ವಿಷಯಕ್ಕೆ ಹೋಗು

ಕ್ಲೋರೋಫಾರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಲೋರೋಫಾರಂನ ರಾಸಾಯನಿಕ ರಚನೆ
ಕ್ಲೋರೋಫಾರಂ

ಕ್ಲೋರೋಫಾರಂ ಅಥವಾ ಟ್ರ್ಯೆಕ್ಲೋರೋ ಮಿಥೇನ್, ಇದು ಒಂದು ಇಂಗಾಲದ ಸಾವಯವ ಸಂಯುಕ್ತ ವಾಗಿದ್ದು ಇದರ ಅಣು ಸೂತ್ರ CHCl3 .ಇದು ಬಣ್ಣ ರಹಿತ ವಾಗಿದ್ದು,ಸಿಹಿಯಾದ ವಾಸನೆಯನ್ನು ಹೊಂದಿರುವ ಸಾಂದ್ರತೆಯ ದ್ರವ ವಾಗಿದೆ.

ರಚನೆ:- ಕ್ಲೋರೋಫಾರಂ ನ ಒಂದು ಅಣುವಿನಲ್ಲಿ, ಒಂದು ಅಣುವಿಮಲ್ಲಿ- ಒಂದು ಇಂಗಾಲ, ಒಂದು ಜಲಜನಕ ಮತ್ತು ಮೂರು ಕ್ಲೋರಿನ್ ನ ಪರಮಾಣುಗಳಿವೆ.ಒಂದು ಮಿಥೇನಿನ (CH4) ಅಣುವಿನಲ್ಲಿನ ನಾಲ್ಕು ಜಲಜನಕಗಳಲ್ಲಿ,ಮೂರು ಜಲಜನಕಗಳ ಸ್ತಾನದಲ್ಲಿ ಮೂರು ಕ್ಲೋರಿನ್ ಪರಮಾಣುಗಳು ಜೋಡಿಸಲ್ಪಟ್ಟಿವೆ.ಆದ್ದರಿಂದ ಇದು ಟೆಟ್ರಾಹೈಡ್ರಲ್ ರಚನೆಯನ್ನು ಹೊಂದಿದೆ.

ದೊರೆಯುವಿಕೆ:- ಇದು ಹೆಚ್ಚಿನ ಪ್ರಮಾಣದಲ್ಲಿ ಸ್ವಾಭಾವಿಕವಾಗಿ ನಿಸರ್ಗದಲ್ಲಿ ಉತ್ಪತ್ತಿಯಾಗುವಂತಾದ್ದು ಮತ್ತು ಸಮುದ್ರ ಕಳೆಗಳಿಂದ ನೀರಿನಲ್ಲಿ ಹಾಗೂ ಶಿಲೀಂದ್ರಗಳಿಂದ ಮಣ‍್ಣಿನಲ್ಲಿ [] ಉತ್ಪತ್ತಿ ಮಾಡಬಹುದು.ಭೂಮಿಯಲ್ಲಿ ೬,೬೦,೦೦೦ ಟನ್ಗಳಷ್ಟು ಕ್ಲೋರೋಫಾರಂ ಉತ್ಪತ್ತಿಯಾಗಿದ್ದು, ಶೇಕಡ ೯೦ ರಷ್ಟು ಸ್ವಾಭಾವಿಕವಾಗಿ ಪರಿಸರದಲ್ಲಿ ಉತ್ಪತ್ತಿ ಆಗುತ್ತದೆ

ಉತ್ಪಾದನೆ:- ಕೈಗಾರಿಕೆಗಳಲ್ಲಿ ಕ್ಲೋರೋಫಾರಂ ಅನ್ನು ಕ್ಲೋರಿನ್ ಮತ್ತು ಕ್ಲೋರೋಮಿಥೇನ್ ಅಥವಾ ಮಿಥೇನಿನ ಮಿಶ್ರಣವನ್ನು ೪೦೦-೫೦೦ ಡಿಗ್ರಿ ಷೆಲ್ಸಿಯಸ್ ನಲ್ಲಿ ಕ್ಲೋರಿನೀಕರಣ ಮಾಡುವುದರಿಂದ ಹಾಲೋಜನೀಕರಣದಿಂದ) CHCl3 ಕ್ಲೋರೋಫಾರಂ ಅನ್ನು ಉತ್ಪತ್ತಿ ಮಾಡಬಹುದು.

CH4+Cl2 →CH3Cl+HCl
CH3Cl+Cl2→CH2Cl+HCl
CH2Cl+Cl2 → CHCl3+HCl

ಕ್ಲೋರೋಫಾರಂನ ಮುಂದುವರಿದ ಕ್ಲೋರಿನೀಕರಣದಿಂದ ಕಾರ್ಬನ್ ಟೆಟ್ರಾಕ್ಲೋರೈಡ್ ಆಗುತ್ತದೆ. (CCl4)

CHCl3+Cl2 →CCl4 + HCl

ಕ್ಲೋರಿನೀಕರಣದಿಂದ ಉಂಟಾದ ಕ್ಲೋರೋಫಾರಂ ಮತ್ತು ಇತರ ಮಿಶ್ರಣದ ಘಟಕಗಳನ್ನು ಅಂಶೀಯ ಭಟ್ಟಿ ಇಳುಸುವಿಕೆಯಿಂದ ಬೇರ್ಪಡಿಸಬಹುದು.

ಉಪಯೋಗಗಳು:-

  • ಟೆಫ್ಲಾನಿನ ತಯಾರಿಕೆಯಲ್ಲಿ (ಪಾಲಿಟೆಟ್ರಾಫ್ಲೋರೋಇತೈಲೀನ್) ಉಪಯೋಗಿಸುತ್ತಾರೆ.
  • ಕೊಬ್ಬು, ಎಣ್ಣೆ, ರಬ್ಬರ್, ಆಲ್ಕಲಾಯ್ಡ್‌ಗಳು ಮೇಣ ಮುಂತಾವುಗಳನ್ನು ಕರಗಿಸಲು ದ್ರಾವಕವಾಗಿ ಉಪಯೋಗಿಸುತ್ತಾರೆ.
  • ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅರಿವಳಿಕೆಯಾಗಿ ಉಪಯೋಗಿಸುತ್ತಾರೆ.

ಕ್ಲೋರೋಫಾರಂ ಅನ್ನು ಸೂಕ್ತವಾಗಿ ಬಳಸದೇ ಇದ್ದಾಗ ಉಂಟಾಗಬಹುದಾದ ತೊಂದರೆಗಳು.[]

  • ನುಂಗುವುದರಿಂದ ವಿಷವಾಗಿ ಪರಿಣಮಿಸುತ್ತದೆ.
  • ಚರ್ಮದ ತುರಿಕೆ ಅಥವಾ ಅಲರ್ಜಿ ಉಂಟಾಗುತ್ತದೆ.
  • ಕಣ‍್ಣಿನ ಉರಿಯೂತ ಅಥವಾ ಅಲರ್ಜಿ
  • ಕ್ಯಾನ್ಸರ್ ಬರುವ ಸಾದ್ಯತೆ.
  • ಗರ್ಭದಲ್ಲಿರುವ ಹುಟ್ಟುವ ಮಗುವಿಗೆ ತೊಂದರೆ.
  • ಅತಿಯಾದ ಸೇವನೆಯಿಂದ ಅಂಗಾಂಗಗಳಿಗೆ ಊನತೆ.

ಬಳಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು.

  • ಕ್ಲೋರೋಫಾರಂ ಉಪಯೋಗಿಸುವ ಮನ್ನ ಕೊಟ್ಟಂತಹ ಸೂಚನೆಗಳನ್ನು ಓದಿಕೊಳ‍್ಳಬೇಕು.
  • ಸೂಚನೆಗಳನ್ನು ಓದಿಕೊಂಡ ನಂತರ ಸೂಕ್ತವಾಗಿ ಬಳಸ ಬೇಕು.
  • ಧೂಳು, ಹೊಗೆ, ಅನಿಲ, ಆವಿ, ಮಂಜು ಮುಂತಾದವುಗಳನ್ನು ಉಸಿರಾಡುವುದನ್ನು ನಿಯಂತ್ರಿಸಬೇಕು
  • ಉಪಯೋಗಿಸಿದ ನಂತರ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
  • ಉಪಯೋಗಿಸುವಾಗ ತಿನ್ನುವುದು ಮತ್ತು ಕುಡಿಯುವುದು ಮಾಡಬಾರದು.
  • ಉಪಯೋಗಿಸುವಾಗ ಹೊರಗಿನ ಗಾಳಿ ಸಾಕಷ್ಟು ಇರುವಹಾಗೆ ನೋಡಿಕೊಳ್ಳಬೇಕು.

ಉಲ್ಲೇಖ

[ಬದಲಾಯಿಸಿ]
  1. Cappelletti, M. (2012). "Microbial degradation of chloroform". Applied Microbiology and Biotechnology. 96 (6): 1936. doi:10.1007/s00253-012-4494-1.
  2. https://pubchem.ncbi.nlm.nih.gov/compound/chloroform#section=Clinical-Laboratory-Methods