ವಿಷಯಕ್ಕೆ ಹೋಗು

ಎಥಿಲೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಥಿಲೀನ್‍ನ ಚೆಂಡು ಮತ್ತು ಕಡ್ಡಿ ಮಾದರಿ
Orbital description of bonding between ethylene and a transition metal.

ಎಥಿಲೀನ್ ಆಲ್ಕೀನ್ ವರ್ಗಕ್ಕೆ ಸೇರಿದ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್. ಇದರ ರಾಸಾಯನಿಕಸೂತ್ರ C2H4. ಇದು ಅಪರ್ಯಾಪ್ತ ಸಂಯುಕ್ತವಾದ್ದರಿಂದ ಇದರಲ್ಲಿ ಎರಡು ಇಂಗಾಲಪರಮಾಣುಗಳು ಸಿಗ್ಮ (σ) ಮತ್ತು ಪೈ (π) ಬಂಧಗಳ ಮೂಲಕ ಸೇರಿಸಲ್ಪಟ್ಟಿವೆ (ದ್ವಿಬಂಧಗಳು-ಡಬಲ್ ಬಾಂಡ್ಸ್). ಎಥಿಲೀನ್ ರಚನೆಯನ್ನು ಮೂರು ಮಾದರಿಯಲ್ಲಿ ತೋರಿಸುವ ವಾಡಿಕೆಯಿದೆ. π ಬಂಧ σ ಬಂಧಕ್ಕಿಂತ ದುರ್ಬಲವಾಗಿರುವುದರಿಂದ ಸುಲಭವಾಗಿ ಭೇದಿಸಲ್ಪಡುತ್ತದೆ. ಈ ಗುಣದಿಂದ ಎಥಿಲೀನ್ ಅಣುವಿನ ದ್ವಿಬಂಧಕ್ಕೆ ಕ್ಲೋರಿನ್, ಬ್ರೋಮಿನ್, ಹೈಡ್ರೊಜನ್ ಕ್ಲೋರೈಡ್, ಆಕ್ಸಿಜನ್ನುಗಳನ್ನು ಸೇರಿಸಬಹುದು.

ಈ ಕ್ರಿಯೆಗಳಿಂದ ಎಥಿಲೀನ್ ಪರ್ಯಾಪ್ತ ಅಣುವಾಗಿ ಪರಿವರ್ತನೆಗೊಳ್ಳುತ್ತದೆ.[]ICSC 0475

ಮೂಲಗಳು

[ಬದಲಾಯಿಸಿ]

ಪೆಟ್ರೋಲಿಯಂ ಮತ್ತು ನಿಸರ್ಗ ಅನಿಲದಲ್ಲಿ (ನ್ಯಾಚುರಲ್ ಗ್ಯಾಸ್) ಹಾಗೂ ನ್ಯಾಫ್ಥಾದಲ್ಲಿ ಎಥಿಲೀನ್ ದೊರೆಯುತ್ತದೆ. ಮೋಟಾರ್ ವಾಹನಗಳು ಉಗುಳುವ ಹೊಗೆಯಲ್ಲಿಯೂ ಅಲ್ಪ ಪ್ರಮಾಣದಲ್ಲಿ ಇದೆಯೆಂದು ಪತ್ತೆಮಾಡಲಾಗಿದೆ.

ತಯಾರಿಕೆ

[ಬದಲಾಯಿಸಿ]

ಪೆಟ್ರೋಲಿಯಂ ಮತ್ತು ನಿಸರ್ಗಾನಿಲಗಳನ್ನು ಅಧಿಕ ಉಷ್ಣತೆಯಲ್ಲಿ ಕಾಯಿಸಿದಾಗ (ಉತ್ತಾಪ ವಿಚ್ಛೇದನೆ-ಪೈರೋಲಿಸಿಸ್ ಕ್ರ್ಯಾಕಿಂಗ್) ಎಥಿಲೀನ್ ಉತ್ಪತ್ತಿಯಾಗುತ್ತದೆ. ಕಚ್ಚಾ ಪೆಟ್ರೋಲಿಯಂ ಎಣ್ಣೆಯ ಶುದ್ಧೀಕರಣದಲ್ಲಿ ಹೊರಬರುವ ಅನಿಲಗಳಲ್ಲಿ ಎಥಿಲೀನ್ ಹೆಚ್ಚಿನ ಪ್ರಮಾಣದಲ್ಲಿರುವುದು. ಔದ್ಯೋಗಿಕವಾಗಿ ಎಥಿಲೀನನ್ನು ಮೇಲೆ ಹೇಳಿದ ಅನಿಲಗಳಿಂದ ಆಸವನ (ಡಿಸ್ಟಿಲ್ಲೇಷನ್) ಮತ್ತು ಅಧಿಶೋಷಣ (ಅಡ್‍ಸಾರ್ಪ್ಷನ್) ವಿಧಾನಗಳಿಂದ ಪಡೆಯುತ್ತಾರೆ. ಪ್ರೋಪೈಲಿನ್ ಮತ್ತು ಬ್ಯೂಟಾಡಯೀನ್ ಅನಿಲಗಳನ್ನೊಳಗೊಂಡು ಅಶುದ್ಧವಾಗಿದ್ದರೂ ಈ ವಿಧಾನಗಳಿಂದ ಬರುವ ಎಥಿಲೀನನ್ನು ನೇರವಾಗಿ ಅನೇಕ ರಾಸಾಯನಿಕ ಕ್ರಿಯೆಗಳಿಗೆ ಉಪಯೋಗಿಸುತ್ತಾರೆ. ಶುದ್ಧವಾದ ಎಥಿಲೀನನ್ನು ಅಲ್ಪಪ್ರಮಾಣದಲ್ಲಿ ಮದ್ಯಸಾರದ ಆವಿಯನ್ನು ಪಟುಗೊಳಿಸಿದ (ಆಕ್ಟಿವೇಟೆಡ್) ಅಲ್ಯುಮಿನ (ಅಲ್ಯೂಮಿನಿಯಂ ಆಕ್ಸೈಡ್) ಮೇಲೆ ಹಾಯಿಸಿ ಪಡೆಯಬಹುದು.[][][]

ಭೌತಗುಣಗಳು

[ಬದಲಾಯಿಸಿ]

ಬಣ್ಣವಿಲ್ಲದ ಅನಿಲ. ವಿಶಿಷ್ಟವಾದ ಸುವಾಸನೆ ಮತ್ತು ರುಚಿಯುಳ್ಳದ್ದು.[] 3% ಪ್ರಮಾಣದ ಗಾಳಿಯೊಂದಿಗೆ ಸೇರಿದರೆ ಸ್ಫೋಟಕ ಮಿಶ್ರಣವುಂಟಾಗುತ್ತದೆ. ಕರಗುವ ಉಷ್ಣತೆ -169 ಸೆಂ.ಗ್ರೇ. ಆವಿಯಾಗುವ ಉಷ್ಣತೆ- 1025 ಸೆಂ.ಗ್ರೇ. ಸಾಪೇಕ್ಷ ಸಾಂದ್ರತೆ 00 ಸೆಂಟಿಗ್ರೇಡಿನಲ್ಲಿ 0.೬೧೦. ಆವಿಯ ಸಾಂದ್ರತೆ (0 ಸೆಂ. ಗ್ರೇ. ಮತ್ತು 760 ಮಿ.ಮಿ. ಒತ್ತಡದಲ್ಲಿ ಗಾಳಿ=1) 0. 975. ದ್ರವಿಸುವ ಅವಧಿಕ ಉಷ್ಣತೆ (ಕ್ರಿಟಿಕಲ್ ಟೆಂಪರೇಚರ್) 9.5. ಸೆಂಗ್ರೇ.

ರಾಸಾಯನಿಕ ಗುಣಗಳು

[ಬದಲಾಯಿಸಿ]
  • ಎಥಿಲೀನ್ ಅಪರ್ಯಾಪ್ತ ಸಂಯುಕ್ತವಾದದ್ದರಿಂದ ಕೂಡಿಕೆ ಕ್ರಿಯೆಗಳನ್ನು ಹೊಂದುತ್ತದೆ. ಇದು ಅಪಕರ್ಷಕಾರಿಯಂತೆಯೂ ವರ್ತಿಸುತ್ತದೆ.

C2H4 + Cl2 → C2H4Cl2

C2H4 + HBr → C2H5Br

     ಪ್ಲಾಟಿನಂ

C2H4 + H2 → C2H6

    ವೇಗವರ್ಧಕ
  • ಎರಡು ಹೈಡ್ರಾಕ್ಸಿಲ್ ಗುಂಪುಗಳನ್ನು ಸೇರಿಸಿ ಗ್ಲೈಕಾಲನ್ನು ರಚನೆ ಮಾಡಬಹುದು.
  • ಎಥಿಲೀನನ್ನು ಒತ್ತಡದಲ್ಲಿ ಆಕ್ಸಿಜನ್ನನೊಂದಿಗೆ ಕಾಯಿಸಿದಾಗ ಪಾಲಿ ಎಥಿಲೀನ್ ದೊರಕುತ್ತದೆ. ಇದರ ಅಣುತೂಕ ಸುಮಾರು 20,000. ಈ ಸಂಯುಕ್ತದಲ್ಲಿ ಅನೇಕ ಎಥಿಲೀನ್ ಅಣುಗಳು ಒಂದಕ್ಕೊಂದು ಸೇರಿ ಉದ್ದವಾದ ಸರಪಳಿಯನ್ನು ರಚಿಸುತ್ತವೆ.
      ಆಕ್ಸಿಜನ್ ಒತ್ತಡ
nCH2=CH2           ~CH2-(CH2-CH2-CH2)n-CH2
          ಉಷ್ಣ

ಉಪಯೋಗಗಳು

[ಬದಲಾಯಿಸಿ]
Main industrial uses of ethylene. Clockwise from the upper right: its conversions to ethylene oxide, precursor to ethylene glycol; to ethylbenzene, precursor to styrene; to various kinds of polyethylene; to ethylene dichloride, precursor to vinyl chloride.
  • ಎಥಿಲೀನನ್ನು ಮೂಲವಸ್ತುವನ್ನಾಗಿ ಉಪಯೋಗಿಸಿ ಟನ್ನುಗಟ್ಟಲೆ ಎಥಿಲೀನ್ ಡೈಕ್ಲೋರೈಡ್, ಪಾಲಿ ಎಥಿಲೀನ್, ಸ್ಟೈರೀನ್, ಎಥಿಲೀನ್ ಡೈಆಕ್ಸೈಡ್, ಅಸಿಟೈಲುಗಳು, EP ರಬ್ಬರು, ಈಥೈಲ್ ಆಲ್ಕೊಹಾಲ್ ಮತ್ತು ಇತರ ನೀಳವಾದ ರಚನೆಯುಳ್ಳ ಆಲ್ಕೊಹಾಲುಗಳನ್ನು ತಯಾರಿಸುತ್ತಾರೆ.[]
  • ಹಣ್ಣುಗಳಿಗೆ ಬಣ್ಣವನ್ನು ಕೊಡಲು, ಮೊಳಕೆ ಮತ್ತು ತರಕಾರಿ ಮತ್ತು ಹಣ್ಣಿನ ಗಿಡಗಳ ಬೆಳವಣಿಗೆಯನ್ನು ತ್ವರಿತಗೊಳಿಸಲು ಹಣ್ಣಿನ ಮಾಗಾಣಿಕೆಯನ್ನು ತ್ವರಿತಗೊಳಿಸಲು ಎಥಿಲೀನಿನ ಉಪಯೋಗವಿದೆ.[][]
  • ಎಥಿಲೀನ್ ಮತ್ತು ಆಕ್ಸಿಜನ್ನಿನ ಮಿಶ್ರಣದ ಜ್ವಾಲೆಯನ್ನು ಬೆಸುಗೆ ಹಾಕಲು ಮತ್ತು ಲೋಹವನ್ನು ಕತ್ತರಿಸಲು ಉಪಯೋಗಿಸುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. ETHYLENE | CAMEO Chemicals | NOAA. Cameochemicals.noaa.gov. Retrieved on 2016-04-24.
  2. Research and Markets. "The Ethylene Technology Report 2016 - Research and Markets". www.researchandmarkets.com. Retrieved 19 June 2016.
  3. "Production: Growth is the Norm". Chemical and Engineering News. 84 (28): 59–236. July 10, 2006. doi:10.1021/cen-v084n034.p059. {{cite journal}}: |format= requires |url= (help)
  4. "Propylene Production from Methanol". by Intratec, ISBN 978-0-615-64811-8.
  5. Zimmermann H, Walz R (2008). "Ethylene". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a10_045.pub3. ISBN 978-3527306732.
  6. "OECD SIDS Initial Assessment Profile — Ethylene" (PDF). inchem.org. Archived from the original (PDF) on 2015-09-24. Retrieved 2008-05-21.
  7. Arshad, Muhammad; Frankenberger, William (2002). Ethylene. Boston, MA: Springer. p. 289. ISBN 978-0-306-46666-3.
  8. Melton, Laurence, et al eds. (2019). Encyclopedia of Food Chemistry. Netherlands: Elsevier. p. 114. ISBN 978-0-12-814045-1. {{cite book}}: |first= has generic name (help)CS1 maint: multiple names: authors list (link)
  9. "Informational Bulletin". 12. California Fresh Market Advisory Board. June 1, 1976. {{cite journal}}: Cite journal requires |journal= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಎಥಿಲೀನ್&oldid=1154851" ಇಂದ ಪಡೆಯಲ್ಪಟ್ಟಿದೆ