ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹನ್ನೆರಡು ಜ್ಯೋತಿರ್ಲಿಂಗಗಳ ಚಿತ್ರಪಟ
ಬಾಬಾದಾಮ್

ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ

ಮಾರ್ಗ[ಬದಲಾಯಿಸಿ]

  • ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗವು ಹಿಂದಿನ ಬಿಹಾರರಾಜ್ಯದ/ಈಗಿನ ಝಾರ್ಖಂಡ್/ಜಾರ್ಖಂಡ್ ಸಂಥಾಲ್ ಜಿಲ್ಲೆಯಲ್ಲಿದೆ. ಹೌರಾ ಪಾಟ್ಣಾ ರೈಲುಮಾರ್ಗದಿಂದ ಬಂದರೆ ವೈದ್ಯನಾಥ ದೇವಾಲಯದ ಹತ್ತಿರ ವಿರುವ ಜೈಸೀಡೀಹ ಎಂಬ ಸಣ್ಣ ಸ್ಟೇಶನ್ ಸಿಗುತ್ತದೆ. ಇಲ್ಲಿಂದ ವೈದ್ಯನಾಥಕ್ಕೆ ಬಸ್ಸು, ರೈಲು ಹಾಗೂ ಇತರೆ ವಾಹನಗಳ ಸೌಕರ್ಯವಿದೆ. ದೇವಾಲಯಕ್ಕೆ ಅಲ್ಲಿಂದ ಸುಮಾರು ೮ ಕಿಲೋ ಮೀಟರ್ ದೂರ ಹೋಗಬೇಕು.

ಜ್ಯೋತಿರ್ಲಿಲಿಂಗ

  • ಭಸ್ಮಧಾರಿ ಪರಶಿವ ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಇರುವುದಾಗಿ ಪುರಾಣಗಳು ಹೇಳುತ್ತವೆ. ಇಲ್ಲಿ ಅದನ್ನು ಕಾಣಬಹುದು. ವೈದ್ಯನಾಥ ಕ್ಷೇತ್ರದ ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ಚಿತಾ ಭೂಮಿಯಲ್ಲಿದೆ ಎಂದು ಹೇಳುತ್ತಾರೆ. ಈ ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ವನ್ನು ರಾವಣ ಕೈಲಾಸದಿಂದ ತಂದನೆಂದು ಪ್ರತೀತಿ ಇದೆ. ಕರ್ನಾಟಕ ರಾಜ್ಯದ ಶ್ರೀ ಗೋಕರ್ಣ ಕ್ಷೇತ್ರದ ಸ್ಥಳ ಪುರಾಣದಂತೆ ಈ ಕಥೆ ತೋರುತ್ತದೆ. ದೇವಾಲಯ ತುಂಬಾ ಚೆನ್ನಾಗಿದೆ. ಗರ್ಭಗುಡಿಯ ಒಳಗಿರುವ ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ತುಂಬಾ ಚಿಕ್ಕದಾಗಿದೆ. ಪಾಣೀಪೀಠದ ಮದ್ಯೆ ಕಪ್ಪದಾದ ಚಿಕ್ಕ ಲಿಂಗವನ್ನು ಕಾಣಬಹುದು. ದೇವಾಲಯದ ಒಳಗೇ ಪೂಜಾ ಸಾಮಗ್ರಿಗಳು ದೊರೆಯುತ್ತವೆ. ಅಲ್ಲಿ ದೊರೆಯುವ ಹಾಲು ನೀರು ಹೂ, ಪತ್ರೆಗಳನ್ನು ತಂದು ಭಕ್ತರೇ ಸ್ವತಃ ಅಭಿಷೇಕಮಾಡಿ ಪೂಜೆ ಮಾಡಿ ಸಂತೋಷ ಪಡಬಹುದು. ಅಲ್ಲಿರುವ ಪುರೋಹಿತರಿಂದ ವಿಶೇಷ ಪೂಜೆಯನ್ನೂ ಮಾಡಿಸ ಬಹುದು.

ಆವರಣ:[ಬದಲಾಯಿಸಿ]

  • ದೇವಾಲಯದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಮಂದಿರಗಳಿವೆ. ಶ್ರೀ ಗೌರೀ ಮಾತಾ ಮಂದಿರ ಮುಖ್ಯವಾದುದು. ಒಂದೇಪೀಠದ ಮೇಲೆ ಶ್ರೀದುರ್ಗಾ ಮತ್ತು ತ್ರಿಪುರಸುಂದರಿ ಎಂದು ಕರೆಯಲ್ಪಡುವ ಎರಡು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಈ ದುರ್ಗಾ ತ್ರಿಪುರಸುಂದರಿ ಮೂರ್ತಿಗಳು ಬಹಳ ಸುಂದರವಾಗಿವೆ. ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ದರ್ಶನದಿಂದ ಸಂಸಾರಿಕ ಕಷ್ಟ-ಕೋಟೆಲೆಗಳೆಲ್ಲಾ ತಪ್ಪಿ , ಮಾನಸಿಕ ಶಾಂತಿ ದೊರೆಯುವುದೆಂದು ಭಕ್ತರ ನಂಬುಗೆ. ಮಹಾ ಶಿವರಾತ್ರಿ ,ಶ್ರಾವಣ ಮಾಸ, ಹಾಗೂ ಅಮವಾಸ್ಯೆಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಆಗ ಹೆಚ್ಚನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಇಲ್ಲಿಂದ ಪ್ರಸಿದ್ಧ ಕುಜರಾಹೋ ಮಂದಿರಗಳನ್ನು ನೋಡಲು ಹೋಗಬಹುದು. ಇದಕ್ಕೆ ಹತ್ತಿರದ ಇನ್ನೊಂದು ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮಧ್ಯ ಪ್ರದೇಶದಲ್ಲಿದೆ.

ಆಧಾರ :[ಬದಲಾಯಿಸಿ]

ನೋಡಿ:[ಬದಲಾಯಿಸಿ]

ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮಧ್ಯ ಪ್ರದೇಶದ ಉಜ್ಜಯನಿ ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ

ಅಂತರಕೊಂಡಿಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]