ಬಂಜಾರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಂಬಾಣಿ ಮಹಿಳೆ
GINNY
Banjara woman in traditional dress
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
Andhra Pradesh & Telangana 3.2 million
Karnataka 1.1 million
Maharashtra 2.4 million
Rajasthan 2.3 million
Madhya Pradesh 2.2 million
Punjab 2.0 million
ಭಾಷೆಗಳು

Banjari

ಧರ್ಮ

Hinduismದಪ್ಪಗಿನ ಅಕ್ಷರ

A Banjara Family
Traditional Banjara Dress
ಲಂಬಾಣಿ ಜನಾಂಗದ ಮಹಿಳೆ

ಬಂಜಾರ ಅಥವಾ ಲಂಬಾಣಿ ಅಥವಾ ನಾಯ್ಕ ಅಥವಾ ಗೋರ್ ಮಾಟ ಗುಜರಾತ್, ರಾಜಾಸ್ಥಾನ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳು ನಾಡುಗಳಲ್ಲಿ ಪ್ರಮುಖವಾಗಿ ನಿವಾಸಿಸುವ ಒಂದು ಜನಾಂಗ. ಮೂಲತಃ ರಾಜಸ್ಥಾನ ಮತ್ತು ಗುಜರಾತ್ ಮೂಲದ ಇವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. ಬಂಜಾರ್ ಸಮುದಾಯವು ತನ್ನದೇ ಅದಾ ವೇಷ ಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಇವರನ್ನು 'ಜಿಪ್ಸಿ'ಗಳೆಂದು ಕರೆಯುತ್ತಿದ್ದರು. ಭಾರತೀಯ ಸಂವಿಧಾನವು ಇವರನ್ನು ಅಧಿಸೂಚಿತ 'ಬುಡಕಟ್ಟು ಜನಾಂಗ'ವೆಂದು ಪರಿಗಣಿಸಿ ವಿವಿಧ ರಾಜ್ಯಗಳಲ್ಲಿ ಈ ಕೆಳಕಂಡಂತೆ ಗುರುತಿಸಿದೆ.

 1. ಕರ್ನಾಟಕ - ಪರಿಶಿಷ್ಟ ಜಾತಿ - ೩೦ ಲಕ್ಷ
 2. ಅಂಧ್ರ ಪ್ರದೇಶ - ಪರಿಶಿಷ್ಟ ಪಂಗಡ - ೮೫ ಲಕ್ಷ
 3. ಮಹಾರಾಷ್ಟ್ರ - ವಿ ಜೆ ಎ - ೮೦ ಲಕ್ಷ
 4. ಉತ್ತರ ಪ್ರದೇಶ - ಒಬಿಸಿ - ೬೫ ಲಕ್ಷ
 5. ಮದ್ಯ ಪ್ರದೇಶ - ಒಬಿಸಿ - ೫೫ ಲಕ್ಷ
 6. ರಾಜ್ಯಸ್ಥಾನ - ಈಗ ಒಬಿಸಿ - ೪೫ ಲಕ್ಷ
 7. ಗುಜರಾತ್ - ಒಬಿಸಿ - ೫೦ ಲಕ್ಷ
 8. ದೆಹಲಿ - ಪರಿಶಿಷ್ಟ ಜಾತಿ - ೩೦ ಲಕ್ಷ
 9. ತಮಿಳುನಾಡು - ವಿ ಜೆ ಎ - ೩೦ ಲಕ್ಷ
 10. ಜಮ್ಮು ಕಾಶ್ಮೀರ - ಒ ಬಿ ಸಿ - ೮ ಲಕ್ಷ

ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಹರಡಿರುವ ಇವರು ೬ ಕೋಟಿ ೮೪ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ. ಇವರು ಮೂಲತಃ ಉತ್ತರ ಹಿಂದೂ ಆರ್ಯಾ ಸಂಸ್ಕೃತಿಯವರಾಗಿದ್ದು, ತಮ್ಮನ್ನು ತಾವು ಗೋರ್ ಭಾಯ್ ಅಥವಾಾ ಗೋರ್ ಮಾಟಿ ಎಂದು ಕರೆದುಕೊಳ್ಳುತ್ತಾರೆ. ಇವರ ಮಾತೃ ಭಾಷೆ ಲಂಬಾಣಿಯಾಗಿದ್ದು, ಈ ಭಾಷೆಗೆ ಲಿಪಿ ಇಲ್ಲ ಹಾಗೂ ಹಿಂದಿ, ಉರ್ದು, ರಾಜಸ್ಠಾನಿ ಮತ್ತು ಸಂಸ್ಕೃತ ಭಾಷೆಗಳ ಸಂಮಿಶ್ರಣವಿದೆ. ಇವರು ವಾಸಿಸುವ ರಾಜ್ಯಗಳ ಭಾಷೆಯನ್ನು ಎರಡನೇಯ ಭಾಷೆಯಾಗಿ ಬಳಸುತ್ತಿದ್ದಾರೆ.ಇವರ ಮುಖ್ಯ ದೈವ ಸೇವಾಲಾಲ್. ಇವರ ಆರಾಧ್ಯ ದೈವದ ದೇವಾಸ್ಥನ ಕನಾ೯ಟಕ ರಾಜ್ಯದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೂರುಗೊಂಡನಕೊಪ್ಪದಲ್ಲಿದೆ.ಇತ್ತೀಚಿಗೆ ಹೊಸ ದಾಗಿ ರಚನೆಗೊಂಡ ನ್ಯಾಮತಿ ತಾಲ್ಲೂಕಿಗೆ ಈ ಗ್ರಾಮಸೇರುತ್ತದೆ. ಶಿವರಾತ್ರಿ ದಿನಂದ೦ದು ಆಪಾರ ಪ್ರಮಾಣದಲ್ಲಿ ದೂರ ದೂರದ ಊರುಗಳಿಂದ ಈ ಪುಣ್ಯಕ್ಷೇತ್ರಕ್ಕೆ ಲಂಬಾಣಿ ಬಂಧುಗಳು ಆಗಮಿಸುತ್ತಾರೆ.ಇತ್ತೀಚಿಗೆ ಚಿಕ್ಕದಾಗಿದ್ದ ದೇವಸ್ಥಾನವನ್ನು ಬಹುದೊಡ್ಡ ಪ್ರಮಾಣದಲ್ಲಿ ಪ್ರವಾಸಿ ಕೇಂದ್ರ ಮತ್ತು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಕುಲ ಕಸಬು[ಬದಲಾಯಿಸಿ]

ಇವರ ಕುಲ ಕಸಬು ಉಪ್ಪಿನ ವ್ಯಾಪಾರ ಹಾಗೂ ಪಶುಸಂಗೋಪನೆ. ಇವರು ಕಷ್ಟ ಜೀವಿಗಳು, ಸ್ವಾಭಿಮಾನಿಗಳು ಅಷ್ಟೇ ಪ್ರಾಮಾಣಿಕರು, ಮೊದಲು ಅಲೆಮಾರಿಗಳಾಗಿದ್ದು ಇತ್ತೀಚಿಗೆ ನಾಗರೀಕತೆ ಬೆಳೆದಂತೆ ಗ್ರಾಮಗಳಲ್ಲಿ/ಊರುಗಳಲ್ಲಿ ವಾಸವಾಗಿದ್ದಾರೆ. ತಮ್ಮ ಊರುಗಳಿಗೆ ತಾಂಡಗಳೆಂದು ಕರೆದು ಕೊಳ್ಳುತ್ತಾರೆ. ಸಾಮಾನ್ಯವಾಗಿ ತಾಂಡಗಳು ಊರಿನ ಹೊರಭಾಗದಲ್ಲಿರುತ್ತವೆ.

ಪಂಚಾಯತ್ ವ್ಯವಸ್ಠೆ[ಬದಲಾಯಿಸಿ]

ಬಂಜಾರ್ ರರು ತಮ್ಮ ಊರುಗಳಿಗೆ ತಾಂಡಗಳೆಂದು ಕರೆದು ಕೊಳ್ಳುತ್ತಾರೆ. ಸಾಮಾನ್ಯವಾಗಿ ತಾಂಡಗಳು ಊರಿನ ಹೊರಭಾಗದಲ್ಲಿರುತ್ತವೆ. ತಾಂಡಾದಲ್ಲಿ ಹಿರಿಯಾನಾದ ದಕ್ಷ ಹಾಗೂ ಸಮರ್ಥನಾದ ನಾಯಕನಿರುತ್ತಾನೆ. ಅವರಿಗೆ ನಾಯಕ್ಎಂದು ಇವರಿಗೆ ಸಹಾಯಕ ರಾಗಿ ಡಾವ್ಹಾಗೂ ಕಾರಬಾರಿಗಳಿರುತ್ತಾರೆ. ತಾಂಡಾದಲ್ಲ್ಲಿ ಎಂತಹುದೇ ಕ್ಲಿಷ್ಟ ಸಮಸ್ಯೆ ಎದುರಾದರು ಸಹ ಇವರುಗಳು ಬಗೆಹರಿಸಬಲ್ಲರು, ಈ ತಾಡಗಳಲ್ಲಿ ಯಾವುದೆ ತರಹದ ತೂಂದರೆಯಾದರೆ ಊರಿನ ಮುಖಮಂಡರು ಒಂದೇಡೆ ಸೇರಿ ಚರ್ಚಿಸಿ ಬಗೆಹರಿಸುತ್ಟಾರೆ.

ವೇಷಭೂಷಣಗಳು[ಬದಲಾಯಿಸಿ]

 • ಇವರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಗಂಡಸರು ಸಾದಾ ಪಂಚೆ(ಜಗಲಾ) ತಲೆಗೆ ಕೆಂಪು ಅಥವಾಾ ಬಿಳಿಯ ಬಣ್ಣದ ರುಮಾಲು(ಪಾಗಡಿ) ಕಟ್ಟುತ್ತಾರೆ. ಹೆಂಗಸರು ಸಂತೇ ಅಥವಾಾ ಅಂಗಡಿಯಿಂದ ಬಟ್ಟೆ ಖರೀದಿಸಿ ತಂದು ಜಾಕೀಟು (ಕಾಂಚಾಳಿ) ಲಂಗ (ಫೇಟಿಯಾ) ಮೇಲುವಸ್ತ್ರ(ಛಾಟೀಯಾ)ಗಳಿಗೆ ಗಾಜಿನ ಚೂರುಗಳನ್ನು ಸೇರಿಸಿ ಕಸೂತಿ ಹಾಕಿ ತಮ್ಮ ವಸ್ತ್ರಗಳನ್ನು ತಾವೇ ಹೊಲಿದು ಕೊಳ್ಳುತ್ತಾರೆ.
 • ಇವರು ತೊಡುವ ಆಭರಣಗಳು ಇನ್ನು ಅದ್ಭುತ, ಮುತೈದೆ ಹೆಣ್ಣು ಮಗಳು ಅಲಂಕಾರವು ಬಣ್ಣಬಣ್ಣದ ಹರಳುಗಳೊಂದಿಗೆ ಪಾವಲಾರ್ ಹಾರ್ (ಬೆಳ್ಳಿಯ ನಾಲ್ಕಾಣೆ, ಎಂಟಾಣೆಗಳನ್ನು ಕೊಂಡಿ ಮಾಡಿಸಿ ಕೊಂಡ ಹಾರ)ಹಾಕಿಕೊಂಡಿರುತ್ತಾರೆ. ತಲೆಗೆ ಗುಗ್ಗುರಿ(ಬೆಳ್ಳಿಯ ಜೆಡೆಕುಚ್ಚು) ತೋಳಿಗೆ, ಕೈಗೆ ಬಲಿಯಾ(ಪ್ಲಾಸ್ಟಿಕ್ ಅಥವಾಾ ಜಿಂಕೆ/ಸಾರಂಗ ಪ್ರಾಣಿಯ ತಲೆಯ ಕೊಂಬಿನಿಂದ ಮಾಡಿದ ಬಳೆ) ಕಾಲಿಗೆ ಕಸ್, ಅಂಗುತ್ಲಾ, ಚಟಕಿ,(ಹಿತ್ತಾಳೆಯ ಒಡವೆ) ಹೀಗೆ ಅಡಿಯಿಂದ ಮುಡಿಯವರೆಗೆ ಆಭರಣಗಳ ಗಣಿಯಾಗಿರುತ್ತಾರೆ. ಅದರೆ ಇತ್ತೀಚಿನ ನಾಗರೀಕತೆಯ ಗಾಳಿಗೆ ಮಾಯಾವಾಗುತ್ತಿದೆ.

ಪಂಗಡಗಳು[ಬದಲಾಯಿಸಿ]

 • ಬಂಜಾರ್/ಲಂಬಾಣಿಗಳು ತಮ್ಮಲ್ಲಿಯ ಪಂಗಡಗಳಿಗೆ ಪಾಡಾಎಂದು ಕರೆಯುತ್ತಾರೆ. ಇವರಲ್ಲಿ ಜಾತ್ - ಭುಕಿಯಾ ಎಂಬ ಎರಡು ಮುಖ್ಯವಾದ ಪಂಗಡಗಳಿವೆ. ಈ ಎರಡು ಪಂಗಡಗಳಲ್ಲಿ ಹಲವು ಒಳಪಂಗಡಗಳಿವೆ ಒಂದು ಪಂಗಡದವರು ಅದೇ ಪಂಗಡದಲ್ಲಿ ಮದುವೆಯಾಗು ವುದಿಲ್ಲ. ಒಂದೇ ಪಂಗಡದವರು ಪರಸ್ಪರ ಸಹೋದರ ಸಹೋದರಿ ಎಂದು ಭಾವಿಸುತ್ತಾರೆ.
 • ಜಾತ್ ನವರು ಭುಕಿಯಾ ಅವರೊಂದಿಗೆ ಭುಕಿಯಾದವರು ಜಾತ್ ಅವರೊಂದಿಗೂ ಮದುವೆ ಸಂಬಂಧ ಬೆಳೆಸುತ್ತಾರೆ. ಪಾಡಾಗಳು ಈ ರೀತಿಯಿದೆ;ರಾಥೋಡ್/ಭುಕಿಯಾ(೨೭ ಪಾಡಾ), ಪಾವ್ವಾರ್(೧೨ ಪಾಡಾ), ವಾಡತ್ಯಾ/ಜಾದವ್(೫೨ ಪಾಡಾ), ಚಾವ್ಹಾಣ್(೬ ಪಾಡಾ), ಬಾಣ್ಣೋತ್(೧೫ ಪಾಡಾ)

ವಿವಾಹ ಪದ್ದತಿ[ಬದಲಾಯಿಸಿ]

 • ಇವರಲ್ಲಿಯೂ ಸಹ ಬಾಲ್ಯವಿವಾಹ ಪದ್ದತಿ ಜಾರಿಯಲ್ಲಿತ್ತು, ಅದರೆ ಈಗ ಈ ಪದ್ದತಿಯನ್ನು ಕೈಬಿಡಲಾಗಿದೆ. ಹಿಂದೆ ಬಾಲ್ಯವಿವಾಹ ಪದ್ದತಿಯು ರೂಡಿಯಲ್ಲಿದ್ದಾಗ ತೊಟ್ಟಲಿನಲ್ಲಿಯೇ ವಿವಾಹ ಮುಗಿದುಹೊಗುತ್ತಿತು. ಹುಡುಗಿ ಬೆಳೆದು ದೊಡ್ಡವಳಾದಾಗ ಗಂಡನ ಮನೆಗೆ ತಿಳಿಸುತ್ತಿದ್ದರು, ಅಲೆಮಾರಿಗಳಾದ ಇವರು ಒಂದೇ ಕಡೇ ನೆಲೆನಿಲ್ಲುತ್ತಿರಲಿಲ್ಲ.
 • ಆಗಾ ಹೆಣ್ಣಿನ ಮನೆಗೆ ಗಂಡು ಹೋಗುವಾಗ ನದಿ ಕಾಡುಗಳನ್ನು ದಾಟಬೇಕಾಗಿತ್ತು.ಹಾಗಾಗಿ ಗಂಡು ಕೈಯಲ್ಲಿ ಕಠಾರಿ ಮತ್ತು ನಾಳ್(ಬಿದರಿನ ಕೋಲು)ಹಾಗೂ ಒಬ್ಬ ಜೋತೆಗಾರನನ್ನು (ಲೇರ್ಯಾ)ಕರೆದು ಕೊಂಡು ಹೋಗುತ್ತಿದ್ದನು. ಇವರ ಸಮುದಾಯದಲ್ಲಿ ಮದುವೆಯ ಕಾರ್ಯವನ್ನು ನಾಲ್ಕು ಹಂತಗಳಲ್ಲಿ ಏರ್ಪಡಿಸುತ್ತಾರೆ.
 1. ವಾತ್ ಬೋಲಿ(ಮಾತುಕತೆ),
 2. ಸಗಾಯಿ(ನಿಶ್ಚಯಿಸುವುದು),
 3. ಗೋಳ್ ಖಾಯರ್(ವಿಳ್ಳೇ),
 4. ವೀಯಾ(ಮದುವೆ-ತಾಳಿಕಟ್ಟುವ ಕಾರ್ಯಾಕ್ರಮ) ಇವರ ಸಮುದಾಯದಲ್ಲಿ ಹೆಣ್ಣಿಗೆ ತೆರ ಕೊಟ್ಟು ಮದುವೆಯಾಗುವ ಒಂದು ಒಳ್ಳೆಯ ಸಂಪ್ರಾದಾಯವಿದೆ.
 • ಮದುವೆಯ ವರನನ್ನು 'ವೇತಡು' ವಧುವನ್ನು ನವುಲೇರಿ ಎಂದು ಮದುವೆಯ ಸಮಾರಂಭದಲ್ಲಿ ವರನ ಜೋತೆ ಒಬ್ಬ ಜೋತೆಗಾರನಿರುತ್ತಾನೆ. ಅವರಿಗೆ ಲೇರ್ಯಾ ಎಂದು ಕರೆಯುತ್ತಾರೆ. ೪೦-೦೫ರ ದಶಕದಲ್ಲಿ ಮದುವೆ ಸಮಾರಂಭವನ್ನು ವಾರಕೊಂದು ಶಾಸ್ತ್ರದಂತೆ ತಿಂಗಳು ಪೂರ್ತಿ ಮದುವೆ ಸಂಭ್ರಮದಲ್ಲಿರುತ್ತಿದ್ದರು.
 • ಆದರೆ ಇಂದಿನ ದಿನಗಳಲ್ಲಿ ಒಂದೇ ದಿನದಲ್ಲಿ ಎಲ್ಲಾ ಶಾಸ್ತ್ರಗಳೊಂದಿಗೆ ಮದುವೆಯನ್ನು ಮುಗಿಸುತ್ತಾರೆ. ಶಾಸ್ತ್ರಗಳು ಈ ರೀತಿ ಇವೇ - ಹಾಂಡಿ ಲಾಯೇರು( ಮಡಿಕೆ ಶಾಸ್ತ್ರ), ಮೇಹಂದಿ, ರಂಗ್, ಘೋಟಾ ಗೋಳೆರೂ, ಬಂಗಾಡಿ ಪೇರೆರೂ,ಟೀಕೋ ದೇರೂ,ಮಾಂಡ್, ಹೋಕಲ್ಡಿ ದೋಖೆರೂ, ತಾಳಿ ಬಾಂದೇರೂ, ಇನ್ನೂ ಹಲವಾರು ಶಾಸ್ತ್ರಗಳಿರುತ್ತವೆ.

ಲಂಬಾಣಿ ನೃತ್ಯ[ಬದಲಾಯಿಸಿ]

ಹಾಡುವುದು ಲಂಬಾಣಿ ವರ್ಗದ ಒಂದು ಜನಪದಪ್ರಕಾರವಾದರೆ, ಮತ್ತೊಂದು ಪ್ರಸಿದ್ಧ ಜನಪದ ಪ್ರಕಾರವೆಂದರೆ ನೃತ್ಯ. ಲಂಬಾಣಿ ನೃತ್ಯ ಅಲ್ಲಿನ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು. ಮುಂಗೈ ಮತ್ತು ಕಾಲುಗಳಿಗೆ ದಪ್ಪನೆಯ ಬೆಳ್ಳಿ ಕಡಗ, ಕಿವಿಯಲ್ಲಿ ಜೋತು ಬೀಳುವಷ್ಟು ಆಭರಣ, ರ್ತಕೆಂಪಿನ ಬನಾತು, ತುಂಬಿದ ನೆರಿಗೆಗಳಿಂದ ಕೂಡಿದ ತುಂಡು ಲಂಗ, ಲಂಗದ ಮೇಲೆ ಅಂಗೈಯಗಲದ ಕನ್ನಡಿಗಳು ಹಾಗೂ ಅಡವಿಯಿಂದ ಸಂಗ್ರಹಿಸಿದ ಮಣಿಗಳ ಚಿತ್ತಾರ, ಕುತ್ತಿಗೆಯಲ್ಲಿ ಇಳಿಬಿಟ್ಟ ಆರೇಳು ಮಣಿಸರ, ತೋಳುಬಂದಿ, ಬೆರಳುಗಳಿಗೆ ತಾಮ್ರದ ಹಾಗೂ ಹಿತ್ತಾಳೆ ಉಂಗುರ ಧರಿಸಿದ ಲಂಬಾಣಿ ಸ್ತ್ರೀಯರು ಆರ್ಭಟ, ಭಾವಾವೇಶಗಳಿಲ್ಲದಂತೆ ನರ್ತಿಸುತ್ತಾರೆ. ಸಮೂಹ ಗಾಯನದಲ್ಲಿ ನಡು ನಡುವೆ ಚಪ್ಪಾಳೆ ಹಾಕಿಕೊಳ್ಳುತ್ತಾ, ಲಯಭರಿತವಾಗಿ ಗಂಟೆಗಟ್ಟಲೆ ಕುಣಿಯುತ್ತಾರೆ.

ಕಥನಕಾವ್ಯ[ಬದಲಾಯಿಸಿ]

 • ಲಂಬಾಣಿಗರ ಸಾಂಸ್ಕೃತಿಕ ವೀರ ಸೇವಾಲಾಲ. ಈತನನ್ನು ನೆನೆಯುತ್ತಾ ಹಾಡುವ ಕಥನಕಾವ್ಯ ವೈಶಿಷ್ಟ್ಯಪೂರ್ಣವಾದುದು. ಕಥೆ:-ರಾಥೋಡ ಮನೆತನದ ಬಂಜಾರಕುಲದ ಭೀಮನಾಯಕ ಮತ್ತು ಧರ್ಮಿಣಿಯರ ಮಗ ಸೇವಾಲಾಲ. ಈತ ನಿತ್ಯವೂ ದನಗಳನ್ನು ಕಾಯಲು ಕಾಡಿಗೆ ಹೋಗುತ್ತಿದ್ದ. ಇವನನ್ನು ಪವಾಡ ಪುರುಷನೆಂದು ಇವರು ನಂಬುತ್ತಾರೆ. ಒಮ್ಮೆ ಸೇವಾಲಾಲನ ಜೊತೆಗಿದ್ದ ಗೋಪಾಲಕರಿಗೆ ಹಸಿವಾಗಿ ತಿನ್ನಲು ಅನ್ನವಿಲ್ಲದಿದ್ದಾಗ, ಕರಿಮಣ್ಣಿನಲ್ಲಿ ಹಳ್ಳದ ನೀರು ಹಾಕಿ ಶಿರಾ ತಯಾರಿಸಿದನಂತೆ.
 • ಮತ್ತೊಂದು ದಿನ ಹಸುಗಳನ್ನು ಕಾಇಡನಲ್ಲಿ ಮೇಯಲು ಬಿಟ್ಟು ಕೊಳಲನೂದುತ್ತಾ ಕುಳಿತಿರುವಾಗ ಜಗದಾಂಬ ಎಂಬ ದೇವತೆ ಮುದುಕಿಯ ವೇಷದಲ್ಲಿ ಬಂದು ಸೇವಾಲಾಲನನ್ನು ತನ್ನ ಭಕ್ತನಾಗುವಂತೆ ಕೇಳುತ್ತಾಳೆ. ಇದಕ್ಕೆ ಸೇವಾಲಾಲ ಒಪ್ಪದೆ ಹೋದಾಗ, ಅವನಿದ್ದ ತಾಂಡಾಕ್ಕೆ ಮಹಾಮಾರಿ ರೋಗ ಬರುವಂತೆ ಮಾಡುತ್ತಾಳೆ.
 • ಸೇವಾಲಾಲನಿಗೆ ದಟ್ಟದಾರಿದ್ರ್ಯ ಅಂಕುರಿಸುವಂತೆ ಮಾಡಿ, ಅವನಿಗೆ ಕಷ್ಟಗಳ ಮೇಲೆ ಕಷ್ಟಕೊಟ್ಟು, ಕಡೆಗೂ ಆತನನ್ನು ತನ್ನ ಭಕ್ತನ್ನಾಗಿಸಿಕೊಳ್ಳುತ್ತಾಳೆ. ಈ ಪ್ರಸಂಗವನ್ನು ಲಂಬಾಣಿ ಸಮುದಾಯ ಗಂಟೆಗಟ್ಟಲೆ ಹಾಡುತ್ತದೆ.
"https://kn.wikipedia.org/w/index.php?title=ಬಂಜಾರ್&oldid=841999" ಇಂದ ಪಡೆಯಲ್ಪಟ್ಟಿದೆ