ವಿಲಾಯತ್ ಖಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಉಸ್ತಾದ್ ವಿಲಾಯತ್ ಖಾನ್(ಅಗಸ್ಟ್ ೮, ೧೯೨೮-ಮಾರ್ಚ್ ೧೩, ೨೦೦೪)ರವರು ಪ್ರಸಿದ್ಧ ಸಿತಾರ್ ವಾದಕರಾಗಿದ್ದರು. ಇವರು ಬಾಂಗ್ಲಾದೇಶದ, ಮೈಮೇನ್ ಸಿಂಗ್ ಜಿಲ್ಲೆಯ ಗೌರಿಪುರದಲ್ಲಿ ಜನಿಸಿದ್ದರು. ಇವರು ತಮ್ಮ ೮ನೇಯ ವಯಸ್ಸಿನಲ್ಲಿಯೇ ತಮ್ಮ ಮೊದಲ ೭೮-RPM ಮುದ್ರಿಕೆಯನ್ನು ಧ್ವನಿಮುದ್ರಿಸಿದ್ದರು ಮತ್ತು ತಮ್ಮ ಜೀವನದ ಕೊನೆಯ ಸಂಗೀತ ಕಛೇರಿಯನ್ನು ೭೫ನೇಯ ವಯಸ್ಸಿನಲ್ಲಿ ನೀಡಿದ್ದರು.


ಹಿನ್ನೆಲೆ[ಬದಲಾಯಿಸಿ]

ವಿಲಾಯತ್ ಖಾನರು ಮೊಘಲ್ ಸಮ್ರಾಟರ ಕಾಲದಿಂದ ಸಂಗೀತವನ್ನು ಪರಂಪರಾನುಗತವಾಗಿ ಬೆಳೆಸಿಕೊಂಡು ಬಂದ ಅಪ್ರತಿಮ ಸಂಗೀತಗಾರರ ಮನೆತನದಲ್ಲಿ ಹುಟ್ಟಿದರು. ತಮ್ಮ ಕಾಲದಲ್ಲಿ ಸುಪ್ರಸಿದ್ಧ ಸಿತಾರ್ ಮತ್ತು ಸೂರಬಹಾರ್ ವಾದಕರೆನಿಸಿಕೊಂಡಿದ್ದ ಇನಾಯತ್ ಖಾನ್(೧೮೯೫-೧೯೩೮)ರವರು ಇವರ ತಂದೆಯವರು, ಇವರ ಹಾಗೆಯೇ ಪ್ರಸಿದ್ಧಿಯಾಗಿದ್ದ ಇಮ್ದಾದ್ ಖಾನ್(೧೮೪೮-೧೯೨೦)ರವರು ಇವರ ಅಜ್ಜನವರು. ವಿಲಾಯತ್ ಖಾನರಿಗೆ ಪರಂಪರಾಗತವಾದ ಇಮ್ದಾದಖಾನಿ ಘರಾಣಾ ಅಥವ ಇಟಾವಾ ಘರಾಣಾ ಶೈಲಿಯಲ್ಲಿ ಸಿತಾರ್ ವಾದನವನ್ನು ಕಲಿಸಲಾಯಿತು.ಇಟಾವಾ ಇದು ಆಗ್ರಾದ ಹತ್ತಿರವಿರುವ ಇಮ್ದಾದ್ ಖಾನ್ ಅವರು ವಾಸಿಸುತ್ತಿದ್ದ ಹಳ್ಳಿಯ ಹೆಸರು.

ಶಿಕ್ಷಣ[ಬದಲಾಯಿಸಿ]

ತಂದೆಯವರಾದ ಇನಾಯತ್ ಖಾನರು ವಿಲಾಯತ ಖಾನರ ಮೊದಲ ಗುರುಗಳು. ಆದರೆ ಇವರಿಗೆ ಕೇವಲ ೯ ವರ್ಷವಾಗಿದ್ದಾಗ ಇನಾಯತ್ ಖಾನರು ತೀರಿಹೋದರು. ಹೀಗಾಗಿ ಇವರ ಹೆಚ್ಚಿನ ವಿದ್ಯಾಭ್ಯಾಸವು ಕುಟುಂಬದ ಇತರ ಜನರ ಮೂಲಕವಾಯಿತು: ಚಿಕ್ಕಪ್ಪ, ಸುಪ್ರಸಿದ್ಧ ಸಿತಾರ್ ಮತ್ತು ಸೂರಬಹಾರ್ ವಾದಕ ವಾಹಿದ್ ಖಾನ್, ಇವರ ಅಜ್ಜ(ತಾಯಿಯ ತಂದೆ) ಬಂದೇ ಹಸನ್ ಖಾನ್ ಮತ್ತು ಇವರ ತಾಯಿ, ಬಶಿರನ್ ಬೇಗಮ್, ಇವರು ಇಮ್ದಾದ್ ಖಾನ್, ಇನಾಯತ್ ಖಾನ್ ಮತ್ತು ವಾಹಿದ್ ಖಾನರ ಶಿಕ್ಷಣ ಮತ್ತು ರಿಯಾಜ್ ಪದ್ಧತಿಯನ್ನು ವಿವರವಾಗಿ ಅಭ್ಯಸಿಸಿದ್ದರು. ಇವರ ಸೋದರ ಮಾವನಾಗಿದ್ದ ಝಿಂದೇ ಹಸನ್ ಖಾನರು ಇವರ ರಿಯಾಜಿನ ಮೇಲುಸ್ತುವಾರಿ ವಹಿಸಿದ್ದರು. ಖಾನಸಾಹೇಬರು ಚಿಕ್ಕವರಾಗಿದ್ದಾಗ ಇವರಿಗೆ ಗಾಯಕನಾಗಬೇಕೆಂಬ ಹಂಬಲವಿತ್ತು, ಆದರೆ ಸ್ವತಃ ಗಾಯಕರ ವಂಶದಿಂದ ಬಂದಂಥ ಇವರ ತಾಯಿಗೆ, ಇವರು ತಮ್ಮ ಮನೆತನದ ಮೂಲತನವನ್ನು ಉಳಿಸಿಕೊಳ್ಳಲು ಮತ್ತು ತಮ್ಮದೇ ಆದ ವಿಶಿಷ್ಟ ಛಾಪು ಹೊಂದಿದ್ದ ಪಾರಂಪರಿಕ ಸಿತಾರ್ ವಾದನದ ಶೈಲಿಯನ್ನು ಉಳ್ಳಿಸಿಕೊಳ್ಳಲು ಸಿತಾರನ್ನೇ ಕಲಿಯಲು ಬೇಗಮರು ಪ್ರೇರಿಪಿಸಿದರು. ಇವರ ಗಾಯಕಿಯ ಹುಚ್ಚು ಇವರನ್ನು ಸಿತಾರದಲ್ಲಿ ಗಾಯಕಿ ಅಂಗವನ್ನು ತೋರಿಸಲು ಪ್ರೇರೇಪಿಸಿತು. ತಮ್ಮ ಜೀವನದ ಕೊನೆಯ ಕೆಲ ವರ್ಷ ಸಂಗೀತ ಕಛೇರಿಗಳಲ್ಲಿ ಅನೇಕ ಬಾರಿ ಕೆಲವು ಚೀಜಗಳನ್ನು ಹಾಡಿ ಮತ್ತು ಅದನ್ನೇ ನುಡಿಸಿ ತೋರಿಸುತ್ತಿದ್ದರು. ಇವರ ಮಗನಾದ ಶುಜಾತ್ ಖಾನರು ಕೂಡ ಈ ಶೈಲಿಯನ್ನು ಮುಂದುವರೆಸಿಕೊಂದು ಬಂದಿದ್ದಾರೆ.

ಪೂರಕ ಓದಿಗೆ[ಬದಲಾಯಿಸಿ]

'ಕೋಮಲ್ ಗಾಂಧಾರ' ಇದು ವಿಲಾಯತ್ ಖಾನರ ಜೀವನ ಚರಿತ್ರೆ. ಇದನ್ನು ಖಾನಸಾಹೇಬರು ಶಂಕರಲಾಲ್ ಭಟ್ಟಾಚಾರ್ಜಿಯವರ ಜೊತೆಗೆ ಬರೆದಿದ್ದು, ಇದನ್ನು ಕೊಲ್ಕೊತ್ತಾದ ಸಾಹಿತ್ಯಮ್ ಇವರು ಪ್ರಕಾಶಿಸಿದ್ದಾರೆ.