ವಿಷಯಕ್ಕೆ ಹೋಗು

ಹಲ್ವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಲ್ಕನ್ ಶೈಲಿಯ ತಹಿನಿ-ಯಿಂದ ಮಾಡಿದ ಪಿಸ್ತಾ ಹಲ್ವಾ

ಹಲ್ವಾ (ಅಥವಾ ಹಲವಾ ,ಕ್ಸಾಲ್ವೊ ,ಹಲೇವ್ ,ಹೆಲ್ವಾ ,ಹಲ್ವಾಹ್ ,ಹಲವಾ ,ಹೆಲವಾ ,ಹೆಲ್ವಾ ,ಹಲ್ವಾ ,ಅಲುವಾ ,ಹಲ್ವಾ ,ಚಲ್ವಾ )ಎಂದು ಕರೆಯಲ್ಪಡುವ ಸಿಹಿ ತಿಂಡಿಯು, ಅನೇಕ ವಿಧಗಳಲ್ಲಿ, ಅನೇಕ ಮಿಶ್ರಣಗಳನ್ನು ಬಳಸಿ ತಯಾರಿಸಲಾಗುವ ತಿಂಡಿಯಾಗಿದ್ದು, ಇದನ್ನು ಮಧ್ಯ ಪೂರ್ವ,ದಕ್ಷಿಣ ಏಷ್ಯಾ,ಮಧ್ಯ ಏಷ್ಯಾ,ಪಶ್ಚಿಮ ಏಷ್ಯಾ,ಉತ್ತರ ಆಫ್ರಿಕಾ,ಶಙ್ಖ ರೂಪದ ಆಫ್ರಿಕಾ(ಹಾರ್ನ್ ಆಫ್ ಆಫ್ರಿಕಾ),ಬಲ್ಕನ್ಸ್,ಪೂರ್ವ ಯೂರೋಪ್,ಮಾಲ್ಟಾ ಹಾಗೂ ಯಹೂದೀ ನಾಡಿನಾದ್ಯಂತ ತಯಾರಿಸಿ ತಿನ್ನಲಾಗುತ್ತದೆ.
ಹಲ್ವಾ (ಅರೇಬಿಕ್ ಹಲ್ವಾ حلوى) ಎಂದರೆ "ಸಿಹಿ" ಎಂದರ್ಥ ಕೊಡುವ ಶಬ್ದವನ್ನು ಎರಡು ವಿಧವಾದ ಸಿಹಿ ತಿಂಡಿಗಳನ್ನು ವಿವರಿಸಲು ಬಳಸುತ್ತಾರೆ:

  • ಹಿಟ್ಟು ಬಳಸಿ ಮಾಡಿದ್ದು - ಈ ವಿಧವಾದ ಹಲ್ವಾ ಸ್ವಲ್ಪಮಟ್ಟಿಗೆ ಜಿಲೆಟಿನ್‌ನಂತಹ ವಸ್ತುವಾಗಿದ್ದು,ಧಾನ್ಯದ ಹಿಟ್ಟು ಅಥವಾ ಒಂದು ವಿಧವಾದ ತರಿ(ರವೆ)ಯಿಂದ ಮಾಡಲ್ಪಟ್ಟಿರುತ್ತದೆ.ಇದರಲ್ಲಿರುವ ಮೂಲ ವಸ್ತುಗಳು ಎಣ್ಣೆ,ಹಿಟ್ಟು,ಮತ್ತು ಸಕ್ಕರೆ.
  • ಬೀಜ- ಬೆಣ್ಣೆ ಬಳಸಿ ಮಾಡಿದ್ದು: ಈ ವಿಧವಾದ ಹಲ್ವಾವನ್ನು ಚೂರು ಚೂರು ಮಾಡಬಹುದು ಮತ್ತು ಸಾಮಾನ್ಯವಾಗಿ ತಾಹಿನಿ ಎಳ್ಳಿನ ಅಂಟು ಅಥವಾ ಸೂರ್ಯಕಾಂತಿಬೀಜದ ಬೆಣ್ಣೆಯಂತಹ ಇತರ ಬೀಜದ ಬೆಣ್ಣೆ ಬಳಸಿ ಮಾಡಿರುವುದು. ಇದರಲ್ಲಿರುವ ಮೂಲ ವಸ್ತುಗಳು ಬೀಜ-ಬೆಣ್ಣೆ ಮತ್ತು ಸಕ್ಕರೆ.

ಹಲ್ವಾವು ಸೂರ್ಯಕಾಂತಿ ಬೀಜ ಸೇರಿದಂತೆ ವಿವಿಧ ಬೀಜಗಳು, ಹುರುಳಿ, ಲೆನ್ಟಿಲ್ಗಳು,ಕ್ಯಾರೆಟ್,ಕುಂಬಳಕಾಯಿಗಳು,ಮುಳ್ಳು ಗೆಣಸಿನಂತಹ ತರಕಾರಿಗಳು ಮತ್ತು ಹಣ್ಣಿನ ರಸದ ಸಿಹಿ ಪಾನೀಯಗಳಂತಹ ಇತರ ಹಲವಾರು ಪದಾರ್ಥಗಳನ್ನು ಒಳಗೊಂಡಿರಬಹುದು.[]

ವ್ಯುತ್ಪತ್ತಿ

[ಬದಲಾಯಿಸಿ]

ಇಂಗ್ಲೀಷ್ ಭಾಷೆಗೆ halvaಎಂಬ ಶಬ್ದವು ೧೮೪೦-೫೦ ರ ನಡುವೆ ಯೆಡ್ಡಿಶ್‌halva ದಿಂದ ಬಂದಿದೆ. ನಂತರದ ಶಬ್ದವು ಬಲ್ಗೇರಿಯಾದಿಂದ ಬಂದಿದೆ, ಮತ್ತೆ ತಿರುಗಿ ಟರ್ಕಿಯ helva ದಿಂದ ಬಂದಿದ್ದು, ಈ ಶಬ್ದವು ಕೊನೆಯದಾಗಿ ಬಂದಿದ್ದು ಅರೇಬಿಕ್‌Al ḥalwā ದಿಂದ. ಇದರರ್ಥ ಸಿಹಿ ಮಿಶ್ರಣ.[] ಅರೇಬಿಕ್ ಮೂಲ حلوى ḥalwā ಇದರರ್ಥ "ಸಿಹಿ".

ವಿಧಗಳು

[ಬದಲಾಯಿಸಿ]

ಹೆಚ್ಚಿನ ಎಲ್ಲಾ ಹಲ್ವಾಗಳು ಸಕ್ಕರೆ ಅಥವಾ ಜೇನಿನ ದಟ್ಟ ಮಿಶ್ರಣವಾಗಿದ್ದು ಸಿಹಿಯಾಗಿರುತ್ತವೆ. ಆದರೆ ಇದರ ವಿನ್ಯಾಸವು ಭಿನ್ನವಾಗಿರುತ್ತದೆ. ಉದಾಹರಣೆಗೆ,ತರಿ(ರವೆ)-ಯಿಂದ ತಯಾರಿಸಲ್ಪಡುವ ಹಲ್ವಾವು ಜೆಲೆಟಿನ್‌ನಂತಹದ್ದು ಮತ್ತು ಪಾರದರ್ಶಕವಾಗಿರುತ್ತದೆ. ಹಾಗೆಯೇ ರವೆಯ ಹಲ್ವಾವು ಒಣಗಿದಂತಿದ್ದು ಹೆಚ್ಚು ಗರಿಗರಿಯಾಗಿರುತ್ತದೆ.

ಹಿಟ್ಟು ಬಳಸಿ ಮಾಡಿದ್ದು

[ಬದಲಾಯಿಸಿ]

ಈ ವಿಧವಾದ ಹಲ್ವಾವನ್ನು ರವೆಯಂತಹ ಹಿಟ್ಟನ್ನು ಎಣ್ಣೆ ರಾಕ್ಸ್‌ನಲ್ಲಿ ಹುರಿದು ಸಕ್ಕರೆ ಪಾಕದಲ್ಲಿ ತಯಾರಿಸಿ ಮಾಡುತ್ತಾರೆ. ಇದು ಇರಾನ್,ಟರ್ಕಿ,ಸೋಮಾಲಿಯಾ,ಭಾರತ,ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ್‌ನಲ್ಲಿ ಪ್ರಸಿದ್ಧವಾಗಿದೆ.

ತರಿ(ರವೆ)(ಸೊಜಿ)

[ಬದಲಾಯಿಸಿ]

ಈ ವಿಧವಾದ ಹಲ್ವಾವನ್ನು ಭಾರತ, ಅಪ್ಘಾನಿಸ್ತಾನ್, ಬಾಂಗ್ಲಾದೇಶ್, ಇರಾನ್, ಪಾಕಿಸ್ತಾನ್‌ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ( ಅಲ್ಬೇನಿಯಾ, ಅಜರ್‌ಬೈಜಾನ್, ಬಲ್ಗೇರಿಯಾ, ಸೈಪ್ರಸ್, ಗ್ರೀಸ್, ಮೊಂಟಿನೆಗ್ರೊ ಮತ್ತು ಟರ್ಕಿ) ತಯಾರಿಸಿ ಒದಗಿಸಲಾಗುತ್ತದೆ, ಸಾಮಾನ್ಯವಾಗಿ ಇದನ್ನು ಗೋಧಿ ತರಿ(ರವೆ), ಸಕ್ಕರೆ ಅಥವಾ ಜೇನು, ಬೆಣ್ಣೆ ಅಥವಾ ಸಸ್ಯಜನ್ಯ ಎಣ್ಣೆ ಬಳಸಿ ಮಾಡಲಾಗುತ್ತದೆ. ಅನೇಕವೇಳೆ ತರಿ(ರವೆ)ಗೆ ಒಣದ್ರಾಕ್ಷಿ,ಖರ್ಜೂರ,ಇತರ ಒಣ ಹಣ್ಣುಗಳು,ಅಥವಾ ಬೀಜಗಳಾದ ಬಾದಾಮಿ ಅಥವಾ ಅಕ್ರೋಡ ಸೇರಿಸಿ ಹಲ್ವಾ ಮಾಡಲಾಗುತ್ತದೆ. ಹಲ್ವಾವು ಸಿಹಿಯಾಗಿದ್ದು ಜೆಲ್‌ನಂತಿದ್ದು ನೋಡಲು ಪೊಲೆಂಟಾ ರೀತಿ ಇರುತ್ತದೆ; ಇದಕ್ಕೆ ಸಮೃದ್ಧವಾಗಿ ಸೇರಿಸಲಾದ ಬೆಣ್ಣೆಯಿಂದಾಗಿ ತುಂಬಾ ರುಚಿಯಾಗಿರುತ್ತದೆ. ಉದಾಹರಣೆಗೆ ತರಿ(ರವೆ)ಹಲ್ವಾ ತಯಾರಿಸುವ ಸರಿಯಾದ ಅಳತೆ ೧:೨:೩:೪. ೧ ಭಾಗ (ಸಸ್ಯಜನ್ಯ ಎಣ್ಣೆ ಅಥವಾ ಬೆಣ್ಣೆ), ೨ ಭಾಗ ತರಿ(ರವೆ),೩ ಭಾಗ ಸಿಹಿ ನೀಡುವ ವಸ್ತು (ಉದಾಹರಣೆಗೆ ಸಕ್ಕರೆ ಅಥವಾ ಜೇನು) ಮತ್ತು ೪ ಭಾಗ ನೀರು.ತರಿ(ರವೆ)ಯನ್ನು ಬೆಣ್ಣೆ (ಮೇದಸ್ಸು)ಯಲ್ಲಿ ಹುರಿಯಲಾಗುತ್ತದೆ ಮತ್ತು ಜೊತೆಗೆ ನೀರು ಮತ್ತು ಸಿಹಿಯನ್ನು ಸೇರಿಸಿ ಬಿಸಿಮಾಡಿ ಸಿರಪ್ ರೀತಿ ಮಾಡಲಾಗುತ್ತದೆ. ನಂತರ ಬಿಸಿಯಿರುವಾಗಲೇ ಎಚ್ಚರಿಕೆಯಿಂದ ಎರಡನ್ನು ಅಥವಾ ಮಿಶ್ರಣವನ್ನು ಮತ್ತು ಹೆಚ್ಚುವರಿಯಾಗಿ ಸೇರಿಸಬೇಕಾದ ಪದಾರ್ಥಗಳನ್ನು ಹಾಕಬೇಕು.ಈಗ ಹಲ್ವಾವು ಬಿಳಿಯಾಗಿ ಸ್ವಲ್ಪ ಕಂದು ಬಣ್ಣದಲ್ಲಿದ್ದು ಮೆತ್ತಗಿರುತ್ತದೆ, ಇದು ಹಲ್ವಾದ ವಿಧ ಮತ್ತು ರುಚಿಯನ್ನು ಅವಲಂಬಿಸಿರುತ್ತದೆ.ಇನ್ನೂ ಸ್ವಲ್ಪ ಹೆಚ್ಚಿಗೆ ಕಾಯಿಸಿದರೆ ದಟ್ಟ ಬಣ್ಣವಾಗಿದ್ದು ಗಟ್ಟಿಯಾಗಿರುತ್ತದೆ ಅಥವಾ ಗಟ್ಟಿಯಾಗಲು ಬಿಡಬೇಕಾಗುತ್ತದೆ.

ತುರ್ಕಿಷ್ ಅನ್ ಹೆಲ್ವಾಸಿ, ತರಿ(ರವೆ)-ಯಿಂದ ಮಾಡಿದ ಹಲ್ವಾ

ಭಾರತದಲ್ಲಿ ರವೆಯ ಹಲ್ವಾವನ್ನು "ಉತ್ತರದ" ಸಿಹಿ ಎಂದು ಪರಿಗಣಿಸಲಾಗಿದ್ದರೂ ದಕ್ಷಿಣ ಭಾರತದಲ್ಲೂ ಪ್ರಸಿದ್ಧಿ ಹೊಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ಹಲ್ವಾ(ಅಥವಾ ತಮಿಳಿನಲ್ಲಿ ಇದನ್ನು"ಅಲ್ವಾ" ಎಂದು ಕರೆಯಲಾಗುತ್ತದೆ)ತಮಿಳುನಾಡಿನ ತಿರುನೆಲ್ವೇಲಿಯದ್ದಾಗಿದೆ. ತರಿ(ರವೆ)ಹಲ್ವಾವು ದಕ್ಷಿಣ ಭಾರತದಾದ್ಯಂತ ತುಂಬ ಪ್ರಸಿದ್ಧವಾಗಿ ತಯಾರಿಸಲಾಗುವ ಕೇಸರಿ ಅಥವಾ ಕೇಸರಿ ಬಾತ್‌‌‍ನ್ನೆ ಹೋಲುತ್ತದೆ. ಭಾರತ ಮತ್ತು ಪಾಕಿಸ್ತಾನದಲ್ಲಿ, ಕ್ಯಾರೆಟ್ (ಗಾಜರ್ ಹಲ್ವಾ ),ಹೆಸರು ಕಾಳು( ಹೆಸರು ಬೇಳೆ ಹಲ್ವಾ ) ಅಥವಾ ಸೋರೆಕಾಯಿ (ದೋದಿ ಹಲ್ವಾ ) ಗಳನ್ನು ರವೆಯ ಬದಲಾಗಿ ಬಳಸುತ್ತಾರೆ. ರವೆಯ ಹೊರತಾಗಿ ಇದನ್ನು ತಯಾರಿಸುವಾಗ ಇವುಗಳನ್ನು ಗಟ್ಟಿಯಾಗಿಸಲು ಕಂಡೆನ್ಸ್ ಮಾಡಿದ ಹಾಲು, ಮತ್ತು ತುಪ್ಪವನ್ನು ಬಳಸುತ್ತಾರೆ. ಇದನ್ನು ತಾಜಾವಾಗಿ ತಯಾರಿಸುವಾಗ ಕೊನೆಯವರೆಗೂ ಹಲ್ಲೆ ಹಲ್ಲೆಯಾಗಿ ನೆನೆದಿರುವ ರೂಪವನ್ನು ಹೊಂದಿದ್ದು ಬ್ರಿಟೀಷ್ ಸಿಹಿಯನ್ನು ಹೋಲುತ್ತದೆ.

ಜೋಳದ ಗಂಜಿ

[ಬದಲಾಯಿಸಿ]

ಜೋಳದ ಗಂಜಿ ಹಲ್ವಾವು ಗ್ರೀಸ್‌ನಲ್ಲಿ ಪ್ರಸಿದ್ಧವಾಗಿದೆ ಮತ್ತು ಹಲವಾರು ವ್ಯತ್ಯಾಸಗಳನ್ನು ಹೊಂದಿದೆ. ಫಾರ್ಸಾಲಾ ಪಾಕವಿಧಾನವು ತುಂಬಾ ಪ್ರಸಿದ್ಧವಾಗಿದೆ. ಇದು ತುಂಬಾ ಸಿಹಿಯಾಗಿದ್ದು ಹುರಿದ ಸಕ್ಕರೆ ಪುಡಿ ಪಾಕದಂತಿರುತ್ತದೆ.

ಅಕ್ಕಿ ಹಿಟ್ಟು

[ಬದಲಾಯಿಸಿ]

ಅಕ್ಕಿ ಹಿಟ್ಟು ಮತ್ತು ತೆಂಗಿನಕಾಯಿ ಹಾಲಿನ ಹಲ್ವಾವು ಜಾಂಜಿಬಾರ್‌‌ ನ ರಸ್ತೆಗಳಲ್ಲಿ ಸಾಮಾನ್ಯವಾಗಿ ಸಿಗುವ ತಿಂಡಿಯಾಗಿದೆ.

ಕಾಯಿ- ಬೆಣ್ಣೆಯಿಂದ ಮಾಡಿದ್ದು

[ಬದಲಾಯಿಸಿ]
ರಷ್ಯಾದ ಪ್ಯಾಕ್ ಮಾಡಿದ ಹಲ್ವಾ.

ಈ ರೀತಿಯ ಹಲ್ವಾವನ್ನು ಎಳ್ಳು ಕಾಳಿನ ಎಣ್ಣೆಯನ್ನು ರುಬ್ಬಿ ಕಣಕದಂತೆ ತಯಾರಿಸಲಾಗುತ್ತದೆ.ನಂತರ ಇದನ್ನು ಬಿಸಿಯಾದ ಸಕ್ಕರೆ ಪಾಕದಲ್ಲಿ ಮಿಶ್ರಮಾಡಿ ಗಟ್ಟಿಯಾದ ಬಿರುಕಿನ ಹಂತದ ವರೆಗೆ ಕಾಯಿಸಲಾಗುತ್ತದೆ. ಈ ವಿಧವಾದ ಹಲ್ವಾವು ಪೂರ್ವ ಮೇಡಿಟರೇನಿಯನ್ ಮತ್ತು ಬಲ್ಕನ್ ಪ್ರಾಂತ್ಯಗಳು,ಇತರೆ ದೇಶಗಳಾದ ಬೋಸ್ನಿಯಾ ಮತ್ತು ಹೆರ್ಜೆಗೊವಿನಾ, ಕ್ರೊಯೇಷಿಯಾ, ರೊಮೇನಿಯಾ, ಸೆರ್ಬಿಯಾ, ಮೊಂಟೆನೆಗ್ರೊ (тах'ан халв'а), ಬಲ್ಗೇರಿಯಾ, ರಷ್ಯಾ, ಗ್ರೀಸ್ ಮತ್ತು ಸೈಪ್ರಸ್ (χαλβάς), ಈಜಿಪ್ಟ್, ಇರಾಕ್, ಇಸ್ರೇಲ್, ಇರಾನ್, ಲೆಬನಾನ್, ಮೆಸಿಡೋನಿಯಾ, ಅಲ್ಬೇನಿಯಾ, ಸಿರಿಯಾ, ಮಧ್ಯ ಏಷ್ಯಾ, ದಕ್ಷಿಣ ಭಾರತ, ಕೊಕಸಸ್ ಪ್ರಾಂತ್ಯಗಳು ಮತ್ತು ಟರ್ಕಿಗಳಲ್ಲಿ ಪ್ರಸಿದ್ಧವಾಗಿದೆ.ಇದಲ್ಲದೆ ಅಲ್ಗೇರಿಯಾ ಮತ್ತು ಮಧ್ಯ ಮೇಡಿಟರೇನಿಯನ್‌ ದ್ವೀಪದಮಾಲ್ಟಾದಲ್ಲೂ ಖ್ಯಾತಿ ಹೊಂದಿದೆ.

ಎಳ್ಳು

[ಬದಲಾಯಿಸಿ]

ಎಳ್ಳಿನ ಹಲ್ವಾವು ಬಲ್ಕನ್ಸ್, ಮಧ್ಯ ಪೂರ್ವ, ಮತ್ತು ಮೇಡಿಟರೇನಿಯನ್ ಸಮುದ್ರದಿಂದ ಸುತ್ತುವರೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಸಿದ್ಧವಾಗಿದೆ. ಇದರಲ್ಲಿರುವ ಮೂಲ ಪದಾರ್ಥಗಳು ಎಳ್ಳು ಕಾಳು ಅಥವಾ ಕಣಕ (ತಾಹಿನಿ), ಮತ್ತು ಸಕ್ಕರೆ, ಗ್ಲೂಕೋಸ್ ಅಥವಾ ಜೇನು.[] ಸೋಪ್‌ವೋಟ್[][] (ಅರೇಬಿಕ್‌ನಲ್ಲಿ ‘erq al halaweh ಟರ್ಕಿಯಲ್ಲಿ çöven []) ಎಂದು ಕರೆಯುತ್ತಾರೆ; ಕೆಲವೊಂದು ಪಾಕ ವಿಧಾನದಲ್ಲಿ ಮಿಶ್ರಣದಲ್ಲಿ ಎಣ್ಣೆಯನ್ನು ಗಟ್ಟಿಗೊಳಿಸಲು ಅಥವಾ ಸಿಹಿಗೆ ವಿಶಿಷ್ಟವಾದ ರೂಪ ನೀಡಲು ಮೊಟ್ಟೆಯ ಬಿಳಿಭಾಗ ಅಥವಾ ಮಾರ್ಶ್‌ಮಲೊ ಬೇರನ್ನು ಸೇರಿಸುತ್ತಾರೆ.ಇತರೆ ಪದಾರ್ಥಗಳು ಮತ್ತು ಸ್ವಾದ,ಪರಿಮಳಕ್ಕಾಗಿ ಪಿಸ್ತಾ ಬೀಜಗಳು,ಕೊಕೊ ಪುಡಿ, ಕಿತ್ತಳೆ ರಸ,ವೆನಿಲಾ,ಅಥವಾ ಚಾಕಲೇಟ್‌ಗಳನ್ನು ತಾಹಿನಿ ಮತ್ತು ಸಕ್ಕರೆ ಪಾಕಕ್ಕೆ ಸೇರಿಸಲಾಗುತ್ತದೆ.

ಸೂರ್ಯಕಾಂತಿ‌

[ಬದಲಾಯಿಸಿ]
ರಷ್ಯಾದ ಒಂದು ಹಲ್ವಾ ಸಿಹಿ ತಿಂಡಿ

ಸೂರ್ಯಕಾಂತಿ ಹಲ್ವಾ, ಇದು ಪೂರ್ವ ಯೂರೋಪ್ ದೇಶಗಳಾದ ಅರ್ಮೇನಿಯಾ,ಬೆಲಾರಸ್,ಬಲ್ಗೇರಿಯಾ, ರೊಮೇನಿಯಾ,ಮಾಲ್ಡೋವಾ,ರಷ್ಯಾ,ಪೋಲ್ಯಾಂಡ್,ಮತ್ತು ಉಕ್ರೇನ್‌ಗಳಲ್ಲಿ ಪ್ರಸಿದ್ಧವಾಗಿದ್ದು,ಎಳ್ಳಿಗೆ ಬದಲಾಗಿ ಸೂರ್ಯಕಾಂತಿ ಬೀಜದಿಂದ ತಯಾರಿಸುತ್ತಾರೆ.

ಫ್ಲೋಸ್ ಹಲ್ವಾ

[ಬದಲಾಯಿಸಿ]

Pişmaniye (ಟರ್ಕಿಶ್) ಅಥವಾ ಫ್ಲೋಸ್ ಹಲ್ವಾ ಒಂದು ಸಾಂಪ್ರದಾಯಿಕ ಸಿಹಿಯಾಗಿದ್ದು ಟರ್ಕಿಯ ಕೊಸಿಲಿಯಲ್ಲಿ ತಯಾರಿಸುತ್ತಾರೆ,ಲಘುವಾದ ಹಲ್ವಾದ ಮಿಶ್ರಣದಲ್ಲಿ ತೆಳುವಾದ ದಾರವನ್ನು ಬಳಸಿ ತಯಾರಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಗೋಧಿಯ ಹಿಟ್ಟು ಮತ್ತು ಸಕ್ಕರೆ ಇದ್ದು ಎಳೆಗಳನ್ನು ಚೆಂಡಿನಾಕಾರದಲ್ಲಿ ನಿರಂತರವಾಗಿ ಸುತ್ತಿ ನಂತರ ಒತ್ತಲಾಗುತ್ತದೆ. ಇದೇ ಹಲ್ವಾ ಆಗಿದ್ದು ಕಾಟನ್ ಕ್ಯಾಂಡಿಯನ್ನು ಹೋಲುತ್ತದೆ.ಫ್ಲೋಸ್ ಹಲ್ವಾವನ್ನು ಸಾಮಾನ್ಯ ಹಾಗೂ ಪಿಸ್ತಾ ರುಚಿಯಲ್ಲಿ ಮಾಡಲಾಗುತ್ತದೆ. ಇದರ ಬ್ರ್ಯಾಂಡ್‌ಗಳು ಹಲಾಲ್ ಅಥವಾ ಕೋಶರ್ ಸರ್ಟಿಫೀಕೇಶನ್ಸ್ ಹೊಂದಿರುತ್ತವೆ. ಉತ್ತರ ಭಾರತದಲ್ಲಿ ಪ್ರಸಿದ್ಧವಾದ ಪಿಸ್ತಾ ರುಚಿ ಹೊಂದಿರುವ ಫ್ಲೋಸ್ ಹಲ್ವಾ ಹೋಲುತ್ತದೆ.ಇದು ಸ್ವಲ್ಪ ಹೆಚ್ಚಿಗೆ ದಪ್ಪವಿದ್ದು,ಇದನ್ನು "Patisa" ಅಥವಾ ಸೋಹನ್ ಪಾಪ್ಡಿ ಎಂದು ಕರೆಯಲಾಗುತ್ತದೆ.ಚೈನೀಸ್ ಪಾಕಶಾಸ್ತ್ರದಲ್ಲಿ,ಕ್ಯಾಂಡಿ ರೂಪದಲ್ಲಿರುವ ಫ್ಲೋಸ್ ಪಿಸ್ಮಾನಿಯಾ ಅಥವಾ ಪಾಶ್ಮಾಕ್ ಹಲ್ವಾ ರೀತಿಯಲ್ಲಿದ್ದು ಡ್ರ್ಯಾಗನ್ ಬ್ರೆಡ್ ಕ್ಯಾಂಡಿಎಂದು ಪ್ರಸಿದ್ಧವಾಗಿದ್ದು ಇದನ್ನು ಲಘು ಉಪಹಾರಕ್ಕೆ ಅಥವಾ ಸಿಹಿಯಾಗಿ ಬಳಸುತ್ತಾರೆ.

ಸಾಂಸ್ಕೃತಿಕ ಬಳಕೆ

[ಬದಲಾಯಿಸಿ]

ಹಲ್ವಾ ಎಂಬುದು ಆಧುನಿಕ ಇಂಗ್ಲೀಶ್ ಭಾಷೆಯಲ್ಲಿ ಬಳಸುವ ಸಾಮಾನ್ಯ ಶಬ್ದವಾಗಿದ್ದು ಬಲ್ಕನ್ ಭಾಷೆಗಳ ಲಿಪ್ಯಂತರಣದಿಂದ ಬಂದಿದೆ. ಇತರೆ ಲಿಪ್ಯಂತರಣಗಳು: ಹೆಲ್ವಾ (ಮಾಲ್ಟೀಸ್), ಹಲ್ವಾ (ಹಿಬ್ರೂ),ಹಾಲ್ವಾಅಥವಾ ಹಾಲ್ವಿ(ಅರೇಬಿಕ್),ಹೆಲ್ವಾ(ಟರ್ಕಿಶ್),ಹಲ್ವಾ(ಹಿಂದೂಸ್ಥಾನಿ). ಹಿಬ್ರೂವಿನಿಂದ ಬಂದ ಹಲ್ವಾಹೀಬ್ರೂ:חלבה ಎಂಬ ಶಬ್ದವನ್ನು ವಿಶೇಷವಾಗಿ ಕೋಶರ್ ಬಗೆಗಳ ಕುರಿತಾಗಿ ಹೇಳುವಾಗ ಬಳಸಲಾಗುತ್ತದೆ. ಅರೇಬಿಕ್‍ನಹಲವಾ(حلاوة)ದ ಅರ್ಥವೆಂದರೆ ’ಮಾಧುರ್ಯ ಹಲ್ವಾ(حلوى)ಎಂದರೆ ಸಿಹಿ ಅಥವಾ ಕ್ಯಾಂಡಿ.halva ಎಂಬ ಶಬ್ದವು ಅರೇಬಿಕ್‌ನ halwaದಿಂದ ಬಂದಿದೆ.ಇದರ ಮೂಲ ಪದ hilwaಇದರರ್ಥ ಸಿಹಿ.

ಅಲ್ಬೇನಿಯಾ

[ಬದಲಾಯಿಸಿ]

ಅಲ್ಬೇನಿಯಾದಲ್ಲಿ Hallvë ಎಂದು ಕರೆಯಲ್ಪಡುವ ಹಲ್ವಾವನ್ನು ಸಿಹಿ-ತಿಂಡಿಯ ಊಟದ ರೂಪದಲ್ಲಿ ಬಳಸುತ್ತಾರೆ,ಅಂದರೆ ಅದಕ್ಕೆ ಮೊದಲು ಸ್ಟಾರ್ಟರ್‌ಗಳು ಅಥವಾ ಅಪೆಟೈಸರ್‌ಗಳನ್ನು ಸೇವಿಸಿರುವುದಿಲ್ಲ.ಅಲ್ಬೇನಿಯಾದಲ್ಲಿ ತಯಾರಾಗುವ ಹೆಚ್ಚಿನ ಎಲ್ಲಾ ಹಲ್ವಾಗಳು ಹಿಟ್ಟು ಬಳಸಿರುವ ಹಲ್ವಾಗಳು,ಆದರೂ ಮನೆಯಲ್ಲಿ ತರಿ(ರವೆ)ಹಲ್ವಾ ಅಂಗಡಿಗಳಲ್ಲಿ ಎಳ್ಳು ಹಲ್ವಾವನ್ನು ತಯಾರಿಸಿ ಬಳಸುತ್ತಾರೆ.ಸಾಮಾನ್ಯವಾಗಿ ಗೋಧಿ ಹಿಟ್ಟು ಬಳಸಿರುತ್ತಾರೆ. ಆದರೆ ಜೋಳದ ಹಿಟ್ಟಿನ ಹಲ್ವಾ ಕೂಡ ಸಾಮಾನ್ಯ.

ಅರ್ಜೆಂಟೈನಾ‌

[ಬದಲಾಯಿಸಿ]

ಅರ್ಜೆಂಟೈನಾ‌ದಲ್ಲೂ ಹಲ್ವಾ ದೊರೆಯುತ್ತದೆ, ಪ್ರಮುಖವಾಗಿ ಸಿರಿಯಾ-ಲೆಬನೀಸ್ ಅಥವಾ ಅರ್ಮೇನಿಯಾ ಮೂಲದ ಮಿಶ್ರಣಗಳು. ೧೯೪೦ನಲ್ಲಿ ನೆಲಗಡಲೆ ಬಳಸಿ ರಿಯೊ ಸೆಗುಂಡೋಸ್ ಜಾರ್ಗಲೋಸ್ ಎಂಬ ಗ್ರೀಕ್ ವಲಸೆಗಾರ ಕುಟಂಬದವರು ಮೆಂಟೆಕೋಲ್ಹೆಸರಿನಲ್ಲಿ ಹಲ್ವಾ ತಯಾರಿಸಿದರು.ಇದು ೧೯೯೦ರ ಸುಮಾರಿಗೆ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡು ಜಾಗತಿಕ ವ್ಯಾಪಾರಿಸಂಸ್ಥೆ ಕ್ಯಾಡ್ಬರಿ ಶ್ವೆಪ್ಸ್ಗೆ ಮಾರಾಟವಾಯಿತು.ಇಲ್ಲಿ ಪಾಕವಿಧಾನವನ್ನು ಬದಲಾಯಿಸಲಾಯಿತು.ಈಗ ಜಾರ್ಗಲೋಸ್ ಮೂಲ ಹಲ್ವಾವನ್ನು ನುಕ್ರೀಮ್ ಹೆಸರಿನಲ್ಲಿ ತಯಾರಿಸುತ್ತಾರೆ.ಈ ಎರಡು ವಿಧಗಳು ಕ್ಯಾಂಡಿ ಅಂಗಡಿ ಮತ್ತು ಸೂಪರ್‌ಮಾರುಕಟ್ಟೆಗಳಲ್ಲಿ ದೊರೆಯುತ್ತದೆ.

ಬಹರೇನ್

[ಬದಲಾಯಿಸಿ]

ಬಹರೇನ್‌ನಲ್ಲಿ ಹಲ್ವಾದ ಪ್ರಸಿದ್ಧ ರೂಪವೆಂದರೆ ಹಲ್ವಾ ಶೋವೈಟರ್. ಇದನ್ನು ಸುತ್ತಮುತ್ತಲಿನ ದೇಶಗಳಲ್ಲಿ ಹಲ್ವಾ ಬಹರೇನಿ ಎಂದು ಪ್ರಸಿದ್ಧವಾಗಿದೆ.

ಬೋಸ್ನಿಯಾ

[ಬದಲಾಯಿಸಿ]

ಬೋಸ್ನಿಯಾದಲ್ಲಿ ಹಲ್ವಾವನ್ನು ತುಂಬಾ ಬಳಸುತ್ತಾರೆ ಮತ್ತು ವಿಭಿನ್ನ ಬಗೆಗಳಲ್ಲಿ ಮತ್ತು ರುಚಿಗಳಲ್ಲಿ ದೊರೆಯುತ್ತದೆ.

ಬಾಂಗ್ಲಾದೇಶ

[ಬದಲಾಯಿಸಿ]
ಬಾಂಗ್ಲಾದೇಶದ ಹಲ್ವಾ ವಿಂಗಡಣೆ.(ಎಡದಿಂದ): ಪಪ್ಪಾಯಿ, ಗಜ್ಜರಿ, ಮತ್ತು ತರಿ(ರವೆ). (ಕೆಳಗೆ): ಚಿಕ್‌ಪೀ.

ಬಾಂಗ್ಲಾದೇಶ ಮತ್ತು ನೆರೆಯ ಕೊಲ್ಕತ್ತಾಬಂಗಾಳಿ ಮಾತನಾಡುವ ಪ್ರದೇಶಗಳಲ್ಲಿ ವಿವಿಧ ಬಗೆಯ ಹಲುವಾ ಬಂಗಾಳಿ:হালুয়াವನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಕಂಡುಬರುವ ಹಲ್ವಾ ತರಿ(ರವೆ)ಯಿಂದ ಮಾಡಿದ್ದು (সুজির হালুয়া ಶುಜಿರ್ ಹಲುವಾ ), ಕ್ಯಾರೆಟ್ (গাজরের হালুয়া ಗಾಜರ್ ಹಲುವಾ ), ಚಿಕ್‌ಪಿ (বুটের হালুয়া ಬಟರ್ ಹಲುವಾ), ಹಿಟ್ಟು (নেশেস্তার হালুয়া ನೆಶೆಸ್ಟಾರ್ ಹಲುವಾ) ಬಾದಾಮಿ (বাদামের হালুয়া ಬಾದಾಮರ್ ಹಲುವಾ),ಮತ್ತು ಪಪಾಯ (পেঁপের হালুয়া ಪೆಪೆರ್ ಹಲುವಾ). ಹಲುವಾವನ್ನು ತುಂಬಾ ಸಮೃದ್ಧವಾದ ಸಿಹಿಯಾಗಿ ಬಳಸುತ್ತಾರೆ, ಆದರೆ ಬಾಂಗ್ಲಾದೇಶಿಯರು ಉಪಹಾರದ ಸಾಂಪ್ರದಾಯಿಕ ಬ್ರೆಡ್ ಪುರಿಸ್ (পুরি ಪೂರಿ )ಅಥವಾ ಪರಾಠಾಗಳು (পরোটা ಪರೋಟಾ).ಜೊತೆ ಸೇವಿಸುವುದು ಅಪರೂಪವೇನಲ್ಲ.

ಪಂಜಾಬ್ ಸುಜಿ ಹಲ್ವಾ (ಸಿಹಿ ಆಹಾರ)

ಬಲ್ಗೇರಿಯಾ

[ಬದಲಾಯಿಸಿ]

ಬಲ್ಗೇರಿಯಾದಲ್ಲಿ ಹಲ್ವಾ(халва) ಎಂಬ ಪದವನ್ನು ಹಲವಾರು ಸಿಹಿ ತಿಂಡಿಗಳಿಗೆ ಬಳಸಲಾಗುತ್ತದೆ. ತಾಹಿನಿ ಹಲ್ವಾ (тахан халва) ಇದು ಬಹು ಪ್ರಖ್ಯಾತವಾಗಿದ್ದು, ತಿಂಡಿ ತಿನಿಸು ಮಾರಾಟ ಮಳಿಗೆಗಳಲ್ಲಿ ಕಾಣಬಹುದಾಗಿದೆ. ಎರಡು ಬಗೆಯಲ್ಲಿ ತಾಹಿನಿ ಹಲ್ವಾವನ್ನು ಮಾಡಲಾಗುತ್ತದೆ.ಅದರಲ್ಲಿ ಒಂದು ಸೂರ್ಯಕಾಂತಿ ಬೀಜವನ್ನು ಬಳಸಿ ಮಾಡಲಾಗುತ್ತದೆ ಮತ್ತು ಇನ್ನೊಂದು ಬಗೆಯೆಂದರೆ ಎಳ್ಳಿನ ಬೀಜವನ್ನು ಬಳಸಿ ಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಯಲ್ಬಾನಿಷ್ಟಾ ಮತ್ತು ಹಾಸ್ಕೋವೊಗಳು ಹಲ್ವಾಗಳಿಗೆ ಪ್ರಸಿದ್ಧ ಸ್ಥಳಗಳಾಗಿವೆ. ಸೆಮೊಲಿನಾ ಹಲ್ವಾ (грис халва)ಗಳನ್ನು ಮನೆಗಳಲ್ಲಿ ಮಾಡಲಾಗುತ್ತದೆ ಮತ್ತು ಇವುಗಳನ್ನು ಹಿಟ್ಟಿನಿಂದ ಮಾಡಿದ ತಿಂಡಿಗಳನ್ನು ಮಾರುವ ಅಂಗಡಿಗಳಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಮೂರನೇ ವಿಧವಾದ ಬಿಳಿಯ ಹಲ್ವಾ(бяла халва)ವನ್ನು ಸಕ್ಕರೆಯಿಂದ ಮಾಡಲಾಗುತ್ತದೆ. ಲೆಂಟ್‌ ಕಾಲ(Sirni Zagovezni; Сирни заговезни)ದಲ್ಲಿನ ಕೊನೆಯ ರವಿವಾರದಂದು ಎಲ್ಲ ಹುಡುಗರು ಸುತ್ತಾಗಿ ನಿಂತು ಕೊಳ್ಳುತ್ತಾರೆ. ಮತ್ತು ಸುತ್ತುತ್ತಿರುವ ಹಲ್ವಾವನ್ನು ತಮ್ಮ ಬಾಯಿಯಿಂದ ಅವರು ಹಿಡಿಯಬೇಕು ಇದು ಈ ಆಡದ ನಿಯಮವಾಗಿದ್ದು,ಈ ಆಟದಿಂದ ಬಿಳಿಯ ಹಲ್ವಾವು ತುಂಬ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ ಬಲ್ಗೆರಿಯಾದಲ್ಲಿ ತಯಾರಿಸಲ್ಪಡುವ ಎಲ್ಲ ಹಲ್ವಾಗಳಿಗೂ ಗುಡ್‌ ಕಿಂಗ್‌ ಹೆನ್ರಿ (чувен)ಸುವಾಸನೆಯನ್ನು ಮಿಶ್ರಣ ಮಾಡಲಾಗುತ್ತದೆ.

ಕ್ರೊಯೇಷಿಯಾ

[ಬದಲಾಯಿಸಿ]

ಹಲ್ವಾಗಳು ಸಿಹಿಯಾಗಿದ್ದು ಕ್ರೊಯೇಷಿಯಾದಲ್ಲಿ ಬಳಸಲ್ಪಡುತ್ತವೆ.ಇದು ಸ್ಲಾವೊನಿಯಾ,ಕೊರ್ಡನ್‌,ಲಿಕಾ ಮತ್ತು ಬಾರಂಜಾಗಳಲ್ಲಿ ಮತ್ತು ಒಟ್ಟೊಮನ್‌ ದೊರೆಗೆ ಸಂಪರ್ಕದಲ್ಲಿ ಬರುವ ಸಂರ್ಪಕ್ಕೆ ಬರುವ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯಾಗಿರದೇ ಸಾಮಾನ್ಯವಾಗಿ ಒಂದೇ ತೆರನಾಗಿದೆ.ಅದರಲ್ಲೂ ಸ್ಲಾವೊಂಜಾದಲ್ಲಿ ನಡೆಯುವ "ಕಿರ್ಜಾವಿ"ಎಂಬ ಸ್ಥಳಿಯ ಚರ್ಚ್‌ ಹಬ್ಬದಲ್ಲಿ ಅತ್ಯಂತ ಪ್ರಸಿದ್ಧವಾಗಿದೆ.

ಈಜಿಪ್ಟ್‌

[ಬದಲಾಯಿಸಿ]

ಈಜಿಪ್ತ್‌ನಲ್ಲಿ ಇದರ ಹೆಸರು ಹಲವಾ ಅಥವಾ ಹಲವಾ ತಾಹಿನಿಯಾ ಎಂದಿದೆ.ಇದರಲ್ಲಿ ಬಹಳಷ್ಟು ವಿಧಾನಗಳಿದ್ದು ಖಾಲಿ ಚೌಕಗಳು,ನಾರಿನಿಂದ ಕೂಡಿದ ಹಲ್ವಾಗಳನ್ನು ಮಾಡುತ್ತಾರೆ. ಹಲ್ವಾ ಹೇರ್‌ ಎನ್ನುತ್ತಾರೆ.ಇನ್ನುಳಿದ ವಿಧಗಳನ್ನು ಪೈನ್‌ ಮರದ ಬೀಜಗಳಿಂದ,ಪಿಸ್ಟಾಚಾಯ್ಸ್‌,ಮತ್ತು ಬಾದಾಮಿಗಳನ್ನು ದೊಡ್ಡ ಚೌಕಾಕಾರಗಳಲ್ಲಿ ಅಥವಾ ಮೊದಲೇ ಸಿದ್ದಪಡಿಸಿದ ಗ್ರಾಹಕರಿಗಾಗಿನ ಪ್ಯಾಕ್‌ಗಳಲ್ಲಿ ಬೆರೆಸಲಾಗುತ್ತದೆ ಅಥವಾ ಈಗ ಹೆಚ್ಚು ಪ್ರಚಲಿತದಲ್ಲಿರುವ ಎನರ್ಜಿ ಬಾರ್ಸ್‌(ಚಾಕಲೇಟ್‌ ಬಾರ್‌ಗಳ ಅಳತೆಯಲ್ಲಿರುತ್ತವೆ).ಈಜಿಪ್ತ್‌ನಲ್ಲಿ ಹಲ್ವಾಗಳು ಅತ್ಯಂತ ಪ್ರಸಿದ್ಧವಾದ ಸಿಹಿಪದಾರ್ಥವಾಗಿದ್ದು ಬಹುಜನರ ಪ್ರೀತಿಗೆ ಪಾತ್ರವಾಗಿದೆ.ಇವುಗಳನ್ನು ಬೆಳಿಗ್ಗಿನ ಅಥವಾ ಸಂಜೆಯ ಉಪಹಾರಕ್ಕಾಗಿ ಬಿಸಿಯಾದ ಬ್ರೆಡ್‌ಗಳು,ಸ್ಯಾಂಡ್‌ವಿಚ್‌ಗಳು,ಮತ್ತು ಕೆಲವುಬಾರಿ ಅರೆಬಿಕ್‌ಗೆ ಸಮಾನವಾದ ಹೆಪ್ಪುಗಟ್ಟಿದ ಕೆನೆಯೊಂದಿಗೆ ಬಳಸಲಾಗುತ್ತದೆ ಈಜಿಪ್ತಿನ ಅರೇಬಿಕ್ ಈಸ್ಟಾಇದೊಂದು ಪ್ರಧಾನವಾದ ತಿಂಡಿಯಾಗಿದ್ದು ದೇಶದಾದ್ಯಂತ ಬೇಡಿಕೆಯಿರುವ ತಿಂಡಿಯಾಗಿದೆ ಮತ್ತು ಇದನ್ನು ಶೇಖರಿಸಲು ಹೆಚ್ಚಿನ ಉತ್ತಮ ವಾತಾವರಣದ ಅವಶ್ಯಕತೆಯೂ ಇರುವುದಿಲ್ಲ ಮತ್ತು ಇದನ್ನು ಮುಕ್ತ ವಾತಾವರಣದಲ್ಲಿ ಹಾಳಾಗುವುದೆಂಬ ಹೆದರಿಕೆಯನ್ನು ತೊರೆದು ಇರಿಸಬಹುದಾಗಿದೆ.

ಮೆಸಿಡೋನಿಯಾ

[ಬದಲಾಯಿಸಿ]

ಮ್ಯಾಸಿಡೊನಿಯಾದಲ್ಲಿ ಜೊತೆಯಾದ ಸಿಹಿ ಪದಾರ್ಥಕ್ಕೆ ಹಲ್ವಾ ಎನ್ನುತ್ತಾರೆ. ಹಲ್ವಾಗಳನ್ನು ತಾಹಿನಿ(ಎಳ್ಳಿನ ಅಥವಾ ಸೂರ್ಯಕಾಂತಿ)(Таан алва)ಗಳು, F.Y.R.O.M..ಗಳು ಹೆಚ್ಚಾಗಿ ಬಳಕೆಯಲ್ಲಿವೆ. ಮತ್ತು ಇದು ನೆಗೊಟಿನೊದಲ್ಲಿನ ಬಹುಪ್ರಸಿದ್ಧವಾದ ತಿಂಡಿಯಾಗಿದೆ.ರವೆಯಿಂದ ಮಾಡುವ ಹಲ್ವಾ(алва од гриз)ಗಳನ್ನು ಮನೆಯಲ್ಲಿ ಮಾತ್ರ ಮಾಡಲಾಗುತ್ತದೆ. ಇಜ್ಮಿರಕ್ಷಾ ಹಲ್ವಾ(Измирска алва)ಗಳು ಚಾಕಲೇಟ್‌ಗಳ ವಿಧದಲ್ಲಿದ್ದು ಇದನ್ನು ಗೋಧಿಹಿಟ್ಟು,ಕೊಕೊ,ಸಕ್ಕರೆ ಮತ್ತು ಕಡಲೆಗಳನ್ನು ಬೆರೆಸಿ ಮಾಡಲಾಗುತ್ತದೆ.ಇವುಗಳನ್ನೂ ಸಹ ಮನೆಗಳಲ್ಲಿ ಮಾಡಲಾಗುತ್ತದೆ.

ಗ್ರೀಸ್ ಮತ್ತು ಸೈಪ್ರಸ್

[ಬದಲಾಯಿಸಿ]

ಗ್ರೀಸ್‌ ಮತ್ತು ಸೈಪ್ರಸ್‌ಗಳಲ್ಲಿ ಹಲ್ವಾ(χαλβάς)ಎಂದರೆ ಎರಡೂ ವಿಧದ ಭಕ್ಷಗಳಿಗೆ ಬಳಸಲಾಗುತ್ತದೆ. ಎಳ್ಳಿನ ಹಲ್ವಾಗಳನ್ನು ಉತ್ತಮ ದರ್ಜೆಯ ಸಭೆ ಸಮಾರಂಭಗಳಲ್ಲಿ ಬಳಸಲಾಗುತ್ತದೆ.[] ಪಾಕಸೂತ್ರಗಳಲ್ಲಿ ಬಳಸುವ ಉನ್ನತ ಭಾಷೆಯಲ್ಲಿ ರವಾ ಹಲ್ವಾವನ್ನು "೧:೨:೩:೪" ಎನ್ನುತ್ತಾರೆ ಹೀಗೆಂದರೆ ಒಂದರಷ್ಟು ಎಣ್ಣೆಯನ್ನೂ, ಎರಡರಷ್ಟು ರವಾವನ್ನೂ, ಮೂರರಷ್ಟು ಸಕ್ಕರೆಯನ್ನೂ ಮತ್ತು ನಾಲ್ಕರಷ್ಟು ನೀರನ್ನೂ ಬೆರೆಸಬೇಕೆಂದು ಅರ್ಥವಾಗುತ್ತದೆ.

ಕೆಲವು ಭಾರತದ ಹಲ್ವಾ ಪ್ರಕಾರಗಳು: ರವಾ ಹಲ್ವಾ, ಕಡಲೆ ಹಲ್ವಾ, ಮತ್ತು ಗಜ್ಜರಿ ಹಲ್ವಾ

ಹಲವಾರು ವಿಧವಾದ ಹಲ್ವಾಗಳನ್ನು ಭಾರತದಲ್ಲಿ ಮಾಡಲಾಗುತ್ತಿದ್ದು ಅವುಗಳನ್ನು ಅಲ್ಲಿನ ಪ್ರದೇಶ ಮತ್ತು ತಯಾರಾಗುವ ವಿಧಾನಗಳಿಂದ ಬೇರ್ಪಡಿಸಲಾಗುತ್ತದೆ. ಇಲ್ಲಿ ಅತ್ಯಂತ ಪ್ರಸಿದ್ಧವಾದ ಹಲ್ವಾ ಎಂದರೆ ಸೂಜಿ ಹಲ್ವಾ(ರವಾ ಹಲ್ವಾ)[], ಹಿಟ್ಟಿನ ಹಲ್ವಾ(ಗೋದಿ ಹಲ್ವಾ)[], ಹೆಸರುಬೇಳೆ ಹಲ್ವಾ(ಮೂಂಗ್‌ ಹಲ್ವಾ)[೧೦], ಗಜ್ಜರಿ ಹಲ್ವಾ(ಗಜ್ಜರಿ ಹಲ್ವಾ)[೧೧], ಧುದಿ ಹಲ್ವಾ, ಕಡಲೆ ಬೇಳೆ ಹಲ್ವಾ( ಕಡಲೆ),ಮತ್ತು ಕಾಜು ಹಲ್ವಾ(ಗೇರು ಬೀಜದ ಹಲ್ವಾ)ಆಗಿವೆ.ದಕ್ಷಿಣ ಕನ್ನಡದಲ್ಲಿ ಬಾಳೆಹಣ್ಣುನಿಂದ ತಯಾರಿಸಿದ ಹಲ್ವ ಬಹಳ ಪ್ರಸಿದ್ಧವಾಗಿದೆ.ತಮಿಳುನಾಡು ರಾಜ್ಯದ ತಿರುನೆಲ್ವೇಲಿಯನ್ನು ಹಲ್ವಾ ನಗರಎಂತಲೇ ಕರೆಯುತ್ತಾರೆ. ಕೇರಳದ ಪ್ರಾಂತಗಳಲ್ಲಿ ಹಲ್ವಾವನ್ನು ಅಲ್ವಾ ಎಂದು ಉಚ್ಚರಿಸುತ್ತಾರೆ.ಕೇರಳದ ಕೋಯಿಕೋಡ್ ನಗರವು ವಿಷಿಷ್ಟವಾದ ಹಲ್ವಾಗಳಿಗೆ ಪ್ರಸಿದ್ಧವಾಗಿದ್ದು ಅದನ್ನು ಕೊಝಿಕೊಡನ್‌ ಹಲ್ವಾ ಎಂದೆ ಕರೆಯುತ್ತಾರೆ. ಇವು ವಿಧವಿಧದ ಸುವಾಸನೆಗಳಲ್ಲಿ ದೊರೆಯುತ್ತದೆ ಅವೆಂದರೆ ತುಪ್ಪದ ಹಲ್ವಾ, ತೆಂಗಿನ ಕಾಯಿ ಹಲ್ವಾ, ಗೊಡಂಬಿ, ಕರ್ಜೂರ, ಎಳೆನೀರು, ಅನಾನಸ್, ಹಸಿರು ಸೊಪ್ಪುಗಳು ಇತ್ಯಾದಿಗಳನ್ನು ಬಳಸಿದ ಹಲ್ವಾಗಳು ದೊರೆಯುತ್ತವೆ.ಕೊಝಿಕೊದನ್‌ ಹಲ್ವಾಗಳನ್ನು ಮುಖ್ಯವಾಗಿ ಮೈದಾ ಹಿಟ್ಟಿ(ಹೆಚ್ಚು ಸಂಸ್ಕರಿಸಿದ ಗೋಧಿ)ನಿಂದ ಮಾಡಲಾಗುತ್ತದೆ. ಕುರುತಾ ಅಲ್ವಾ(ಕಪ್ಪು ಹಲ್ವಾಗಳು)ಗಳನ್ನು ಅಕ್ಕಿಯಿಂದ ಮಾಡಲಾಗುತ್ತದೆ. ಇದೂ ಕೂಡ ತುಂಬ ಪ್ರಸಿದ್ಧವಾಗಿದೆ. ಕಾಶಿ ಹಲ್ವಾಗಳನ್ನು ಕುಂಬಳ ಅಥವಾ ಬೂದುಗುಂಬಳ ಕಾಯಿಗಳಿಂದ ಮಾಡಲಾಗುತ್ತದೆ.ಇದು ಪ್ರಸಿದ್ಧವಾದ ಮತ್ತು ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಇದನ್ನು ಹೆಚ್ಚಾಗಿ ಬ್ರಾಹ್ಮಣರ ಮದುವೆ ಸಮಾರಂಭಗಳಲ್ಲಿ ಮಾಡಲಾಗುತ್ತದೆ.

ಇರಾನ್‌

[ಬದಲಾಯಿಸಿ]

ಇರಾನ್‌ನಲ್ಲಿ ಗೋಧಿ ಹಿಟ್ಟು,ಬೆಣ್ಣೆ,ಮತ್ತು ರೋಸ್‌ ವಾಟರ್‌ಗಳನ್ನು ಬಳಸಿ ಮಾಡಿದ ತಿಂಡಿಗೆ Archived 2009-02-19 ವೇಬ್ಯಾಕ್ ಮೆಷಿನ್ ನಲ್ಲಿ. ಹಲ್ವಾ ಎನ್ನುತ್ತಾರೆ.ಅಂತಿಮವಾಗಿ ತಯಾರಾದ ತಿಂಡಿಯು ಅಚ್ಚು ಕಂದು ಬಣ್ಣದಲ್ಲಿ ಮಸುಕಾಗಿರುತ್ತದೆ.ಹಲ್ವಾ‌ವನ್ನು ಬಟ್ಟಲಿನಲ್ಲಿ ಅದು ಗಟ್ಟಿಯಾಗುವವರೆಗೆ ಇರಿಸಲಾಗುತ್ತದೆ.ಹಲ್ವಾಗಳನ್ನು ಉತ್ತರಕ್ರಿಯೆ ಅಥವಾ ಶವಸಂಸ್ಕಾರಗಳಂತಹ ಕಾರ್ಯಗಳಲ್ಲಿ ಮಾಡಲಾಗುತ್ತದೆ.ಮತ್ತು ಇದರ ಮೇಲೆ ಕಾಯಿಯ ತುರಿ ಮತ್ತು ಬಾದಾಮಿ ಹಿಟ್ಟನ್ನು ಉದುರಿಸಲಾಗುತ್ತದೆ. ಕ್ಯಾಸ್ಪಿಯನ್‌ ಪ್ರಾಂತ್ಯದಲ್ಲಿನ ಗಿಲಾನ್‌ಲ್ಲಿ ಅಸಾಲಿ ಹಲ್ವಾ ಎಂದು ಕರೆಯುತ್ತಾರೆ(ಜೇನುಹಲ್ವಾ ಎಂದು ಅಧಿಕೃತ ಭಾಷೆಯಲ್ಲಿ ಬರೆಯುತ್ತಾರೆ.)ಇದು ಇರಾನಿನಲ್ಲಿ ತಯಾರಿಸಲಾಗುವ ಇತರ ಹಲ್ವಾಗಿಂತ ಭಿನ್ನವಾಗಿದ್ದು ಎಳ್ಳಿಗೆ ಬದಲಾಗಿ ಇದರಲ್ಲಿ ಅಕ್ಕಿ ಹಿಟ್ಟನ್ನು ಬಳಸಲಾಗುತ್ತದೆ ಮತ್ತು ಸಿಹಿಗೆ ಸಕ್ಕರೆಯ ಬದಲಾಗಿ ಜೇನುತುಪ್ಪವನ್ನು ಬಳಸುತ್ತಾರೆ. ಹಲ್ವಾರ್‌ಡೆಹ್‌ಎಂಬುದು ಇರಾನಿನ ಪದವಾಗಿದ್ದು ಇದನ್ನು ತಾಹಿನಿಯ ಮೂಲದಿಂದ ಮಾಡಲಾಗುವ ಹಲ್ವಾಕ್ಕೆ ಬಳಸಲಾಗುತ್ತದೆ.ಆದರೆ ಈ ಪದವು ಎಲ್ಲಾ ವಿಧಗಳ ಹಲ್ವಾವನ್ನೂ ಒಳಗೊಂಡಿರುತ್ತದೆ ಎಂದು ಹೇಳಲಾಗುವುದಿಲ್ಲ.ಆರ್ದೆಶ್‌ ಇದು ಎಳ್ಳನ್ನು ಬೀಸಿ,ಸಿರಪ್‌ನೊಂದಿಗೆ ಸೇರಿಸಿ ಸಿಹಿಮಾಡಿದ ಪೇಸ್ಟ್‌ಗೆ ಇಟ್ಟಿರುವ ಹೆಸರಾಗಿದೆ.

ಇಸ್ರೇಲ್‌

[ಬದಲಾಯಿಸಿ]
ಜೆರುಸಲೆಮ್‌ನಲ್ಲಿ ಮಹಾನೆ ಯೆಹುದಾದ ಹಲ್ವಾ ಪ್ರದರ್ಶನ

ಎಳ್ಳಿನ ದಟ್ಟವಾದ ಪರಿಮಳವುಳ್ಳ ತಾಹಿನಿ ಹಲ್ವಾವು ಇಸ್ರೇಲ್‌ನಲ್ಲಿ ಮತ್ತು ಜಗತ್ತಿನೆಲ್ಲೆಡೆ ಯಹೂದಿ ಹಿನ್ನೆಲೆಯುಳ್ಳ ಜನರಲ್ಲಿ ಬಹಳ ಪ್ರಸಿದ್ಧವಾಗಿದೆ.[೧೨][೧೩] ಇಂಗ್ಲಿಷ್‌ನಲ್ಲಿ ಇದನ್ನು "ಹಲ್ವಾಹ್" ಎಂದು ಉಚ್ಚರಿಸುತ್ತಾರೆ.ಇದು ಸಾಮಾನ್ಯವಾಗಿ ಒಂದರ ಮೇಲೆ ಒಂದರಂತೆ ಅಥವಾ ಚಿಕ್ಕ ಪೊಟ್ಟಣಗಳಲ್ಲಿ ಬರುತ್ತದೆ ಮತ್ತು ಇದು ಹಲವು ಬಗೆಯ ಸುವಾಸನೆಗಳಲ್ಲಿ ದೊರೆಯುತ್ತದೆ, ಇದರಲ್ಲಿ ಚಾಕಲೇಟ್ ಮತ್ತು ವೆನಿಲ್ಲಾಗಳು ಸಾಮಾನ್ಯವಾಗಿವೆ. ಹಲ್ವಾವು ಬಹುಪಾಲು ಯಾವತ್ತಿಗೂ ಸಸ್ಯಜನ್ಯ ಸಿಹಿ ಆಗಿದೆ,ಅಂದರೆ ಕಶ್ರುತ್ ಕಾನೂನಿನ ಪ್ರಕಾರ ಇದು ಯಾವುದೇ ಮಾಂಸ ಅಥವಾ ಡೈರಿ ಉತ್ಪನ್ನಗಳನ್ನು ಒಳಗೊಂಡಿಲ್ಲ. ಇದನ್ನು ಹಾಲು ಅಥವಾ ಮಾಂಸದ ಅಡುಗೆಯ ಜೊತೆಗೆ ಅಥವಾ ನಂತರ ಸೇವಿಸಬಹುದು.ಇಸ್ರೇಲಿ ಹಲ್ವಾವು ಸಾಮಾನ್ಯವಾಗಿ ಗೋಧಿ ಹಿಟ್ಟು ಅಥವಾ ತರಿ(ರವೆ)ಯನ್ನು ಹೊಂದಿರುವುದಿಲ್ಲ ಬದಲಾಗಿಎಳ್ಳು,ತಾಹಿನಿ,ಗ್ಲುಕೋಸ್,ಸಕ್ಕರೆ,ವೆನಿಲ್ಲಾ ಮತ್ತು ಬೇರೆ ಪ್ರಕಾರದ ಪಾಕವಿಧಾನಗಳಲ್ಲಿ ದೊರೆಯದ ಸಪೊನೇರಿಯಾ ಬೇರಿನ ಸತ್ವವನ್ನು(ಸೋಪ್‌ವರ್ಟ್)ಒಳಗೊಂಡಿರುತ್ತದೆ.[೧೪]

ಲೆಬನಾನ್, ಸಿರಿಯಾ, ಇರಾಕ್, ಜೊರ್ಡಾನ್ ಮತ್ತು ಪ್ಯಾಲೆಸ್ಟೇನಿಯನ್ ಪ್ರಾಂತಗಳು

[ಬದಲಾಯಿಸಿ]

ಲೆಬನಾನ್,ಸಿರಿಯಾ,ಇರಾಕ್,ಜೊರ್ಡನ್ ಮತ್ತು ಪ್ಯಾಲೆಸ್ಟೇನಿಯನ್ ಪ್ರದೇಶಗಳನ್ನೊಳಗೊಂಡ ಲೆವಂಟ್ ಪ್ರಾಂತದಲ್ಲಿ,ಹಲ್ವಾವು ಸಾಂಕೇತಿಕವಾಗಿ ಎಳ್ಳು ಅಥವಾ ತಾಹಿನಿ ಆಧಾರಿತವಾಗಿ ರೂಪುಗೊಂಡಿರುತ್ತದೆ.ಇದಕ್ಕೆ ಬಾದಾಮಿ,ಪಿಸ್ತಾ ಅಥವಾ ಚಾಕಲೇಟ್ ರುಚಿಯನ್ನು ಬೆರೆಸಿರುತ್ತಾರೆ.ಅರೇಬಿಕ್: حلاوةಲೆಬನಾನ್‌ನಿಂದ ದೊಡ್ಡ ಪ್ರಮಾಣದಲ್ಲಿ ಹಲ್ವಾವು ಜಗತ್ತಿನ ಎಲ್ಲೆಡೆಗೆ ಸರಬರಾಜಾಗುತ್ತದೆ.

ಲಿಬಿಯಾ ಮತ್ತು ಟ್ಯುನಿಸಿಯಾ

[ಬದಲಾಯಿಸಿ]

ಟುನಿಸಿಯಾ ಮತ್ತು ಲಿಬಿಯಾದಲ್ಲಿ ಇದನ್ನು ಹಲ್ವಾ ಶಾಮಿಯಾಅಥವಾ ಕೇವಲ ಶಾಮಿಯಾಎಂದು ಕರೆಯುತ್ತಾರೆ.ಇದರ ಅರ್ಥ ಲೆವಂಟೈನ್ ಮಿಠಾಯಿ ಎಂದಾಗುತ್ತದೆ.ಈ ಪ್ರದೇಶಗಳಲ್ಲಿ ಎಲ್ಲಿಯೂ ಸಹ ಹಲ್ವಾ ಎಂಬ ಶಬ್ಧವನ್ನು ಬಳಸಲಾಗುವುದಿಲ್ಲ.

ಲಿಥುವೇನಿಯಾ

[ಬದಲಾಯಿಸಿ]

ಲಿಥುವೇನಿಯಾದಲ್ಲಿ ಇದನ್ನು ಚಲ್ವಾ ಎಂದು ಕರೆಯಲಾಗುತ್ತದೆ ಇದು ಕುರುಕಲು ತಿಂಡಿಯಾಗಿ ವ್ಯಾಪಕವಾಗಿ ಬಳಕೆಯಾಗುತ್ತದೆ ಮತ್ತು ಇದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ (೭೦-೧೫೦ ಗ್ರಾಂಗಳ) ಮಾರಲಾಗುತ್ತದೆ.

ಮಾಲ್ಟಾ

[ಬದಲಾಯಿಸಿ]

ಮಾಲ್ಟಾದಲ್ಲಿ ħelwa tat-Tork (ಆಂಗ್ಲ:Turk's sweet)ಎಂಬ ಪದವನ್ನು ತಾಹಿನಿಯಿಂದ ಮಾಡಿದ ಸಿಹಿಗೆ ಬಳಸುತ್ತಾರೆ. ಇದು ಕೆಲವೊಮ್ಮೆ ಪಿಸ್ತಾ ಅಥವಾ ಬಾದಾಮಿಯನ್ನು ಒಳಗೊಂಡಿರುತ್ತದೆ. ಇದು ಮಾಲ್ಟೀಸ್ ಪಾಕ ಪದ್ಧತಿಯಲ್ಲಿ ಒಂದು ಪ್ರಮುಖವಾದ ಭಾಗವಾಗಿದೆ ಮತ್ತು ಐಸ್‌ಲ್ಯಾಂಡ್‌ನಲ್ಲಿ ಇದು ಒಂದು ಸಿಹಿಯಾದ ಲಘು ಉಪಹಾರವಾಗಿದೆ. ಮುಖ್ಯವಾಗಿ ಇದನ್ನು ಮದುವೆ ಸಮಾರಂಭಗಳ ಕೊನೆಯಲ್ಲಿ ಮತ್ತು ಹಬ್ಬದ ಊಟದ ಸಮಯದಲ್ಲಿ ಬಡಿಸಲಾಗುತ್ತದೆ.

ಮ್ಯಾನ್ಮಾರ್

[ಬದಲಾಯಿಸಿ]

ಮ್ಯಾನ್‌ಮಾರ್‌ನಲ್ಲಿ,ಇದನ್ನು ಹಲ್ವಾ ಎಂದು ಕರೆಯಲಾಗುತ್ತದೆ.ಇದು ಇಯಾವೇಡಿ ಕ್ಷೇತ್ರದಲ್ಲಿ ಪೈಥೇನ್‌ನ ಬಂದರು ಪಟ್ಟಣದೊಂದಿಗೆ ಹೊಂದಿಕೊಂಡಿದೆ.ಬರ್ಮಾದ ಹಲ್ವಾವು ಸಾಮಾನ್ಯವಾಗಿ ಅಫೀಮು ಜಾತಿಯ ಸಸ್ಯದ ಬೀಜಗಳನ್ನು ಒಳಗೊಂಡಿದ್ದು,ಕಂದು ಬಣ್ಣದಲ್ಲಿರುತ್ತದೆ.ಇದು ಜನರಲ್ಲಿ ಒಂದು ಪ್ರಸಿದ್ಧವಾದ ಉಡುಗೊರೆಯ ವಸ್ತುವಾಗಿದೆ.

ಪಾಕಿಸ್ತಾನ‌

[ಬದಲಾಯಿಸಿ]

ಪಾಕಿಸ್ತಾನದ ಹಲ್ವಾವು ಹೆಚ್ಚಾಗಿ ಭಾರತದ ಹಲ್ವಾವನ್ನು ಹೋಲುತ್ತದೆ. ಪಾಕಿಸ್ತಾನದಲ್ಲಿ ವಿವಿಧ ಬಗೆಯ ಹಲ್ವಾ (ಉರ್ದು: حلوہ) ಪ್ರಕಾರದ ಸಿಹಿತಿಂಡಿಗಳು ದೊರೆಯುತ್ತವೆ. ಅವುಗಳನ್ನು ತಯಾರಿಸುವ ಪ್ರದೇಶಗಳಿಂದಾಗಿ ಮತ್ತು ಅವುಗಳನ್ನು ತಯಾರಿಸಲು ಬಳಸುವ ಪದಾರ್ಥಗಳಿಂದಾಗಿ ಅವುಗಳಲ್ಲಿ ವೈವಿಧ್ಯತೆ ಕಂಡು ಬರುತ್ತದೆ. ಅವುಗಳ ತಯಾರಿಕೆಯಲ್ಲಿ ಒಂದು ಸಾಮಾನ್ಯವಾಗಿರುವ ಅಂಶವೆಂದರೆ, ಅವುಗಳನ್ನು ರವೆ, ತುಪ್ಪ ಮತ್ತು ಸಕ್ಕರೆಗಳಿಂದ ತಯಾರಿಸುತ್ತಾರೆ ಮತ್ತು ಒಣಗಿಸಿದ ಹಣ್ಣು ಮತ್ತು ಬೀಜಗಳಿಂದ ಅಲಂಕರಿಸುತ್ತಾರೆ. ಕ್ಯಾರೆಟ್ ಹಲ್ವಾವೂ[೧೧] (ಗಜರಿಯ ಹಲ್ವಾಎಂದು ಕರೆಯಲ್ಪಡುವ)ಸಹ,ಎಳೆಯ ಶೇಂಗಾ ಮತ್ತು ಚೆನ್ನೈ ಕಡಲೆಯಿಂದ ತಯಾರಿಸುವ ಹಲ್ವಾಗಳಂತೆ ಪ್ರಸಿದ್ಧವಾಗಿದೆ|" چنی کی دال ". ಕರಾಚಿ ಹಲ್ವಾವು ಕರಾಚಿ ಮತ್ತು ಸಿಂಧ್‌‌ನ ಪ್ರಾಮುಖ್ಯತೆಯನ್ನು ಪಡೆದ ಉಪಹಾರವಾಗಿದೆ. ಉರ್ದುವಿನಲ್ಲಿ, ಹಲ್ವಾ حلوہ ಶಬ್ದವು ಸಿಹಿಸೂಚಕವಾಗಿದ್ದು ಹಿಟ್ಟಿನ ಭಕ್ಷ್ಯ ತಯಾರಕರು ಇದನ್ನು ಹಲ್ವಾi حلواى ಎಂದು ಕರೆಯುತ್ತಾರೆ.ಪಂಜಾಬ್‌ನ ದಕ್ಷಿಣ ಭಾಗದ "ಸೋಹನ್ ಹಲ್ವಾ"ವು ದೇಶದಲ್ಲಿ ಬಹಳ ಪ್ರಸಿದ್ಧವಾಗಿದೆ.

ರೊಮೇನಿಯಾ ಮತ್ತು ಮಾಲ್ಡೋವಾ

[ಬದಲಾಯಿಸಿ]

ಮಾಲ್ಡೋವಾ ಮತ್ತು ರೊಮಾನಿಯಾಗಳಲ್ಲಿ ಹಲ್ವಾ ಶಬ್ಧದ ಪ್ರಯೋಗವು ಸೂರ್ಯಕಾಂತಿಯ ಆಧಾರಿತವೆಂದು ಕರೆಯಲ್ಪಡುತ್ತದೆ.(ಮಾಲ್ಡೋವಾ ಗಣರಾಜ್ಯದಲ್ಲಿ ಇದನ್ನು ಬಹುವಾಗಿ "ಹಲ್ವಾ de răsărită" ಎಂದು ಕರೆಯಲಾಗುತ್ತದೆ. ರೊಮೇನಿಯಾದಲ್ಲಿ ಇದನ್ನು, "halva de floarea soarelui"ಎಂದು ಗುರುತಿಸುತ್ತಾರೆ).ಸೂರ್ಯಕಾಂತಿ ಮಿಠಾಯಿಯ ಅಚ್ಚು ಕೆಲವು ಸಲ ಪಿಸ್ತಾ, ಬಾದಾಮ್ ಅಥವಾ ಚಾಕಲೇಟ್‌ಗಳನ್ನು ಹೊಂದಿರುತ್ತದೆ.

ಸರ್ಬಿಯಾ

[ಬದಲಾಯಿಸಿ]

ಸರ್ಬಿಯಾ ಭಾಷೆಯಲ್ಲಿ ಹಲ್ವಾವನ್ನು ಅಲ್ವಾ ಎಂದು ಕರೆಯಲಾಗುತ್ತದೆ.ಇದು ಇಡೀ ಪ್ರದೇಶದಲ್ಲಿ ಸಾಮಾನ್ಯವಾಗಿದೆ.ಅಲ್ವಾವು ಸರ್ಬಿಯಾದ ಸುತ್ತಮುತ್ತಲಿನ ಸ್ಥಾನಿಕ ಚರ್ಚ್ ಮೇಳಗಳಲ್ಲಿ ಒಂದು ಸಾಮಾನ್ಯವಾದ ಸಿಹಿ ತಿಂಡಿಯಾಗಿದೆ.

ಸ್ಲೊವೇನಿಯಾ

[ಬದಲಾಯಿಸಿ]

ಸ್ಲೊವೇನಿಯಾದಲ್ಲಿ ಹಲ್ವಾವನ್ನು ಹೆಲ್ವಾ ಎಂದು ಕರೆಯುತ್ತಾರೆ.ಹೆಲ್ವಾವು ಸ್ಲೊವೇನಿಯಾದಲ್ಲಿ ಸೇವಿಸಲ್ಪಡುವ ಒಂದು ಸಿಹಿತಿಂಡಿಯಾಗಿದೆ.ಯಾವಾಗ ಸ್ಲೊವೇನಿಯಾವುಒಟ್ಟೋಮನ್ ಸಾಮ್ರಾಜ್ಯದ ಜೊತೆಗೆ ಸಂಪರ್ಕ ಬೆಳೆಸಿತೋ,ಆಗಿನಿಂದ ಇದು ಇಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿತು ಮತ್ತು ಜನಪ್ರಿಯತೆಯನ್ನು ಪಡೆಯಿತು.ಸ್ಲೊವೇನಿಯನ್ನರು ಹೆಚ್ಚಾಗಿ ಇದನ್ನು ಬೆಳಗಿನ ಅಥವಾ ಮಧ್ಯಾಹ್ನದ ನಂತರದ ಟರ್ಕಿಶ್ ಕಾಫಿಯ ಜೊತೆಗೆ ತಿನ್ನುತ್ತಾರೆ.

ಸೊಮಾಲಿಯಾ

[ಬದಲಾಯಿಸಿ]
ಹಲ್ವೊ, ಸೋಮಾಲಿ ಪ್ರಕಾರದ ಹಲ್ವಾ,ಸೋಮಾಲಿಯ ಪಾಕಶಾಸ್ತ್ರದ ಪ್ರಮುಖ ಆಹಾರವಾಗಿದೆ.

ಸೋಮಾಲಿಯಾದಲ್ಲಿ,ಹಲ್ವಾವು ಹಲ್ವೊಎಂದು ಗುರುತಿಸಲ್ಪಡುತ್ತದೆ.ಇದು ಸೊಮಾಲಿ ಪಾಕಶಾಸ್ತ್ರದ ಮುಖ್ಯ ಪದಾರ್ಥವಾಗಿದೆ.ಇದುಈದ್ಆಚರಣೆಗಳು ಅಥವಾ ಮದುವೆ ಸಮಾರಂಭಗಳಂತಹ ಪ್ರಮುಖ ಆಚರಣೆಗಳಲ್ಲಿ ಬಡಿಸುವ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ.ಹಲ್ವೊವನ್ನು ಸಕ್ಕರೆ,ಜೋಳದ ಗಂಜಿ,ಏಲಕ್ಕಿಪುಡಿ,ಜಾಯಿಕಾಯಿಪುಡಿ ಮತ್ತು ತುಪ್ಪದಿಂದ ತಯಾರಿಸಲಾಗುತ್ತದೆ.ಇವುಗಳ ರಚನೆಗಳಿಗೆ ಹಾಗೂ ಇವುಗಳ ಸುವಾಸನೆಯನ್ನು ಹೆಚ್ಚಿಸಲು ಕೆಲವುಸಲ ಬಟಾಣಿ ಬೀಜಗಳನ್ನೂ ಸಹ ಸೇರಿಸಲಾಗುತ್ತದೆ.[೧೫]

ಶ್ರೀಲಂಕಾ

[ಬದಲಾಯಿಸಿ]

ಶ್ರೀಲಂಕಾದಲ್ಲಿ (ಸಿಂಹಳೀಯರ ಭಾಷೆಯಲ್ಲಿ)ಹಲ್ವಾವನ್ನು ಅಲುವಾ ಎಂದು ಕರೆಯುತ್ತಾರೆ.ಅಲುವಾವು ಒಂದು ಸಾಂಕೇತಿಕವಾದ ಸಿಹಿ ತಿಂಡಿಯಾಗಿದ್ದು ಇದನ್ನು ವಿಶೇಷವಾಗಿ ಸಾಂಪ್ರದಾಯಿಕವಾದ,ಎಪ್ರೀಲ್‌ನಲ್ಲಿ ನಡೆಯುವ ಶ್ರೀಲಂಕಾದ ಹೊಸವರ್ಷದ ಹಬ್ಬದಲ್ಲಿ (ಸಿಂಹಳ ಮತ್ತು ಹಿಂದು ಅಲುಥ್ ಅವುರುದ್ದ)ಮಾಡಲಾಗುತ್ತದೆ. ಇದನ್ನು ಹಲವು ಬಾರಿ, ಅಕ್ಕಿ ಹಿಟ್ಟು ಮತ್ತು ಸಕ್ಕರೆಯ ಜೊತೆಗೆ (ಸೀನಿ ಅಲುವಾ)ಅಥವಾ ಕಾಕಂಬಿಯ (ಪಾನಿ ಅಲುವಾ ) ಜೊತೆಗೆ ತಯಾರಿಸಲಾಗುತ್ತದೆ.ಹೆಚ್ಚಿನ ರುಚಿಗಾಗಿ ಗೋಡಂಬಿ ಬೀಜಗಳನ್ನು ಸೇರಿಸಲಾಗುತ್ತದೆ.

ತಜಿಕಿಸ್ತಾನ್

[ಬದಲಾಯಿಸಿ]

ಮೆತ್ತಗಿನ ಎಳ್ಳಿನ ಹಲ್ವಾವು,ಸಕ್ಕರೆ ಪಾಕ,ಮೊಟ್ಟೆಯ ಬಿಳಿಭಾಗ,ಮತ್ತು ಎಳ್ಳಿನ ಬೀಜಗಳಿಂದ ತಯಾರಿಸಲ್ಪಡುತ್ತದೆ.ಗಟ್ಟಿಯಾದ ಎಳ್ಳಿನ ಹಲ್ವಾವನ್ನು ಸಕ್ಕರೆ ಪಾಕದಿಂದ ತಯಾರಿಸಲಾಗುತ್ತದೆ,ಇದಕ್ಕೆ ಬಿಳಿಯ ಬಣ್ಣವನ್ನು ನೀಡುವುದಕ್ಕಾಗಿ ಪದೇ ಪದೇ ಹಿಗ್ಗಿಸಲಾಗುತ್ತದೆ;ತಯಾರಿಸಿಟ್ಟ ಎಳ್ಳನ್ನು ಒಣ ಸಕ್ಕರೆಗೆ ಸೇರಿಸಿ ಇದನ್ನು ದೊಡ್ಡ ಪಾತ್ರೆಯಲ್ಲಿ ಹರಡಲಾಗುತ್ತದೆ.ತಜಿಕಿಸ್ಥಾನ,ಜೊತೆಗೆ ಉಜ್ಬೆಕಿಸ್ಥಾನಗಳಲ್ಲಿಯೂ ಸಹ ಇದನ್ನು ಸ್ಥಾನಿಕವಾಗಿ "ಲವ್ಝ್" (Лавз)ಎಂದು ಕರೆಯುತ್ತಾರೆ.[೧೬]

ಟರ್ಕಿಯ ಇಸ್ತಿಕ್ಲಾಲ್ ಕಡ್ಡೆಸಿ ಅಂಗಡಿ ಮುಂಭಾಗದಲ್ಲಿ ಹಲ್ವಾ.

ತುರ್ಕಿ

[ಬದಲಾಯಿಸಿ]

ಟರ್ಕಿಯ ಜನರು ತಾಹೀನ್ (ಪುಡಿ ಮಾಡಿದ ಎಳ್ಳಿನ ಬೀಜಗಳು) ಹಿಟ್ಟು ಅಥವಾ ರವೆ ಬಳಸಿ ಮಾಡಿರುವ ಹಲ್ವಾವನ್ನು ವಿವರಿಸಲು ಹೆಲ್ವಾಎಂಬ ಪದವನ್ನು ಬಳಸುತ್ತಾರೆ ಇದನ್ನು ಕ್ರಮವಾಗಿ ತಾಹಿನಿ ಹೆಲವಾಸಿ,ಅನ್ ಹೆಲವಾಸಿ,ಇರ್ಮಿಕ್ ಹೆಲವಾಸಿಎಂದು ಕರೆಯುತ್ತಾರೆ.ಆಕ್ರೋಟ ಅಥವಾ ಬಾದಾಮಿ ಬಳಸಿ ಮಾಡುವ ಹಲ್ವಾವನ್ನು ಯಾಜ್ ಹೆಲ್ವಾಸಿ ಎನ್ನುತ್ತಾರೆ.ರವಾ ಹಲ್ವಾವು(ಪೈನ್ ಬೀಜ(ದೇವದಾರು ಬೀಜ)ಗಳಿಂದ ಅಲಂಕರಿಸಲ್ಪಟ್ಟ) ಸಾಂಸ್ಕೃತಿಕ ಗುರುತನ್ನು ಹೊಂದಿದ್ದು ಟರ್ಕಿಶ್ ಜನಾಂಗೀಯ ಪ್ರದೇಶದಲ್ಲಿ ಬಹಳ ಸಾಮಾನ್ಯವಾದ ತಿಂಡಿಯಾಗಿದೆ.ಸಾಂಪ್ರದಾಯಿಕವಾಗಿ,ಹಿಟ್ಟಿನಿಂದ ತಯಾರಿಸಲ್ಪಟ್ಟ ಅನ್ ಹೆಲವಾಸಿಯು ವ್ಯಕ್ತಿಯೊಬ್ಬನ ಮರಣದ ಸಂದರ್ಭದಲ್ಲಿ ತಯಾರಿಸಿ ಬಡಿಸಲ್ಪಡುತ್ತದೆ.ಜೊತೆಗೆ ಟರ್ಕಿಯಲ್ಲಿ ವ್ಯಾಪಕವಾಗಿ ಹರಡಿರುವ ಪಾಮುಕ್ ಹಲ್ವಾ ಅಥವಾ ಕೋಸಿನ ಹಲ್ವಾಗಳಂತಹ,ಉಪಹಾರದಂತಹ ಸಿಹಿ ತಿಂಡಿಗಳೂ ಕೂಡಾ ಹಲ್ವಾ ಎಂದು ಕರೆಯಲ್ಪಡುತ್ತವೆ.ಸಫ್ರಾನ್‌ಬೋಲುವಿನಲ್ಲಿ ಕೋಸಿನ ಹಲ್ವಾವನ್ನು "ಲೀಫ್ ಹಲ್ವಾ" ಎಂದೂ ಕೂಡ ಕರೆಯುತ್ತಾರೆ.

ಉಕ್ರೇನ್

[ಬದಲಾಯಿಸಿ]

ಉಕ್ರೇನ್‌ನಲ್ಲಿ ಹಲ್ವಾ (халва)ವನ್ನು ಒಂದು ಸಾಂಪ್ರದಾಯಿಕ ಉಪಹಾರವನ್ನಾಗಿ ಉಪಯೋಗಿಸುತ್ತಾರೆ.ಕೆಲವು ಸಾರಿ ಉಕ್ರೇನ್ ಮಕ್ಕಳು ಹಲ್ವಾವನ್ನು ಕ್ಯಾಂಡಿಯಂತೆ ಪಡೆಯುತ್ತಾರೆ.

ಸಾಂಸ್ಕೃತಿಕ ಉಲ್ಲೇಖಗಳು

[ಬದಲಾಯಿಸಿ]

ಅಫಘಾನಿಸ್ತಾನ,ಟರ್ಕಿ ಮತ್ತು ಇರಾನ್ದೇಶಗಳಲ್ಲಿ ಶವಸಂಸ್ಕಾರದ ನಂತರದಲ್ಲಿ ಮುಸಲ್ಮಾನನೊಬ್ಬ ತೀರಿಕೊಂಡ ಏಳು ಮತ್ತು ನಲವತ್ತನೇ ದಿನದಲ್ಲಿ ಮತ್ತು ಮೊದಲ ವರ್ಷದ ಸ್ಮರಣೆಯ ಸಮಯದಲ್ಲಿ, ತರಿ(ರವೆ)ಹಲ್ವಾ ಅಥವಾ ಹಿಟ್ಟು ಹಲ್ವಾ ಮಾಡಿ ಭೇಟಿ ನೀಡುವವರಿಗೆ ಮತ್ತು ನೆರೆಯವರಿಗೆ ಮತ್ತು ತೀರಿಕೊಂಡವರ ಸಂಬಂಧಿಕರಿಗೆ ನೀಡಲಾಗುತ್ತದೆ.ಈ ಕಾರಣಕ್ಕಾಗಿ ಹಿಟ್ಟಿನ ಹಲ್ವಾವನ್ನು "ಓಲೂ ಹೆಲವಾಸಿ"ಅಂದರೆ ಮೃತನ ಹಲ್ವಾ ಎಂದೂ ಕರೆಯುತ್ತಾರೆ."ರವಾ ಹಲ್ವಾ ತಯಾರಿಕೆಯ"ಪ್ರಕ್ರಿಯೆಯು,ವ್ಯಕ್ತಿಯೊಬ್ಬನು ಕೆಲವು ಸಮಯಗಳ ಹಿಂದೆ ಮಡಿದಿರುವುದನ್ನು ಸೂಚಿಸುತ್ತದೆ. ಗ್ರೀಕ್‌ನಲ್ಲಿ ಆಂಟೇ ರೆ ಹಲ್ವಾ!ಎಂಬ ನಾಣ್ಣುಡಿಯೊಂದಿದೆ.("Άντε ρε χαλβά!" - ಇದರ ಅನುವಾದವು "ಹೊರಟು ಹೋಗು,ಹಲ್ವಾ"ಎಂದಾಗುತ್ತದೆ),ಯಾವಾಗ ಹೇಳುವಾತ ಒಬ್ಬ ಸಾಮಾನ್ಯ ಮನುಷ್ಯನಿಗೆ ಹೇಡಿ ಅಥವಾ ಪುಕ್ಕಲನೆಂದು ಕರೆದು ಆತನಿಗೆ ಪೆಟ್ಟು ಕೊಡಲು ಬಯಸುತ್ತಾನೋ ಆಗ ಈ ಶಬ್ಧವು ಬಳಸಲ್ಪಡುತ್ತದೆ.ಇನ್ನೊಂದು ನಾಣ್ಣುಡಿಯೆಂದರೆ,ಒಟೋಮನ್ ಪ್ರಾಬಲ್ಯದ ಕಾಲದಲ್ಲಿ,"Ρωμαίικος καβγάς, τούρκικος χαλβάς" (ಸ್ಥೂಲವಾದ ಭಾಷಾಂತರದಂತೆ "ಗ್ರೀಕರ ನಡುವಿನ ಹೊಡೆದಾಟವು ತುರ್ಕರ ಸಂಭ್ರಮವಾಗಿದೆ ಎಂದಾಗುತ್ತದೆ). ಸೆರೆವಾಸದಲ್ಲಿರುವ ಜನರನ್ನು ನೋಡಲು ಕುಟುಂಬದವರು ಬಂದಾಗ ಜೊತೆಯಲ್ಲಿರುವವರಿಗೂ ಹಲವಾ ನೀಡಿದಾಗ ಅಮೂಲ್ಯವಾದ ವಸ್ತುವಾಗಿ ಕಂಡುಬರುತ್ತದೆ ಎಂದು ಈಜಿಪ್ಟಿನ ಜನರು ನಂಬುತ್ತಾರೆ ಹಾಗೆಂದು ಸಾಹಿತ್ಯ ಮತ್ತು ಮಾಧ್ಯಮದಲ್ಲಿ ಚಿತ್ರಿತವಾಗಿದೆ.ಇತ್ತೀಚಿನ ಜಾಹೀರಾತು ಅಭಿಯಾನದಲ್ಲಿ ಸ್ಥಳೀಯ ಹಲ್ವಾ ತಯಾರಕರು ಇದನ್ನು ಸಾಂಸ್ಕೃತಿಕ ವಿದ್ಯಮಾನವನ್ನಾಗಿ ಬಳಸಿಕೊಂಡರು.[೧೭] ಬೋಸ್ನಿಯಾ ಮತ್ತು ಹರ್ಜೆಗೊವಿನಾ (ಮತ್ತು ಸ್ವಲ್ಪ ವಿಸ್ತಾರದಲ್ಲಿ,ಕ್ರೊಯೇಷಿಯಾ,ಸ್ಲೊವೇನಿಯಾ (ದೇಶದ ಸ್ಟಿರಿಯಾ ಭಾಗ)ಮತ್ತು ಸರ್ಬಿಯಾಗಳಲ್ಲಿ)ಗಳಲ್ಲಿ ಒಂದು ಮಾತಿದೆ, "ide / prodaje se kao ಹಲ್ವಾ " ಅಥವಾ ಸ್ಲೊವೇನಿಯ ಸ್ಟಿರಿಯನ್ ಮಾತಿನಲ್ಲಿ "ರೆ ಕೊ ಅಲ್ವಾ "("ಹಲ್ವಾ ದಂತೆ ಮಾರಾಟವಾಗುತ್ತವೆ")ವು ಒಂದು ಆಡು ಮಾತಿನ ಅಭಿವ್ಯಕ್ತಿಯಾಗಿದೆ.ಇದರ ಅರ್ಥ ಉತ್ಪಾದನೆಯ ಮಾರಾಟ ಉತ್ತಮವಾಗಿದೆ ಎಂದಾಗುತ್ತದೆ.ಇದಕ್ಕೆ ಹೊಂದುವಂತೆ ಆಂಗ್ಲ ಭಾಷೆಯಲ್ಲಿ "ಸೆಲ್ಸ್ ಲೈಕ್ ಹಾಟ್‌ಕೇಕ್ಸ್"(ಅಂದರೆ,"ಬಿಸಿ ಹಲ್ವಾಗಳಂತೆ ಮಾರಾಟವಾಗುತ್ತವೆ"ಎಂದರ್ಥ)ಎಂಬ ಅಭಿವ್ಯಕ್ತಿಯಿದೆ ಮತ್ತು ಜರ್ಮನ್‌ನಲ್ಲಿ,"verkauft sich wie warme Semmeln" (ಅಂದರೆ,"ಬಿಸಿಯಾದ ರೊಟ್ಟಿ ತುಂಡುಗಳಂತೆ ಮಾರಟವಾಗುತ್ತವೆ" ಎಂದು). ವರ್ಷಗಳಿಂದ ಹಲವಾ ಬಗೆಗಿನ ಸಂಬಂಧದಲ್ಲಿ ಮ್ಯಾಡ್ಪತ್ರಿಕೆಯು ನಿರಂತರ ಉಲ್ಲೇಖವನ್ನು ಮಾಡುತ್ತಿದೆ.

ಇವರ್ನೂ ಗಮನಿಸಿ‌

[ಬದಲಾಯಿಸಿ]
  • ಅರಬ್ ಪಾಕ ಪದ್ಧತಿ
  • ಪಾಕಿಸ್ತಾನ ಪಾಕಶಾಸ್ತ್ರ
  • ಹಲ್ವಾ
  • ಬರ್ಫಿ
  • ಭಾರತೀಯ ಪಾಕ ಪದ್ಧತಿ
  • ಇರಾನ್ ಪಾಕಶಾಸ್ತ್ರ
  • ಇಸ್ರೇಲಿನ ಪಾಕ ಪದ್ಧತಿ
  • ಜೀವಿಶ್‌ ಪಾಕಶಾಸ್ತ್ರ
  • ಲೆವಂಟೈನ್‌ನ ಪಾಕ ಪದ್ಧತಿ
  • ಟರ್ಕಿಯ ಪಾಕ ಪದ್ಧತಿ
  • ಟರೋನ್
  • ನೌಗಟ್

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]

ಉಲ್ಲೇಖಗಳು‌‌

[ಬದಲಾಯಿಸಿ]
  1. Davidson, Alan (1999). The Oxford Companion to Food. Oxford: Oxford University press. pp. xx + 892. ISBN 0-19-211579. {{cite book}}: Check |isbn= value: length (help); Cite has empty unknown parameter: |coauthors= (help)
  2. ಹಲ್ವಾ,ರೇಂಡೋಮ್ ಹೌಸ್ ಡಿಕ್ಷನರಿ, ೨೦೦೯
  3. "ಎಳ್ಳಿನ ಹಲ್ವಾ ಅಡುಗೆ". Archived from the original on 2010-03-17. Retrieved 2011-04-27.
  4. ಸೀಸನಿಂಗ್ ಸವ್ವಿ: ಹೌ ಟು ಕುಕ್ ವಿತ್ ಹರ್ಬ್ಸ್, ಸ್ಪೈಸಸ್, ಅಂಡ್ ಅದರ್ ಫ್ಲೇವರಿಂಗ್ಸ್, ಬರೆದವರು ಅಲಿಸ್ ಅರ್ನ್ಡೆಟ್, ಪು.215
  5. ಹಲ್ವಾ ಎಥ್ನೊಲೊಜಿಕಲ್ ಮ್ಯೂಸಿಯಮ್ ಆಫ್‌ ಟ್ರೇಸ್ Archived 2007-07-03 ವೇಬ್ಯಾಕ್ ಮೆಷಿನ್ ನಲ್ಲಿ.
  6. "ಟರ್ಕಿಯ ಹಲ್ವಾ". Archived from the original on 2011-07-23. Retrieved 2011-04-27.
  7. ಎಳ್ಳು ಮತ್ತು ತಹಿನಿ ಉತ್ಪಾದನೆ Archived 2007-01-17 ವೇಬ್ಯಾಕ್ ಮೆಷಿನ್ ನಲ್ಲಿ.. ಡಿಮಿಟ್ರಿಸ್‌ ಪೆರ್ರೋಟಿಸ್‌, ಕಾಲೇಜ್ ಆಫ್ ಅಗ್ರಿಕಲ್ಚರಲ್ ಸ್ಟಡೀಸ್, ಅಮೇರಿಕನ್ ಫಾರ್ಮ್ ಸ್ಕೂಲ್, ಥೆಸ್ಸಾಲೊನಿಕಿ, ಗ್ರೀಸ್
  8. ಸೂಜಿ ಹಲ್ವಾ ಪಾಕವಿಧಾನ
  9. ಹಿಟ್ಟಿನ ಹಲ್ವಾ ಪಾಕವಿಧಾನ
  10. ಹೆಸರುಬೇಳೆ ಹಲ್ವಾ ಪಾಕವಿಧಾನ,
  11. ೧೧.೦ ೧೧.೧ ಗಜರಿ ಹಲ್ವಾದ ವೀಡಿಯೋ ಪ್ರದರ್ಶನ
  12. ಗಿಲ್ ಮಾರ್ಕ್ಸ್, "ಜೆವಿಶ್ ಅಡುಗೆ ಪ್ರಪಂಚ", (ಸಿಮನ್ & ಶೂಸ್ಟರ್: ೧೯೯೬) ಪು.೨೧೦
  13. ಹಾರ್ಟೆಸ್ ಆನ್‌ಲೈನ್: ಫೋರ್ ಸ್ಟೆಪ್ಸ್ ಫಾರ್ ಹಲ್ವಾ
  14. ದ ಜೀವಿಶ್‌ ಎಕ್ಸ್‌ಪೋನೆಂಟ್: ಹೇಯ್ಲ್ ಟು ಹೆವನ್ಲೀ ಹಲ್ವಾಹ್!
  15. ಬರ್ಲಿನ್ ಅಲಿ,ಸೋಮಾಲಿ ಅಡುಗೆ ಪದ್ಧತಿ,(ಅಥೊರ್‌ಹೌಸ್: ೨೦೦೭),ಪು.೭೯
  16. ತಜಾಕಿಸ್ಥಾನದ ಹಲ್ವಾ Archived 2011-01-13 ವೇಬ್ಯಾಕ್ ಮೆಷಿನ್ ನಲ್ಲಿ. ನೇಶೀಯನ್
  17. https://www.youtube.com/watch?v=K೨೪೨bgwpr೪೮&feature=player_embedded
"https://kn.wikipedia.org/w/index.php?title=ಹಲ್ವಾ&oldid=1127617" ಇಂದ ಪಡೆಯಲ್ಪಟ್ಟಿದೆ