ತರುಮತ್ತು ಹರ್ಷವರ್ಧನರ ಕಾಲದಲ್ಲಿ, ಉತ್ತರಪ್ರದೇಶವು ಸಂಗೀತದ ನವೀನತೆಗೆ ಪ್ರಮುಖ ಕೇಂದ್ರವಾಗಿತ್ತು. ಹಿಂದೂಸ್ತಾನಿ ಶ್ರೇಷ್ಠ ಗಾಯನದಲ್ಲಿ ವೀರಾಗ್ರೇಸರಾಗಿದ್ದ ಸ್ವಾಮಿ ಹರಿದಾಸರು ಒಬ್ಬ ಪ್ರಖ್ಯಾತ ಸಂತ-ಸಂಗೀತಗಾರರು. ಮೊಘಲ್ ಸಾಮ್ರಾಜ್ಯದ ಅಕ್ಬರನ ಆಸ್ಥಾನದಲ್ಲಿ ,ಸ್ವಾಮಿ ಹರಿದಾಸರ ಶಿಷ್ಯನಾಗಿದ್ದ ತಾನ್‌ಸೇನನು ಪ್ರಖ್ಯಾತ ಸಂಗೀತಗಾರನಾಗಿದ್ದನು. ತಾನ್‌ಸೇನನು ಹಾಡುತ್ತಿದ್ದ ರಾಗಗಳು ಅಧಿಕ ಸಾಮರ್ಥ್ಯವನ್ನು ಹೊಂದಿವೆ ಎಂದು ನಂಬಲಾಗಿತ್ತು. ಯಾವಾಗ ಆತ ಅವುಗಳನ್ನು ಹಾಡುತ್ತಿದ್ದ, ಆಗ ಮಳೆ ಬರುತ್ತಿತ್ತು ಅಥವಾ ದೀಪಗಳು ಬೆಳಗುತ್ತಿದ್ದವು. ಕಥಕ್ ಒಂದು ನಮೂನೆಯ ಶ್ರೇಷ್ಠ ನೃತ್ಯ, ಇದನ್ನು ಸಂಪೂರ್ಣ ದೇಹದೊಂದಿಗೆ ಪಾದ ಮತ್ತು ತೋಳುಗಳನ್ನು ಸಮಸ್ಥಾನಗಳಲ್ಲಿ ಚಲಿಸುವರು. ಉತ್ತರ ಪ್ರದೇಶದಲ್ಲಿ ಇದು ಬೆಳೆದು ಅಭಿವೃದ್ಧಿಯನ್ನು ಹೊಂದಿದೆ. ಕೊನೆಯ ಅವಧ್‌ನ ನವಾಬನಾದ ವಾಜೀದ್ ಆಲಿ ಷಾ ಈ ಕಲೆಯ ಒಬ್ಬ ಪ್ರಖ್ಯಾತ ಆಶ್ರಯದಾತನು ಹಾಗೂ ಕಥಕ್ ನೃತ್ಯದಲ್ಲಿ ಭಾವೋದ್ದೀಪ್ತ ಪಟುವಾಗಿದ್ದನು. ಇಂದು,ಈ ನೃತ್ಯ ಮಾದರಿಯ ಲಕ್ನೋ ಘರಾನಾ ಹಾಗೂ ಬನಾರಸ್ ಘರಾನಾ ಎಂಬ ಹೆಸರು ಎರಡು ಪ್ರಖ್ಯಾತ ಶಾಲೆಗಳಿಗೆ ರಾಜ್ಯವು ತವರಾಗಿವೆ. ಇಂದಿನ ಆಧುನಿಕ ಕಾಲದಲ್ಲಿ, ಉತ್ತರ ಪ್ರದೇಶವು ಸಂಗೀತ ಇತಿಹಾಸಕಾರರಾದ ಅನೂಪ್ ಜಲೋಟಾ, ಬಾಬಾ ಸೈಗಲ್, ಗಿರಿಜಾ ದೇವಿ, ಗೋಪಾಲ್ ಶಂಕರ್ ಮಿಶ್ರ, ಹರಿ ಪ್ರಸಾದ್ ಚೌರಾಸಿಯಾ, ಕಿಶನ್ ಮಾಹಾರಾಜ್, ನೌಷಾಧ್ ಆಲಿ, ಪಂಡಿತ್ ರವಿಶಂಕರ್, ಶುಭಾ ಮುದ್‌ಗಲ್, ಸಿದ್ದೇಶ್ವರಿ ದೇವಿ, ತಲತ್ ಮಹಾಮೂದ್, ಉಸ್ತಾದ್ ಬಿಸ್‌ಮಿಲ್ಹಾ ಖಾನ್ ಮುಂತಾದವರನ್ನು ಜಗತ್ತಿಗೆ ಕೊಟ್ಟಿದೆ. ಐತಿಹಾಸಿಕ ಗಝಲ್ ಗಾಯಕರಾದ ಬೇಗಮ್ ಆಖ್ತರ್‌ರವರು ಉತ್ತರ ಪ್ರದೇಶಕ್ಕೆ ಸೇರಿದವರಾಗಿವರು. ಗಝಲ್ ಗಾಯನದ ಪ್ರಕಾರವನ್ನು ಅವರು ಅಚ್ಚರಿಪಡಿಸುವಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು. " ಏ ಮೊಹಬತ್ ತೇರೆ ಅಂಜಾಮ್ ಪೆ ರೋನಾ ಆಯಾ" ಎಂಬ ಇವರ ಒಂದು ಗಾಯನವು ಎಲ್ಲಾ ಕಾಲದಲ್ಲಿಯೂ ಕೇಳುವಂತಹ ಅತ್ಯುತ್ತಮ ಗಾಯನವಾಗಿದೆ. ಹಾಗೂ ಇದು, ಆಕಸ್ಮಿಕವಾಗಿ, ಬ್ರಿಟೀಷ್ ಪಾಪ್ ಇತಿಹಾಸದ ಕ್ಲಿಫ್ ರಿಚರ್ಡ್‌ನ ಹುಟ್ಟಿದ ಸ್ಥಳವಾಗಿದೆ. ಪ್ರಖ್ಯಾತ ಗಾಯಕ ಪಂಡಿತ್ ವಿಷ್ಣು ನಾರಯಣ ಭಟ್‌ಕಾಂಡೆಯವರ ಹೆಸರನ್ನು ಲಕ್ನೋದಲ್ಲಿರುವ ಭಟ್‌ಕಾಂಡೆ ಸಂಗೀತ ವಿಶ್ವವಿದ್ಯಾಲಯಕ್ಕೆ ಇಡಲಾಯಿತು. ಪ್ರೀತಿಯನ್ನು ಪೂಜಿಸುವ ಯಾವುದೇ ರಾಧ ಮತ್ತು ಶ್ರೀ ಕೃಷ್ಣರ ಆಚರಣೆಗಳಲ್ಲಿ ರಾಸಿಯಾ (ಬ್ರಿಜ್‌ನಲ್ಲಿ ತಿಳಿದ ಮತ್ತು ವಿಶೇಷವಾಗಿ ಪ್ರಖ್ಯಾತಿಯಾದ) ಎಂಬ ಹಾಡುಗಳು ಈ ಪ್ರದೇಶದ ಜಾನಪದ ಸಂಸ್ಕೃತಿಯಲ್ಲಿ ಸೇರಿಹೋಗಿವೆ. ಇಂತಹ ಹಾಡುಗಳನ್ನು ಬಂಬ್ ಎಂದು ತಿಳಿದಿರುವ ದೊಡ್ಡ ಮೃದಂಗಗಳ ಸಂಗಡದೊಂದಿಗೆ ಮತ್ತು ಹಲವು ಹಬ್ಬಗಳಲ್ಲಿ ಪ್ರದರ್ಶಿಸುವರು. ಇತರ ಜಾನಪದ ನೃತ್ಯಗಳು ಅಠವಾ ಜಾನಪದ ರಂಗಭೂಮಿ ವಿಧಗಳು ಸೇರಿಕೊಂಡಿವೆ:

ಖುಷಿನಗರ್‌ನ ಫಝೀಲಾನಗರ್‌ದಲ್ಲಿರುವ ಜೋಗಿಯಾ ಜಾನುಬಿ ಪಟ್ಟಿಯ ಲೋಕ್‌ರಂಗ್ ಸಾಂಸ್ಕೃತಿಕ ಸಮಿತಿಯು ಅತ್ಯಂತ ಪ್ರಸಿದ್ಧವಾದ ಸಂಘಟನೆಯಾಗಿದ್ದು, ಇದು ಜನಪದ ಗೀತೆಗಳು, ಜನಪದ ಸಂಗೀತಗಾರರು ಮತ್ತು ಜನಪದ ಸಂಸ್ಕೃತಿಯ ಕುರಿತು ಸಂಶೋಧನೆ ಮಾಡುತ್ತಿದೆ. ಪ್ರತೀವರ್ಷ ಮೇ ತಿಂಗಳಿನಲ್ಲಿ ಈ ಸಮಿತಿಯು "ಲೋಕ್‌ರಂಗ್" ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಇದರಲ್ಲಿ ಸುಮಾರು 150ಕ್ಕಿಂತ ಹೆಚ್ಚು ಜನ ಕಲಾವಿದರು ಮತ್ತು ಲೇಖಕರು ಭಾಗವಹಿಸುತ್ತಾರೆ.

ಆಹಾರ ಪದ್ಧತಿ

[ಬದಲಾಯಿಸಿ]

ಉತ್ತರ ಪ್ರದೇಶ ಅತ್ಯುತ್ತಮ ಸಸ್ಯಾಹಾರ ಮತ್ತು ಮಾಂಸಾಹಾರ ಆಹಾರವನ್ನು ತಯಾರಿಸುವಲ್ಲಿ ಶ್ರೀಮಂತ ಆಚಾರವನ್ನು ಹೊಂದಿದೆ. ಸಿಹಿತಿಂಡಿಗಳು ಸಾಂಪ್ರದಾಯಿಕ ವಿಶೇಷ ಸಂದರ್ಭಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಕ್ರಮಬದ್ಧವಾದ ಸಸ್ಯಾಹಾರ ಊಟವು ಚಪಾತಿ, ರೋಟಿಸ್ (ಫ್ಲಾಟ್‌ಬ್ರೆಡ್) ಮತ್ತು/ಅಥವಾ ಪೂರಿ (ಊದಿದ ಫ್ಲಾಟ್‌ಬ್ರೆಡ್‌ಗಳನ್ನು ಹೆಚ್ಚು ಕರಿದಿರುವ), ದಾಲ್ (ಗಟ್ಟಿ ಲೆಂಟಿಲ್ ಬೀಜದ ಸೂಪ್), ಅನ್ನ(ಬೇಯಿಸಿದ ಬಿಳಿ ಅಕ್ಕಿ), ತರಕಾರಿ ಕರ್ರಿಗಳು (ಒಂದು ಅಥವಾ ಹೆಚ್ಚು ಒಣಗಿದ/ಕರಿದ ಮತ್ತು ಕಡಿಮೆ-ದ್ರವಸ್ಥಿತಿಯ ಕರ್ರಿ), ಮೊಸರು, ಉಪ್ಪಿನಕಾಯಿಗಳು, ಅಪ್ಪಳ (ತೆಳು ಮಸಾಲ ಕ್ರಾಕರ್ಸ್) ಮತ್ತು ವಿವಿಧ ಸಿಹಿತಿಂಡಿಗಳನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಲೋಹದ ಪಾತ್ರೆಗಳಲ್ಲಿ ಬಳಸಲಾಗುತ್ತದೆ ಮತ್ತು ಚಮಚವನ್ನು ಬಳಸದೆ ಬರಿದಾದ ನೆಲದಲ್ಲಿ ಕುಳಿತು ಸಾಂಪ್ರದಾಯಿಕವಾಗಿ ತಿನ್ನಲಾಗುತ್ತದೆ. ಸಂಪ್ರದಾಯಿಕ ಶೈಲಿಯಲ್ಲಿ ದೊಡ್ಡ ಸಮಾರಂಭವನ್ನು ಏರ್ಪಡಿಸಿದ್ದಾಗ, ಬಳಸಿ ಬೀಸಾಡಬಹುದಾದ ಸಮತಟ್ಟಾದ ತಟ್ಟೆಗಳಲ್ಲಿಯೂ (’ಪಟ್ಟಾಲ್’ ಎಂದು ಕರೆಯುವ) ಸಹ ಆಹಾರವನ್ನು ಬಡಿಸಬಹುದು, ಅವುಗಳನ್ನು ಕೆಲವು ಮರಗಳ ಅಗಲವಾದ ಎಲೆಗಳನ್ನು ಬಳಸಿ ಹೆಣೆದು ತಯಾರಿಸಲಾಗಿದೆ. ಮಾಂಸಾಹಾರ ಊಟವು ಅನೇಕ ವಿವಿಧ ಮಾಂಸ ಅಥವಾ ಪ್ರಾಂತ್ಯದಲ್ಲಿ ಉತ್ಪತ್ತಿ ಮಾಡಿದ ಅನ್ನ ತಯಾರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ಅದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಮೊಘಲೈ ಆಹಾರ ಪದ್ಧತಿ ಎಂದು ಚಿರಪರಿಚಿತ; ಅವುಗಳಲ್ಲಿ ಕೆಲವು: ಕೆಬಾಬ್, ಕುಫ್ತಾ, ಕೊರ್ಮ, ಕೀಮಾ, ಪುಲಾವ್, ಬಿರಿಯಾನಿ, ಪ್ರೊಥಾಸ್ (ಸಾದಾ ಅಥವಾ ಸ್ಟಫ್ಡ್ ), ಹಲ್ವಾ, ಫಿರ್ನಿ ಇತ್ಯಾದಿ. ಜೊತೆಗೆ ಹೆಚ್ಚಿನ ಸಸ್ಯಹಾರಿ ತಿಂಡಿಗಳ ಆಯ್ಕೆಯನ್ನು ಆಹಾರ ಔತಣದ ನಡುವೆ ನೀಡಬಹುದು. ಸಂಪ್ರದಾಯಬದ್ಧವಾಗಿ, ಆಹಾರವನ್ನು ಲೋಹದ ಪಾತ್ರೆ ಅಥವಾ ಕುಂಬಾರಿಕೆಯ ಮಣ್ಣಿನ ಪಾತ್ರೆಗಳಲ್ಲಿ ಬಳಸಲಾಗುತ್ತದೆ, ಬಟ್ಟೆ-ಹಾಸಿದ ಅಥವಾ ಕಾರ್ಪೆಟ್‌ನಂತೆ ನೆಲವನ್ನು ಆವರಿಸಿದ ಹಾಸಿರುವ ಬಟ್ಟೆ ಮೇಲೆ ಕುಳಿತು ನೇರವಾಗಿ ಕೈಗಳು ಅಥವಾ (ಕೆಲವು ಸಂದರ್ಭ) ಚಮಚಗಳನ್ನು ಬಳಸಿ ಊಟ ಮಾಡಲಾಗುತ್ತದೆ. ಅನೇಕ ಆಧುನಿಕ ಕುಟುಂಬಗಳಲ್ಲಿ, ಪಶ್ಚಿಮಾತ್ಯ ಟೇಬಲ್‌ ಸರಕುಗಳ ಮತ್ತು ಊಟ ಮಾಡುವ ಟೇಬಲ್ ಹಾಗೂ ಕುರ್ಚಿಗಳ ಬಳಕೆಯು ಸಂಪ್ರದಾಯದ-ನಡವಳಿಕೆಯಾಗಿದೆ ಮತ್ತು ಪಾಶ್ಚಿಮಾತ್ಯ ತಿಂಡಿಗಳು ಸಹ ಇದರಲ್ಲಿ ಸೇರಿದೆ.

ಉಡುಪು

[ಬದಲಾಯಿಸಿ]

ಉತ್ತರ ಪ್ರದೇಶದ ಜನರು ವೈವಿದ್ಯಮಯ ಉಡುಪುಗಳನ್ನು ಧರಿಸುತ್ತಾರೆ. ಆದ್ದರಿಂದ ಸಾರ್ವಜನಿಕ ನೋಟವು ಯಾವಾಗಲೂ ಅನೇಕ ವಿವಿಧ ಉಡುಪುಗಳು ಮತ್ತು ಬಣ್ಣಗಳ ಪ್ರದರ್ಶನವಾಗಿರುತ್ತದೆ. ಅಲಂಕರಿಸಿದ ಉಡುಗೆಗಳು ಸೇರಿದಂತೆ ಸಂಪ್ರದಾಯ ಶೈಲಿಗಳ ಉಡುಪುಗಳಿವೆ, ಅವುಗಳೆಂದರೆ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಧೋತಿ ಅಥವಾ ಲುಂಗಿ ಮತ್ತು ಹೊಲಿದ ಉಡುಗೆಗಳಾದ ಮಹಿಳೆಯರಿಗೆ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಕುರ್ತಾ-ಪೈಜಾಮ. ಯುರೋಪಿಯಾನ್-ಶೈಲಿಯ ಟ್ರೌಸರ್ಸ್ ಮತ್ತು ಶರ್ಟ್‌ಗಳು ಸಹ ವಿದ್ಯಾವಂತ ಪುರುಷರಿಗೆ ಸಾಮಾನ್ಯವಾಗಿವೆ. ಉಡುಗೆಯ ಬಟ್ಟೆಯನ್ನು ಹವಾಮಾನದ ಅಗತ್ಯತೆಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ; ಆದ್ದರಿಂದ ಹತ್ತಿಯಿಂದ ನೇಯ್ದ ಬಟ್ಟೆಗಳು ಮತ್ತು ಕಾಟನ್-ಸಿಂಥೆಟಿಕ್ ಮಿಶ್ರ ಬಟ್ಟೆಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿವೆ. ಉಣ್ಣೆ ಅಥವಾ ಸಿಂಥೆಟಿಕ್ ಉಣ್ಣೆಯಿಂದ ತಯಾರಿಸಿದ ಬೆಚ್ಚಗಿನ ಬಟ್ಟೆಗಳು ಚಳಿಗಾಲದಲ್ಲಿ ಅಗತ್ಯವಾಗುತ್ತವೆ, ವಿಶೇಷವಾಗಿ ಅತ್ಯುಚ್ಚ್ರಾಯ ಸ್ಥಿತಿಯ ಚಳಿಗಾಲದಲ್ಲಿ ಸ್ವೆಟರ್, ಜಾಕೆಟ್ ಮತ್ತು/ಅಥವಾ ಕೋಟ್ ಅನ್ನು ಧರಿಸುತ್ತಾರೆ.

ಹಬ್ಬಗಳು

[ಬದಲಾಯಿಸಿ]

ಧಾರ್ಮಿಕ ಆಚರಣೆಗಳು ನಿತ್ಯ ಜೀವನದ ಸಮಗ್ರ ಭಾಗವಾಗಿವೆ ಮತ್ತು ಅವು ಭಾರತದ ಉಳಿದ ಭಾಗಗಳಲ್ಲಿಯೂ ಜನಪ್ರಿಯ ಸಾರ್ವಜನಿಕ ಕಾರ್ಯಗಳಾಗಿವೆ. ಆದ್ದರಿಂದ ಯಾವುದೇ ಆಶ್ಚರ್ಯವಿಲ್ಲದೆ, ಅನೇಕ ಹಬ್ಬಗಳು ಹುಟ್ಟಿನಿಂದಲೇ ಧಾರ್ಮಿಕವಾಗಿವೆ, ಆದರೂ ಅನೇಕರು ಜಾತಿ ಮತ್ತು ನಂಬಿಕೆಗಳನ್ನು ಲಕ್ಷಿಸದೆ ಆಚರಿಸುತ್ತಾರೆ.

ಅತ್ಯಂತ ಪ್ರಮುಖ ಹಿಂದೂ ಹಬ್ಬಗಳೆಂದರೆ ದಿವಾಳಿ, ಹೋಳಿ ಮತ್ತು ದಸರಾ. ಈ ಹಬ್ಬಗಳಿಗೆ ಜೈನರು ಮತ್ತು ಸಿಖ್‌ರು ಸಮಾನ ಉತ್ಸಾಹ ತೋರುವುದನ್ನು ಸಹ ಗಮನಿಸಲಾಗಿದೆ. ಬಾರಾ ವಾಫಾತ್, ಈದ್, ಬಕ್ರಿದ್ ಮತ್ತು ಮೊಹರಾಂ -ಇವು ಮುಸ್ಲಿಂರ ಧಾರ್ಮಿಕ ಹಬ್ಬಗಳು. ಮಹಾವೀರ ಜಯಂತಿ ಯನ್ನು ಜೈನರು, ಬುದ್ಧ ಜಯಂತಿಯನ್ನು ಬುದ್ಧ ಧರ್ಮಿಯರು, ಗುರು ನಾನಕ್ ಜಯಂತಿಯನ್ನು ಸಿಖ್‌ರು ಮತ್ತು ಕ್ರಿಸ್‌ಮಸ್ ಅನ್ನು ಕ್ರಿಶ್ಚಿಯನ್ನರು ಆಚರಿಸುತ್ತಾರೆ.[೪೩]

ರಾಷ್ಟ್ರಾದ್ಯಂತ ಆಚರಣೆಯ ಭಾಗವಾಗಿ ಎರಡು ಜ್ಯಾತ್ಯಾತೀತ ರಾಷ್ಟ್ರೀಯ ಹಬ್ಬಗಳಾದ, ಸ್ವತಂತ್ರ ದಿನ ಮತ್ತು ಗಣರಾಜ್ಯ ದಿನವನ್ನು ಕಚೇರಿಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಭಕ್ತಿ ಭಾವನೆಯೊಂದಿಗೆ ಆಗಸ್ಟ್ 15 ಮತ್ತು ಜನವರಿ 26ರಂದು ಜವಾಬ್ದಾರಿಯುತವಾಗಿ ಎಲ್ಲಾ ಸರ್ಕಾರಿ ಕಛೇರಿಗಳು, ಅನೇಕ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಮತ್ತು ವಿವಿಧ ಗುಂಪಿನ ವ್ಯಕ್ತಿಗಳು ಆಚರಿಸುತ್ತಾರೆ.

ಕ್ರೀಡೆ

[ಬದಲಾಯಿಸಿ]
ಗ್ರೀನ್ ಪಾರ್ಕ್ ಸ್ಟೇಡಿಯಂ,ಕಾನ್ಪುರ್, ಉತ್ತರ ಪ್ರದೇಶ.ಹಿಂಭಾಗದಲ್ಲಿರುವ ಗಂಗಾನದಿಯನ್ನು ನೋಡಬಹುದು.

ಪ್ರಸ್ತುತದಲ್ಲಿ, ಉತ್ತರಪ್ರದೇಶದ ಸಾಮಾನ್ಯ ಕ್ರೀಡೆಗಳು ಎರಡು ವಿಭಿನ್ನ ಪ್ರಕಾರದಲ್ಲಿವೆ: ಅವುಗಳೆಂದರೆ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಪ್ರಮುಖವಾಗಿ ಯುರೋಪ್‌ನಲ್ಲಿ ಜನಿಸಿದ ಆಧುನಿಕ ಕ್ರೀಡೆಗಳು. ಸಂಪ್ರದಾಯಿಕ ಕ್ರೀಡೆಗಳಾದ , ಮಲ್ಲಯುದ್ದ, ಈಜುವಿಕೆ, ಕಬ್ಬಡಿ ಸೇರಿದಂತೆ ಅತ್ಯಂತ ಹಿಂದಿನ ಕಾಲದ ಆಟಗಳನ್ನು ಈಗಲೂ ಆಡಲಾಗುತ್ತಿದೆ ಮತ್ತು ಟ್ರಾಕ್ (ಗೆರೆ ಎಳೆದ ಸಾಲು)- ಅಥವಾ ಜಲ ಕ್ರೀಡೆಗಳನ್ನು ಆಧುನಿಕ ಉಪಕರಣಗಳ ಬಳಕೆಯಿಲ್ಲದೆ ಸ್ಥಳೀಯ ಸಂಪ್ರದಾಯ ನಿಯಮಗಳ ಪ್ರಕಾರ ಆಡಲಾಗುತ್ತದೆ; ಕೆಲವು ಸಂದರ್ಭಗಳಲ್ಲಿ, ಕತ್ತಿ ಅಥವಾ ’ಪಟ’(ಕಡ್ಡಿ)ವನ್ನು ಬಳಸುವ ಸಮರೋಚಿತ ಕಲೆಗಳ ಪ್ರದರ್ಶನ ಮಾಡಲಾಗುತ್ತದೆ, ಅದು ಕ್ರೀಡೆಯ ಮೂಲ ರೂಪವಾಗಿದೆ. ಆದರೆ, ಸಂಘಟಿತ ಪೋಷಣೆ ರದ್ಧತಿ ಮತ್ತು ಅವಶ್ಯಕ ಸೌಲಭ್ಯಗಳಿಲ್ಲದೆ ಈ ಕ್ರೀಡೆಗಳು ಪ್ರತ್ಯೇಕ ಹವ್ಯಾಸಗಳು ಅಥವಾ ಸ್ಥಳೀಯ ಸ್ಪರ್ಧಾತ್ಮಕ ಆಟಗಳಾಗಿ ಉಳಿದಿವೆ. ಉದಾ: ಆಸಕ್ತಿ ಹೊಂದಿರುವ ಶಾಲೆಗಳಲ್ಲಿ.

ಆಧುನಿಕ ಕ್ರೀಡೆಗಳು - ಒಳಾಂಗಣ, ಮೈದಾನ ಮತ್ತು ಟ್ರಾಕ್ (ಗೆರೆ ಎಳೆದ ಸಾಲು) ಆಟಗಳು - ಜನಪ್ರಿಯವಾಗಿವೆ, ಅದರಲ್ಲೂ ವಿದ್ಯಾವಂತ ವರ್ಗದ ನಡುವೆ. ಆದರೆ ರಾಜ್ಯ ಅವುಗಳಲ್ಲಿ ಇನ್ನೂ ಎಲ್ಲಾ ರೀತಿಯ ರಾಷ್ಟ್ರೀಯ ಅರ್ಹತೆಯ ಯಶಸ್ಸನ್ನು ಹೊಂದಿದೆ. ಫೀಲ್ಡ್ ಹಾಕಿ ಆಡುತ್ತಿದ್ದ ಸಮಯದಲ್ಲಿ, ಅದು ಭಾರೀ ಪ್ರಮಾಣದಲ್ಲಿ ಜನಪ್ರಿಯವಾಗಿತ್ತು ಮತ್ತು ಉತ್ತರ ಪ್ರದೇಶ ಭಾರತದ ಕೆಲವು ಉತ್ತಮ ಹಾಕಿ ಆಟಗಾರರನ್ನು ತಯಾರಿಸಿತ್ತು, ಅವರು ದೇಶಕ್ಕೆ ಕೀರ್ತಿಯನ್ನು ತಂದರು. ಧ್ಯಾನ್‌ಚಂದ್, ಪೌರಾಣಿಕ ಫೀಲ್ಡ್ ಹಾಕಿಯ ಭಾರತದ ಆಟಗಾರ ಮತ್ತು ಹಲವಾರು ವರ್ಷಗಳ ಅನೇಕ ಒಲಂಪಿಕ್ ಆಟಗಳ ನಾಯಕನಾಗಿದ್ದರು, ಅವರು ಆಗಸ್ಟ್ 29,1905 ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು. ಜರ್ಮನ್ ಆಡಳಿತಾಧಿಕಾರಿಯಾಗಿದ್ದ ಅಡೊಲ್ಫ್ ಹಿಟ್ಲರ್, ಬರ್ಲಿನ್ ಒಲಂಪಿಕ್ ಹಾಕಿ-ಫೈನಲ್ಸ್‌‌‍ನಲ್ಲಿ ಧ್ಯಾನ್‌ಚಂದ್‌’ರ ಆಟದಿಂದ ಹೆಚ್ಚು ಪ್ರಭಾವಿತರಾಗಿದ್ದರು, ಅವರು ಜರ್ಮನ್‌ಗೆ ವಲಸೆ ಹೋಗುವುದಿದ್ದರೆ ಕಲೊನೆಲ್(ಕರ್ನಲ್) ಸ್ಥಾನಕ್ಕೆ ’ಲ್ಯಾನ್ಸ್ ನಾಯಕ್’ಆಗಿ ಧ್ಯಾನ್ ಚಂದ್‌ನನ್ನು ಮೇಲೇರಿಸುವುದಾಗಿ ಅವರು ಕರೆ ನೀಡಿದ್ದರು; ಚಂದ್ ಆ ಕರೆಯನ್ನು ಒಪ್ಪಲಿಲ್ಲ. ಹಾಕಿಯ ಜನಪ್ರಿಯತೆಯನ್ನು ಈಗ ಕ್ರಿಕೆಟ್ ಪಡೆದುಕೊಂಡಿದೆ. ಆದಾಗ್ಯೂ ತನ್ನ ಕ್ರಿಕೆಟ್ ತಂಡಕ್ಕಾಗಿ ಹೆಸರು ಮಾಡಿಲ್ಲ, ಯುಪಿ ಫೆಬ್ರುವರಿ 2006ರ ಪಂದ್ಯಾವಳಿಯಲ್ಲಿ, ಫೈನಲ್‌ನಲ್ಲಿ ಬೆಂಗಾಳಿ ತಂಡವನ್ನು ಮಣಿಸಿ ತನ್ನ ಪ್ರಥಮ ರಣಜಿ ಟ್ರೋಪಿಯನ್ನು ಗಳಿಸಿತು. ಅದು ತನ್ನ 3 ಅಥವಾ 4 ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವುದನ್ನು ಸಹ ಹೆಗ್ಗಳಿಕೆಯಾಗಿ ಹೇಳಿಕೊಳ್ಳಬಲ್ಲದು. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಅದು ಭಾರತದ ಕೆಲವು ಹೆಚ್ಚು ಜನಪ್ರಿಯ ವಿಜಯಗಳಿಗೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಪ್ರಾಂತಗಳು

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Cahoon, Ben (2000). "Provinces of British India". WorldStatesmen.org. Retrieved 2009-09-21.
  2. "Governers of Uttar Pradesh". Upgov.nic.in. Retrieved 2009-09-21.
  3. Ben Cahoon. "Indian states since 1947". Worldstatesmen.org. Retrieved 2009-09-21.
  4. ೪.೦ ೪.೧ ಉಲ್ಲೇಖ ದೋಷ: Invalid <ref> tag; no text was provided for refs named Geohive
  5. https://books.google.com/books?id=gMoJj-0Z94UC&pg=PA69&lpg=PA69&dq=Belan+in+southern+Uttar+Pradesh&source=bl&ots=Ar-eIQeYW_&sig=ScNm_Qlb4KCO9UPav7odeuLr9MM&hl=en&sa=X&oi=book_result&resnum=1&ct=result#PPA70,M1 Recent Advances in Indo-Pacific Prehistory By Virendra N. Misra, Peter Bellwood, Indo-Pacific Prehistory Association:#69
  6. http://www.boloji.com/environment/205.htm Archived 2010-01-14 ವೇಬ್ಯಾಕ್ ಮೆಷಿನ್ ನಲ್ಲಿ. ಬೈಹೊನ್ ಸಮುದಾಯಗಳು ವಿಕೆ ಜೋಶಿಯಿಂದ ನದಿಯ ಕೋಪವನ್ನು ಎದುರಿಸಿದವು
  7. https://books.google.com/books?id=r4s-YsP6vcIC&pg=PA58&lpg=PA58&dq=Belan+in+southern+Uttar+Pradesh&source=web&ots=9Y5IEgqz2t&sig=NrbJCqUnW3E0aShnY-MRSERruiw&hl=en&sa=X&oi=book_result&resnum=4&ct=result#PPA59,M1 ಬ್ರಿಡ್‌ಗೆಟ್ ಆಲ್‌ಚಿನ್, ಫ್ರಾಂಕ್ ರೇಮಂಡ್ ಆಲ್ಚಿನ್‌ರಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ನಾಗರೀಕತೆಯ ಬೆಳವಣಿಗೆ
  8. https://books.google.com/books?id=35DP1Z-2dnYC&pg=PA96&lpg=PA96&dq=Belan+in+southern+Uttar+Pradesh&source=bl&ots=8yS-oowEIm&sig=-BuToSCgPOJejuGE3L8MzjfB-Dg&hl=en&sa=X&oi=book_result&resnum=7&ct=result#PPA101,M1 ಹಾಸ್ಮುಕಲಾಲ್ ಧಿರಾಜ್‍ಲಾಲ್ ಸಂಕಾಲಿಯಾ, ಶಾಂತರಾಂ ಬಾಲ್‌ಚಂದ್ರ ಡಿಯೊ, ಮಧುಕರ್ ಕೇಶವ್ ಧವಲಿಕರ್ ಅವರಿಂದ ಭಾರತದ ಪುರಾತತ್ವ ಶಾಸ್ತ್ರದ ಅಧ್ಯಯನಗಳು
  9. http://www.thamesandhudsonusa.com/web/humanPast/summaries/ch14.html Archived 2010-03-02 ವೇಬ್ಯಾಕ್ ಮೆಷಿನ್ ನಲ್ಲಿ. ಅಧ್ಯಾಯ 14 - ದಕ್ಷಿಣಾ ಏಷ್ಯಾ: ಮುಂಚಿನ ಹಳ್ಳಿಗಳಿಂದ ಬುದ್ಧಧರ್ಮವಾದಕ್ಕೆ.
  10. https://books.google.com/books?id=W6zQHNavWlsC&pg=PA263&lpg=PA263&dq=Sarai+Nahar+Rai+Mahagara+Uttar+Pradesh+Mesolithic/Microlithic&source=bl&ots=E2La8G_-3Y&sig=RKkiPzkeUuoDUEhEMukwCc4z3YE&hl=en&sa=X&oi=book_result&resnum=3&ct=result#PPA262,1 ಕೆನೆಥ್ ಎ.ಆರ್.ಕೆನಡಿ ಅವರಿಂದ ಗಾಡ್-ಏಪ್ಸ್ ಮತ್ತು ಫಾಸಿಲ್ ಮೆನ್
  11. https://books.google.com/books?id=r4s-YsP6vcIC&pg=PA119&lpg=PA119&dq=Sarai+Nahar+Rai+Mahagara+Uttar+Pradesh+Mesolithic/Microlithic&source=web&ots=9Y5IEguv5o&sig=6mW3auDhZPXCnIwWjBRrxF2FZKs&hl=en&sa=X&oi=book_result&resnum=6&ct=result ಬ್ರಿಡ್‌ಗೆಟ್ ಆಲ್‌ಚಿನ್, ಫ್ರಾಂಕ್ ರೇಮಂಡ್ ಆಲ್ಚಿನ್‌ರಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ನಾಗರೀಕತೆಯ ಬೆಳವಣಿಗೆ
  12. http://www.ias.ac.in/jbiosci/nov2001/491.pdf ವಿ ಎನ್ ಮಿಸ್ರಾರಿಂದ ಭಾರತದ ಇತಿಹಾಸ ಪೂರ್ವ ಮಾನವ ವಸಾಹತುಕರಣ
  13. Krishna Reddy (2003). Indian History. New Delhi: Tata McGraw Hill. p. A11. ISBN 0070483698.
  14. ಎಮ್. ವಿಟ್ಜೆಲ್, ಅರ್ಲಿ ಸ್ಯಾನ್ಸ್‌ಕ್ರಿಟೈಜೇಷನ್ ಆರಿಜಿನ್ಸ್ ಆ‍ಯ್೦ಡ್ ಡೆವಲಪ್‌ಮೆಂಟ್ ಆಫ್ ದ ಕುರು ಸ್ಟೇಟ್. ಬಿ. ಕೊಲ್ವೆರ್ (ed.), ರೆಚ್ಟ್, ಸ್ಟಾಟ್ ಅ೦ಡ್ ವರ್ವಾಲ್ಟಂಗ್ ಇಮ್ ಕ್ಲಾಸ್ಸಿಸ್ಚೆನ್ ಇಂಡಿಯಾನ್. ದ ಸ್ಟೇಟ್, ದ ಲಾ ಆ‍ಯ್೦ಡ್ ಅಡ್ಮಿನಿಸ್ಟ್ರೇಷನ್ ಇನ್ ಕ್ಲಾಸಿಕಲ್ ಇಂಡಿಯಾ. ಮುನ್ಚೆನ್ : ಆರ್. ಓಲ್ಡೆನ್‌ಬರ್ಗ್ 1997, 27-52 = ಎಲೆಕ್ಟ್ರಾನಿಕ್ ಜರ್ನಲ್ಸ್ ಆಫ್ ವೇದಿಕ್ ಸ್ಟಡೀಸ್, ಸಂ. 1,4, ಡಿಸೆಂಬರ್ 1995, [೧] Archived 2020-10-26 ವೇಬ್ಯಾಕ್ ಮೆಷಿನ್ ನಲ್ಲಿ.
  15. http://www.bharatonline.com/uttar-pradesh/history.html#
  16. Bandyopādhyāya, Śekhara (2004). From Plassey to Partition: A History of Modern India. Orient Longman. pp. 523 (at p 407). ISBN 978-8125025962.
  17. Bandyopādhyāya, Śekhara (2004). From Plassey to Partition: A History of Modern India. Orient Longman. pp. 523 (at p 406). ISBN 978-8125025962.
  18. ಅಕ್ಷಯಕುಮಾರ್ ರಾಮಾನ್‌ಲಾಲ್ ದೇಸಾಯಿ ಅವರ ಪೀಸೆಂಟ್ ಸ್ಟ್ರಗಲ್ಸ್ ಇನ್ ಇಂಡಿಯಾ . ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟಣೆ, 1979. ಪುಟ 349..
  19. [೨][dead link]
  20. "ಆರ್ಕೈವ್ ನಕಲು". Archived from the original on 2011-06-04. Retrieved 2010-01-23.
  21. "aegyptica". Bsienvis.nic.in. Archived from the original on 2009-05-06. Retrieved 2009-09-21.
  22. "monosperma". Bsienvis.nic.in. Archived from the original on 2009-05-06. Retrieved 2009-09-21.
  23. "Uttar Pradesh weather". Archived from the original on 2008-12-11. Retrieved 2008-09-27.
  24. "Census Population" (PDF). Census of India. Ministry of Finance India. Archived from the original (PDF) on 2008-12-19. Retrieved 2008-12-18.
  25. "Census Reference Tables, C-Series Population by religious communities". Census of India. Office of the Registrar General & Census Commissioner, India. 2001. Retrieved 2008-07-12.
  26. ೨೬.೦ ೨೬.೧ ಎ ಹಾಸನ್ & ಜೆ ಸಿ ದಾಸ್ ಮನೊಹರ್ ಪಬ್ಲಿಕೇಷನ್ಸ್‌ ನಿಂದ ಪೀಪಲ್ ಆಫ್ ಇಂಡಿಯಾ ಉತ್ತರ ಪ್ರದೇಶ್ ಸಂಪುಟ XLII ಅನ್ನು ಸಂಪಾದನೆ ಮಾಡಲಾಗಿದೆ.
  27. Somini Sengupta (May 12, 2007). "Brahmin Vote Helps Party of Low Caste Win in India". ದ ನ್ಯೂ ಯಾರ್ಕ್ ಟೈಮ್ಸ್. Retrieved 2007-05-12.
  28. The criminalisation of Indian democracy (May 2, 2007). "Jo Johnson". Financial Times. Retrieved 2007-05-12.
  29. ರೆಡಿಫ್ ನ್ಯೂಸ್
  30. "BANARAS HINDU UNIVERSITY" (PDF). Indian Academy of Sciences. 2005-07-26. Retrieved 2007-04-19.
  31. http://indiatoday.intoday.in/index.php?option=com_content&Itemid=1&task=view&id=8688&sectionid=30&issueid=55&page=archieve
  32. "ITBHU To IIT-BHU". Archived from the original on 2011-08-31. Retrieved 2010-01-23.
  33. "State Economy & Socio-Economic Profile" (PDF). Retrieved 2009-09-21.
  34. "A special report on India: Ruled by Lakshmi". The Economist. 11 December 2008.
  35. ೩೫.೦ ೩೫.೧ ೩೫.೨ http://www.ibef.org/download/Uttar%20Pradesh_25April_08.pdf
  36. Pradeep Thakur, TNN 1 July 2008, 02:46am IST (2008-07-01). "Meerut 9th in top 10 tax-paying cities - India - NEWS - The Times of India". Timesofindia.indiatimes.com. Retrieved 2009-09-21.{{cite web}}: CS1 maint: multiple names: authors list (link) CS1 maint: numeric names: authors list (link)
  37. "Three Indian children to attend J8 summit in Rome.:. newkerala.com Online News". Newkerala.com. Retrieved 2009-09-21.
  38. "Uttar Pradesh Legislature". Uplegassembly.nic.in. Archived from the original on 2009-06-19. Retrieved 2009-09-21.
  39. "Ethnologue report for language code: bfy". Ethnologue.com. Retrieved 2009-09-21.
  40. ಎಬೌಟ್ ಅಸ್ Archived 2012-02-17 ವೇಬ್ಯಾಕ್ ಮೆಷಿನ್ ನಲ್ಲಿ. ಅಧಿಕೃತ ಜಾಲತಾಣ. allindiaradio.org. 2008-08-03ರಲ್ಲಿ ಮರು ಸಂಪಾದಿಸಲಾಗಿದೆ.
  41. "A Snapshot of Indian Television History". Indian Television Dot Com Pvt Ltd. Retrieved 2006-06-01.
  42. ದಾಸ್ ಗುಪ್ತ, ಉಮಾ. 1977. "ದ ಇಂಡಿಯಾನ್ ಪ್ರೆಸ್ 1870-1880: ಎ ಸ್ಮಾಲ್ ವರ್ಲ್ಡ್ ಆಫ್ ಜರ್ನಲಿಸಂ", ಮಾರ್ಡನ್ ಏಷಿಯಾನ್ ಸ್ಟಡೀಸ್ , 11(2):213-235. pp 233-234.
  43. "18 Popular India Festivals". Retrieved 2007-12-23.

ಬಾಹ್ಯ ಕೊಂಡಿಗಳು

[ಬದಲಾಯಿಸಿ]