ಶಂಶಾದ್ ಬೇಗಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಂಶಾದ್ ಬೇಗಂ

'ಶಂಶಾದ್ ಬೇಗಂ,' ಮೊಟ್ಟ ಮೊದಲ ಚಲನಚಿತ್ರದ ಹಿನ್ನೆಲೆ ಗಾಯಕಿಯರಲ್ಲೊಬ್ಬರು. ತಮ್ಮ ಜೀವಿತದ ಸಮಯದಲ್ಲೇ ದಂತ ಕಥೆಯಾದರು.ಆಗತಾನೇ ಶುರುವಾಗಿದ್ದ ಬೊಂಬಾಯಿನ ಚಲನಚಿತ್ರರಂಗದಲ್ಲಿ ಕಾಲಿಟ್ಟ, 'ದಿಟ್ಟ ಮಹಿಳೆ'ಯೆಂಬ ಹೆಗ್ಗಳಿಕೆಗೆ ಪಾತ್ರರು. ಕೆ.ಎಲ್.ಸೈಗಾಲ್, ಅವರ ಬಹಳ ಪ್ರಿಯ ನಟ, ಕೆ.ಎಲ್. ಸೈಗಾಲ್ ಅಭಿನಯಿಸಿದ್ದ 'ದೇವ್ ದಾಸ್' ಚಿತ್ರವನ್ನು 'ಶಂಶಾದ್ ಬೇಗಂ' ೧೪ ಬಾರಿ ವೀಕ್ಷಿಸಿದರಂತೆ. ಅವರ ಕಾಲದಲ್ಲಿ ಬಹಳ ಪ್ರಚಾರದಲ್ಲಿದ್ದ 'ಜೆನೊಫೋನ್' ಎಂಬ ಸಂಗೀತ ಕಂಪೆನಿಯ ಕಾಂಟ್ರಾಕ್ಟ್ ಗೆ ಸಹಿಹಾಕಿದ್ದರು. ಅವರು ಹಾಡಿದ ಪ್ರತಿ ಹಾಡಿಗೂ ೧೫ ರೂಪಾಯಿನಂತೆ ರೆಕಾರ್ಡಿಂಗ್ ಮುಗಿದ ನಂತರ ಅವರಿಗೆ ೫ ಸಾವಿರ ರೂಪಾಯಿ ಸಂಭಾವನೆ ದೊರೆಯಿತು. ನೋಡಲು ಅಷ್ಟು ಸುಂದರಿಯಲ್ಲದ ಶಂಶಾದ್, ಎಲ್ಲರಿಗೂ ತಮ್ಮ ಧ್ವನಿಯಿಂದ 'ಶಂಶಾದ್ ಪರಿಚಿತರಾಗಿದ್ದರೂ ಸಂಗೀತ ನಿರ್ದೆಶಕ ನೌಶಾದ್, ಮತ್ತು ಒ.ಪಿ,ನಯ್ಯರ್ ಬಿಟ್ಟು,ಸನ್.೧೯೭೦ ರ ವರೆಗೂ ಅವರು ಯಾರ ಕಣ್ಣಿಗೂ ಬೀಳದಂತೆ ನಿಗಾವಹಿಸಿದ್ದರು. ೧೯೫೦-೬೦-೭೦ ರಲ್ಲಿ 'ಶಂಶಾದ್ ರ, ಬಹಳ ಜನಪ್ರಿಯ ಗೀತೆಗಳು 'ರಿಮಿಕ್ಸ್' ಆಗಿ ನಿರ್ದೇಶಕರು ಬಳಸುತ್ತಿದ್ದಾರೆ. ಶಂಶಾದ್ ಬೇಗಂ, ಆಕಾಶವಾಣಿಗೆ 'ದ ಕ್ರೌನ್ ಇಂಪೀರಿಯಲ್ ಥಿಯೇಟರಿಕಲ್ ಕಂ ಆಫ್ ಪರ್ಫಾರ್ಮಿಂಗ್ ಆರ್ಟ್ಸ್' ಎಂಬ ದೆಹಲಿಯಲ್ಲಿ ಸ್ಥಾಪಿಸಲ್ಪಟ್ಟ ಸಂಘದ ಮೂಲಕ ಎಲ್ಲರೂ ಒಟ್ಟಾಗಿ ಹಾಡಲು ಬರುತ್ತಿದ್ದರು.

ಜನನ[ಬದಲಾಯಿಸಿ]

ಸನ್.೧೯೧೯ ಏಪ್ರಿಲ್,೧೪ ರಲ್ಲಿ ಅಮೃತಸರದಲ್ಲಿ ಜನಿಸಿದರು.'ಶಂಶಾದ್' ಸನ್.೧೯೪೭ ಡಿಸೆಂಬರ್,೧೬ ರಂದು,'ಲಾಹೋರ್ ರೇಡಿಯೋ'(ಈಗ ಪಾಕಿಸ್ತಾನದಲ್ಲಿದೆ) ಮೊದಲ ಬಾರಿಗೆ ಹಾಡಿ, ಭಾರತದಲ್ಲೇಲ್ಲಾ ಜನಪ್ರಿಯರಾದರು. 'ಏರ್ ಲಾಹೋರ್' ಪ್ರಸಾರ ಕಂಪೆನಿ, ಶಂಶಾದ್ ರವರಿಗೆ, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಬಹಳವಾಗಿ ನೆರವಾಯಿತು. ಆಕೆ ಹಾಡಿದ ಗೀತೆಗಳು 'ಏರ್ ಲಾಹೋರ್ ನಿಲಯ'ದಿಂದ ಪದೇ ಪದೇ ಪ್ರಸಾರವಾಗುತ್ತಿದ್ದವು. ನೌಶಾದ್, ಕೆಲವು ಗೀತೆಗಳನ್ನು ಗ್ರಾಮಾಫೋನ್ ರೆಕಾರ್ಡಿಂಗ್ ಕಂಪೆನಿಗೆ ಬಳಸಿಕೊಂಡರು. ಸಾರಂಗಿ ವಾದಕ, ಉಸ್ತಾದ್ 'ಹುಸೇನ್ ಬಕ್ಷ್ ವಾಲಾ ಸಾಹೇಬ್,' ಶಂಶಾದ್ ರವರನ್ನು ತಮ್ಮ ಶಿಷ್ಯೆಯನ್ನಾಗಿ ಸ್ವೀಕರಿಸಿದರು. 'ಗುಲಾಂ ಹೈದರ್' ಎಂಬ ಲಾಹೋರ್ ಸ್ಥಾನೀಯ ಸಂಗೀತ ನಿರ್ದೇಶಕ, ಆಕೆಯ ಧ್ವನಿಯನ್ನು ಸ್ವಲ್ಪ-ಸ್ವಲ್ಪವಾಗಿ ತಮ್ಮ ಕೆಲವು ಚಿತ್ರಗಳಲ್ಲಿ ಬಳಸಿಕೊಂಡರು. ಆ ಚಿತ್ರಗಳು :

 • ಖಜಾಂಚಿ, ೧೯೪೧
 • ಖಾಂದಾನ್,೧೯೪೨

'ಶಂಶಾದ್ ಬೇಗಂ',ತಮ್ಮ ಪರಿವಾರವನ್ನು ಮಾವನವಾರ ಬಳಿ ಬಿಟ್ಟು,೧೯೪೪ ರಲ್ಲಿ ಬೊಂಬಾಯಿಗೆ ಬಂದರು.'ಸಿ.ರಾಮಚಂದ್ರ' ನಿರ್ದೇಶನದ ಪಾಶ್ಚಾತ್ಯ ಮಾದರಿಯ 'ಮೇರೀ ಜಾನ್ ..ಸಂಡ ಕೆ ಸಂಡೇ', ಎಂಬ ಗೀತೆಯೊಂದನ್ನು ಸಮರ್ಥವಾಗಿ ಹಾಡಿದ ಪ್ರಥಮ ಮಹಿಳೆಯೆಂದು ಹೆಸರುಗಳಿಸಿದರು. ಖ್ಯಾತ ಸಂಗೀತ ನಿರ್ದೇಶಕ, 'ಒಪಿ ನಯ್ಯರ್' ಹೇಳುವಂತೆ 'ಶಂಶಾದರ ಧ್ವನಿ' ದೇವಸ್ಥಾನದ ಗಂಟೆಯಂತೆ ಸ್ಪಷ್ಟ,ಹಾಗು ಪ್ರತಿಧ್ವನಿಸುವ ವಾಣಿಯಾಗಿತ್ತು ಸನ್.೧೯೪೦-೫೦ ಯಲ್ಲಿ ಅವರ ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಹೊಸದಾಗಿ ಬಂದ ಗೀತಗಾಯಕರಿಗೆ ಹೋಲಿಸಿದರೆ,'ಶಂಶಾದ್ ಬೇಗಂ'ರ ಕಂಠಸಿರಿ, 'ಲತಾ', 'ಆಶಾ', 'ಗೀತಾದತ್' ಮತ್ತು 'ಅಮೀರ್ ಬಾಯಿ ಕರ್ನಾಟಕಿ' ಗಾಯಕಿಯರಿಗೆ ಭಿನ್ನವಾಗಿತ್ತು; ಮತ್ತು ಪ್ರಭಾವಿಯಾಗಿತ್ತು. ಹೀಗೆ ಒಟ್ಟಾರೆ, ೫ ಸಾವಿರ ಗೀತೆಗಳನ್ನು ಹಾಡಿದ ಹೆಗ್ಗಳಿಕೆಗೆ ಪಾತ್ರರಾದ 'ಶಂಶಾದ್ ಬೇಗಂ', ಎಲೆಮರೆಕಾಯಿಯ ತರಹ ಪ್ರಚಾರದಿಂದ ದೂರವಿದ್ದರು.

ವಿವಾದಕ್ಕೆ ಒಳಗಾಗಿದ್ದರು[ಬದಲಾಯಿಸಿ]

ಸನ್. ೧೯೯೮ ರಲ್ಲಿ ಶಂಶಾದ್ ಬೇಗಂ ನಿಧನರಾದ ಬಗ್ಗೆ ಎಲ್ಲಾ ಮಾಧ್ಯಮಗಳೂ ವರದಿಮಾಡಿದವು. ಆದರೆ 'ಶಂಶಾದ್ ಬೇಗಂ' ಎನ್ನುವರು, ಸೈರಾಬಾನುರವರ (ದಿಲೀಪ್ ಕುಮಾರ್ ರವರ ಪತ್ನಿ)ಅಜ್ಜಿ. ಕೊನೆಗೆ ಇದರ ಅರಿವು ಆದಮೇಲೆ ಎಲ್ಲ ಸರಿಹೋಯಿತು.

ಹುಟ್ಟು ಹಬ್ಬ[ಬದಲಾಯಿಸಿ]

'ಶಂಶಾದ್ ಬೇಗಂ,' ತಮ್ಮ ೮೯ ನೇ ಹುಟ್ಟುಹಬ್ಬವನ್ನು ಮುಂಬಯಿ ನ 'ಹಿರಾನಂದಾನಿ ಕಾಂಪ್ಲೆಕ್ಸ್' ನಲ್ಲಿರುವ ಅವರ ಸೋದರಿಯ ಮನೆಯಲ್ಲಿ ಆಚರಿಸಿಕೊಂಡರು.

ಪ್ರಶಸ್ತಿ,ಪುರಸ್ಕಾರಗಳು[ಬದಲಾಯಿಸಿ]

 • 'ಪದ್ಮ ಭೂಷಣ್ ಪ್ರಶಸ್ತಿ', ಸನ್.೨೦೦೯ ರಲ್ಲಿ,
 • 'ಪ್ರತಿಷ್ಠಿತ ಒಪಿನಯ್ಯರ್ ಅವಾರ್ಡ್' ಹಿಂದಿ ಚಿತ್ರರಂಗಕ್ಕೆ ಸಂಗೀತ ವಲಯದಲ್ಲಿ ಕೊಟ್ಟ ಕೊಡುಗೆಗಾಗಿ,

ನಿಧನ[ಬದಲಾಯಿಸಿ]

'ಶಂಶಾದ್ ಬೇಗಂ',೯೪ ನೇ ವಯಸ್ಸಿನಲ್ಲಿ ಮುಂಬಯಿನ ತಮ್ಮ ನಿವಾಸದಲ್ಲಿ ನಿಧನರಾದರು. ವೃದ್ಧಾಪ್ಯದ ನಿತ್ರಾಣ ಮೊದಲಾದ ಕಾಯಿಲೆಯಿಂದ ನರಳುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಔಷಧಗಳು ಕೆಲಸಮಾಡಲಿಲ್ಲ. ಸನ್.೨೦೧೩ ರ, ೨೩ ರಂದು, ಮಂಗಳವಾರ ರಾತ್ರಿ, 'ಶಂಶಾದ್ ಬೇಗಂರ ಅಂತ್ಯಕ್ರಿಯೆ' ಮುಂಬಯಿನಲ್ಲಿ ಜರುಗಿತು. ಆದರೆ, ಅವರ ಅಂತಿಮ ಸಂಸ್ಕಾರದ ಸಮಯದಲ್ಲಿ ಹಾಜರಿದ್ದವರು ಕೆಲವೇ ಜನರು. ಶಂಶಾದ್ ಬೇಗಂ, ಮುಂಬಯಿನಲ್ಲೇ ನೆಲೆಸಿರುವ, ಒಬ್ಬ ಮಗಳು. 'ಉಷಾ ರಾತ್ರಾ', ಅಳಿಯ, ಬಂಧುವರ್ಗವನ್ನು ತೊರೆದು ಹೋಗಿದ್ದಾರೆ.ಸನ್.೧೯೫೫ ರಲ್ಲಿ ಪತಿ,ಗಣಪತ್ ಲಾಲ್ ಬಟ್ಟೋ ನಿಧನರಾಗಿದ್ದರು. ಶಂಶಾದ್ ರವರ ಅತ್ಯಂತ ಜನಪ್ರಿಯ ಗೀತೆಗಳು :

 • 'ಮೇರೇ ಪಿಯಾ ಗಯೇ ರಂಗೂನ್'
 • 'ಕಭೀ ಆರ್ ಕಭೀ ಪಾರ್'
 • 'ಕಜ್ರಾ ಮೊಹಬ್ಬತ್ ವಾಲಾ'
 • 'ಕಹೀಂ ಪೆ ನಿಗಾಹೇಂ ಕಹೀಂ ಪೆ ನಿಶಾನಾ',
 • 'ಬೂಜ್ ಮೇರಾ ಕ್ಯಾ ನಾಮ್ ರೇ'
 • 'ಸೈಯ್ಯಾಂ ದಿಲ್ ಮೇ ಆನಾ ರೇ'
 • 'ಲೇಕೇ ಪೆಹ್ಲಾ ಪೆಹ್ಲಾ ಪ್ಯಾರ್',
 • 'ಛೊಡ್ ಬಾಬುಲ್ ಕಾ ಘರ್, ಮೊದಲಾದ ಹಾಡುಗಳನ್ನು, ಇಂದಿಗೂ ಸಿನಿಮಾ-ಪ್ರಿಯರು ಇಷ್ಟಪಡುತ್ತಾರೆ.
 • [೧] Archived 2013-05-14 ವೇಬ್ಯಾಕ್ ಮೆಷಿನ್ ನಲ್ಲಿ.
 • [೨]