ಶ್ಯಾಮ್ ಪ್ರಸಾದ್ ಮುಖರ್ಜಿ
Jump to navigation
Jump to search
ಶ್ಯಾಮ್ ಪ್ರಸಾದ್ ಮುಖರ್ಜಿ | |
---|---|
![]() | |
ವೈಯಕ್ತಿಕ ಮಾಹಿತಿ | |
ಜನನ | ಕಲ್ಕತ್ತಾ, Bengal, British India | ೬ ಜುಲೈ ೧೯೦೧
ಮರಣ | ೨೩ ಜೂನ್ ೧೯೫೩ | (aged ೫೧)
ರಾಷ್ಟ್ರೀಯತೆ | Indian |
ರಾಜಕೀಯ ಪಕ್ಷ | Hindu Mahasabha, Bharatiya Jana Sangh |
ಸಂಗಾತಿ(ಗಳು) | ಸುಧಾ ದೇವಿ |
ಧರ್ಮ | ಹಿಂದೂ |
ಶ್ಯಾಮ್ ಪ್ರಸಾದ್ ಮುಖರ್ಜಿ (ಜುಲೈ ೬, ೧೯೦೧ - ಜೂನ್ ೨೩, ೧೯೫೩) ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ. ಶ್ಯಾಮ ಪ್ರಸಾದ್ ಮುಖರ್ಜಿ (6 ಜುಲೈ 1901 - 23 ಜೂನ್ 1953) ಒಬ್ಬ ಭಾರತೀಯ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣತಜ್ಞರಾಗಿದ್ದರು, ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ "ಕೈಗಾರಿಕೋದ್ಯಮ ಮತ್ತು ಸರಬರಾಜು(ವಾಣಿಜ್ಯೋದ್ಯಮ) ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರು ಕಾಂಗ್ರೆಸ್ ಪಕ್ಷವಲ್ಲದಿದ್ದರೂ, ಅವರ ಪ್ರತಿಭೆಯನ್ನು ಪರಿಗಣಿಸಿ, ಅವರನ್ನು ನೆಹರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಿದ್ದರು. ನಂತರ ನೆಹರೂ ಅವರ ಮಂತ್ರಿಮಂಡಲದಿಂದ ಹೊರಬಂದು, ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಚೂಣಿಯ ಬಲಪಂಥೀಯ ರಾಷ್ಟ್ರೀಯ ರಾಜಕೀಯ ಪಕ್ಷವಾಯಿತು.[೧][೨]