ಪಂ. ಜವಾಹರಲಾಲ್ ನೆಹರು
![]() |
|
---|---|
ಜನನ: | ನವೆಂಬರ್ ೧೪, ೧೮೮೯ |
ಮರಣ: | ಮೇ ೨೭, ೧೯೬೪ |
ಹುಟ್ಟಿದೂರು: | ಅಲಹಾಬಾದ್, ಉತ್ತರ ಪ್ರದೇಶ |
ಭಾರತದ ಪ್ರಧಾನ ಮಂತ್ರಿ | |
ಅಧಿಕಾರ ಅವಧಿ: | ಮೊಟ್ಟ ಮೊದಲ ಪ್ರಧಾನ ಮಂತ್ರಿ |
ರಾಜಕೀಯ ಪಕ್ಷ: | ಭಾರತ ರಾಷ್ಟ್ರೀಯ ಕಾಂಗ್ರೆಸ್ |
ಅಧಿಕಾರ ವಹಿಸಿಕೊಂಡಿದ್ದು: | ಆಗಸ್ಟ್ ೧೫, ೧೯೪೭ |
ಅಧಿಕಾರ ಬಿಟ್ಟುಕೊಟ್ಟಿದ್ದು: | ಮೇ ೨೭, ೧೯೬೪ |
ಇವರ ಉತ್ತರಾಧಿಕಾರಿ: | ಗುಲ್ಜಾರಿಲಾಲ್ ನಂದ |
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.
ಪರಿವಿಡಿ
ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮[ಬದಲಾಯಿಸಿ]
- ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್‌ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
- ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭[ಬದಲಾಯಿಸಿ]
೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.
ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭[ಬದಲಾಯಿಸಿ]
'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.
ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪[ಬದಲಾಯಿಸಿ]
ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನಡ ಅನುವಾದ' : "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."
ನೆಹರೂ ಅವರ ಅಂತಿಮ ಕವನ/ಬಯಕೆ[ಬದಲಾಯಿಸಿ]
- ಜವಾಹರಲಾಲ್ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
-
- ಕಾಡೂ ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
- ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.
- ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೇ ಕ್ರಮಿಸಬೇಕಿದೆ, ಮೈಲುಗಟ್ಟಲೇ ಕ್ರಮಿಸಬೇಕಿದೆ.
(ಆಧಾರ:ಲೇಖಕಿ: ಪತ್ರಕರ್ತೆ ಹಾಗೂ ಮಾಧ್ಯಮ ಶಿಕ್ಷಣ ತಜ್ಞೆ) ಆರ್. ಅಖಿಲೇಶ್ವರಿS 03/08/2014/ ಪ್ರಜಾವಾಣಿ)
![]() ![]() ![]() ![]() |
|
---|---|
ಚರಿತ್ರೆ: | ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ |
ತತ್ವಗಳು: | ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ |
ಘಟನೆ-ಚಳುವಳಿಗಳು: | ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ |
ಸಂಘಟನೆಗಳು: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ |
ನಾಯಕರು: | ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್ |
ಬ್ರಿಟಿಷ್ ಆಡಳಿತ: | ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್ |
ಸ್ವಾತಂತ್ರ್ಯ: | ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ |