ವಿಷಯಕ್ಕೆ ಹೋಗು

ಬರೇಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರೇಲಿ
Bareilly
city
Population
 • Total೬,೯೯,೮೩೯

ಉತ್ತರ ಭಾರತಉತ್ತರ ಪ್ರದೇಶ ರಾಜ್ಯದ ಬರೇಲಿ ಜಿಲ್ಲೆಯ ಬರೇಲಿ pronunciation  (ಹಿಂದಿ:बरेली, ಉರ್ದು: بریلی)ಯು ಒಂದು ನಗರವಾಗಿದೆ. ಬರೇಲಿ ವಿಭಾಗದ ರಾಜಧಾನಿಯಾಗಿರುವ ಇದು ರಾಮಗಂಗಾ|ರಾಜಧಾನಿಯಾಗಿರುವ ಇದು ರಾಮಗಂಗಾ ನದಿಯ ಬಳಿಯಿಂದೆ, ಮತ್ತು ರೋಹಿಲ್‌ಖಂಡವು ಭೌಗೋಳಿಕ ಪ್ರದೇಶವಾಗಿದೆ. ಇದು ಪೀಠೋಪಕರಣಗಳನ್ನು ತಯಾರಿಸುವ ಮತ್ತು ಹತ್ತಿ, ಧಾನ್ಯ, ಮತ್ತು ಸಕ್ಕರೆಯ ವ್ಯಾಪಾರದ ಕೇಂದ್ರವಾಗಿದೆ. 2001ರಲ್ಲಿ ಈ ನಗರದ ಜನಸಂಖ್ಯೆಯು[] 699,839 ಆಗಿತ್ತು. ಭೌಗೋಳಿಕವಾಗಿ ಉತ್ತರಖಂಡ ರಾಜ್ಯವನ್ನು ಸೇರಲು ಇದು ಹೊರ ಮುಖ್ಯದ್ವಾರವನ್ನು ನಿರ್ಮಿಸಿದೆ. ವೇಗವಾಗಿ ಬೆಳೆಯುತ್ತಿರುವ್ ಈ ನಗರವನ್ನು ಬ್ಯಾನ್ಸ್‌-ಬರೇಲಿ(ಬನ್ಸಲ್‌ದೇವ್‌ ಮತ್ತು ಬರಲ್‌ದೇವ್‌) ಎಂತಲೂ ಗುರುತಿಸಲಾಗುತ್ತದೆ. ಬರೇಲಿ ಬೆತ್ತದ (ಬ್ಯಾನ್ಸ್‌) ಪೀಠೋಪಕರಣವನ್ನು ಉತ್ಪಾದಿಸುವ ಕೇಂದ್ರವಾಗಿದ್ದರೂ ಕೂಡ ಇದು ಕಾಕತಾಳೀಯ ಮಾತ್ರವಾಗಿದೆ. ಬ್ಯಾನ್ಸ್‌ ಬರೇಲಿ ಎಂಬ ಹೆಸರು ಇಲ್ಲಿರುವ ಅತಿದೊಡ್ಡ (ಬಿದಿರಿನ) ಮಾರುಕಟ್ಟೆಯಿಂದಾಗಿ ಬಂದಿಲ್ಲ.ಇದು ಇಬ್ಬರು ರಾಜಕುಮಾರರ ಹೆಸರಾದ ಬನಸಲ್‌ದೇವ್‌ ಮತ್ತು ಬರಲ್‌ದೇವ್‌ (ಸ್ಥಳೀಯ ರಾಜನ ಮಗ)ನಿಂದ ಈ ಹೆಸರು ಬರಲು ಕಾರಣವಾಯಿತು.

 ಯಾವಾಗ ರಾಷ್ಟ್ರ ರಾಜಧಾನಿಯ ಪ್ರದೇಶ (NCR) ನ "Counter Magnets" ನಲ್ಲಿ ಇದರ ಹೆಸರು ದಾಖಲಾಯಿತೋ, ಆಗ ಈ ನಗರದ ಪ್ರತಿಷ್ಟೆಯೂ ಹೆಚ್ಚಾಯಿತು. ಏಕೆಂದರೆ, ಭಾರತದ ರಾಜಧಾನಿ ನವದೆಹಲಿ ಮತ್ತು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಇದು ಸಮಾನ ದೂರದಲ್ಲಿತ್ತು. ಬರೇಲಿಯು ಕೈಗಾರಿಕೆ ಸ್ಥಾಪನೆಗೆ ಅತ್ಯಂತ ಹೆಚ್ಚಿನ ಯೋಗ್ಯವಾಗಿದ್ದರಿಂದ, ಜನರು ಹೆಚ್ಚು ಆಕರ್ಷಿತರಾದರು. ಐತಿಹಾಸಿಕವಾಗಿ ಇದು ಪುರಾತನ ಪಾಂಚಾಲ್‌ ಮತ್ತು ಕತೇರಿಯಾ ರಜಪೂತದ ರಾಜ್ಯಗಳ ಭಾಗವಾಗಿತ್ತು. ಮಧ್ಯಯುಗದ ಕಾಲದಲ್ಲಿ ಇದು ರೋಹಿಲ್ಲಾಗಳ ಆಳ್ವಿಕೆಯ ಅಡಿಯಲ್ಲಿತ್ತು. ಆಧುನಿಕ ನಗರದ ಶಂಕುಸ್ಥಾಪನೆಯನ್ನು 1657ರಲ್ಲಿ ಮುಕರಂದ್‌ ರೈನಿಂದ ನೆರವೇರಲ್ಪಟ್ಟಿತು. ಇತ್ತೀಚಿನ ದಿನಗಳಲ್ಲಿ ಬರೇಲಿ ಇಬ್ಬರು ಪ್ರಮುಖ ವ್ಯಕ್ತಿಗಳಾದ ವಸೀಮ್‌ ಬರೆಲ್ವಿ (ವಿಶ್ವ ಖ್ಯಾತ ಉರ್ದು ಕವಿ) ಮತ್ತು ಪ್ರಿಯಾಂಕ ಛೋಪ್ರಾ (ಮಾಜಿ ಮಿಸ್‌ ವರ್ಲ್ದ್‌ ಮತ್ತು ಪ್ರಖ್ಯಾತ ಬಾಲಿವುಡ್‌ ನಟಿ) ಅವರನ್ನು ನೀಡಿದೆ.

ಹವಾಮಾನ ಮತ್ತು ಭೌಗೋಳಿಕತೆ

[ಬದಲಾಯಿಸಿ]

ಬರೇಲಿಯು 28°10′N, 78°23′E ನಲ್ಲಿದೆ, ಮತ್ತು ಉತ್ತರ ಭಾರತದಲ್ಲಿದೆ. ಪೂರ್ವದಲ್ಲಿ ಪಿಲಿಭಿಟ್‌ಮತ್ತು ಷಹಜಪುರ, ಪಶ್ಚಿಮದಲ್ಲಿ ರಾಂಪುರ್‌, ಉತ್ತರದಲ್ಲಿ ಉಧಮ್‌ ಸಿಂಗ್‌ ನಗರ್‌(ಉತ್ತರಖಾಂಡ್‌) ಮತ್ತು ದಕ್ಷಿಣದಲ್ಲಿ ಬದೌಮ್‌ಗಳು ಈ ನಗರದ ಗಡಿಪ್ರದೇಶಗಳಾಗಿವೆ. ಗಂಗಾನದಿಯ ತಟದಲ್ಲಿ ಸಂಪೂರ್ಣ ಬರೇಲಿ ನಗರ ಇದೆ. ಈ ಭಾಗದಲ್ಲಿ ಗಂಗಾನದಿಯು ನಿಧಾನವಾಗಿ ಹರಿಯುವುದರಿಂದ ಕೃಷಿಗೆ ಉಪಯುಕ್ತವಾದ ಫಲವತ್ತಾದ ಮೆಕ್ಕಲು ಮಣ್ಣು ದೊರೆಯುತ್ತದೆ. ಹಾಗಿದ್ದರೂ, ತಟದ ಕೆಳಭಾಗವು ಆಗಾಗ್ಗೆ ಜಲಪ್ರವಾಹದ ಭೀತಿಯನ್ನು ಎದುರಿಸಬೇಕಾಗಿದೆ.

 ರಾಮಗಂಗಾ ನದಿಯ ತಟದಲ್ಲಿ ಬರೇಲಿ ಇದ್ದು, ಏಳು ನದಿಗಳು ಈ ಜಿಲ್ಲೆಯ ಮೂಲಕ ಹರಿಯುತ್ತವೆ. ಇಲ್ಲಿಂದ ಕೆಳಭಾಗದ ಹಿಮಾಲಯ ಪರ್ವತ ಶ್ರೇಣಿಯು ಕೇವಲ 40 ಕಿ.ಮೀ ದೂರವಿದೆ ಮತ್ತು ಇದು ಇದರ ಉತ್ತರಭಾಗದಲ್ಲಿ ಬರುತ್ತದೆ.

ಅರೆ-ಶುಷ್ಕ ವಾತಾವರಣವನ್ನು ಹೊಂದಿರುವ ಬರೇಲಿಯು ಬೇಸಿಗೆ ಕಾಲ ಮತ್ತು ಚಳಿಗಾಲದ ಹವಾಮಾನದಲ್ಲಿ ಅತ್ಯಂತ ಹೆಚ್ಚಿನ ಬದಲಾವಣೆಯನ್ನು ಹೊಂದಿದೆ.

 ಏಪ್ರಿಲ್‌ ಆರಂಭದಿಂದ ಅಕ್ಟೋಬರ್‌ವರೆಗೆ ಬೇಸಿಗೆಯಿರುತ್ತದೆ ಮತ್ತು ಮಳೆಗಾಲವು ಇದರ ಮಧ್ಯದಲ್ಲಿ ಆರಂಭಗೊಳ್ಳುತ್ತದೆ. ಅಕ್ಟೋಬರ್‌ನಲ್ಲಿ ಆರಂಭಗೊಳ್ಳುವ ಚಳಿಅಗಾಲವು ಜನವರಿ ತಿಂಗಳಿನಲ್ಲಿ ಉತ್ತುಂಗಕೇರುತ್ತದೆ ಮತ್ತು ಅತ್ಯಂತ ಹೆಚ್ಚಿನ ಮಂಜು ಬೀಳುವುದಕ್ಕೆ ಹೆಸರುವಾಸಿಯಾಗಿದೆ. ತೀವ್ರತರನಾದ ಹವಾಗುಣವು 4 °C ಯಿಂದ 47 °C ವರೆಗಿರುತ್ತದೆ. ವಾರ್ಷಿಕ ಹವಾಗುಣವು 25 °C (77 °F) ಇದ್ದು, ಮಾಸಾಂತ್ಯದ ಹವಾಗುಣವು 14 °C ಯಿಂದ 33 °C ಗೆ (58 °F to 92 °F) ನಷ್ಟಿರುತ್ತದೆ. ವಾರ್ಷಿಕ ಸರಾಸರಿ ಮಳೆಯು ಗರಿಷ್ಠ 1714 ಮಿಮಿ  (28.1 ಇಂಚು)  ಇರುತ್ತದೆ, ಇದರ ಬಹುತೇಕ ಮಳೆ ಮುಂಗಾರಿನ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಸುರಿಯುತ್ತದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

ಭಾರತೀಯ ಸರಕಾರದ 2005ರ ಗಣತಿಯ ವರದಿ ಪ್ರಕಾರ, ಒಟ್ಟು ಬರೇಲಿ ನಗರ ಪ್ರದೇಶದ (ಬರೇಲಿ ಮುನಿಸಿಪಲ್‌ ಕಾರ್ಪೋರೇಶನ್‌ ಮತ್ತು ಬರೇಲಿ Cantt.) ಜನಸಂಖ್ಯೆಯ 875,165ರಲ್ಲಿ 53% ಗಂಡಸರು ಹಾಗು ಸುಮಾರು 47% ಹೆಂಗಸರು ಇದ್ದರು. ಈ ನಗರ ಪ್ರದೇಶ 123.46 ಚದರ ಕಿ.ಮೀ ನಷ್ಟು ಜಾಗದಿಂದ ಕೂಡಿದೆ. ಆದರೆ ಇದರ ಜನಸಾಂದ್ರತೆ ಪ್ರತಿ 5000 ಕಿ. ಮೀಟರ್‌ಗೆ ದೇಶದಲ್ಲಿಯೇ ಅತಿ ಹೆಚ್ಚು ಇದೆ.2.ಇಲ್ಲಿನ ಜನಸಂಖ್ಯೆಯಲ್ಲಿ ಬಹುಪಾಲು ಜಟವಾಗಳು ಮತ್ತು ಬಾಲ್ಮಿಕೀಗಳು ಮತ್ತು ಬನಿಯಾಗಳು, ಠಾಕೂರರು, ಕಯಸ್ತಾಗಳು ಮತ್ತು ಪಂಜಾಬಿಗಳಂತಹ ಹಿಂದುಳಿದ ವರ್ಗಗಗಳಿಂದ ಕೂಡಿದೆ. ಶೇ.62 ರಷ್ಟು ಹಿಂದೂ ಜನಸಂಖ್ಯೆಯಿದ್ದರೆ, ಶೇ.26ರಷ್ಟು ಮುಸ್ಲಿಮರು, ಶೇ.10ರಷ್ಟು ಸಿಖ್‌ ಜನಸಂಖ್ಯೆ ಮತ್ತು ಉಳಿದಂತೆ ಜೈನರು, ಬೌದ್ಧರು, ಮತ್ತು ಕ್ರೈಸ್ತರುಗಳಿದ್ದಾರೆ. ಬರೇಲಿಯು ರಾಷ್ಟ್ರದ ಸರಾಸರಿ 59.5 ಸಾಕ್ಷರ ಪ್ರಮಾಣಕ್ಕಿಂತಲೂ ಹೆಚ್ಚಿನ ಅಂದರೆ ಶೇ.81 ರಷ್ಟು ಸಾಕ್ಷರತೆಯನ್ನು ಹೊಂದಿದ್ದು, ಶೇ.88 ರಷ್ಟು ಗಂಡಸರು ಮತ್ತು ಶೇ.65ರಷ್ಟು ಹೆಣ್ಣುಮಕ್ಕಳು ವಿದ್ಯಾವಂತರಿದ್ದು, ಉತ್ತರಖಾಂಡದ ಸಾಕ್ಷರತೆಯಲ್ಲಿ ಅಭಿವೃದ್ಧಿ ಹೊಂದಿದ ಮೂರು ಜಿಲ್ಲೆಗಳಲ್ಲಿ ಒಂದನ್ನಾಗಿ ಮಾಡಿದೆ. ಪ್ರಮುಖವಾಗಿ ಇಲ್ಲಿ ಹಿಂದಿ, ಉರ್ದು, ಇಂಗ್ಲೀಷ್‌, ಪಂಜಾಬಿ, ಕುಮೌನಿ ಭಾಷೆಯನ್ನು ಮಾತನಾಡಲಾಗುತ್ತದೆ. ಆಡಳಿತಾತ್ಮಕ ಅನುಕೂಲತೆಗಾಗಿ, ಬರೇಲಿ ಜಿಲ್ಲೆಯನ್ನು 6 ತಹಸಿಲ್‌ಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಓನಲಾ, ಫರಿದಿಪುರ್‌, ಬರೇಲಿ, ಮೀರ್‌ಗಂಜ್‌, ನವಾಬ್‌ಗಂಜ್‌, ಮತ್ತು ಬಹೇರಿ ಮತ್ತು 14 ವಿಭಾಗಗಳು.

ರಾಜಕೀಯ

[ಬದಲಾಯಿಸಿ]

ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ಸಿನ ಶ್ರೀ. ಪ್ರವೀಣ್‌ ಸಿಂಗ್‌ ಐರಾನ್‌ ಬರೇಲಿಯ ಸಂಸದ 15ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಬರೇಲಿ ಯಾವಾಗಲೂ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕೇಸರಿ ಪಕ್ಷಗಳಿಗೆ ರಣರಂಗವಾಗಿಯೇ ಇದೆ. ಪ್ರಾದೇಶಿಕ ಪಕ್ಷಗಳಾದಂತಹ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಮಿತಿಯಾದ ಪ್ರಭಾವವನ್ನು ಹೊಂದಿವೆ.

ಸುಮಾರು 20 ವರ್ಷಗಳ ಕಾಲ (1989-2009) ರ ವರೆಗೆ ಬರೇಲಿಯು ಭಾರತೀಯ ಜನತಾ ಪಕ್ಷದ ಭದ್ರ ಕೋಟೆಯಾಗಿತ್ತು. ಈ ಕಾಲದಲ್ಲಿ, ಲೋಕಸಭಾ ಸದಸ್ಯ (MP) ಮತ್ತು ವಿಧಾನ ಸಭಾ ಸದಸ್ಯ (MLA) ಇಬ್ಬರೂ ಭಾರತೀಯ ಜನತಾ ಪಕ್ಷ ದಿಂದ ಆಯ್ಕೆಯಾಗಿದ್ದರು. ಈ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ್ ದಳ ಬೆಳವಣಿಗೆಯಿಂದಾಗಿ, ಕಳೆದ ಎರಡು ದಶಕಗಳಲ್ಲಿ ಬರೇಲಿಯು ಹಿಂದೂ ರಾಷ್ಟ್ರೀಯತೆಯ ಚಳವಳಿಯ ಉಗಮಕ್ಕೆ ಸಾಕ್ಷಿಯಾಯಿತು.

ಈ ನಗರವನ್ನು ಪ್ರತಿನಿಧಿಸಿದ MPಗಳ ಪಟ್ಟಿ-

ಚುನಾವಣಾ ಜಯದ ವರ್ಷ(ಗಳು) ಪಾರ್ಲಿಮೆಂಟ್ ಸದಸ್ಯರು ರಾಜಕೀಯ ಪಕ್ಷ
1952, 1957 ಮಿ. ಸತೀಷ್ ಚಂದ್ರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1962 ಮಿ. ಬ್ರಿಜ್ ರಾಜ್ ಸಿಂಗ್ ಜನ್ ಸಂಘ್
1967 ಮಿ. ಬ್ರಿಜ್ ಭೂಷಣ್ ಲಾಲ್ ಜನ್ ಸಂಘ್
1971 ಮಿ. ಸತೀಷ್ ಚಂದ್ರ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1977 ಮಿ. ರಾಮ ಮೂರ್ತಿ ಜನತಾ ಪಾರ್ಟಿ
1980, 1984 ಬೇಗಮ್ ಅಬೀದಾ ಅಹ್ಮದ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1989, 1991, 1996, 1998, 1999, 2004 ಮಿ. ಸಂತೋಷ್ ಕುಮಾರ್ ಗಂಗಾವರ್ ಭಾರತೀಯ ಜನತಾ ಪಕ್ಷ
2009 ಮಿ. ಪ್ರವೀಣ್ ಸಿಂಗ್ ಐರನ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

ಆರ್ಥಿಕಸ್ಥಿತಿ ಹಾಗು ಮೂಲಭೂತ ವ್ಯವಸ್ಥೆಗಳು

[ಬದಲಾಯಿಸಿ]

ಬರೇಲಿಯು ಉತ್ತರ ಭಾರತದಲ್ಲಿಯೇ ಉತ್ತಮವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲೊಂದು. ಆರ್ಥಿಕತೆಯ ಸ್ಪೋಟದಿಂದಾಗಿ, ಭಾರತದ ನಗರಗಳಲ್ಲಿಯೇ ಬರೇಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಬರೇಲಿಯ ಅರ್ಥವ್ಯವಸ್ಥೆಯು ಇಂದಿಗೂ ಬೃಹತ್‌ಮಟ್ಟದ ಆಗ್ರೇರಿಯನ್‌-ಮೂಲದ್ದಾಗಿದೆ, ಆದರೆ ವ್ಯಾಪಾರ ಮತ್ತು ವಾಣಿಜ್ಯಗಳು ಇಬ್ಬಗೆಯನ್ನುಂಟುಮಾಡುತ್ತಿವೆ. ಬಹು-ರಾಷ್ಟ್ರೀಯ ಕಾರ್ಪೋರೇಶನ್‌ಗಳು ಚಿಲ್ಲರೆವ್ಯಾಪಾರದ ಕ್ಷೇತ್ರದಲ್ಲಿ ಮಾಡಿದ ಗುರುತರವಾದ ಹೂಡಿಕೆಯಿಂದ ಈ ನಗರದ ಸಮಾಜವು ಆಧುನಿಕತೆಯನ್ನು ಮೈಗೂಡಿಸಿಕೊಂಡಿತು. ಅಡಿದಾಸ್‌, ರೀಬಾಕ್, ಲೆವಿಸ್‌ ಮತ್ತು ಇನ್ನಿತರೆ ಪ್ರಮುಖವಾದಂತಹ ವಸ್ತ್ರ, ಚಪ್ಪಲಿಗಳು ಮತ್ತು ಹೆಚ್ಚಿನ ಬ್ರಾಂಡ್‌ಗಳು ಅಧಿಕೃತ ಶೋ-ರೂಂಗಳನ್ನು ಹೊಂದಿವೆ ಮತ್ತು ಹಿಂದ್‌ ಟಾಕೀಸ್‌ನಲ್ಲಿ ಮತ್ತು ಸಿವಿಲ್‌ ಲೈನ್ಸ್‌ ಪ್ರದೇಶಗಳಲ್ಲಿ ರುವ ವಾಣಿಜ್ಯದ ಮಳಿಗೆಗಳಾಗಿವೆ. ರೀಬಾಕ್ ಕೂಡ ತನ್ನದೇ ಆದ ಫ್ಯಾಕ್ಟರಿ ಔಟ್‌ಲೆಟ್‌ನ್ನು ಬರೇಲಿಯ ಫಿಲಿಭಿಟ್‌ನ ಬೈ-ಪಾಸ್‌ ರೋಡ್‌ನಲ್ಲಿ ಸ್ಥಾಪಿಸಿದೆ.

 ನೈಕ್‌ಕೂಡ ತನ್ನ ಔಟ್‌ಲೆಟ್‌ನ್ನು ಕೂಡಲೇ ತೆರೆಯಲಿದೆ. ಹೆಚ್ಚಿನ ಜನಸಂಖ್ಯೆ ಆಹಾರಪ್ರಿಯರಾಗಿದ್ದು, ಅಸಂಖ್ಯಾತ ರೆಸ್ಟೋರೆಂಟ್‌ಗಳು ನಗದುದ್ದಕ್ಕೂ ಕಾಣಸಿಗುತ್ತವೆ. ಸ್ವಾರ್ನ್‌ ಟವರ್‌, ಬರೇಲಿ ಪ್ಯಾಲೇಸ್‌, ಅಂಬರ್‌, ಪಂಚಮ್‌, ಕಾಕ್‌ಟೈಲ್ಸ್‌ ಮತ್ತು ಕರ್ರೀಸ್‌, ಕ್ರಿಶ್ನಾಜ್‌ ರೆಸ್ಟೋರೆಂಟ್, ದಿ ಹೋಸ್ಟ್, ಕ್ವಾಲಿಟಿ, ವೆಸ್ಟಲ್‌, ಆಬೋದನಾ, ಡೊಮಿನೊ ಪಿಜ್ಜಾ, ಬಾಸ್ಕಿನ್‌ ರಾಬಿನ್ಸ್‌ (ರಾಜೇಂದ್ರನಗದಲ್ಲಿರುವ) ಮತ್ತು ಬಿಕನೇರ್‌ವಾಲಾಗಳು ಆಹಾರಪ್ರಿಯರಿಗಾಗಿವೆ. ಅನೇಕ ಇನ್ನಿತರ ಆಹಾರ ಸರಪಳಿಗಳಾದಂತಹ ಮೆಕ್‌ಡೊನಾಲ್ದ್ಸ್‌, ಕೆಎಫ್‌ಸಿ, ಪಿಜ್ಜಾ ಹಟ್‌ಗಳು ಕೂಡ ನಗರದಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲು ಆಸಕ್ತಿಯಾಗಿವೆ ಎಂದು ಹೇಳಿವೆ. ಎಲ್ಲಾ ಪ್ರಮುಖ ಆಟೋಮೊಬೈಲ್‌ ಕಂಪನಿಗಳಾದಂತಹ ಟಯೋಟಾ, ಮಹಿಂದ್ರಾಅಂಡ್‌ ಮಹಿಂದ್ರಾ, ಟಾಟಾ, ಮಾರುತಿ, ಜಿಎಂ, ಹುಂಡೈ ಇತ್ಯಾದಿ, ಗಳು ಅವುಗಳದೇ ಆದ ಶೋರೂಂಗಳನ್ನು ಮತ್ತು ರಿಪೇರಿ ಕೇಂದ್ರಗಳನ್ನು ನಗರದ ಹೊರವಲಯದಲ್ಲಿರುವ ರಾಂಪುರ್‌ ರಸ್ತೆಯಲ್ಲಿ ಹೊಂದಿವೆ.

ಈ ನಗರದ ಸ್ಟೋನ್‌, NH-24 (ಡೇಲ್ಲಿ ರಸ್ತೆ)ದ ಲೋಹಿಯಾ ವಿಹಾರ್‌ ವಸತಿ ಪ್ರದೇಶದಲ್ಲಿರುವ ಆಮ್ರಪಾಲಿ ಮಲ್ಟಿಪ್ಲೇಕ್ಸ್‌ ಮಾಲ್‌[] ಮೊದಲನೇ ಮಾಲ್‌ ಆಗಿದ್ದು, ಸಧ್ಯವೇ ಆರಂಭಗೊಳ್ಳಲಿದೆ (2010ರೊಳಗೆ). ಇದು (ಡಿಜಿಟಲ್‌ ವಿಶ್ಯುವಲ್‌ ಮತ್ತು ಸೌಂಡ್‌ ಸಿಸ್ಟಂ, ಸುಂದರವಾದ ಒಳಾಂಗಣ ಮತ್ತು ಸುತ್ತಮುತ್ತಲಿನ, ಆರಾಮದಾಯಕವಾದ ಮತ್ತು ವಿಶಾಲವಾದ ಆಸನಗಳಿಂದ ಕೂಡಿದ) ತ್ರೀ-ಸ್ಕ್ರೀನ್‌ ಮಲ್ಟಿಪ್ಲೆಕ್ಸ್‌ M2Mನ್ನು ಹೊಂದಿರಲಿದೆ. ಮೆಕ್‌ಡೊನಾಲ್ಡ್‌, ತ್ರೀ-ಸ್ಟಾರ್‌ ಹೋಟೆಲ್‌, ಬುಕ್‌ಮಳಿಗೆಗಳು, ಆಟಿಕೆ ಅಂಗಡಿಗಳು, ಮಲ್ಟಿ-ಕ್ಯುಸೈನ್‌ ರೆಸ್ಟೋರೆಂಟ್ಸ್‌, ಕಾಫಿ ಬಾರ್ಸ್, ಫ್ರೂಟ್‌ ಮತ್ತು ಐಸ್‌-ಕ್ರೀಮ್‌ ಪಾರ್ಲರ್ಸ್‌, ಪಿಕ್‌ ಅಂಡ್‌ ಕ್ಯಾರಿ ಕೌಂಟರ್ಸ್‌, ಫ್ಯಾಷನ್‌ ಮತ್ತು ಗಾರ್ಮೆಂಟ್ಸ್‌ ಮಳಿಗೆಗಳು, ಜ್ಯುವೆಲ್ರಿ ಮತ್ತು ಕಾಸ್ಮೆಟಿಕ್ಸ್‌, ಎಲೆಕ್ಟ್ರ‍ಾನಿಕ್ಸ್ ವಿಭಾಗಗಳು, ಸ್ಟೇಷನರಿ ಅಂಗಡಿಗಳು, ಲೆದರ್‌ ಉತ್ಪನ್ನಗಳು ಮತ್ತು ಫುಟ್‌ವೇರ್ ಮತ್ತು ಗೃಹಪಯೋಗಿ ಉತ್ಪನ್ನಗಳಂತಹದಕ್ಕೆ ಆಶ್ರಯ ನೀಡಿದೆ.

ಈ ನಗರದಲ್ಲಿ ಹೆಚ್ಚಿನ ಮಾಲ್‌ಗಳು ನಿರ್ಮಾಣದ ಹಂತದಲ್ಲಿದೆ ಅವುಗಳೆಂದರೆ: ಆದಿತ್ಯ ಮ್ಯಾಗ್ನೆಟ್‌ (2010 ರೊಳಗೆ ತ್ರೀ-ಸ್ಕ್ರೀನ್‍ ಪಿವಿಆರ್ ಆರಂಭವಾಗುವ), ಜ್ಯುವೆಲ್‌ ಆಫ್ ಇಂಡಿಯಾ ಮಾಲ್‌ (ಸನ್ಸಿಟಿ ಪ್ರೊಜೆಕ್ಟ್ಸ್‌- 2010ರೊಳಗೆ), ಬಿಗ್‌ ಆಪಲ್‌ ಮಾಲ್‌ (2010ರೊಳಗೆ ಬಿಗ್‌ ಆಪಲ್‌ ರಿಯಲ್‌ ಎಸ್ಟೇಟ್), ರಿಲಯನ್ಸ್ ಸ್ಟಾರ್‌ಸಿಟಿ (ಈ ಯೋಜನೆಯು ರಾಜಕೀಯದ ಕಾರಣಕ್ಕಾಗಿ ನಿಧಾನವಾಗಿದೆ) ಹಾಗೂ ಜೆ.ಜೆ.ಮಾಲ್‌ (ಎರಡನೆಯದು).

 ಪ್ರಸ್ತುತ ನಗರದಲ್ಲಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ಬಟ್ಲರ್‌ ಫ್ಲಾಝಾ, ಜೆಜೆ ಮಾಲ್, ವಿಶಾಲ್‌ ಮೆಗಾಮಾರ್ಟ್‌, ಸಿಎಲ್‌ ಮಾಲ್‌ (ಅಡಿದಾಸ್), ವೀಕೆಂಡರ್‌, ರೀಬಕ್‌, ನ್ಯು ಯಾರ್ಕ್‌ ಮ್ಯಾಕ್ಸ್‌,ಡಿ'ಕಾಟ್‌ ಸ್ಟೈಲ್‌ವೇರ್‌ ಹಿಂದ್‌ ಟಾಕೀಸ್‌ ಕಟ್ಟದಲ್ಲಿರುವ ಮಾರುಕಟ್ಟೆ-ಸಿವಿಲ್‌ ಲೈನ್ಸ್‌ ಮತ್ತು ಸೆಲೆಕ್ಷನ್‌ ಪಾಯಿಂಟ್‌ ಟವರ್‌ಗಳಿವೆ.

ಉತ್ತರ ಪ್ರದೇಶದಲ್ಲಿ ಬರೇಲಿ ಹಾಗೂ ಕರ್ನಾಟಕದಲ್ಲಿ ಬೆಳಗಾಂನಲ್ಲಿ ಮೊದಲನೇ ಹಂತವಾಗಿ ಭಾರತ ಸರಕಾರವು ಶೇ.10ರಷ್ಟು ಎಥನಾಲ್‌-ಮಿಶ್ರಣದ ಕಾರ್ಯಕ್ರಮವನ್ನು ಆರಂಭಿಸಿತು. ಬರೇಲಿಯು CNG ಮತ್ತು ಆಟೋ-LPG ಮಳಿಗೆಗಳನ್ನು ಹೊಂದಿದೆ. ಬರೇಲಿಯು ಭಾರತದಲ್ಲಿ ಜೈವಿಕ-ಇಂದನವನ್ನು ಮೊದಲ ಬಾರಿಗೆ ಕಾರ್ಯಗತಗೊಳಿಸಿದ ಜಿಲ್ಲೆಯಾಗಿದೆ.[]

2009ರಲ್ಲಿ ರಾಜ್ಯದ ವಿದ್ಯುತ್‌ ಕ್ಷೇತ್ರದಲ್ಲಿ ಫ್ರಾಂಚೈಸಿ ವ್ಯವಸ್ಥೆಯನ್ನು ಕಾರ್ಯಗತ ಗೊಳಿಸುವಲ್ಲಿ ಉತ್ತರ ಪ್ರದೇಶ ವಿದ್ಯುತ್‌ ಕಾರ್ಪೋರೇಶನ್‌ ಲಿಮಿಟೆಡ್‌ (UPPCL) ಒಂದು ಹೆಜ್ಜೆ ಮುಂದುಹೋಗಿದೆ. ಈ ರಾಜ್ಯದ ಒಂಬತ್ತು ನಗರಗಳಲ್ಲಿ ನಿರ್ವಹಣೆ ಮತ್ತು ವಿದ್ಯುತ್‌ ಪೂರೈಕೆಗಾಗಿ ಈ ಹೊಸ ಪದ್ಧತಿಯಡಿಯಲ್ಲಿ ಖಾಸಗಿಯವರಿಗೆ ಗುತ್ತಿಗೆಯನ್ನು ನೀಡಲಾಗಿದೆ. ಈ ಕಂಪನಿಗಳು ರಾಜ್ಯ ಸರಕಾರದ ಪರವಾಗಿ ಆದಾಯವನ್ನು ಒಟ್ಟುಗೂಡಿಸಲು ಹೊರಮೂಲದಿಂದ ಕೇಂದ್ರಗಳಾಗಲಿವೆ. ಈ ಪದ್ಧತಿಯನ್ನು ಮಾರ್ಗದರ್ಶನದ ಆಧಾರದ ಮೇಲೆ ಈ ರಾಜ್ಯದ ಒಂಭತ್ತು ನಗರಗಳಲ್ಲಿ ಅಳವಡಿಸಲಾಗಿದೆ.

 ಬರೇಲಿ, ಆಗ್ರಾ, ಕಾನ್‌ಪುರ್‌, ಮೊರಾದಾಬಾದ್‌ ಮತ್ತು ಗೋರಕ್‌ಪುರ್ ಗಳು ಮೊದಲನೇ ಹಂತದ್ದಾಗಿವೆ.[]

ಆರೋಗ್ಯ ಚಿಕಿತ್ಸೆ

[ಬದಲಾಯಿಸಿ]
ಸಾಂಪ್ರದಾಯಿಕ ಔಷದೋಪಚಾರ

ಮೆಡಿಕಲ್‌ ಸೌಲಭ್ಯಗಳನ್ನು ಹೊಂದಿರುವ ಉತ್ತರಪ್ರದೇಶದ ಪ್ರಮುಖ ನಗರಗಳಲ್ಲಿ ಬರೇಲಿಯು ಒಂದಾಗಿದೆ, ಕುಮೌನ್‌, ರೋಹಿಲ್‌ಖಾಂಡ್‌, ಮತ್ತು ವೆಸ್ಟ್‌ ನೇಪಾಳ ಪ್ರದೇಶದ ರೋಗಿಗಳಿಗೆ ಈ ನಗರವು ಮುಖ್ಯದ್ವಾರವಾಗಿ ಸೇವೆಸಲ್ಲಿಸುತ್ತಿದೆ. ವೇದಿಕ ಕಾಲದಲ್ಲಿ ಬರೇಲಿಯು ಆಯುರ್ವೇದಿಕ್‌ ಔಷದಿಗೆ ಹೆಸರುವಾಸಿಯಾಗಿತ್ತು. ಆಕಾಲದ ಆಯುರ್ವೇದಿಕ್‌ ವೈದ್ಯರುಬರೇಲಿಯ ಹೊರವಲಯದಲ್ಲಿ ಓನ್ಲಾಅತ್ಯಂತ ಚಿರಪರಿಚಿತವಾದ ಇಂಡಿಯನ್‌ ಗೂಸ್‌ಬೆರ್ರಿ (Phyllanthus emblica, syn. Emblica officinalis) ವನ್ನು ಹೆಚ್ಚಾಗಿ ಬೆಳೆಯಲು ಪ್ರೋತ್ಸಾಹಿಸಿದ್ದರು, ಆನಂತರ ಆ ಪ್ರದೇಶವೆಲ್ಲಾ ಓನ್ಲಾ ಎಂದೇ ಕರೆಯಲ್ಪಟ್ಟಿತು. ಇತ್ತೀಚಿನ ದಿನಗಳಲ್ಲಿ ಬಹೇರಿ ಕರೆಯಲಾಗುವ ಇನ್ನೊಂದು ಪಟ್ಟಣವು ಟೆಮಿನಲಿಯ ಬೆಲೆರಿಕಾ ಬೆಳೆಯನ್ನು ಅವಲಂಭಿಸಿದೆ- ಬಹೆರಾ; ಮತ್ತು ಇದೇ ಹೆಸರಿನ ಗಿಡಗಳನ್ನು ಬೆಳೆಯುತ್ತಿದ್ದರಿಂದ ಅದೇ ಹೆಸರು ಸಂಭವನೀಯವಾಗಿತ್ತು. ಬರೇಲಿಯ ಇನ್ನೊಂದು ಹೆಸರುವಾಸಿಯಾದ ಪಟ್ಟಣವೆಂದರೆ ಹೊರಡ, ಇದು ಸಾಂಪ್ರದಾಯಿಕವಾಗಿ ಗುರುತಿಸಲಾಗುವ ಹರ್ರಡಾ ಔಷದೀಯ ಗಿಡ, ವೈಜ್ನಾನಿಕವಾಗಿ ಟರ್ಮಿನಲಿಯಾ ಚೆಬುಲಾ (ಬಾಲ್‌ ಹರಡ, ಅಥವಾ ಚೋಟಿ ಹರಾ ಎಂದು ಕೂಡ)ವನ್ನು ಬೆಳೆಯಲಾಗುತ್ತದೆ. ಮಧ್ಯಕಾಲೀನ ಯುಗದಲ್ಲಿ ಮುಸ್ಲಿಂ ಆಡಳಿತದಾರರು ಹಿಕ್ಮತ್‌, ಟಿಬ್‌, ಟಿಬಿಯಾ ಎಂಬ ಪುರಾತನ ಯುನಾನಿ ಔಷದೋಪಚಾರವನ್ನು ಪ್ರೋತ್ಸಾಹಿಸಿದರು.

 ನಿರ್ಧಿಷ್ಟ ಕುಟುಂಬಗಳು ಅವುಗಳ ರೋಗಪತ್ತೆ ಜ್ನಾನದಿಂದ ತುಂಬಾ ಹೆಸರುವಾಸಿಯಾದವು ಮತ್ತು ಹಾಗೆಯೇ ರೋಹಿಲಾ ಆಡಳಿತಗಾರರಿಂದ ಹಕೀಮ್‌-ಉಲ್‌-ಮುಲ್ಕ್‌  (ದೇಶದ ವೈದ್ಯರು) ಎಂದು ಬಿರುದುನೀಡಲಾಯಿತು.

ಬ್ರಿಟಿಷ್‌ರ ಕಾಲದಲ್ಲಿ 1857ದ ಆರಂಭದವರೆಗೆ ಯಾವುದನ್ನೂ ಮಾಡಿರಲಿಲ್ಲ. ತಕ್ಷಣವೇ ಇಲ್ಲಿ ಮೇ 14 1857ರಲ್ಲಿ ಪ್ರಸಿದ್ಧ ಬಂಡಾಯವು ಆರಂಭವಾಯಿತು ಮತ್ತು ಸಂಪೂರ್ಣ ರೋಹಿಲಾ ಜನರು ಇಂಗ್ಲಿಷರ ವಿರುದ್ಧ ಸೆಟೆದುನಿಂತರು.

 ಪರಿಣಾಮವಾಗಿ, ಪ್ರತಿದಿನ ಸಮೂಹ ಗಾಯಗಳು ಮತ್ತು ಪಾರ್ಥೀವ ದೇಹ ಸಂಗ್ರಹವು ಆಡಳಿತವನ್ನು ಅನಿಯಂತ್ರಣಗೊಂಡಿತು. ಸಂಪೂರ್ಣ ಒಂದು ವರ್ಷದವರೆಗೆ ಬರೇಲಿ ನಗರವು ಕ್ರಾಂತಿಕಾರರ ಅಡಿಯಾಳಾಗಿತ್ತು. ಆದಾದನಂತರ ದಂಡವಿಧಿಸುವ ಕಾಲವಾಯಿತು. ನೂರಾರು ಸಂಖ್ಯೆಯ ಕ್ರಾಂತಿಕಾರಿಗಳು ಅವಸರದ ಶಿಕ್ಷೆಗಳನ್ನು ಎದುರಿಸಿದರು ಮತ್ತು ತೀವ್ರ ಆರೋಗ್ಯ ತಪಾಸಣೆ ನಂತರ ಅವರನ್ನು ಸುತ್ತಲಿನ ಪ್ರದೇಶದಲ್ಲಿದ್ದ ಮರಗಳಿಗೆ ನೇತುಹಾಕಲಾಗುತ್ತಿತ್ತು. ನಂತರ ಅವರನ್ನು ಪುನಾ ಆರೋಗ್ಯ ತಪಾಸಣೆಗೊಳಿಸಿ ಮತ್ತು ವಾರಸುದಾರರಿಗೆ ಒಪ್ಪಿಸಲಾಗುತ್ತಿತ್ತು. ಈ ನಿರಂತರ ಆರೋಗ್ಯ ತಪಾಸಣೆಯ ಸೌಲಭ್ಯವು ಈ ನಗರದ ಕೋಟ್ವಾಲಿ ಪ್ರದೇಶದಲ್ಲಿ ಆರಂಭವಾಯಿತು, ಸತ್ತವರ ಮತ್ತು ಗಾಯಾಳುಗಳ ಆರೋಗ್ಯ ತಪಾಸಣೆಗೆ ಪ್ರಕ್ರಿಯೆ ಸಹಕರಿಸಲು ಅರ್ಧಕ್ಕಿಂತಲೂ ಹೆಚ್ಚಿನ ಕಸಗುಡಿಸುವರಿದ್ದರು. ತುಂಬಾದಿನಗಳವರೆಗೆ ದಂಗೆಯು ಮುಂದುವರಿದಂತೆ ಈ ತಾತ್ಕಾಲಿಕ ಸೌಲಭ್ಯವು ತವರದ ಗುಡಿಸಲಿನ ಆರೋಗ್ಯ ಆಸ್ಪತ್ರೆಗಳಾಗಿ ಬದಲಾದವು.

ಮುಂದಿನ 15 ವರ್ಷಗಳವರೆಗೆ ಈ ಸೌಲಭ್ಯವು ತುಂಬಾ ನಿಧಾನವಾಗಿ ಬೆಳೆಯಿತು. ಕೆಲವು ಸೋಂಕು ಮತ್ತು ಸಾಂಕ್ರಾಮಿಕ ರೋಗಗಳನ್ನು ಆಡಳಿತವು ತಡೆಗಟ್ಟಲು ಅನುಸರಿಸಿದ ಮಾರ್ಗಗಳಿಂದಾಗಿ ಮುಂದೆ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಗಾಯಗೊಂಡ ಬ್ರಿಟಿಷ್‌ ಅಧಿಕಾರಿಗಳನ್ನು ಮತ್ತು ಸಿಪಾಯಿಗಳನ್ನು ಶುಶ್ರೂಷೆನಡೆಸಲು ಸಧ್ಯವಾಗಿಯಿತು ಮತ್ತು ಆನಂತರ ಮೂಳೆಮುರಿತವನ್ನು ಪತ್ತೆಹಚ್ಚಲು ಸಣ್ಣದಾದ ಕ್ರೂಕ್ಸ್‌ ಕ್ಷ-ಕಿರಣ ಯಂತ್ರವನ್ನು ಹೊಂದಿದ ಇದು ಎಮರ್ಜೆನ್ಸಿ ಆಪರೇಷನ್‌ ಥಿಯೇಟರ್‌ ಆಗಿ ಮಾರ್ಪಾಡಾಯಿತು. ಏನಾದರೂ ಆಗಲಿ, ಈ ವೆಚ್ಚದಾಯಕ ಕ್ಷ-ಕಿರಣ ರೋಗಪತ್ತೆಯು ಕೇವಲ ಶ್ರೀಮಂತ ಅಧಿಕಾರಿಗಳಿಗೆ ಮತ್ತು ಸೈನಿಕರಿಗೆ ಸಾಧ್ಯವಿತ್ತು. ಈಗಿರುವ ಜಿಲ್ಲೆ/ಸಿವಿಲ್‌ ಹಾಸ್ಪಿಟಲ್‌ ಮತ್ತು ಅದರ ಇತ್ತೀಚಿನ ಬೆಳವಣಿ ಕುರಿತು ಹೆಚ್ಚಾಗಿ ಏನು ತಿಳಿದಿಲ್ಲ. ಇಂದಿಗೂ ಇದರ ಸಂಗ್ರಹಿತ ದಾಖಲೆಯು ಲಭ್ಯವಾಗಿಲ್ಲ. ಪ್ರಸ್ತುತ ಈ ನಗರವು ಎರಡು ಮೆಡಿಕಲ್‌ ಕಾಲೇಜನ್ನು, ಒಂದು ಡೆಂಟಲ್‌ ಕಾಲೇಜು, ಒಂದು ಆಯುರ್ವೇದಿಕ್‌ ಕಾಲೇಜನ್ನು ಹೊಂದಿದೆ.

ಶಿಕ್ಷಣ

[ಬದಲಾಯಿಸಿ]

ಬರೇಲಿಯು ಹಲವಾರು ಶೈಕ್ಷಣಿಕ ಸಂಸ್ಥೆಗಳ ತವರಾಗಿದೆ. ನಗರದಲ್ಲಿ ಎಂಜಿನಿಯರಿಂಗ್ ಕಾಲೇಜುಗಳು, ಮ್ಯಾನೇಜ್‌ಮೆಂಟ್ ಕಾಲೇಜುಗಳು, ಕಾನೂನು ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಇವೆ, ಮತ್ತು ಸಾಮಾನ್ಯ ಕೋರ್ಸುಗಳನ್ನು ನಡೆಸುವ ಕಾಲೇಜುಗಳೂ ಇವೆ. ನಗರವು M.J.P. ರೋಹಿಲ್‌ಖಂಡ್ ಯೂನಿವರ್ಸಿಟಿ ಎಂಬ ಹೆಸರಿನ ವಿಶ್ವವಿದ್ಯಾಲಯವನ್ನೂ ಹೊಂದಿದೆ.ಬರೇಲಿ & NICE COLLEGE (ಮೈಕ್ರೋಸಾಫ್ಟ್ IT ಅಕಾಡೆಮಿ) ಕಾಲೇಜು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿದೆ. ROHILKHAND MEDICAL COLLEGE AND HOSPITAL ನಗರದ ಪ್ಲಿಭಿತ್ ಬೈಪಾಸ್ ರಸ್ತೆಯಲ್ಲಿದೆ; ಇದು MBBS ಮತ್ತು BDS ಕೋರ್ಸ್ ಶಿಕ್ಷಣವನ್ನು ಒದಗಿಸುತ್ತದೆ.

ಕ್ರೀಡೆಗಳು

[ಬದಲಾಯಿಸಿ]

ಬರೇಲಿಯಲ್ಲಿ ಎರಡು ಕ್ರೀಡಾ ಸ್ಟೇಡಿಯಂಗಳು ಮತ್ತು ಒಂದು ಕ್ರಿಕೆಟ್ ಅಕಾಡೆಮಿ ಇದೆ:

  • ದೊರಿ ಲಾಲ್ ಅಗರ್ವಾಲ್ ಸ್ಪೋರ್ಟ್ಸ್ ಸ್ಟೇಡಿಯಮ್. ಸಿಟಿ ಏರಿಯಾ, ಬರೇಲಿ
  • ಮೇಜರ್ ಧ್ಯಾನ್ ಚಂದ್ ಸ್ಪೋರ್ಟ್ಸ್ ಸ್ಟೇಡಿಯಂ, ಕಂಟೋನ್ಮೆಂಟ್ ಏರಿಯಾ, ಬರೇಲಿ
  • ಕ್ರಿಕೆಟ್ ಅಕಾಡೆಮಿ ಆಫ್ ಬರೇಲಿ (CAB) MB ಇಂಟರ್ ಕಾಲೇಜ್ ಹತ್ತಿರ

ಶ್ರೀ.ರಾಮನಾರಾಯಣ ಮುರಳಿಮನೋಹರ್ ಆಯುರ್ವೇದಿಕ್ ಕಾಲೇಜ್.

ಸಂಗೀತದಲ್ಲಿನ ಉಲ್ಲೇಖಗಳು

[ಬದಲಾಯಿಸಿ]

ಬಾಲಿವುಡ್‌‌ನ ಹಲವಾರು ಹಾಡುಗಳಲ್ಲಿ ಜುಮ್ಕಾ ಮತ್ತು ಕಜ್ರಾ ಎಂಬ ಸಂಗೀತದ ಶೈಲಿಗಳು ಮತ್ತು ಬರೇಲಿಯ ಬಗೆಗಿನ ಉಲ್ಲೇಖಗಳು ಇವೆ.

  • ಬರೇಲಿಯ "ಬಾರಾ ಬಜಾರ್"(ಮಾರುಕಟ್ಟೆ) ಅನ್ನು ಮುಘಲರ ಅವಧಿಯಲ್ಲಿ ಅತಿಯಾಗಿ ಹೊಗಳಲಾಗಿದೆ. ಮಾರುಕಟ್ಟೆಯ (ಬಜಾರ್) ಜನಪ್ರಿಯತೆಯನ್ನು ಎತ್ತಿಹಿಡಿಯುವ ಹಾಡು "ಜುಮ್ಕಾ ಗಿರಾ ರೆ, ಬರೇಲಿ ಕಿ ಬಜಾರ್ ಮೆ" ("ಮೇರಾ ಸಾಯಾ" ಚಿತ್ರದ ಈ ಹಾಡಿನ ಗಾಯಕಿ ಆಶಾ ಭೋಂಸ್ಲೆ) ಅದ್ಭುತ ಮಾರುಕಟ್ಟೆಯನ್ನು ನೆನಪಿಸುತ್ತದೆ.
  • "ಸುರ್ಮಾ ಬರೇಲಿ ವಾಲ ಅಂಕಿಯೋ ಮೆ ಐಸಾ ಡಾಲಾ", ಎನ್ನುವ ಆಶಾ ಭೋಸ್ಲೆ ಮತ್ತು ಶಂಶಾದ್ ಬೇಗಂ ಅವರು ಹಾಡಿರುವಂತಹ ಕಿಸ್ಮತ್ ಎಂಬ ಚಿತ್ರದ ಹಾಡಿನ ಒಂದು ಸಾಲಿನಲ್ಲಿ ಬರೇಲಿಯ ಉಲ್ಲೇಖವಿದೆ - "ಜುಮ್ಕಾ ಬರೇಲಿ ವಾಲಾ ಕಾನೋ ಮೆ ಐಸಾ ಡಾಲಾ. ಜುಮ್ಕೆ ನೆ ಲೆ ಲಿ ಮೇರಿ ಜಾನ್, ಹಾಯ್ ರೆ ಮೈನ್ ತೆರೆ ಕುರ್ಬಾನ್."[]
  • ಇತ್ತೀಚಿನ ಹಾಡು "ಆಜಾ ನಾಚ್‌ಲೆ" (ಆಜಾ ನಾಚ್ ಲೆ ಚಿತ್ರದ್ದು - ಮಾಧಿರಿ ದೀಕ್ಷಿತ್ ಅಭಿನಯಿಸಿದ ) ಹಾಡಿನಲ್ಲೂ ಬರೇಲಿಯ ಜೊತೆ ಜುಮ್ಕಾವನ್ನು ಬಳಸಲಾಗಿದೆ.
  • ಚಲನಚಿತ್ರ ಯು ಮಿ ಔರ್ ಹಮ್‌ ದಲ್ಲಿ - "ನ್ಯೂ ಡೆಲ್ಲಿ ಮೆ ಬರೇಲಿ ಜೈಸಾ ಸಾಯಿಯಾನ್" ( ಕಾಜೋಲ್ ಮತ್ತು ಅಜಯ್ ದೇವಗನ್ ಅಭಿನಯಿಸಿದ್ದಾರೆ).
  • ಜೈಲ್ ಚಿತ್ರದಲ್ಲಿ - "ಬರೇಲಿ ಕೆ ಬಜಾರ್ ಮೇ" (ಮಧುರ್ ಭಂಡಾರ್ಕರ್ ನಿರ್ದೇಶನದ ಚಿತ್ರದಲ್ಲಿ ನೋಲ್ ನಿತಿನ್ ಮುಖೇಶ್ ಅಭಿನಯಿಸಿದ್ದಾರೆ).

ರೇಡಿಯೋ ಸ್ಟೇಷನ್‌ಗಳು & ಕಮ್ಯುನಿಕೇಷನ್ ನೆಟ್‌ವರ್ಕ್‌ಗಳು

[ಬದಲಾಯಿಸಿ]
  • ಬರೇಲಿಯ ರೇಡಿಯೋ ಸ್ಟೇಷನ್‌ಗಳು:
ರೇಡಿಯೋ ಸ್ಟೇಷನ್ (F.M.) ಫ್ರೀಕ್ವೆನ್ಸಿ ಒಡೆತನ
ರೇಡಿಯೋ ಮಂತ್ರ 91.9 MHz ಜಾಗ್ರಣ್ ಗ್ರೂಪ್
ಬಿಗ್ 92.7 FM 92.7 MHz A.D.A.G. ಗ್ರೂಪ್
FM ಪ್ರಸಾರ್ ಭಾರತಿ 100.4 MHz ಆಲ್ ಇಂಡಿಯಾ ರೇಡಿಯೋ
  • ಸಂಪರ್ಕ ಜಾಲಗಳು

ಬರೇಲಿಯಲ್ಲಿನ ಹೆಚ್ಚಿನ ಸಂಖ್ಯೆಯ ಟೆಲಿ-ಕಮ್ಯುನಿಕೇಷನ್ ನೆಟ್‌ವರ್ಕ್ ಒದಗಿಸುವವರನ್ನು ಕಂಡುಹಿಡಿಯಬಹುದು. "ಉತ್ತರ ಪ್ರದೇಶ್ ವೆಸ್ಟ್ ಟೆಲಿಕಾಂ ಸರ್ಕಲ್‌"ನ ಪೂರ್ವದ ಸುತ್ತಮುತ್ತಲಿನ ಪ್ರದೇಶದಲ್ಲಿ ಬರೇಲಿ ಇದೆ. ಇದರಿಂದಾಗಿ ಪಕ್ಕದ ಜಿಲ್ಲೆಗಳಾದ ಶಹಜಾನ್‌ಪುರ್ ಮತ್ತು ನಂತರ ಪ್ರದೇಶಗಳಿಗೂ ಸಹ ಕರೆಗಳಿಗೆ ಬಹಳ-ದೂರದ ಮತ್ತು STD ದರಗಳು ಅನ್ವಯಿಸುತ್ತವೆ. ಆದಾಗ್ಯೂ, "U.P. ಪಶ್ಚಿಮ ಮತ್ತು ಉತ್ತರಖಾಂಡ ಟೆಲಿಕಾಂ ಸರ್ಕಲ್"ನಲ್ಲಿ ಕರೆಗಳನ್ನು ಸ್ಥಳೀಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದೇ ಕರೆದರಗಳು ಅನ್ವಯವಾಗುತ್ತವೆ.

  • ವೈರ್‌ಲೆಸ್ ಕಮ್ಯುನಿಕೇಷನ್ ನೆಟ್‌ವರ್ಕ್ಸ್ (GSM):
    • ಐಡಿಯಾ ಸೆಲ್ಯುಲರ್ (ಮೊದಲು ಎಸ್ಕೊಟೆಲ್ ಆಗಿತ್ತು)
    • ಸೆಲೋನ್
    • ಏರ್‌ಟೆಲ್‌
    • ಏರ್‌ಸೆಲ್‌
    • ರಿಲಯನ್ಸ್ GSM
    • ವೊಡಾಫೋನ್(ಮೊದಲು ಹಚ್ ಆಗಿತ್ತು)
    • ಟಾಟಾDOCOMO
    • ಯೂನಿನಾರ್‌
  • ವೈರ್‌ಲೆಸ್ ಕಮ್ಯುನಿಕೇಷನ್ ನೆಟ್‌ವರ್ಕ್ಸ್ (CDMA):
    • ರಿಲಯನ್ಸ್ ಇಂಟಿಯಾ ಮೊಬೈಲ್
    • ವರ್ಜಿನ್ ಮೊಬೈಲ್
    • ಟಾಟಾ ಇಂಡಿಕಾಮ್‌
    • BSNL WLL
  • ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವವರು:
    • BSNL ಬ್ರಾಡ್‌ಬ್ಯಾಂಡ್
    • ಸಿಫಿ ಐವೇ

ಸೇನಾ ಪ್ರತಿಷ್ಟಾಪನೆಗಳು

[ಬದಲಾಯಿಸಿ]
ಜಟ್ ಸೈನಿಕಪಡೆ ಕೇಂದ್ರ

ಬರೇಲಿಯು ಜಟ್ ರೆಜಿಮೆಂಟ್‌ನ ಪ್ರಮುಖ ಕಾರ್ಯಾಚರಣೆಯ ಕೇಂದ್ರವಾಗಿದೆ, ಇದು ಭಾರತೀಯ ಸೇನೆಕಾಲಾಳುಪಡೆ ರೆಜಿಮೆಂಟ್ ಆಗಿದೆ, ಭಾರತೀಯ ಸೇನೆಯ ಕಾರ್ಯಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.[] ಈ ರೆಜಿಮೆಂಟ್ 1839 ರಿಂದ 1947ರ ಮಧ್ಯೆ ಸುಮಾರು 19 ಯುದ್ಧ ಗೌರವಗಳನ್ನು ಪಡೆದುಕೊಂಡಿದೆ [] ಹಾಗೂ ಸ್ವಾತಂತ್ರ್ಯಾನಂತರ ಐದು ಯುದ್ಧ್ ಗೌರವಗಳು, ಎಂಟು ಮಹಾವೀರ ಚಕ್ರ, ಎಂಟು ಕೀರ್ತಿ ಚಕ್ರ, 32 ಶೌರ್ಯ ಚಕ್ರಗಳು, 39 ವೀರ ಚಕ್ರಗಳು ಮತ್ತು 170 ಸೇನಾ ಪದಕಗಳು ಲಭಿಸಿವೆ.[]

ತ್ರಿಶೂಲ್ ಏರ್-ಬೇಸ್

ಬರೇಲಿಯು ಇಂಡಿಯನ್ ಏರ್‌ ಫೋರ್ಸ್‌ತ್ರಿಶೂಲ್ ಏರ್-ಬೇಸ್ ಎಂಬ ಹೆಸರಿನ ಏರ್-ಬೇಸ್ ಅನ್ನು ಹೊಂದಿದೆ. ಸ್ಟೇಟ್-ಆಫ್-ದಿ-ಆರ್ಟ್ ಯೋಧರನ್ನು ತ್ರಿಶೂಲ್ ಏರ್-ಬೇಸ್ ಹೊಂಡಿದೆ, ಸುಕೋಯಿಸ್ ಮತ್ತು ಹೆಪ್ಟರ್ ಯೋಧರು.

ಇತರೆ

ಬರೇಲಿಯು ಇಂಡೊ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)ಗಳ ಪ್ರಾದೇಶಿಕ ಪ್ರಧಾನ ಕಛೇರಿಗಳನ್ನು ಹೊಂದಿದೆ.

ಹಿಂದು ದೇವಾಲಯಗಳು

[ಬದಲಾಯಿಸಿ]

ಬರೇಲಿಯು ಹಿಂದು ದೇವಾಲಯಗಳ ತವರಾಗಿದೆ. ನಾಲ್ಕು ನಾಥ್ (ಶಿವ) ದೇವಾಲಯಗಳು ನಗರದ ನಾಲ್ಕು ಮೂಲೆಗಳಲ್ಲಿ ಇವೆ: ಅಲಕನಾಥ, ತ್ರಿವತಿನಾಥ, ಮಧಿನಾಥ, ಮತ್ತು ಧೋಪೇಶ್ವರನಾಥ ದೇವಾಲಯಗಳು.

ಇನ್ನೊಂದು ಐತಿಹಾಸಿಕ ಭಗವಾನ್ ಶಿವನ ದೇವಾಲಯವು ಲಾಲಾ ಚಂಪಕ್ ರಾಯ್ ಕಿ ಬಗಿಯಾದಲ್ಲಿದೆ, ಇದು ಗಂಗಾ ದೇವಾಲಯದ ಮುಂದಿರುವ ಅಲಕನಾಥ ದೇವಾಲಯದ ಹತ್ತಿರದಲ್ಲಿದೆ. ಇದು ಅಂದಾಜು 200 ವರ್ಷಗಳಷ್ಟು ಹಳೆಯದಾಗಿದೆ. ದೇವಾಲಯಕ್ಕೆ ಸುಗಮವಾದ ದಾರಿಗಳಿಲ್ಲದೆ ಇಲ್ಲಿಗೆ ಕಡಿಮೆ ಜನ ಭಕ್ತರು ಬರುತ್ತಾರೆ.ಇದನ್ನು ಜಗನ್ನಾಥ ದೇವಾಲಯವೆಂದೂ ಕರೆಯುತ್ತಾರೆ.

ಅಲಕನಾಥ ದೇವಾಲಯದ ಹತ್ತಿರ ತುಳಲಿ ಮಠವಿದೆ. ರಾಮಾಯಣದ ಲೇಖಕರಾದ ವಾಲ್ಮೀಕಿಯವರ ಪುನರ್ಜನ್ಮವೆಂದು ಹೇಳಲಾಗುವ ರಾಮಚರಿತಮಾನಸದ ಲೇಖಕರಾದ ತುಳಸಿದಾಸ್ ಅವರು ಇಲ್ಲಿ ಹಿಂದೆ ಸುಮಾರು 1600 CEಯಲ್ಲಿ ಇಲ್ಲಿ ಮನೆ ಮಾಡಿಕೊಂಡಿದ್ದರೆಂದು ಹೇಳಲಾಗುತ್ತದೆ.

ಇನ್ನೊಂದು ಉತ್ತಮ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ದೇವಾಲಯವೆಂದರೆ ಚುನ್ನೆ ಮಿಯಾನ್‌ನ ಲಕ್ಷ್ಮಿ ನಾರಾಯಣ ದೇವಾಲಯ (ಇದು ಬಾರಾ ಬಜಾರ್ ಬಳಿ ಕತ್ರ ಮಾನರಾಯ್ ರಸ್ತೆಯಲ್ಲಿದೆ). 1047ರಲ್ಲಿ ಭಾರತದ ಸ್ವಾತಂತ್ಯ ದೊರೆತ ಸಮಯದಲ್ಲಿ ಹೊಸದಾಗಿ ನಿರ್ಮಾಣವಾದ ಪಾಕೀಸ್ತಾನದಿಂದ ಹಿಂದೂಗಳು ಭಾರತಕ್ಕೆ ಹಿಂತಿರುಗಿ ಅವರು ಬರೇಲಿಯಲ್ಲಿ ನೆಲೆಸಿದ ಆ ಸಮಯವನ್ನು ಇದು ನೆನಪಿಸುತ್ತದೆ. ಹಿಂದೂ ವಲಸಿಗರು ಅಲ್ಲಿಯೇ ಒಂದು ಚಿಕ್ಕ ದೇವಾಲಯವನ್ನು ನಿರ್ಮಿಸಿಕೊಂಡರು ಆದರೆ ನಂತರ ಆ ಸ್ಥಳವು ’ಚುನ್ನೆ ಮಿಯಾನ್’ ಎಂದು ಕರೆಯಲ್ಪಡುವ ಫಜಲ್-ಉಲ್-ರಹಮಾನ್ ಎಂಬುವವನಿಗೆ ಸೇರಿದ್ದು ಎಂದು ತಿಳಿಯಿತು. ಚುನ್ನೆ ಮಿಯಾನ್ ದೇವಾಲಯಕ್ಕೆ ಸ್ಥಳ ನೀಡುವುದರ ಜೊತೆಗೆ ನಿರ್ಮಾಣಕಾರ್ಯಕ್ಕೆ ಹಣವನ್ನೂ ಸಹ ನೀಡಿದನು. ಆದ್ದರಿಂದ ಇದನ್ನು ಚುನ್ನೆ ಮಿಯಾನ್‌ನ ಮಂದಿರವೆಂದೇ ಕರೆಯಲಾಗುತ್ತದೆ, ಮತ್ತು ಇದು ಕೊಹರಪೀರ್‌ನ ಕತ್ರ ಮಾನರಾಯ್ ಪ್ರದೇಶದಲ್ಲಿದೆ.

ಅಲ್ಲಿರುವ ಇನ್ನೊಂದು ಪ್ರಮುಖವಾದ ದೇವಾಲಯವೆಂದರೆ ಭಗವಾನ್ ದೂಪೇಶ್ವರನಾಥ, ಇದನ್ನು ಭಗವಾನ್ ಶಿವನ ಅನುಗ್ರಹದಿಂದ ಮಹಾಭಾರತ ಕಾಲದಲ್ಲಿ ಜನಿಸಿದ ದ್ರೌಪದಿ ಮತ್ತು ದೃಷ್ಟದ್ಯುಮ್ನರು ಹುಟ್ಟಿದ ಸ್ಥಳವೆಂದು ಪರಿಗಣಿಸಲಾಗುತ್ತದೆ.

ಬರೇಲಿಯ ರಾಜೇಂದ್ರ ನಗರದಲ್ಲಿರುವ ಇನ್ನೊಂದು ಪ್ರಮುಖ ದೇವಾಲಯವೆಂದರೆ "ಬ್ಯಾಂಕಿ ಬಿಹಾರಿ ಮಂದಿರ್". ಬರೇಲಿಯಲ್ಲಿರುವ ದೇವಾಲಯಗಳಲ್ಲಿ ಅತಿ ಸುಂದರವಾದುದೆಂದರೆ ಬ್ಯಾಂಕಿ ಬಿಹಾರಿ ಮಂದಿರ್.

ಪ್ರಾಮುಖ್ಯತೆ ಹೊಂದಿದ ಪ್ರದೇಶಗಳು

[ಬದಲಾಯಿಸಿ]
  • ರೀಸರ್ಚ್ ಇನ್‌ಸ್ಟಿಟ್ಯೂಟ್
  • ಮ್ಯೂಸಿಯಂ‌ಗಳು
    • ಆರ್ಮಿ ಸರ್ವಿಸ್ ಕಾರ್ಪ್ಸ್. ಮ್ಯೂಸಿಯಂ, ಕಂಟೋನ್ಮೆಂಟ್
    • ಪಂಚಾಲ ಮ್ಯೂಸಿಯಂ, ಯೂನಿವರ್ಸಿಟಿ ಕ್ಯಾಂಪಸ್
  • ಐತಿಹಾಸಿಕ ತಾಣಗಳು
    • ರಾಮ್‌ನಗರ್ ಫೋರ್ಟ್, 25 km ಅಒನ್ಲಾ
    • ತೀರ್ಥಂಕರ್ ಟೆಂಪಲ್, ರಾಮನಗರ್ 25 km ಅಒನ್ಲಾ
  • ಮಾಲ್‌ಗಳು
    • ಅಮ್ರಪಾಲಿ ಮಲ್ಟಿಪ್ಲೆಕ್ಸ್ ಮಾಲ್ (ನಿರ್ಮಾಣದ ಹಂತದಲ್ಲಿದೆ) ಮೂರು ಸ್ಕ್ರೀನ್ M.2.ಗಳೊಂದಿಗೆಎಮ್., ಲೋಹಿಯಾ ವಿಹಾರ್ ರೆಸಿಡೆನ್ಷಿಯಲ್ ಕಾಲೊನಿ, NH-24(ದೆಹಲಿ ರಸ್ತೆ)
    • ಆದಿತ್ಯ ಮ್ಯಾಗ್ನೆಟ್ ಮಾಲ್
    • ಜ್ಯುವೆಲ್ ಇಂಡಿಯಾ ಮಾಲ್
  • ಹಿಂದು ಮತ್ತು ಸಿಖ್ ಮಂದಿರಗಳು
    • ಶ್ರೀ ಬ್ಯಾಂಕಿ ಬಿಹಾರಿ ದೇವಾಲಯ, ರಾಜೇಂದ್ರ ನಗರ
    • ಲಕ್ಷ್ಮಿ ನಾರಾಯಣ ದೇವಾಲಯ (ಚುನ್ನಾ ಮಿಯಾನ್ ಮಂದಿರ), ಕೊಹರಪೀರ್
    • ಧೋಪೇಶ್ವರನಾಥ ದೇವಾಲಯ, ಸಡರ್, ಕಂಟೋನ್ಮೆಂಟ್
    • ಪುರಾತನ ಶಿವ ದೇವಾಲಯ ಬಿ.ಐ. ಬಜಾರ್, ಕಂಟೋನ್ಮೆಂಟ್
    • ಅಲಕ್ ನಾಥ್ ದೇವಾಲಯ, ನೈನಿತಾಲ್ ರಸ್ತೆ
    • ಗುರುದ್ವಾರ ಗುರು ತೆಗ್ ಬಹಾದ್ದೂರ್ ಸಾಹಿಬ್, ಫರಾಶಿ ಟೊಲಾ
    • ತ್ರಿವತಿನಾಥ್ ದೇವಾಲಯ, BDA ಕಾಲೋನಿ
    • ಚುನ್ನಾ ಮಿಯಾನ್ ಜೀ ಕಾ ಮಂದಿರ್, ಬಾರಾ ಬಜಾರ್
    • ಪಶುಪತಿ ನಾಥ್ ದೇವಾಲಯ, ಯೂನಿವರ್ಸಿಟಿ ರಸ್ತೆ
    • ಭೋಲೆ ನಾಥ್ ದೇವಾಲಯ, ಕುರ್ಮಾಂಚಲ್ ನಗರ
    • ಭಗವಾನ್ ಮಹಾವೀರ್ ದೇವಾಲಯ, ರಾಮಪುರ ಗಾರ್ಡನ್
    • ಬಾಡಾ ಗುರುದ್ವಾರಾ, ಮಾಡೆಲ್ ಟೌನ್
    • ಆನಂದ್ ಆಶ್ರಮ್, ರಾಂಪುರ ಗಾರ್ಡನ್
    • ಹನುಮಾನ್ ದೇವಾಲಯ ಹರ್ತ್‌ಮನ್ನ್ ಕಾಲೇಜ್ ಹತ್ತಿರ, ಬರೇಲಿ
    • ಶ್ರೀ ಸಾಇ ಮಂದಿರ್ ಶಾಸ್ತ್ರಿ ನಗರ, ಬರೇಲಿ
  • ಚರ್ಚುಗಳು ಮತ್ತು ಮಸೀದಿಗಳು
  • ಉದ್ಯಾನಗಳು
    • ಮಕ್ಕಳ ಉದ್ಯಾನ, ಕಂಟೋನ್ಮೆಂಟ್
    • ಫೂಲ್ ಬಾಗ್, ಕಂಟೋನ್ಮೆಂಟ್
    • ಕಂಪನಿ ಗಾರ್ಡನ್, ಸಿವಿಲ್ ಲೈನ್ಸ್
    • ಸಿ ಎಲ್ ಪಾರ್ಕ್, ಪ್ರೇಮ್ ನಗರ
    • ಮಯೂರ್ ವನ್ ಚೇತನ ಕೇಂದ್ರ, ಯೂನಿವರ್ಸಿಟಿ ರಸ್ತೆ
    • ಮಹಾರಾಜ ಅಗ್ರಸೇನ್ ಪಾರ್ಕ್, ರಾಂಪುರ್ ಗಾರ್ಡನ್ ಬರೇಲಿ
    • ಅಕ್ಷರ್ ವಿಹಾರ್
  • ಅಮ್ಯೂಸ್‌ಮೆಂಟ್ ಪಾರ್ಕುಗಳು
    • ಫನ್ ಸಿಟಿ, ಯೂನಿವರ್ಸಿಟಿ ರಸ್ತೆ
    • ಬೂಂದ್ ವಾಟರ್ ಪಾರ್ಕ್, ಯೂನಿವರ್ಸಿಟಿ ರೋಡ್
  • ಬರೇಲಿ ಬಜಾರ್
    • ನಿಮ್ಮ ಕಿವಿ ಓಲೆಯನ್ನು ಎಲ್ಲೋ ಕಳೆದುಕೊಂಡಿದ್ದರೆ (ಜುಮ್ಕಾ), ಇದನ್ನು ನೀವು ಇಲ್ಲಿ ನೋಡಬಹುದು.

ಆಕರಗಳು

[ಬದಲಾಯಿಸಿ]
  1. Census March 1 2001
  2. "ಆರ್ಕೈವ್ ನಕಲು". Archived from the original on 2010-08-02. Retrieved 2010-06-18.
  3. http://www.business-standard.com/india/news/govt-launches-ethanol-blendingpilot-basis/01/05/348028/
  4. http://timesofindia.indiatimes.com/Lucknow/UPPCL_invites_bids_for_franchisee_system/articleshow/4077546.cms
  5. http://www.hindilyrix.com/songs/get_song_Kajra%20Mohabbat%20Waala.html
  6. ೬.೦ ೬.೧ Army's Jat Regiment Best Marching Contingent in Republic Day 2007 Parade | India Defence
  7. http://www.bharat-rakshak.com/MONITOR/ISSUE3-4/bajwa.html Archived 2011-06-09 ವೇಬ್ಯಾಕ್ ಮೆಷಿನ್ ನಲ್ಲಿ. .

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಬರೇಲಿ&oldid=1160392" ಇಂದ ಪಡೆಯಲ್ಪಟ್ಟಿದೆ