ಭಾದೋಹಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ ವಿಖ್ಯಾತ 'ಕಾಶ್ಮೀರದ ರತ್ನ ಕಂಬಳಿಗಳು', ಭಾರತದಲ್ಲೂ ಅಷ್ಟೇ ಜನಪ್ರಿಯ. ಆದರೆ ಉತ್ತರಪ್ರದೇಶದ ಭಾದೋಹಿ ಯಲ್ಲಿ ರತ್ನಕಂಬಳಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ತಯಾರಾಗುತ್ತವೆ. ಅವೆಲ್ಲಾ ಒಟ್ಟಾರೆ 'ಕಾಶ್ಮೀರ್ ರತ್ನ ಕಂಬಳಿ'ಗಳೆಂದೇ ಬಝಾರ್ ನಲ್ಲಿ ಮಾರಲ್ಪಡುತ್ತವೆ. ಭಾರತದ ರತ್ನಕಂಬಳಿಗಳ ಸುಮಾರು ೯೦% ತಯಾರುಮಾಡುವುದು 'ಭಾದೋಹಿಯಲ್ಲೇ. ದೇಶದ ೮೦% ಪ್ರತಿಶತ ಕಾರೀಗರ್ ಗಳು ಇರುವುದು ಅಲ್ಲೇ. 'ಇರಾನ್' ದೇಶದಿಂದ ಕರೆಸಲ್ಪಟ್ಟ ನೇಕಾರರು, ಉದ್ದಿಮೆಯನ್ನು ಅರಂಭಿಸಿದ್ದಾರೆ. ಅವರೆಲ್ಲಾ 'ಮುಘಲ್ ನವಾಬ'ರ ಸಮಯದಲ್ಲಿ ಭಾರತಕ್ಕೆ ಬಂದವರು. ಮೊದಲು ಆಗ್ರಾದಲ್ಲಿ ನೆಲೆಸಿದ್ದ ಅವರು, ನಿಧಾನವಾಗಿ 'ವಾರಣಾಸಿ ನಗರ'ಕ್ಕೆ ಬಂದು ನೆಲೆಸಿದರು.೧೮ ನೆ ಶತಮಾನದಲ್ಲಿ ವಾರಣಾಸಿಯಿಂದ ೪೫ ಕಿ.ಮೀ ಉತ್ತರಕ್ಕೆ ಇರುವ 'ಭಾದೋಹಿ'ಯಲ್ಲಿ ಬಂದರು.(ಅಲಹಾಬಾದ್ ನಿಂದ ೮೦ ಕಿ. ಮೀ.ದೂರದಲ್ಲಿ) ರತ್ನಕಂಬಳಿಗಳ ತಯಾರಿಕೆಯ ಕಾರ್ಯ ಭಾದೋಹಿ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲೇ ತಯಾರುಗುತ್ತವೆ. ಪ್ರಾಚೀನಮಾದರಿಯಲ್ಲಿ ಬಣ್ಣ ಕರೆಯುವವ 'ವಿಶೇಷಪದ್ಧತಿಯ ನೇಯ್ಗೆ' ಇಂದಿಗೂ ಪ್ರಸಿದ್ಧಿಯಲ್ಲಿದೆ. ಈ ತರಹದ ಕೆಲಸದಲ್ಲಿ ಪರಿವಾರದ ಸದಸ್ಯರೆಲ್ಲಾ ಮನೆಯ ಹಿರಿಯರಿಗೆ ಸಹಾಯಮಾಡುತ್ತಾರೆ. ಮನೆಯ ಹಿರಿಯರು, ನೇಕಾರರೇ ಆಗಿರುವುದಲ್ಲದೆ 'ಕಂಬಳಿಗೆ ಯಾವ ಬಣ್ಣದ ಗಂಟು' ಹಾಕಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. ಮುಂದೆ ಮನೆಯ ಸದಸ್ಯರೆಲ್ಲಾ ಆಯಾ ಬಣ್ಣದ ಉಣ್ಣೆನೂಲನ್ನು ಹೊಂದಿಸಿಕೊಡುತ್ತಾರೆ. ಉತ್ತರ ಪ್ರದೇಶದಲ್ಲಿ ನೂಲಲ್ಪಟ್ಟ ರತ್ನಕಂಬಳಿಗಳು ವಿಶಿಷ್ಟ ವಿನ್ಯಾಸಗಳಿಗೆ ಸುಪ್ರಸಿದ್ಧವಾಗಿವೆ. 'ಹತ್ತಿಯ ಧುರ್ರಿ', 'ಛಪರಾ ಮೀರ್', 'ರೋರಿ ಬಾಫ್ತ್', 'ಇಂಡೋ ಗಬ್ಬೆಹ್ 'ಮುಂತಾದ ಹಲವು ಬಗೆಯ ಕಂಬಳಿಗಳನ್ನು ಇಲ್ಲಿ ನೇಯುತ್ತಾರೆ. ಈ ಪ್ರದೇಶದಿಂದಲೇ ವಿದೇಶಗಳಿಗೆ ರಫ್ತಾಗುವ ರತ್ನಕಂಬಳಿಗಳ ಸುಮಾರು ೩,೦೦೦ ಕೋಟಿ ರೂಪಾಯಿಗಳಿಗೂ ಹೆಚ್ಚೆಂದು ಅಂದಾಜುಮಾಡಲಾಗಿದೆ. ಭಾರತದ ಒಟ್ಟು ರತ್ನಕಂಬಳಿಗಳ ೬೫% ಪ್ರತಿಶತ್ತು ಈ ಪ್ರದೇಶದಿಂದಲೇ ಎನ್ನಬಹುದು. 'ಮಿರ್ಜಾಪುರ' ಎಂಬ ಚಿಕ್ಕ ಪಟ್ಟಣದಲ್ಲೂ ಗಮನಾರ್ಹ ಪ್ರಮಾಣದಲ್ಲಿ ರತ್ನಕಂಬಳಿಗಳನ್ನು ನೇಯುವ ಉದ್ಯೋಗ ಪ್ರಚಾರದಲ್ಲಿದೆ. 'ಆಗ್ರನಗರ'ದಲ್ಲಿ ಮಾಡುವ ಕಂಬಳಿಗಳು ಹೆಚ್ಚಾಗಿ ಸ್ಥಾನೀಯ ಅಂದರೆ, 'ತಾಜ್ ಮಹಲ್' ನ ವಿನ್ಯಾಸಗಳೇ ಹೆಚ್ಚಾಗಿ ಕಾಣಬರುತ್ತವೆ.

"https://kn.wikipedia.org/w/index.php?title=ಭಾದೋಹಿ&oldid=1165689" ಇಂದ ಪಡೆಯಲ್ಪಟ್ಟಿದೆ