ವಿಷಯಕ್ಕೆ ಹೋಗು

ರಾಮೇಶ್ವರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಮೇಶ್ವರ ಇಂದ ಪುನರ್ನಿರ್ದೇಶಿತ)

ರಾಮೇಶ್ವರಮ್ ತಮಿಳುನಾಡಿನ ರಾಮನಾಥಪುರಮ್ ಜಿಲ್ಲೆಯ ಒಂದು ಪಟ್ಟಣ ಮತ್ತು ಎರಡನೇ ದರ್ಜೆಯ ಪುರಸಭೆ. ಅದು ಭಾರತದ ಮುಖ್ಯಭೂಮಿಯಿಂದ ಪಾಂಬನ್ ಕಡಲ್ಗಾಲುವೆಯಿಂದ ಬೇರ್ಪಟ್ಟ ಪಾಂಬನ್ ದ್ವೀಪದ ಮೇಲೆ ಸ್ಥಿತವಾಗಿದೆ ಮತ್ತು ಶ್ರೀಲಂಕಾಮನ್ನಾರ್ ದ್ವೀಪದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದೆ. ಅದು, ಭಾರತೀಯ ಪರ್ಯಾಯದ್ವೀಪದ ಅತ್ಯಂತ ತುದಿಯಲ್ಲಿ, ಮನ್ನಾರ್ ಕೊಲ್ಲಿಯಲ್ಲಿ ನೆಲೆಗೊಂಡಿದೆ.