ಬಾತುಕೋಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾತುಕೋಳಿ ಹಂಸಗಳು ಹಾಗು ಹೆಬ್ಬಾತುಗಳನ್ನೂ ಒಳಗೊಂಡಿರುವ, ಪಕ್ಷಿಗಳ ಅನಾಟಿಡೆ ಕುಟುಂಬದಲ್ಲಿನ ದೊಡ್ಡ ಸಂಖ್ಯೆಯ ಪ್ರಜಾತಿಗಳಿಗೆ ಒಂದು ಸಾಮಾನ್ಯ ಹೆಸರು. ಬಾತುಕೋಳಿಗಳನ್ನು ಅನಾಟಿಡೆ ಕುಟುಂಬದಲ್ಲಿ ಹಲವು ಉಪಕುಟುಂಬಗಳಲ್ಲಿ ವಿಭಾಗಿಸಲಾಗುತ್ತದೆ; ಅವು ಏಕಜೈವಿಕಕುಲದ ಗುಂಪಿನ (ಒಂದು ಒಂಟಿ ಸಾಮಾನ್ಯ ಪೂರ್ವಜ ಪ್ರಜಾತಿಯ ಎಲ್ಲ ವಂಶಸ್ಥರ ಗುಂಪು) ಬದಲಾಗಿ ರೂಪ ವರ್ಗೀಕರಣ ವರ್ಗವನ್ನು ಪ್ರತಿನಿಧಿಸುತ್ತವೆ, ಏಕೆಂದರೆ ಹಂಸಗಳು ಮತ್ತು ಹೆಬ್ಬಾತುಗಳನ್ನು ಬಾತುಕೋಳಿಗಳೆಂದು ಪರಿಗಣಿಸಲಾಗುವುದಿಲ್ಲ. ಬಾತುಕೋಳಿಗಳು ಬಹುತೇಕ ಜಲವಾಸಿ ಪಕ್ಷಿಗಳು, ಮತ್ತು ಹೆಚ್ಚಾಗಿ ಹಂಸಗಳು ಮತ್ತು ಹೆಬ್ಬಾತುಗಳಿಗಿಂತ ಚಿಕ್ಕವು, ಮತ್ತು ಸಿಹಿ ನೀರು ಹಾಗು ಕಡಲ ನೀರು ಎರಡರಲ್ಲೂ ಕಾಣಿಸುತ್ತವೆ. ಬಾತುಕೋಳಿಗಳು ಕೆಲವೊಮ್ಮೆ ಲೂನ್ಸ್ ಅಥವಾ ಡೈವರ್ಸ್, ಗ್ರೆಬ್ಸ್, ಗಾಲ್ಲಿನೂಲ್ಸ್ ಮತ್ತು ಕೂಟ್ಸ್ ರೀತಿಯ ಸ್ವರೂಪಗಳ ಸಂಬಂಧವಿಲ್ಲದ ನೀರು ಪಕ್ಷಿಗಳು ಅನೇಕ ರೀತಿಯ ಗೊಂದಲವನ್ನು ಉಂಟು ಮಾಡುತ್ತವೆ.

ಒಂದು ಚಿಕ್ಕ ಬಾತುಕೋಳಿ ಬಯಲು ಮೇಡಿನ ಗರಿಗಳ ಅಥವಾ ಬೇಬಿ ಡಕ್ - ಡಕ್ಲಿಂಗ್; ಆದರೆ ಸುಟ್ಟು ಸಿದ್ಧ ಆಹಾರ ವ್ಯಾಪಾರ ಯುವ ವಯಸ್ಕರ ಬಾತುಕೋಳಿಗಳು ಕೆಲವೊಮ್ಮೆ "ಡಕ್ಲಿಂಗ್" ಎಂದು ಹೆಸರಿಸಲಾಗಿದೆ. ಗಂಡು ಬಾತುಕೋಳಿಗೆ ಡ್ರೇಕ್ ಎಂದು ಕರೆಯಲಾಗುತ್ತದೆ ಮತ್ತು ಸ್ತ್ರೀ ಬಾತುಕೋಳಿಗೆ ಬಾತುಕೋಳಿ ಅಥವಾ ಓರ್ನಿತಾಲಜಿಯಲ್ಲಿ ಕೋಳಿ ಎಂದು.

ಬಾತುಕೋಳಿ ಅನಾಟಿಡೀ ಕುಟುಂಬದ ಅನಾಟಿನೀ ಉಪಕುಟುಂಬಕ್ಕೆ ಸೇರಿದ ಸುಮಾರು 120 ಬಗೆಯ ಜಲಪಕ್ಷಿಗಳಿಗಿರುವ ಸಾಮಾನ್ಯ ಹೆಸರು (ಡಕ್). ಇದೇ ಕುಟುಂಬದ ಆನ್ಸರಿನೀ ಉಪಕುಟುಂಬಕ್ಕೆ ಸೇರಿದ ಹಂಸಪಕ್ಷಿಗಳು ಹಾಗೂ ಹೆಬ್ಬಾತುಗಳಿಗಿಂತ ಕಿರಿಯ ಗಾತ್ರದ ಪಕ್ಷಿಗಳು ಇವು. ಅನಾಟಿನೀ ಗುಂಪಿನ ಜಲಪಕ್ಷಿಗಳು, ಸೈರೋಸಿನೀ ಉಪಕುಟುಂಬಕ್ಕೆ ಸೇರಿದ ಮುಳುಗು ಹಾಕುವ ಸಮುದ್ರ ಬಾತುಗಳು ಮೆರ್‍ಗಾನಿಟಿನೀಯ ತೊರೆಬಾತುಗಳು, ಅಕ್ಸಿಯುರಿನೀಯ ಚಿಮ್ಮುವ ಬಾಲದ ಬಾತುಗಳು ಹಾಗೂ ಡೆಂಡ್ರೋಸಿಗ್ನಿನೀ ಉಪಕುಟುಂಬದ ಸದಸ್ಯರಾದ ಉದ್ದಕಾಲಿನ ಬಾತುಗಳೂ ಈ ಗುಂಪಿಗೆ ಸೇರುವುವು.

ಅನಾಟಿಡೀ ಕುಟುಂಬದ ಇತರ ಪಕ್ಷಿಗಳಿಗಿರುವಂತೆ ಬಾತುಕೋಳಿಗಳಿಗೂ ಕೆಂಪುಬಣ್ಣದ ಕೊಕ್ಕು ಮತ್ತು ಜಾಲಪಾದಗಳಿವೆ. ವಿವಿಧ ಪ್ರಭೇದಗಳಲ್ಲಿ ಕೊಕ್ಕಿನ ಆಕಾರ ಹಾಗೂ ಗಾತ್ರದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆಯಾದರೂ ಸಾಮಾನ್ಯ ಆಕಾರ ಚಪ್ಪಟೆ. ಎಲ್ಲ ತೆರನ ಕೊಕ್ಕುಗಳಲ್ಲಿ ಬಿರುಸಾದ ಹಲ್ಲಿನಂಥ ಚಕ್ಕೆಗಳು ಅಂಚಿನಲ್ಲಿ ಗರಗಸದಂಥ ಕಚ್ಚುಗಳು ಉಂಟು. ಇಂಥ ರಚನೆಗಳು ಆಹಾರ ಜಗಿಯುವಲ್ಲಿ ಮತ್ತು ಅದು ಹಾರದಂತೆ ಹಿಡಿಯುವಲ್ಲಿ ನೆರವಾಗುತ್ತವೆ. ಬಾತುಗಳಲ್ಲಿ ದಟ್ಟ ಹಾಗೂ ತೈಲಯುಕ್ತ ಗರಿಗಳ ಹೊದಿಕೆ ಉಂಟು. ತಮ್ಮ ಬಾಲದ ಬಳಿ ಇರುವ ತೈಲಗ್ರಂಥಿ ಸ್ರವಿಸುವ ತೈಲದಿಂದ ಗರಿಗಳಿಗೆ ಲೇಪಿಸಿ ಅವು ನೀರಿನಿಂದ ಒದ್ದೆಯಾಗದಂತೆ ನೋಡಿಕೊಳ್ಳುತ್ತವೆ. ಸಾಧಾರಣವಾಗಿ ಇವುಗಳ ತೂಕ 0.5-5 ಕೆ.ಜಿ. ದಕ್ಷಿಣ ಅಮೆರಿಕದ ಸ್ಟೀಮರ್ ಬಾತು ಅತಿಭಾರವಾದ ಬಾತು ಎನಿಸಿದೆ. ಇದರ ತೂಕ ಸುಮಾರು 8 ಕೆ.ಜಿ.

ಬಾತುಕೋಳಿಗಳು ಈಜುವುದರಲ್ಲಿ ಮಾತ್ರವಲ್ಲದೇ ಮುಳುಗು ಹಾಕುವುದರಲ್ಲಿ ಕೂಡ ಪರಿಣತ ಪಕ್ಷಿಗಳೆನಿಸಿವೆ. ನೆಲದ ಮೇಲೆ ವಿಚಿತ್ರವಾದ ಓಲುನಡಿಗೆಯೊಂದಿಗೆ ನಡೆದಾಡುವುವು. ಕೆಲವು ಪ್ರಭೇದಗಳ ಹೊರತು ಉಳಿದವೆಲ್ಲವೂ ಹಾರಬಲ್ಲವು. ಹಲವು ಬಗೆಯ ಬಾತುಗಳು ಚಳಿಗಾಲದಲ್ಲಿ ಗುಂಪು ಗುಂಪಾಗಿ ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಬಾತುಕೋಳಿಗಳಲ್ಲಿ ಗಂಡು ಮತ್ತು ಹೆಣ್ಣುಗಳ ನಡುವೆ ವ್ಯತ್ಯಾಸ ಉಂಟು. ಸಾಧಾರಣವಾಗಿ ಹೆಣ್ಣಿಗಿಂತ ಗಂಡು ಹೆಚ್ಚು ವರ್ಣಮಯ. ಬಾತುಕೋಳಿಗಳು ವರ್ಷಕ್ಕೊಮ್ಮೆ ನೆಲದ ಮೇಲೆಯೇ 5 ರಿಂದ 12 ಮೊಟ್ಟೆ ಇಡುತ್ತವೆ. ಪ್ರಣಯಕಾಲದಲ್ಲಿ ಹೆಣ್ಣು ತನಗೆ ಬೇಕಾದ ಗಂಡನ್ನು ಆರಿಸಿಕೊಂಡು ಕೂಡುತ್ತದೆ. ಸ್ವಾಭಾವಿಕ ಪರಿಸ್ಥಿತಿಗಳಲ್ಲಿ ಏಕಪತ್ನಿತ್ವವನ್ನು ತೋರುವ ಗಂಡು ಪಳಗಿಸಿದಾಗ ಹಲವು ಹೆಣ್ಣುಗಳೊಡನೆ ಕೂಡುವುದೂ ಉಂಟು. ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಮಾಡುವ ಹೊಣೆ ಪೂರ್ತಿ ಹೆಣ್ಣಿನದು. ಈ ಸಮಯದಲ್ಲಿ ಹಳೆಯ ಗರಿಗಳನ್ನು ಕಳಚಿ ಹೊಸವನ್ನು ಬೆಳೆಸಿಕೊಳ್ಳುವ ಗಂಡು ಅಸಹಾಯ ಸ್ಥಿತಿಯಲ್ಲಿರುವುದು. ಮೊಟ್ಟೆಯೊಡೆದು ಹೊರಬರುವ ಮರಿಹಕ್ಕಿಗಳಿಗೆ ಆಹಾರ ಅರಸಿ ಓಡಾಡುವ ಸಾಮಥ್ರ್ಯ ಉಂಟು. ಬಾತುಕೋಳಿಗಳು ಸಸ್ಯಾಹಾರಿಗಳಾದರೂ ಬಸವನಹುಳು, ಕೀಟಗಳು, ಇವುಗಳ ಡಿಂಬ ಹಾಗೂ ಸಣ್ಣ ಮೀನುಗಳನ್ನು ತಿನ್ನುತ್ತವೆ.

ಯೂರೋಪ್, ಏಷ್ಯಾಖಂಡಗಳ ಸಮಶೀತೋಷ್ಣವಲಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಷೆಲ್‍ಬಾತುಗಳು ಪ್ರರೂಪಿ ಬಾತುಗಳು. ಇವುಗಳಲ್ಲಿ ಮಲಾರ್ಡ್ ಬಾತು ಹೆಸರುವಾಸಿ. ನದಿ, ಸರೋವರ, ಕೊಳಗಳ ಬಳಿ ವಾಸಿಸುವ ಮುಳುಗುವ ಬಾತುಗಳು ದಕ್ಷಿಣ ಭಾರತದಲ್ಲಿ ಪರಿಚಿತ ಹಕ್ಕಿಗಳು. ಅಮೆರಿಕದ ಮಸ್ಕೋವಿ ಮತ್ತು ಜಪಾನಿನ ಮ್ಯಾಂಡರಿನ್ ಬಾತುಗಳು ಮರದ ಮೇಲೆ ಗೂಡುಕಟ್ಟುತ್ತವೆ.

ಬಾತುಗಳನ್ನು ಮೊಟ್ಟೆ, ಮಾಂಸ ಮತ್ತು ತುಪ್ಪಳಕ್ಕಾಗಿ ಸಾಕುವುದಿದೆ. ಮೋಜಿಗಾಗಿ ಬಾತುಗಳ ಬೇಟೆ ಆಡುವುದೂ ಉಂಟು. ಸಮುದ್ರಬಾತುಗಳ ಪೈಕಿ ಅತಿ ಚಿಕ್ಕಗಾತ್ರದ್ದಾಗಿದ್ದ ಹಾಗೂ ಅತಿಸುಂದರವಾಗಿದ್ದ ಲÉಬ್ರಡಾರ್ ಬಾತು ಮಾನವನ ಈ ಹವ್ಯಾಸದಿಂದಾಗಿ 1875ರಲ್ಲಿ ಗತವಂಶಿಯಾಯಿತು. ಮಾಂಸಕ್ಕಾಗಿ ಮಲಾರ್ಡ್ ಹಕ್ಕಿಗಳನ್ನೂ ಮೊಟ್ಟೆಗಳಿಗಾಗಿ ಮಸ್ಕೋವಿಗಳನ್ನೂ ಚೀನ ಅಮೆರಿಕಗಳಲ್ಲಿ ಅತಿ ಆಸ್ಥೆಯಿಂದ ಸಾಕಲಾಗುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: