ವಿಷಯಕ್ಕೆ ಹೋಗು

ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಕ್ಷ್ಮಿ ಸೆಹಗಲ್ ಇಂದ ಪುನರ್ನಿರ್ದೇಶಿತ)
ಲಕ್ಷ್ಮೀ ಸೆಹೆಗಲ್
ಕಾಪ್ಟನ್ ಲಕ್ಷ್ಮೀ
ಜನನ೨೪ ಅಕ್ಟೋಬರ್ ೧೯೧೪
ಮರಣ೨೩ ಜುಲೈ ೨೦೧೨
ಸಂಗಾತಿಪಿ.ಕೆ.ಎನ್.ರಾವ್
ಮಕ್ಕಳುಸುಭಾಶಿಣಿ ಅಲಿ, ಅನಿಸ ಪೂರಿ ಕಾನ್ಪುರ್

ಜನನ,ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

ತಂದೆ ಡಾ. ಎಸ್. ಸ್ವಾಮಿನಾಥನ್ ಅಯ್ಯರ್, ಮದ್ರಾಸ್ ನಗರದ ವಿಖ್ಯಾತ ವಕೀಲರು. ತಾಯಿ, ಕೇರಳದ ನಾಯರ್, ಎ.ವಿ.ಅಮ್ಮುಕುಟ್ಟಿ,, ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯಪಾತ್ರವಹಿಸಿದ್ದರು. ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿದಿದ್ದರು. ಲಕ್ಷ್ಮಿಯವರಿಗೆ ಬಾಲ್ಯದಲ್ಲಿಯೇ ತಾಯಿಯವರ ಪ್ರಭಾವ ಅವರ ಮೇಲೆ ಆಗಿತ್ತು. ಲಕ್ಷ್ಮೀ ಸ್ವಾಮಿನಾಥನ್ ಸೋಶಿಲಿಸ್ಟ್ ಚಲುವಲಿಯಲ್ಲಿ ಸಕ್ರಿಯವಾಗಿ ಭಾಗವಹಿಸುತಿದ್ದರು. ಸನ್, ೧೯೩೮ ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಿಂದ (MBBS) ವೈದ್ಯ ಶಿಕ್ಷಣ ಮುಗಿಸಿ, ಅವರು ಡಿಪ್ಲೊಮ ಪರೀಕ್ಷೆಯನ್ನು ಮಾಡಿಕೊಂಡರು. (Diploma in Gynecology and Obstetrics) ಚೆನ್ನೈನ 'ಟ್ರಿಪ್ಲಿಕೇನ್ ವಲಯ'ದಲ್ಲಿ 'ಸರ್ಕಾರಿ ಕಸ್ತುರ್ಬಾ ಆಸ್ಪತ್ರೆ'ಯಲ್ಲಿ ವೈದ್ಯೆಯಾಗಿ ಕೆಲಸಮಾಡಿದರು.

ಸಿಂಗಪುರಕ್ಕೆ ಪ್ರಯಾಣ

[ಬದಲಾಯಿಸಿ]

೧೯೪೦ ರಲ್ಲಿ, ೨೬ ರ ಹರೆಯದಲ್ಲೇ ಸಿಂಗಪುರಕ್ಕೆ ತೆರೆಳಿದರು. ವಿಮಾನ ಚಾಲಕ, ಶ್ರೀ. ಪಿ.ಕೆ.ಎನ್. ರಾವ್ ಜೊತೆ ಮದುವೆಯ ಪ್ರಸ್ತಾಪವಿತ್ತು. ಆದರೆ ಅದು ಸರಿಹೋಗಲಿಲ್ಲ. ಅಲ್ಲಿ ಸುಭಾಷ್ ಚಂದ್ರ ಬೋಸ್ ರನ್ನು ಕಾಣುವ ಹಾಗೂ ಅವರ ಭಾಷಣಗಳನ್ನು ಕೇಳುವ ಸುಯೋಗ ದೊರೆಯಿತು. ೧೯೪೨ ರಲ್ಲಿ 'ಆಝಾದ್ ಹಿಂದ್ ಫೌಜ್' ಜೊತೆ ಸಂಬಂಧ ಬೆಳೆಯಿತು. ಜಪಾನಿಗೆ ಸಿಂಗಪುರವನ್ನು ಬಿಟ್ಟುಕೊಡುವ ಒಪ್ಪಿಗೆಯ ಸಮಯದಲ್ಲಿ ಜರುಗಿದ ಕದನದಲ್ಲಿ ನೂರಾರು ಸೈನಿಕರು ಅತಿ ಗಾಯಹೊಂದಿ ನರಳಿದರು. ಆ ಸಮಯದಲ್ಲಿ ವೈದ್ಯಕೀಯ ಸಹಾಯವನ್ನು ಲಕ್ಷ್ಮಿ,ಯವರು ಪೂರೈಸಿದರು. ಆಗ ಪ್ರಜ್ಞಾವಂತ ರಾಷ್ಟ್ರ ಪ್ರೇಮಿ ಭಾರತೀಯರು 'ಕ್ಯಾಪ್ಟನ್ ಸುಭಾಷ್ ಚಂದ್ರ ಬೋಸ್' ಜೊತೆಗೂಡಿ 'ಆಝಾದ್ ಹಿಂದ್ ಫೌಜ್' ನ ಸ್ಥಾಪನೆಗೆ ಕಾರಣರಾದರು. ಹಾಗೆ ಜೊತೆಗೂಡಿದ ಭಾರತೀಯರಲ್ಲಿ ಪ್ರಮುಖರು, 'ಕ್.ಪಿ.ಕೇಶವ ಮೆನನ್', 'ಎಸ್.ಸಿ.ಗುಹಾ', 'ಎನ್.ರಾಘವನ್,' ಮೊದಲಾದವರು. ಜಪಾನ್ ಯೋಧರ ಜೊತೆ ಸೇರಿದರೂ ಅವರಿಗೆ ಪ್ರಾಮುಖ್ಯತೆ ಸಿಗಲಿಲ್ಲ. ೨, ಜುಲೈ, ೧೯೪೩ ರಲ್ಲಿ ಸುಭಾಷ್ ಚಂದ್ರ ಬೋಸ್ ಸಿಂಗಪುರಕ್ಕೆ ಬಂದರು. ಐ.ಎನ್.ಎ. ಮುಂದಾಳುಗಳು ಇಂಫಾಲ ನಗರವನ್ನು ಪ್ರವೇಶಿಸುವ ಮೊದಲು ಯುದ್ಧವಿರಾಮವನ್ನು ಘೋಷಿಸಿದರು. ಮೇ, ೧೯೪೫ ರಲ್ಲಿ ಅವರು ಸುಭಾಷ್ ಚಂದ್ರ ಬೋಸ್ ರ ಜೊತೆ, ೫ ಗಂಟೆಗಳ ಸುದೀರ್ಘ ಚರ್ಚೆಯ ನಂತರ, ಲಕ್ಷ್ಮಿಯವರ ನೇತೃತ್ವದಲ್ಲಿ 'ಇಂಡಿಯನ್ ನ್ಯಾಷನಲ್ ಆರ್ಮಿಯ ಮಹಿಳಾ ವಿಭಾಗದ ಸ್ಥಾಪನೆಗೆ 'ಬೋಸ್,' ಒಪ್ಪಿಗೆ ನೀಡಿ, ಹಾಗೆ ನಿರ್ಧರಿಸಿದ ರೆಜಿಮೆಂಟಿಗೆ ’ಝಾನ್ಸಿ ರಾಣಿ ರೆಜಿಮೆಂಟ್,' ಎಂದು ನಾಮಕರಣ ಮಾಡಿದರು. ಐ.ಎನ್.ಎ. ನಲ್ಲಿ ಅಧಿಕಾರಿಯಾಗಿ, ಆಝಾದ್ ಹಿಂದ್ ಸರಕಾರದಲ್ಲಿ 'ಮಿನಿಸ್ಟರ್ ಫಾರ್ ವಿಮೆನ್ಸ್ ಅಫೇರ್ಸ್', ಆಗಿ ದುಡಿದರು. ಅದಕ್ಕೆ ಲಕ್ಷ್ಮಿಯವರನ್ನು 'ಕ್ಯಾಪ್ಟನ್' ಆಗಿ ನೇಮಿಸಿದರು. ಅಂದಿನಿಂದ ಅವರ ಹೆಸರಿನ ಜೊತೆಯಲ್ಲಿ ಡಾಕ್ಟರ್. ಹಾಗೂ ಕ್ಯಾಪ್ಟನ್ ಪದಗಳು ಜೊತೆ-ಜೊತೆಯಾದವು.

ಬರ್ಮಾ ಮಾರ್ಚ್

[ಬದಲಾಯಿಸಿ]

ಸನ್ ೧೯೪೪ ರ ಮಾರ್ಚ್ ತಿಂಗಳಲ್ಲಿ 'ಬರ್ಮಾ ಮಾರ್ಚ್' ಶುರುವಾಯಿತು. ೧೯೪೫ ರ ಮೇ ತಿಂಗಳಿನಲ್ಲಿ ಕ್ಯಾಪ್ಟನ್ ಲಕ್ಷ್ಮಿಯವರನ್ನು ಬ್ರಿಟಿಷ್ ಸರಕಾರ ಬಂಧಿಸಿತು. ಬರ್ಮಾದ ದುರ್ಗಮ ಅಡವಿಯಲ್ಲಿ ೧೧ ತಿಂಗಳ ಕಾಲ ಅವರನ್ನು 'ಗೃಹಬಂಧನ'ದಲ್ಲಿ ಇರಿಸಲಾಯಿತು. ದೆಹಲಿಯಲ್ಲಿ ಐ.ಎನ್.ಎ. ನಾಯಕರ ವಿಚಾರಣೆ ನಡೆಸುವ ವೇಳೆಗೆ ಕ್ಯಾಪ್ಟನ್ ಲಕ್ಷ್ಮಿಯವರನ್ನು ಭಾರತಕ್ಕೆ ಕಳುಹಿಸಲಾಯಿತು. ಆಸಮಯದಲ್ಲಿ ಐ.ಎನ್.ಎ ನಲ್ಲಿ ಕರ್ನಲ್ ಆಗಿದ್ದ ಶ್ರೀ. ಪ್ರೇಮ್ ಕುಮಾರ್ ಸೆಹೆಗಲ್, ಜೊತೆ ಗೆಳೆತನ ಬೆಳೆದು, ಅವರಿಬ್ಬರೂ ೧೯೪೭ ರಲ್ಲಿ ಮದುವೆಯಾದರು.

ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು

[ಬದಲಾಯಿಸಿ]
  • ದಲಿತರ ದೇವಾಲಯ ಪ್ರವೇಶದ ಪರವಾಗಿ,
  • ಬಾಲ್ಯ ವಿವಾಹದ ವಿರುದ್ಧ,
  • ವರದಕ್ಷಿಣೆ ವಿರೋಧ,
  • ದೇಶ ವಿಭಜನೆಯ ಬಳಿಕ, ಹಿಂದೂ-ಮುಸ್ಲಿಂ ಗಲಭೆಗಳ ನಿರಾಶ್ರಿತ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವ ತುರ್ತು

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟರು

[ಬದಲಾಯಿಸಿ]
  • ಸನ್ ೧೯೭೦ ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಸಿ.ಪಿ.ಎಂ.ಪಕ್ಷಕ್ಕೆ ಪಾದಾರ್ಪಣೆ,
  • ೧೯೮೪ ರಲ್ಲಿ ನಡೆದ ಭೂಪಾಲ್ ದುರಂತ ಸಂತ್ರಸ್ತರಿಗೆ ನೆರವು.
  • ಅದೇ ವರ್ಷ ಆಗಿನ ಪ್ರಧಾನ ಮಂತ್ರಿ,ಶ್ರೀಮತಿ.ಇಂದಿರಾ ಗಾಂಧಿ ಯವರ ಹತ್ಯೆ.ಯ ನಂತರದ, ಹಿಂದೂ-ಸಿಖ್ ಗಲಭೆಗಳಲ್ಲಿ ಸಂತ್ರಸ್ತರಿಗೆ ನೆರವು ಕಾನ್ಪುರನಗರದಲ್ಲಿ ಶಿಬಿರಗಳನ್ನು ಸ್ಥಾಪಿಸಿ ದುಡಿದರು.
  • ಸನ್. ೧೯೯೬ ರ, ಬೆಂಗಳೂರಿನಲ್ಲಿ ನಡೆದ 'ವಿಶ್ವಸುಂದರಿ ಸ್ಪರ್ಧೆ'ಯನ್ನು ವಿರೋಧಿಸಿ, ಪೋಲೀಸರ ಬಂಧನಕ್ಕೊಳಗಾದರು.

ಪದವಿ, ಪ್ರಶಸ್ತಿಗಳು

[ಬದಲಾಯಿಸಿ]
  • ೧೯೯೮, ಪದ್ಮವಿಭೂಷಣ್, ಆಗಿನ ರಾಷ್ಟ್ರಪತಿ, ಕೆ. ಆರ್. ನಾರಾಯಣನ್ ರವರಿಂದ.

ಐಡ್ವ ಸಂಸ್ಥೆಯ ಸ್ಥಾಪಕರಲ್ಲೊಬ್ಬರು

[ಬದಲಾಯಿಸಿ]

೧೯೭೧ ರಲ್ಲಿ ಮಾರ್ಕ್ಸಿಸ್ಟ್ ವಿಭಾಗದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಕ್ಕೆ ಸೇರಿ ರಾಜ್ಯ ಸಭೆಗೆ ಪ್ರತಿನಿಧಿಸಿದರು. ಬಂಗ್ಲಾದೇಶದ ಸಮಯದಲ್ಲಿ ಕಲ್ಕತ್ತಾನಗರದಲ್ಲಿ, ನಿರಾಶ್ರಿತರಿಗೆ, ರಿಲೀಫ್ ಕ್ಯಾಂಪ್ಸ್ ಆಯೋಜಿಸಿ ಚಿಕಿತ್ಸಾ ವ್ಯವಸ್ಥೆಯನ್ನು ಸ್ಥಾಪಿಸಿದರು. ೧೯೮೧ ರಲ್ಲಿ (AIDWA) ಸಂಸ್ಥೆಯನ್ನು ಸ್ಥಾ[ಪಿಸಿದವರಲ್ಲಿ ಇವರೂ ಒಬ್ಬರು. ಡಿಸೆಂಬರ್, ೧೯೮೪ ರಲ್ಲಿ ಭೂಪಾಲ್ ಅಫಘಾತದಲ್ಲಿ ನೊಂದ ಕಾರ್ಮಿಕರಿಗೆ ನೆರವು ನೀಡುವ ಅಭಿಯಾನದಲ್ಲಿ ಕೆಲಸಮಾಡಿದರು. ೧೯೮೪ ರಲ್ಲಿ ಹಿಂದೂ-ಸಿಖ್ ಗಲಭೆಯಲ್ಲಿ ಕಾನ್ಪುರ್ ನಗರದಲ್ಲಿ ಗಾಯಾಳುಗಳ ಸೇವೆಮಾಡಿದರು.

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದರು

[ಬದಲಾಯಿಸಿ]

ಸನ್. ೨೦೦೨ ರಲ್ಲಿ ೪ ಎಡಪಕ್ಷಗಳು ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ರವರನ್ನು ತಮ್ಮ ಪಕ್ಷದ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆರಿಸಿ ನಿಲ್ಲಿಸಿದರು. ಆ ಪಕ್ಷಗಳ ಹೆಸರುಗಳು ಹೀಗಿವೆ.

  • ಕಮ್ಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ,
  • ಕಮ್ಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ(ಮಾರ್ಕ್ಸ್),
  • ದಿ ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ,
  • ದಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್

ಡಾ. ಎ.ಪಿ.ಜೆ.ಅಬ್ದುಲ್ ಕಲಾಂ/ಅಬ್ದುಲ್ ಕಲಾಮ್‎ರ ವಿರುದ್ಧ ರಾಷ್ಟ್ರಪತಿ ಹುದ್ದೆಗೆ ಏಕೈಕ ಸ್ಪರ್ಧಾಳುವಾಗಿ ನಿಂತು ಸೋತರೂ, ಅವರ ಜನಪ್ರಿಯತೆ ಕಡಿಮೆಯಾಗಲಿಲ್ಲ. ನಂತರ ಕಾನ್ಪುರದ ತಮ್ಮ ಕ್ಲಿನಿಕ್ ನಲ್ಲಿ ಕುಳಿತು, ರೋಗಿಗಳ ಸೇವೆಯಲ್ಲಿ ನಿರತರಾದರು.

ಕ್ಯಾಪ್ಟನ್ ಲಕ್ಷ್ಮಿಯವರ ಪರಿವಾರ

[ಬದಲಾಯಿಸಿ]

ಸೋದರಿ, ಮೃಣಾಲಿನಿ, ಅಹ್ಮದಾಬಾದ್ ನ ಪ್ರಖ್ಯಾತ ವಿಜ್ಞಾನಿ ವಿಕ್ರಮ್ ಸಾರಾಭಾಯಿಯವರನ್ನು ಮದುವೆಯಾದರು. ಕ್ಯಾಪ್ಟನ್ ಲಕ್ಷ್ಮಿಯವರ ಮೊದಲನೆಯ ಮಗಳು 'ಸುಹಾಸಿನಿ. ಆಲಿ'ಯವರನ್ನು ಮದುವೆಯಾದರು. ಸಿ.ಪಿ.ಎಂ ಮುಂದಾಳು. ಮೊಮ್ಮಗ ಶಾದ್ ಆಲಿ, ಸಿನಿಮಾ ನಿರ್ಮಾಪಕ. ಎರಡನೆಯ ಮಗಳು ಅನಿಶಾ, ಪುರಿಯವರನ್ನು ಲಗ್ನವಾದರು.

ಸನ್, ೨೦೦೬ ರಲ್ಲಿ, ತಮ್ಮ ೯೨ ನೆಯ ವಯಸ್ಸಿನಲ್ಲೂ ತಮ್ಮ ಕಾನ್ಪುರದ ರುಗ್ಣಾಲಯದಲ್ಲಿ ರೋಗಿಗಳ ಸೇವೆಯನ್ನು ಮಾಡುತ್ತಿದ್ದರು. ತಮ್ಮ ೯೭ ರ ಇಳಿವಯಸ್ಸಿನಲ್ಲಿ ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ರವರು, ೧೯ ಜುಲೈ, ೨೦೧೨, ಖಾಯಿಲೆಯಿಂದ ಹಾಸಿಗೆ ಹಿಡಿದರು. ಹೃದಯಾಘಾತದಿಂದ ೨೩ ಜುಲೈ ೨೦೧೨ ರ, ಬೆಳಿಗ್ಯೆ, ೧೧.೨೦ ಕಾನ್ಪುರದಲ್ಲಿ ನಿಧನರಾದರು. ಆಗ ಆಕೆಗೆ ೯೭ ವರ್ಷ ವಯಸ್ಸಾಗಿತ್ತು. 'ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ನಿಧನರಾಗುವ ಮೊದಲೇ ತಮ್ಮ ಕಣ್ಣುಗಳನ್ನು ಹಾಗೂ ದೇಹವನ್ನು ಮೆಡಿಕಲ್ ಕಾಲೇಜ್ (Kanpur Medical college for medical research) ಗೆ ದಾನಮಾಡಲು ಉಯಿಲು ಬರೆದಿಟ್ಟಿದ್ದರು.