ರೋಹು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಹು
Conservation status
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಸಿಪ್ರಿನಿಫ಼ಾರ್ಮೀಸ್
ಕುಟುಂಬ: ಸಿಪ್ರಿನಿಡೀ
ಉಪಕುಟುಂಬ: ಲಾಬಿಯೊನಿನೀ
ಕುಲ: ಲಾಬಿಯೊ
ಪ್ರಜಾತಿ:
ಲ. ರೋಹಿತಾ
Binomial name
ಲಾಬಿಯೊ ರೋಹಿತಾ
Synonyms
  • Cyprinus rohita Hamilton, 1822

ರೋಹು ಪ್ರಮುಖ ಕಾರ್ಪ್ ಮೀನುಗಳ ಪೈಕಿ ಒಂದು. ಕಾಟ್ಲದಂತೆಯೇ ಸರ್ವವ್ಯಾಪಿ ಎನ್ನಬಹುದು. ಭಾರತದಲ್ಲಿ ಸಿಕ್ಕುವ ಕಾರ್ಪ್ ಮೀನುಗಳಲ್ಲೆಲ್ಲ ಅತ್ಯಂತ ರುಚಿಕರವೆಂದು ಹೆಸರಾಗಿದೆ. ಉತ್ತರ ಭಾರತದ ಎಲ್ಲ ನದಿಗಳಲ್ಲಿಯೂ ವಾಸಿಸುತ್ತದೆ.[೨] ಆಂಧ್ರದ ಗೋದಾವರಿ ನದಿಯಲ್ಲಿ ಸ್ವಲ್ಪಮಟ್ಟಿಗೆ ಸಿಕ್ಕುತ್ತದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದನ್ನು ಸಾಕುವ ಪ್ರಯತ್ನ ನಡೆದಿದೆ. ದಕ್ಷಿಣ ಭಾರತದ ಬೇರೆ ಯಾವ ನದಿಯಲ್ಲೂ ಸಿಕ್ಕುವುದಿಲ್ಲ.

ದೇಹರಚನೆ[ಬದಲಾಯಿಸಿ]

ಇದರ ತಲೆ ಕಾಟ್ಲದ್ದಕ್ಕಿಂತ ಚಿಕ್ಕದು. ಆದರೆ ಅದಕ್ಕಿಂತ ಚೂಪು. ಮೈಮೇಲೆ ಮಾಸಲು ಕೆಂಪು ಬಣ್ಣದ ಹುರುಪೆಗಳಿವೆ. ದೇಹ ಕಾಟ್ಲದ್ದಕ್ಕಿಂತ ಹೆಚ್ಚು ಉದ್ದವಾಗಿದೆ.

ಆಹಾರ[ಬದಲಾಯಿಸಿ]

ರೋಹು ತಾನು ವಾಸಿಸುವ ನೀರಿನ ಮಧ್ಯ ಮತ್ತು ತಳಭಾಗಗಳಲ್ಲಿರುವ ಆಹಾರವನ್ನು ತೆಗದುಕೊಳ್ಳುತ್ತದೆ. ದೇಹದ ಮುಂಭಾಗದ ತುದಿಯಲ್ಲಿ ಛಿದ್ರವಾದ ತುಟಿ ಇರುವುದರಿಂದ ಆಳವಿಲ್ಲದ ಕೊಳಗಳ ತಳಭಾಗದಲ್ಲಿರುವ ಆಹಾರ ಆರಿಸಲು ಸಹಾಯವಾಗುತ್ತದೆ. ಮರಳು ಮಣ್ಣು, ಕೊಳೆಯುತ್ತಿರುವ ಸಸ್ಯಜನ್ಯವಸ್ತು, ಅತಿಸೂಕ್ಷ್ಮವಾದ ಪಾಚಿ ಮುಂತಾದವು ಈ ಮೀನಿನ ಮೆಚ್ಚಿನ ಆಹಾರ.

ಸಂತಾನವೃದ್ಧಿ[ಬದಲಾಯಿಸಿ]

ಕಾಟ್ಲದಂತೆಯೇ ರೋಹು ಮೀನು ಕೂಡ ನದಿಗಳಲ್ಲಿ ಮುಂಗಾರು ಮಳೆಯ ಕಾಲದಲ್ಲಿ ಮರಿ ಮಾಡುತ್ತದೆ. ಕಾಟ್ಲದ ತತ್ತಿಕೂಟದ ಜೊತೆಗೆ ರೋಹುವಿನ ತತ್ತಿಕೂಟವೂ ಸಿಕ್ಕುತ್ತದೆ. ಪ್ರಮುಖ ಕಾರ್ಪುಗಳ ತತ್ತಿಕೂಟ ಮರಿಗಳಲ್ಲಿ ರೋಹುವಿನದೇ ಬಹುಪಾಲು.

ಕರ್ನಾಟಕದಲ್ಲಿ[ಬದಲಾಯಿಸಿ]

ಕರ್ನಾಟಕಕ್ಕೆ ಕಳೆದ ಹಲವಾರು ವರ್ಷಗಳಿಂದ ಕೊಲ್ಕತ್ತದಿಂದ ತರಸಿ ಇದನ್ನು ಸಾಕಲಾಗುತ್ತಿದೆ. ಇದು ಈಗ ಬೀಳಂದೂರು, ಹೆಸರಘಟ್ಟ, ಬೈರಮಂಗಲ, ನೀರಸಾಗರಗಳಿಗೆ ಚೆನ್ನಾಗಿ ಹೊಂದಿಕೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. Dahanukar, N. (2010). "Labeo rohita". IUCN Red List of Threatened Species. 2010: e.T166619A6248771. doi:10.2305/IUCN.UK.2010-4.RLTS.T166619A6248771.en. Retrieved 19 November 2021.
  2. "Rohu Fish Farming Information Guide - Agri Farming". Agrifarming.in. 26 August 2015. Retrieved 8 September 2018.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರೋಹು&oldid=1192858" ಇಂದ ಪಡೆಯಲ್ಪಟ್ಟಿದೆ