ಆಲ್ಕೋಹಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಕೋಹಾಲ್‍ನ ಗೋಳ ಮತ್ತು ಕಡ್ಡಿ ಮಾದರಿ

ರೆಪ್ಪೆಗಳಿಗೆ ಲೇಪಿಸುವ ಪುಡಿ ಎಂಬ ಅರ್ಥವುಳ್ಳ ಅರಾಬಿಕ್ ಮೂಲಪದದಿಂದ ಆಲ್ಕೋಹಾಲ್ ಪದ ನಿಷ್ಪನ್ನಗೊಂಡಿದೆ. ಕಾಲ ಕ್ರಮೇಣ ಶುದ್ದ ಮದ್ಯಸಾರಗಳಿಗೆಲ್ಲ ಆಲ್ಕೋಹಾಲ್ ಪದವನ್ನು ಅನ್ವಯ ಮಾಡಲಾಯಿತು. ಕಾರ್ಬನ್ ಪರಮಾಣುವಿನ ಸಂಯೋಗಶಕ್ತಿ (ವೇಲೆನ್ಸಿ) ನಾಲ್ಕು ಅಂದರೆ, ಅದು ನಾಲ್ಕು ಹೈಡ್ರೊಜನ್ ಅಥವಾ ಇತರ ಪರಮಾಣುಗಳನ್ನು ಹೊರಬಲ್ಲುದು. ಅಂಥ ಸಾವಯವ ವಸ್ತುಗಳು ಪರ್ಯಾಪ್ತವಾಗಿವೆ ಈ ತರಹದ ಕೆಲವು ಹೈಡ್ರೊಕಾರ್ಬನ್ನುಗಳಿವೆ. ಅವುಗಳಲ್ಲಿ ಕಾರ್ಬನ್ ಪರಮಾಣುಗಳು ಸರಪಳಿಯಂತೆ ಒಂದಕ್ಕೊಂದು ಪೋಣಿಸಲ್ಪಟ್ಟಿರುತ್ತವೆ. ಈ ಪರಮಾಣುಗಳು ಚತುಸ್ಸಂಯೋಗಶಕ್ತಿಯನ್ನು ಸರಿದೂಗಿಸಲು ಅಗತ್ಯ ಸಂಖ್ಯೆಯ ಹೈಡ್ರೊಜನ್ ಪರಮಾಣುಗಳಿರುತ್ತವೆ. ಇವೇ ಪ್ಯಾರಫಿನ್ ಹೈಡ್ರೊಕಾರ್ಬನ್‍ಗಳು ಅಥವಾ ಆಲ್ಕೇನ್‍ಗಳು. ಪ್ಯಾರಫಿನ್ ಅಣುವಿನಲ್ಲಿರುವ ಒಂದು ಅಥವಾ ಹೆಚ್ಚು ಹೈಡ್ರೊಜನ್ ಪರಮಾಣುಗಳ ಬದಲು, ಅಷ್ಟೇ ಸಂಖ್ಯೆಯ ಹೈಡ್ರಾಕ್ಸಿಲ್ (–OH) ಗುಂಪುಗಳಿದ್ದರೆ ಆಗ ಅದು ಆಲ್ಕೊಹಾಲ್ ಎನಿಸಿಕೊಳ್ಳುತ್ತದೆ. ಆದ್ದರಿಂದ ಆಲ್ಕೊಹಾಲ್‍ಗಳನ್ನು ಹೈಡ್ರಾಕ್ಸಿಪ್ಯಾರಫಿನ್‍ಗಳು ಎಂದು ಪರಿಗಣಿಸಬಹುದು. ಅವುಗಳ ಅಣುಸೂತ್ರ (CnH2n+1OH) ಎಂದಾಯಿತು.

ವರ್ಗೀಕರಣ[ಬದಲಾಯಿಸಿ]

ಆಲ್ಕೊಹಾಲ್‍ಗಳಲ್ಲಿ ನಾನಾ ಬಗೆಯುಂಟು.

 1. ಆಲ್ಕೊಹಾಲ್‍ನ ಒಂದು ಅಣುವಿನಲ್ಲಿರುವ ಹೈಡ್ರಾಕ್ಸಿಲ್ ಗುಂಪುಗಳ ಸಂಖ್ಯೆ ಒಂದಾಗಿದ್ದರೆ ಮಾನೊಹೈಡ್ರಿಕ್.
 2. ಆಲ್ಕೊಹಾಲ್‍ನ ಒಂದು ಅಣುವಿನಲ್ಲಿರುವ ಹೈಡ್ರಾಕ್ಸಿಲ್ ಗುಂಪುಗಳ ಸಂಖ್ಯೆ ಎರಡಾಗಿದ್ದರೆ ಡೈಹೈಡ್ರಿಕ್.
 3. ಆಲ್ಕೊಹಾಲ್‍ನ ಒಂದು ಅಣುವಿನಲ್ಲಿರುವ ಹೈಡ್ರಾಕ್ಸಿಲ್ ಗುಂಪುಗಳ ಸಂಖ್ಯೆ ಮೂರಾಗಿದ್ದರೆ ಟ್ರೈಹೈಡ್ರಿಕ್
 4. ಆಲ್ಕೊಹಾಲ್‍ನ ಒಂದು ಅಣುವಿನಲ್ಲಿರುವ ಹೈಡ್ರಾಕ್ಸಿಲ್ ಗುಂಪುಗಳ ಸಂಖ್ಯೆ ಹೆಚ್ಚಾಗಿದ್ದರೆ ಪಾಲಿಹೈಡ್ರಿಕ್ ಎಂದು ವರ್ಗೀಕರಿಸಲಾಗುವುದು.

ಇದಕ್ಕೆ ಕ್ರಮವಾಗಿ ಈಥೈಲ್ ಆಲ್ಕೊಹಾಲ್, ಎಥಿಲೀನ್ ಗ್ಲೈಕಾಲ್, ಮತ್ತು ಗ್ಲಿಸರಾಲ್ ಉದಾಹರಣೆಗಳು. ಆಲ್ಕೊಹಾಲ್‍ಗಳನ್ನು ವಿಂಗಡಿಸುವ ಇನ್ನೊಂದು ಕ್ರಮವಿದೆ. ಹೈಡ್ರಾಕ್ಸಿಲ್ ಗುಂಪನ್ನು ಧರಿಸಿರುವ ಕಾರ್ಬನ್ ಪರಮಾಣು, ನೇರವಾಗಿ ಎಷ್ಟು ಹೈಡ್ರೊಜನ್ ಪರಮಾಣುಗಳನ್ನು ಹೊತ್ತಿದೆಯೆಂಬುದನ್ನು ಇದು ಅವಲಂಬಿಸಿದೆ. ನೇರ ಸಂಬಂಧವಿರುವ ಹೈಡ್ರೊಜನ್ ಪರಮಾಣುಗಳ ಸಂಖ್ಯೆ ಕನಿಷ್ಠಪಕ್ಷ ಎರಡಾಗಿದ್ದರೆ ಪ್ರೈಮರಿ ಆಲ್ಕೊಹಾಲ್ ಎನ್ನುವರು. ಇದಕ್ಕೆ ಈಥೈಲ್ ಆಲ್ಕೊಹಾಲ್ ಉದಾಹರಣೆ. ಅದರ ರಚನಾ ಸೂತ್ರದಿಂದ ಈ ಅಂಶ ವ್ಯಕ್ತವಾಗುತ್ತದೆ. ಹೀಗೆಯೇ ಐಸೋಪ್ರೊಪೈಲ್ ಆಲ್ಕೊಹಾಲಿನ ರಚನೆಯನ್ನು ಪರಿಶೀಲಿಸಿದರೆ ಹೈಡ್ರಾಕ್ಸಿಲ್ ಗುಂಪಿರುವ ಕಾರ್ಬನ್ ಪರಮಾಣುವಿನೊಡನೆ ಕೇವಲ ಒಂದು ಹೈಡ್ರೊಜನ್ ಪರಮಾಣುವಿಗೆ ಮಾತ್ರ ಪ್ರತ್ಯಕ್ಷ ಸಂಬಂಧವಿದೆ. ಇಂಥ ಆಲ್ಕೊಹಾಲ್‍ಗಳನ್ನು ಸೆಕೆಂಡರಿ ಎಂದು ಕರೆಯುವರು. ಕೆಲವು ಆಲ್ಕೊಹಾಲ್‍ನಲ್ಲಿ ಹೈಡ್ರಾಕ್ಸಿಲ್ ಗ್ರೂಪಿರುವ ಕಾರ್ಬನ್ ಹೈಡ್ರೊಜನ್ ರಹಿತವಾಗಿರುವುದುಂಟು. ಅವನ್ನು ಟರ್ಷಿಯರಿ ಎಂದು ಕರೆಯುತ್ತಾರೆ. ಇದಕ್ಕೆ ನಿದರ್ಶನವಾಗಿ ಟರ್ಷಿಯರಿ ಐಸೊಬ್ಯೂಟೈಲ್ ಆಲ್ಕೊಹಾಲನ್ನು ಹೆಸರಿಸಬಹುದು. ಅದರ ರಚನಾಸೂತ್ರದಿಂದ ಇದು ವೇದ್ಯವಾಗುತ್ತದೆ. ಇದಲ್ಲದೆ ಕೆಳಕಂಡ ಜಾತಿಯ ಆಲ್ಕೊಹಾಲ್‍ಗಳೂ ಉಂಟು.

 1. ಸರಳ ಆಲಿಫ್ಯಾಟಿಕ್ ಆಲ್ಕೊ ಹಾಲ್‍ಗಳು
 2. ಅಪರ್ಯಾಪ್ತ ಆಲಿಫ್ಯಾಟಿಕ್ ಆಲ್ಕೊಹಾಲ್‍ಗಳು
 3. ಆದೇಶಿತ ಆಲಿಫ್ಯಾಟಿಕ್ ಆಲ್ಕೊಹಾಲ್‍ಗಳು
 4. ಆರೊಮ್ಯಾಟಿಕ್ ಆಲ್ಕೊಹಾಲ್‍ಗಳು
 5. ಆಲಿಸೈಕ್ಲಿಕ್ ಆಲ್ಕೊಹಾಲ್‍ಗಳು
 6. ಹೆಟಿರೊಸೈಕ್ಲಿಕ್ ಆಲ್ಕೊಹಾಲ್‍ಗಳು

ನಾಮಕರಣ ವಿಧಾನ[ಬದಲಾಯಿಸಿ]

ಆಲ್ಕೊಹಾಲ್ ಕುಟುಂಬದ ಕಿರಿಯ ಸದಸ್ಯರನ್ನು (ಉದಾ : ಮೀಥೈಲ್ ಮತ್ತು ಈಥೈಲ್ ಆಲ್ಕೊಹಾಲ್‍ಗಳು) ಅವುಗಳ ಸಂಕ್ಷಿಪ್ತನಾಮದಿಂದ ಸೂಚಿಸಿರುತ್ತಾರೆ. ಅಂತರರಾಷ್ಟ್ರೀಯ ವ್ಯವಸ್ಥೆಯಾದ ಜಿನೀವಸಂಪ್ರದಾಯದ ಪ್ರಕಾರ, ಹೈಡ್ರಾಕ್ಸಿಲ್ ಗುಂಪನ್ನು ಧರಿಸಿರುವ ಕಾರ್ಬನ್ ಸರಣಿಯನ್ನು ಮೊದಲು ಗುರುತಿಸಿಕೊಂಡು, ಆ ರ್ಯಾಡಿಕಲ್‍ನ ಹೆಸರಿಗೆ ಆಲ್ ಎಂಬ ಪ್ರತ್ಯಯ ಸೇರಿಸಿ ಕರೆಯುವುದು ಪದ್ಧತಿ. ಹೈಡ್ರಾಕ್ಸಿಲ್ ಮತ್ತು ಇತರ ಗುಂಪುಗಳ ಸ್ಥಾನ ನಿರ್ದೇಶನಕ್ಕೆ ಸಂಖ್ಯೆಗಳನ್ನು ಬಳಸಲಾಗುವುದು. ಹೀಗೆ ಮಾಡುವಾಗ ಹೈಡ್ರಾಕ್ಸಿಲ್ ಗ್ರೂಪಿಗೆ ಕನಿಷ್ಠ ಸಂಖ್ಯೆಯನ್ನು ಕೊಡುವುದು ರೂಢಿ. ಉದಾಹರಣೆಗೆ ಐಸೊಬ್ಯೂಟೈಲ್ ಆಲ್ಕೊಹಾಲನ್ನು ಮೀಥೈಲ್ ಪ್ರೊಪೆನಾಲ್-1 ಎಂದು ಕರೆಯಬೇಕಾಗುತ್ತದೆ.

ಆಲಿಫ್ಯಾಟಿಕ್ ಮಾನೊಹೈಡ್ರಿಕ್ ಆಲ್ಕೊಹಾಲ್‍ಗಳ ತಯಾರಿಕೆ ಸಾರ್ವತ್ರಿಕ ವಿಧಾನಗಳು[ಬದಲಾಯಿಸಿ]

 1. ಆಲ್ಕೈಲ್ ಹ್ಯಾಲೈಡುಗಳ ಜಲವಿಶ್ಲೇಷಣೆಯಿಂದ ನೀರು ಮಾತ್ರ ಇದ್ದರೆ ಕ್ರಿಯೆ ನಿಧಾನವಾಗುವುದು. ದುರ್ಬಲ ಕಾಸ್ಟಿಕ್ ಪೊಟ್ಯಾಷ್ ದ್ರಾವಣ ಅಥವಾ ತೇವವಾದ ಸಿಲ್ವರ್ ಆಕ್ಸೈಡ್ ಉಪಯೋಗಿಸಿದರೆ ಕ್ರಿಯೆಯನ್ನು ತ್ವರಿತಗೊಳಿಸಬಹುದು. ಇವು ಪ್ರತ್ಯಾಮ್ಲೀಯ ಪರಿವರ್ತಕಗಳು. ಆದ್ದರಿಂದ ಉತ್ಪತ್ತಿಯಾದ ಆಮ್ಲವನ್ನು ತಟಸ್ಥಗೊಳಿಸಿ ಆಲ್ಕೊಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುವು. ಅನೇಕ ಆಲ್ಕೊಹಾಲ್‍ಗಳಿಗಿಂತ ಸಂಬಂಧಪಟ್ಟ ಆಲ್ಕೈಲ್ ಹ್ಯಾಲೈಡುಗಳೇ ಹೆಚ್ಚು ದುರ್ಲಭ. ಆದ್ದರಿಂದ ಈ ವಿಧಾನದ ವ್ಯಾಪ್ತಿ ಸೀಮಿತವಾಗಿದೆ.
 2. ಆಪರ್ಯಾಪ್ತ ಹೈಡ್ರೊಕಾರ್ಬನ್ನುಗಳಿಂದ : ಪ್ರಬಲ ಸಲ್ಫ್ಯೂರಿಕ್ ಆಮ್ಲದ ಸಂಪರ್ಕದಲ್ಲಿ ಹೈಡ್ರೊಕಾರ್ಬನ್ ಪರ್ಯಾಪ್ತಗೊಂಡು ಅದರ ಹೈಡ್ರೊಜನ್ ಸಲ್ಫೇಟ್ ಆಗುವುದು. ಅನಂತರ ಅದನ್ನು ಜಲವಿಶ್ಲೇಷಣೆಗೆ ಗುರಿಪಡಿಸಿದರೆ ಸಂಬಂಧಪಟ್ಟ ಆಲ್ಕೊಹಾಲ್ ಉಂಟಾಗುವುದು. ಇಥಲೀನ್ ಈಥೈಲ್ ಆಲ್ಕೊಹಾಲ್À 3. ಆಲ್ಡಿಹೈಡುಗಳ, ಕೀಟೋನುಗಳ ಮತ್ತು ಎಸ್ಟರುಗಳ ಅಪಕರ್ಷಣದಿಂದ : ಇದಕ್ಕಾಗಿ ಹಲವಾರು ಅಪಕರ್ಷಣಕಾರಿಗಳು ಬಳಕೆಯಲ್ಲಿವೆ. ನವಜಾತ ಹೈಡ್ರೊಜನ್ ನೀಡುವ ಸೂಕ್ತ ಆಮ್ಲ (ಲೋಹದ ಜೋಡಿಯನ್ನು ಉಪಯೋಗಿಸುವುದು ಸರ್ವಸಾಮಾನ್ಯ), ಅವುಗಳ ಪೈಕಿ ಸತು ಮತ್ತು ಸಲ್ಫ್ಯೂರಿಕ್ ಆಮ್ಲ, ಸತು ಅಥವಾ ಕಬ್ಬಿಣ ಮತ್ತು ಅಸಿಟಿಕ್ ಆಮ್ಲ, ತವರ ಮತ್ತು ಹೈಡ್ರೊಕ್ಲೋರಿಕ್ ಆಮ್ಲ, ಸೋಡಿಯಂ ಅಮಾಲ್ಗಂ ಮತ್ತು ಸಲ್ಫ್ಯೂರಿಕ್ ಆಮ್ಲ, ಸೋಡಿಯಂ ಮತ್ತು ಈಥೈಲ್ ಆಲ್ಕೊಹಾಲ್ ಮುಖ್ಯವಾದುವು. ಇವುಗಳಲ್ಲದೆ ಈಚೆಗೆ ಸೋಡಿಯಂ ಹೈಡ್ರೈಡ್, ಅಲ್ಯೂಮಿನಿಯಂ ಐಸೊಪ್ರೊಪಾಕ್ಸೈಡ್, ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್ ವೇಗವರ್ಧಕದ ಸಂಪರ್ಕದಲ್ಲಿ ಹೈಡ್ರೊಜನ್ ಇತ್ಯಾದಿಗಳನ್ನು ಉಪಯೋಗಿಸುತ್ತಾರೆ.
 3. ಆಲ್ಡಿಹೈಡ್ ಪ್ರೈಮರಿ ಆಲ್ಕೊಹಾಲ್, ಕೀಟೋನ್ ಸೆಕೆಂಡರಿ ಆಲ್ಕೊಹಾಲ್ ಎರಡು ಆಲ್ಕೊಹಾಲ್‍ಗಳ ಮಿಶ್ರಣ ಅಥವಾ ಕ್ರೋಟೈಲ್ ಆಲ್ಕೊಹಾಲ್ ಕ್ರೋಟನಾಲ್ಡಿಹೈಡ್
 4. ಅಪರ್ಯಾಪ್ತ ಆಲ್ಕೊಹಾಲ್‍ಗಳನ್ನು ತಯಾರಿಸಲು ಈ ವಿಧಾನ ಬಲು ಅನುಕೂಲ. ಅಸಿಟೋನ್ ಓi ಐಸೊಪ್ರೊಪೈಲ್ ಆಲ್ಕೊಹಾಲ್ ಎಸ್ಟರುಗಳಿಂದ 6 ಅಥವಾ ಹೆಚ್ಚು ಕಾರ್ಬನ್ ಪರಮಾಣುಗಳಿರುವ ಆಲ್ಕೊಹಾಲ್‍ಗಳನ್ನು ತಯಾರಿಸಲು ಈ ವಿಧಾನ ಸಹಕಾರಿ. 2000 ಸೆ0. ಗ್ರೇ, ಉಷ್ಣತೆ 150-200 ವಾಯುಭಾರ ಒತ್ತಡ ಮತ್ತು ತಾಮ್ರದ ಕ್ರೋಮೈಟ್ (ಅuಅಡಿ2ಔ4) ವೇಗವರ್ಧಕ ಇಷ್ಟಿದ್ದರೆ ಎಸ್ಟರು ಹೈಡ್ರೊಜನ್ನನ್ನು ಹೀರಿಕೊಂಡು ಆಲ್ಕೊಹಾಲನ್ನು ಕೊಡುವುದು, ಸಮಸಂಖ್ಯೆ ಕಾರ್ಬನ್‍ಪರಮಾಣುಗಳಿರುವ ಸರಳ ರೇಖಾವಿನ್ಯಾಸದ ಪ್ರೈಮರಿ ಆಲ್ಕೊಹಾಲ್‍ಗಳನ್ನು ಉನ್ನತ ಫ್ಯಾಟಿ ಆಮ್ಲಗಳ ಅಪಕರ್ಷಣದಿಂದ ಪಡೆಯಬಹುದು. ನಾರ್ಮಲ್ ಲಾರಿಕ್ ಆಮ್ಲ 200ಲಿ ಸೆಂ.ಗ್ರೇ. 200 ವಾಯುಭಾರಮಾನ ನಾರ್ಮಲ್ ಲಾರೈಲ್ ಆಲ್ಕೊಹಾಲ್
 5. ಆಲ್ಡಿಹೈಡುಗಳು, ಕೀಟೋನುಗಳು ಮತ್ತು ಎಸ್ಟರುಗಳೊಡನೆ ಗ್ರಿನ್‍ಯಾರ್ಡ್ ಪರಿವರ್ತಕದ ಕ್ರಿಯೆಯಿಂದ ಪ್ರೈಮರಿ, ಸೆಕೆಂಡರಿ ಮತ್ತು ಟರ್ಷಿಯರಿ ಆಲ್ಕೊಹಾಲ್‍ಗಳನ್ನು ಹೀಗೆ ತಯಾರಿಸಬಹುದು.
 6. ಆಮ್ಲಗಳ ಅಪಕರ್ಷಣದಿಂದ ಅ)ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡು ಆಮ್ಲವನ್ನು ನೇರವಾಗಿ ಆಲ್ಕೊಹಾಲಿಗೆ ಪರಿವರ್ತಿಸಬಲ್ಲುದು. ಆ) ಆಮ್ಲವನ್ನು ಅದರ ಕ್ಲೋರೈಡ್ ಅಥವಾ ಅನ್‍ಹೈಡ್ರೈಡಿಗೆ ಪರಿವರ್ತಿಸಿ ಅನಂತರ ವೇಗವರ್ಧಕದ ಸಂಪರ್ಕದಲ್ಲಿ ಅಪಕರ್ಷಿಸುವುದು.
 7. ಎಸ್ಟರುಗಳ ಜಲವಿಶ್ಲೇಷಣೆಯಿಂದ ಎಸ್ಟರುಗಳನ್ನು ಆಮ್ಲ ಅಥವಾ ಕ್ಷಾರಗಳೊಡನೆ ಕುದಿಸಿದರೆ ಆಯಾ ಆಲ್ಕೊಹಾಲ್ ಬರುವುದು. ಪ್ರಕೃತಿದತ್ತ ಎಸ್ಟರುಗಳಾದ ಮೇಣ ಇತ್ಯಾದಿಗಳಿಂದ ಆಲ್ಕೊಹಾಲನ್ನು ತಯಾರಿಸಲು ಈ ಕ್ರಮವನ್ನು ಅನುಸರಿಸಬಹುದು.

ಮಿರಿಸಿಲ್ ಪಾಮಿಟೇಟ್ ಪಾಮಿಟಿಕ್ ಆಮ್ಲ ಮಿರಿಸಿಲ್ ಆಲ್ಕೋಹಾಲ್ (ಜೇನುಮೇಣ) ಫರ್ಮೆಂಟೇಷನ್ ವಿಧಾನ[ಬದಲಾಯಿಸಿ]

ಸರಳ ಆಲ್ಕೊಹಾಲ್‍ಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸುವುದು ಹೀಗೆಯೇ. ಇದರ ಬಗ್ಗೆ ವಿವರಗಳನ್ನು ಮುಂದೆ ಪ್ರಸ್ತಾಪಿಸಲಾಗಿದೆ. ಸಾಮಾನ್ಯ ಗುಣಗಳು : ಆಲ್ಕೊಹಾಲ್‍ಗಳು ನಿರ್ವರ್ಣವಾದ ತಟಸ್ಥ ವಸ್ತುಗಳು. ಅಣುತೂಕ ಕಡಿಮೆಯಿರುವ ಆಲ್ಕೊಹಾಲ್‍ಗಳು ದ್ರವಗಳು. ಅಣುತೂಕ ಹೆಚ್ಚಿದಂತೆ ಎಣ್ಣೆಯಂತೆ ಮಂದವಾಗುವುವು. 12 ಅಥವಾ ಹೆಚ್ಚು ಕಾರ್ಬನ್ ಪರಮಾಣುಗಳಿರುವ ಆಲ್ಕೊಹಾಲ್‍ಗಳು ಮೇಣದಂತಿರುವ ಘನಗಳು. 5 ಕಾರ್ಬನ್ ಪರಮಾಣುಗಳವರೆಗೆ ಹೊಂದಿರುವ ಆಲ್ಕೊಹಾಲ್‍ಗಳು ನೀರಿನಲ್ಲಿ ದ್ರಾವ್ಯ. ಅಣುತೂಕ ಹೆಚ್ಚಿದಂತೆ ದ್ರಾವಣತೆಯೂ ಕಡಿಮೆಯಾಗುವುದು. 16ಕ್ಕೂ ಮೀರಿ ಕಾರ್ಬನ್ ಪರಮಾಣುಗಳಿರುವ ಆಲ್ಕೊಹಾಲ್‍ಗಳು ಅದ್ರಾವ್ಯ ವಸ್ತುಗಳು. ಒಂದೇ ವರ್ಗದ ಆಲ್ಕೊಹಾಲ್‍ಗಳ ಕುದಿಯುವ ಬಿಂದು ಕ್ರಮವಾಗಿ ಅಂದರೆ ಪ್ರತಿಯೊಂದು - ಅಊ2 ಗ್ರೂಪ್ ಸೇರ್ಪಡೆಗೆ ಸುಮಾರು 200 ಸೆ0. ಗ್ರೇಡಿನಷ್ಟು ಹೆಚ್ಚುತ್ತ ಹೋಗುವುದು, ಸಮಾನ ಅಣುತೂಕಗಳುಳ್ಳ ಆಲ್ಕೈಲ್ ಹ್ಯಾಲೈಡುಗಳು ಅಥವಾ ಈಥರ್‍ಗಳಿಗಿಂತ ಆಲ್ಕೊಹಾಲ್‍ಗಳ ಕುದಿಯುವ ಬಿಂದು ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣವಿದೆ. ನೀರಿನ ಅಣುಗಳು ಹೈಡ್ರೊಜನ್ ಬಂಧದ ಮೂಲಕ ಸಂಘಟಿಸುವಂತೆ ಆಲ್ಕೊಹಾಲಿನ ಅಣುಗಳೂ ಒಟ್ಟುಗೂಡಿ ದೊಡ್ಡ ಅಣುಗಳು ಜನಿಸುತ್ತವೆ. ಇಂಥ ದೊಡ್ಡ ಅಣುಗಳಿಗೆ ಅವ್ಯಾಸಕ್ತಿ ಕಡಿಮೆಯಾಗಿರುವುದು ಸಹಜ. ಅಣುತೂಕ ಹೋಲಿಕೆಯುಳ್ಳ ಮೀಥೇನ್ (16) ಮತ್ತು ಅಮೊನಿಯಾ (17) ಗಳಿಗಿಂತ, ನೀರಿನ (18) ಕುದಿಯುವ ಬಿಂದು ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ಹೈಡ್ರೊಜನ್ನಿನ ಬಂಧದ ಮೂಲಕ ದೊಡ್ಡ ಅಣುಗಳ ಜನನವನ್ನು ಕೆಳಗೆ ಚಿತ್ರಿಸಲಾಗಿದೆ.

ಆಲ್ಕೊಹಾಲ್‍ಗಳಿಗೆ ವಿಶಿಷ್ಟ ರುಚಿ ವಾಸನೆಗಳುಂಟು. ಅ4-ಅ7 ಆಲ್ಕೊಹಾಲ್‍ಗಳ ವಾಸನೆ ಹಿತಕರವಲ್ಲ. ಅ8-ಅ12 ಆಲ್ಕೊಹಾಲ್‍ಗಳು ಮಧುರವಾಸನೆಯುಳ್ಳವು. ಈ ಮಿತಿ ಮೀರಿದರೆ ವಾಸನೆ ಮತ್ತು ರುಚಿರಹಿತವಾಗುವುವು.. ಆಲ್ಕೊಹಾಲ್‍ಗಳು ಪೋಲಾರ್ ವಸ್ತುಗಳಂತೆ ವರ್ತಿಸುತ್ತವೆ. ಕೆಲವು ಪರಿವರ್ತಕಗಳೊಡನೆ ಅವು ನೀರಿನಂತೆ ನಡೆದುಕೊಳ್ಳುತ್ತವೆ. ನೀರಿನಲ್ಲಿ ಲೀನವಾಗುವ ಅನೇಕ ನಿರವಯವ ವಸ್ತುಗಳು ಆಲ್ಕೊಹಾಲಿನಲ್ಲಿಯೂ ಲೀನವಾಗುವುವು. ಕೆಲವು ಕ್ರಿಯೆಗಳಲ್ಲಿ ಆಮ್ಲೀಯ ಸ್ವಭಾವವನ್ನೂ ಇತರ ಸಂದರ್ಭಗಳಲ್ಲಿ ಪ್ರತ್ಯಾಮ್ಲೀಯ ಗುಣವನ್ನೂ ಪ್ರದರ್ಶಿಸುವುದು ಇವುಗಳ ವೈಶಿಷ್ಟ್ಯ.. ಕಾರ್ಬಿನಾಲ್ ಗುಂಪು ರೀತಿ ವಿಭಜಿಸಿದರೆ ಆಮ್ಲದಂತೆಯೂ ರೀತಿ ವಿಭಾಗವಾದರೆ ಪ್ರತ್ಯಾಮ್ಲದಂತೆಯೂ ವರ್ತಿಸುತ್ತದೆ. ಹೀಗಾಗಲು ಆಲ್ಕೈಲ್ ಗ್ರೂಪುಗಳಿಗೆ ಎಲೆಕ್ಟ್ರಾನುಗಳನ್ನು ವಿಸರ್ಜಿಸುವ ಪ್ರವೃತ್ತಿ ಹೆಚ್ಚಾಗಿರುವುದು ಕಾರಣ. ಕಾರ್ಬಿನಾಲ್ ಕಾರ್ಬನ್ನಿನ ಸುತ್ತ ಅವುಗಳ ಸಂಖ್ಯೆ ಹೆಚ್ಚಿದಂತೆಲ್ಲ ಅದರ ಎಲೆಕ್ಟ್ರಾನ್ ಸಾಂದ್ರತೆ ವೃದ್ಧಿಯಾಗುವುದು. ಪರಿಣಾಮವಾಗಿ ಅದರ ಒಂದಂಶ ಆಕ್ಸಿಜನ್ ಪರಮಾಣುವಿಗೆ ವರ್ಗಾವಣೆಯಾಗುವುದು. ಇದರಿಂದ ಆಕ್ಸಿಜನ್ ಹೈಡ್ರೊಜನ್ನಿನ ಪರಮಾಣುವಿಗೆ ಬಲವಾಗಿ ಅಂಟಿಕೊಳ್ಳುವುದು. ಆದ್ದರಿಂದಲೇ ಪ್ರೈಮರಿ ಆಲ್ಕೊಹಾಲ್‍ಗಳಿಗಿಂತ ಟರ್ಷಿಯರಿ ಅಲ್ಕೊಹಾಲ್‍ಗಳಿಗೆ ಪ್ರತ್ಯಾಮ್ಲೀಯ ಸ್ವಭಾವ ಹೆಚ್ಚು ಮತ್ತು ಅವುಗಳಲ್ಲಿರುವ ಹೈಡ್ರಾಕ್ಸಿಲ್ ಗುಂಪುಗಳನ್ನು ಹ್ಯಾಲೋಜನ್ ಪರಮಾಣುಗಳಿಂದ ಪಲ್ಲಟಿಸಬಹುದು. ಪ್ರೈಮರಿ ಆಲ್ಕೊಹಾಲ್‍ಗಳಲ್ಲಿ ಕಾರ್ಬಿನಾಲ್ ಕಾರ್ಬನ್ ಮೇಲೆ ಮೀಥೈಲ್ ಗುಂಪಿನ ಪ್ರೇರಕ ಪ್ರಭಾವ (ಇಂಡಕ್ಟಿವ್ ಇಫೆಕ್ಟ್ ) ಕಡಿಮೆ. ಆದ್ದರಿಂದ ಹೈಡ್ರಾಕ್ಸಿಲ್ ಗುಂಪಿನ ಆಕ್ಸಿಜನ್ ಪರಮಾಣು ಹೈಡ್ರೊಜನ್ ಮತ್ತು ಮೀಥೈಲ್ ಗುಂಪಿನಿಂದ ಎಲೆಕ್ಟ್ರಾನ್ ಜೋಡಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಹವಣಿಸುತ್ತದೆ. ತತ್ಫಲವಾಗಿ ಹೈಡ್ರೊಜನ್ ಪರಮಾಣು ಆಯಾನ್ ರೂಪದಲ್ಲಿ ಬಿಡುಗಡೆಯಾಗುತ್ತದೆ. ಅಂದರೆ ಆಮ್ಲದಂತೆ ವರ್ತಿಸುತ್ತದೆ. ಆಲ್ಕೊಹಾಲ್‍ಗಳ ಆಮ್ಲೀಯ ಗುಣ : ಕೆಳಕಂಡ ರಾಸಾಯನಿಕ ಕ್ರಿಯೆಗಳು ಇದನ್ನು ಸಮರ್ಥಿಸುತ್ತದೆ. ಕ್ರಿಯಾಶಾಲಿ ಲೋಹಗಳೊಡನೆ ವರ್ತನೆ : ಸೋಡಿಯಂ ಲೋಹದೊಡನೆ ವರ್ತಿಸಿದಾಗ ಹೈಡ್ರೊಜನ್ ಬಿಡುಗಡೆಯಾಗುವುದು.

ಉಲ್ಲೇಖ[ಬದಲಾಯಿಸಿ]