ಮಂಜುಗಡ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಜುಗಡ್ಡೆಯು (ನೀರ್ಗಲ್ಲು) ಘನ ಸ್ಥಿತಿಯಾಗಿ ಪರಿವರ್ತಿತವಾಗಿರುವ ನೀರು.[೧][೨] ಮಣ್ಣಿನ ಕಣಗಳು ಅಥವಾ ಗಾಳಿಯ ಗುಳ್ಳೆಗಳಂತಹ ಕಲ್ಮಶಗಳು ಇರುವುದನ್ನು ಆಧರಿಸಿ, ಇದು ಪಾರದರ್ಶಕವಾಗಿ ಅಥವಾ ಹೆಚ್ಚುಕಡಿಮೆ ನೀಲಿ ಮಿಶ್ರಿತ ಬಿಳಿ ಬಣ್ಣದ್ದಾಗಿ ಕಾಣಬಹುದು.

ಮಂಜುಗಡ್ಡೆಯು ಭೂಮಿಯ ಮೇಲ್ಮೈ ಮೇಲೆ ಹೇರಳವಾಗಿದೆ – ವಿಶೇಷವಾಗಿ ಧ್ರುವ ಪ್ರದೇಶಗಳಲ್ಲಿ ಮತ್ತು ಹಿಮರೇಖೆಯ ಮೇಲೆ[೩] – ಮತ್ತು ಅವಕ್ಷೇಪನ ಹಾಗೂ ಶೇಖರಣೆಯ ಸಾಮಾನ್ಯ ರೂಪವಾಗಿ ಭೂಮಿಯ ಜಲ ಚಕ್ರ ಹಾಗೂ ವಾಯುಗುಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಹಿಮಹಲ್ಲೆ ಹಾಗೂ ಆಲಿಕಲ್ಲಾಗಿ ಬೀಳುತ್ತದೆ ಅಥವಾ ಘನ ಇಬ್ಬನಿ, ಹಿಮಬಿಳಲುಗಳು ಅಥವಾ ಮಂಜುಗಡ್ಡೆ ಮೊನೆಗಳಾಗಿ ದೊರಕುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Definition of ICE". www.merriam-webster.com (in ಇಂಗ್ಲಿಷ್). Retrieved 2018-06-19.
  2. "the definition of ice". www.dictionary.com (in ಇಂಗ್ಲಿಷ್). Retrieved 2018-06-19.
  3. Prockter, Louise M. (2005). "Ice in the Solar System" (PDF). Johns Hopkins APL Technical Digest. 26 (2): 175. Archived from the original (PDF) on 19 March 2015.