ಅಂಜೂರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Ficus carica - Common fig
58571 Ficus carica L.jpg
Drawing of the common fig foliage and fruit
Conservation status
ವೈಜ್ಞಾನಿಕ ವರ್ಗೀಕರಣ
Kingdom: Plantae
(unranked): Angiosperms
(unranked): Eudicots
(unranked): Rosids
Order: Rosales
Family: Moraceae
Tribe: Ficeae
Genus: Ficus
Subgenus: Ficus
Species: F. carica
ದ್ವಿಪದ ಹೆಸರು
Ficus carica
L.

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ,ತಾಮ್ರ ಮತ್ತು ಎ,ಬಿ,ಸಿ,ಡಿ ವೈಟಮಿನ್‍ಗಳು ಹೇರಳವಾಗಿವೆ.

15'-30' ಎತ್ತರ ಬೆಳೆಯುವ ಗಿಡ. ಮೂಲತಃ ಭಾರತದ ಸಸ್ಯವಲ್ಲದಿದ್ದರೂ ಈಗ ಇಲ್ಲಿ ಎಷ್ಟೋ ಕಡೆ ಇದನ್ನು ಹಣ್ಣಿಗಾಗಿ ಬೆಳೆಸುತ್ತಾರೆ. ಉಷ್ಣವಾದ ಹವೆ, ಕಪ್ಪುಭೂಮಿ ಮತ್ತು ನೀರಿನ ಸೌಕರ್ಯವಿದ್ದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅರ್ಧ ಅಂಗುಲ ದಪ್ಪವಾದ ಕಾಂಡದಿಂದ ಅಂಟನ್ನು ತಯಾರಿಸುವರು. ಹೊಸ ಗಿಡಗಳನ್ನು ಗೂಟನೆಟ್ಟು ಬೆಳೆಸುವುದೂ ಇದೆ. ಅಂಜೂರದ ಮರ ಜುಲೈ-ಅಕ್ಟೋಬರ್ ಮತ್ತು ಜನವರಿ-ಮೇ ತಿಂಗಳು ಹೀಗೆ ವರ್ಷದಲ್ಲಿ ಎರಡು ಸಲ ಹಣ್ಣು ಬಿಡುವುದು. ಮೈಸೂರುರಾಜ್ಯದಲ್ಲಿ ಒಂದು ಗಿಡಕ್ಕೆ ಸು. 180-300ರವರೆಗೆ ಹಣ್ಣುಗಳಾಗುತ್ತವೆ. ಗಿಡದ ಮೇಲೆಯೇ ಉಳಿದಿರುವ ಹಣ್ಣುಗಳನ್ನು ಕೊಯ್ಯುತ್ತಾರೆ; ಕೆಳಗೆ ಬಿದ್ದವನ್ನು ಸಂಗ್ರಹಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ಅಂಜೂರಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಹಣ್ಣಿನಿಂದ ಜಾಮ್, ಮಾದಕಪೇಯ ಮುಂತಾದುವನ್ನು ತಯಾರಿಸುವರು. ಇದೊಂದು ಪೌಷ್ಟಿಕವಾದ ಹಣ್ಣು. ಇದರಲ್ಲಿ ಎ, ಬಿ, ಸಿ ಮತ್ತು ಡಿ ಅನ್ನಾಂಗಗಳು ಇವೆ. ಮಾಂಸವನ್ನು ಬೇಗ ಕುದಿಸಲಿಕ್ಕೆ ಇದರ ಕಾಯಿಯನ್ನು ಸೇರಿಸುವರು. ಇದೊಂದು ಔಷಧೀಯ ವಸ್ತುವೂ ಹೌದು.ಛಾಯಾಂಕಣ[ಬದಲಾಯಿಸಿ]

ಎಲೆ ಮತ್ತು ಹಣ್ಣು ಹಣ್ಣು The Expulsion ತುಂಡರಿಸಿದ ಹಣ್ಣು

Common fig - leaves and green figs.jpg

Ficus carica0.jpg

Masaccio-TheExpulsionOfAdamAndEveFromEden-Restoration.jpg

Feige-Schnitt.jpg

Leaves and green fruit on common fig tree

Common fig fruit

The Expulsion from the Garden of Edenfresco depicting a distressed Adam and Eve, with and without fig leaves, by Tommaso Masaccio, 1426–27

Cutaway-section displaying the fruit anatomy

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"http://kn.wikipedia.org/w/index.php?title=ಅಂಜೂರ&oldid=503254" ಇಂದ ಪಡೆಯಲ್ಪಟ್ಟಿದೆ