ಕ್ರಿಪ್ಸ್' ಆಯೋಗ
ಕ್ರಿಪ್ಸ್ ಆಯೋಗ ವೆಂಬುದು ಬ್ರಿಟಿಷ್ ಸರ್ಕಾರವು ಎರಡನೇ ಮಹಾಯುದ್ಧದಲ್ಲಿ ಭಾರತೀಯರ ಸಹಕಾರ ಮತ್ತು ಬೆಂಬಲ ಭದ್ರಪಡಿಸಿಕೊಳ್ಳಲು, 1942 ರ ಮಾರ್ಚ್ ನ ಅಂತ್ಯದಲ್ಲಿ ಮಾಡಿದ ಒಂದು ರೂಪದ ಪ್ರಯತ್ನವಾಗಿದೆ. ಸರ್ ಸ್ಟ್ಯಾಫೋರ್ಡ್ ಕ್ರಿಪ್ಸ್ ರವರು ಈ ಆಯೋಗದ ನಾಯಕತ್ವ ವಹಿಸಿದ್ದರು. ಇವರು ಹಿರಿಯ ಸಮಾಜವಾದಿ ರಾಜಕಾರಣಿಯಾಗಿದ್ದು, ಪ್ರಧಾನ ಮಂತ್ರಿ ವಿನ್ ಸ್ಟನ್ ಚರ್ಚಿಲ್ ರವರ ವಾರ್ ಕ್ಯಾಬಿನೆಟ್(ಯುದ್ಧ ಸಂಸತ್ತಿನಲ್ಲಿ) ನಲ್ಲಿ ಸರ್ಕಾರಿ ಮಂತ್ರಿಯಾಗಿದ್ದರು.
ಹಿನ್ನೆಲೆ
[ಬದಲಾಯಿಸಿ]U.S. ನ ಪ್ರವೇಶ ಮತ್ತು ಬ್ಯಾಟಲ್ ಆಫ್ ಬ್ರಿಟನ್ ನೊಂದಿಗೆ, ಎರಡನೇ ಮಹಾಯುದ್ಧ ಬ್ರಿಟನ್ ಮತ್ತು ಯುರೋಪಿಯನ್ ರಾಷ್ಟ್ರಗಳ ಭವಿಷ್ಯದ ಮಟ್ಟಿಗೆ "ಮಾಡು ಇಲ್ಲವೇ ಮಡಿ" ರೀತಿಯದ್ದಾಗಿತ್ತು. ಬ್ರಿಟಿಷ್ ಸರ್ಕಾರವು, ಬ್ರಿಟಿಷ್ ಭಾರತೀಯ ಸೈನ್ಯಕ್ಕೆ ಅಧಿಕ ಭಾರತೀಯರನ್ನು ಸೇರಿಸುವಲ್ಲಿ ಭಾರತದ ರಾಜಕೀಯ ನಾಯಕರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಗಳಿಸಲು ಆಶಿಸಿತು. ಇದು ಆಗ್ನೇಯ ಏಷ್ಯಾದಲ್ಲಿ ಜಪಾನ್ ನ ಸಾಮ್ರಾಜ್ಯಶಾಹಿಯ ವಿರುದ್ಧ, ಯುರೋಪ್ ಮತ್ತು ಉತ್ತರ ಅಮೇರಿಕ ದಲ್ಲಿ ಫ್ಯಾಸಿಸ್ಟ್ ಇಟಲಿ ಮತ್ತು ನಾಜಿ ಜರ್ಮನಿಯ ವಿರುದ್ಧ ಬ್ರಿಟಿಷ್ ಸೇನೆಯೊಂದಿಗೆ ಮತ್ತು ಮಿತ್ರರಾಷ್ಟ್ರಗಳಾದ ಆಸ್ಟ್ರೇಲಿಯನ್, ನ್ಯೂಜಿಲೆಂಡರ್ ಮತ್ತು ಅಮೇರಿಕನ್ ಸೇನೆಯೊಂದಿಗೆ ಯುದ್ಧಮಾಡಿತ್ತು. ಆಗ 1939ರಲ್ಲಿ ವೈಸ್ ರಾಯ್ ಆಗಿದ್ದ ಲಾರ್ಡ್ ಲಿನ್ ಲಿತ್ ಗೌ, ಹೋರಾಡುತ್ತಿರುವ ರಾಷ್ಟ್ರವಾದ ಭಾರತ, ಮಿತ್ರ ರಾಷ್ಟ್ರಗಳ ಪರವಾಗಿದೆ ಎಂದು, ಭಾರತೀಯ ರಾಜಕೀಯ ನಾಯಕರನ್ನು ಅಥವಾ ಚುನಾಯಿಸಲ್ಪಟ್ಟ ಪ್ರಾಂತೀಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆಯೇ ಘೋಷಿಸಿದರು. ಇದು ಭಾರತದಲ್ಲಿ ವ್ಯಾಪಕವಾದ ಮತ್ತು ಗಮನಾರ್ಹ ಕೋಪಕ್ಕೆ ಕಾರಣವಾಯಿತು. ಅಲ್ಲದೇ ಭಾರತದಲ್ಲಿ ರಾಜಕೀಯ ಅವ್ಯವಸ್ಥೆ ಮತ್ತು ಸಾರ್ವಜನಿಕರ ಬಂಡಾಯವನ್ನು ಹೆಚ್ಚಿಸುವ ಮೂಲಕ ಪ್ರಾಂತೀಯ ಸರ್ಕಾರಗಳ ಚುನಾಯಿಸಲ್ಪಟ್ಟ ಕಾಂಗ್ರೆಸ್ ಪಕ್ಷದಸದಸ್ಯರು ಸಾಮೂಹಿಕ ವಾಗಿ ರಾಜೀನಾಮೆ ಕೊಡುವಂತೆ ಪ್ರಚೋದಿಸಿತು. ಬ್ರಿಟಿಷರು ಭಾರತದಲ್ಲಿನ ದಂಗೆಯನ್ನು ಅಸ್ಥಿರಗೊಳಿಸುವುದರಿಂದ ಜಪಾನೀಯರ ವಿರುದ್ಧ ಅವರ ಕಾರ್ಯಪಡೆಗೆ ಹಾನಿಯುಂಟಾಗಬಹುದು, ಹಾಗು ಯುರೋಪ್‌ನಲ್ಲಿ ಯುದ್ಧ ಮಾಡಲು ಬೇಕಾದ ಮಾನವ ಶಕ್ತಿ ಮತ್ತು ಅಗತ್ಯವಿರುವ ಸಂಪನ್ಮೂಲ ದೊರಕದೆ ಇರಬಹುದೆಂದು ಆತಂಕಪಟ್ಟುಕೊಂಡರು.
ಸಹಕಾರ ಅಥವಾ ವಿರೋಧದ ಮೇಲಿನ ಚರ್ಚೆ
[ಬದಲಾಯಿಸಿ]ಕಾಂಗ್ರೆಸ್ ಪಕ್ಷವು, ಎರಡನೇ ಮಹಾಯುದ್ಧ ದಲ್ಲಿ ಭಾರತದ ಪ್ರವೇಶವನ್ನು ಕುರಿತು ಅದರ ಪ್ರತಿಕ್ರಿಯೆಗಳ ಮೇಲೆ ವಿಂಗಡಣೆಯಾಯಿತು. ಭಾರತದ ವೈಸ್ ರಾಯ್ ರವರ ನಿರ್ಧಾರದ ಮೇಲೆ ಕೋಪಿಸಿಕೊಂಡು, ಕಾಂಗ್ರೆಸ್‌ನ ಕೆಲವು ನಾಯಕರು, ಯುರೋಪ್‌ನಲ್ಲಿ ನಡೆಯುತ್ತಿದ್ದ ಯುದ್ಧಕ್ಕೆ ಬೆಂಬಲಕೊಡುವುದರ ಬದಲಿಗೆ ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದರು. ಇದು ಬ್ರಿಟಿಷರ ಸ್ವಂತದೇ ಸ್ವತಂತ್ರಕ್ಕೆ ಬೆದರಿಕೆಯನ್ನೊಡಿತು. ಚಕ್ರವರ್ತಿ ರಾಜಗೋಪಾಲಚಾರಿ ಯಂತಹ ಇತರರು, ಬ್ರಿಟಿಷರಿಗೆ ಸಹಕರಿಸಲು ಸೂಚಿಸಿದರು — ಈ ನಿರ್ಣಾಯಕ ಸಮಯದಲ್ಲಿ ಅವರಿಗೆ ಬೆಂಬಲ ನೀಡುವ ಮೂಲಕ ಯುದ್ಧದ ನಂತರ ಪ್ರತಿಯಾಗಿ ಸ್ವಾತಂತ್ರ್ಯ ಪಡೆಯುವ ನಂಬಿಕೆಯಲ್ಲಿ ಅವರಿಗೆ ಬೆಂಬಲಿಸಲು ಸೂಚಿಸಿದ್ದರು. ಭಾರತದ ಮತ್ತು ಕಾಂಗ್ರೆಸಿನ ಮುಖ್ಯ ನಾಯಕರಾದ ಮೋಹನ್ ದಾಸ್ ಗಾಂಧಿ ಯವರು, ನೈತಿಕವಾಗಿ ಯುದ್ಧಕ್ಕೆ ಒಪ್ಪಿಗೆ ನೀಡದ ಕಾರಣ, ಯುದ್ಧದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿದರು — ಸ್ವತಂತ್ರಕ್ಕಾಗಿ ಭಾರತೀಯರ ಹೆಬ್ಬಯಕೆಯ ಬಗ್ಗೆ ಬ್ರಿಟಿಷರು ಪ್ರಾಮಾಣಿಕವಾಗಿಲ್ಲ ಎಂದು ನಂಬುವ ಮೂಲಕ ಅವರು ಬ್ರಿಟಿಷರ ಉದ್ದೇಶಗಳನ್ನು ಕೂಡ ಅನುಮಾನಿಸಿದರು. ಆದರೆ ಸರ್ದಾರ್ ವಲ್ಲಭಭಾಯ್ ಪಟೇಲ್, ಮೌಲಾನ ಅಜಾದ್ ಮತ್ತು ಜವಾಹರಲಾಲ್ ನೆಹರು ರವರ ಬೆಂಬಲದೊಂದಿಗೆ ರಾಜಗೋಪಾಲಚಾರಿ ಕ್ರಿಪ್ಸ್ ನೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ ತತ್‌ಕ್ಷಣದದ ಸ್ವಯಂ ಸರ್ಕಾರ ರಚನೆ ಮತ್ತು ಅಂತಿಮ ಸ್ವತಂತ್ರದ ಬದಲಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಮುಸ್ಲಿಂ ಲೀಗ್‌ನ ನಾಯಕರಾಗಿದ್ದ ಮೊಹಮದ್ ಅಲಿ ಜಿನ್ನಾ, ಯುದ್ದಪ್ರಯತ್ನಕ್ಕೆ ಬೆಂಬಲ ನೀಡಿ, ಕಾಂಗ್ರೆಸ್ ನ ನೀತಿಯನ್ನು ಖಂಡಿಸಿದರು. ಪ್ರತ್ಯೇಕ ಮುಸ್ಲೀಂ ರಾಜ್ಯಕ್ಕೆ ಒತ್ತಾಯಿಸುವ ಮೂಲಕ, ಪ್ಯಾನ್- ಇಂಡಿಯಾ ಸಹಕಾರಕ್ಕಾಗಿ ಮತ್ತು ತತ್‌ಕ್ಷಣದ ಸ್ವತಂತ್ರಕ್ಕಾಗಿ ಕಾಂಗ್ರೆಸ್ ನೀಡಿದ ಕರೆಯನ್ನು ನಿರಾಕರಿಸಿದರು.
ಆಯೋಗದ ವೈಫಲ್ಯ
[ಬದಲಾಯಿಸಿ]ಕ್ರಿಪ್ಸ್, ಭಾರತಕ್ಕೆ ಆಗಮಿಸಿದ ಅವರ ಉದ್ದೇಶ ಕುರಿತು ಭಾರತೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು. ಚರ್ಚಿಲ್ ಮತ್ತು ಲಿಯೋ ಅಮ್ರೆ(ಅವರ ರಾಷ್ಟ್ರದ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)ಯಿಂದ ಕ್ರಿಪ್ಸ್ ಭಾರತದ ರಾಷ್ಟ್ರೀಯ ರಾಜಕಾರಣಿಗಳಿಗೆ ಯಾವ ಅವಕಾಶ ನೀಡಲು ಅನುಮತಿ ಪಡೆದಿದ್ದರು ಎಂಬುದರ ಬಗ್ಗೆ ಗೊಂದಲವಿದೆ.ಅಲ್ಲದೇ ಅವರು ವೈಸ್ ರಾಯ್ ಲಾರ್ಡ್ ಲಿನ್ ಲಿತ್ ಗೌ ರವರ ವಿರೋಧವನ್ನು ಕೂಡ ಎದುರಿಸಿದ್ದರು. ಅವರು, ಕಾಮನ್ ವೆಲ್ತ್ ನಿಂದ ಪ್ರತ್ಯೇಕವಾಗಿ ಸಂಪೂರ್ಣ ಸ್ವತಂತ್ರದ ಅವಕಾಶದೊಂದಿಗೆ ಯುದ್ಧದ ಕೊನೆಯಲ್ಲಿ ಭಾರತಕ್ಕೆ ಸಂಪೂರ್ಣ ಪರಮಾಧಿಕಾರವನ್ನು ಕೊಡುವುದಾಗಿ ತಮ್ಮ ಮಾತುಕತೆ ಆರಂಭಿಸಿದರು. ಖಾಸಗಿಯಾಗಿ ಕ್ರಿಪ್ಸ್, ಬ್ರಿಟಿಷರಿಗಾಗಿ ಕೇವಲ ರಕ್ಷಣಾ ಸಚಿವ ಸಂಪುಟವನ್ನು ಉಳಿಸಿ, ಲಿನ್ ಲಿತ್ ಗೌ ನನ್ನು ಕಳುಹಿಸುವುದಾಗಿ ಮತ್ತು ಭಾರತಕ್ಕೆ ತತ್ ಕ್ಷಣದ ಪರಮಾಧಿಕಾರವನ್ನು ನೀಡುವುದಾಗಿ ಮಾತು ಕೊಟ್ಟಿದ್ದರು. ಅದೇನೇ ಆದರೂ, ಅವರು ವೈಸ್ ರಾಯ್ ನಿರ್ವಾಹಕ ಸಮಿತಿಯ ಭಾರತೀಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಅಸ್ಪಷ್ಟ ಒಪ್ಪಂದದ ಹೊರತಾಗಿ, ಸಾರ್ವಜನಿಕರೆದುರು ಶೀಘ್ರದಲ್ಲಿಯೇ ಸ್ವಯಂ ಸರ್ಕಾರ ರಚಿಸಿಕೊಳ್ಳುವ ಯಾವುದೇ ನಿರ್ದಿಷ್ಟ ಪ್ರಸ್ತಾಪವನ್ನು ನೀಡುವಲ್ಲಿ ವಿಫಲರಾಗಿದ್ದರು. ಕ್ರಿಪ್ಸ್ ಅವರ ಬಹುಪಾಲು ಸಮಯವನ್ನು, ಸರ್ಕಾರ ಮತ್ತು ಯುದ್ಧಕ್ಕೆ ಬೆಂಬಲ ನೀಡುವಲ್ಲಿ ಒಮ್ಮತದ ಸಾರ್ವಜನಿಕ ಸಿದ್ಧತೆಗಾಗಿ, ಕಾಂಗ್ರೆಸ್ ನ ನಾಯಕರನ್ನು ಮತ್ತು ಜಿನ್ನಾರವರನ್ನು ಪ್ರೋತ್ಸಾಹಿಸುವುದರಲ್ಲೇ ಕಳೆದರು; ಕಾಂಗ್ರೆಸ್ ನ ನಾಯಕರು ಕ್ರಿಪ್ಸ್, ಸಾಮೂಹಿಕ ಹೊಣೆಗಾರಿಕೆ ಅಥವಾ ಯುದ್ಧದ ಸಮಯದಲ್ಲಿ ರಕ್ಷಣೆಯ ಮೇಲೆ ಭಾರತೀಯರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೇಳುತ್ತಿರುವರೆಂದು ಭಾವಿಸಿದರು. ರಾಜಕೀಯದ ಗುರುವಾಗಿದ್ದ ಅಮ್ರೆ, ವೈಸ್ ರಾಯ್ ನಿರ್ವಾಹಕ ಸಮಿತಿಯ ಸಂಪೂರ್ಣ ಭಾರತೀಕರಣವನ್ನು ನೀಡುವುದರ ಬಗ್ಗೆ ಆಸಕ್ತಿ ಹೊಂದಿಲ್ಲ ಎಂಬುದರ ಬಗ್ಗೆಯು ಅವರು ಸಂಶಯ ಹೊಂದಿದ್ದರು. ಅಲ್ಲದೇ ಇದು ಮುಸ್ಲಿಂ ಲೀಗ್ ಗೆ ಪರಮಾಧಿಕಾರದ ಅವಕಾಶ ನೀಡಿದೆ ಎಂಬುದರ ಬಗ್ಗೆಯು ಸಂದೇಹ ಹೊಂದಿದ್ದರು. ಈ ಹಂತದಿಂದಾಗಿ ಬ್ರಿಟಿಷರ ಮತ್ತು ಕಾಂಗ್ರೆಸ್ ನಡುವೆ ಹೆಚ್ಚು ವಿಶ್ವಾಸವಿರಲಿಲ್ಲ. ಅಲ್ಲದೇ ಎರಡು ಕಡೆಗಳಲ್ಲೂ ಮತ್ತೊಂದು ಅದರ ನಿಜವಾದ ಯೋಜನೆಯನ್ನು ರಹಸ್ಯವಾಗಿಡಲು ಪ್ರಯತ್ನಿಸುತ್ತಿದೆ, ಎಂದು ಭಾವಿಸಿಸಲಾಯಿತು.
ಮೋಹನ್ ದಾಸ್ ಗಾಂಧಿಯವರ ಮಾರ್ಗದರ್ಶನದಿಂದ ಕಾಂಗ್ರೆಸ್ ಕ್ರಿಪ್ಸ್ ನೊಂದಿಗೆ ಮಾತುಕತೆ ನಿಲ್ಲಿಸಿತು. ರಾಷ್ಟ್ರೀಯ ನಾಯಕತ್ವವು ಯುದ್ಧಕ್ಕೆ ನೀಡುವ ಬೆಂಬಲದ ಬದಲಿಗೆ ತತ್ ಕ್ಷಣದ ಸ್ವಯಂ ಸರ್ಕಾರ ರಚನೆಯ ಬೇಡಿಕೆಯನ್ನಿಟ್ಟಿತ್ತು. ಬ್ರಿಟಿಷರು ಯಾವ ಪ್ರತಿಕ್ರಿಯೆಯನ್ನೂ ನೀಡದಿದ್ದಾಗ, ಗಾಂಧಿ ಮತ್ತು ಕಾಂಗ್ರೆಸ್, ಭಾರತ ಬಿಟ್ಟು ತೊಲಗಿ ಚಳವಳಿ ಎಂದು ಕರೆಯಲಾಗುವ ಸಾರ್ವಜನಿಕರ ಪ್ರಮುಖ ಚಳವಳಿಯನ್ನು ಯೋಜಿಸಲು ಪ್ರಾರಂಭಿಸಿದರು. ಈ ಚಳವಳಿಯು ಬ್ರಿಟಿಷರು ತಕ್ಷಣವೇ ಭಾರತದಿಂದ ತೆರಳಬೇಕೆಂಬ ಬೇಡಿಕೆಯನ್ನಿಟ್ಟಿತು. ಇಂಪಿರಿಯಲ್ ಜಪಾನೀಸ್ ಆರ್ಮಿ(ಪರಮಾಧಿಕಾರವುಳ್ಳ ಜಪಾನೀಯರ ಸೈನ್ಯ), ಬರ್ಮಾದ ಮೇಲೆ ವಿಜಯ ಸಾಧಿಸಿ, ಭಾರತವನ್ನು ಸಮೀಪಿಸುತ್ತಿರುವಂತೆ, ಬ್ರಿಟಿಷರು ಭಾರತೀಯ ಮಣ್ಣನ್ನು ರಕ್ಷಿಸಿಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆಂದು ಭಾರತೀಯರು ಭಾವಿಸಿದರು. ಇದೇ ಸಮಯದಲ್ಲಿ ಸುಭಾಷ್ ಚಂದ್ರ ಬೋಸ್ ರವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯ ಉದಯವಾಯಿತು. ಭಾರತ ಬಿಟ್ಟು ತೊಲಗಿ ಚಳವಳಿಗೆ ಬ್ರಿಟಿಷರು ನೀಡಿದ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ನ ಬಹುಪಾಲು ನಾಯಕರನ್ನು ಸೆರೆಮನೆಗೆ ತಳ್ಳಿತು.
ಜಿನ್ನಾರ ಮುಸ್ಲಿಂ ಲೀಗ್,ಪ್ರಾಂತೀಯ ಸರ್ಕಾರಗಳಲ್ಲಿ ಮತ್ತು ಬ್ರಿಟಿಷ್ ರಾಜ್ ನ ಶಾಸಕಾಂಗ ಸಮಿತಿಯಲ್ಲಿ ಭಾಗವಹಿಸುವ ಮೂಲಕ ಭಾರತ ಬಿಟ್ಟು ತೊಲಗಿ ಚಳವಳಿಯನ್ನು ಖಂಡಿಸಿತು. ಅಲ್ಲದೇ ಯುದ್ಧದಲ್ಲಿ ಭಾಗವಹಿಸಲು ಮುಸ್ಲೀಮರಿಗೆ ಪ್ರೋತ್ಸಾಹ ನೀಡಿತು. ಮುಸ್ಲಿಂ ಲೀಗ್ ನಿಂದ ದೊರೆತ ಈ ಸೀಮಿತ ಸಹಕಾರದೊಂದಿಗೆ ಬ್ರಿಟಿಷರು ಯುದ್ಧದ ಸಮಯದವರೆಗೂ ಅಧಿಕಾರಿ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಬಳಸಿ ಭಾರತದಲ್ಲಿ ತಮ್ಮ ಆಡಳಿತ ಮುಂದುವರೆಸಿದರು. ಈ ಆಡಳಿತದಲ್ಲಿ ಭಾರತೀಯ ರಾಜಕಾರಣಿಗಳು ಕಂಡುಬರುವುದಿಲ್ಲ. ಆದರೂ ಇದನ್ನು ದೀರ್ಘಕಾಲದ ವರೆಗೆ ನಿರ್ವಹಿಸಲಾಗಲಿಲ್ಲ.
ಕ್ರಿಪ್ಸ್ ಆಯೋಗದ ದೀರ್ಘಾವಧಿಯ ಪ್ರಾಮುಖ್ಯತೆಯು ಕೇವಲ ಯುದ್ಧದ ಪರಿಣಾಮಗಳಲ್ಲಿ ಗೋಚರವಾದವು. ಸೈನ್ಯವನ್ನು ವಿಘಟಿಸಿ ಹಿಂದಕ್ಕೆ ಕಳುಹಿಸಲಾಯಿತು. ಕ್ರಿಪ್ಸ್ ನೀಡಿದ ಸ್ವಾತಂತ್ರ್ಯದ ಅವಕಾಶವನ್ನು ಹಿಂದಕ್ಕೆ ತೆಗೆದುಕೊಳ್ಳುವಂತಿಲ್ಲ ಎಂಬುದನ್ನು ಚರ್ಚಿಲ್ ಕೂಡ ಗಮನಿಸಿದ್ದರು, ಹಾಗು ಯುದ್ಧದ ಕೊನೆಯಲ್ಲಿ ಚರ್ಚಿಲ್ ಅಧಿಕಾರದಿಂದ ಕೆಳಗಿಳಿದಿದ್ದರು. ಅಲ್ಲದೇ ಅವರು ಹೊಸ ಲೇಬರ್ ಸರ್ಕಾರ ಭಾರತಕ್ಕೆ ಸ್ವಾತಂತ್ರ್ಯ ನೀಡುವುದೇ ಎಂಬುದನ್ನು ಕೇವಲ ಕಾಯಬಹುದಾಗಿತ್ತು. ಕಾಂಗ್ರೆಸ್ ನ ರಾಜಕಾರಣಿಗಳು 1945-6 ರ ಚುನಾವಣೆಗಳಲ್ಲಿ ನಿಂತು ಪ್ರಾಂತೀಯ ಸರ್ಕಾರವನ್ನು ರಚಿಸಿದ್ದರೊಂದಿಗೆ, ಬ್ರಿಟಿಷರು ಶೀಘ್ರದಲ್ಲೆ ತೊಲಗುತ್ತಾರೆ ಎಂಬ ವಿಶ್ವಾಸವೂ ಪ್ರತಿಫಲಿಸಿತು.[೧] ಪೂರ್ವದೃಷ್ಟಿಯಲ್ಲಿ, ತಾತ್ಕಾಲಿಕ ಯುದ್ಧ ಸಮಯದ ಬೆಂಬಲದ ಬದಲಿಗೆ ಕಾಂಗ್ರೆಸ್ ಅನ್ನು ಸಮಾಧಾನ ಪಡಿಸುವ, ಈ ಯಶಸ್ವಿಯಾಗದ ಮತ್ತು ತಪ್ಪಾಗಿ ಯೋಜಿಸಿದ್ದ ಪ್ರಯತ್ನವು, ಯುದ್ಧದ ಅಂತ್ಯದಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗುವುದನ್ನು ಅನಿವಾರ್ಯವಾಗಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ ಜುಡಿತ್ ಬ್ರೌನ್ ಮಾಡ್ರನ್ ಇಂಡಿಯಾ. ದಿ ಮೇಕಿಂಗ್ ಆಫ್ ಆನ್ ಏಷ್ಯನ್ ಡೆಮಾಕ್ರಸಿ (ಆಕ್ಸ್ ಫರ್ಡ್) 1999 (2ನೇಯ ಆವೃತ್ತಿ) pp. 328–30.
- ಆರ್.ಜೆ. ಮೋರ್ ಚರ್ಚಿಲ್, ಕ್ರಿಪ್ಸ್ ಅಂಡ್ ಇಂಡಿಯಾ (ಆಕ್ಸ್ ಫರ್ಡ್) 1979 ಅಧ್ಯಾಯಗಳು 3-5
- ಡ್ರಾಫ್ಟ್ ರೆಸಲ್ಯೂಷನ್
- ಇಂಡಿಯನ್ ಹಿಸ್ಟ್ರಿ Archived 2018-08-06 ವೇಬ್ಯಾಕ್ ಮೆಷಿನ್ ನಲ್ಲಿ.
- ರಾಜ್ ಮೋಹನ್ ಗಾಂಧಿ, ಪಟೇಲ್:ಅ ಲೈಫ್
"ಇದು ಮುಚ್ಚಿಹೋಗುತ್ತಿರುವ ಬ್ಯಾಂಕಿನಲ್ಲಿರುವ ಮುಗಿದ ದಿನಾಂಕದ ಚೆಕ್" ಎಂದು ಮಹಾತ್ಮ ಗಾಂಧಿಯವರು ಕ್ರಿಪ್ಸ್ ಆಯೋಗದ ಮೇಲೆ ಹೇಳಿದ್ದಾರೆ.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ವಿನ್ ಸ್ಟನ್ ಎಸ್. ಚರ್ಚಿಲ್, ದಿ ಸೆಕೆಂಡ್ ವಲ್ಡ್ ವಾರ್ : ಸಂಪುಟ IV, ದಿ ಹಿಂಜ್ ಆಫ್ ಫೇಟ್ , [ ಕ್ಯಾಸೆಲ್, ಲಂಡನ್, ಇಂಗ್ಲೆಂಡ್, 1951 ಮತ್ತು ಹಾಗ್ಟನ್ ಮಿಫ್ಲೀನ್, ಬೂಸ್ಟನ್, ಮ್ಯಾಸಚುಸೆಟ್ಟ್ಸ್, 1950, 1986: ISBN 978-0-39-541058-5; ಬ್ಯಾನ್ ತಮ್ ಬುಕ್ಸ್, ನ್ಯೂಯಾರ್ಕ್ ಸಿಟಿ, 1962 ಮತ್ತು ಪೆನ್ವೀನ್ ಬುಕ್ಸ್, ಲಂಡನ್, ಇಂಗ್ಲೆಂಡ್, 2005: ISBN 0141441755 (pbk.) ], ಪುಸ್ತಕ ಒಂದು, ಅಧ್ಯಾಯ 12, "ಇಂಡಿಯಾ—ದಿ ಕ್ರಿಪ್ಸ್ ಮಿಷನ್"; ಲಿಮಿಟೆಡ್ ಪ್ರಿವ್ಯೂ ಆಫ್ ದಿ ಹೋಲ್ ಚಾಪ್ಟರ್ ಅಟ್ ಗೂಗಲ್ ಬುಕ್ಸ್