ವಿಷಯಕ್ಕೆ ಹೋಗು

ಅಜಯ್ ಚಕ್ರವರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜಯ್ ಚಕ್ರವರ್ತಿ

ಪಂಡಿತ್ ಅಜಯ್ ಚಕ್ರವರ್ತಿ ಇವರು ಹಿಂದುಸ್ತಾನಿ ಶಾಸ್ತ್ರೀಯ ಶೈಲಿಯ ಗಾಯಕರು. ಇವರು ಪಟಿಯಾಲಾ ಘರಾಣೆಯ ಗಾಯಕರು. ಇವರು ಪಂಡಿತ್ ಜ್ಞಾನ್ ಪ್ರಸಾದ್ ಘೋಷ್ ಮತ್ತು ಉಸ್ತಾದ್ ಮುನಾವರ್ ಅಲಿ ಖಾನ್ ಅವರಿಂದ ಸಂಗೀತ ಶಿಕ್ಷಣವನ್ನು ಪಡೆದರು. ಸದ್ಯದ ಅಗ್ರಗಣ್ಯ ಹಿಂದುಸ್ತಾನಿ ಗಾಯಕರಲ್ಲಿ ಇವರೂ ಒಬ್ಬರು. ಇವರ ಗಾಯಕಿಯಲ್ಲಿ ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಅವರ್ ಗಾಯಕಿಯ ಅಂಶಗಳು ಕಂಡು ಬರುತ್ತವೆ. ಇವರ ಪುತ್ರಿಯಾದ ಕೌಶಿಕಿ ಚಕ್ರವರ್ತಿ ಕೂಡ ಉತ್ತಮ ಯುವ ಹಿಂದುಸ್ತಾನಿ ಗಾಯಕಿ. ಇವರಿಗೆ ೨೦೦೦ದಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ದೊರೆತಿದೆ.೨೦೧೧ರಲ್ಲಿ ಪದ್ಮಶ್ರೀ ಪ್ರಶಸ್ತಿ,೨೦೧೨ರಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ ಕೂಡಾ ದೊರೆತಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]