ಬರ್ಟ್ರಾನ್ಡ್ ರಸಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bertrand Russell
ಜನನBertrand Arthur William Russell
(೧೮೭೨-೦೫-೧೮)೧೮ ಮೇ ೧೮೭೨
Trellech, Monmouthshire,[೧] United Kingdom
ಮರಣ2 February 1970(1970-02-02) (aged 97)
Penrhyndeudraeth, Wales, United Kingdom
ವಾಸ್ತವ್ಯUnited Kingdom
ರಾಷ್ಟ್ರೀಯತೆBritish
ಕಾಲಮಾನ20th-century philosophy
ಪ್ರದೇಶWestern philosophy
ಪರಂಪರೆAnalytic philosophy
ಮುಖ್ಯ  ಹವ್ಯಾಸಗಳು
ಗಮನಾರ್ಹ ಚಿಂತನೆಗಳು
ಪ್ರಶಸ್ತಿಗಳುDe Morgan Medal (1932)
Sylvester Medal (1934)
Nobel Prize in Literature (1950)
Kalinga Prize (1957)
Jerusalem Prize (1963)
ಸಹಿ

ಬರ್ಟ್ರಾನ್ಡ್ ರಸಲ್ ಒಬ್ಬ ಬ್ರಿಟಿಷ್ ತತ್ವಜ್ಞಾನಿ, ಗಣಿತಜ್ಞ, ಇತಿಹಾಸಕಾರ, ಬರಹಗಾರ, ರಾಜಕೀಯ ಹೋರಾಟಗಾರ, ಸಮಾಜವಾದಿ ಹಾಗೂ ತರ್ಕಶಾಸ್ತ್ರಜ್ಞ. ಇವನೊಬ್ಬ ಶಾಂತಿದೂತ, ಸಮಾಜವಾದಿ ಹಾಗೂ ಪ್ರಗತಿಪರ ಚಿಂತಕ. ೨೦ನೆಯ ಶತಮಾನದ ಬೌದ್ಧಿಕವಲಯದಲ್ಲಿ ರಸೆಲ್‌ದು ಬಹು ದೊಡ್ಡ ಹೆಸರು. ಅವನು ಬಹುಶ್ರುತ ವಿದ್ವಾಂಸ, ಘನ ಪಂಡಿತ, ಇವನ ಕೃತಿಗಳು ಭಾಷಾಶಾಸ್ತ್ರ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಅಧ್ಯಾತ್ಮಶಾಸ್ತ್ರ, ಜ್ಞಾನಮೀಮಾಂಸೆ, ಗಣಿತಶಾಸ್ತ್ರ, ಮನಃಶಾಸ್ತ್ರಗಳಂತ ಹತ್ತಾರು ಅನೇಕ ಗಂಭೀರ ಪ್ರಕಾರಗಳ ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರಿವೆ.

ಹುಟ್ಟು ಮತ್ತು ಬಾಲ್ಯ[ಬದಲಾಯಿಸಿ]

ಬರ್ಟ್ರಾನ್ಡ್ ರಸೆಲ್ ಹದಿನೆಂಟು ಮೇ ೧೮೭೦ರಲ್ಲಿ ಬ್ರಿಟನ್ನಿನ ಮಾನಮೌಂಟ್‌ಶೈರ್ ಪ್ರಾಂತ್ಯದ ರವೆನ್ ಸ್ಕ್ರಾಫಟ್ ರಲ್ಲಿ ಒಂದು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದನು. ಇವನ ತಂದೆ ಒಬ್ಬ ಮಹಾನ್ ನಾಸ್ತಿಕವಾದಿ. ಇವನ ತಾತ ಅರ್ಲ್ ರಸಲ್, ವಿಕ್ಟೋರಿಯಾ ಮಹಾರಾಣಿಯ ಬಳಿ ಹಲವು ವರ್ಷಗಳ ಪ್ರಧಾನ ಮಂತ್ರಿಯಾಗಿ ಕೆಲಸ ನಿರ್ವಹಿಸಿದರು. ಹೀಗೆ "ರಸಲ್" ಮನೆತನ ಒಂದು ಪ್ರಭಾವಿ ಮನೆತನವಾಗಿತ್ತು.

ರಸಲ್‌ಗೆ ಒಬ್ಬ ಅಣ್ಣ ಹಾಗೂ ಒಬ್ಬ ಅಕ್ಕ ಇದ್ದಳು. ತನ್ನ ಅಕ್ಕ ಹಾಗೂ ತಾಯಿಯನ್ನು ತನ್ನ ಬಾಲ್ಯದಲ್ಲಿ ಕಳೆದುಕೊಂಡ. ಆದ ಕಾರಣ ಇವನ ಬಾಲ್ಯವನ್ನು ಇವನು ಅಜ್ಜಿಮನೆಯಲ್ಲಿ ಕಳೆದನು. ಮಾಜಿ ಪ್ರಧಾನಿ ಆಗಿದ್ದ ಇವನ ತಾತ ಅರ್ಲ್ ರಸಲ್ ಇವನ ಬಾಲ್ಯದ ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರಿದ್ದನು. ಬಾಲ್ಯದಲ್ಲಿ ಇವನನ್ನು ಹೆಚ್ಚಾಗಿ ನೋಡಿಕೊಂಡಿದ್ದು ಇವನ ಅಜ್ಜಿ ಕೌಂಟಿಸ್ ರಸಲ್, ಈಕೆ ಒಬ್ಬ ಅಗ್ನೇಯತವಾದಿಯಾಗಿದ್ದಳು. ರಸಲ್‌ನ ಹಲವು ಸಿದ್ಧಾಂತಗಳು ನಾಸ್ತಿಕನಾದ ಅವನ ತಂದೆಯಿಂದ ಹಾಗೂ ಅವನ ಅಜ್ಜಿಯಿಂದ ರೂಪುಗೊಂಡಿತ್ತು.

ಬಾಲ್ಯದಿಂದಲೇ ರಸಲ್‌ಗೆ ಗಣಿತ ಹಾಗೂ ಧರ್ಮದ ವಿಚಾರವಾಗಿ ಹೆಚ್ಚು ಆಸಕ್ತಿ ಬೆಳೆದಿತ್ತು. ತನ್ನ ಬಾಲ್ಯವನ್ನು ಆತ ಹೆಚ್ಚು ಸ್ನೇಹಿತರಿಲ್ಲದೆ ಏಕಾಂಗಿಯಾಗಿ ಕಳೆದ. ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಕಾಲನಂತರ ಗಣಿತದ ಮೇಲಿನ ಆಸಕ್ತಿಯಿಂದ ಆತ್ಮಹತ್ಯೆಯ ವಿಚಾರದಿಂದ ದೂರ ಉಳಿದ. ತನ್ನ ೧೧ನೇ ವಯಸ್ಸಿನಲ್ಲಿ, ಅವನ ಅಣ್ಣ ಫ಼್ರಾಂಕ್ ಅವನಿಗೆ ಯುಕ್ಲಿಡನ್ ಗಣಿತ ಕೃತಿಗಳನ್ನು ಪರಿಚಯಿಸಿದನು. ಯುಕ್ಲಿಡನ್ ಕೃತಿಗಳು ರಸಲ್‌ನ ಮೇಲೆ ತುಂಬ ಪರಿಣಾಮ ಬೀರಿದವು. ಪಿ.ಬಿ.ಶೈಲಿಯ ಗ್ರಂಥಗಳು ಅವನ ಮೇಲೆ ಹೆಚ್ಚು ಪರಿಣಾಮ ಬೀರಿದ್ದವು. ತನ್ನ ೧೮ನೇ ವಯಸ್ಸಿನಲ್ಲಿ ಜೆ.ಎಸ್.ಮಿಲ್ ನ "ಆಟೋಬಯೋಗ್ರಫಿ" ಗ್ರಂಥ ಓದಿದ ನಂತರ ನಾಸ್ತಿಕನಾಗಿ ಪರಿವರ್ತನೆಗೊಂಡನು.

೧೮೯೦ರ ಹೊತ್ತಿಗೆ ವಿದ್ಯಾರ್ಥಿ ವೇತನ ಪಡೆದು ರಸಲ್ ಟ್ರಿನಿಟಿ ಕಾಲೇಜಿನಲ್ಲಿ ಗಣಿತಶಾಸ್ತ್ರ ಅಧ್ಯಯನಕ್ಕೆ ಹೋದನು. ಅಲ್ಲಿ ಗಣಿತ ಖ್ಯಾತನಾಮರಾದ ರಾಬರ್ಟ್‌ರಮ್ಸಿ. ಜಾರ್ಜ್ ಎಡ್ವರ್ಡ್ ಮೂರ್ ಹಾಗೂ ಆಲ್‌ಫ಼್ರೆಡ್ ನಾರ್ಥ್ ವೈಟ್ ಹೆಡ್ ಮುಂತಾದವರ ಶಿಶ್ಯತ್ವ ಪಡೆದು, ಸ್ನೇಹವನ್ನೂ ಸಂಪಾದಿಸಿಕೊಂಡು ೧೮೯೩ರಲ್ಲಿ ಪ್ರಥಮ ಶ್ರೇಣಿಯೊಂದಿಗೆ ಪದವಿಗಳಿಸಿ ೧೮೯೫ರ ಹೊತ್ತಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮುಂದುವರಿಸಿದ. ಅಷ್ಟರ ಹೊತ್ತಿಗೆ ಗಣಿತಶಾಸ್ತ್ರ ಹಾಗೂ ತತ್ವಶಾಸ್ತ್ರ ಕ್ಷೇತ್ರದಲ್ಲಿ ಅವನದೇ ಆದ ಮುದ್ರೆ ಹೊತ್ತಿದ್ದ.

ನಂತರದ ದಿನಗಳಲ್ಲಿ ಅವನ ಪ್ರಸಿದ್ಧಿ ತುಂಬ ಬೆಳೆಯಿತು. ಆತ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಅವನು ಕೈಹಾಕಿದ ಕ್ಷೇತ್ರಗಳಲ್ಲೆಲ್ಲಾ ಅವನು ಪ್ರಸಿದ್ಧನಾದ. ಪ್ರತಿಭೆ ಹಾಗೂ ಪಾಂಡಿತ್ಯದ ಪಾಕ ರಸಲ್. ೧೮೯೪ರಲ್ಲಿ ಬರ್ಟ್ರಾನ್ಡ್ ರಸಲ್ ಆಲಿಸ್ ಎಂಬವಳನ್ನು ತನ್ನ ಅಜ್ಜಿಯ ಇಚ್ಛೆಗೆ ವಿರೋಧವಾಗಿ ಪ್ರೇಮ ವಿವಾಹವಾದನು. ಆದರೆ ಅವರ ಸಾಂಸಾರಿಕ ಜೀವನ ಸುಖಕರವಾಗಿರಲಿಲ್ಲ. ೧೯೨೧ರಲ್ಲಿ ವಿಛ್ಛೇಧನ ಪಡೆದರು.

ವೃತ್ತಿ ಜೀವನ[ಬದಲಾಯಿಸಿ]

೧೮೯೬ರಲ್ಲಿ ರಸಲ್ ಜರ್ಮನ್ ಸೋಶಿಯಲ್ ಡೆಮೊಕ್ರಸಿ ಎಂಬ ಗ್ರಂಥವನ್ನು ಬರೆದ. ೧೮೯೬ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಜರ್ಮ್‌ನ್ ಸೋಶಿಯಲ್ ಡೆಮೋಗ್ರಸಿಯ ವಿಷಯವಾಗಿ ಹೇಳಿಕೊಟ್ಟ. ೧೮೯೮ರಲ್ಲಿ ಆನ್ ಎಸ್ಸೆ ಆನ್ ದ ಫೌಂಡೇಶನ್ಸ್ ಆಫ್ ಜಾಮೆಟ್ರಿ ಎಂಬ ಹೆಮ್ಮೆಯ ಪ್ರಬಂಧವನ್ನು ರಚಿಸಿದನು. ೧೯೦೦ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಅಂತರಾಷ್ಟ್ರೀಯ ತತ್ವಶಾಸ್ತ್ರ ಕಾಂಗ್ರೆಸ್‌ನಲ್ಲಿ ಭಾಗವಹಿಸಿದನು. ಅಲ್ಲಿ ಅವನಿಗೆ ವಿಶ್ವವಿಖ್ಯಾತ ತತ್ವಶಾಸ್ತ್ರಗ್ನರ ಪರಿಚಯ ಹಾಗೂ ಸ್ನೇಹವಾಯಿತು. ೧೯೦೩ರಲ್ಲಿ ದ ಪ್ರಿನ್ಸಿಪಲ್ಸ್ ಆಫ್ ಮ್ಯಾತಮೆಟಿಕ್ಸ್ ಎಂಬ ಗ್ರಂಥವನ್ನು ಬರೆದರು. ೧೯೦೫ರಲ್ಲಿ ಆನ್ ಡಿನೋಟಿಂಗ್ ಎಂಬ ಪ್ರಸಿದ್ಧ ಪ್ರಬಂಧವನ್ನು ಮಂಡಿಸಿದನು. ೧೯೦೮ರಲ್ಲಿ ಪ್ರತಿಷ್ಟಿತ ಲಂಡನಿನ ರಾಯಲ್ ಸೊಸೈಟಿಯಲ್ಲಿ ಫೆಲೋಶಿಪ್‌ಗಳಿಸಿದನು. ೧೯೧೦ರಿಂದ ೧೯೧೩ರ ಸಮಯದಲ್ಲಿ ವೈಟ್ ಹೆಡ್ ಎಂಬ ಪ್ರಸಿದ್ಧ ಗಣಿತಜ್ಞನ ಜೊತೆಗೂಡಿ ಪ್ರಿನ್ಸಿಪಿಯ ಮ್ಯಾಥಮ್ಯಾಟಿಕ ಎಂಬ ಗ್ರಂಥವನ್ನು ಬರೆದನು. ಈ ಗ್ರಂಥ ಅವರಿಗೆ ವಿಶ್ವಮನ್ನಣೆ ತಂದು ಕೊಟ್ಟಿತು. ೧೯೧೦ರಲ್ಲಿ ಪ್ರತಿಷ್ಟಿತ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ನೇಮಕಗೊಂಡನು. ಅಲ್ಲಿ ಲುದ್ವಿಗ್ ವಿಟ್‌ಗೇನ್‌ಸ್ಟೇನ್ ಇವನ ಅಡಿಯಲ್ಲಿ ಪಿ.ಎಚ್.ಡಿ ವ್ಯಾಸಂಗ ಮಾಡಿದನು. ನಂತರ ಲುದ್ವಿಗ್ ವಿಟ್‌ಗೇನ್‌ಸ್ಟೇನ್ ವಿಶ್ವವಿಖ್ಯಾತ ತತ್ವಜ್ಞ ಹಾಗೂ ಗಣಿತ ಶಾಸ್ತ್ರಜ್ಞನಾದನು.

ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ರಸಲ್ ಆಸ್ಟ್ರಿಯಾ ದೇಶದ ಸೈನ್ಯದಲ್ಲಿ ಕಾರ್ಯನಿರ್ವಹಿಸಿದರು. ಇದೆ ಕಾರಣದಿಂದಾಗಿ ಅವನನ್ನು ಕೇಂಬ್ರಿಡ್ಜ್ ನಿಂದ ಉಚ್ಚಾಟಿಸಿದರು. ೧೯೧೭ರಲ್ಲಿ ಲೀಡ್‌ಸ್ ಕನ್ವೆಂಷನ್ ನಡೆಸುವಲ್ಲಿ ರಸಲ್ ಪ್ರಮುಖ ಪಾತ್ರ ವಹಿಸಿದ್ದರು. ಲೀಡ್ಸ್ ಕನ್ವೆಂಶನ್ ನಡೆಸುವಲ್ಲಿ ರಸಲ್ ಪ್ರಮುಖ ಪಾತ್ರ ವಹಿಸಿದ್ದರು. ಲೀಡ್ಸ್ ಕನ್ವೆಂಷನ್ ಶಾಂತಿಯುತ ಸಮಾಜವಾದಿಗಳ ಒಂದು ಬೃಹತ್ ಸಮ್ಮೇಳನವಾಗಿತ್ತು. ಅಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಬಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂಭಂದವಾಗಿ ಬರ್ಟ್ರಾನ್ಡ್ ರಸ್ಸೆಲ್‌ಗೆ ಇಂಗ್ಲೆಂಡ್ ನ್ಯಾಯಾಲಯ ನೂರು ಯೂರೋಗಳ ದಂಡ ವಹಿಸಿತು. ಆದರೆ ಬರ್ಟ್ರಾನ್ಡ್ ರಸ್ಸೆಲ್ ಆ ದಂಡವನ್ನು ತೆತ್ತಲಿಲ್ಲ. ದಂಡವನ್ನು ತೆತ್ತುವುದರ ಬದಲು ಕಾರಾಗೃಹವಾಸವನ್ನು ಒಪ್ಪಿಕೊಂಡ. ಆದರೆ ಈ ಯೋಜನೆಗೆ ಸಹಕಾರಿಯಾಗಲಿಲ್ಲ. ಆಗ ತಾನು ಬರೆದ ಪುಸ್ತಕಗಳನ್ನು ಹರಾಜು ಹಾಕಿದ. ಒಳ್ಳೆಯ ವ್ಯಾಪಾರ ನಡೆಯಿತು. ಹೀಗೆ ಸಂಗ್ರಹವಾದ ದುಡ್ಡಿನಲ್ಲಿ ದಂಡವನ್ನು ಕಟ್ಟಿದನು. ನಂತರ ಅವನ ಪುಸ್ತಕವನ್ನು ಕಿಂಗ್ ಜೇಮ್ಸ್ ಬಯಿಬಲ್‌ನ ಪ್ರತಿಗಳನ್ನು ಕೇಂಬ್ರಿಡ್ಜ್ ಪೋಲೀಸರು ವಶಪಡಿಸಿಕೊಂಡರು. ೧೯೨೪ರ ಹೊತ್ತಿಗೆ ರಾಜಕೀಯವಾಗಿ ಕ್ರಿಯಾಶೀಲಗೊಂಡನು.

ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ಅಮೇರಿಕ ಬ್ರಿಟನ್‌ಗೆ ಸಹಾಯ ಮಾಡಿದಾಗ ಅದನ್ನು ವಿರೋಧಿಸಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದನು. ಕಾರಾಗೃಹದಲ್ಲಿ ಮ್ಯಾತಮ್ಯಾಟಿಕಲ್ ಫಿಲೋಸಫಿ ಎಂಬ ಗ್ರಂಥವನ್ನು ಬರೆದನು. ೧೯೨೦ರಲ್ಲಿ ಬ್ರಿಟನ್ ಸರ್ಕಾರ ರಷ್ಯ ಕ್ರಾಂತಿಯ ಪರಿಣಾಮವನ್ನು ತನಿಖೆ ಮಾಡಲು ಬ್ರಿಟನ್ ಸರ್ಕಾರ ಕಲಿಸಿದ ನಿಯೋಗದಲ್ಲಿ ಸದಸ್ಯನಾಗಿದ್ದನು. ಅಲ್ಲಿಂದ ಬಂದ ನಂತರ ದ ಪ್ರಾಕ್ಟೀಸ್ ಆಂಡ್ ಥಿಯರಿ ಆಫ್ ಬೋಲ್ ಶ್ವಿಸ್ಮ್ ಎಂಬ ಗ್ರಂಥವನ್ನು ಬರೆದನು. ಅದು ಅವನ ರಷ್ಯಾದ ಅನುಭವಗಳಾಗಿದ್ದವು.

ಆಲಿಸ್‌ಗೆ ವಿಚ್ಚೇದನ ಕೊಟ್ಟಿ ಕೇವಲ ಆರು ದಿನಗಳಲ್ಲಿ ಡೋರ ಬ್ಲಾಕ್ ಎಂಬುವವಳನ್ನು ವಿವಾಹವಾದನು. ಡೋರ ಬ್ಲಾಕ್ ಅವಳನ್ನು ಮದುವೆಯಾದ ನಂತರ ೧೯೨೭ರಲ್ಲಿ ಡೋರಳೊಡನೆ ಸೇರಿ ಬೇಕಾನ್ ಹಿಲ್ ಸ್ಕೂಲ್ ಎಂಬ ಶಾಲೆಯನ್ನು ಸ್ಥಾಪಿಸಿದನು. ೧೯೩೦ರಲ್ಲಿ ಅವನಿಗೆ ಡೋರಾಳಿಂದ ಹಾರಿಯಟ್ ರೂಥ್ ಎಂಬ ಮಗು ಜನನವಾಯಿತು. ೧೯೯೨ರ ಹೊತ್ತಿಗೆ ತನ್ನ ಎರಡನೆ ಹೆಂಡತಿ ಡೋರ ಬ್ಲಾಕ್‌ಗೆ ವಿಚ್ಚೇದನ ಕೊಟ್ಟನು. ಪ್ಯಾಟ್ರಿಕ್ ಸ್ಪೆನ್ಸ್‌ಳನ್ನು ಮದುವೆಯಾದನು. ಕಾರ್ನಾಡ್ ಸೆಬಾಸ್ಟಿಯನ್ ರಾಬರ್ಟ್ ರಸ್ಸೆಲ್ ಎಂಬ ಮಗ ಹುಟ್ಟಿದನು. ಅವನ ಮುಂದೆ ಲಿಬ್ರಲ್ ಡೆಮೋಕ್ರಾಟ್ ಪಾರ್ಟಿಯ ಮುಖ್ಯಸ್ಥನಾದನು.

ಎರಡನೆ ವಿಶ್ವಯುದ್ಧದ ಸಮಯದಲ್ಲಿ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಪ್ರಾದ್ಯಾಪಕನಾದನು. ಸೈದ್ದಾಂತಿಕ ವಿಚಾರವಾಗಿ ಅವನನ್ನು ಪ್ರಾದ್ಯಾಪಕ ವೃತ್ತಿಯಿಂದ ಮುಕ್ತಿಗೊಳಿಸಲಾಗಿತ್ತು. ಆಗ ಇವನ ಪರವಾಗಿ ಅಲ್ಬ್‌ರ್ಟ್ ಐನ್‌ಸ್ಟೀನ್ ಕೂಡ ಧ್ವನಿ ಎತ್ತಿದನು. ನಂತರ ಹಲವಾರು ಕಡೆ ಭಾಷಣವನ್ನು ಕೊಡುತ್ತ ಜೀವನ ನಿರ್ವಹಹಿಸಿದರು. ಮುಂದೆ ಆ ಭಾಷಣಗಳ ಸಂಗ್ರಹವೇ ಅವನ ಪ್ರಸಿದ್ಧ "ಅ ಹಿಸ್ಟ್ರಿ ಆಫ್ ವೆಸ್‌ಟ್ರ್ ಫಿಲಾಸಫಿ ಕೃತಿಯಾಯಿತು. ಎರಡನೆ ವಿಶ್ವಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನನ್ನು ಕಟುವಾಗಿ ಟೀಕಿಸಿದನು. ಹಿಟ್ಲರ್‌ನಂಥವನು ಮಾನವ ಕುಲಕ್ಕೆ ಮಾರಕ ಎಂದು ಸಾರಿದನು. ಪ್ರಪಂಚಕ್ಕೆ ಶಾಂತಿ ಸಂದೇಶ ಸಾರಿದನು. ಹೀಗೆ ತನ್ನನ್ನು ತಾನು ಶಾಂತಿಮಾತ ಎಂದು ಬಿಂಬಿಸಿಕೊಂಡನು. ಅವನ ಎಲ್ಲಾ ಜೀವನದ ಜಂಜಾಟಗಳ ನಡುವೆ ಚೈನಾಗೆ ಭೇಟಿ ಕೊಟ್ಟನು. ಅಲ್ಲಿ ಅವನಿಗೆ ಸ್ವಲ್ಪ ಮನಃಶಾಂತಿದಕ್ಕಿತು. ಅವನಿಗೆ ಚೈನಾ ಬಿಡುವುದರೊಳಗೆ ಶ್ವಾಸಕೋಶದ ಉರಿಯೂತ ರೋಗದಿಂದ ಬಳಲಿದನು. ಅದೇ ಸಮಯದಲ್ಲಿ ಕೆಲವು ಜಪಾನ್ ಪತ್ರಿಕೆಗಳು ರಸ್ಸೆಲ್ ಸಾವನ್ನೊಪ್ಪಿದನು ಎಂದು ಸುಳ್ಳು ವಾರ್ತೆಯನ್ನು ಬತ್ತಿರಿಸಿದವು. ೧೯೪೪ರಲ್ಲಿ ಪುನಃಟ್ರಿನಿಟಿ ಕಾಲೇಜಿನಲ್ಲಿ ಪ್ರಾದ್ಯಾಪಕನಾದನು.

ನಂತರದ ದಿನಗಳು[ಬದಲಾಯಿಸಿ]

೧೯೪೦-೫೦ ದಶಕದಲ್ಲಿ ಬಿ.ಬಿ.ಸಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದನು. ೧೯೪೯ರಲ್ಲಿ ರಸಲ್‌ಗೆ ಆರ್‌ಡ್ರ್ ಆಫ್ ಮೆರಿಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತು. ೧೯೫೦ರಲ್ಲಿ ಅವನಿಗೆ ಸಾಹಿತ್ಯಕ್ಕಾಗಿ ಪ್ರತಿಷ್ಟಿತ ನೋಬೆಲ್ ಪ್ರಶಸ್ತಿ ದೊರಕಿತು. ೧೯೫೨ರಲ್ಲಿ ತನ್ನ ಮೂರನೆ ಹೆಂಡತಿಯಾದ ಪ್ಯಾಟ್ರಿಕ್ ಸ್ಪೆನ್ಸ್‌ಗೆ ವಿಚ್ಚೇದನ ಕೊಟ್ಟನು. ೧೯೫೨ರಲ್ಲಿ ಎಡಿತ್ ಫಿಂಚ್‌ಳನ್ನು ಮದುವೆಯಾದನು. ೧೯೬೧ರಲ್ಲಿ ತನ್ನ ೮೯ನೆ ವಯಸ್ಸಿನಲ್ಲಿ ಅವನನ್ನು ೭ ದಿನಗಳ ಕಾಲ ಕಾಲಾಗೃಹಕ್ಕೆ ಕಳಿಸಲಾಯಿತು. ಪರಮಾಣು ವಿರೊಧಿ ನೀತಿ ಇದಕ್ಕೆ ಕಾರಣವಾಗಿತ್ತು. ೧೯೬೨ರಲ್ಲಿ ಬರ್ಟ್ರಾನ್ಡ್ ರಸ್ಸೆಲ್ ಮಿಸ್‌ಸೈಲ್ ಕ್ರೈಸಿಸ್ ಸಂದರ್ಭದಲ್ಲಿ ಅಮೇರಿಕ ಹಾಗು ಯು.ಎಸ್.ಎಸ್.ಆರ್. ನಡುವೆ ಒಂದು ರೀತಿಯ ಸಂಧಾನಕಾರನಾಗಿ ಕಾರ್ಯ ನಿರ್ವಹಿಸಿದರು. ಅಮೇರಿಕ ಅಧ್ಯಕ್ಷರಾದ ಜಾನ್ ಎಫ್. ಕೆನ್ನಡಿಗೆ ಯು.ಎಸ್.ಎಸ್.ಆರ್ ನಾಯಕ ನಿಖಿತ ಕೃಶೇವ್ ಕಳುಹಿಸಿದ ಸಂದೇಶವನ್ನು ರವಾನಿಸಿದರು. ಅದು ಶೀತಲ ಸಮರದ ಕಾಲ. ಆಗಾಗಿ ಯು.ಎಸ್.ಎಸ್.ಆರ್ ನಡುವಿನ ಬೆಸುಗೆಗೆ ಪ್ರಯತ್ನ ಪಟ್ಟರು.

ವಿಯೆಟ್‌ನಾಮ್ ಯುದ್ಧದ ಸಂದರ್ಭದಲ್ಲಿಯೂ ಸಹ ಶಾಂತಿಯನ್ನು ಕಾಪಾಡಲು ಹಾಗೂ ಯುದ್ದವನ್ನು ತಡೆಯಲು ಅದನ್ನು ವಿರೋಧಿಸುತ್ತಾ ಬಂದರು. ೧೯೪೮ರ ಒಂದು ಭಾಷಣದಲ್ಲಿ ಯು.ಎಸ್.ಎಸ್.ಆರ್ ನವರು ಇದೇ ರೀತಿ ಕಾರ್ಯವನ್ನು ಮುಂದುವರೆಸಿದರೆ ಅವರ ವಿರುದ್ಧ ಇತರ ದೇಶಗಳು ಅಕ್ರಮಣ ಮಾಡುವುದು ತರವಲ್ಲ ಏಕೆಂದರೆ ಬೇರೆ ದೇಶದ ಬಳಿ ಅಣುಬಾಂಬ್ ಇದೆ ಆದರೆ ಯು. ಎಸ್. ಎಸ್. ಆರ್ ಬಳಿ ಇಲ್ಲ. ಹೀಗಾಗಿ ಅಣುಬಾಂಬ್ ಹೊಂದಿರುವ ದೇಶಗಳು ಹೆಚ್ಚಾಗಿ ಶಾಂತಿಯ ವಿರುದ್ಧ ಹೋಗಬಾರದು.

ಬರ್ಟ್ರಾನ್ಡ್ ರಸ್ಸೆಲ್ ಬಿರುದುಗಳು[ಬದಲಾಯಿಸಿ]

ಹುಟ್ಟಿನಿಂದ ೧೯೦೮ ರ ತನಕ - ದ ಹಾನರೆಬಲ್ ಬರ್ಟಾನ್ಡ್ ಆರ್ಥರ್ ರಸ್ಸೆಲ್.

೧೯೦೮ರಿಂದ ೧೯೩೧ತನಕ - ದ ಹಾನರೆಬಲ್ ಬರ್ಟ್ರಾನ್ಡ್ ಆರ್ಥರ್ ರಸ್ಸೆಲ್, ಎಫ್ ಆರ್ ಎಸ್

೧೯೩೧ರಿಂದ ೧೯೪೯ ತನಕ - ದ ರೈಟ್ ಹಾನರೆಬಲ್ ದ ಅರ್ಲ್ ರಸ್ಸೆಲ್, ಎಫ್ ಆರ್ ಎಸ್

೧೯೪೯ರಿಂದ ಸಾವಿನತನಕ - ದ ರೈಟ್ ಹಾನರೆಬಲ್ ದ ಅರ್ಲ್ ರಸ್ಸೆಲ್, ಒಎಮ್, ಎಫ್ ಆರ್ ಎಸ್

ಅವನ ಕೆಲವು ಕೃತಿಗಳು[ಬದಲಾಯಿಸಿ]

೧. ಅ ಕ್ರಿಟಿಕಲ್ ಎಕ್ಸ್‌ಪೊಜಿಷನ್ ಆಫ್ ದ ಫಿಲಾಸಫಿ ಆಫ್ ಲೆಬ್ನೀಸ್

೨. ಅ ಹಿಸ್ಟ್ರಿ ಆಫ್ ವೆಸ್ಟ್‌ರ್ನ್ ಫಿಲಾಸಫಿ

೩. ಎ. ಬಿ. ಸಿ ಆಫ್ ರಿಲೇಟಿವಿಟಿ

೪. ಆನ್ ಎನ್ಕ್‌ವೈರಿ ಇನ್ಟು ಮೀನೆಂಗ್ ಅನ್ಡ್ ಟ್ರುಥ್

೫. ಆನ್ ಔಟ್ಲೈನ್ ಆಫ್ ಫಿಲೋಸಫಿ

೬. ಅಥೋರಿಟಿ ಆನ್ಡ್ ದ ಇನ್ಡಿವಿಜ್ಯುಲ್

೭. ಬೋಶ್ವಿಸ್ಮ್

೮. ಎಜುಕೇಶನ್ ಅನ್ಡ್ ದ ಗುಡ್ ಲೈಫ್

೯. ಫ್ರೀ ಮ್ಯಾನ್ಸ್ ವರ್ಶಿಪ್

೧೦. ಹೌ ಟು ಬಿ ಅನ್ಡ್ ಹ್ಯಾಪಿ

ಇವುಗಳನ್ನು ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Monmouthshire's Welsh status was ambiguous at this time.
  2. Ronald Jager (2002). The Development of Bertrand Russell's Philosophy, Volume 11. Psychology Press. pp. 113–114. ISBN 9780415295451.
  3. Nicholas Griffin, ed. (2003). The Cambridge Companion to Bertrand Russell. Cambridge University Press. p. 85. ISBN 9780521636346.
  4. Roberts, George W. (2013). Bertrand Russell Memorial Volume. Routledge. ISBN 9781317833024.
  5. Rosalind Carey, John Ongley (2009). Historical Dictionary of Bertrand Russell's Philosophy. Scarecrow Press. ISBN 9780810862920.
  6. Ilkka Niiniluoto (2003). Thomas Bonk (ed.). Language, Truth and Knowledge: Contributions to the Philosophy of Rudolf Carnap. Springer. p. 2. ISBN 9781402012068.
  7. Wolfgang Händler, Dieter Haupt, Rolf Jelitsch, Wilfried Juling, Otto Lange (1986). CONPAR 1986. Springer. p. 15. ISBN 9783540168119.{{cite book}}: CS1 maint: multiple names: authors list (link)
  8. Hao Wang (1990). Reflections on Kurt Gödel. MIT Press. p. 305. ISBN 9780262730877.
  9. Phil Parvin (2013). Karl Popper. C. Black. ISBN 9781623567330.
  10. Roger F. Gibson, ed. (2004). The Cambridge Companion to Quine. Cambridge University Press. p. 2. ISBN 9780521639491.
  11. Robert F. Barsky (1998). Noam Chomsky: A Life of Dissent. MIT Press. p. 32. ISBN 9780262522557.
  12. François Cusset (2008). French Theory: How Foucault, Derrida, Deleuze, & Co. Transformed the Intellectual Life of the United States. U of Minnesota Press. p. 97. ISBN 9780816647323.
  13. Alan Berger, ed. (2011). Saul Kripke. Cambridge University Press. ISBN 9781139500661.
  14. Dov M. Gabbay, Paul Thagard, John Woods, Theo A.F. Kuipers (2007). "The Logical Approach of the Vienna Circle and their Followers from the 1920s to the 1950s". General Philosophy of Science: Focal Issues: Focal Issues. Elsevier. p. 432. ISBN 9780080548548.{{cite book}}: CS1 maint: multiple names: authors list (link)
  15. Dermot Moran (2012). Husserl's Crisis of the European Sciences and Transcendental Phenomenology: An Introduction. Cambridge University Press. p. 204. ISBN 9780521895361.
  16. Grattan-Guinness. "Russell and G.H. Hardy: A study of their Relationship". McMaster University Library Press. Archived from the original on 4 ಜನವರಿ 2014. Retrieved 3 January 2014.
  17. Douglas Patterson (2012). Alfred Tarski: Philosophy of Language and Logic. Palgrave Macmillan. ISBN 9780230367227.
  18. Rosalind Carey, John Ongley (2009). Historical Dictionary of Bertrand Russell's Philosophy. Scarecrow Press. pp. 15–16. ISBN 9780810862920.
  19. Ray Monk (2013). Robert Oppenheimer: A Life Inside the Center. Random House LLC. ISBN 9780385504133.
  20. Anita Burdman Feferman, Solomon Feferman (2004). Alfred Tarski: Life and Logic. Cambridge University Press. p. 67. ISBN 9780521802406.
  21. Andrew Hodges (2012). Alan Turing: The Enigma. Princeton University Press. p. 81. ISBN 9780691155647.
  22. Jacob Bronowski (2008). The Origins of Knowledge and Imagination. Yale University Press. ISBN 9780300157185.
  23. Nicholas Griffin, Dale Jacquette, ed. (2008). Russell vs. Meinong: The Legacy of "On Denoting". Taylor & Francis. p. 4. ISBN 9780203888025.
  24. Sankar Ghose (1993). "V: Europe Revisited". Jawaharlal Nehru, a Biography. Allied Publishers. p. 46. ISBN 9788170233695.
  25. "Street-Fighting Years: An Autobiography of the Sixties". Verso. p. 2005. Archived from the original on 2013-12-09. Retrieved 2015-08-29.
  26. Michael Albert (2011). Remembering Tomorrow: From SDS to Life After Capitalism: A Memoir. Seven Stories Press. ISBN 9781609800017.
  27. Jon Lee Anderson (1997). Che Guevara: A Revolutionary Life. Grove Press. p. 38. ISBN 9780802197252.
  28. Marc Joseph (2004). "1: Introduction: Davidson's Philosophical Project". Donald Davidson. McGill-Queen's Press – MQUP. p. 1. ISBN 9780773527812.
  29. James A. Marcum (2005). "1: Who is Thomas Kuhn?". Thomas Kuhn's Revolution: An Historical Philosophy of Science. Continuum. p. 5. ISBN 9781847141941.
  30. Nathan Salmon (2007). "Introduction to Volume II". Content, Cognition, and Communication : Philosophical Papers II: Philosophical Papers II. Oxford University Press. p. xi. ISBN 9780191536106.
  31. Christopher Hitchens, ed. (2007). The Portable Atheist: Essential Readings for the Nonbeliever. Da Capo Press. ISBN 9780306816086.
  32. Gregory Landini (2010). Russell. Routledge. p. 444. ISBN 9780203846490.
  33. Carl Sagan (2006). Ann Druyan (ed.). The Varieties of Scientific Experience: A Personal View of the Search for God. Penguin. ISBN 9781594201073.
  34. George Crowder (2004). Isaiah Berlin: Liberty, Pluralism and Liberalism. Polity. p. 15. ISBN 9780745624778.
  35. Elsie Jones-Smith (2011). Theories of Counseling and Psychotherapy: An Integrative Approach: An Integrative Approach. SAGE. p. 142. ISBN 9781412910040.
  36. "Interview with Martin Gardner" (PDF). American Mathematical Society. June–July 2005. p. 603. Retrieved 5 January 2014.
  37. Peter S Williams (2013). S Lewis Vs The New Atheists. Authentic Media Inc. ISBN 9781780780931.
  38. Loretta Lorance, Richard Buckminster Fuller (2009). Becoming Bucky Fuller. MIT Press. p. 72. ISBN 9780262123020.
  39. Dr. K. Sohail (February 2000). "How Difficult it is to Help People Change their Thinking – Interview with Dr. Pervez Hoodbhoy". Archived from the original on 16 ಜುಲೈ 2012. Retrieved 31 December 2013.
  40. Bradley W. Bateman, Toshiaki Hirai, Maria Cristina Marcuzzo, ed. (2010). The Return to Keynes. Harvard University Press. p. 146. ISBN 9780674053540.{{cite book}}: CS1 maint: multiple names: editors list (link)
  41. Isaac Asimov (2009). I.Asimov: A Memoir. Random House LLC. ISBN 9780307573537.
  42. Paul Kurtz (1994). Vern L. Bullough, Tim Madigan (ed.). Toward a New Enlightenment: The Philosophy of Paul Kurtz. Transaction Publishers. p. 233. ISBN 9781412840170.
  43. John P. Anderson (2000). Finding Joy in Joyce: A Readers Guide to Ulysses. Universal-Publishers. p. 580. ISBN 9781581127621.
  44. Paul Lee Thomas (2006). Reading, Learning, Teaching Kurt Vonnegut. Peter Lang. p. 46. ISBN 9780820463377.
  45. Gregory L. Ulmer (2005). Electronic Monuments. U of Minnesota Press. p. 180. ISBN 9780816645831.
  46. Paul J. Nahin (2011). "9". Number-Crunching: Taming Unruly Computational Problems from Mathematical Physics to Science Fiction. Princeton University Press. p. 332. ISBN 9781400839582.
  47. Mie Augier, Herbert Alexander Simon, James G. March, ed. (2004). Models of a Man: Essays in Memory of Herbert A. Simon. MIT Press. p. 21. ISBN 9780262012089.{{cite book}}: CS1 maint: multiple names: editors list (link)
  48. William O'Donohue, Kyle E. Ferguson (2001). The Psychology of B F Skinner. SAGE. p. 19. ISBN 9780761917595.
  49. Gustavo Faigenbaum (2001). Conversations with John Searle. LibrosEnRed.com. p. 28. ISBN 9789871022113.
  50. William M. Brinton, Alan Rinzler, ed. (1990). Without Force Or Lies: Voices from the Revolution of Central Europe in 1989–90. Mercury House. p. 37. ISBN 9780916515928.
  51. David Wilkinson (2001). God, Time and Stephen Hawking. Kregel Publications. p. 18. ISBN 9780825460296.
  52. Reiner Braun, Robert Hinde, David Krieger, Harold Kroto, Sally Milne, ed. (2007). Joseph Rotblat: Visionary for Peace. John Wiley & Sons. ISBN 9783527611270.{{cite book}}: CS1 maint: multiple names: editors list (link)
  53. Ned Curthoys, Debjani Ganguly, ed. (2007). Edward Said: The Legacy of a Public Intellectual. Academic Monographs. p. 27. ISBN 9780522853575.
  54. Azurmendi, Joxe (1999): Txillardegiren saioa: hastapenen bila, Jakin, 114: pp 17–45. ISSN 0211-495X

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Other writings available online[ಬದಲಾಯಿಸಿ]

Audio[ಬದಲಾಯಿಸಿ]