ರಾಮನಾಥೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮನಾಥಸ್ವಾಮಿ ತಿರುಕೊಯಿಲ್

ಹೆಸರು: ರಾಮನಾಥಸ್ವಾಮಿ ತಿರುಕೊಯಿಲ್
ನಿರ್ಮಾತೃ: ಪಾಂಡ್ಯ ರಾಜರು
ಕಟ್ಟಿದ ದಿನ/ವರ್ಷ: ಗೊತ್ತಿಲ
ಪ್ರಮುಖ ದೇವತೆ: ರಾಮನಾಥಸ್ವಾಮಿ (ಶಿವ, ರಾಮ)
ವಾಸ್ತುಶಿಲ್ಪ: ದ್ರಾವಿಡ ಶೈಲೆ
ಸ್ಥಳ: ರಾಮೇಶ್ವರಂ

ಶ್ರೀ ರಾಮನಾಥ ಅಥವಾ ರಾಮೇಶ್ವರ ಜ್ಯೋತಿರ್ಲಿಂಗ[ಬದಲಾಯಿಸಿ]

ರಾಮನಾಥೇಶ್ವರ ರಾಮೇಶ್ವರಮ್ ನಲ್ಲಿರುವ ರಾಮನಾಥಸ್ವಾಮಿ ಮಂದಿರದ ಮುಖ್ಯ ದೇವತೆ. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ತಮಿಳುನಾಡು ರಾಜ್ಯದಲ್ಲಿದೆ. ರಾಮನಾಥೇಶ್ವರನನ್ನು (ಶ್ರೀರಾಮನು ರಾವಣನ ಜೊತೆ ಯುದ್ಧದಲ್ಲಿ ಮಾಡಿದ ಯಾವುದೇ ಪಾಪಗಳಿಂದ ಮುಕ್ತಿಗೊಳಿಸಬೇಕೆಂದು ಪ್ರಾರ್ಥಿಸಿದನೆಂದು ಪ್ರತೀತಿಯಿದೆ.*) ಶಿವನನ್ನು ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತಿದೆ. ರಾಮೇಶ್ವರಮ್ ದ ರಾಮನಾಥೇಶ್ವರ ಮತ್ತು ಕಾಶಿಯ ವಿಶ್ವನಾಥರನ್ನು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದು ಹೇಳಲಾಗುತ್ತದೆ, ಇವೆರಡೂ ಹಿಂದುಗಳಿಗೆ ಅತಿ ಪವಿತ್ರ ಸ್ಥಳಗಳು. ರಾಮನಾಥೇಶ್ವರನ ಮಂದಿರವನ್ನು ಪಾಂಡ್ಯ ರಾಜರು ನಿರ್ಮಿಸಿದರೆನ್ನುತ್ತಾರೆ. ಸೇತುಪತಿ ಸಾಮ್ರಾಜ್ಯದ ರಾಜರ ಮಂದಿರದ ಸೇವೆಯನ್ನು ಕೂಡ ತುಂಬ ಶ್ರದ್ಧೆಯಿಂದ ಮಾಡಿದರೆನ್ನುತ್ತಾರೆ. ರಾಮೇಶ್ವರವು ರಾಮನಾಥೇಶ್ವರನ ಮಂದಿರವಲ್ಲದೇ ಇನ್ನೂ ಅನೇಕ ಮಂದಿರಗಳನ್ನು ಹೊಂದಿದೆ.

ಭಾರತದ ನಾಲ್ಕು ಪವಿತ್ರ ಕ್ಷೇತ್ರಗಳು[ಬದಲಾಯಿಸಿ]

 • ಭಾರತದ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಶ್ರೀ ರಾಮೇಶ್ವರವೂ ಒಂದು. ಉತ್ತರದ ಬದರಿನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕಾನಾಥ, ದಕ್ಷಿಣದ ಶ್ರೀ ರಾಮನಾಥ ಅಥವಾ ರಾಮೇಶ್ವರ ಜ್ಯೋತಿರ್ಲಿಂಗ ಇವು ನಾಲ್ಕು ಭಾರತದ ಪವಿತ್ರ ಕ್ಷೇತ್ರಗಳು ಎಂದು ಹೆಸರಾಗಿದೆ
 • ಉಳಿದ ಮೂರು ನಾರಾಯಣ ಪೀಠವಾದರೆ ರಾಮೇಶ್ವರ ಈಶ್ವರ ಸ್ವರೂಪದ ಶ್ರೀ ಜ್ಯೋತಿರ್ಲಿಂಗವಾಗಿದೆ. ಶ್ರೀರಾಮ ಮತ್ತು ಈಶ್ವರನ ಐಕ್ಯತೆಯ ರೂಪವಾಗಿ ರಾಮೇಶ್ವರವಾಗಿದೆ
ನಾಲ್ಕು ಕ್ಷೇತ್ರಗಳು

ಬದರೀನಾಥರಾಮೇಶ್ವರ
ದ್ವಾರಕಾಪುರಿ

ದೇವಾಲಯ ಮತ್ತು ದೇವರ ದರ್ಶನ[ಬದಲಾಯಿಸಿ]

 • ಶ್ರೀ ರಾಮೇಶ್ವರ ದೇವಾಲಯವು ಭಾರತದಲ್ಲಿಯೇ ಅತಿದೊಡ್ಡ ದೇವಾಲಯವೆಂದು ಹೆಸರು ಪಡೆದಿದೆ. ಹೊರಪ್ರಕಾರದಲ್ಲಿ ಸಾವಿರ ಕಂಬಗಳಿವೆ. ಅಪೂರ್ವ ಕೆತ್ತನೆಯ ಭವ್ಯ ಕಂಬಗಳಿರುವ ಪ್ರಾಕಾರ ನೋಡಲು ಬಹಳ ಚೆನ್ನಾಗಿದೆ. ದೇವಾಲಯದ ಹೊರ ಮತ್ತು ಒಳ ಆವರಣದಲ್ಲಿ ಇಪ್ಪತ್ನಾಲ್ಕು ತೀರ್ಥಗಳಿವೆ. ಮೊದಲು ಸಮುದ್ರ ಸ್ನಾನ ಮಾಡಿ ಬರಬೇಕು.
 • ದೇವಾಲಯದ ವಿಸ್ತೀರ್ಣ ವಿಶಾಲವಾದುದು ಮತ್ತು ರಚನೆ ಅದ್ಭುತವಾದುದು. ಪೂರ್ವ -ಪಶ್ಚಿಮವಾಗಿ ೮೬೫ ಅಡಿ ಮತ್ತು ಉತ್ತರ-ದಕ್ಷಿಣವಾಗಿ ೬೫೭ ಅಡಿ (ಫರ್ಲಾಂಗು ?) ವಿಸ್ತೀಣ೯ ಹೊಂದಿದೆ. ನಾಲ್ಕುಕಡೆಯೂ ದೊಡ್ಡ ಗೋಪುರಗಳಿವೆ. ದೇವಾಲಯದ ಪ್ರಾಂಗಣ ೫ ಅಡಿ ಎತ್ತರದ ಮೇಲೆ ಕಟ್ಟಿದ್ದು ಉದ್ದ ಉದ್ದನೆಯ ವಿಶಾಲ ಜಗುಲಿಗಳಿವೆ. ಸ್ಯಾಂಡ್ ಸ್ಟೊನ್ ಕಂಬಗಳಲ್ಲಿ ಕಟ್ಟಿರುವ ವಿಶಾಲ ಮಂಟಪ ಚೌಕದ ಚುದುರಂಗ (ಆಟದ) ಮನೆಯ ಯೋಜನೆ ಹೊಂದಿದೆ. ಹೊರಭಾಗದ ಮೊಗಸಾಲೆ ೬.೯ ಮೀ. ಎತ್ತರವಿದ್ದು ಜಗತ್ತಿನಲ್ಲೇ ವಿಶಾಲ ಎತ್ತರದ ಮೊಗಸಾಲೆ (ಲಾಯ-ಹಾಲ್) ಎನಿಸಿದೆ. ಪೂರ್ವ ಪಶ್ಚಿಮವಾಗಿ ೪೦೦ ಅಡಿ ಉದ್ದ, ಉತ್ತರ ದಕ್ಷಿಣವಾಗಿ, ೬೪೦ ಅಡಿ ಇದೆ. ಒಳಗಿನ ಮೊಗಸಾಲೆಗಳು , ಕ್ರಮೇಣ ಚಿಕ್ಕದಾಗುತ್ತವೆ. ಎರಡನೆಯದು ಕ್ರಮವಾಗಿ ೨೨೪ *೩೫೨ ಅಡಿ ಇದೆ. ಅಗಲ ಪೂ.ರ್ವ ಪಶ್ಚಿಮ- ೧೫.೫ ರಿಂದ ೧೭.೫ ಅಡಿ ೧೪.೫ ರಿಂದ ೧೭ ಅಡಿ. ಹೀಗೆ ಲಾಯಗಳು ಒಳ- ಒಳ ಹೋದಂತೆ ಕಡಿಮೆಯಗುವುದು. ಎಲ್ಲಾ ಲಾಯಗಳ ಒಟ್ಟು ಉದ್ದ ೩೮೫೦ ಅಡಿ ಆಗುವುದು. ಇಡೀ ಮಂಟಪ ೧೨೧೨ ಕಂಬಗಳಮೇಲೆ ನಿಂತಿದೆ. ಸುಖನಾಸಿಗೆ (ಮೇಲಿನ ಛಾವಣಿಗೆ) ಮಂಟಪದ ಮಧ್ಯದ ಎತ್ತರ ನೆಲದಿಂದ ೩೦ ಅಡಿ ಇದ್ದು , ರಾಜ-ಗೋಪುರದ ಎತ್ತರ ೫೩ ಮೀಟರ್ (೧೭೪ಅಡಿ)ಇದೆ. (https://en.wikipedia.org/wiki/Ramanathaswamy_Temple )
 • ಬಂಗಾಳಾಕೊಲ್ಲಿಯ ಸಮುದ್ರ ಶಾಂತವಾಗಿ ಸ್ನಾನ ಮಾಡಲು ತುಂಬಾ ಅನುಕೂಲವಾಗಿದೆ. ಸಮುದ್ರ ದಡದಲ್ಲಿ ಸಂಕಲ್ಪ ಮಾಡಿಸಲು ತಿಥಿ ಕರ್ಮ ಮಾಡಿಸಲು ಪುರೋಹಿತರು ಸಿದ್ಧರಿರುತ್ತಾರೆ. ಸಮುದ್ರ ಸ್ನಾನದ ನಂತರ ೨೪ ತೀರ್ಥಗಳಿಗೆ ಬಂದು ಸ್ನಾನ ಮಾಡಿ ಬರಬೇಕು. ಇಡೀ ಮಂದಿರ ಪ್ರದಕ್ಷಿಣೆ ಜೊತೆ ಸ್ನಾನವೂ ಆಗುತ್ತದೆ. ನಂತರ ದೇವರ ದರ್ಶನ ಮತ್ತು ಪೂಜೆಗೆ ಹೋಗಬೇಕು.

ಪುರಾಣದ ಮತ್ತು ಸ್ಥಳ ಪುರಾಣದ ಕಥೆ.[ಬದಲಾಯಿಸಿ]

 • ಶ್ರೀ ರಾಮಚಂದ್ರ ಪ್ರಭು ರಾವಣನೊಡನೆ ಯುದ್ಧ ಮಾಡುವುದಕ್ಕಾಗಿ ಸೇತುವೆ ಕಟ್ಟುವ ಮೊದಲು ಶಿವನನ್ನು ಪೂಜಿಸಲು ಬಯಸಿದನು*. ಆಂಜನೆಯನು ಲಿಂಗವನ್ನು ತರಲು ಕೈಲಾಸಕ್ಕೆ ಹೋದನಂತೆ. ಆಂಜನೇಯನು ಬರುವುದು ತಡವಾದ್ದರಿಂದ ಶ್ರೀರಾಮನು ಮರಳಿನಿಂದ ಲಿಂಗ ನಿರ್ಮಿಸಿ ಪೂಜೆ ಮಾಡಿದನಂತೆ.. ಶ್ರೀರಾಮನಿಂದ ಪೂಜಿಸಲ್ಪಟ್ಟ ಲಿಂಗಕ್ಕೆ ರಾಮೇಶ್ವರ ಎಂದು ಹೆಸರು ಬಂದಿದೆ.

ಪೂಜೆ[ಬದಲಾಯಿಸಿ]

ಪ್ರತಿದಿನ ಬೆಳಿಗ್ಗೆ ೪ ಗಂಟೆಗೆ ಭಕ್ತರಿಗೆ ಸ್ಪಟಿಕದ ಲಿಂಗ ದರ್ಶನ ಸಿಗುತ್ತದೆ. ಗರ್ಭಗುಡಿಯಲ್ಲಿರುವ ಜ್ಯೋತಿರ್ಲಿಂಗಕ್ಕೆ ಅರ್ಚಕರೇ ಪೂಜೆಮಾಡಿ ಕೊಡುತ್ತಾರೆ. ಪೂಜಾಸಾಮಗ್ರಿ ದೇವಾಲಯದ ಬಳಿ ದೊರೆಯುತ್ತದೆ. ಇಲ್ಲಿ ಪ್ರತಿದಿನವೂ ವಿಶೇಷ ಪೂಜೆ ಇರುತ್ತದೆ. ಉತ್ತರದ ಗಂಗಾನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ತುಂಬಿಕೊಂಡು ಬಂದ ಗಂಗಾಜಲವನ್ನು ಇಲ್ಲಿ ಬಂದು ರಾಮೇಶ್ವರನಿಗೆ ಅಭಿಷೇಕ ಮಾಡಿ ಪೂಜಿಸುತ್ತಾರೆ.

ಇತರೆ ದೇವಾಲಯಗಳು[ಬದಲಾಯಿಸಿ]

 • ಅಲ್ಲಿಯೇ ವಿಶಾಲಾಕ್ಷಿ ಮಂದಿರ, ಪಾರ್ವತೀ ಮಂದಿರ ಹಾಗೂ ಇತರೆ ದೇವತೆಗಳ ಮಂದಿರಗಳಿವೆ. ಆಂಜನೇಯ ಕೈಲಾಸದಿಂದ ತಂದ ಶಿವಲಿಂಗವಿದೆ. ದೇವಾಲಯದ ಮೂಲೆ ಮೂಲೆಗಳಲ್ಲಿಯೂ ಶಿವಲಿಂಗಗಳಿವೆ.
 • ಗರ್ಭಗುಡಿಯ ಎದುರಿಗೆ ಇರುವ ನಂದಿವಿಗ್ರಹ ಬಹಳ ಭವ್ಯವಾಗಿದೆ. ಸುಮರು ೧೩ ಅಡಿ ಎತ್ತರ ಇರುವ ನಂದಿಯನ್ನು ನೋಡಲು ಬಹಳ ಸಂತೋಷವಾಗುತ್ತದೆ. ಮಂದಿರದ ನಾಲ್ಕುದ್ವಾರಗಳ ಮೇಲೂ ಎತ್ತರವಾದ ಗೋಪುರಗಳಿವೆ.
 • ದೇವಾಲಯ ಬಹಳ ಪುರಾತನವಾದುದು. ತುಂಬಾ ಕಲಾಪೂರ್ಣ ಕೆತ್ತನೆಯಿಂದ ಕೂಡಿದೆ. ಅಲ್ಲಲ್ಲಿ ಶಿಥಿಲಗೊಂಡ ಭಾಗವನ್ನು ಸರಿಮಾಡುತ್ತಿದ್ದಾರೆ. ಸಮೀಪದಲ್ಲಿ ಅಗಸ್ತ್ಯರ ಆಶ್ರಮ , ಸಂಜೀವಿನಿಪರ್ವತವಿದೆ. ಧನುಷ್ಕೋಟಿಯ ಸೇತುವೆ ಈಗ ಇಲ್ಲವಾದರೂ ಅದರ ಅವಶೇಷ ನೋಡಬಹುದು.

ವ್ಯವಸ್ಥೆ[ಬದಲಾಯಿಸಿ]

 • ರಾಮೇಶ್ವರಕ್ಕೆ ಬರಲು ವಾಹನ ವ್ಯವಸ್ಥೆ ಚೆನ್ನಾಗಿದೆ. ಭಕ್ತರಿಗೆ ತಂಗಲು ಛತ್ರಗಳು, ಧರ್ಮಶಾಲೆಗಳು ಹಾಗೂ ಉತ್ತಮ ಹೋಟೇಲ್ ಗಳು ಇವೆ. ಸಮುದರ ಶಾಂತವಾಗಿ ಸುಂದರವಾಗಿದೆ. ಇಲ್ಲಿ ಸಮುದ್ರದಲ್ಲಿ ಸಿಗುವ ಶಂಖಗಳು ಅವುಗಳಿಂದ ತಯಾರಿಸಿದ ವಸ್ತುಗಳು ಸುಲಭ ಬೆಲೆಯಲ್ಲಿ ಸಿಗುತ್ತವೆ.

ಕೆಲವುಭಕ್ತರು ಇಲ್ಲಿಂದ ಸಮುರದ ನೀರು ತೆಗೆದುಕೊಂಡು ಪುನಹ ಕಾಶಿಗ ಹೋಗಿ ಶ್ರೀ ವಿಶ್ವೇಶ್ವರನಿಗೆ ಅಭಿಷೇಕ ಮಾಡುತ್ತಾರೆ.

ದೇವಾಲಯ ಫೋಟೋ ಪ್ರದರ್ಶನ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಆಧಾರ.[ಬದಲಾಯಿಸಿ]

 • 'ದ್ವಾದಶ ಜ್ಯೋತಿರ್ಲಿಂಗಗಳು ಮತ್ತು ರುದ್ರಾಕ್ಷಿ :- ಕೈ ಹೊತ್ತಿಗೆ- ಪ್ರವಾಸ ಲೇಖನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ

ಪೂರಕ ಓದಿಗೆ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]