ಚಂದ್ರಶೇಖರ್ ಆಝಾದ್

ವಿಕಿಪೀಡಿಯ ಇಂದ
(ಚಂದ್ರಶೇಖರ್ ಆಜಾದ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಂದ್ರ ಶೇಖರ್ ಆಝಾದ್
ಚಂದ್ರಶೇಖರ್ ಆಝಾದ್'
ಜನನ ದಿನಾಂಕ Chandra Shekhar Tiwari
23 ಜುಲೈ 1906
Bhavra, Alirajpur, Central India Agency[೧][೨]
ನಿಧನ ದಿನಾಂಕ ಮತ್ತು ಸ್ಥಳ 27 ಫೆಬ್ರುವರಿ 1931(1931-02-27) (ವಯಸ್ಸು 24)
Allahabad, Uttar Pradesh, India
ಇತರ ಹೆಸರುಗಳು Azad
ಉದ್ಯೋಗ Revolutionary leader, freedom fighter, political activist
Organization Hindustan Republican Association (later on Hindustan Socialist Republican Association)
Movement Indian Independence Movement

ಚಂದ್ರ ಶೇಖರ್ ಆಝಾದ್(ಜುಲೈ ೨೩, ೧೯೦೬ಫೆಬ್ರುವರಿ ೨೭, ೧೯೩೧) ಭಾರತ ಸ್ವಾತಂತ್ರ ಚಳುವಳಿಯ ಪ್ರಮುಖ ಕ್ರಾಂತಿಕಾರಿ ನಾಯಕರಲ್ಲೊಬ್ಬರಾಗಿದ್ದರು.

ಜನನ, ಜೀವನ[ಬದಲಾಯಿಸಿ]

 • ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಾವರಾ ಎಂಬ ಸ್ಥಳದಲ್ಲಿ, ಪಂಡಿತ ಸೀತಾರಾಮ್ ತಿವಾರಿ ಮತ್ತು ಜಗರಾಣಿ ದೇವಿಯವರ ಎರಡನೆಯ ಮಗನಾಗಿ ಜನಿಸಿದ ಚಂದ್ರಶೇಖರ, ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
 • ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಕಾರಣದಿಂದಾಗಿ ಕೇವಲ ೧೪ರ ವಯಸ್ಸಿನಲ್ಲೇ ಛಡಿ ಏಟಿನ ಕ್ರೂರ ಶಿಕ್ಷೆಗೆ ಒಳಗಾದ ಚಂದ್ರಶೇಖರ, ನಂತರದ ಬೆಳವಣಿಗೆಗಳಲ್ಲಿ ಗಾಂಧೀಜಿಯವರ ನಿರ್ಣಯಗಳಿಂದ ಬೇಸತ್ತು ಕ್ರಾಂತಿಮಾರ್ಗವನ್ನು ಹಿಡಿದರು. ರಾಮಪ್ರಸಾದ ಬಿಸ್ಮಿಲ್ಲರನ್ನು ತಮ್ಮ ಗುರುಗಳೆಂದು ಸ್ವೀಕರಿಸಿ, ತಮಗೆ ಆಝಾದ್ (ಸ್ವತಂತ್ರ) ಎನ್ನುವ ಹೆಸರನ್ನು ಸೇರಿಸಿಕೊಂಡರು.
 • ೧೯೨೫ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಝಾದ್, ಆ ಮೊಕದ್ದಮೆಯಲ್ಲಿ ೯ ಆರೋಪಿಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ. ಬಿಸ್ಮಿಲ್ಲರ ಬಂಧನದ ನಂತರ ಕ್ರಾಂತಿ ಸಂಘಟನೆಯ ಚುಕ್ಕಾಣಿಯನ್ನು ಹಿಡಿದು ಭಾರತಮಾತೆಯ ಸೇವೆಯನ್ನು ಮುಂದುವರಿಸಿದ ಆಝಾದ್, ಮುಂದಿನ ಕೆಲವರ್ಷಗಳಲ್ಲಿ ಭಾರತೀಯ ಸ್ವಾತಂತ್ರಸಂಗ್ರಾಮದಲ್ಲಿ ಸಂಪೂರ್ಣವಾಗಿ ಮುಳುಗಿದರು.
 • ೧೯೨೮ ರಲ್ಲಿ ಭಾರತಕ್ಕೆ ಆಗಮಿಸಿದ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟಿಸುವ ವೇಳೆ ಶ್ರೀಯುತ ಲಾಲಾ ಲಜಪತರಾಯರ ಮೇಲಾದ ಕ್ರೂರ ದಬ್ಬಾಳಿಕೆಗೆ ಉತ್ತರವಾಗಿ ಆಝಾದರ ನೇತೃತ್ವದಲ್ಲಿ ಭಗತ್ ಸಿಂಗ್ ಹಾಗೂ ರಾಜಗುರು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ರನ್ನು ಹತ್ಯೆಗೈದರು.
 • ಮಾಹಿತಿದಾರನಿಂದ ಮೋಸಕ್ಕೊಳಗಾದ ಆಝಾದ್, ೧೯೩೧ರ ಫೆಬ್ರುವರಿ ೨೭ರಂದುಅಲಹಾಬಾದ್ ನಗರದ ಅಲ್ ಫ್ರೆಡ್ ಪಾರ್ಕ್ ನಲ್ಲಿ ಬ್ರಿಟಿಷ್ ಸೈನ್ಯದಿಂದ ಸುತ್ತುವರಿಯಲ್ಪಟ್ಟರು. ಏಕಾಂಗಿಯಾಗಿ ತಮ್ಮ ಪಿಸ್ತೂಲಿನ ಕೊನೆಯ ಗುಂಡಿನವರೆಗೂ ಹೋರಾಡಿದರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಆಸುನೀಗಿದರು.

ಭಾರತದ ಅತ್ಯಂತ ಜನಪ್ರಿಯ ಕ್ರಾಂತಿಕಾರಿಗಳು[ಬದಲಾಯಿಸಿ]

ಭಾರತದ ಅತ್ಯಂತ ಜನಪ್ರಿಯ ಕ್ರಾಂತಿಕಾರಿಗಳಲ್ಲಿ ಪ್ರಮುಖರಾದ ಅಜಾದ್‌ರ ಸಾಲಿನಲ್ಲಿ ನಿಲ್ಲುವವರೆಂದರೆ-

 1. ಭಗತ್ ಸಿಂಗ್,
 2. ಸುಖ್ ದೇವ್,
 3. ರಾಜ್ ಗುರು,
 4. ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು
 5. ಅಶ್ಫಕುಲ್ಲಾ ಖಾನ್.

ಉನ್ನತ ಅಧ್ಯಯನ[ಬದಲಾಯಿಸಿ]

 • ಪ್ರಾಥಮಿಕ ಶಿಕ್ಷಣವನ್ನು ಮಧ್ಯ ಪ್ರದೇಶದ ಜಾಬುವಾ ಜಿಲ್ಲೆಯ ಭಾವ್ರ ಗ್ರಾಮದಲ್ಲಿ ಪಡೆದ ಅಜಾದ್, ಉನ್ನತ ಅಧ್ಯಯನಕ್ಕೆಂದು ವಾರಣಾಸಿಯ ಸಂಸ್ಕೃತ ಪಾಠಶಾಲೆಯನ್ನು ಸೇರಿದರು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲೇ ಕರಾಳ ಘಟನೆಯಾದ 1919ರಲ್ಲಿ ಅಮೃತ್‌ಸರ್‌ನಲ್ಲಿ ಸಂಭವಿಸಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಅಜಾದ್ ತೀವ್ರವಾಗಿ ಮನನೊಂದಿದ್ದರು. 1921ರಲ್ಲಿ ಮಹಾತ್ಮ ಗಾಂಧಿಯವರು ಅಸಹಕಾರ ಚಳುವಳಿ ಆರಂಭಿಸಿದಾಗ, ಅಜಾದ್ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
 • ಹದಿನೈದನೇ ವಯಸ್ಸಿಗೇ ತಮ್ಮ ಮೊದಲ ಶಿಕ್ಷೆಯನ್ನು ಪಡೆದರು ಅಜಾದ್. ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅಜಾದ್‌ರನ್ನು ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಮ್ಯಾಜಿಸ್ಟ್ರೇಟ್ ಹೆಸರು ಕೇಳಿದಾಗ, 'ಅಜಾದ್' ಎಂದು ಹೇಳುವ ಮೂಲಕ ಹದಿನೈದು ಛಡಿಯೇಟಿನ ಶಿಕ್ಷೆ ಅನುಭವಿಸಿದರು. ಪ್ರತಿಯೊಂದು ಹೊಡೆತಕ್ಕೂ 'ಭಾರತ್ ಮಾತಾ ಕಿ ಜೈ, ಗಾಂಧಿ ಕಿ ಜೈ' ಎನ್ನುವ ಘೋಷಣೆ ಕೂಗಿದರು. ಆ ಮೂಲಕ ಚಂದ್ರ ಶೇಖರ್ 'ಅಜಾದ್' ಎಂದೇ ಹೆಸರಾದರು.

ಕ್ರಾಂತಿಕಾರಕ ಚಟುವಟಿಕೆಗಳಲ್ಲಿ[ಬದಲಾಯಿಸಿ]

 • ಮಹಾತ್ಮ ಗಾಂಧಿಯವರು ತಾವು ಕರೆ ನೀಡಿದ್ದ 'ಅಸಹಕಾರ ಚಳುವಳಿ'ಯನ್ನು ಹಿಂದಕ್ಕೆ ಪಡೆದದ್ದರಿಂದ ನಿರಾಶರಾದ ಅಜಾದ್‌, ಶಾಂತಿ ಮತ್ತು ಅಹಿಂಸಾ ಮಾರ್ಗದ ಬದಲಾಗಿ ಆಕ್ರಮಣಕಾರಿ, ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಾರಂಭಿಸಿದರು. ಯಾವುದೇ ಮಾರ್ಗದಿಂದಲಾದರೂ ಸರಿ, ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವುದನ್ನು ಗುರಿಯಾಗಿಸಿಕೊಂಡು ತನ್ನ ಒಡನಾಡಿಗಳೊಂದಿಗೆ ಸೇರಿ ಸಾಮಾನ್ಯ ಜನರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಹೆಸರಾದ ಬ್ರಿಟೀಷ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡರು.
 • ಭಗತ್ ಸಿಂಗ್ ಮತ್ತಾತನ ಗೆಳೆಯರಾದ ಸುಖ್ ದೇವ್ ಮತ್ತು ರಾಜ್‌ಗುರು ಜತೆಗೂಡಿ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಅನ್ನು ಸ್ಥಾಪಿಸಿದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ದೊರಕಿಸಿಕೊಡಬೇಕು ಹಾಗೂ ಭಾರತದ ಭವಿಷ್ಯದ ಪ್ರಗತಿಗೆ ಸಮಾಜವಾದಿ ತತ್ವಗಳ ಅಳವಡಿಕೆಗೆ ಅದು ಬದ್ಧವಾಗಿತ್ತು.
 • ವೈಸ್‌ರಾಯ್ ರೈಲನ್ನು ಸ್ಫೋಟಗೊಳಿಸುವ ಪ್ರಯತ್ನವಾಗಿ 1926ರಲ್ಲಿ ಕಾಕೋರಿ ರೈಲು ದರೋಡೆಯಲ್ಲಿ ಪಾಲ್ಗೊಂಡ ಅಜಾದ್, 1928ರಲ್ಲಿ ಸೈಮನ್ ಆಯೋಗದ ವಿರುದ್ಧ ಲಾಹೋರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ರಿಟೀಷ್ ಅಧಿಕಾರಿಯಿಂದ ಮಾರಕ ಹೊಡೆತಕ್ಕೊಳಗಾಗಿ ಸಾವನ್ನಪ್ಪಿದ ಪಂಜಾಬ್ ಹುಲಿ ಲಾಲಾ ಲಜಪತ್‌ರಾಯ್ ಸಾವಿನ ಪ್ರತೀಕಾರವಾಗಿ ಭಗತ್ ಸಿಂಗ್ ಮತ್ತಿತರರೊಂದಿಗೆ ಸೇರಿ ಸಾಂಡರ್ಸ್ ಹತ್ಯೆಯಲ್ಲೂ ಪಾಲ್ಗೊಂಡರು.
 • ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಅಜಾದ್‌ರನ್ನು ಪೊಲೀಸರಿಗೆ ಬೇಕಾದವರಲ್ಲಿ ಬಹುಮುಖ್ಯರ ಪಟ್ಟಿಯಲ್ಲಿ ಸೇರಿಸಿ ಬ್ರಿಟಿಷರು, ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು. ಅದರಂತೆಯೇ, ಯೋಜನೆಯ ಪ್ರಕಾರ 1931ರ ಫೆಬ್ರವರಿ 27ರಂದು ಅಲಹಾಬಾದ್‌ನ ಆಲ್‌ಫ್ರೆಡ್ ಪಾರ್ಕ್‌ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟೀಶ್ ಪೊಲೀಸರು ಪಾರ್ಕನ್ನು ಸುತ್ತುವರಿದು, ಅಜಾದ್‌ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು.
 • ಆದರೆ, ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಅಜಾದ್, ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು. ಆದರೆ, ತಪ್ಪಿಸಿಕೊಳ್ಳಲು ದಾರಿಯೇ ಇಲ್ಲದಂತೆ ಪೊಲೀಸರು ಸುತ್ತುವರಿದಿದ್ದರಿಂದ, ಶತ್ರುಗಳ ಕೈ ವಶವಾಗಬಯಸದೆ ತಮಗೆ ತಾವೇ ಗುಂಡಿಟ್ಟುಕೊಂಡು ಆ ಮೂಲಕ ಜೀವಂತವಾಗಿ ಸೆರೆಯಾಗಬಾರದೆನ್ನುವ ತಮ್ಮ ಪ್ರತಿಜ್ಞೆಯನ್ನು ಪೂರೈಸಿಕೊಂಡರು.
 • ಸಾವಿನಲ್ಲಿಯೂ 'ಅಜಾದ್' ಹೆಸರನ್ನು ಸಾರ್ಥಕ ಪಡಿಸಿಕೊಂಡರು. 'ಯೋಧ ಎಂದಿಗೂ ತನ್ನ ಆಯುಧವನ್ನು ತ್ಯಜಿಸುವುದಿಲ್ಲ' ಎಂದು ಹೇಳಿದ ಅಜಾದ್, ಬ್ರಿಟಿಷ್ ರೊಂದಿಗೆ ಕಾದಾಡುತ್ತ ತನ್ನ ಪ್ರಾಣ ತ್ಯಜಿಸಿದರೂ ಕೈಯಲ್ಲಿನ ಆಯುಧವನ್ನು ಮಾತ್ರ ಬಿಡಲಿಲ್ಲ.
 1. Chandra Shekhar Azad (1906-1931)
 2. Bhawan Singh Rana (1 January 2005). Chandra Shekhar Azad (An Immortal Revolutionary Of India). Diamond Pocket Books (P) Ltd. p. 10. ISBN 978-81-288-0816-6. Retrieved 11 September 2012.