ವಿಷಯಕ್ಕೆ ಹೋಗು

ಕೊಬ್ಬಿನ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊರುಹರವುಗಳ ಕೆಲವು ಕೊಬ್ಬುಆಮ್ಲಗಳು

'ಕೊಬ್ಬಿನ ಆಮ್ಲ ಅಥವಾ ಫ್ಯಾಟಿ ಆಸಿಡ್, ಅಥವಾ ಫ್ಯಾಟಿಆಮ್ಲಎನ್ನುವುದು ಸಸ್ಯಬೀಜದ ಎಣ್ಣೆಗಳಲ್ಲಿ ಮತ್ತು ಜಂತುಗಳ ಎಣ್ಣೆ/ಕೊಬ್ಬುಗಳಲ್ಲಿ ಇರುವ ಮೋನೋಕಾರ್ಬೊ‍ಲಿಕ್ ಅಮ್ಲ[]. ಗ್ಲಿಸೆರೋಲ್ / ಗ್ಲಿಜರಿನ್(glycerol/glycerin) ಮತ್ತು ಕೊಬ್ಬಿನ ಆಮ್ಲಗಳ ಸಂಯೋಗದಿಂದ ಎಣ್ಣೆಗಳು(oils) ಮತ್ತು ಕೊಬ್ಬುಗಳು(fat) ಉತ್ಪನ್ನವಾಗುತ್ತವೆ.ಕೊಬ್ಬಿನ ಆಮ್ಲವು, ಕಾರ್ಬೊನ್(ಇಂಗಾಲ), ಹೈಡ್ರೊಜನ್, ಆಕ್ಸಿಜನ್ ಜೋಡಣೆ ಇರುವ, ಕೊಂಬೆ(branch)ಗಳಿಲ್ಲದ ಒಂದು ಸರಪಳಿ ತರಹ ಇರುವ ಕಾರ್ಬೋಲಿಕ್ ಆಮ್ಲ.

ಇತಿವೃತ್ತ

[ಬದಲಾಯಿಸಿ]

ಕೊಬ್ಬಿನ ಆಮ್ಲದ ಸರಪಳಿ ಕಡೆಭಾಗದಲ್ಲಿ ಒಂದೇ ಕಾರ್ಬೋಕ್ಷಿಲ್(COOH)ಸಮೂಹ(Group)ಇದ್ದಕಾರಣ ಇದನ್ನು ಮೊನೋಕಾರ್ಬೋಲಿಕ್ ಆಮ್ಲ ಎಂದು ಕರೆಯಲಾಗುತ್ತದೆ. ಇನ್ನು ಇದು ಕರ್ಬನಶಾಸ್ತ್ರದಲ್ಲಿ ಅಲ್ಫಾಟಿಕ್ (Aliphatic)ವರ್ಗಕ್ಕೆಸೇರಿದ್ದು. ಇದನ್ನು ಅಲ್ಪಾಟಿಕ್ ಸರಪಣಿ (chain) ಎನ್ನುತ್ತಾರೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿದ್ದ ಕಾರ್ಬನುಗಳಲ್ಲಿ, ಸರಪಳಿಯ ಮೊದಲಿನ ಮತ್ತು ಕಡೆ ಕಾರ್ಬನುಗಳನ್ನು ಬಿಟ್ಟರೆ, ಉಳಿದ ಕಾರ್ಬನುಗಳು ಎರಡು ಹೈಡ್ರೋಜನ್ ಗಳ ಜೊತೆ ಬಂಧವನ್ನು ಹೊಂದಿರುತ್ತವೆ. ಕಾರ್ಬನು ಬಂಧದ ವೆಲನ್ಸಿ ೪. ಅದರಿಂದ ಕಾರ್ಬನು ಏಕಸಮಯದಲ್ಲಿ ನಾಲ್ಕು (೪) ಅಣುಗಳಿಂದ ಬಂಧವನ್ನು ಏರ್ಪಡಿಸುತ್ತದೆ. ಅದರಿಂದ ಕೊಬ್ಬಿನ ಆಮ್ಲದ ಸರಪಳಿಯಲ್ಲಿದ್ದ ಒಂದು ಕಾರ್ಬನು ಮತ್ತೊಂದು ಎರಡು ಕಾರ್ಬನುಗಳ ಜೊತೆ, ಎರಡು ಹೈಡ್ರೊಜನು ಅಣುಗಳ ಜೊತೆ ಏಕಕಾಲದಲ್ಲಿ ಬಂಧವನ್ನು ಹೊಂದಿರುತ್ತದೆ.

ಕೊಬ್ಬಿನ ಆಮ್ಲ ನಿರ್ಮಾಣ

[ಬದಲಾಯಿಸಿ]
  • ಈ ಹೈಡ್ರೊಕಾರ್ಬನು ಸರಪಳಿಯಲ್ಲಿ ಮುಂದು / ಒಂದುಕಡೆ ಇದ್ದ ಕಾರ್ಬನ್(ಇಂಗಾಲ) ಮೂರು ಹೈಡ್ರೋಜನು(ಜಲಜನಕ)ಗಳನ್ನು ಹೊಂದಿರುತ್ತದೆ. ಅದನ್ನು ಮಿಥೈಲ್(CH3)ಗ್ರೋಪೆ ಎನ್ನುತ್ತಾರೆ. ಎರಡನೆ ಕಡೆ ಇರುವ ಕಾರ್ಬನು ಒಂದು ಹೈಡ್ರೋಜನು, ಎರಡು ಆಕ್ಸಿಜನ್ನು(ಆಮ್ಲಜನಕ)ಅಣುಗಳ ಜೊತೆ ಬಂಧವನ್ನು ಹೊಂದಿರುತ್ತದೆ(COOH). ಈಸಮುದಾಯವನ್ನು ಕಾರ್ಬೋಕ್ಷಿಲ್(carboxyl) ಗ್ರೋಪ್ ಎಂದು ಕರೆಯುತ್ತಾರೆ.
  • ಒಂದು ಬಿಂದು ಅಥಾವಾ ಒಂದು ಅಣು(molecule)ಎಣ್ಣೆಯಲ್ಲಿ ಮೂರು ಕೊಬ್ಬಿನ ಆಮ್ಲಗಳು, ಒಂದು ಗ್ಲಿಸೆರಾಲ್ ಅಣು(molecule)ಇರುತ್ತವೆ. ಒಂದು ಅಣು ಎಣ್ಣೆ ನಿರ್ಮಾಣ ಆಗಬೇಕೆಂದರೆ ಮೂರು ಕೊಬ್ಬಿನ ಆಮ್ಲಗಳು, ಒಂದು ಗ್ಲಿಸರಾಲ್ ಸಂಯೋಗ/ಸಂಯುಕ್ತ ಹೊಂದಿ, ರಸಾಯನಿಕ ಚರ್ಯಕಾರಣದಿಂದ ಒಂದು ಎಣ್ಣೆ ಅಣು, ಮೂರು ಅಣುಗಳ ನೀರು ಉತ್ಪನ್ನವಾಗುತ್ತವೆ. ಈ ಪ್ರಕ್ರಿಯೆಯನ್ನು ಆಂಗ್ಲದಲ್ಲಿ ಎಸ್ಟರಿಫಿಕೆಸನ್ (esterification)ಎನ್ನುತ್ತಾರೆ.
  • ಈ ರೀತಿಯಾಗಿ ಉತ್ಪನ್ನವಾದ ಎಣ್ಣೆಯನ್ನು ಟ್ರಿ ಗ್ಲೀಸೆರೈಡ್ ಎಂದು ಕರೆಯಲಾಗುತ್ತದೆ [].ಎಣ್ಣೆ ಅಥವಾ ಟ್ರಿಗ್ಲಿಸೆರೈಡುಗಳು(triglycerides) ಕೊಬ್ಬಿನ ಆಮ್ಲಗಳ ಗ್ಲಿಸರಾಲ್ ಎಸ್ಟರುಗಳು. ಗ್ಲಿಜರೊಲ್ ಒಂದು ಪಾಲಿ ಹೈಡ್ರಾಕ್ಸಿ ಆಲ್ಕಹಾಲ್.
  • ಪಾಲಿ ಹೈಡ್ರಾಕ್ಸಿ ಅಂದರೆ ಒಂದಕ್ಕಿಂತ ಹೆಚ್ಚಾಗಿ ಹೈಡ್ರಾಕ್ಸಿ(OH)ಸಮೂಹವನ್ನು ಹೊಂದಿರುವ ಆಲ್ಕಹಾಲ್(alcohol-ಹೆಂಡ). ಗ್ಲಿಸೆರೊಲ್ ನಲ್ಲಿ ಮೂರು ಕಾರ್ಬನ್, ಐದು ಹೈಡ್ರೊಜನ್ ಮತ್ತು ಮೊರು ಹೈಡ್ರಾಕ್ಸಿ(OH)ಗ್ರೋಪ್ ಗಳಿರುತ್ತವೆ.[] .
  • ಈ ಮೂರು ಹೈಡ್ರಾಕ್ಸಿ ಗ್ರೂಪ್ ಗಳು(OH) ಮೂರು ಕೊಬ್ಬಿನ ಆಮ್ಲಗಳ ಕಾರ್ಬೋಕ್ಷಿಲ್(COOH) (ಸಮೂಹದಲ್ಲಿರುವ ಒಂದು ಹಡ್ರೊಜನ್ ಜೊತೆ) ಸಂಯೋಗ ಹೊಂದಿ ಮೂರು ಅಣುಗಳ ನೀರು ಮತ್ತು ಒಂದು ಅಣು ಟ್ರೈಗ್ಲೆಸೆರೈಡ್(triglyceride)/ಎಣ್ಣೆ ಉತ್ಪನ್ನವಾಗುತ್ತದೆ. ಅಂದರೆ ಎಣ್ಣೆ ಉತ್ಪಾದನೆ ಆಗ ಬೇಕೆಂದರೆ ಕೊಬ್ಬಿನ ಆಮ್ಲಗಳು ಮತ್ತು ಗ್ಲಿಸೆರೊಲ್/ಗ್ಲೆಸೆರಿನ್ ಬೇಕು. ಕೊಬ್ಬಿನ ಆಮ್ಲದಲ್ಲಿ ಕಾರ್ಬನುಗಳ ಸಂಖ್ಯೆ ೪ ನಿಂದ ಶುರುವಾಗಿ ೨೮ ವರಗಿರುತ್ತವೆ.ಆದರೆ ಸಸ್ಯಗಳ ಬೀಜದ ಎಣ್ಣೆಗಳ ಲ್ಲಿ ೧೪ನಿಂದ ೧೮ ಕಾರ್ಬನುಗಳಿರುವ ಕೊಬ್ಬು ಆಮ್ಲಗಳು ಹೆಚ್ಚಾಗಿರುತ್ತವೆ.

4 ಕಾರ್ಬನುಗಳಿದ್ದ ಬ್ಯುಟಿರಿಕ್ ಆಮ್ಲ (Butyricacid)

ಬ್ಯುಟಿರಿಕ್ ಆಮ್ಲ
CH3-(CH2)2-COOH.ಇದರ ಹೆಸರು ಬ್ಯುಟರಿಕ್ ಆಮ್ಲ

ಹದಿನಾರು ಕಾರ್ಬನುಗಳಿದ್ದ ಪಾಮಿಟಿಕ್ ಆಮ್ಲ

ಪಾಮಿಟಿಕ್ ಆಮ್ಲ
CH3-(CH2)14-COOH

ಕೊಬ್ಬಿನ ಆಮ್ಲ ತರಹಗಳು

[ಬದಲಾಯಿಸಿ]

ಕೊಬ್ಬಿನ ಆಮ್ಲಗಳನ್ನು ಮೂರು ವಿಧಾನವಾಗಿ ವಿಂಗಡಿಸಲಾಗಿದೆ.

  1. ಪರ್ಯಾಪ್ತ ಕೊಬ್ಬಿನ ಆಮ್ಲಗಳು
  2. ಅಪರ್ಯಾಪ್ತ ಕೊಬ್ಬಿನ ಆಮ್ಲಗಳು
  3. ಅಸೌಷ್ಟವ ನಿರ್ಮಾಣ/ವಿನ್ಯಾಸ ವುಳ್ಳ ಕೊಬ್ಬಿನ ಆಮ್ಲಗಳು

ಪರ್ಯಾಪ್ತ ಕೊಬ್ಬಿನ ಆಮ್ಲ

[ಬದಲಾಯಿಸಿ]
  • ಕೊಬ್ಬಿನ ಅಮ್ಲವೆಂದರೆ, ಇಥೈಲಿನ್(CH2))ಸಮೂಹವನ್ನು ಹೈಡ್ರೋಕಾರ್ಬನು ಸರಪಳಿ(hydrocarbon chain)ಒಳಗೆ ಹೊಂದಿರುವ ಮೊನೋಕಾರ್ಬಲಿಕ್ ಆಮ್ಲ. ಸರಪಳಿಯಲ್ಲಿರುವ ಎಲ್ಲಾ ಕಾರ್ಬನುಗಳು(ಮೊದಲಿನ, ಕಡೆ ಕಾರ್ಬನುಗಳನ್ನು ಬಿಟ್ಟು)ಎರಡು ಕಾರ್ಬನು ಮತ್ತು ಎರಡು ಹೈಡ್ರೋಜನ್ ಗಳಿಂದ ಬಂಧದ ಜೋಡಿ ಹೊಂದಿದ್ದರೆ, ಅದು ಪರ್ಯಾಪ್ತ ಕೊಬ್ಬಿನ ಆಮ್ಲ. ಅಂದರೆ ಕಾರ್ಬನ್,ಕಾರ್ಬನ್ ಮಧ್ಯೆ ಏಕಬಂಧವಿರುತ್ತದೆ.
  • ಕೊಬ್ಬಿನ ಆಮ್ಲ ಸರಪಳಿಯಲ್ಲಿರುವ ಇಥೈಲಿನ್ ಸಮೂಹ ಕಾರ್ಬನು, ಕಾರ್ಬನುಗಳ ನಡುವೆ ದ್ವಿಬಂಧವಿಲ್ಲದಿರುವ ಆಮ್ಲ ಪರ್ಯಾಪ್ತ ಕೊಬ್ಬುಆಮ್ಲ[] . ಮೇಲೆ ತೋರಿಸಿದ್ದ ಬ್ಯುಟಿರಿಕ್ ಆಮ್ಲ,ಮತ್ತು ಪಾಮಿಟಿಕ್ ಆಮ್ಲಗಳು ಎರಡನ್ನು ಪರ್ಯಾಪ್ತ ಕೊಬ್ಬಿನ ಆಮ್ಲಗಳಿಗೆ ಉದಾಹರಣೆ.

೧೮ ಕಾರ್ಬನುಗಳಿದ್ದ ಪ್ರರ್ಯಾಪ್ತ ಕೊಬ್ಬಿನ ಆಮ್ಲ ವಾದ ಸ್ಟಿಯರಿಕ್ ಅಮ್ಲ ಸರಪಳಿ ವಿನ್ಯಾಸ

ಸರಪಳಿ ಯಲ್ಲಿ ದ್ವಿಬಂಧವು ಇಲ್ಲ
ಸರಪಳಿ ಯಲ್ಲಿ ದ್ವಿಬಂಧವು ಇಲ್ಲ
CH3-(CH2)16-COOH.(C18H36O2))

ಅಪರ್ಯಾಪ್ತ ಕೊಬ್ಬಿನ ಆಮ್ಲ

[ಬದಲಾಯಿಸಿ]
  • ಅಪರ್ಯಾಪ್ತ ಕೊಬ್ಬಿನ ಆಮ್ಲದಲ್ಲಿ ಹೈಡ್ರೋಕಾರ್ಬನು ಸರಪಳಿಯಲ್ಲಿದ್ದ ಕಾರ್ಬನು ಮತ್ತು ಕಾರ್ಬನು ನಡುವೆ ದ್ವಿಬಂಧವಿದ್ದರೆ, ಅದು ಅಪರ್ಯಾಪ್ತ ಕೊಬ್ಬಿನ ಆಮ್ಲ [] . ಕಾರ್ಬಬು-ಕಾರ್ಬನುಗಳ ನಡುವೆ ದ್ವಿಬಂಧ ಜೊಡಣೆ ಕಾರಣ, ಆಮ್ಲದ ಹೈಡ್ರೋಕಾರ್ಬನು ಸರಪಳಿಯಲ್ಲಿ ಎರಡು ಹೈಡ್ರೊಜನ್ ಅಣುಗಳು ಕಡಿಮೆಯಾಗುತ್ತವೆ.
  • ಆಮ್ಲದಲ್ಲಿ ಒಂದೇ ದ್ವಿ ಬಂಧವು ಇದ್ದರೆ,ಅದನ್ನು ಎಕದ್ವಿಬಂಧದ ಕೊಬ್ಬಿನ ಆಮ್ಲ(Monounsaturated fatty acid) ಎಂದು ಕರೆಯುತ್ತಾರೆ. ಆಮ್ಲದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ದ್ವಿಬಂಧಗಳಿದ್ದರೆ ಅದನ್ನು ಬಹುದ್ವಿಬಂಧದ ಅಪರ್ಯಾಪ್ತ ಕೊಬ್ಬಿನ ಆಮ್ಲ(poly unsaturated fatty acid)ಎಂದು ಕರೆಯಲಾಗುತ್ತದೆ. ಇದನ್ನು ಸಂಗ್ರಹವಾಗಿ ಫ್ಯೂಪಾ(PUFA:poly unsaturated fatty acid)ಎನ್ನುತಾರೆ. ಸಾಧಾರಣವಾಗಿ ೧೮ ಕಾರ್ಬನುಗಳು ಸರಪಳಿಯಲ್ಲಿದ್ದು,ಒಂದರಿಂದ ಮೊರು ದ್ವಿಂಬಂಧಗಳುವುಳ್ಳ ಕೊಬ್ಬಿನ ಆಮ್ಲಗಳು ಸಸ್ಯಬೀಜ ಎಣ್ಣೆಯಲ್ಲಿ ಕಾಣಿಸಲಾಗುತ್ತವೆ.

೧೬ ಕಾರ್ಬನುಗಳಿದ್ದ,ಏಕದ್ವಿಬಂಧವುಳ್ಳ ಅಪರ್ಯಾಪ್ತ ಕೊಬ್ಬಿನ ಆಮ್ಲ

CH3(CH2)5CH=CH(CH2)7COOH.ಪಾಮಿಟೋಲಿಕ್ ಆಮ್ಲ

೧೮ಕಾರ್ಬನ್ ಗಳಿದ್ದು ಎರಡು ದ್ವಿಬಂಧಗಳು ಇದ್ದ ಕೊಬ್ಬಿನ ಆಮ್ಲ

ಅಸೌಷ್ಟವ ವಿನ್ಯಾಸದ ಕೊಬ್ಬಿನ ಆಮ್ಲಗಳು

[ಬದಲಾಯಿಸಿ]

ಹೈಡ್ರೋಕಾರ್ಬನ್ ಸರಪಳಿ(ಇಂಗಾಲದ-ಜಲಜನಕಸರಪಳಿ)ಯಲ್ಲಿ ನಿರ್ಮಾಣವಾಗಿ, ಸೌಷ್ಟವ ವ್ಯತ್ಯಾಸವನ್ನು ಹೊಂದಿದ್ದ ಕೊಬ್ಬಿನಆಮ್ಲಗಳು. ಕೆಲವು ಕೊಂಬೆ(branches)ಗಳನ್ನು ಹೊಂದಿದ್ದರೆ, ಕೆಲವು ಚಕ್ರೀಯ ರೂಪವನ್ನು ಹೊಂದಿರುತ್ತವೆ. ಕೆಲವು ಸರಪಳಿಯ ತುದಿಯಲ್ಲಿ ಅರೋಮಾಟಿಕ್ ರಿಂಗುಗಳನ್ನು ಹೊಂದಿರುತ್ತವೆ. ಆದರೆ ಈ ತರಹದ ಕೊಬ್ಬಿನ ಆಮ್ಲಗಳು, ಹೆಚ್ಚಾಗಿ ಸ್ವಲ್ಪ ಪ್ರಮಾಣದಲ್ಲಿ, ಜಲಚರ ಜೀವಿಗಳ ಕೊಬ್ಬುಗಳಲ್ಲಿ, ಬಾಕ್ಟಿರಿಯಾಗಳಲ್ಲಿ ಮತ್ತು ಅತ್ಯಂತ ಅಲ್ಪಪ್ರಮಾಣ ಜೀವಿದೇಹಗಳಲ್ಲಿ ಕಂಡು ಹಿಡಿಯಲಾಗಿದೆ .[].

ಸರಪಳಿಯಲ್ಲಿ ಕೊಂಬೆಗಳಿದ್ದ ಒಂದು ತರಹದ ಕೊಬ್ಬಿನ ಆಮ್ಲ

(7R,11R)-3,7,11,15-Tetramethylhexadecanoic acid. ಪೈಥಾನಿಕ್ ಆಮ್ಲ

ಕೊಬ್ಬಿನ ಆಮ್ಲ ಗಳಿಗೆ ಹೆಸರಿಡುವುದು/ಅಭಿಧಾನ

[ಬದಲಾಯಿಸಿ]

ಉಲ್ಲೇಖನಗಳು

[ಬದಲಾಯಿಸಿ]
  1. http://www.elmhurst .edu/~chm/ vchembook / 551fattyacids.html
  2. http://www.news-medical.net/health/Triglycerides-What-are-Triglycerides. aspx
  3. http://www.ebi Archived 2013-07-15 ವೇಬ್ಯಾಕ್ ಮೆಷಿನ್ ನಲ್ಲಿ.. ac.uk/ chebi/searchId.do?chebiId=CHEBI:17754
  4. http://www.fitday.com/fitness-articles/nutrition/fats/what-are-saturated-fatty-acids.html#b
  5. "ಆರ್ಕೈವ್ ನಕಲು". Archived from the original on 2015-04-03. Retrieved 2021-07-21.
  6. "ಆರ್ಕೈವ್ ನಕಲು". Archived from the original on 2010-01-12. Retrieved 2013-10-26.