ವಿಷಯಕ್ಕೆ ಹೋಗು

ಖುರ್ಜಾ

Coordinates: 28°15′8″N 77°51′6.41″E / 28.25222°N 77.8517806°E / 28.25222; 77.8517806
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖುರ್ಜಾ
ನಗರ
ಖುರ್ಜಾ is located in Uttar Pradesh
ಖುರ್ಜಾ
ಖುರ್ಜಾ
ಉತ್ತರ ಪ್ರದೇಶದಲ್ಲಿ ನೆಲೆ
Coordinates: 28°15′8″N 77°51′6.41″E / 28.25222°N 77.8517806°E / 28.25222; 77.8517806
ದೇಶ ಭಾರತ
ರಾಜ್ಯಉತ್ತರ ಪ್ರದೇಶ
ಜಿಲ್ಲೆಬುಲಂದ್‍ಶಹರ್
Founded byಮುಘಲ್ ಸಾಮ್ರಾಜ್ಯದ ಖೇಶ್‍ಗಿ ರಾಜವಂಶ
Government
 • ಎಂಎಲ್ಎಮೀನಾಕ್ಷಿ ಸಿಂಗ್ (ಬಿಜೆಪಿ)
 • ಎಂಪಿಡಾ. ಮಹೇಶ್ ಶರ್ಮಾ (ಬಿಜೆಪಿ)
Population
 (2011)
 • Total೧,೪೨,೬೩೬
ಭಾಷೆಗಳು
 • ಅಧಿಕೃತಹಿಂದಿ
Time zoneUTC+5:30 (IST)
ಪಿನ್
203131
ದೂರವಾಣಿ ಸಂಕೇತ(+91)5738
Vehicle registrationUP-13

ಖುರ್ಜಾ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಒಂದು ಪಟ್ಟಣ. ದೆಹಲಿಯ ಆಗ್ನೇಯಕ್ಕೆ (45) ಮೈ. ದೂರದಲ್ಲಿದೆ. ಜನಸಂಖ್ಯೆ 142,636 (2011). ಇದು ಅನೇಕ ರಾಷ್ಟ್ರೀಯ ಹೆದ್ದಾರಿಗಳ ಕೂಡುದಾಣ; ಪ್ರಮುಖ ವ್ಯಾಪಾರಕೇಂದ್ರ. ಇದರ ಸುತ್ತಣ ಪ್ರದೇಶದ ಮುಖ್ಯ ಉತ್ಪನ್ನಗಳಾದ ಗೋದಿ, ಬಾರ್ಲಿ, ಜೋಳ, ಹತ್ತಿ, ಕಬ್ಬು ಇವು ಇಲ್ಲಿ ಮುಖ್ಯವಾಗಿ ವ್ಯಾಪಾರವಾಗುತ್ತವೆ. ಇಲ್ಲಿ ಅನೇಕ ಹತ್ತಿ ಗಿರಿಣಿಗಳುಂಟು. ಕಲಾತ್ಮಕ ಮಣ್ಣಿನ ಪಾತ್ರೆಗಳ ತಯಾರಿಕೆಗೂ ಖುರ್ಜಾ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಸುಂದರ ಜೈನ ದೇವಾಲಯ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತದೆ.

ಖುರ್ಜಾ ನಮ್ಮ ದೇಶದಲ್ಲಿ ಬಳಸಲಾದ ಪಿಂಗಾಣಿ ಸಾಮಾನುಗಳ ದೊಡ್ಡ ಭಾಗವನ್ನು ಪೂರೈಸುತ್ತದೆ. ಹಾಗಾಗಿ ಇದನ್ನು ಕೆಲವೊಮ್ಮೆ ಪಿಂಗಾಣಿ ನಗರ ಎಂದು ಕರೆಯಲಾಗುತ್ತದೆ. ಈ ನಗರವು "ಖುರ್ಚನ್" ಎಂದು ಕರೆಯಲಾಗುವ ಒಂದು ವಿಶೇಷ ಸಿಹಿತಿನಿಸಿಗೆ ಕೂಡ ಪ್ರಸಿದ್ಧವಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "The ceramic city of Khurja". @businessline (in ಇಂಗ್ಲಿಷ್). Retrieved 2020-08-29.

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖುರ್ಜಾ&oldid=1248370" ಇಂದ ಪಡೆಯಲ್ಪಟ್ಟಿದೆ