ನೀಲಕಂಠ ಗೌಡ
ಗೋಚರ
ಕೊಪ್ಪಳ ಸಮೀಪದ ಬನಾಪುರದಲ್ಲಿ ಕೃಷಿಕ ಕುಟುಂಬದಲ್ಲಿ ಜನಸಿದ ನೀಲಕಂಠಗೌಡ, ಕಾಲೇಜು ತೊರೆದು ಮುಂಡರಗಿ ಶಿಬಿರ ಸೇರಿ ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡವರು. ಇದರಿಂದ ಕುಪಿತಗೊಂಡ ನಿಜಾಂ ಸರ್ಕಾರ ಮತ್ತು ರಜಾಕಾರರು, ಇವರ ಕುಟುಂಬದವರಿಗೆ ನಾನಾ ರೀತಿಯ ಕಿರುಕುಳ ನೀಡಿದರು.
ಹೈದರಾಬಾದು ಸಂಸ್ಥಾನ ವಿಮೋಚನೆಯಾದ ನಂತರ ಮತ್ತೆ ಕಾಲೇಜು ಶಿಕ್ಷಣ ಮುಂದುವರಿಸಿದ ಇವರು, ಕರ್ನಾಟಕ ಏಕೀಕರಣವಾದ ನಂತರ ಕರ್ನಾಟಕ ಸರ್ಕಾರದಲ್ಲಿ ನೌಕರಿ ಪಡೆದರು. ಪ್ರಾಮಾಣಿಕ, ಅಧಿಕಾರಿಯಂದು ಹೆಸರು ಪಡೆದ ಇವರು, ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದಾಗ, ಹಲವಾರು ಜನಪರ ಯೋಜನೆಗಳನ್ನು ಕೈಗೊಂಡರು. ಬೆಂಗಳೂರಿನ ಜಯನಗರದಲ್ಲಿರುವ ವಿಶಾಲ ಉದ್ಯಾನವನಗಳು ಭೂಗಳ್ಳರ ಪಾಲಾಗದೆ, ಜನರಿಗೆ ದೊರೆಯುವಂತೆ ಮಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
ನಿವೃತ್ತ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಇವರು, ವರ್ಷ 2001ರಲ್ಲಿ ನಿಧನರಾದರು.