ಶಿವಲಿಂಗ

ವಿಕಿಪೀಡಿಯ ಇಂದ
Jump to navigation Jump to search
ವಾರಣಾಸಿಯಲ್ಲಿ ಶಿವಲಿಂಗಕ್ಕೆ ಹೂವನ್ನು ಅರ್ಪಿಸುತ್ತಿರುವುದು.

ಲಿಂಗ ಅಥವ ಶಿವಲಿಂಗ (ಸಂಸ್ಕೃತ : लिङ्गं) ಎಂಬುರು ಹಿಂದೂ ದೇವತೆಯಾದ ಶಿವನನ್ನು ಪ್ರತಿನಿಧಿಸುತ್ತದೆ. ಲಿಂಗ ಎಂದರೆ ಗುರುತು ಎಂದು ಅರ್ಥ. ಲಿಂಗವನ್ನು ಶಿವನ ಸಂಕೇತವಾಗಿ ದೇವಾಲಯಗಳಲ್ಲಿ ಪೂಜಿಸುತ್ತಾರೆ. ಸಾಂಪ್ರದಾಯಿಕ ಹಿಂದೂ ಸಮಾಜದಲ್ಲಿ ಶಿವಲಿಂಗವನ್ನು ಸ್ವತಃ ಶಿವನ ಶಕ್ತಿಯನ್ನಾಗಿ ಪರಿಗಣಿಸಲಾಗಿದೆ.

ಲಿಂಗವನ್ನು ಸಾಮಾನ್ಯವಾಗೆ ಯೋನಿಯೊಡನೆ, ದೇವತೆಯ ಚೈತನ್ಯ ಅಥವಾ ಸ್ತ್ರೀ ಸೃಜನಶೀಲ ಶಕ್ತಿಯ ಸಂಕೇತದೊಡನೆ ಪ್ರತಿನಿಧಿಸಲಾಗುತ್ತದೆ. ಲಿಂಗ ಮತ್ತು ಯೋನಿಯ ಸಮ್ಮಿಲನ, ಎಲ್ಲ ಜೀವ ರಾಶಿಯ ಉಗಮವನ್ನು ಪ್ರತಿನಿಧಿಸುತ್ತದೆ.

ಲಿಂಗ ಆದಿ ಹಾಗೂ ಅಂತ್ಯವಿಲ್ಲದ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಈ ಬದಲಾಗುತ್ತಿರುವ ವಿಶ್ವ ಕೊನೆಯಲ್ಲಿ ನಿರಾಕಾರದಲ್ಲಿ ಒಂದಾಗಿಸುತ್ತದೆ ಅಥವಾ ಕರಗಿರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಲಿಂಗ ಹುಟ್ಟು ಮತ್ತು ಸಮ್ಮಿಳನದ ಸರಳ ಸಂಕೇತ.

ಲಿಂಗ ಪದಕ್ಕೆ ವಿವಿಧ ಅರ್ಥಗಲಿವೆ.

೧. ಚಿನ್ಹೆ, ಗುರುತು, ೨. ಸ್ರಸ್ತೀಕರಣ. ೩. ಸಾಧನೆ. ೪. ದೇವರ ಪ್ರತಿಬಿ೦ಬ.

"https://kn.wikipedia.org/w/index.php?title=ಶಿವಲಿಂಗ&oldid=634523" ಇಂದ ಪಡೆಯಲ್ಪಟ್ಟಿದೆ