ಕೀವಿಹಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೀವಿ ಹಣ್ಣು
ಕೀವಿ ಹಣ್ಣು
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. deliciosa
Binomial name
Actinidia deliciosa
C.F.Liang.& A.R.Ferguson.
Kiwifruit by species
A = A. arguta, C = A. chinensis, D = A. deliciosa, E = A. eriantha, I = A. indochinensis, P = A. polygama, S = A. setosa.
A sliced kiwifruit

ಪ್ರಪಂಚದ ಬಹಳ ಭಾಗಗಳಲ್ಲಿ ಕೀವಿಹಣ್ಣ ನ್ನು ಕೀವಿ ಎಂದು ಚಿಕ್ಕದಾಗಿ ಕರೆಯುತ್ತಾರೆ, ಎಕ್ಟಿಂಡಿಯ ಡೆಲಿಸಿಯೊಸ ತಳಿಯ ಕಾಡು ಬಳ್ಳಿಬೆರಿ ಗುಂಪಿಗೆ ಸೇರಿದ ಖಾದ್ಯ ಮತ್ತು ಎಕ್ಟಿನಿಡಿಯ ಗುಂಪಿನ ಇತರ ವರ್ಗಗಳು ಮತ್ತು ಇದರ ಮಧ್ಯೆ ಹೈಬ್ರೀಡ್ ಮಾಡಲಾಗಿದೆ. ಎಕ್ಟಿಂಡಿಯ ಉತ್ತರ ಪೂರ್ವ ಏಷ್ಯಾಕ್ಕೆ ಸ್ಥಳೀಯವಾಗಿದೆ, ವಿಶೇಷವಾಗಿ ಚೀನಾದ ದಕ್ಷಿಣಕ್ಕೆ. ಕೀವಿಹಣ್ಣಿನ ಹೆಚ್ಚು ಸಾಮಾನ್ಯವಾದ ತಳಿಗಳು ಅಂಡಾಕೃತಿಯದಾಗಿವೆ, ಸುಮಾರು ದೊಡ್ಡ ಕೋಳಿ ಮೊಟ್ಟೆಯ ಅಳತೆಯಲ್ಲಿರುತ್ತವೆ (5-8 ಸೆಂಟಿಮೀಟರ್ / 2-3 ಉದ್ದ ಮತ್ತು 4.5-5.5 ಸೆಂಟಿಮೀಟರ್ / 1 3/4-2 ಅಗಲ). ಇದು ನಾರಿನಂಶವನ್ನು ಹೊಂದಿದೆ, ಮಾಸಲು ಕಂದು-ಹಸಿರು ಬಣ್ಣದ ಸಿಪ್ಪೆ ಮತ್ತು ಹೊಳೆಯುವ ಹಸಿರು ಬಣ್ಣ ಅಥವಾ ಬಂಗಾರ ಬಣ್ಣದ ತಿರುಳುಗಳ ಜೊತೆ ಸಾಲಾಗಿರುವ ಚಿಕ್ಕದಾದ ಕಪ್ಪು ಬಣ್ಣದ ತಿನ್ನಬಹುದಾದ ಬೀಜಗಳು. ಹಣ್ಣು ಮೃದುವಾದ ಮೇಲ್ಮೈ ಮತ್ತು ವಿಶಿಷ್ಟವಾದ ಸುವಾಸನೆಯನ್ನು ಹೊಂದಿದೆ, ಮತ್ತು ಈಗ ಇದು ಬಹಳ ದೇಶಗಳಲ್ಲಿ ವ್ಯಾಪಾರದ ಬೆಳೆಯಾಗಿದೆ, ಮುಖ್ಯವಾಗಿ ಇಟಲಿ, ಚೀನಾ, ಮತ್ತು ನ್ಯೂಜಿಲೆಂಡ್ ಗಳಲ್ಲಿ. ಚೀನಾದ ಗೂಸ್‌ ಬೆರ್ರಿ ಎಂದು ಸಹ ಕರೆಯುವರು,[೧] 1950ರ ದಶಕದಲ್ಲಿ ಮಾರುಕಟ್ಟೆಯಲ್ಲಿ ರಫ್ತು ಮಾಡುವ ಕಾರಣಗಳಿಗಾಗಿ ಮರುನಾಮಕರಣ ಮಾಡಿದ್ದರು; ಮೆಲೋನೆಟ್ ಎಂದು ಚಿಕ್ಕದಾಗಿ, ನ್ಯೂಜಿಲೆಂಡಿನ ರಫ್ತುಗಾರರು ಕೀವಿಹಣ್ಣು ಎಂದು ಕರೆದರು. ಕಂದು ಬಣ್ಣದ ಹಾರಲಾರದ ಹಕ್ಕಿ ಮತ್ತು ನ್ಯೂಜಿಲೆಂಡಿನ ರಾಷ್ಟ್ರೀಯ ಚಿಹ್ನೆ ಕೀವಿಯಿಂದ ಈ ಕೊನೆಯ ಹೆಸರು ಬಂತು, ಮತ್ತು ನ್ಯೂಜಿಲೆಂಡಿನ ಜನರಿಗೆ ಇದು ಒಂದು ಆಡುಮಾತಿನ ಹೆಸರು ಸಹ ಆಗಿದೆ.

ಹೆಸರುಗಳು[ಬದಲಾಯಿಸಿ]

ಈ ಹಣ್ಣು ಕೀವಿಹಣ್ಣು ಎಂದು ವ್ಯಾವಹಾರಿಕವಾಗಿ ಬಳಕೆಗೆ ಬರುವ ಮೊದಲು ದೀರ್ಘ ಇತಿಹಾಸವನ್ನು ಹೊಂದಿತ್ತು ಮತ್ತು ಆದ್ದರಿಂದ ಇದು ಬಹಳ ಹಳೆಯ ಹೆಸರುಗಳನ್ನೂ ಹೊಂದಿದೆ. ಚೀನಾದಲ್ಲಿ:[೨]

 • ಮ್ಯಾಕ್ಯು ಪೀಚ್ (獼猴桃 ಪಿನ್ಯಿನ್: ಮಿಹೋ ತೊ ): ಹೆಚ್ಚು ಸಾಮಾನ್ಯವಾದ ಹೆಸರು
 • ಮ್ಯಾಕ್ಯು ಪಿಯರ್ (獼猴梨 ಮಿಹೋ ಲಿ )
 • ವೈನ್ ಪಿಯರ್ (藤梨 ತೆಂಗ್ ಲಿ )
 • ಸನ್ನಿ ಪೀಚ್ (陽桃 ಯಾಂಗ್ ತೊ ), ಕೀವಿಹಣ್ಣಿನ ಒಂದು ಮೂಲ ಹೆಸರು, ಆದರೆ ಕೆಲವೊಮ್ಮೆ ಸ್ಟಾರ್ ಹಣ್ಣನ್ನು ಸೂಚಿಸುತ್ತದೆ.
 • ವುಡ್ ಬೆರಿ (木子 ಮು ಜಿ )
 • ಹೇರಿ ಬುಶ್ ಹಣ್ಣು (毛木果 ಮ್ವಾ ಮು ಗೋ )
 • ಸಾಮಾನ್ಯ ಹಣ್ಣು ಅಥವಾ ವಂಡರ್ ಹಣ್ಣು (奇異果 ಪಿನ್ಯಿನ್: ಕಿಯಿ ಗೋ , ಜ್ಯುತ್ಪಿಂಗ್: ಕೆಯಿ4 ಜಿ6 ಗ್ವೊ2 ): ತೈವಾನ್ ಮತ್ತು ಹಾಂಕಾಂಗ್ ಗಳಲ್ಲಿ ಹೆಚ್ಚು ಸಾಮಾನ್ಯವಾಗಿರುವ ಹೆಸರು.

"ಕೀವಿಹಣ್ಣು" ಎನ್ನುವ ಶಬ್ದವನ್ನು ಭಾಷಾಂತರಿಸಿದಾಗ, ಇದರ ನಿಜವಾದ ಅರ್ಥ "ಅಪರಿಚಿತ ಹಣ್ಣು" ಎಂದಾಗುತ್ತದೆ.

ಯಾಂಗ್ ತೊ (ಸನ್ನಿ ಪೀಚ್) ಅಥವಾ ಮಿಹೋ ತೊ (ಮ್ಯಾಕ್ಯು ಪೀಚ್) ಎನ್ನುವ ಇದರ ಚೀನಾದ ಹೆಸರುಗಳಿಂದ ಕೀವಿಹಣ್ಣನ್ನು ಕರೆಯುತ್ತಿದ್ದರು.[೧] ನಂತರ ಇಸಾಬೆಲ್ ಫ್ರೇಸರ್ ಎಂಬ ಸಂಚಾರಿ ಬೋಧಕರಿಂದ ನ್ಯೂಜಿಲೆಂಡಿಗೆ ಪರಿಚಯವಾಯಿತು, ಇದು ಗೂಸ್‌ ಬೆರ್ರಿ ಸುವಾಸನೆಯನ್ನು ಹೊಂದಿದೆ ಎಂದು ಯೋಚಿಸಿ ನ್ಯೂಜಿಲೆಂಡಿನ ಜನರು ಚೀನಾದ ಗೂಸ್‌ ಬೆರ್ರಿ ಎಂದು ಕರೆಯಲು ಪ್ರಾರಂಭಿಸಿದರು, ಆದಾಗ್ಯೂ ಇದು ಗ್ರೊಸುಲರಿಯಾಸೆ (ಗೂಸ್‌ ಬೆರ್ರಿ) ಕುಟುಂಬಕ್ಕೆ ಸಂಬಂಧಿಸಿರಲಿಲ್ಲ. 1950ರ ದಶಕದಲ್ಲಿ ನ್ಯೂಜಿಲೆಂಡ್ ಈ ಹಣ್ಣುಗಳನ್ನು ಸಂಯುಕ್ತ ರಾಷ್ಟ್ರಗಳಿಗೆ ರಫ್ತು ಮಾಡಿತು. ಇದನ್ನು ರಫ್ತು ಮಾಡಿದವರಲ್ಲಿ ಅತ್ಯಂತ ಪ್ರಸಿದ್ಧವಾದ ಉತ್ಪಾದಕ ಸಂಸ್ಥೆ ಟರ್ನರ್ಸ್ ಅಂಡ್ ಗ್ರೋವರ್ಸ್ ಸಹಾ ಇತ್ತು. ಅವರು ಬೆರಿಗಳನ್ನು ಮೆಲೊನೆಟ್ಸ್ ಎಂದು ಕರೆಯುತ್ತಿದ್ದರು, ಏಕೆಂದರೆ ಶೀತಲ ಯುದ್ಧದ ಕಾರಣ ಚೀನಾದ ಗೂಸ್‌ ಬೆರ್ರಿ ರಾಜಕೀಯ ಅರ್ಥಗಳನ್ನು ಹೊಂದಿತ್ತು, ನಂತರ ಇದನ್ನು ನಿಜವಾದ ಗೂಸ್‌ ಬೆರ್ರಿಗಳಿಂದ ಪ್ರತ್ಯೇಕಿಸಲಾಯಿತು, ಇದು ಅಂತ್ರಾಕ್ನೋಸ್ ಎನ್ನುವ ಬೂಷ್ಟಿಗೆ ಗುರಿಯಾಗುತ್ತವೆ.'ಮೆಲೊನೆಟ್ಸ್ ಚೀನಾದ ಗೂಸ್‌ ಬೆರ್ರಿ ಯಂತೆ ಕೆಟ್ಟದಾಗಿವೆ ಕಲ್ಲಂಗಡಿಗಳು ಮತ್ತು ಬೆರಿಗಳು ಎರಡೂ ಹೆಚ್ಚಿನ ಆಮದು ಸುಂಕಗಳನ್ನು ಹೊಂದಿವೆ ಎಂದು ಅಮೇರಿಕಾದ ಆಮದುಗಾರ, ಸ್ಯಾನ್‍ಫ್ರಾನ್ಸಿಸ್ಕೊದ ನಾರ್ಮನ್ ಸೊಂದಗ್ ಆಕ್ಷೇಪಿಸಿದರು, ಮತ್ತು ಚಿಕ್ಕ ಮೌರಿ ಹೆಸರನ್ನು ಕೇಳುವುದರ ಬದಲಾಗಿ ಅದು ತ್ವರಿತವಾಗಿ ನ್ಯೂಜಿಲೆಂಡಿಗೆ ಹೇಳಿತು.[೧] ಜೂನ್ 1959ರಲ್ಲಿ, ಆಕ್ಲೆಂಡಿನಲ್ಲಿ ಟರ್ನರ್ಸ್ ಮತ್ತು ಉತ್ಪಾದಕರ ಆಡಳಿತ ಮಂಡಳಿಯ ಸಭೆಯಲ್ಲಿ, ಜಾಕ್ ಟರ್ನರ್ ಕೀವಿಹಣ್ಣು ಎಂಬ ಹೆಸರನ್ನು ಸೂಚಿಸಿದ್ದರು, ಇದನ್ನು ಅಳವಡಿಸಿಕೊಳ್ಳಲಾಯಿತು ಮತ್ತು ನಂತರ ಕೈಗಾರಿಕಾ-ಹೆಸರಾಯಿತು.[೩] 1960 ಮತ್ತು 1970ರ ದಶಕಗಳಲ್ಲಿ ಲಾಸ್ ಏಂಜಲೀಸ್-ಮೂಲದ ಫ್ರೀಡಾಸ್ ಫೈನೆಸ್ಟ್ (ಅಥವಾ ಫ್ರೀಡಾಸ್ ಇಂಕ್./ಫ್ರೀಡಾಸ್ ಸ್ಪೆಶಿಯಾಲಿಟೀ ಪ್ರೊಡ್ಯೂಸ್) ಸಂಸ್ಥೆಯನ್ನು ಪ್ರಾರಂಭಿಸಿದ ಫ್ರೈಡ್ ಕಪ್ಲನ್ ಸಂಯುಕ್ತ ರಾಷ್ಟ್ರಗಳಲ್ಲಿ ಕೀವಿಹಣ್ಣನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು ಮತ್ತು ವಿಲಕ್ಷಣವಾಗಿ ಕಾಣುವ ಈ ಹಣ್ಣನ್ನು ಕೊಳ್ಳುವಂತೆ ಸೂಪರ್‌ಮಾರ್ಕೇಟ್‌ನ ಪ್ರಬಂಧಕರ ಮನವೊಲಿಸಿದರು.[೪] 80ರ ದಶಕಗಳ ಪ್ರಾರಂಭದವರೆಗೆ ಕೀವಿಹಣ್ಣುಗಳು ಸಂಯುಕ್ತ ರಾಷ್ಟ್ರಗಳಲ್ಲಿ ವಿಸ್ತಾರವಾಗಿ ಹಂಚಿಕೆಯಾಗಿರಲಿಲ್ಲ. ಸ್ಯಾನ್‍ಫ್ರಾನ್ಸಿಸ್ಕೊ ಮತ್ತು ಬೋಸ್ಟನ್‍ಗಳಲ್ಲಿ ಹಣ್ಣಿನ ಬೇಡಿಕೆಗಳನ್ನು ಪರೀಕ್ಷಿಸಲು ನ್ಯೂಜಿಲೆಂಡಿನ ಕೀವಿಹಣ್ಣಿನ ಪ್ರಾಧಿಕಾರ ಸ್ಯಾನ್‍ಫ್ರಾನ್ಸಿಸ್ಕೊದ ವ್ಯಾಪಾರೋದ್ಯಮ ಶೋಧನಾ ಒಕ್ಕೂಟ ಎಲ್ರಿಕ್ & ಲವಿಜ್ ನ್ನು ನೇಮಿಸಿಕೊಂಡಿತು. ಆ ಸಮಯದಲ್ಲಿ 5% ಕ್ಕಿಂತ ಕಡಿಮೆ ಮನೆಬಳಕೆಯ ಆಹಾರದ ಅಂಗಡಿಯವರು ಕೀವಿಹಣ್ಣಿನ ಹೆಸರನ್ನೂ ಸಹ ಕೇಳಿರಲಿಲ್ಲ. ಇ & ಎಲ್ ನ ಉಪಾಧ್ಯಕ್ಷ ಬ್ರಾಡ್ ಆರ್. ವೂಸ್ಲೆ ಅವರ ಅಡಿಯಲ್ಲಿ, ಯಾವ ಸಂದರ್ಭಗಳಲ್ಲಿ ಮತ್ತು ಹೇಗೆ ತಿನ್ನಬೇಕು ಎನ್ನುವುದರ ಪ್ರಯೋಗ, ಎಚ್ಚರಿಕೆ, ಚಿತ್ರ, ಗ್ರಹಿಕೆಗಳನ್ನು ಅಳೆಯಲು ಪರೀಕ್ಷಾ ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದರ ಜೊತೆಗೆ, ಮಾರಾಟದ ಮಾಹಿತಿಯ ವಿವಿಧ ವಿವರಗಳು ಮತ್ತು ಶೈಕ್ಷಣಿಕ ಅಂಶಗಳನ್ನು ಪರೀಕ್ಷಿಸಲಾಯಿತು. ಈ ಸಂಶೋಧನೆಯ ನಂತರ, ಹಿಮಬೀಳುವ ಮತ್ತು ಚಳಿಗಾಲದ ತಿಂಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲಿ ತಾಜಾ ಹಣ್ಣಿನ ಆಯ್ಕೆ ಕಡಿಮೆಯಿರುವ ಸಮಯದಲ್ಲಿ ಈ ಕೀವಿಹಣ್ಣನ್ನು ರಾಷ್ಟ್ರೀಯವಾಗಿ ಹಂಚಿಕೆ ಮಾಡಿ ಮಾರಾಟವಾಗುವಂತೆ ಮಾಡುವ ಯೋಜನೆಯನ್ನು ಮಾಡಿದರು. ಈ ಮುಖ್ಯ ಗುರಿಯ ಯೋಜನೆಯನ್ನು ರೂಪಿಸುವಲ್ಲಿ ಸ್ಯಾನ್‍ಫ್ರಾನ್ಸಿಸ್ಕೊ ನ್ಯೂಜಿಲೆಂಡ್ ರಾಯಭಾರ ಕಚೇರಿ ಸಹ ತೀವ್ರವಾಗಿ ತೊಡಗಿಸಿಕೊಂಡಿತ್ತು.

ಈ ಶೋಧನೆ ಮತ್ತು ಕಾರ್ಯತಂತ್ರ ಅಭಿವೃದ್ಧಿಗೆ ಮೊದಲು, 1981ರಲ್ಲಿ ಆಕ್ಲೆಂಡಿನಲ್ಲಿ ಇರ್ವಿನ್ ಹಾಲ್ಟ್ ಮೂಲಕ ಪ್ರಕಾಶನಗೊಂಡ ಮೊದಲ ಕೀವಿಹಣ್ಣಿನ ಅಡುಗೆ ಪುಸ್ತಕವನ್ನು ಬರೆಯಲು ಕೀವಿಹಣ್ಣಿನ ಪ್ರಾಧಿಕಾರ ಮೊದಲ ಜಾನ್ ಬಿಲ್ತನ್ ಅವರನ್ನು ನೇಮಿಸಿಕೊಂಡಿತು.ಪ್ರಾಥಮಿಕವಾಗಿ ಸಲಾಡ್‍ಗಳು, ಪಾನೀಯಗಳು, ಸಿಹಿ ತಿನಿಸುಗಳು ಮತ್ತು ಖಾದ್ಯಾಲಂಕಾರದ ವಿಧಾನಗಳು ಇತ್ತು. ಈ ಪುಸ್ತಕದ ಬಹಳ ಪಾಕವಿಧಾನಗಳು ಮತ್ತು ಉಪಯೋಗಿಸುವ ಸಲಹೆಗಳನ್ನು ಮಾರಾಟ ಅಂಶಗಳ ದೃಷ್ಟಿಯಿಂದ ಮತ್ತು ಮಾರುಕಟ್ಟೆ ಮಾಹಿತಿ ಪರೀಕ್ಷೆಯನ್ನು ಹೆಚ್ಚು ವಿನ್ಯಾಸಗೊಳಿಸಲು ಉಪಯೋಗಿಸಲಾಗಿತ್ತು. ಈಗ ನ್ಯೂಜಿಲೆಂಡಿನ ಹೆಚ್ಚು ಕೀವಿಹಣ್ಣುಗಳು ಜೆಸ್ಪ್ರಿ ಹೆಸರಿನ ಮುದ್ರೆಯ ಅಡಿಯಲ್ಲಿ ಮಾರಾಟವಾಗುತ್ತದೆ ಇದು ಜೆಸ್ಪ್ರಿ ಇಂಟರ‍್ನ್ಯಾಷನಲ್ ಎನ್ನುವ ನ್ಯೂಜಿಲೆಂಡಿನಲ್ಲಿರುವ ವ್ಯಾಪಾರ ಕಂಪನಿಯ ಟ್ರೇಡ್‍ಮಾರ್ಕ್ ಆಗಿದೆ. ಬ್ರಾಂಡಿಂಗ್ ಮಾಡುವ ಯೋಜನೆಯು ಸಹಾ ನ್ಯೂಜಿಲೆಂಡ್ ಕೀವಿ ಹಣ್ಣನ್ನು, ಆಗಿನ್ನೂ ಟ್ರೇಡ್‌ಮಾರ್ಕ್ ಮಾಡಿರದಿದ್ದ "ಕೀವಿ" ಹೆಸರಿನಿಂದ ಹಣ ಮಾಡಲು ಬಯಸಿದ್ದ ಇತರ ದೇಶಗಳಲ್ಲಿ ಉತ್ಪಾದಿಸಲಾದ ಕೀವಿ ಹಣ್ಣುಗಳಿಂದ ಪ್ರತ್ಯೇಕವಾಗಿಸಿತು.

ಇತಿಹಾಸ[ಬದಲಾಯಿಸಿ]

2005ರಲ್ಲಿ ಕೀವಿಹಣ್ಣಿನ ಇಳುವರಿ

ಮುಖ್ಯವಾಗಿ ಎಕ್ಟಿಂಡಿಯ ಡೆಲಿಸಿಯೊಸ ಚೀನಾದ ದಕ್ಷಿಣ ಭಾಗದ್ದಾಗಿದೆ. ಮೂಲತಃ ಯಾಂಗ್ ತೊ ಎಂದು ಕರೆಯುವ[೫] ಇದನ್ನು ಚೀನಾದ ಜನರ ಪ್ರಜಾತಂತ್ರ "ರಾಷ್ಟ್ರೀಯ ಹಣ್ಣು" ಎಂದು ಅಂಗೀಕರಿಸಿದೆ.[೬] ಭಾರತ, ಜಪಾನ್, ಮತ್ತು ಉತ್ತರದಲ್ಲಿ ಸೈಬಿರಿಯದ ದಕ್ಷಿಣ ಪೂರ್ವ ಭಾಗಗಳಲ್ಲಿ ಎಕ್ಟಿಂಡಿಯ ದ ಇತರ ವರ್ಗಗಳು ಕಂಡುಬಂದಿವೆ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಚೀನಾದಿಂದ ಸಾಗುವಳಿ ಹರಡಿತು, ವೆಂಗನ್ವಿ ಹೆಣ್ಣುಮಕ್ಕಳ ಕಾಲೇಜಿನ ಪ್ರಾಂಶುಪಾಲರಾದ ಮೇರಿ ಇಸಾಬೆಲ್ ಚೀನಾದ ಯಿಚಾಂಗ್‍ನ ಪ್ರಚಾರ ಶಾಲೆಗಳಿಗೆ ಭೇಟಿ ನೀಡಿದ್ದರು, ಆಗ ಬೀಜಗಳನ್ನು ನ್ಯೂಜಿಲೆಂಡಿಗೆ ಪರಿಚಯಿಸಿದರು.[೭] 1906ರಲ್ಲಿ ವೆಂಗನ್ವಿಯ ಕೆಲಸಗಾರ ಅಲೆಕ್ಸಾಂಡರ್ ಅಲಿಸನ್ ದ್ರಾಕ್ಷಿ ಬಳ್ಳಿಗಳ ಜೊತೆ ಬೀಜಗಳನ್ನು ಬಿತ್ತಿದನು, 1910ರಲ್ಲಿ ಫಲ ನೀಡಿತು.ಸುಮಾರು 1924ರಲ್ಲಿ ನ್ಯೂಜಿಲೆಂಡಿಅವೊಂದಲೆಯಲ್ಲಿ ಹೆವಾರ್ದ್ ರೈಟ್ ರಿಂದ ಪರಿಚಿತ ಎಕ್ಟಿಂಡಿಯ ಡೆಲಿಸಿಯೊಸ 'ಹೆವಾರ್ದ್' ತಳಿ ಅಭಿವೃದ್ಧಿಗೊಂಡಿತು. ಇದನ್ನು ಪ್ರಾರಂಭದಲ್ಲಿ ವೈಯಕ್ತಿಕ ಕೈತೋಟಗಳಲ್ಲಿ ಬೆಳೆಸಲಾಗುತ್ತಿತ್ತು, ಆದರೆ 1940ರ ದಶಕದಲ್ಲಿ ವಾಣಿಜ್ಯವಾಗಿ ಬೆಳೆಸಲು ಪ್ರಾರಂಭಿಸಿದರು. ಪ್ರಪಂಚದ ಕೀವಿಹಣ್ಣಿನ ಉತ್ಪಾದಕರಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ, ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್, ಚಿಲಿ, ಫ್ರಾನ್ಸ್, ಗ್ರೀಸ್, ಜಪಾನ್, ಮತ್ತು ಅಮೇರಿಕಾದ ಸಂಯುಕ್ತ ರಾಜ್ಯಗಳಿವೆ. ಚೀನಾದಲ್ಲಿ ಕೀವಿಹಣ್ಣನ್ನು ಸಾಂಪ್ರದಾಯಿಕವಾಗಿ ಕಾಡುಗಳಿಂದ ಪಡೆದುಕೊಳ್ಳುತ್ತಿದ್ದರು, ಆದರೆ ಇಲ್ಲಿಯವರೆಗೆ ಇದನ್ನು ಉತ್ಪಾದಿಸುವ ಮುಖ್ಯ ದೇಶವಾಗಿಲ್ಲ.[೮] ಚೀನಾದಲ್ಲಿ ಮುಖ್ಯವಾಗಿ ಯಾಂಗ್‍ತ್ಸೆ ನದಿಯ ಮೇಲಿನ ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಸಿಚೌನ್ ಸೇರಿದಂತೆ ಚೀನಾದ ಇತರ ಪ್ರದೇಶಗಳಲ್ಲೂ ಸಹ ಬೆಳೆಯುತ್ತಾರೆ.[೯]

ತಳಿಗಳು[ಬದಲಾಯಿಸಿ]

ಕೀವಿಹಣ್ಣಿನ ಸಿಪ್ಪೆ ಕ್ಲೋಸ್ ಅಪ್

ಸುಮಾರು ಎಲ್ಲಾ ಕೀವಿಹಣ್ಣುಗಳು ಎಕ್ಟಿಂಡಿಯ ಡೆಲಿಸಿಯೊಸ ದ 'ಹೆವಾರ್ದ್', 'ಚಿಕೊ', ಮತ್ತು 'ಸಾನಿಚ್ತೊನ್ 12' ಎನ್ನುವ ಕೆಲವು ತಳಿಗಳಿಗೆ ಸೇರಿವೆ. ಈ ತಳಿಗಳ ಹಣ್ಣುಗಳು ಪ್ರಾಯೋಗಿಕವಾಗಿ ಒಂದರಿಂದ ಒಂದನ್ನು ಬೇರ್ಪಡಿಸಲಾಗುವುದಿಲ್ಲ ಮತ್ತು ಈ ಲೇಖನದ ಮೇಲೆ ಹೇಳಿದ ಮಾದರಿ ಕೀವಿಹಣ್ಣಿನ ವಿವರಣೆಗೆ ಹೊಂದುತ್ತದೆ.

ಹೋಳಾದ ಬಂಗಾರದ ಕೀವಿಹಣ್ಣು

ಹೊಂಬಣ್ಣದ ಕೀವಿಹಣ್ಣು ಅಥವಾ "ಹಿನೆಬಲ್", ಜೊತೆಗೆ ಹಳದಿ ತಿರುಳು ಮತ್ತು ಸಿಹಿಯಾಗಿರುವ, ಕಡಿಮೆ ಆಮ್ಲೀಯ ಸ್ವಾದದ ಹಣ್ಣಿನ ಮಿಶ್ರಣ ಮಾಡಬಹುದು, ಈ ಹೊಸ ತಳಿಯನ್ನು ಕ್ರೌನ್ ಶೋಧನಾ ಸಂಸ್ಥೆ, ಹೊರ್ಟ್ ರಿಸರ್ಚ್ ಶೋಧಿಸಿತು ಮತ್ತು ಹೆಚ್ಚುತ್ತಿರುವ ಪ್ರಮಾಣದಲ್ಲಿ ವಿಶ್ವದ ತುಂಬೆಲ್ಲಾ ಮಾರಾಟವಾಯಿತು.ಭಾರತದ ಕೆಲವು ಕಾಡು ಬಳ್ಳಿಗಳು ಹಳದಿ ಹಣ್ಣನ್ನು ಹೊಂದಿರುತ್ತವೆ ಆದರೆ ಅವು ಸಣ್ಣದಾಗಿವೆ ಮತ್ತು ವಾಣಿಜ್ಯವಾಗಿ ಉಳಿಯುವಂತಹುಗಳು.1987ರಲ್ಲಿ ಈ ಗಿಡಗಳ ಬೀಜಗಳನ್ನು ನ್ಯೂಜಿಲೆಂಡಿನಿಂದ ಆಮದು ಮಾಡಿಕೊಳ್ಳಲಾಯಿತು ಮತ್ತು ಭಿನ್ನ ತಳಿಗಳ ಪರಾಗಸ್ಪರ್ಶ ಮತ್ತು ಹಸಿರು ಕೀವಿಹಣ್ಣಿನ ವೈನುಗಳನ್ನು ಕಸಿ ಮಾಡುವುದರ ಮೂಲಕ ಹೊಸ ಹಣ್ಣನ್ನು ವಿಕಾಸಗೊಳಿಸಲು ಕಂಪನಿ 11 ವರ್ಷ ತೆಗೆದುಕೊಂಡಿತು. ಹೊಂಬಣ್ಣದ ಕೀವಿಹಣ್ಣು ಮೃದುವಾದ ಕಂದು ಬಣ್ಣದ ಸಿಪ್ಪೆ, ಒಂದು ತುದಿಯಲ್ಲಿ ಕ್ಯಾಪ್, ಮತ್ತು ಕಡಿಮೆ ಒಗರಿರುವ ಭಿನ್ನವಾದ ಹೊನ್ನಿನ ಹಳದಿ ತಿರುಳು ಮತ್ತು ಹಸಿರು ಕೀವಿಹಣ್ಣಿಗಿಂತ ಹೆಚ್ಚಿನ ಸ್ವಾದಗಳನ್ನು ಹೊಂದಿರುತ್ತದೆ. ಇದರ ಮಾರಾಟ ಬೆಲೆ ಕೀವಿಹಣ್ಣಿಗಿಂತ ಹೆಚ್ಚಾಗಿದೆ.ಹಸಿರು ತಳಿಗಳಿಗಿಂತ ಇದು ಹೆಚ್ಚು ನವಿರಾಗಿದೆ, ಆದ್ದರಿಂದ ಹಗುರಾದ ಹೊದಿಕೆಯಂತಿರುವ ಸಿಪ್ಪೆಯನ್ನು ಉಜ್ಜಿಕೊಂಡು ಪೂರ್ತಿ ಹಣ್ಣನ್ನು ತಿನ್ನಬಹುದು. ಕೆಲವೊಮ್ಮೆ ಕೊಡುವ ಮೊದಲು ಕೀವಿಹಣ್ಣಿನ ಸಿಪ್ಪೆಯನ್ನು ತೆಗೆದಿಟ್ಟಾಗ ಇದನ್ನು ಪೂರ್ತಿಯಾಗಿ ತಿನ್ನಬಹುದಾಗಿದೆ.

ಪೌಷ್ಟಿಕ ಆಹಾರ[ಬದಲಾಯಿಸಿ]

ಕೀವಿಹಣ್ಣಿನಲ್ಲಿ ವಿಟಮಿನ್ ಸಿ ಅಗಾಧವಾಗಿದೆ, ಸಂಯುಕ್ತ ಸಂಸ್ಥಾನಗಳಲ್ಲಿ ಡಿಆರ್ಐಪ್ರಮಾಣದ 1.5 ಪಟ್ಟು. ಇದರ ಪೊಟ್ಯಾಸಿಯಂ ಪ್ರಮಾಣ ತೂಕದಲ್ಲಿ ಬಾಳೆಹಣ್ಣಿಗಿಂತ ಸ್ವಲ್ಪ ಕಡಿಮೆ.

ಇದು ವಿಟಮಿನ್ ಇ ಯನ್ನೂ,[೧೦] ಮತ್ತು ಸ್ವಲ್ಪ ಪ್ರಮಾಣದ ವಿಟಮಿನ್ ಎ ಯನ್ನು ಸಹ ಹೊಂದಿದೆ.[೧೦][೧೧] ಇದರ ಚರ್ಮವು ಫ್ಲೇವಿನಾಯ್ಡ್ ಆ‍ಯ್‌೦ಟಿಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದೆ. ಕೀವಿಹಣ್ಣಿನ ಬೀಜದ ಎಣ್ಣೆ ಅಂಶ ಸರಾಸರಿ 62% ಆಲ್ಫಾ-ಲಿಲೋಲೆನಿಕ್ ಆಮ್ಲ, ಒಮೆಗ-3 ಕೊಬ್ಬಿನಂಥ ಆಮ್ಲಗಳನ್ನು ಹೊಂದಿರುತ್ತದೆ.[೧೨] ಸಾಮಾನ್ಯವಾಗಿ ಮಧ್ಯಮ ಗಾತ್ರದ ಒಂದು ಕೀವಿಹಣ್ಣು 46 ಕ್ಯಾಲೋರಿಗಳು,[೧೩] 0.3 ಗ್ರಾಮ್ ಕೊಬ್ಬುಗಳು, 1 ಗ್ರಾಮ್ ಪ್ರೋಟೀನುಗಳು, 11 ಗ್ರಾಮ್ ಕಾರ್ಬೋಹೈಡ್ರೇಟುಗಳು, 75 ಮಿಲಿಗ್ರಾಮ್ ವಿಟಮಿನ್‍ಗಳು ಮತ್ತು 2.6 ಗ್ರಾಮ್ ಜೀರ್ಣಮಾಡುವ ನಾರಿನಂಶಗಳನ್ನು ಹೊಂದಿರುತ್ತದೆ. ಕೀವಿಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಜೀರ್ಣ ಮಾಡುವ ನಾರಿನಂಶವಿರುವುದರಿಂದ ಕೆಲವೊಮ್ಮೆ ಇದನ್ನು ತಿಂದು ಭೇಧಿಯಾಗುವ ಸೂಚನೆಗಳಿವೆ.[೧೪] ಮಾಗದ ಕೀಹಣ್ಣು ಸಹ ಪ್ರೋಟೀನು-ವಿಲೀನವಾಗುವ ಕಿಣ್ವ ಎಕ್ಟಿನಿಡಿನ್ ನ್ನು (ಪಪೆನಿನಂತೆ ತಿಯೋಲ್ ಪ್ರೋತಿಸಸ್ ಕುಟುಂಬದ) ಅಗಾಧವಾಗಿ ಹೊಂದಿದೆ, ಇದು ವಾಣಿಜ್ಯವಾಗಿ ಮಾಂಸದ ಸಂರಕ್ಷಣೆಗೆ ಉಪಯೋಗವಾಗುತ್ತದೆ ಆದರೆ ಇದು ಕೆಲವು ಜನರಿಗೆ ಅಲರ್ಜಿಕವಾಗಿದೆ. ನಿರ್ದಿಷ್ಟವಾಗಿ, ವ್ಯಕ್ತಿಗಳಿಗೆ ಪಪ್ಪಾಯಿಗಳು, ಲೇಟೆಕ್ಸ್, ಅಥವಾ ಅನಾನಸ್ ಗಳಿಂದ ಅಲರ್ಜಿ ಇದ್ದರೆ, ಅವರಿಗೆ ಕೀವಿಹಣ್ಣು ಸಹ ಅಲರ್ಜಿಯಾಗುವ ಸಂಭವವಿದೆ. ಹಣ್ಣು ರೆಫೈಡ್ ಗಳ ರೂಪದಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳನ್ನು ಸಹ ಹೊಂದಿರುತ್ತದೆ. ಈ ರಾಸಾಯನಿಕಗಳಿಗೆ ಪ್ರತಿಕ್ರಿಯೆಗಳು ಬೆವರುವುದು, ಜುಮ್ಮೆನ್ನುವುದು, ಮತ್ತು ಬಾಯಿ ಹುಣ್ಣು; ತುಟಿಗಳು, ನಾಲಿಗೆ, ಮುಖಗಳ ಬಾವು; ಕೆಂಪು ಗುಳ್ಳೆ; ವಾನ್ತಿಯಾಗುವುದು ಮತ್ತು ಹೊಟ್ಟೆ ನೋವು; ಹೆಚ್ಚಿನ ಉಗ್ರ ಸಂದರ್ಭಗಳಲ್ಲಿ ಉಸಿರಾಟದ ತೊಂದರೆಗಳು, ಉಸಿರಾಡುವಾಗ ಸೊಂಯ್‍ಗುಡುವುದು ಮತ್ತು ಪತನ ಹೊಂದುವುದು. ತೀವ್ರವಾದ ತುರಿತ ಮತ್ತು ಬಾಯಿಯ ತೀವ್ರ ನೋವುಗಳ ಜೊತೆ ಹೆಚ್ಚು ಸಾಮಾನ್ಯ ಪ್ರಯಾಸಕರ ಸೂಚನೆ ಉಸಿರಾಡುವಾಗ ಸೊಂಯ್‍ಗುಡುವುದು ಇವು ಹೆಚ್ಚು ಸಾಮಾನ್ಯವಾದ ಲಕ್ಷಣಗಳು. ಪ್ರಯಾಸಕರ ಲಕ್ಷಣಗಳು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಉಂಟಾಗುವ ಸಾಧ್ಯತೆಗಳಿವೆ.ಎಕ್ಟಿನಿಡಿನ್ ಹಾಲು ಹಾಕಿ ಮಾಡುವ ಸಿಹಿ ತಿನಿಸು ಅಥವಾ ಇತರ ಹಾಲಿನ ಉತ್ಪನ್ನಗಳನ್ನು ತಯಾರಿಸುವಾಗ ಕೀವಿಹಣ್ಣನ್ನು ಉಪಯೋಗಿಸದಂತೆ ಮಾಡುತ್ತದೆ ಇವು ಘಂಟೆಗಳ ಒಳಗೆ ತಿನ್ನಲು ಕಳುಹಿಸಲು ಸಾಧ್ಯವಿಲ್ಲ, ಏಕೆಂದರೆ ಕಿಣ್ವಗಳು ಬೇಗನೆ ಹಾಲಿನ ಪ್ರೋಟೀನಿನಲ್ಲಿ ಸೇರಿಕೊಳ್ಳುತ್ತವೆ. ಇದು ಜೆಲಟಿನ್‍ನ ಸಿಹಿ ತಿನಿಸುಗಳಿಗೂ ಅನ್ವಯಿಸುತ್ತದೆ, ಎಕ್ಟಿನಿಡಿನ್‍ನಂತೆ ಜೆಲಟಿನ್‍ನಲ್ಲಿರುವ ಕೊಲಜೆನ್ ಪ್ರೋಟೀನುಗಳು ತ್ವರಿತವಾಗಿ ಕರಗುತ್ತವೆ, ಸಿಹಿ ತಿನಿಸನ್ನು ದ್ರವ ರೂಪಕ್ಕೆ ತರುತ್ತವೆ, ಅಥವಾ ಇದು ಘನರೂಪವಾಗುವುದನ್ನು ತಡೆಯುತ್ತವೆ. ಆದಾಗ್ಯೂ, ಈ ಪರಿಣಾಮವನ್ನು ತಡೆಯಲು ಹಣ್ಣಿನ ಖಾದ್ಯವನ್ನು ತಯಾರಿಸುನ ಕೆಲವು ನಿಮಿಷ ಮೊದಲು ಇದನ್ನು ಜೆಲಟಿನ್‍ನೊಂದಿಗೆ ಸೇರಿಸಬೇಕು ಎಂದು ಅಮೇರಿಕ ಸಂಯುಕ್ತ ರಾಷ್ಟ್ರಗಳ ಕೃಷಿ ವಿಭಾಗ ಸಲಹೆ ನೀಡುತ್ತದೆ.[೧೫]

ನ್ಯೂಜಿಲೆಂಡಿನ ರಾಷ್ಟ್ರೀಯ ಸಿಹಿ ತಿನಿಸು ಪವ್ಲೋವದ ಮೇಲೆ ಹಾಲಿನ ಕ್ರೀಮಿನ ಮೇಲೆ ಅಲಂಕರಿಸಲು ಹೋಳು ಮಾಡಿದ ಕೀವಿಹಣ್ಣನ್ನು ನಿಯಮಿತ ರೂಪದಲ್ಲಿ ಉಪಯೋಗಿಸುತ್ತಾರೆ. ಅದನ್ನು ಸಾಂಬಾರನ್ನು ಮಾಡಲು ಸಹ ಉಪಯೋಗಿಸಲು ಸಾಧ್ಯ.[೧೬] ಕೀವಿಹಣ್ಣು ನೈಸರ್ಗಿಕ ರಕ್ತ ತೆಳುಕಾರಿ ಸಹ ಆಗಿದೆ. ಇತ್ತೀಚೆಗೆ ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ-ಪ್ರಚಲಿರವಿರುವ ಪ್ರಸಿದ್ಧ ನೋವು ನಿವಾರಕ ಚಿಕಿತ್ಸೆಗೆ ಸಮನಾಗಿ- 28 ದಿನಗಳಕಾಲ ಪ್ರತಿನಿತ್ಯ ಎರಡರಿಂದ ಮೂರು ಕೀವಿ ಹಣ್ಣು[೧೭] ತಿನ್ನುತ್ತಾ ಬಂದರೆ ಮುಖ್ಯವಾಗಿ ರಕ್ತವನ್ನು ತೆಳು ಮಾಡುತ್ತದೆ, ರಕ್ತ ಹೆಪ್ಪುಗಟ್ಟುವ ಅಪಾಯವನ್ನು, ಮತ್ತು ರಕ್ತದಲ್ಲಿ ಕಡಿಮೆ ಕೊಬ್ಬು ರಕ್ತ ತಡೆಗಟ್ಟುವಿಕೆಯ ಕಾರಣವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.[೧೮] ಕೀವಿಹಣ್ಣಿನ ಸಿಪ್ಪೆಯನ್ನು ತಿನ್ನಬಹುದಾಗಿದೆ ಮತ್ತು ಹೆಚ್ಚು ಡಯಟರಿ ನಾರಿನಂಶ ಹೊಂದಿದೆ. ಒಂದು ಸಂಶೋಧನೆಯ ಪ್ರಕಾರ ಒಂದು ಪೂರ್ತಿ ಹಣ್ಣಾದ ಕೀವಿಹಣ್ಣಿನಲ್ಲಿ ಮೂರರಷ್ಟು ಹೆಚ್ಚಿನ ನಾರಿನಂಶ ಹೊಂದಿದೆ. ಸಿಪ್ಪೆಯ ಒಳಭಾದಲ್ಲಿ ಹಲವಾರು ಜೀವಸತ್ವಗಳಿವೆ, ಸಿಪ್ಪೆ ಸುಲಿದ ಹಣ್ಣಿಗೆ ಹೋಲಿಸಿದಾಗ ಸಿಪ್ಪೆ ಸಹಿತವಾಗಿ ತಿಂದ ಒಂದು ಹೋಳಿನಲ್ಲಿ ಹೆಚ್ಚಿನ ಸಿ ಜೀವಸತ್ವವಿದೆ. ಸಿಪ್ಪೆ ಸಹಿತವಾಗಿ ಹಣ್ಣನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದಿರಬೇಕು. ಕೀವಿಹಣ್ಣು ಲುಥೆನ್ ಮತ್ತು ಜಿಯಾಕ್ಸಾಂಥಿನ್ ‌ನ ನೈಸರ್ಗಿಕ ಮೂಲವಾಗಿದೆ.[೧೯]

ಸಾಗುವಳಿ[ಬದಲಾಯಿಸಿ]

ಪ್ರಮುಖ ಕೀವಿಹಣ್ಣಿನ ಉತ್ಪಾದಕರು- 2005

(ಮಿಲಿಯನ್ ಮೆಟ್ರಿಕ್ ಟನ್)
 ನ್ಯೂ ಜೀಲ್ಯಾಂಡ್ 0.58
 ಇಟಲಿ 0.38
 ಚಿಲಿ 0.15
 France 0.08
Greece ಗ್ರೀಸ್ 0.04
 ಜಪಾನ್ 0.04
 ಇರಾನ್ 0.02
 ಅಮೇರಿಕ ಸಂಯುಕ್ತ ಸಂಸ್ಥಾನ 0.02
 ಕೆನಡಾ 0.01
ಕಾಂಬೋಡಿಯಕಾಂಬೋಡಿಯ 0.01
ಜಾಗತೀಕ ಒಟ್ಟು ಮೊತ್ತ 1.14
ಮೂಲ:
ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆ (FAO)
[೨೦]
ಯಂಗ್ ಕೀವಿಹಣ್ಣಿನ ಹಣ್ಣಿನತೋಟ,ಉತ್ತರ ಐಸ್‌ಲ್ಯಾಂಡ್, ನ್ಯೂಜಿಲ್ಯಾಂಡ್

ಕೀವಿಹಣ್ಣನ್ನು ಹೆಚ್ಚಿನ ಉಷ್ಣಾಂಶದ ವಾತಾವರಣದ ಜೊತೆಗೆ ಬೇಸಿಗೆಯ ಸಾಕಷ್ಟು ಉಷ್ಣದಲ್ಲೂ ಬೆಳೆಯಬಹುದು. ಆಕ್ಟಿನಿಡಿಯಾ ಡೆಲಿಶಿಯಿಸಾ ಇಲ್ಲಿ ಬೆಳೆಯುವುದು ಕಷ್ಟವಲ್ಲ, ಬದಲಾಗಿ ಇತರೆ ಜಾತಿಗಳನ್ನು ಬೆಳೆಯುವುದು ಕಷ್ಟ. ಕೀವಿಹಣ್ಣನ್ನು ಬಲವಾದ ಒತ್ತಾಸೆಯ ರಚನೆಯ ಕ್ರಮದಿಂದ ವಾಣಿಜ್ಯವಾಗಿ ಬೆಳೆಯಬಹುದು,ಹೆಕ್ಟೇರಿಗೆ ಹಲವಾರು ಟನ್ಸ್ ಉತ್ಪಾದಿಸಬಹುದು,ವಾರಕ್ಕೆ ಬಳ್ಳಿಯ ಒತ್ತಾಸೆಗಿಂತ ಹೆಚ್ಚು ಬೆಳೆಯಬಹುದು. ನೀರಾವರಿಗಾಗಿ ನೀರಿನ ಪದ್ಧತಿ ಮತ್ತು ವಸಂತಕಾಲದಲ್ಲಿ ಹಿಮಗಟ್ಟುವಿಕೆಯಿಂದ ಸಂರಕ್ಷಣೆ ಇವುಗಳು ಸಮಾನ್ಯವಾಗಿ ಅಗತ್ಯಗಳನ್ನು ಪೂರೈಸುತ್ತವೆ. ದ್ರಾಕ್ಷಿ ಬಳ್ಳಿಗೆ ಹೋಲಿಸಿದಾಗ ಕೀವಿಹಣ್ಣಿನ ಬಳ್ಳಿಗಳನ್ನು ಬಲವಾಗಿ ಒಪ್ಪಗೊಳಿಸಬೇಕು. ಒಂದು ವರ್ಷ ಹಳೆಯ ಮತ್ತು ಇನ್ನೂ ಹಳೆಯ ಜಲ್ಲೆಗಳು ಹಣ್ಣಿಗೆ ಆಶ್ರಯ ನೀಡುತ್ತವೆ,ಆದರೆ ಪ್ರತಿಯೊಂದು ಜಲ್ಲೆಯ ವಯಸ್ಸು ಉತ್ಪಾದನೆಯುನ್ನು ಕ್ಷೀಣಿಸುತ್ತದೆ. ಜಲ್ಲೆಗಳನ್ನು ಒಪ್ಪ ಮಾದಬೇಕು ಮತ್ತು ಮೂರು ವರ್ಷದ ನಂತರ ಜಲ್ಲೆಯನ್ನು ಬದಲಾಯಿಸಬೇಕು.ಕೀವಿಹಣ್ಣಿನ ಸಸಿಗಳು ಸಮಾನ್ಯವಾಗಿ ಏಕಲಿಂಗೀ ಸಸ್ಯಗಳಾಗಿರುತ್ತವೆ. ಹೆಣ್ಣು ಗಿಡಗಳು ಮಾತ್ರ ಹಣ್ಣು ಬಿಡುತ್ತವೆ ಮತ್ತು ಗಂಡು ಗಿಡದಿಂದ ಪರಾಗಸ್ಪರ್ಶವಾದಾಗ ಮಾತ್ರ ಹಣ್ಣು ಬಿಡುತ್ತವೆ . ಪ್ರತಿ ಮೂರರಿಂದ ಎಂಟು ಹೆಣ್ಣು ಬಳಿಗಳಿಗೆ ಒಂದು ಗಂಡು ಪರಾಗಸ್ಪರ್ಶಕದ ಅವಶ್ಯಕತೆಯಿದೆ. ಜಪಾನಿನ ’ಇಸ್ಸಯ್’ ಎಂಬ ಹೈಬ್ರಿಡ್(ಆ‍ಯ್‌ಕ್ಟಿನಿಡಿಯಾ ಆರ್ಗುಟಾ ಎಕ್ಸ್ ಪಾಲಿಗಾಮಾ )ತಳಿ ಉತ್ತಮವಾದ ಹೂವನ್ನು ಬಿಡುತ್ತದೆ ಮತ್ತು ಸ್ವಂತವಾಗಿ ಪರಾಗಸ್ಪರ್ಶಕ್ಕೆ ಒಳಗಾಗುತ್ತದೆ; ದುರ್ದೃಷ್ಟವಶಾತ್ ಕಡಿಮೆ ಸತ್ವ ಹೊಂದಿದ್ದು, ಎ ಅರ್ಗುಟಾ ಕ್ಕಿಂತ ಕಡಿಮೆ ಸುಸ್ಥಿತಿಹೊಂದಿದ್ದು ಬೆಳೆಗಾರರ ನಿರೀಕ್ಷಿಸಿದಷ್ಟು ಇಳುವರಿ ನೀಡುವುದಿಲ್ಲ.ಕೀವಿಹಣ್ಣು ಪರಾಗಸ್ಪರ್ಶಕ್ಕೊಳಗಾಗುವುದು ಕಠಿಣ ಎನ್ನುವ ಅಪಖ್ಯಾತಿ ಹೊಂದಿದೆ ಎಕೆಂದರೆ ಇದರ ಹೂವು ದುಂಬಿಗಳಿಗೆ ಹೆಚ್ಚು ಆಕರ್ಷಕವಾಗಿಲ್ಲ. ಕೆಲವು ಉತ್ಪಾದಕರು ಹೆಣ್ಣು ಹೂವುಗಳಿಂದ ಪರಾಗವನ್ನು ಬಾಯಿಯಿಂದ ಊದಿ ಸಂಗ್ರಹಿಸುತ್ತಾರೆ. ಆದರೆ ಸಾಮಾನ್ಯವಾಗಿ ಹೆಚ್ಚು ಸಫಲತೆಗೆ ಹತ್ತಿರದ ದಾರಿ ಪರಿಪೂರ್ಣ ಪರಾಗಸ್ಪರ್ಶ ದುಂಬಿಗಳು ಪರಾಸಸ್ಪರ್ಶ ಮಾಡುವುದು ಬಹಳ ದೀರ್ಘ (ಹಣ್ಣಿನತೋಟದ ಜೇನುಗೂಡಿನ ಸ್ಥಳದಲ್ಲಿ)ಅ ದುಂಬಿಗಳು ಬಲವಂತವಾಗಿ ಈ ಹೂವುಗಳನ್ನು ಬಳಸಿಕೊಳ್ಳುತ್ತವೆ ಏಕೆಂದರೆ ಎಲ್ಲ ಹೂವುಗಳು ದುಂಬಿಗಳ ಹಾರಾಟದ ದೂರಗೊಳಗೆ ತೀವ್ರವಾದ ಪೈಪೋಟಿಗೆ ಬೀಳುತ್ತವೆ.

ಇವನ್ನೂ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. ೧.೦ ೧.೧ ೧.೨ Green, Emily. "Kiwi, Act II". Los Angeles Times.
 2. 李, 时珍. "本草纲目·果部". Archived from the original on 2006-09-13. Retrieved 2007-05-07.
 3. ಜೆಸ್ಪ್ರಿ ಸೈಟ್, ಹೌ ಕೀವಿಫ್ರುಟ್ ಗಾಟ್ ಇಟ್ಸ್ ನೇಮ್ " 9 ಜುಲೈ 2007ರಂದು ಪರಿಷ್ಕರಿಸಲಾಗಿದೆ.
 4. ನ್ಯೂಯಾರ್ಕ್ ಟೈಮ್ಸ್ ಆರ್ಟಿಕಲ್, "ವಾಟ್ಸ್ ನ್ಯೂ ಇನ್ ಎಕ್ಸೊಟಿಕ್ ಫ್ರುಟ್ : ಪುಟ್ಟಿಂಗ್ ಎ ಕೀವಿ ಇನ್ ಎವರಿ ಲಂಚ್ ಬಾಕ್ಸ್" 17 ಮೇ 1987
 5. "Kiwifruit". WHFoods. Archived from the original on 2009-12-30. Retrieved 2009-12-06.
 6. "National Symbols of China". 123independenceday.com. Retrieved 2009-12-06.
 7. ಇಸಾಬೆಲ್ ಫ್ರೆಜರ್ - ಹ್ಯಾಂಡ್ ಕ್ಯಾರಿಡ್ ದ ಫಸ್ಟ್ ಕೀವಿಫ್ರುಟ್ ಸೀಡ್ಸ್ ಫ್ರಾಮ್ ಚೀನಾ
 8. "ಕೀವಿಫ್ರುಟ್ ಪ್ಲಾಂಟಿಂಗ್ ಆ‍ಯ್‌೦ಡ್ ಪ್ರೊಡಕ್ಷನ್ ಇನ್ ಚೀನಾ". Archived from the original on 2008-05-17. Retrieved 2010-05-06.
 9. "ಕೀವಿಫ್ರುಟ್ ಇನ್ ಚೀನಾ". Archived from the original on 2008-07-08. Retrieved 2010-05-06.
 10. ೧೦.೦ ೧೦.೧ "Fruits & Veggies More Matters » Kiwifruit: Nutrition . Selection . Storage". Fruitsandveggiesmorematters.org. Retrieved 2009-12-06.
 11. "Kiwi Fruit Nutrition Facts". Nutrientfacts.com. Archived from the original on 2012-11-09. Retrieved 2009-12-06.
 12. "ಸೀಡ್ ಆಯಿಲ್ ಫ್ಯಾಟ್ಟಿ ಆಸಿಡ್ - ಎಸ್‌ಒಎಫ್‌ಎ ಡಾಟಾ ಬೇಸ್ ಪರಿಷ್ಕರಿಸಲಾಗಿದೆ". Archived from the original on 2009-04-18. Retrieved 2010-05-06.
 13. ನ್ಯೂಟ್ರಿಶಿಯನ್ ಡಾಟ ಆನ್ ಕೀವಿಫ್ರುಟ್
 14. Rush; et al. (2002-06). "Kiwifruit promotes laxation in the elderly". Asia Pacific Journal of Clinical Nutrition. Retrieved 2007-06-11. {{cite web}}: Check date values in: |date= (help); Explicit use of et al. in: |author= (help)
 15. USDA Agricultural Marketing Service (1994-01). "How To Buy Fresh Fruits" (PDF). United States Department of Agriculture . Archived from the original (PDF) on 2006-12-02. Retrieved 2006-12-02. {{cite web}}: Check date values in: |date= (help); External link in |publisher= (help)
 16. "ಆರ್ಕೈವ್ ನಕಲು". Archived from the original on 2010-05-15. Retrieved 2010-05-06.
 17. "ಕಿವಿ ಹಣ್ಣಿನ ಆರೋಗ್ಯ ಪ್ರಯೋಜನಗಳು". kannadanews.today.
 18. "Natural blood thinner | Better Nutrition | Find Articles at BNET.com". Findarticles.com. 2009-06-02. Archived from the original on 2010-02-14. Retrieved 2009-12-06.
 19. ಸಮ್ಮರ್ಬರ್ಗ್ ಒ, ಕೆನನ್ ಜೆಇ, ಬರ್ಡ್ ಎಸಿ, ವ್ಯಾನ್ ಕ್ವಿಜಕ್ ಎಫ್‌ಜೆ. ಲ್ಯೂಟೀನ್ ಮತ್ತು ಝೀಕ್ಸಾಂಥಿನ್‌ಗಳ ಸತ್ವಹೊಂದಿದ ಹಣ್ಣುಗಳು ಮತ್ತು ತರಕಾರಿಗಳು: ಮನುಷ್ಯರ ಕಂಗಳಲ್ಲಿರುವ ಕಪ್ಪುಕಲೆಯ ವರ್ಣದ್ರವ್ಯ. ಡಾ ಜೆ ಒಪ್ತಾಲ್ಮೊಲ್ . 1998;82:907-910.
 20. "ಆರ್ಕೈವ್ ನಕಲು". Archived from the original on 2006-06-19. Retrieved 2024-05-19.

ಬಾಹ್ಯ ಕೊಂಡಿಗಳು[ಬದಲಾಯಿಸಿ]