ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು
ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರು
ಲಾಲ್ ಬಾಗ್ | |
---|---|
neighborhood | |
Website | lalbagh |
ಲಾಲ್‌ಬಾಗ್,ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. [೧]
ಇತಿಹಾಸ
[ಬದಲಾಯಿಸಿ]- ೧೭೬೦ರಲ್ಲಿ ಹೈದರಾಲಿಯು ಈ ಸಸ್ಯೋದ್ಯಾನವನ್ನು ನಿರ್ಮಿಸಲು ಸೂಚಿಸಿದ್ದನು. ಆದರೆ ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸಿದನು. ಹೈದರಾಲಿಯು ಆತನ ಅಧಿಕಾರಾವಧಿಯಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದನು. ಹೈದರಾಲಿ ಈ ಪ್ರಸಿದ್ಧ ಸಸ್ಯೋದ್ಯಾನಗಳ ಯೋಜನೆಯನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದನು ಮತ್ತು ಇವನ ಮಗ ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಂಡು ತೋಟಗಾರಿಕೆಯ ಸಂಪತ್ತನ್ನು ಹೆಚ್ಚಿಸಿದನು. ಹೈದರಾಲಿಯು ತೋಟಗಾರಿಕೆಯಲ್ಲಿ ಉತ್ತಮ ತಿಳಿವಳಿಕೆಹೊಂದಿದ್ದ ತಿಗಳ ಸಮುದಾಯದ ಜನರನ್ನು ಈ ಕೆಲಸಕ್ಕಾಗಿ ನೇಮಿಸಿದ್ದನು.
- ೧೮ನೇಯ ಶತಮಾನದಿಂದ ಲಾಲ್‌ಬಾಗ್ ಉದ್ಯಾನವನ್ನು ನಿರ್ಮಿಸಲು ಪ್ರಾರಂಭಿಸಲಾಗಿತ್ತು ಮತ್ತು ವರ್ಷಗಳ ನಂತರ ಭಾರತ ದ ಮೊದಲ ಹುಲ್ಲಿನ-ಗಡಿಯಾರ ಮತ್ತು ಈ ಉಪಖಂಡಗಳಲ್ಲಿದ್ದಂತಹ ಅಪರೂಪದ ಮರಗಳ ದೊಡ್ಡದಾದ ಸಂಗ್ರಹವನ್ನು ಹೊಂದಿತು. ೧೮೭೪ರಲ್ಲಿ, ಲಾಲ್‌ಬಾಗ್ ಪ್ರದೇಶವನ್ನು ಹೊಂದಿತ್ತು. ೧೮೮೯ರಲ್ಲಿ, ಪೂರ್ವ ಭಾಗಕ್ಕೆ ೩೦ ಎಕರೆ ಸೇರ್ಪಡೆಯಾಯಿತು. ೧೮೯೧ರಲ್ಲಿ ಕೆಂಪೆಗೌಡ ಗೋಪುರ ಹೊಂದಿರುವ ಬಂಡೆಯ ಜೊತೆಗೆ ೧೩ ಎಕರೆ ಮತ್ತು ೧೮೯೪ರಲ್ಲಿ ಹೆಚ್ಚುವರಿಯಾಗಿ ಪೂರ್ವದ ಬಂಡೆಯ ಕೆಳಗಿನ ೯೪ ಎಕರೆ ಸೇರಿಕೊಂಡು ಒಟ್ಟು ೧೮೮ ಹೊಂದಿತ್ತು[೨].
- ಗಾಜಿನ ಮನೆ ನಿರ್ಮಾಣಕ್ಕೆ ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಾಗಿದ್ದು, ಇದಕ್ಕೆ ನವೆಂಬರ್ ೩೦ ೧೮೯೮ರಂದು ರಾಜಕುಮಾರ ಅಲ್ಬರ್ಟ್ ವಿಕ್ಟರ್ ಅಡಿಗಲ್ಲು ಹಾಕಿದರು. ಲಾಲ್‌ಬಾಗಿನ ನಂತರದ ಮೇಲ್ವಿಚಾರಕ ಜೇಮ್ಸ್ ಕ್ಯಾಮರಾನ್ ಇದನ್ನು ನಿರ್ಮಿಸಿದರು.[೨]
ಲಾಲ್ ಬಾಗ್ ಉದ್ಯಾನವನಕ್ಕೆ ಹೋಗಲು ಬರಲು ನಾಲ್ಕು ದ್ವಾರಗಳಿವೆ. ಅವುಗಳ ವಿವರಗಳು ಹೀಗಿವೆ :
ಸ್ಥೂಲ ನೋಟ
[ಬದಲಾಯಿಸಿ]ಲಾಲ್‌ಬಾಗ್ ೨೪೦ ಎಕರೆ ಪ್ರದೇಶವನ್ನು ಹೊಂದಿರುವ (೯೭೧,೦೦೦ ಚದರ ಅಡಿ. - ಸುಮಾರು ೧ ಕಿಮೀ².) ಉದ್ಯಾನವಾಗಿದ್ದು ದಕ್ಷಿಣ ಬೆಂಗಳೂರಿನಲ್ಲಿದೆ. ಹಲವಾರು ಸಂಖ್ಯೆಯಲ್ಲಿ ಪುಷ್ಪ ಪ್ರದರ್ಶನ ನಡೆಸುತ್ತಿದ್ದು, ಗಣರಾಜ್ಯ ದಿನದಂದು (ಜನವರಿ ೨೬) ವಿಶೇಷ ಪ್ರದರ್ಶನವಿರುತ್ತದೆ. ಈ ಉದ್ಯಾನವು ೧,೦೦೦ಕ್ಕಿಂತ ಹೆಚ್ಚಿನ ಫ್ಲೋರಾ ಜಾತಿಯ ಗಿಡಗಳನ್ನು ಹೊಂದಿದೆ. ಇದಲ್ಲದೇ ಉದ್ಯಾನವು ೧೦೦ಕ್ಕಿಂತ ಹೆಚ್ಚು ವರ್ಷ ವಯಸ್ಸಾದ ಮರಗಳನ್ನು ಹೊಂದಿದೆ.[೧][೩]
- ಉದ್ಯಾನವು ಬೆಂಗಳೂರಿನ ನಿರ್ಮಾತೃ ಕೆಂಪೆಗೌಡರ ಪ್ರತಿಮೆಯನ್ನು ಹೊಂದಿದೆ. ಉದ್ಯಾನವು ಪರ್ಷಿಯಾ, ಅಫಘಾನಿಸ್ತಾನ ಮತ್ತು ಫ್ರಾನ್ಸ್‌ನಿಂದ ತರಿಸಲ್ಪಟ್ಟ ಅಪರೂಪದ ಹಲವಾರು ಸಸ್ಯಗಳ ಜಾತಿಗಳನ್ನು ಹೊಂದಿದೆ. ನೀರಾವರಿಗಾಗಿ ಅನೇಕ ವಿಧವಾದ ವ್ಯವಸ್ಥೆ ಹೊಂದಿದ್ದು, ಉದ್ಯಾನವನ್ನು ಹುಲ್ಲುಹಾಸುಗಳು, ಹೂವಿನ ಪಾತಿಗಳು, ಕಮಲದ ಕೆರೆ ಮತ್ತು ಕಾರಂಜಿಗಳಿಂದ ತುಂಬಾ ಸದಭಿರುಚಿಯಿಂದ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಎಲ್ಲಾ ದೇಶಗಳ ಹಳೆಯದಾದ ಮರಗಳನ್ನು ಗುರುತಿಸಲು ಸುಲಭವಾಗುವಂತೆ ಲೇಬಲ್‌ಗಳನ್ನು ಅಂಟಿಸಲಾಗಿದೆ. ಲಾಲ್‌ಬಾಗ್ ಬಂಡೆಯು ೩೦೦೦ ವರ್ಷ ಹಳೆಯದಾದ ಭೂಮಿಯ ಮೇಲಿರುವ ಬಂಡೆಯಾಗಿದೆ, ಇದು ಕೂಡ ಜನರಿಗೆ ಆಕರ್ಷಣೆಯ ತಾಣವಾಗಿದೆ.[೧]
ಲಾಲ್‌ಬಾಗ್ ಉದ್ಯಾನದ ಮಾದರಿಗೆ ಮೂಲ
[ಬದಲಾಯಿಸಿ]ಕರ್ನಾಟಕದ ತೂಮಕೂರಿನ ಎನ್‌ಎಚ್೪ ಸಮೀಪದ ಶಿರಾದಲ್ಲಿದ್ದ ಮೊಘಲ್ ಉದ್ಯಾನವೇ ಲಾಲ್‌ಬಾಗ್ ಉದ್ಯಾನದ ವಿನ್ಯಾಸಕ್ಕೆ ಮೂಲವಾಗಿದ್ದು ಶಿರಾವು ಬೆಂಗಳೂರಿನಿಂದ ೧೨೦ ಕಿಲೋ ಮೀಟರ್ ದೂರದಲ್ಲಿದೆ. ಇದನ್ನು ಎಎಸ್‌ಐ (ಭಾರತೀಯ ಪುರಾತತ್ವ ಇಲಾಖೆ)ಮತ್ತು ಇತರೆ ಐತಿಹಾಸಿಕ ದಾಖಲೆಗಳು ಬೆಂಬಲಿಸಿವೆ. ಬ್ರಿಟೀಷ್ ರಾಜ್‌ಗಿಂತ ಮೊದಲಿನ ಸಮಯದಲ್ಲಿ ದಕ್ಖನ್ ಪ್ರಸ್ಥ ಭೂಮಿಯ ದಕ್ಷಿಣ ಭಾಗದಲ್ಲಿರುವ ಶಿರಾವು ಯುದ್ಧ ತಾಂತ್ರಿಕವಾಗಿ ಮೊಘಲ್ ಸಾಮ್ರಾಜ್ಯದ ಪ್ರಮುಖ "ಸುಬಾ" (ಪ್ರಾಂತ್ಯ) ಆಗಿತ್ತು.[೪]
ಪ್ರವಾಸೋದ್ಯಮ ಮತ್ತು ಪರಿಸರ ಅಭಿವೃದ್ಧಿ
[ಬದಲಾಯಿಸಿ]ಲಾಲ್‌ಬಾಗ್ ವರ್ಷಪೂರ್ತಿ ಪ್ರತಿದಿನ ಬೆಳಿಗ್ಗೆ ೬ ಘಂಟೆಯಿಂದ ಸಂಜೆ ೭.೦೦ ಘಂಟೆಯವರೆಗೆ ತೆರೆದಿರುತ್ತದೆ. ವಾಯುವಿಹಾರಕ್ಕೆ ಬರುವವರಿಗೆ, ಪ್ರವಾಸಿಗರಿಗೆ, ಮತ್ತು ದೇಹಾರೋಗ್ಯ ಕಾಪಾಡಿಕೊಳ್ಳ ಬಯಸುವರಿಗೆ ಬೆಳಿಗ್ಗೆ ೬ ರಿಂದ ೯ರವರೆಗೆ ಮತ್ತು ಸಂಜೆ ೬ರಿಂದ ೭ರವರೆಗೆ ಉಚಿತ ಅವಕಾಶವಿದ್ದು ಉಳಿದ ಅವಧಿಯಲ್ಲಿ ರೂ. ೧೦/- ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ದಿನ ಪೂರ್ತಿ ಉಚಿತ ಪ್ರವೇಶವಿದೆ.[೧]
'ಎಲೆಕ್ಟ್ರಿಕ್ ಮೋಟಾರ್ ವ್ಯವಸ್ಥೆ'
[ಬದಲಾಯಿಸಿ]ವಯಸ್ಸಾದವರಿಗೆ, ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಲಾಲ್ ಬಾಗ್ ಸುತ್ತಲು, 'ಎಲೆಕ್ಟ್ರಿಕ್ ಮೋಟಾರ್ ವ್ಯವಸ್ಥೆ' ಇದೆ. ಒಂದು ಸುತ್ತಿಗೆ ೧೦೦/-ರೂ.ಟಿಕೆಟ್ ದರದ ಈ ವಾಹನ, 'ಲಾಲ್ ಬಾಗ್ ಬೆಟ್ಟ'ದ ಬಳಿಯಿಂದ ಆರಂಭವಾಗಿ 'ಗ್ಲಾಸ್ ಹೌಸ್' ಮುಂಭಾಗದಿಂದ, 'ಗುಲಾಬಿ ವನ ', 'ಕೇದಿಗೆ ವನ'ವನ್ನು ಹಾದು, 'ಲಾಲ್ ಬಾಗ್ ಕೆರೆಯ ಏರಿ'ಯ ಬಳಿ ನಿಲ್ಲುತ್ತದೆ. ಅಲ್ಲಿಂದ ಅತಿ ಹಳೆಯ 'ಬೃಹದ್ ವೃಕ್ಷ'ಗಳ ಮುಖಾಂತರ ಲಾಲ್ ಬಾಗ್ ಮೇನ್ ಗೇಟ್ ಗೆ ಬಂದು ಅಲ್ಲಿಂದ ಪುನಃ 'ಗ್ಲಾಸ್ ಹೌಸ್' ತಲುಪಿ, 'ಸ್ಟಾರ್ಟಿಂಗ್ ಜಾಗ'ವನ್ನು ತಲುಪುತ್ತದೆ. ಈ ವಾಹನದಲ್ಲಿ 'ಗೈಡ್' ಆಗಿ ಬರುವವರು, ಕನ್ನಡ, ಇಂಗ್ಲೀಷ್ ಭಾಷೆಗಳ ಜೊತೆಗೆ, ಸಾಕಷ್ಟು ಇತರ ಭಾರತೀಯ ಭಾಷೆಗಳ ಜ್ಞಾನ ಹೊಂದಿದ್ದು, ಲಾಲ್ ಬಾಗ್ ನ ಇತಿಹಾಸ, ವಿಶೇಷ ಸಸ್ಯಗಳು ಫಲ-ಪುಷ್ಪಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರಬೇಕು. ಜನರಲ್ಲಿ ವಿವಿಧ ಬಗೆಯ ಹೂವು ಗಳ ಬಗ್ಗೆ ಪರಿಚಯಿಸಲು ಮತ್ತು ಸಸ್ಯ ಸಂರಕ್ಷಣೆಗೆ ಮತ್ತು ಗಿಡ ಬೆಳಸಲು ಸಾರ್ವಜನಿಕರಲ್ಲಿ ಆಸಕ್ತಿ ಉಂಟು ಮಾಡಲು ಪ್ರತಿವರ್ಷ ಪುಷ್ಫ ಪ್ರದರ್ಶನ ಏರ್ಪಡಿಸಲಾಗುತ್ತದೆ .[೫].
ಜನಪದ ಜಾತ್ರೆ
[ಬದಲಾಯಿಸಿ]ಪ್ರತಿ ತಿಂಗಳ ಎರಡನೆಯ ಮತ್ತು ನಾಲ್ಕನೆಯ ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ)" ಜನಪದ ಜಾತ್ರೆ"ಯನ್ನು ನಡೆಸಲಾಗುತ್ತದೆ. ಇದನ್ನು ಕರ್ನಾಟಕ ಸರ್ಕಾರವು ಆಯೋಜಿಸುತ್ತದೆ. ಜನಪದ ಜಾತ್ರೆಯಲ್ಲಿ ಕರ್ನಾಟಕದ ಎಲ್ಲಾ ಭಾಗಗಳಿಂದಲು ಬಂದ ತಂಡಗಳು ಮುಖ್ಯವಾಗಿ ಜಾನಪದ ನೃತ್ಯ, ಹಾಡು ಮತ್ತು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಮುಖ್ಯವಾಗಿ ಈ ಪ್ರದರ್ಶನವು ಕರ್ನಾಟಕದ ಸಾಂಸ್ಕೃತಿಕ ಜಾನಪದ, ಸಾಂಪ್ರದಾಯಿಕ ತೊಡುಗೆಗಳು ಮತ್ತು ಸಂಗೀತ ವಾದ್ಯಗಳನ್ನು ಪ್ರದರ್ಶಿಸಲಾಗುತ್ತದೆ.[೧][೬]
ಉದ್ಯಾನದಲ್ಲಿರುವ ಪೆನಿನ್ಸುಲಾರ್ ನೈಸ್ ರಚನೆಯಾಗಿರುವ ಭೌಗೋಳಿಕ ಸ್ಮಾರಕವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಸ್ಮಾರಕವನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯು ಲಾಲ್‌ಬಾಗ್ ಬೆಟ್ಟದಲ್ಲಿ ೩೦೦೦ ಸಾವಿರ ಮಿಲಿಯನ್ ವರ್ಷ ಹಳೆಯ ಪೆನಿನ್ಸುಲರ್ ನೈಸ್ ಬಂಡೆಯ ಮೇಲೆ ನಿರ್ಮಿಸಿದೆ. IIನೇಯ ಕೆಂಪೆಗೌಡರ ನಾಲ್ಕು ಪ್ರತಿಮೆಯಲ್ಲಿ ಇದು ಒಂದಾಗಿದೆ. ಇದು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮೇಲಿನ ಚಿತ್ರದಲ್ಲಿ ಇದನ್ನು ಕಾಣಬಹುದು. ಈ ಗೋಪುರದ ತುದಿಯಿಂದ ಬೆಂಗಳೂರಿನ ಪೂರ್ತಿ ಚಿತ್ರಣ ಕಂಡುಬರುತ್ತದೆ.[೭].[೮]
ಲಾಲ್‌ಬಾಗ್ ಉಳಿಸಿ ಆಂದೋಲನ
[ಬದಲಾಯಿಸಿ]- ಬೆಂಗಳೂರು ಮೆಟ್ರೋ ರೈಲಿಗಾಗಿ ನಡೆಯುತ್ತಿರುವ ಕಾರ್ಯದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ವು ಲಾಲ್‌ಬಾಗಿನ ಒಂದು ಭಾಗದಲ್ಲಿ ಸುಮಾರು ೧,೧೩೫ ಮೀಟರ್೨ ವಶಪಡಿಸಿಕೊಂಡು ಅಲ್ಲಿನ ಮರಗಳನ್ನು ಕಡಿದಿದೆ. ಏಪ್ರಿಲ್ ೧೩ ಮತ್ತು ೧೪, ೨೦೦೯ರಂದು, ಲಾಲ್‌ಬಾಗ್‌ನ ೫೦೦ ಮೀಟರ್ ಗೋಡೆಯನ್ನು ಕೆಡಹಿ ಹಲವಾರು ನೀಲಗಿರಿ ಮರಗಳನ್ನು ಕಡಿಯಲಾಗಿದೆ. ನಾಗರಿಕರು ತಕ್ಷಣವೆ ಇದನ್ನು ವಿರೋಧಿಸಿದರು ಮತ್ತು ಆಂದೋಲನವು ಸುಮಾರು ವಾರಕ್ಕೊಮ್ಮೆಯಂತೆ ಮುಂದುವರೆಯುತ್ತಿದೆ.
- ಸರ್ಕಾರವು ಬೆಂಗಳೂರಿನ ಹಸಿರು ಮತ್ತು ಸಾರ್ವಜನಿಕ ಉದ್ಯಾನ ಸ್ಥಳಗಳ ಸಂರಕ್ಷಣೆಗೆ ಇರುವ ಯಾವುದೇ ಕಾನೂನಿಗೂ ಗಮನ ಹರಿಸದೆ ಭೂಮಿ ವಶ ಪಡಿಸಿಕೊಂಡಿರುವುದು ಮತ್ತು ಅಕ್ರಮವಾಗಿ ಮರ ಕಡಿಯುವುದರ ವಿರುದ್ಧ ಆಂದೋಲನ ನಡೆಯುತ್ತಿದೆ.
ಸಂಪರ್ಕಶೀಲತೆ
[ಬದಲಾಯಿಸಿ]ಮೆಜೆಸ್ಟಿಕ್ ಮತ್ತು ಶಿವಾಜಿನಗರದಿಂದ ಹಲವಾರು ಬಿಎಂಟಿಸಿ ಬಸ್ಸುಗಳ ಸಂಪರ್ಕವಿದೆ. ಜಯನಗರ ಮತ್ತು ಬನಶಂಕರಿಗೆ ಹೋಗುವ ಎಲ್ಲಾ ಬಸ್ಸುಗಳು ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲಿ ಯಾವುದಾದರೂ ಒಂದರ ಮೂಲಕ ಹಾದು ಹೋಗುತ್ತವೆ.
೨೦೧೪ ರಲ್ಲಿ ೨೦೦ ನೆಯ ವಸ್ತು ಪ್ರದರ್ಶನದ ಆಯೋಜನೆ
[ಬದಲಾಯಿಸಿ]ಚಿತ್ರಗಳು
[ಬದಲಾಯಿಸಿ]-
ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನದ ಕೆರೆಯ ಒಂದು ನೋಟ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ಟೆಂಪ್ಲೇಟು:Cite weare to Calgary flames
- ↑ ೨.೦ ೨.೧ "A jewel in Lalbagh's crown". Deccan Herald. Retrieved 23 November 2010.
- ↑ ಬೊ, ಪ್ಯಾಟ್ರಿಕ್ (೨೦೦೨) ಚಾರ್ಲ್ಸ್ : ಉದ್ಯಾನ Superintendent to Two Indian Maharajas. ಗಾರ್ಡನ್ ಹಿಸ್ಟರಿ ೩೦(೧):೮೪-೯೪
- ↑ Benjamin Rice, Lewis (1897). Mysore: A Gazetteer Compiled for the Government, Volume I, Mysore In General, 1897a. Westminster: Archibald Constable and Company. p. 834.
- ↑ "Lal Bagh Flower Show 2008 Ticket Booking". Archived from the original on 2010-03-10. Retrieved 1-3-2009.
{{cite web}}
: Check date values in:|accessdate=
(help) - ↑ "Mysore Horticulturtal Society, Bangalore". Archived from the original on 2012-02-17. Retrieved 1-3-2009.
{{cite web}}
: Check date values in:|accessdate=
(help) - ↑ "Peninsular Gneiss". Geological Survey of India. Archived from the original on 2011-07-21. Retrieved 27-2-2009.
{{cite web}}
: Check date values in:|accessdate=
(help) - ↑ National Geological Monuments, pages 96, Peninsular Gneiss,page29-32. Geological Survey of India,27, Jawaharlal Nehru Road, Kolkatta-700016. 2001. ISSN 0254-0436.
- ↑ '200th flower show at Lalbagh this Augus't, Hindu magazine. July 19, 2014
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಲಾಲ್‌ಬಾಗ್ ಸಸ್ಯೋದ್ಯಾನ
- 'Catalogue of plants in the botanical garden. Bangalore, and its vicinity' (1891 ರಲ್ಲಿನ ಸಸ್ಯಗಳ ವಿಷಯಪಟ್ಟಿ)
- ಸರ್ಕಾರದ ಅಧೀಕೃತ ಜಾಲತಾಣ- ಲಾಲ್‌ಬಾಗ್ ಗಾರ್ಡನ್ಸ್ Archived 2010-05-13 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧಿಕೃತ ಜಾಲತಾಣ Archived 2012-02-17 ವೇಬ್ಯಾಕ್ ಮೆಷಿನ್ ನಲ್ಲಿ.
- ಲಾಲ್‌ಬಾಗ್ ಚಿತ್ರಗಳು(ಅನನ್ಯವಾದ)
- ಲಾಲ್‌ಬಾಗ್ ಆಂದೋಲನ Archived 2015-10-19 ವೇಬ್ಯಾಕ್ ಮೆಷಿನ್ ನಲ್ಲಿ.
- 'ಒನ್ ಇಂಡಿಯ ಕನ್ನಡ,ಫಲಪುಷ್ಪ ಪ್ರದರ್ಶನ': 'ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶ', January 16, 2015
- Pages using the JsonConfig extension
- CS1 errors: dates
- Pages using duplicate arguments in template calls
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons category link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಬೆಂಗಳೂರು
- ಬೆಂಗಳೂರಿನ ಇತಿಹಾಸ
- ಸಂದರ್ಶಕರಿಗೆ ಬೆಂಗಳೂರಿನಲ್ಲಿರುವ ಆಕರ್ಷಣೆಗಳು
- ಕರ್ನಾಟಕದ ಪ್ರವಾಸೋದ್ಯಮ
- ಭಾರತದಲ್ಲಿರುವ ಉದ್ಯಾನಗಳು