ವಿಷಯಕ್ಕೆ ಹೋಗು

ಶಿವರಾಜ್‍ಕುಮಾರ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಿವರಾಜಕುಮಾರ್ ಇಂದ ಪುನರ್ನಿರ್ದೇಶಿತ)
ಡಾ. ಶಿವರಾಜ್‍ ಕುಮಾರ್
Born
ಶಿವು ಪುಟ್ಟ ಸ್ವಾಮಿ

೧೯೬೨-೦೭-೧೨
Other namesಪುಟ್ಟಸ್ವಾಮಿ,ಶಿವಣ್ಣ
Occupation(s)ನಟ, ಹಿನ್ನಲೆ ಗಾಯಕ , ನೃತ್ಯಗಾರ
Years active೧೯೮೬ —ಪ್ರಸಕ್ತ
Titleಡಾಕ್ಟರೇಟ್ ಪದವಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ[], ಶಿವಣ್ಣ , ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್,ಎಸ್ ಆರ್‌ ಕೆ, ನಾಟ್ಯ ಸಾರ್ವಭೌಮ,
Spouseಗೀತಾ ಶಿವರಾಜ್‍ಕುಮಾರ್
Childrenನಿವೇದಿತಾ,ನಿರುಪಮಾ
Parent(s)ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್

ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್‍ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.

ಶಿವರಾಜ್‍ಕುಮಾರ್ ೧೯೬೨ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಙ್ನಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.

ಚಿತ್ರರಂಗ

[ಬದಲಾಯಿಸಿ]

ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್‍ಕುಮಾರ್, ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು. ತನ್ನನ್ನೂ ಮತ್ತು ತನ್ನ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟ ತನ್ನ ತಂದೆಗೆ ಬುದ್ದಿ ಕಲಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಶಿವರಾಜ್‍ಕುಮಾರ್ ನಟನೆಗೆ ಪ್ರಶಂಸೆ ಪಡೆದರು.ಮುಂದಿನ ಎರಡೂ ಚಿತ್ರಗಳು (ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡವು..
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು. ರಣರಂಗ ಚಿತ್ರ ಕೂಡಾ ಶತದಿನ ಪ್ರದರ್ಶನ ಕಂಡಿತು.೧೯೯೨ರಿಂದ ೧೯೯೫ರ ಅವಧಿಯಲ್ಲಿ ಶಿವರಾಜ್‍ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. ೧೯೯೪ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್‍ಕುಮಾರ್ ರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. ೧೯೯೫ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್‍ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು ಕಾಣಲು, ೧೯೯೯ರಲ್ಲಿ ತೆರೆಕಂಡ ಎಕೆ ೪೭ ಚಿತ್ರದವರೆಗೆ ಶಿವರಾಜ್‍ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ತಾದಾತ್ಮ್ಯತೆಯಿಂದ ಶಿವರಾಜ್‍ಕುಮಾರ್ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ರೊಮಾಂಟಿಕ್ ಪಾತ್ರಗಳ ರಮೇಶ್, ಭಿನ್ನತೆಯ ಉಪೇಂದ್ರ, ಆವೇಶಭರಿತ ಪೋಲೀಸ್ ಪಾತ್ರಗಳ ಸಾಯಿಕುಮಾರ್ ಹೀಗೆ ಹಲವು ನಟರುಗಳ ನಡುವೆಯೂ ಶಿವರಾಜ್‍ಕುಮಾರ್, ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರು. ಇಮೇಜ್ ನ ಹಂಗು ಇಲ್ಲದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸದಾ ಮುಂದಾಗುಗಿತ್ತಿದ್ದ ಶಿವರಾಜ್, ಅದೇ ಕಾರಣಕ್ಕೆ ಬರಗೂರು ರಾಮಚಂದ್ರಪ್ಪನವರ ಹಗಲುವೇಷ, ಪ್ರೇಂರ ಜೋಗಿ, ಹೀಗೆ ಹಲವು ಹೊಸ ನಿರ್ದೇಶಕರ ಮೊದಲ ಆಯ್ಕೆಯಾಗಿ ಉಳಿದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು.

ಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಅಭಯಹಸ್ತ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ. ಇವರ ಪುತ್ರಿಯ ಹೆಸರು ನಿವೇದಿತಾ. ಈಕೆ, ಅಂಡಮಾನ್ ಚಿತ್ರದಲ್ಲಿ ನಟಿಸಿದ್ದಾಳೆ.

ಪ್ರಶಸ್ತಿಗಳು

[ಬದಲಾಯಿಸಿ]

ರಾಜ್ಯ ಪ್ರಶಸ್ತಿಗಳು

[ಬದಲಾಯಿಸಿ]
  • ಓಂ- ೧೯೯೫ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
  • ಹೃದಯ ಹೃದಯ - ೧೯೯೯ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
  • ಚಿಗುರಿದ ಕನಸು - ೨೦೦೩ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
  • ಜೋಗಿ - ೨೦೦೬ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ

ಉಜ್ವಲ ಪ್ರಶಸ್ತಿ

[ಬದಲಾಯಿಸಿ]
  • ಆನಂದ್ - ೧೯೮೬
  • ಭೂಮಿತಾಯಿಯ ಚೊಚ್ಚಲ ಮಗ - ೧೯೯೮

ಚಿತ್ರ ರಸಿಕರ ಸಂಘ ಪ್ರಶಸ್ತಿ

[ಬದಲಾಯಿಸಿ]
  • ಮಿಡಿದ ಶ್ರುತಿ - ೧೯೯೨
  • ಜನುಮದ ಜೋಡಿ - ೧೯೯೬
  • ಎ.ಕೆ.೪೭ - ೧೯೯೯

ಫಿಲಮ್‍ಫೇರ್ ಪ್ರಶಸ್ತಿ

[ಬದಲಾಯಿಸಿ]

ಹೀರೋಹೋಂಡ ಎಕ್ಸ್ಪ್ರೆಸ್ ಪ್ರಶಸ್ತಿ

[ಬದಲಾಯಿಸಿ]
  • ಓಂ - ೧೯೯೫
  • ಜನುಮದ ಜೋಡಿ - ೧೯೯೬
  • ಎ.ಕೆ.೪೭ - ೧೯೯೯

ಆರ್ಯಭಟ ಪ್ರಶಸ್ತಿ

[ಬದಲಾಯಿಸಿ]

ಸ್ಕ್ರೀನ್ ಅವಾರ್ಡ್ಸ್

[ಬದಲಾಯಿಸಿ]
  • ನಮ್ಮೂರ ಮಂದಾರ ಹೂವೆ - ೧೯೯೬

ಎಸ್.ಐ.ಸಿ.ಎ. ವಿಶೇಷ ಜ್ಯೂರಿ ಪ್ರಶಸ್ತಿ

[ಬದಲಾಯಿಸಿ]
  • ತವರಿಗೆ ಬಾ ತಂಗಿ - ೨೦೦೨
  • ಚಿಗುರಿದ ಕನಸು - ೨೦೦೪

ಹಲೋ ಗಾಂಧಿನಗರ ಪ್ರಶಸ್ತಿ

[ಬದಲಾಯಿಸಿ]
  • ಚಿಗುರಿದ ಕನಸು - ೨೦೦೪

ಈ ಟಿವಿ ವಾಟಿಕಾ ಪ್ರಸಸ್ತಿ

[ಬದಲಾಯಿಸಿ]

ಮೈಲಿಗಲ್ಲುಗಳು

[ಬದಲಾಯಿಸಿ]
  • ೧ನೇ ಚಿತ್ರ: ಆನಂದ್ (೧೯೮೬)
  • ೨೫ನೇ ಚಿತ್ರ: ಮನಮಿಡಿಯಿತು (೧೯೯೫)
  • ೫೦ನೇ ಚಿತ್ರ: ಏ.ಕೆ. ೪೭ (೧೯೯೯)
  • ೭೫ನೇ ಚಿತ್ರ: ಶ್ರೀರಾಮ್ (೨೦೦೩)
  • ೧೦೦ನೇ ಚಿತ್ರ: ಜೋಗಯ್ಯ (೨೦೧೧)

ಅಭಿನಯಿಸಿದ ಚಲನಚಿತ್ರಗಳು

[ಬದಲಾಯಿಸಿ]

ಈ ಹೃದಯ ನಿನಗಾಗಿ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಟಿಸಿದ್ದಾರೆ


ಸಂಖ್ಯೆ ವರ್ಷ ಚಿತ್ರದ ಹೆಸರು ಪಾತ್ರ ಚಿತ್ರ ನಿರ್ಮಾಣ ಸಂಸ್ಥೆ ನಿರ್ದೇಶನ ನಿರ್ಮಾಪಕರು ಸಂಗೀತ ಛಾಯಗ್ರಹಣ
1 1986 ಆನಂದ್ ಆನಂದ್ ದಾಕ್ಷಾಯಿಣಿ ಕಂಬೈನ್ಸ್ ಸಿಂಗೀತಂ ಶ್ರೀನಿವಾಸರಾವ್ ಪಾರ್ವತಮ್ಮ ರಾಜಕುಮಾರ್ ಶಂಕರ್-ಗಣೇಶ್ ಬಿ.ಸಿ.ಗೌರಿಶಂಕರ್
2 1986 ರಥ ಸಪ್ತಮಿ ಭಗವತಿ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಎಸ್.ಎ.ಗೋವಿಂದರಾಜ್ ಉಪೇಂದ್ರಕುಮಾರ್ ವಿ.ಕೆ.ಕಣ್ಣನ್
3 1987 ಮನ ಮೆಚ್ಚಿದ ಹುಡುಗಿ ಕ್ಯಾತ್ಯಾಯಿಣಿ ಆರ್ಟ್ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಎಸ್.ಎ.ಚಿನ್ನೇಗೌಡ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
4 1988 ಶಿವ ಮೆಚ್ಚಿದ ಕಣ್ಣಪ್ಪ ಕಣ್ಣಪ್ಪ ಭಗವತಿ ಕಂಬೈನ್ಸ್ ವಿಜಯ್ ಎಸ್.ಎ.ಗೋವಿಂದರಾಜ್ ಟಿ.ಜಿ.ಲಿಂಗಪ್ಪ
5 1988 ಸಂಯುಕ್ತ ನಿರುಪಮ ಆರ್ಟ್ ಕಂಬೈನ್ಸ್ ಕೆ.ಎನ್.ಚಂದ್ರಶೇಖರ್ ಶರ್ಮ ಎಸ್.ಎ.ಗೋವಿಂದರಾಜ್ ಸಿಂಗೀತಂ ಶ್ರೀನಿವಾಸರಾವ್ ವಿ.ಕೆ.ಕಣ್ಣನ್
6 1988 ರಣರಂಗ ವೈಷ್ಣವಿ ಮೂವೀಸ್ ವಿ.ಸೋಮಶೇಖರ್ ವೈಷ್ಣವಿ ಮೂವೀಸ್ ಹಂಸಲೇಖ ಹೆಚ್.ಜಿ.ರಾಜು
7 1989 ಇನ್‌ಸ್ಪೆಕ್ಟರ್ ವಿಕ್ರಂ ಇನ್ಸ್ಪೆಕ್ಟರ್ ವಿಕ್ರಂ ನಿಖಿಲೇಶ್ವರಿ ಸಿನಿ ಕಂಬೈನ್ಸ್ ದಿನೇಶ್ ಬಾಬು ರಾಘವೇಂದ್ರ ವಿಜಯಾನಂದ್ ದಿನೇಶ್ ಬಾಬು
8 1989 ಅದೇ ರಾಗ ಅದೇ ಹಾಡು ಭಗವತಿ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಎಸ್.ಎ.ಗೋವಿಂದರಾಜ್ ಶಂಕರ್-ಗಣೇಶ್ ಬಿ.ಸಿ.ಗೌರಿಶಂಕರ್
9 1990 ಆಸೆಗೊಬ್ಬ ಮೀಸೆಗೊಬ್ಬ ದಶರಥಪ್ರಸಾದ್ ರಾಮಪ್ರಸಾದ್ / ಲಕ್ಷ್ಮಣಪ್ರಸಾದ್ ಶರ್ಮಾ ಪೂರ್ಣಿಮ ಎಂಟರ್‌ಪ್ರೈಸಸ್ ಎಂ.ಎಸ್.ರಾಜಶೇಖರ್ ಪಾರ್ವತಮ್ಮ ರಾಜಕುಮಾರ್ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
10 1990 ಮೃತ್ಯಂಜಯ ನಿಖಿಲೇಶ್ವರಿ ಸಿನಿ ಕಂಬೈನ್ಸ್ ದತ್ತರಾಜ್ ರಾಘವೇಂದ್ರ ಉಪೇಂದ್ರಕುಮಾರ್ ವಿ.ಕೆ.ಕಣ್ಣನ್
11 1991 ಅರಳಿದ ಹೂವುಗಳು ದಾಕ್ಷಾಯಿಣಿ ಸಿನಿ ಕಂಬೈನ್ಸ್ ಚಿ.ದತ್ತರಾಜ್ ಪಾರ್ವತಮ್ಮ ರಾಜಕುಮಾರ್ ಉಪೇಂದ್ರಕುಮಾರ್ ವಿ.ಕೆ.ಕಣ್ಣನ್
12 1991 ಮೋಡದ ಮರೆಯಲ್ಲಿ ಶ್ರೀ ವೈಷ್ಣವಿ ಮೂವೀಸ್ ಎಂ.ಎಸ್.ರಾಜಶೇಖರ್ ಪಾರ್ವತಮ್ಮ ರಾಜಕುಮಾರ್ ರಾಜನ್-ನಾಗೇಂದ್ರ ಕೆ.ಕಣ್ಣನ್
13 1992 ಮಿಡಿದ ಶೃತಿ ನಿರುಪಮ ಆರ್ಟ್ಸ್ ಎಂ.ಎಸ್.ರಾಜಶೇಖರ್ ಎಸ್.ಎ.ಗೋವಿಂದರಾಜ್ ಉಪೇಂದ್ರಕುಮಾರ್ ವಿ.ಕೆ.ಕಣ್ಣನ್
14 1992 ಪುರುಷೋತ್ತಮ ಶ್ರೀ ರೇಣುಕಾಂಬ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಮಧುಬಂಗಾರಪ್ಪ ಹಂಸಲೇಖ ವಿ.ಕೆ.ಕಣ್ಣನ್
15 1992 ಮಾವನಿಗೆ ತಕ್ಕ ಅಳಿಯ ಗಣೇಶ ಶ್ರೀ ಚಕ್ರೇಶ್ವರಿ ಕಂಬೈನ್ಸ್ ವಿ.ಗೋವಿಂದರಾಜ್ ಪಾರ್ವತಮ್ಮ ರಾಜಕುಮಾರ್ ಶಂಕರ್-ಗಣೇಶ್ ಶ್ರೀಕಾಂತ್
16 1993 ಜಗ ಮೆಚ್ಚಿದ ಹುಡುಗ ಚೌಡೇಶ್ವರಿ ಆರ್ಟ್ಸ್ ಭಾರ್ಗವ ಎಸ್.ಎ.ಶ್ರೀನಿವಾಸ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಮ್
17 1993 ಚಿರಬಾಂಧವ್ಯ ಶಾಶ್ವತಿ ಚಿತ್ರ ಎಂ.ಎಸ್.ರಾಜಶೇಖರ್ ಆರ್.ನಿವೇದಿತ ಹಂಸಲೇಖ ಮಲ್ಲಿಕಾರ್ಜುನ್
18 1993 ಆನಂದಜ್ಯೋತಿ ಶಿವ ಚಿತ್ರಾಲಯ ಚಿ.ದತ್ತರಾಜ್ ರಾಕಲೈನ್ ವೆಂಕಟೇಶ್ ವಿಜಯಾನಂದ್ ಜೆ.ಜಿ.ಕೃಷ್ಣ
19 1994 ಗಂಧದಗುಡಿ ಭಾಗ-೨ ಶಂಕರ್ ಭರಣಿ ಚಿತ್ರ ವಿಜಯ್ ಎಂ.ಪಿ.ಶಂಕರ್ ರಾಜನ್-ನಾಗೇಂದ್ರ ಮಲ್ಲಿಕಾರ್ಜುನ್
20 1994 ಮುತ್ತಣ್ಣ  • ಮುತ್ತಣ್ಣ
 • ಕಿರಣ್
ಕಾವೇರಿ ಅಮ್ಮ ಫಿಲಂಸ್ ಎಂ.ಎಸ್.ರಾಜಶೇಖರ್ ಎಲ್.ಸೋಮಣ್ಣಗೌಡ ಹಂಸಲೇಖ ಆರ್.ಮಧುಸೂದನ್
21 1994 ಗಂಡುಗಲಿ ಜ್ಯೋತಿ ಚಿತ್ರ ಸಿ.ಹೆಚ್.ಬಾಲಾಜಿಸಿಂಗ್ ಬಾಬು ಜೆ.ಜಿ.ಕೃಷ್ಣ ಸಾಧುಕೋಕಿಲ ಜೆ.ಜಿ.ಕೃಷ್ಣ
22 1995 ಗಡಿಬಿಡಿ ಅಳಿಯ ಕಲ್ಯಾಣಿ ಎಂಟರ್‌ಪ್ರೈಸಸ್ ಸಾಯಿಪ್ರಕಾಶ್ ಕೆ.ರಾಘವರಾವ್ ಕೋಟಿ ಜಾನಿಲಾಲ್
23 1995 ಸವ್ಯಸಾಚಿ ಸಾವಿತ್ರಿ ಚಿತ್ರ ಎಂ.ಎಸ್.ರಾಜಶೇಖರ್ ಶಾಶ್ವತಿ ಚಿತ್ರ ಸಾಧುಕೋಕಿಲ ಮಲ್ಲಿಕಾರ್ಜುನ್
24 1995 ಓಂ ಸತ್ಯಮೂರ್ತಿ ಪೂರ್ಣಿಮ ಎಂಟರ್‌ಪ್ರೈಸಸ್ ಉಪೇಂದ್ರ ಪಾರ್ವತಮ್ಮ ರಾಜಕುಮಾರ್ ಹಂಸಲೇಖ ಬಿ.ಸಿ.ಗೌರಿಶಂಕರ್
25 1995 ಮನ ಮಿಡಿಯಿತು ಶ್ರೀ ವೈಭವಲಕ್ಷ್ಮಿ ಕಂಬೈನ್ಸ್ ಎಂ.ಎಸ್.ರಾಜಶೇಖರ್ ರಾಣಿ ರಾಜಶೇಖರ್ ಉಪೇಂದ್ರಕುಮಾರ್ ಮಲ್ಲಿಕಾರ್ಜುನ್
26 1995 ಸಮರ ಎ.ಎ.ಕಂಬೈನ್ಸ್ ಸಿ.ಗುರುದತ್ ಪ್ರವೀಣ್ ಕೌಸ್ತುಭ ಆರ್.ಮಧುಸೂದನ್
27 1995 ದೊರೆ ಶ್ರೀ ನಿಮಿಷಾಂಬ ಪ್ರೊಡಕ್ಷನ್ಸ್ ಶಿವಮಣಿ ಎಂ.ಚಂದ್ರಶೇಖರ್ ಹಂಸಲೇಖ ಕೃಷ್ಣಕುಮಾರ್
28 1996 ಇಬ್ಬರ ನಡುವೆ ಮುದ್ದಿನ ಆಟ ಎಸ್.ವಿ.ಪ್ರೊಡಕ್ಷನ್ಸ್ ರೇಲಂಗಿ ನರಸಿಂಹರಾವ್ ಟಿ.ಎಮ್.ವೆಂಕಟಸ್ವಾಮಿ ಸಾಧುಕೋಕಿಲ ನಾಗೇಂದ್ರಕುಮಾರ್
29 1996 ಗಾಜನೂರ ಗಂಡು ಶ್ರೀ ಲಕ್ಷ್ಮಿ ಸಿನಿ ಪ್ರೊಡಕ್ಷನ್ಸ್ ಆನಂದ್ ಪಿ.ರಾಜು ಜಿ.ಆರ್.ಕೃಷ್ಣರೆಡ್ಡಿ ಸಾಧುಕೋಕಿಲ ಮಲ್ಲಿಕಾರ್ಜುನ್
30 1996 ಶಿವಸೈನ್ಯ ಶಿವ ಯಶಿ ಎಂಟರ್‌ಪ್ರೈಸಸ್ ಶಿವಮಣಿ ವೈ.ಎಸ್.ರಮೇಶ್ ಇಳಯರಾಜ ಎ.ವಿ.ಕೃಷ್ಣಕುಮಾರ್
31 1996 ಅಣ್ಣಾವ್ರ ಮಕ್ಕಳು ಶಿವ ಶಕ್ತಿ ಪ್ರೊಡಕ್ಷನ್ಸ್ ಹೆಚ್.ಎಸ್.ಫಣಿರಾಮಚಂದ್ರ ವೈ.ಆರ್.ಜೈರಾಜ್ ರಾಜೇಶ್ ರಾಮನಾಥ್ ಬಿ.ಎಸ್.ಬಸವರಾಜ್
32 1996 ನಮ್ಮೂರ ಮಂದಾರ ಹೂವೆ ಮನೋಜ್ ಚಿನ್ನಿ ಫಿಲಂಸ್ ಸುನಿಲ್ ಕುಮಾರ್ ದೇಸಾಯಿ ಜಯಶ್ರೀದೇವಿ ಇಳಯರಾಜ ಸುಂದರನಾಥ್ ಸುವರ್ಣ
33 1996 ಆದಿತ್ಯ ಕ್ರಿಯೇಟಿವ್ ಮೀಡಿಯ ಲೋಕಚಂದರ್ ಎಂ.ಪಿ.ರವಿ ಕೊಟ್ಟಾರಕರ ರಾಜೇಶ್ ರಾಮನಾಥ್ ವಿಜಯಗೋಪಾಲ್
34 1996 ಜನುಮದ ಜೋಡಿ ಕೃಷ್ಣ ಶ್ರೀ ವೈಷ್ಣವಿ ಕಂಬೈನ್ಸ್ ಟಿ.ಎಸ್.ನಾಗಾಭರಣ ಪಾರ್ವತಮ್ಮ ರಾಜಕುಮಾರ್ ವಿ.ಮನೋಹರ್ ಬಿ.ಸಿ.ಗೌರಿಶಂಕರ್
35 1997 ಈ ಹೃದಯ ನಿನಗಾಗಿ ರಾಮಾಲಯನ್ ಫಿಲಂಸ್ ಮಜ್ಜಿ ಕೃಷ್ಣಪ್ರಸಾದ್ ಪಾರಸ್ ಜೈನ್ ವಿ.ಮನೋಹರ್ ಎಂ.ವಿ.ರಾಮಕೃಷ್ಣ
36 1997 ಗಂಗಾ ಯಮುನ ಮೇಘ ಪ್ರೊಡಕ್ಷನ್ಸ್ ಎಸ್.ಮಹೇಂದರ್ ಬಿ.ಪಿ.ತ್ಯಾಗರಾಜ್ ವಿದ್ಯಾಸಾಗರ್ ರಮೇಶ್ ಬಾಬು
37 1997 ಸಿಂಹದ ಮರಿ ವಿಶ್ವ ರಾಮು ಎಂಟರ್‌ಪ್ರೈಸಸ್ ಎನ್.ಓಂಪ್ರಕಾಶ್ ರಾವ್ ರಾಮು ಹಂಸಲೇಖ ಟಿ.ಜನಾರ್ಧನ್
38 1997 ಅಮ್ಮಾವ್ರ ಗಂಡ ಅಕ್ಷಯ್ ಎಂಟರ್‌ಪ್ರೈಸಸ್ ಹೆಚ್.ಎಸ್.ಫಣಿರಾಮಚಂದ್ರ ಎಂ.ಕೆ.ಶ್ರೀನಿವಾಸ ರಾಜ್ ಡಿ.ವಿ.ರಾಜಾರಾಮ್
39 1997 ಮುದ್ದಿನ ಕಣ್ಮಣಿ ಶಿವರಾಮ್ ಹೆಗಡೆ ಗಣೇಶ ಪಿಚ್ಚರ್ಸ್ ರವಿಕೊಟ್ಟಾರಕರ್ ಶಾರದ ಎಸ್.ಪಿ.ವೆಂಕಟೇಶ್ ಕೃಷ್ಣಕುಮಾರ್
40 1997 ರಾಜ ಕಾವೇರಿ ಅಮ್ಮ ಫಿಲಂಸ್ ರೇಲಂಗಿ ನರಸಿಂಹರಾವ್ ಎಲ್.ಸೋಮಣ್ಣ ದೇವ ನಾಗೇಂದ್ರ
41 1997 ಜೋಡಿ ಹಕ್ಕಿ ಮಾಚ / ಮನೋಜ್ ಶ್ರೀ ಗುರು ರಾಘವೇಂದ್ರ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ಪಿ.ಧನರಾಜ್ ವಿ.ಮನೋಹರ್ ರಮೇಶ್ ಬಾಬು
42 1997 ಪ್ರೇಮ ರಾಗ ಹಾಡು ಗೆಳತಿ ಚಿನ್ನಿ ಫಿಲಂಸ್ ಸುನಿಲ್ ಕುಮಾರ್ ದೇಸಾಯಿ ಜಯಶ್ರೀದೇವಿ ಇಳಯರಾಜ ಎ.ವಿ.ಕೃಷ್ಣಕುಮಾರ್
43 1998 ನಮ್ಮೂರ ಹುಡುಗ ವಿಜಯ ನರಸಿಂಹ ಚಿತ್ರ ರವೀಂದ್ರನಾಥ್ ಅಶೋಕ್ ವಿ.ಮನೋಹರ್ ಆರ್.ಮಧುಸೂದನ್
44 1998 ಕುರುಬನ ರಾಣಿ ರಾಕ್‌ಲೈನ್ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ರಾಕಲೈನ್ ವೆಂಕಟೇಶ್ ವಿ.ಮನೋಹರ್ ಅಶೊಕ್ ಕಶ್ಯಪ್
45 1998 ಅಂಡಮಾನ್ ಶ್ರೀ ಜ್ವಾಲಾಮಾಲಿನಿ ದೇವಿ ಫಿಲಂಸ್ ಪಿ.ಹೆಚ್.ವಿಶ್ವನಾಥ್ ಜಿ.ಪದ್ಮಲತ ಹಂಸಲೇಖ ಪಿ.ರಾಜನ್
46 1998 ಮಿಸ್ಟರ್ ಪುಟ್ಟಸ್ವಾಮಿ ಶ್ರೀ ಪುಟ್ಟಣ್ಣ ಪ್ರೊಡಕ್ಷನ್ಸ್ ವಿ.ಉಮಾಕಾಂತ್ ಶ್ರೀನಿವಾಸ್ ವಿ.ಮನೋಹರ್ ಪಿ.ಕೆ.ಹೆಚ್.ದಾಸ್
47 1998 ಭೂಮಿ ತಾಯಿಯ ಚೊಚ್ಚಲ ಮಗ ಕರ್ಣ ವೈಭವ ಲಕ್ಷ್ಮಿ ಪ್ರೊಡಕ್ಷನ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಜೈಜಗದೀಶ್ ವಿ.ಮನೋಹರ್ ಬಿ.ಸಿ.ಗೌರಿಶಂಕರ್
48 1998 ಗಡಿಬಿಡಿ ಕೃಷ್ಣ ಚಿನ್ನಿ ಫಿಲಂಸ್ ಸಾಯಿಪ್ರಕಾಶ್ ಎಸ್.ಆರ್.ಭಾರತಿದೇವಿ ಹಂಸಲೇಖ ವಿಜಯಕುಮಾರ್
49 1999 ಜನುಮದಾತ ಬಾಬ ಪ್ರೊಡಕ್ಷನ್ಸ್ ಟಿ.ಎಸ್.ನಾಗಾಭರಣ ಕೆ.ಮುಸ್ತಫ ವಿ.ಮನೋಹರ್ ಬಿ.ಸಿ.ಗೌರಿಶಂಕರ್
50 1999 ಚಂದ್ರೋದಯ ಸಂದೇಶ್ ಕಂಬೈನ್ಸ್ ಮಹೇಂದರ್ ಸತೀಶ್ ಸ್ವಾಮಿ ಹಂಸಲೇಖ ಕೃಷ್ಣಕುಮಾರ್
51 1999 ಎ.ಕೆ.೪೭ ರಾಮ್ ಎನ್.ಓಂ ಪ್ರಕಾಶ್ ರಾವ್ ರಾಮು ಹಂಸಲೇಖ ಪಿ.ರಾಜನ್
52 1999 ವಿಶ್ವ ವಿಶ್ವ ಧನಲಕ್ಷ್ಮಿ ಕ್ರಿಯೇಷನ್ಸ್ ಶಿವಮಣಿ ಪಿ.ಧನರಾಜ್ ಹಂಸಲೇಖ ರಮೇಶ್ ಬಾಬು
53 1999 ಹೃದಯ ಹೃದಯ ರವಿ ವಜ್ರೇಶ್ವರಿ ಎಂಟರ್ ಪ್ರೈಸಸ್ ಎಂ.ಎಸ್.ರಾಜಶೇಖರ್ ಪಾರ್ವತಮ್ಮ ರಾಜಕುಮಾರ್ ಹಂಸಲೇಖ ಬಿ.ಸಿ.ಗೌರಿಶಂಕರ್
54 2000 ಪ್ರೀತ್ಸೆ ಸೂರ್ಯ ರಾಕ್‌ಲೈನ್ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ರಾಕಲೈನ್ ವೆಂಕಟೇಶ್ ಹಂಸಲೇಖ ಪಿ.ಕೆ.ಹೆಚ್.ದಾಸ್
55 2000 ಹಗಲುವೇಷ ಎ ಫಿಲಂಸ್ ಜಾನ್ ದೇವರಾಜ್ ಬಿ.ಜಗನ್ನಾಥ್ ಹಂಸಲೇಖ ರಾಜನ್
56 2000 ಯಾರೇ ನೀ ಅಭಿಮಾನಿ ಆದಿತ್ಯ ಶ್ರೀ ಜ್ವಾಲಾಮಾಲಿನಿ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ಪಿ.ಲಕ್ಷ್ಮಣ್ ಹಂಸಲೇಖ ಪಿ.ಕೆ.ಹೆಚ್.ದಾಸ್
57 2000 ಇಂದ್ರಧನುಷ್ ಎ.ಎಂಟರ್‌ಪ್ರೈಸಸ್ ವಿ.ಮನೋಹರ್ ಪೂರ್ಣಿಮ ವಿ.ಮನೋಹರ್ ಸುಂದರನಾಥ್ ಸುವರ್ಣ
58 2000 ಕೃಷ್ಣಲೀಲೆ ರಾಕ್‌ಲೈನ್ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ರಾಕಲೈನ್ ವೆಂಕಟೇಶ್ ವಿ.ಮನೋಹರ್ ಬಿ.ಸಿ.ಗೌರಿಶಂಕರ್
59 2000 ದೇವರ ಮಗ ಭರತ್ ಶ್ರೀ ವಿನಾಯಕ ಮೂವೀಸ್ ಡಿ.ರಾಜೇಂದ್ರಬಾಬು ಎ.ಗಣೇಶ್ ಹಂಸಲೇಖ ಪಿ.ಕೆ.ಹೆಚ್.ದಾಸ್
60 2000 ಗಲಾಟೆ ಅಳಿಯಂದ್ರು ಚೆನ್ನಾಂಭಿಕ ಫಿಲಂಸ್ ಎಸ್.ನಾರಾಯಣ್ ಅನಿತ ದೇವ ಆರ್.ಗಿರಿ
61 2000 ಮದುವೆ ಆಗೋಣ ಬಾ
62 2001 ಅಸುರ ವಾಸು ಸಂದೇಶ್ ಎಂಟರ್ ಪ್ರೈಸಸ್ ಎಸ್.ಮಹೇಂದರ್ ಗುರುಕಿರಣ್
63 2001 ಬಹಳ ಚೆನ್ನಾಗಿದೆ ಚಿತ್ರ ಜ್ಯೋತಿ ಎಂ.ಎಸ್.ರಾಜಶೇಖರ್ ಗಣಪತಿ ಪ್ರಸಾದ್, ಎಸ್.ರಾಮನಾಥನ್, ಕೋಟಿ ಪ್ರಸಾದ್ ಬಾಬು
64 2001 ಬಾವ ಭಾಮೈದ ರಾಮು ಎಂಟರ್‌ಪ್ರೈಸಸ್ ಕಿಶೋರ್ ಸರ್ಜಾ ರಾಮು ಹಂಸಲೇಖ ಅಶೊಕ್ ಕಶ್ಯಪ್
65 2001 ಸುಂದರಕಾಂಡ ಶ್ರೀ ವೆಂಕಟೇಶ್ವರ ಪ್ರೊಡಕ್ಷನ್ಸ್ ಎಂ.ಎಸ್.ರಾಜಶೇಖರ್ ಮಡಿಕೊಂಡ ವೆಂಕಟಮುರಳಿಕೃಷ್ಣ ಎಮ್.ಎಮ್.ಕೀರವಾಣಿ ಪ್ರಸಾದ್ ಬಾಬು
66 2001 ಯುವರಾಜ ಆರ್.ಎಸ್.ಪ್ರೊಡಕ್ಷನ್ಸ್ ಪೂರಿ ಜಗನ್ನಾಥ್ ಆರ್.ಶ್ರೀನಿವಾಸ್ ರಮಣ ಗೋಕುಲ
67 2001 ಜೋಡಿ ರಾಕ್‌ಲೈನ್ ಪ್ರೊಡಕ್ಷನ್ಸ್ ಕಿಶೋರ್ ಸರ್ಜಾ ರಾಕಲೈನ್ ವೆಂಕಟೇಶ್ ಎಸ್.ಎ.ರಾಜಕುಮಾರ್
68 2002 ಕೋದಂಡರಾಮ ಶ್ರೀ ಲಕ್ಷ್ಮಿ ಪಿಚ್ಚರ್ಸ್ ವಿ.ರವಿಚಂದ್ರನ್ ವಿ.ವೆಂಕಟರಾವ್ ವಿ.ರವಿಚಂದ್ರನ್
69 2002 ನಿನ್ನೇ ಪ್ರೀತಿಸುವೆ ಅಸ್ಕರ್ ಫಿಲಂಸ್ ಎನ್.ಓಂಪ್ರಕಾಶ್ ರಾವ್ ಕೆ.ಮೆಹರುನ್ನೀಸ ರೆಹಮಾನ್, ಕೆ.ಮುಸ್ತಫ ಆನಂದ್ ಆಡಿಯೋ ಎಸ್.ಮನೋಹರ್
70 2002 ತವರಿಗೆ ಬಾ ತಂಗಿ ಮೇಘ ಹಿಟ್ ಫಿಲಂಸ್ ಓಂ ಸಾಯಿಪ್ರಕಾಶ್ ಆರ್.ಎಸ್.ಗೌಡ ಹಂಸಲೇಖ ಅಜಯ್ ಕುಮಾರ್
71 2003 ಡಾನ್ ರಾಯಲ್ ಫಿಲಂಸ್ ಪಿ.ಎನ್.ಸತ್ಯ ರಮೇಶ್ ಯಾಧವ್
72 2003 ಶ್ರೀರಾಮ್ ಆರ್.ಎಸ್.ಪ್ರೊಡಕ್ಷನ್ಸ್ ಎಂ.ಎಸ್.ರಮೇಶ್ ಆರ್.ಶ್ರೀನಿವಾಸ್ ಗುರುಕಿರಣ್ ಹೆಚ್.ಸಿ.ವೇಣು
73 2003 ಸ್ಮೈಲ್ ಶ್ರೀ ಮಾತ ಪಿಚ್ಚರ್ಸ್ ಸೀತಾರಾಮ ಕಾರಾಂತ್ ಎನ್.ಕೆ.ಪ್ರಕಾಶ್ ಬಾಬು ವಿ.ಮನೋಹರ್ ಪಿ.ರಾಜನ್
74 2003 ನಂಜುಂಡಿ ರಾಮು ಎಂಟರ್‌ಪ್ರೈಸಸ್ ಆರ್.ಎಸ್.ಬ್ರದರ್ಸ್ ರಾಮು ಹಂಸಲೇಖ ಬಿ.ಸುರೇಶ್ ಬಾಬು
75 2003 ಚಿಗುರಿದ ಕನಸು ಶ್ರೀ ವಜ್ರೇಶ್ವರಿ ಫಿಲಂಸ್ ಟಿ.ಎಸ್.ನಾಗಾಭರಣ ಪಾರ್ವತಮ್ಮ ರಾಜಕುಮಾರ್ ವಿ.ಮನೋಹರ್ ಬಿ.ಸಿ.ಗೌರಿಶಂಕರ್
76 2004 ರೌಡಿ ಅಳಿಯ ಕೋಮಲ್ ಎಂಟರ್‌ಪ್ರೈಸಸ್ ಓಂ ಸಾಯಿಪ್ರಕಾಶ್ ಎಂ.ಸಿ.ನೇಹ ಸಪ್ತಸ್ವರ ದಾಸರಿ ಸೀನು
77 2004 ಸಾರ್ವಭೌಮ ರೋಹಿಣಿ ಎಂಟರ್‌ಪ್ರೈಸಸ್ ಕೆ.ಮಹೇಶ್ ಸುಖಧರೆ ಆರ್.ಜಗದೀಶ್ ಹಂಸಲೇಖ ಬಿ.ಎ.ಮಧು
78 2004 ಕಾಂಚನಗಂಗ ಲಕ್ಷ್ಮಿ ಕ್ರಿಯೇಷನ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಜೈಜಗದೀಶ್, ವಿಜಯಲಕ್ಷ್ಮಿಸಿಂಗ್, ಎಸ್.ಎ.ರಾಜಕುಮಾರ್ ಬಿ.ಸಿ.ಗೌರಿಶಂಕರ್
79 2005 ರಿಷಿ ಶ್ರೀ ಜೈಮಾತ ಕಂಬೈನ್ಸ್ ಪ್ರಕಾಶ್ ಜೆ.ಜಯಮ್ಮ ಗುರುಕಿರಣ್ ಕೃಷ್ಣಕುಮಾರ್
80 2005 ರಾಕ್ಷಸ ರಾಮು ಫಿಲಂಸ್ ಕೋಕಿಲ ಸಾಧು ರಾಮು ರಂಗನಾಥ್, ಶಶಿಕುಮಾರ್ ಕೃಷ್ಣಕುಮಾರ್
81 2005 ವಾಲ್ಮೀಕಿ ಶ್ರೀನಿವಾಸ ಪ್ರೊಡಕ್ಷನ್ಸ್ ಎಂ.ಎಸ್.ರಮೇಶ್ ಹೆಚ್.ಸಿ.ಶ್ರೀನಿವಾಸ್ ಗುರುಕಿರಣ್ ದಾಸರಿ ಸೀನು
82 2005 ಜೋಗಿ ಅಶ್ವಿನಿ ಪ್ರೊಡಕ್ಷನ್ಸ್ ಪ್ರೇಮ್ ಪಿ.ಕೃಷ್ಣಪ್ರಸಾದ್, ರಾಮಪ್ರಸಾದ್ ಗುರುಕಿರಣ್ ಎಮ್.ಆರ್.ಸೀನು
83 2005 ಅಣ್ಣ ತಂಗಿ ವಿಜಯ್ ಫಿಲಂಸ್ ಸಾಯಿಪ್ರಕಾಶ್ ಪ್ರಭಾಕರ್ ಹಂಸಲೇಖ ಆರ್.ಗಿರಿ
84 2006 ಅಶೋಕ ರಾಯಲ್ ಪಿಚ್ಚರ್ಸ್ ಶಿವಮಣಿ ರಮೇಶ್ ಯಾಧವ್ ಸಾಧುಕೋಕಿಲ ಸುಂದರರಾಜ್ ಸುವರ್ಣ
85 2006 ತವರಿನ ಸಿರಿ ರಾಮು ಫಿಲಂಸ್ ಸಾಯಿಪ್ರಕಾಶ್ ರಾಮು ಹಂಸಲೇಖ ಆರ್.ಗಿರಿ
86 2006 ಗಂಡುಗಲಿ ಕುಮಾರರಾಮ ಎಂ.ಎಸ್.ರಾಮಯ್ಯ ಚಿತ್ರಾಲಯ ಭಾರ್ಗವ ಅನಿತ ಪಟ್ಟಾಭಿರಾಮ್ ಗುರುಕಿರಣ್ ಸುಂದರನಾಥ್ ಸುವರ್ಣ
87 2007 ತಾಯಿಯ ಮಡಿಲು ಎಸ್.ನಾರಾಯಣ್ ಎಸ್.ಎ.ರಾಜಕುಮಾರ್
88 2007 ಸಂತ ಎಸ್.ಮುರಳಿಮೋಹನ್ ಗುರುಕಿರಣ್
89 2007 ಗಂಡನ ಮನೆ ಎಸ್.ಮಹೇಂದರ್ ವಿ.ಮನೋಹರ್
90 2007 ಲವ ಕುಶ ಓಂ ಸಾಯಿಪ್ರಕಾಶ್ ಗುರುಕಿರಣ್
91 ೨೦೦೮ ಸತ್ಯ ಇನ್ ಲವ್ ರಾಘವ್ ಲೋಕಿ ಗುರುಕಿರಣ್
92 ೨೦೦೮ ಬಂಧು ಬಳಗ ನಾಗಣ್ಣ ಹಂಸಲೇಖ
93 ೨೦೦೮ ಮಾದೇಶ ರವಿ ಶ್ರೀವತ್ಸ ಮನೋಮೂರ್ತಿ
94 ೨೦೦೮ ಪರಮೇಶ ಪಾನ್‌ವಾಲಾ ಪರಮೇಶ ಮಹೇಶ್ ಬಾಬು ವಿ.ಹರಿಕೃಷ್ಣ
95 ೨೦೦೯ ನಂದ ಆರ್.ಅನಂತರಾಜು ವಿ.ಮನೋಹರ್
96 ೨೦೦೯ ಹ್ಯಾಟ್ರಿಕ್ ಹೊಡಿಮಗ ಸತ್ಯ.ಪಿ ಜಸ್ಸಿ ಗಿಫ್ಟ್
97 ೨೦೦೯ ಭಾಗ್ಯದ ಬಳೆಗಾರ ಓಂ ಸಾಯಿಪ್ರಕಾಶ್ ಇಳಯರಾಜ
98 ೨೦೦೯ ದೇವರು ಕೊಟ್ಟ ತಂಗಿ ಓಂ ಸಾಯಿಪ್ರಕಾಶ್ ಹಂಸಲೇಖ
99 2010 ಸುಗ್ರೀವ ಪ್ರಶಾಂತ್ ಗುರುಕಿರಣ್
100 2010 ತಮಸ್ಸು ಶಂಕರ್ ಅಗ್ನಿ ಶ್ರೀಧರ್ ಸಂದೀಪ್ ಚೌಟ
೧೦೧ ೨೦೧೦ ಮೈಲಾರಿ ಆರ್ ಚಂದ್ರು ಗುರುಕಿರಣ್
೧೦೨ ೨೦೧೧ ಜೋಗಯ್ಯ ಪ್ರೇಂ ಪ್ರೇಂ ಗುರುಕಿರಣ್
೧೦೩ ೨೦೧೧ ಚೆಲುವೆಯೇ ನಿನ್ನ ನೋಡಲು ರಘು ರಾಮ್ ಎನ್ ಎಂ ಸುರೇಶ್ ವಿ.ಹರಿಕೃಷ್ಣ
೧೦೪ ೨೦೧೨ ಶಿವ ಎನ್.ಓಂ ಪ್ರಕಾಶ್ ರಾವ್ ಕೆ ಪಿ ಶ್ರೀನಾಥ್ ಗುರುಕಿರಣ್
೧೦೫ ೨೦೧೩ ಲಕ್ಷ್ಮಿ ರಾಘವ ಲೋಕಿ ಭಾಸ್ಕರ್ ಗುರುಕಿರಣ್
೧೦೬ ೨೦೧೩ ಅಂದರ್ ಬಹಾರ್ ಫನೇಶ್ ಎಸ್ ರಾಮನಾಥಪುರ ಭಾಸ್ಕರ್,ಅವಿನಾಶ್ ವಿಜಯ್ ಪ್ರಕಾಶ್
೧೦೭ ೨೦೧೩ ಕಡ್ಡಿ ಪುಡಿ ಆನಂದ / ಕಡ್ಡಿಪುಡಿ ದುನಿಯಾ ಸೂರಿ ಎಂ ಚಂದ್ರು ವಿಜಯ್ ಪ್ರಕಾಶ್
೧೦೮ ೨೦೧೩ ಭಜರಂಗಿ ಹರ್ಷ ನಟರಾಜ್ ಗೌಡ,ಮಂಜುನಾಥ್ ಗೌಡ ಅರ್ಜುನ್ ಜನ್ಯ
೧೦೯ ೨೦೧೪ ಆರ್ಯನ್ ಆರ್ಯನ್ ರಾಜೇಂದ್ರ ಬಾಬು,ಗುರುದತ್ ಧ್ರುವ ದಾಸ್,ಡಿ ಕುಮಾರ್ ಜಸ್ಸಿ ಗಿಫ್ಟ್
೧೧೦ ೨೦೧೪ ಬೆಳ್ಳಿ ಬಸವರಾಜ್ / ಬೆಳ್ಳಿ ಯಶಸ್ವಿನಿ ಸಿನಿ ಕ್ರಿಯೇಶನ್ಸ್, ಮುಸ್ಸಂಜೆ ಮಹೇಶ್ ಏಚ್. ರ್. ರಾಜೇಶ್, ಕೇ. ಜ್. ರಾಜಶೇಕರ್ ವೀ. ಶ್ರೀಧರ್ ಕೇ. ಎಸ್. ಚಂದ್ರಶೇಕರ್
೧೧೧ ೨೦೧೫ ವಜ್ರಕಾಯ ವಿರಾಜ್ ಹರ್ಷ ಸೀ. ಆರ್. ಮನೋಹರ್, ಸೀ. ಆರ್. ಗೋಪಿ ಅರ್ಜುನ್ ಜನ್ಯ ಸ್ವಾಮಿ ಜೇ
೧೧೨ ೨೦೧೬ ಕಿಲ್ಲಿಂಗ್ ವೀರಪ್ಪನ್ ರಾಮ ಗೋಪಾಲ್ ವರ್ಮ ರವಿ ಶಂಕರ್ ರಾಮಿ
೧೧೩ ೨೦೧೬ ಶಿವಲಿಂಗ ಶಿವ ಪಿ.ವಾಸು ವಿ.ಹರಿಕೃಷ್ಣ ಪಿ.ಕೆ. ಎಚ್. ದಾಸ್
೧೧೪ ೨೦೧೬ ಸಂತೆಯಲ್ಲಿ ನಿಂತ ಕಬೀರ ಕಬೀರ ನರೇಂದ್ರ ಬಾಬು ಇಸ್ಮಾಯಿಲ್ ದರ್ಬಾರ್ ನವೀನ್ ಕುಮಾರ್
೧೧೫ ೨೦೧೭ ಶ್ರೀ ಕಂಠ ಮಂಜು ಸ್ವರಾಜ್ ಬಿ. ಅಜನೀಶ್ ಲೋಕನಾಥ್ ಬಿ. ಸುರೇಶ್ ಬಾಬು
೧೧೬ ೨೦೧೭ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಯೋಗಿ.ಜಿ.ರಾಜ್ ವಿ.ಹರಿಕೃಷ್ಣ ಜೈ ಆನಂದ್
೧೧೭ ೨೦೧೭ ಮಾಸ್ ಲೀಡರ್ ನರಸಿಂಹ ವೀರ್ ಸಮರ್ಥ್
೨೦೧೮ ಟಗರು ಟಗರು ಶಿವ ಚರಣ್ ರಾಜ್

ಉಲ್ಲೇಖಗಳು

[ಬದಲಾಯಿಸಿ]
  1. http://kannada.oneindia.in/movies/news/shivrajkumar-receive-an-honorary-doctorate-bellary-084386.html