ವಿಷಯಕ್ಕೆ ಹೋಗು

ಬಲದೇವ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1948ರಲ್ಲಿ ಸರ್ದಾರ್ ಬಲದೇವ್ ಸಿಂಗ್ ಹಾಗೂ ಭಾರತೀಯ ಸೇನೆಯ ಮುಖ್ಯಸ್ಥರ ಜೊತೆಯಲ್ಲಿ ಭಾರತೀಯ ಅದಿಪತ್ಯದ ಗವರ್ನರ್ ಜನರಲ್ ಆದ ಸಿ. ರಾಜಗೋಪಾಲಾಚಾರಿ

ಬಲದೇವ್ ಸಿಂಗ್ ಅವರು ಭಾರತದ ಸಿಖ್ ಪಂಗಡಕ್ಕೆ ಸೇರಿದ ಒಬ್ಬ ರಾಜಕೀಯ ನಾಯಕರಾಗಿದ್ದರಲ್ಲದೇ, ಭಾರತೀಯ ಸ್ವತಂತ್ರ ಚಳವಳಿಯ ನಾಯಕರೂ ಆಗಿದ್ದರು. ಹಾಗೆಯೇ ಅವರು ಭಾರತದ ಮೊದಲ ರಕ್ಷಣಾ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಇದಕ್ಕಿಂತಲೂ ಹೆಚ್ಚಾಗಿ, ಸಂಧಾನ ಮಾತುಕತೆ ಪ್ರಕ್ರಿಯೆಯಲ್ಲಿ ಅವರು ಪಂಜಾಬಿ ಸಿಖ್ ಸಮುದಾಯವನ್ನು ಪ್ರತಿನಿಧಿಸಿದ್ದರಲ್ಲದೇ, ಇದು ಭಾರತ ಸ್ವಾತಂತ್ರ್ಯದಂತೆಯೇ, 1947ರಲ್ಲಿ ಭಾರತದ ವಿಭಜನೆಯ ಮೇಲೂ ಪರಿಣಾಮ ಬೀರಿತು.

ಸ್ವಾತಂತ್ರ್ಯಾನಂತರ, ಬಲದೇವ್ ಸಿಂಗ್ ಅವರನ್ನು ಭಾರತದ ಮೊದಲ ರಕ್ಷಣಾ ಸಚಿವರಾಗಿ ಆಯ್ಕೆ ಮಾಡಲಾಯಿತು ಮತ್ತು ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಕಾಶ್ಮೀರ ಯುದ್ಧದಲ್ಲಿ ತನ್ನ ಸೇವೆ ಸಲ್ಲಿಸಿದರು.

ಅವರನ್ನು ಆಗಾಗ ಸರ್ದಾರ್ ಎನ್ನುವ ಬಿರುದಿನಿಂದ ಕರೆಯಲಾಗುತ್ತಿತ್ತು, ಅಂದರೆ ಪಂಜಾಬಿ ಮತ್ತು ಹಿಂದಿಯಲ್ಲಿ ನಾಯಕ ಅಥವಾ ಮುಖ್ಯಸ್ಥ ಎನ್ನುವ ಅರ್ಥ ನೀಡುತ್ತದೆ.

ಪ್ರಾರಂಭಿಕ ಜೀವನ ಹಾಗೂ ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ಬಲದೇವ್ ಸಿಂಗ್ ಅವರು 1902 ಜುಲೈ 11ರಂದು ಪಂಜಾಬ್‌ನ ರೂಪಾರ್ ಜಿಲ್ಲೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಸಿಂಗ್ ಅವರು ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರಲ್ಲದೇ, ನಂತರ ಅವರು ತಮ್ಮ ತಂದೆಯ ಉಕ್ಕಿನ ಕಾರ್ಖಾನೆಯಲ್ಲಿ ತಮ್ಮ ನೌಕರಿಯನ್ನು ಮುಂದುವರೆಸಿದರು. ಅವರು ಆ ಕಾರ್ಖಾನೆಯ ನಿರ್ದೇಶಕ ಹುದ್ದೆಯವರೆಗೂ ಏರಿದರು.

ಬಲದೇವ್ ಸಿಂಗ್ ಅವರು ಭಾರತೀಯ ಸರ್ಕಾರಿ ಕಾಯ್ದೆ 1935ರ ಅಡಿಯಲ್ಲಿ 1937 ರಲ್ಲಿ ಪಂಜಾಬ್ ಪ್ರಾಂತೀಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪ್ಯಾಂಥಿಕ್ ಪಕ್ಷದ ಅಭ್ಯರ್ಥಿಯಾಗಿ ಜಯಗಳಿಸಿದರು.

ಅವರು ಶಿರೋಮಣಿ ಅಕಾಲಿ ದಳ ಮತ್ತು ಮಾಸ್ಟರ್ ತಾರಾ ಸಿಂಗ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದರು.

ಕ್ರಿಪ್ಸ್ ಸಮಿತಿ ಹಾಗೂ ವಿಶ್ವ ಸಮರ II

[ಬದಲಾಯಿಸಿ]

1942 ರಲ್ಲಿ ಭಾರತೀಯರಿಗೆ ಸ್ವ- ಅಧಿಕಾರ ನೀಡುವ ನಿಟ್ಟಿನಲ್ಲಿ, ಭಾರತಕ್ಕೆ ಬಂದ ಕ್ರಿಪ್ಸ್ ಸಮಿತಿ ಬಲದೇವ್ ಸಿಂಗ್ ಅವರನ್ನು ಸಿಖ್ ಸಮುದಾಯದ ಸಂಧಾನವನ್ನು ಪ್ರತಿನಿಧಿಸುವುದಕ್ಕಾಗಿ ಆಯ್ಕೆ ಮಾಡಿದರಲ್ಲದೇ, ಭಾರತೀಯ ರಾಷ್ಟ್ರೀಯ ಕಾಂಗ್ರೇಸಿನ ಪ್ರಮುಖ ಪಕ್ಷವಾದ ಭಾರತೀಯ ರಾಜಕೀಯ ಪಕ್ಷ ಮತ್ತು ಮುಸ್ಲಿಂ ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಪಕ್ಷದೊಂದಿಗೂ ಕೂಡ ಮಾತುಕತೆಗಾಗಿ ಇವರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು.

ಸಮಿತಿಯು ಯಾವುದೇ ಪ್ರಗತಿ ಕಾಣುವಲ್ಲಿ ವಿಫಲವಾಯಿತು.

ಕಾಂಗ್ರೆಸ್ ಪಕ್ಷವು ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಘೋಷಿಸಿದಾಗ, ಬಲದೇವ್ ಮತ್ತು ಇತರ ಸಿಖ್ ನಾಯಕರುಗಳು ಅದನ್ನು ಬೆಂಬಲಿಸಲಿಲ್ಲ. ಬಲದೇವ್ ಸಿಂಗ್ ಅವರು ಪಂಜಾಬ್‌ನಲ್ಲಿ ಸರ್ಕಾರ ರಚಿಸುವುದಕ್ಕಾಗಿ ಮುಸ್ಲಿಂ ಲೀಗ್ ಒಕ್ಕೂಟದ/ಯೂನಿಯನಿಸ್ಟ್ ನಾಯಕ ಸಿಖಂದರ್ ಹೈಯತ್ ಖಾನ್ ಅವರೊಂದಿಗೆ ಸಂಧಾನಕ್ಕೆ ಒಪ್ಪಂದ ಮಾಡಿಕೊಂಡರಲ್ಲದೇ, 1942ರಬೇಸಿಗೆಯ ಸಂಕ್ಷಿಪ್ತ ಅವಧಿಗಾಗಿ ಪ್ರಾಂತೀಯ ಅಭಿವೃದ್ಧಿ ಖಾತೆಯ ಸಚಿವರಾದರು.

ಕ್ಯಾಬಿನೆಟ್ ಸಮಿತಿ ಹಾಗೂ ಸರ್ಕಾರ

[ಬದಲಾಯಿಸಿ]

ಬಲದೇವ್ ಸಿಂಗ್ ಅವರು ಮತ್ತೊಮ್ಮೆ ಸಚಿವಸಂಪುಟ ಸಮಿತಿಯ ಯೋಜನೆಗಾಗಿ ಸಿಖ್ ಸಮುದಾಯದ ಪ್ರತಿನಿಧಿಯಾಗಿ ಆಯ್ಕೆಯಾದರಲ್ಲದೇ, ಈ ಸಮಿತಿಯು ಭಾರತೀಯ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಪ್ರಸ್ತಾವನೆಗಳ ಚರ್ಚೆಯನ್ನು ನಡೆಸಿತು. ಸಿಂಗ್ ಅವರು, ಭಾರತವು ತನ್ನ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ, ಒಂದು ಸಂಯುಕ್ತ ರಾಷ್ಟ್ರವಾಗಿ ಉಳಿಯಬೇಕೆಂಬ ಸಿಖ್ ಸಮುದಾಯದ ದೃಷ್ಟೀಕೋನವನ್ನು ಒತ್ತಿಹೇಳಿದರು. ಹಾಗೆಯೇ ಅವರು ವಿಭಜನೆಯು ಅನಿವಾರ್ಯ, ಪಂಜಾಬ್ ನ ವಿಭಜನೆಯು ಮುಸ್ಲಿಂ ಪ್ರಾಬಲ್ಯದಿಂದ ಸಿಖ್ ಸಮುದಾಯಕ್ಕೆ ಪ್ರಾದೇಶಿಕ ರಕ್ಷಣೆಯನ್ನು ನೀಡುವ ನಿಟ್ಟಿನಲ್ಲಿ ನಡೆಯಬೇಕು ಎಂದು ಒತ್ತಾಯಿಸಿದರು.

ಆದ್ದಾಗ್ಯೂ, ಸಿಖ್ ಸಮುದಾಯಕ್ಕೆ ಯಾವುದೇ ರಕ್ಷಣೆಯನ್ನು ಒದಗಿಸಿಲ್ಲ ಎಂಬುದಕ್ಕೆ ಸಂಬಂಧಿಸಿ ಬಲದೇವ್ ಸಿಂಗ್ ಮತ್ತು ಇತರ ಸಿಖ್ ನಾಯಕರು ಸಮಿತಿಯ ಮೇ 16 ಯೋಜನೆಗಳ ಅಳವಡಿಕೆಯನ್ನು ಪ್ರಾರಂಭದಲ್ಲಿಯೇ ವಿರೋಧಿಸಿದರು. ನಂತರ ಬಲದೇವ್ ಸಿಂಗ್ ಅವರು, ಕಾಂಗ್ರೆಸ್ ನಾಯಕರಾದ ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮುಂದಾಳುತ್ವದಲ್ಲಿರುವ ಹೊಸ ವೈಸ್ ರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್‌ಗೆ ಸಿಖ್ ಸದಸ್ಯರಾಗಿ ಸೇರ್ಪಡೆಯಾದರು.

ನಂತರ ಸಿಂಗ್ ಅವರು, ಭಾರತೀಯ ಭೂಸೇನೆಯಲ್ಲಿ ಹಿಂದೆ ಬ್ರಿಟೀಷ್ ಕಮಾಂಡರ್ ಇನ್ ಚೀಫ್ (ಸೇನಾ ಮುಖ್ಯಸ್ಥ) ಚೀಫ್‌ನ ನಂತರದ ಹುದ್ದೆಯಾದ ರಕ್ಷಣಾ ಸದಸ್ಯ ಹುದ್ದೆಯನ್ನು ಅಲಂಕರಿಸಿದರು. ಹಾಗಿದ್ದರೂ, 1947ರ ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಲೀಗ್‌ನ ನಡುವಿನ ಸಂಘರ್ಷದಿಂದಾಗಿ, ಈ ಹಂಗಾಮಿ ಸರ್ಕಾರವು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದು ಸ್ಪಷ್ಟವಾಯಿತು.

ಭಾರತದ ವಿಭಜನೆ

[ಬದಲಾಯಿಸಿ]

ಬಲದೇವ್ ಸಿಂಗ್ ಅವರು ಮತ್ತೊಮ್ಮೆ ಸಿಖ್ ಸಮುದಾಯವನ್ನು ಪ್ರತಿನಿಧಿಸಿದರಲ್ಲದೇ, ಈ ಅವಧಿಯಲ್ಲಿ ವಿಭಜನಾ ಮಂಡಳಿ, ವಿ ಪಿ ಮೆನನ್ ಮತ್ತು ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಅವರ ಯೋಜನೆಯ ಪ್ರಕಾರ, ಬ್ರಿಟಿಷ್ ಇಂಡಿಯಾವು ಬ್ರಿಟೀಷ್ ಸಾಮ್ರಾಜ್ಯ : ಭಾರತ] ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ಸ್ವ-ಆಡಳಿತ ನಡೆಸುವ ಪ್ರಾಂತ್ಯಗಳಾಗಿ ವಿಂಗಡಣೆಯಾಗಬೇಕೆಂದು ನಕ್ಷೆಯನ್ನು ರಚಿಸಿತು.

ಸಿಖ್ ಸಮುದಾಯದವರಿಗೆ ಈ ವಿಭಜನೆಯು ಭಾರತ ಮತ್ತು ಪಾಕಿಸ್ತಾನದಲ್ಲಿರುವ ಸಿಖ್ ಜನರನ್ನು ಒಂದು ಸಣ್ಣ ಅಲ್ಪಸಂಖ್ಯಾತ ಪಂಗಡವಾಗಿ ಬಿಟ್ಟುಹಾಕಬಹುದು ಎಂದು ಆತಂಕಗೊಂಡರಲ್ಲದೇ, ಹಿಂಸೆ ಮತ್ತು ಹಕ್ಕಿನಿಂದ ವಂಚಿತರಾಗುವ ಮೂಲಕ, ಅವರು ಇದಕ್ಕೆ ಬಲಿಯಾಗಬಹುದು ಎಂಬ ಆತಂಕಕ್ಕೊಳಗಾದರು. ಆದರೆ 1946-47 ರ ಹಿಂಸಾಚಾರದಲ್ಲಿ ಪಂಜಾಬ್ ನಲ್ಲಿ ಸಾವಿರಾರು ಜನರು ಕೊಲ್ಲಲ್ಪಟ್ಟರಲ್ಲದೇ, ಮುಸ್ಲಿಂ ಪ್ರಾಬಲ್ಯತೆಯೊಂದಿಗೆ ಸಹಬಾಳ್ವೆ ನಡೆಸುವುದಕ್ಕೆ ಸಿಖ್ ನಾಯಕರು ವಿರೋಧ ವ್ಯಕ್ತಪಡಿಸಿದರು ಮತ್ತು ಪ್ರಾಂತ್ಯಗಳನ್ನು ವಿಭಜಿಸಲು ಒಪ್ಪಿಕೊಂಡರು. ಭಾರತವು ತನ್ನ ಧಾರ್ಮಿಕ ಅಲ್ಪಸಂಖ್ಯಾತರನ್ನು ಜಾತ್ಯತೀತವಾಗಿ, ಸಂವಿಧಾನಬದ್ಧವಾಗಿ, ಮತ್ತು ಪ್ರಜಾಪ್ರಭುತ್ವ ಬದ್ಧವಾಗಿ ರಕ್ಷಿಸುವುದು ಎಂಬ ಕಾಂಗ್ರೆಸ್ ನಾಯಕರು ನೀಡಿದ ಆಶ್ವಾಸನೆಯಂತೆ, ಸಿಖ್ ಗಳು ವಿಭಜಿತ ಭಾರತವನ್ನು ಮರಳಿ ಪಡೆದರು.

ರಕ್ಷಣಾ ಮಂತ್ರಿಯಾಗಿ

[ಬದಲಾಯಿಸಿ]

1947 ರ ಆಗಸ್ಟ್ 15 ರಂದು ಭಾರತವು ಸ್ವತಂತ್ರ ದೇಶವಾಗಿ ಹೊರಹೊಮ್ಮಿತು ಮತ್ತು ಬಲದೇವ್ ಸಿಂಗ್ ಅವರು ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂರವರ ಆಡಳಿತದಲ್ಲಿ ಭಾರತದ ಮೊದಲ ರಕ್ಷಣಾ ಸಚಿವರಾದರು.

ಸಿಂಗ್ ಅವರು ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರೂ ಆಗಿದ್ದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಗೃಹ ಸಚಿವ ರವರೊಂದಿಗೆ ಸೇರಿ, ಸಿಂಗ್ ಅವರು ಭಾರತೀಯ ಭೂಸೇನೆ ಮುಂದಾಳತ್ವ ವಹಿಸಿಕೊಂಡರಲ್ಲದೇ , ಪಂಜಾಬ್ , ಪಶ್ಚಿಮ ಬಂಗಾಳ ಮತ್ತು ದೆಹಲಿಯ ರಾಜಧಾನಿಯಲ್ಲಿ ಸಂಭವಿಸಿದ ಕೋಮುಗಲಭೆಗಳನ್ನು ಹತ್ತಿಕ್ಕುವ ಪ್ರಯತ್ನಕ್ಕೂ ಕೂಡ ಕಾರಣಕರ್ತರಾದರು. ಹಾಗೆಯೇ ಹೊಸದಾಗಿ ರಚನೆಗೊಂಡ ಪಾಕಿಸ್ತಾನವನ್ನು ತೊರೆಯುತ್ತಿರುವ 10 ಮಿಲಿಯನ್‌ಗಿಂತಲೂ ಅಧಿಕ ಹಿಂದೂಗಳು ಮತ್ತು ಸಿಖ್ ಸಮುದಾಯದವರಿಗೆ ರಕ್ಷಣೆ, ಪರಿಹಾರ ಮತ್ತು ರಕ್ಷಣೆಯನ್ನು ಕೂಡ ಒದಗಿಸಿದರು.

ಪಂಜಾಬ್ ಮತ್ತು ಬಂಗಾಳದ ಗಡಿಭಾಗಗಳೆರಡರಲ್ಲೂ ಭೀಕರ ಸ್ವರೂಪದ ಹಿಂಸಾಚಾರ ಸಂಭವಿಸಿ, ಸುಮಾರು 1 ಮಿಲಿಯನ್ ಗಿಂತಲೂ ಅಧಿಕ ಜನರು ಕೊಲ್ಲಲ್ಪಟ್ಟಿರಬಹುದೆಂದು ಮತ್ತು ಮಿಲಿಯನ್ ಗಿಂತಲೂ ಅಧಿಕ ಜನರು ಕ್ರೂರ ಹಿಂಸೆಗೆ ಬಲಿಯಾಗಿ ಗಾಯಗೊಂಡಿರಬಹುದೆಂದು ಅಂದಾಜಿಸಲಾಗಿತ್ತು. ಹಾಗೆಯೇ, ಗಂಭೀರ ಸ್ವರೂಪದ ದೈಹಿಕ ಗಾಯ ಮತ್ತು ವಲಸೆಯಿಂದಾಗಿ ಅನೇಕ ಜನರು ಮಾನಸಿಕ ಆಘಾತಕ್ಕೊಳಗಾಗಿರಬಹುದೆಂದು ಅಂದಾಜಿಸಲಾಗಿತ್ತು.

ಸೇನೆಯು ಯಾವುದೇ ತರಬೇತಿಯನ್ನು ಹೊಂದಿರಲಿಲ್ಲ ಮತ್ತು ಅದು ಘರ್ಷಣೆಯಿಂದಾಗಿ ಹರಿದು ಛಿದ್ರವಾಗಿ ಹಂಚಿಹೋಗಿತ್ತು. ಸಾವಿರಾರು ಮುಸ್ಲಿಂ ಅಧಿಕಾರಿಗಳು ಭಾರತಕ್ಕಾಗಿ ತಮ್ಮ ಸೇವೆಯನ್ನು ಮಾಡುತ್ತಿದ್ದರೂ ಕೂಡ ತಮ್ಮ ರಕ್ಷಣೆಯ ಬಗ್ಗೆ ಭಯಪಟ್ಟು ಪಾಕೀಸ್ತಾನಕ್ಕೆ ಹೋಗುತ್ತಿದ್ದರು. ಪಾಕೀಸ್ತಾನದಲ್ಲಿ ಹಿಂದುಗಳನ್ನು ಮತ್ತು ಸಿಖ್ ರನ್ನು ಕೊಲ್ಲುವುದಕ್ಕೆ ಪ್ರತಿಯಾಗಿ ಭಾರತದಿಂದ ಪಾಕಿಸ್ತಾನಕ್ಕೆ ಹಿಂದಿರುಗುವ ಮುಸ್ಲಿಂರೊಂದಿಗೆ ಸಂಘರ್ಷ ನಡೆಸಿ ಹಿಂಸಾಕೃತ್ಯಕದಲ್ಲಿ ತೊಡಗುತ್ತಿದ್ದರು. ಕೊಲ್ಕತ್ತಾ, ದೆಹಲಿ ಮತ್ತು ಬಾಂಬೇಯಲ್ಲಿ ದಂಗೆಗಳೆದ್ದವು. ಭಾರೀ ಪ್ರಮಾಣದ ಜನಸಂಖ್ಯೆಯ ಹೊರತಾಗಿ, ವಲ್ಲಭಬಾಯಿ ಪಟೇಲ್ ಮತ್ತು ಬಲದೇವ್ ಸಿಂಗ್ ತಂಡದ ಮುಂದಾಳುತ್ವ ವಹಿಸಿದರಲ್ಲದೇ, ಅಂತಿಮವಾಗಿ ಸೇನೆಯು, ಭಾರತ ಮತ್ತು ಪಂಜಾಬ್ ಹಾಗೂ ಬಂಗಾಳದ ಗಡಿಭಾಗದಲ್ಲಿ ಕಾನೂನು ಪ್ರಕಾರವಾಗಿ ಶಾಂತಿ ಮತ್ತು ಪಾಲನೆಯನ್ನು ಕಾಪಾಡುವಂತೆ ಜನರಿಗೆ ಸೂಚಿಸಿತು. ಹಾಗೆಯೇ ಭಾರತಕ್ಕೆ ಆಗಮಿಸುವ ಮಿಲಿಯಗಟ್ಟಲೇ ಜನರಿಗೆ ಸಾಮೂಹಿಕ ಪರಿಹಾರ ಮತ್ತು ನೆರವು ನೀಡಲು ವ್ಯವಸ್ಥೆಯನ್ನು ಕಲ್ಪಿಸಿತು.

ರಕ್ಷಣಾ ಸಚಿವ ಸಿಂಗ್ ಕೂಡ ಕಾಶ್ಮೀರದಲ್ಲಿ ಯುದ್ಧ ಸಾರುವುದಕ್ಕಾಗಿ, ಸೂಕ್ತ ಯೋಜನೆ ಮತ್ತು ಸಿದ್ಧತೆಗಳನ್ನು ನಡೆಸುತ್ತಿದ್ದರಲ್ಲದೇ, ಅದು ಪಾಕೀಸ್ತಾನಿ ಬುಡಕಟ್ಟು ಜನರು ಮತ್ತು ಕೆಲವೊಂದು ಸೇನಾ ಅಧಿಕಾರಿಗಳ ನಡುವೆ ಅಸಮಾಧಾನಕ್ಕೆ ಕಾರಣವಾಯಿತ್ತಲ್ಲದೇ, ಈ ಸೇನಾ ಅಧಿಕಾರಿಗಳು ಕಾಶ್ಮೀರ ರಾಜ್ಯವನ್ನು ಪಾಕೀಸ್ತಾನಕ್ಕೆ ಸೇರ್ಪಡೆಗೊಳಿಸುವ ಉದ್ದೇಶದಿಂದ ಕಾಶ್ಮೀರದ ಮೇಲೆ ದಾಳಿ ನಡೆಸಿದರು. ಸರಿಸುಮಾರು ಎರಡು ವರ್ಷಗಳ ನಂತರ ಭಾರತೀಯ ಸೇನೆಯು ಉಗ್ರಗಾಮಿಗಳು ಮತ್ತು ಪಾಕೀಸ್ತಾನ ಸೇನೆಯೊಂದಿಗೆ ವಿಶ್ವದಲ್ಲಿಯೇ ಅತೀ ಎತ್ತರದ ಪ್ರದೇಶದಲ್ಲಿ ಯುದ್ಧ ಸಾರಿತು. ಸೇನೆಯು ಶ್ರೀನಗರ ಮತ್ತು ಬಾರಾಮುಲ್ಲಾ ಗಡಿಭಾಗದಲ್ಲಿನ ದಾಳಿಕೋರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಆದರೆ, ಸಂಯುಕ್ತ ರಾಷ್ಟ್ರ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ನೆಹರೂರವರ ಕದನ ವಿರಾಮದ ಘೋಷಣೆಯಿಂದಾಗಿ, ಭಾರತದ ಪ್ರಮುಖ ಭಾಗಗಳು ಈಗ ಪಾಕೀಸ್ತಾನಿ ಸೇನೆಯ ಭದ್ರ ಹಿಡಿತದಲ್ಲಿದೆಯಲ್ಲದೇ, ಇದರಿಂದಾಗಿ ಕಾಶ್ಮೀರ ಸಮಸ್ಯೆಯು ಜನ್ಮತಾಳಿತು.

1948ರ ಸೆಪ್ಟೆಂಬರ್‌ನಲ್ಲಿ ಆಗ ಆಡಳಿತದಲ್ಲಿದ್ದ ಪ್ರಧಾನಮಂತ್ರಿ ಸರ್ದಾರ್ ವಲ್ಲಭ ಬಾಯಿ ಪಟೇಲ್, ಬಲದೇವ್ ಸಿಂಗ್ ಮತ್ತು ಅವರ ಅಧೀನದಲ್ಲಿದ್ದ ಕಮಾಂಡರ್‌ಗಳು ವಾರಾವಧಿಯ ಕಾರ್ಯಾಚರಣೆಯಾದ ಆಪರೇಷನ್ ಪೋಲೋಗಾಗಿ ಯೋಜನೆಗಳನ್ನು ಸಿದ್ಧಪಡಿಸಿದರಲ್ಲದೇ, ಅದು ರಾಜಾಡಳಿತದ ರಾಜ್ಯವಾದ ಹೈದ್ರಾಬಾದ್ನ್ನು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿತು.

ಬಲದೇವ್ ಸಿಂಗ್ ಅವರು ಕಾಶ್ಮೀರ ಸಮಸ್ಯೆ ಮತ್ತು ಭಾರತೀಯ ಒಕ್ಕೂಟದ ಸಮಸ್ಯೆಗಳ ನಿರ್ವಹಣೆಗಾಗಿ ಪಟೇಲ್ ಅವರ ಆಪ್ತ ಸಲಹೆಗಾರರಾಗಿ ಉಳಿದುಕೊಂಡರು.

ನಂತರದ ಜೀವನ

[ಬದಲಾಯಿಸಿ]

1952 ರಲ್ಲಿ ಬಲದೇವ್ ಸಿಂಗ್ ಅವರು ಭಾರತೀಯ ಸಂಸತ್ತಿನ ಸದಸ್ಯರಾದರು. ಅವರು ಹೊಸ ಭಾರತೀಯ ಸಂವಿಧಾನದ ಅಡಿಯಲ್ಲಿ ನಡೆಸಿದ ಮೊದಲ ಪ್ರಜಾಪ್ರಭುತ್ವ ಪರ ಚುನಾವಣೆಯಲ್ಲಿ ವಿಜಯಿಯಾಗಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಆದರೆ ನೆಹರೂರವರ ಆಡಳಿತದೊಂದಿಗೆ ಕೈಜೋಡಿಸಲಿಲ್ಲ.

ಸಿಖ್ ಸಮುದಾಯದ ಮುಖ್ಯ ಹಿತಾಸಕ್ತಿಗಳ ಪ್ರಮುಖ ರಾಜಕೀಯ ಪ್ರತಿನಿಧಿಯಾಗಿ ಬಲದೇವ್ ಸಿಂಗ್ ಉಳಿದುಕೊಂಡರಲ್ಲದೇ, ಅಕಾಲಿ ದಳದ, ಗೌರವಕ್ಕೆ ಪಾತ್ರರಾದರು ಮತ್ತು 1957 ರಲ್ಲಿ ಅವರು ಮರುಚುನಾಯಿತಗೊಂಡರು. ಸಿಂಗ್ ಅವರು ಬಹಳದಿನಗಳ ಖಾಯಿಲೆಯಿಂದ ಬಳಲುತ್ತಿದ್ದು 1961ರಲ್ಲಿ ದೆಹಲಿಯಲ್ಲಿ ನಿಧನರಾದರು. ಪಂಜಾಬ್‌ನ ಲೂಧಿಯಾನಾದಲ್ಲಿ ನೆಲೆಸಿರುವ ಅವರ ಸೋದರ ಸಂಬಂಧಿ ಬೀಬಿ ಹರ್ಬಜನ್ ಕೌರ್ ಅವರಿಂದ ದೂರವಾದರು.

ಇವನ್ನೂ ಗಮನಿಸಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]