ವಿಷಯಕ್ಕೆ ಹೋಗು

ಒಣಗಿಸಿದ ಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಣಗಿಸಿದ ಹಣ್ಣು ಹಣ್ಣಿನ ಸ್ವಲ್ಪ ಭಾಗ ಆರ್ದ್ರತೆಯನ್ನು ತೆಗೆಯಲು, ನೈಸರ್ಗಿಕವಾಗಿ ಅಥವಾ ಆಹಾರ ನಿರ್ಜಲೀಕರಣ ಯಂತ್ರದಂತಹ ಯಂತ್ರದ ಬಳಕೆಯ ಮೂಲಕ, ಒಣಗಿಸಲಾದ ಹಣ್ಣು. ಒಣದ್ರಾಕ್ಷಿಗಳು, ಪ್ರೂನ್‌ಗಳು, ಖರ್ಜೂರಗಳು ಜನಪ್ರಿಯ ಒಣಹಣ್ಣುಗಳ ಉದಾಹರಣೆಗಳು. ಸೇಬಿನ ಹಣ್ಣುಗಳು, ಜರದಾಳುಗಳು, ಬಾಳೆಹಣ್ಣುಗಳು, ಚೆರಿಗಳು, ಕ್ರ್ಯಾನ್‌ಬೆರಿಗಳು, ಅಂಜೂರ, ಕೀವಿಹಣ್ಣು, ಮಾವಿನಹಣ್ಣುಗಳು, ಪರಂಗಿ, ಪೀಚ್‌ಗಳು, ಪೇರ್‌ಗಳು, ಪರ್ಸಿಮನ್‌ಗಳು, ಅನಾನಸ್, ಸ್ಟ್ರಾಬೆರಿಗಳು ಮತ್ತು ಟಮೇಟೋಗಳಂತಹ ಇತರ ಹಣ್ಣುಗಳನ್ನೂ ಒಣಗಿಸಬಹುದು.