ಗಿರಿಜಾ ದೇವಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಗಿರಿಜಾ ದೇವಿ

ಗಿರಿಜಾ ದೇವಿ (ಜನನ ೧೯೨೯) ಬನಾರಸ್ ಘರಾಣದ ಪ್ರಸಿದ್ಧ ಗಾಯಕಿ. ಠುಮ್ರಿ ಗಾಯನವನ್ನು ಪ್ರಚಾರ ಮಾಡಿದವರಲ್ಲಿ ಅಗ್ರಗಣ್ಯರು. ಉತ್ತರ ಪ್ರದೇಶವಾರಣಾಸಿಯಲ್ಲಿ ಜನಿಸಿದ ಇವರು,ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ರೇಡಿಯೋದಲ್ಲಿ ಕಾರ್ಯಕ್ರಮ ನೀಡುವುದರ ಮೂಲಕ ಸಾರ್ವಜನಿಕ ಹಾಡುಗಾರಿಕೆ ಪ್ರಾರಂಭಿಸಿದರು. ಅನಂತರದ ದಿನಗಳಲ್ಲಿ ಕೌಟುಂಬಿಕ ವಿರೋಧದ ನಡುವೆಯೂ ಠುಮ್ರಿ,ಖಯಾಲ್, ಠಪ್ಪ,ಜಾನಪದ ಸಂಗೀತ ಮುಂತಾದ ಪ್ರಕಾರಗಳಲ್ಲಿ ಹಾಡಿ ಜನಪ್ರಿಯತೆ ಗಳಿಸಿದರು. ಇವರಿಗೆ ೧೯೭೨ ರಲ್ಲಿ ಪದ್ಮಶ್ರೀಪ್ರಶಸ್ತಿಯೂ, ೧೯೮೯ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ದೊರೆತಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]