ವಿಷಯಕ್ಕೆ ಹೋಗು

ಭೀಮಾಶಂಕರ ದೇವಾಲಯ

Coordinates: 19°04′19″N 73°32′09″E / 19.072076°N 73.535807°E / 19.072076; 73.535807
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೀಮಾಶಂಕರ ದೇವಾಲಯ

ಹೆಸರು: ಭೀಮಾಶಂಕರ ದೇವಾಲಯ
ಪ್ರಮುಖ ದೇವತೆ: ಭೀಮಾಶಂಕರ(Siva)
ವಾಸ್ತುಶಿಲ್ಪ: ನಾಗರ
ಸ್ಥಳ: ಭೀಮಾಶಂಕರ
ಶ್ರೀ ಭೀಮ್ ಶಂಕರ್ (ಮೋಟೆಶ್ವರ್) ಮಹಾದೇವ್ ಮಂದಿರ, ಕಾಶಿಪುರ (ಉತ್ತರಾಖಂಡ್)
ಚಿತ್ರ:TopView BM.jpg

ಭೀಮಾಶಂಕರ ದೇವಾಲಯ ಭಾರತದ ಪೂನಾ ಸಮೀಪದ ಖೇಡ್ ನ ವಾಯವ್ಯ ದಿಕ್ಕಿನಲ್ಲಿ ೫೦ ಕಿಲೋಮೀಟರ್ ದೂರದಲ್ಲಿರುವ ಭೋರ್ ಗಿರಿ ಎಂಬ ಹಳ್ಳಿಯಲ್ಲಿ ಸ್ಥಾಪಿತವಾಗಿದೆ. ಈ ದೇವಾಲಯವು ಸಹ್ಯಾದ್ರಿ ಪರ್ವತಗಳ ಘಟ್ಟ ಪ್ರದೇಶದಲ್ಲಿ ಪೂನಾದಿಂದ ೧೧೦ಕಿಲೋಮೀಟರ್ ಗಳ ದೂರಕ್ಕೆ ನೆಲೆಗೊಂಡಿದೆ. ಭೀಮಾಶಂಕರ ದೇವಾಲಯದ ತಟದಲ್ಲಿ ಭೀಮಾನದಿಯ ಉಗಮವಾಗುತ್ತದೆ. ಇದು ಆಗ್ನೇಯ ದಿಕ್ಕಿನಲ್ಲಿ ಹರಿಯುವುದರ ಜೊತೆಗೆ ರಾಯಚೂರು ಸಮೀಪದ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. ಮಹಾರಾಷ್ಟ್ರದಲ್ಲಿರುವ ಇತರ ಜ್ಯೋತಿರ್ಲಿಂಗ ದೇವಾಲಯಗಳೆಂದರೆ ಪಾರ್ಲಿ ತ್ರೈಯಂಬಕೇಶ್ವರ್ ಹಾಗು ಗ್ರಿಶ್ಣೆಶ್ವರ್. ಮುಂಬಯಿ ಸಮೀಪದ ಯಾತ್ರಿಗಳು ಭೀಮಾಶಂಕರ ದೇವಾಲಯಕ್ಕೆ ಖಂಡಸ್ ಮೂಲಕ ಕರ್ಜತ್ ನಿಂದ ಪ್ರಯಾಣ ಬೆಳೆಸುತ್ತಾರೆ. ಇಲ್ಲಿ ನೆಲೆಯಾಗಿರುವ ಭೀಮಾಶಂಕರ ವನ್ಯಜೀವಿ ಅಭಯರಣ್ಯವು ಮುಂಬಯಿ ಹಾಗು ಪೂನಾದ ನಿವಾಸಿಗಳಿಗೆ ಒಂದು ಜನಪ್ರಿಯ ವಾರಾಂತ್ಯದ ತಾಣವಾಗಿದೆ.

ಐತಿಹ್ಯ

[ಬದಲಾಯಿಸಿ]
  • ಭೀಮಾಶಂಕರ ದೇವಾಲಯವು ಪೂನಾದಿಂದ ಸರಿಸುಮಾರು ೧೧೦ ಕಿಲೋಮೀಟರ್ ದೂರದಲ್ಲಿದೆ (ಅಥವಾ ಮುಂಬಯಿಯಿಂದ ೨೦೦ ಕಿಲೋಮೀಟರ್). ಭೀಮಾಶಂಕರಕ್ಕೆ ತಲುಪಲು ಮಂಚಾರ್ ಮೂಲಕ ಪ್ರಯಾಣ ಮಾಡಬೇಕು. ನಿಸರ್ಗ ಸೌಂದರ್ಯ ಹಾಗು ರಮ್ಯ ದೃಶ್ಯಗಳನ್ನು ಹೊಂದಿರುವ ಈ ಸ್ಥಳಕ್ಕೆ ಭೇಟಿ ನೀಡಿ ಒಂದೇ ದಿನಕ್ಕೆ ಪೂನಾಕ್ಕೆ ಹಿಂದಿರುಗಬಹುದು. ಭೀಮಾಶಂಕರವು ನಿಸರ್ಗ ಪ್ರೇಮಿಗಳು, ಟ್ರೆಕ್ಕಿಂಗ್ ಮಾಡುವವರಿಗೆ, ವನ್ಯ ಪ್ರೇಮಿಗಳಿಗೆ ಹಾಗು ಪಕ್ಷಿ ವೀಕ್ಷಕರಿಗೆ ಸ್ವರ್ಗವೆನಿಸಿದೆ.
  • ಈ ಸ್ಥಳಕ್ಕೆ ಭೇಟಿ ನೀಡುವವರು ಕಡೆ ಪಕ್ಷ ಎರಡರಿಂದ ಮೂರು ದಿನಗಳು ಅಲ್ಲೇ ಉಳಿದರೆ ಸೂಕ್ತವೆಂದು ಸಲಹೆ ನೀಡಲಾಗುತ್ತದೆ. ಭೀಮಾಶಂಕರಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಮಳೆಗಾಲ ಹಾಗು ಚಳಿಗಾಲ. ಇಲ್ಲಿ ಭಗವಾನ್ ಈಶ್ವರನ ಒಂದು ಸುಂದರ ದೇವಾಲಯ ವಿದೆ. ಇದು ಭಾರತದ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದೆನಿಸಿದೆ. ಭಗವಾನ್ ಶಂಕರ ಕೋಪೋದ್ರಿಕ್ತನಾದಾಗ, ರಾಕ್ಷಸ ತ್ರಿಪುರಾಸುರನನ್ನು ಸಂಹಾರ ಮಾಡಿದನೆಂದು ಹೇಳಲಾಗುತ್ತದೆ. ಇವರಿಬ್ಬರ ಕಾಳಗದಿಂದ ಉಂಟಾದ ಶಾಖವು ಭೀಮಾ ನದಿಯ ಹುಟ್ಟಿಗೆ ಕಾರಣವಾಯಿತು.
  • ಇದೆ ಕಾರಣದಿಂದಾಗಿ ಇದನ್ನು ಭೀಮಾಶಂಕರ ಎಂದು ಕರೆಯಲಾಗುತ್ತದೆ. ಭೀಮಾಶಂಕರ ಸಮೀಪದ ಮನ್ಮೋಡ್ ಪರ್ವತದಲ್ಲಿ ಅಂಬಾ-ಅಂಬಿಕ, ಭೂತಲಿಂಗ ಹಾಗು ಭೀಮಾಶಂಕರ ರ ಬೌದ್ಧ ಶೈಲಿಯ ಕೆತ್ತನೆಗಳಿವೆ. ಇದು ೧೦೩೪ ಅಡಿ ಎತ್ತರದಲ್ಲಿದೆ. ಭೀಮಾಶಂಕರದ ಮತ್ತೊಂದು ವೈಶಿಷ್ಟ್ಯವೆಂದರೆ ನಾನಾ ಫಾಡ್ನಾವಿಸ್ ಹೆಮದ್ಪಂಥಿ ವಿನ್ಯಾಸದಲ್ಲಿ ನಿರ್ಮಿಸಿದ ಒಂದು ಭಾರಿ ಗಾತ್ರದ ಘಂಟೆ.
  • ಭೀಮಾಶಂಕರ ದಲ್ಲಿ ಭೇಟಿ ನೀಡಬಹುದಾದ ಇತರ ಸ್ಥಳಗಳೆಂದರೆ ಹನುಮಾನ್ ಸರೋವರ, ಗುಪ್ತ್ ಭೀಮಾಶಂಕರ, ಭೀಮಾ ನದಿಯ ಮೂಲ, ನಾಗ್ ಫಣಿ, ಬಾಂಬೆ ಪಾಯಿಂಟ್, ಸಾಕ್ಷಿ ವಿನಾಯಕ ಹಾಗು ಇನ್ನೂ ಹಲವು ಸ್ಥಳಗಳು. ಭೀಮಾಶಂಕರವು ಒಂದು ರಕ್ಷಿತ ಕೆಂಪು ಮರಳನ್ನು ಹೊಂದಿರುವ ಅರಣ್ಯ ಪ್ರದೇಶವಾಗಿದೆ.
  • ಜೊತೆಗೆ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ, ಇಲ್ಲಿ ಪಕ್ಷಿಗಳು, ಪ್ರಾಣಿಗಳು, ಹೂಗಳು, ಸಸ್ಯಗಳ ವೈವಿಧ್ಯತೆಯನ್ನು ಕಾಣಬಹುದಾಗಿದೆ. ದಟ್ಟ ಅರಣ್ಯದಲ್ಲಿ ಅಪರೂಪದ ಒಂದು ಪ್ರಾಣಿಯಾದ "ಶೆಕ್ರು" ವನ್ನು ಕಾಣಬಹುದು. ಭೀಮಾಶಂಕರವು ವನ್ಯ ಪ್ರೇಮಿಗಳಿಗೆ ಹಾಗು ಟ್ರೆಕ್ಕಿಂಗ್ ಮಾಡುವವರಿಗೆ ಜೊತೆಗೆ ಯಾತ್ರಿಗಳಿಗೂ ಸಹ ಯೋಗ್ಯ ಸ್ಥಳವಾಗಿದೆ.

ವಾಸ್ತುಶೈಲಿ

[ಬದಲಾಯಿಸಿ]
  • ದೇವಾಲಯ: ಭೀಮಾಶಂಕರ ದೇವಾಲಯವು ಪ್ರಾಚೀನ ಹಾಗು ಆಧುನಿಕ ಶೈಲಿಗಳ ಒಂದು ಮಿಶ್ರಿತ ವಿನ್ಯಾಸವಾಗಿದೆ ಜೊತೆಗೆ ಇದನ್ನು ನಾಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ನಿರಾಡಂಬರವಾದರೂ ದೇವಾಲಯವು ಆಕರ್ಷಕವಾಗಿದೆ ಜೊತೆಗೆ ಇದರ ನಿರ್ಮಾಣವು ೧೮ನೇ ಶತಮಾನದ ಮಧ್ಯಭಾಗದಲ್ಲಿ ನಡೆದಿದೆ. ದೇವಾಲಯದ ಗೋಪುರವನ್ನು ನಾನಾ ಫಡ್ನಾವಿಸ್ ನಿರ್ಮಿಸಿದ್ದಾರೆ. ಮರಾಠರ ನಾಯಕ ಶಿವಾಜಿ ಸಹ ಪೂಜಾ ಕೈಂಕರ್ಯಗಳು ಸುಲಭವಾಗಿ ನಡೆಸಲು ಅನುಕೂಲವಾಗುವಂತೆ ದೇವಾಲಯಕ್ಕೆ ದತ್ತಿಯನ್ನು ನೀಡಿದನೆಂದು ಹೇಳಲಾಗುತ್ತದೆ.
  • ಈ ಪ್ರದೇಶದಲ್ಲಿರುವ ಇತರ ಶಿವ ದೇವಾಲಯಗಳಂತೆ, ಗರ್ಭ ಗುಡಿಯು ತಗ್ಗಾದ ಪ್ರದೇಶದಲ್ಲಿದೆ. ಆದಾಗ್ಯೂ, ವಿನ್ಯಾಸವು ಬಹಳ ಆಧುನಿಕವಾಗಿದ್ದರೂ, ಇತಿಹಾಸದಲ್ಲಿ ಭೀಮಾಶಂಕರಂ ದೇವಾಲಯವು(ಹಾಗು ಭೀಮಾರತಿ ನದಿ) ಸುಮಾರು ೧೩ನೇ ಶತಮಾನ CEಯಷ್ಟು ಹಳೆಯದೆನಿಸಿದೆ. ಸಂತ ಜ್ಞಾನೇಶ್ವರರು ತ್ರಯಂಬಕೇಶ್ವರ ಹಾಗು ಭೀಮಾಶಂಕರಕ್ಕೆ ಭೇಟಿ ನೀಡಿದ್ದರೆಂದು ಹೇಳಲಾಗುತ್ತದೆ. ಒಂದು ವಿಶಿಷ್ಟ ಘಂಟೆಯನ್ನು ರೋಮನ್ ಶೈಲಿ)ದೇವಾಲಯದ ದ್ವಾರದಲ್ಲಿ ಕಂಡು ಬರುತ್ತದೆ.
  • ಇದನ್ನು ಚಿಮಾಜಿ ಅಪ್ಪ ದೇವಾಲಯಕ್ಕೆ ದಾನ ಮಾಡಿದ್ದಾರೆ. (ಬಾಜಿ ರಾವ್ I ರ ಸಹೋದರ ಹಾಗು ನಾನಾಸಾಹೇಬ್ ಪೇಶ್ವರ ಮಾವ).ಚಿಮಾಜಿ ಅಪ್ಪ, ಪೋರ್ಚುಗೀಸ್ ರ ವಿರುದ್ಧದ ಕದನದಲ್ಲಿ ಗೆದ್ದ ನಂತರ ವಾಸೈ ಕೋಟೆಯಿಂದ ಎರಡು ದೊಡ್ಡ ಘಂಟೆಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಒಂದನ್ನು ಭೀಮಾಶಂಕರ ದೇಗುಲಕ್ಕೆ ನೀಡಿದರೆ ಮತ್ತೊಂದನ್ನು ಕೃಷ್ಣಾ ನದಿಯ ತೀರದಲ್ಲಿರುವ ವಾಯಿ ಸಮೀಪದ ಮೆನೋವಲಿಯಲ್ಲಿರುವ ಶಿವನ ದೇವಾಲಯಕ್ಕೆ ನೀಡಿದರು.

ಇತರ ದೇಗುಲಗಳು ಹಾಗು ಪುಣ್ಯಕ್ಷೇತ್ರಗಳು

[ಬದಲಾಯಿಸಿ]
  • ಭೀಮಾಶಂಕರ ದೇವಾಲಕ್ಕೆ ಸಮೀಪದಲ್ಲಿ ಕಮಲಜ ಪುಣ್ಯಕ್ಷೇತ್ರವಿದೆ. ಕಮಲಜ ಎಂಬುದು ಪಾರ್ವತಿಯ ಒಂದು ಅವತಾರವಾಗಿದೆ, ಈಕೆ ಶಿವನಿಗೆ ತ್ರಿಪುರಾಸುರನನ್ನು ಸಂಹಾರ ಮಾಡಲು ನೆರವಾಗುತ್ತಾಳೆ. ಬ್ರಹ್ಮನು ತಾವರೆ ಹೂವಿನಿಂದ ಕಮಲಜಳಿಗೆ ಪೂಜೆಯನ್ನು ಸಲ್ಲಿಸುತ್ತಾನೆ. ಅಸುರನನ್ನು ಸಂಹಾರ ಮಾಡಲು ಶಿವನಿಗೆ ನೆರವಾದ ಶಿವಗಣಗಳಾದ ಶಾಕಿನಿ ಹಾಗು ಡಾಕಿಣಿಯರನ್ನೂ ಸಹ ಇಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.
  • ಭೀಮಾಶಂಕರ ದೇವಾಲಯದ ಹಿಂಭಾಗದಲ್ಲಿ ಮೋಕ್ಷಕುಂಡ ತೀರ್ಥವು ನೆಲೆಯಾಗಿದೆ, ಜೊತೆಗೆ ಇದು ಕೌಶಿಕ ಋಷಿಯ ಜೊತೆ ಅನುಬಂಧವನ್ನು ಹೊಂದಿದೆ. ಇಲ್ಲಿ ಸರ್ವರ್ತೀರ್ಥ, ಕುಶಾರಣ್ಯ ತೀರ್ಥವೂ ಸಹ ಇದೆ, ಇಲ್ಲಿಂದ ಭೀಮಾ ನದಿಯು ಪೂರ್ವಾಭಿಮುಖವಾಗಿ ಹರಿಯುತ್ತದೆ, ಜೊತೆಗೆ ಜಯನಕುಂಡಗಳೂ ಸಹ ಇವೆ.
  • ಭೀಮಾಶಂಕರವು ಒಂದು ಅತ್ಯಂತ ಪುರಾತನವಾದ ಪುಣ್ಯ ಕ್ಷೇತ್ರವಾಗಿದೆ, ಇಲ್ಲಿ ಶಿವನ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಪ್ರತಿಷ್ಠಾಪಿಸಲಾಗಿದೆ. ನಗರ ಜೀವನದ ಗೊಂದಲಮಯ ವಾತಾವರಣದಿಂದ ಬಹು ದೂರ, ಬಿಳಿಯ ಉಣ್ಣೆಯಂತೆ ಕಾಣುವ ಮೋಡಗಳಿಂದ ಕೂಡಿರುವ ಭೀಮಾ ಶಂಕರವು, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿದೆ. ಇದನ್ನು ನಿಸ್ಸಂಶಯವಾಗಿ ಯಾತ್ರಿಗಳ ಸ್ವರ್ಗವೆಂದು ಕರೆಯಬಹುದು. ಎತ್ತರದ ಪರ್ವತ ಶ್ರೇಣಿಗಳನ್ನು ಸುತ್ತುವರೆದಿರುವ ದಟ್ಟ ಅರಣ್ಯಗಳೂ ಸಹ ಪ್ರಾಣಿ ಹಾಗು ಸಸ್ಯಗಳ ಅಪರೂಪದ ಜಾತಿಗೆ ನೆಲೆಯಾಗಿದೆ.
  • ಸಹ್ಯಾದ್ರಿ ಪರ್ವತ ಶ್ರೇಣಿಯ ತುತ್ತ ತುದಿಯಲ್ಲಿ ನೆಲೆಯಾಗಿರುವ ಈ ಸ್ಥಳವು, ದೇವಾಲಯದ ಸುತ್ತಮುತ್ತಲಿನ ಗಿರಿಧಾಮಗಳು ಹಾಗು ನದಿಗಳಿಂದಾಗಿ ಒಂದು ಸುಂದರ ನೋಟವನ್ನು ಒದಗಿಸುತ್ತದೆ. ಭೀಮಾಶಂಕರವು ಭೀಮಾ ನದಿಯ ಮೂಲವೂ ಸಹ ಆಗಿದೆ. ಇದು ಆಗ್ನೇಯ ದಿಕ್ಕಿನಲ್ಲಿ ಹರಿಯುವುದರ ಜೊತೆಗೆ ಅಂತಿಮವಾಗಿ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ.
  • ಪರಿಶುದ್ಧ ಅರಣ್ಯಗಳ ಅಪರಿಮಿತ ವ್ಯಾಪ್ತಿ, ಸ್ವರ್ಗಕ್ಕೆ ಏಣಿಯಂತೆ ಕಾಣುವ ಬಹಳ ಎತ್ತರವಾದ ಶಿಖರಗಳು ಹಾಗು ಭೀಮಾ ನದಿಯ ಕಲರವ, ಇದೆಲ್ಲದರಿಂದಾಗಿ ಭೀಮಾಶಂಕರವು ನಿಸ್ಸಂದೇಹವಾಗಿ ದೇವರು ಆರಿಸಿ ಸೃಷ್ಟಿಸಿದ ಸ್ಥಳವೆಂದು ಹೇಳಬಹುದು. ಭಗವಾನ್ ಶಿವ ಸಹ್ಯಾದ್ರಿಯ ಭವ್ಯ ಶ್ರೇಣಿಗಳ ಮೇಲೆ ಮೌನವಾಗಿ ಜಾಗರಣೆ ಮಾಡುತ್ತಿರುವಂತೆ ಕಾಣುತ್ತದೆ. ತಂಪಾದ ಗಾಳಿಯ ನಿಶಬ್ದ ಕಲರವ ಹಾಗು ಪಕ್ಷಿಗಳ ಸಾಂಧರ್ಬಿಕ ಚಿಲಿಪಿಲಿಯು ಪ್ರಶಾಂತತೆಗೆ ಭಂಗ ತರುತ್ತದೆ, ಭೀಮಾಶಂಕರವು ಯಾತ್ರಿಗಳ ಸ್ವರ್ಗ, ಟ್ರೆಕ್ ಹೋಗುವವರಿಗೆ ಸಂತೋಷದ ತಾಣ ಹಾಗು ಪ್ರವಾಸಿಗರ ತಾತ್ಕಾಲಿಕ ಬಿಡಾರವಾಗಿದೆ.

ತಲುಪಲು ಮಾರ್ಗ

[ಬದಲಾಯಿಸಿ]
  • ಪೂನಾದಿಂದ ರಸ್ತೆ ಮಾರ್ಗವಾಗಿ ಚಲಿಸಿದರೆ ಭೀಮಾಶಂಕರವು ಎಪ್ಪತ್ತ ನಾಲ್ಕು ಮೈಲಿಗಳು ಅಥವಾ ೧೧೦ ಕಿಲೋಮೀಟರ್ ದೂರವಿದೆ. ರಾಜ್ಯ ಸಾರಿಗೆ ಬಸ್ಸುಗಳು ಪೂನಾದಿಂದ ವಾರಕ್ಕೆ ಎರಡು ಬಾರಿ ಪ್ರಯಾಣಿಸುತ್ತವೆ, ಬಸ್ ನಲ್ಲಿ ಪ್ರಯಾಣಿಸಿದರೆ ಐದು ಗಂಟೆಗಳಲ್ಲಿ ತಲುಪ ಬಹುದು. ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ, ದೇವಾಲಯದಲ್ಲಿ ದೊಡ್ಡ ಜಾತ್ರೆಯು ನಡೆಯುತ್ತದೆ, ಇದರಿಂದಾಗಿ ಬಸ್ಸುಗಳು ನಿತ್ಯವೂ ತಮ್ಮ ಸೇವೆಯನ್ನು ಒದಗಿಸುತ್ತವೆ. ಕೇಂದ್ರ ರೈಲ್ವೆಯ ಪೂನಾ-ಮುಂಬಯಿ ವಿಭಾಗದಲ್ಲಿ ಕರ್ಜತ್ ನಿಂದಲೂ ಸ್ಥಳವನ್ನು ತಲುಪಬಹುದಾಗಿದೆ. *ಭೀಮಾಶಂಕರವನ್ನು ತಲುಪಲು ಕರ್ಜತ್ ನಿಂದ ಸರಿಯಾದ ರಸ್ತೆ ಮಾರ್ಗವಿಲ್ಲ ಜೊತೆಗೆ ಹಬ್ಬದ ಸಮಯದಲ್ಲಿ ದೇವಾಲಯಕ್ಕೆ ನಡಿಗೆಯ ಮೂಲಕ ಹೋಗಬಯಸುವ ಭಕ್ತಾದಿಗಳು ಈ ಮಾರ್ಗವನ್ನು ಹಿಡಿಯುತ್ತಾರೆ. ಅಹ್ಮದ್ ನಗರ ಅಥವಾ ಔರಂಗಾಬಾದ್ ನಿಂದ ಬರುವ ಜನರು, ನಗರದಿಂದ ೩೦ ಕಿಲೋಮೀಟರ್ ದೂರದಲ್ಲಿರುವ ಅಲೆಫಾಟದ ಮೂಲಕ ಪ್ರಯಾಣಿಸಬಹುದಾಗಿದೆ. ನಂತರ ಅಲೆಫಾಟದಿಂದ ೬೦ ಕಿಲೋಮೀಟರ್ ದೂರದಲ್ಲಿರುವ ಮಂಚಾರ್ ನ್ನು ತಲುಪಬಹುದು.
  • ಮಂಚಾರ್ ನಿಂದ ಬಲಕ್ಕೆ ತಿರುಗಿದಾಗ ೫೯ ಕಿಲೋಮೀಟರ್ ನಂತರ ಭೀಮಾಶಂಕರವನ್ನು ತಲುಪಬಹುದು.(ಔರಂಗಾಬಾದ್ ನಿಂದ ಅಹ್ಮದ್ ನಗರ ೧೧೨ ಕಿಲೋಮೀಟರ್).ಮತ್ತೊಂದು ಮಾರ್ಗವೆಂದರೆ ಸಂಗಂನೇರ್, ಇದು ನಾಸಿಕ್ ಪೂನಾ ರಸ್ತೆಯಲ್ಲಿ ಸ್ಥಿತವಾಗಿದೆ, ಸಂಗಂನೇರ್ ನಿಂದ ಮಂಚಾರ್ ಗೆ ಹೋಗಿ, ನಂತರ ಅಲ್ಲಿಂದ ಮೇಲೆ ಹೇಳಿರುವ ಮಾರ್ಗವನ್ನು ಅನುಸರಿಸಿದರೆ ಭೀಮಾಶಂಕರವನ್ನು ತಲುಪಬಹುದು, ಇದು ಸಹ ೫೯ ಕಿಲೋಮೀಟರ್ ಅಂತರದಲ್ಲಿದೆ. ಭೀಮಾಶಂಕರವು 19°04′N 73°32′E / 19.06°N 73.53°E / 19.06; 73.53< ನಲ್ಲಿ ನೆಲೆಗೊಂಡಿದೆ.

ಭಕ್ತಾದಿಗಳು ಸಾಮಾನ್ಯವಾಗಿ ಇಲ್ಲಿ ಮೂರು ದಿನಗಳ ಕಾಲ ಉಳಿಯುತ್ತಾರೆ. ಸ್ಥಳೀಯ ಉಪಾಧ್ಯಾಯರು ಅಥವಾ ಅರ್ಚಕರು ಭಕ್ತಾದಿಗಳಿಗೆ ಕಡಿಮೆ ಬೆಲೆಗೆ ಊಟ ಹಾಗು ವಸತಿ ಸೌಲಭ್ಯವನ್ನು ಕಲ್ಪಿಸಿಕೊಡುತ್ತಾರೆ. ಪ್ರವಾಸಿಗರಿಗೆ ತಾತ್ಕಾಲಿಕ ಗುಡಿಸಲುಗಳಲ್ಲಿ ಅಥವಾ ಹಳ್ಳಿಗೆ ಸಮೀಪದ ಧರ್ಮಛತ್ರಗಳಲ್ಲಿ ವಸತಿಯನ್ನು ಕಲ್ಪಿಸಲಾಗುತ್ತದೆ. ಒಂದು ಹೊಸ ಧರ್ಮಛತ್ರವು ನಿರ್ಮಾಣದ ಹಂತದಲ್ಲಿದೆ.

ಭೇಟಿಯ ಸಮಯ

[ಬದಲಾಯಿಸಿ]

ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಆಗಸ್ಟ್ ನಿಂದ ಫೆಬ್ರವರಿ ತಿಂಗಳು. ಆದಾಗ್ಯೂ ಭೀಮಾಶಂಕರಕ್ಕೆ ಭೇಟಿ ನೀಡಲು ಯಾವುದೇ ಸಮಯ ಸೂಕ್ತವಾಗಿದೆ, ಆದರೂ ಬೇಸಿಗೆಯಲ್ಲಿ ಸ್ಥಳಕ್ಕೆ ಭೇಟಿ ನೀಡದಿರುವುದು ಸೂಕ್ತ. ಇದೆ ರೀತಿಯಾಗಿ ಟ್ರೆಕ್ಕಿಂಗ್ ಮಾಡಲು ಬಯಸುವವರು ಮಾನ್ಸೂನ್ ಅವಧಿಯಲ್ಲಿ ಭೇಟಿ ನೀಡದಿರುವುದು ಉತ್ತಮ. ಇದರಿಂದಾಗಿ ಆಗಸ್ಟ್ ನಿಂದ ಫೆಬ್ರವರಿ ಅಂತ್ಯದವರೆಗೂ ಏಳು ತಿಂಗಳ ಅವಧಿಯು ಭೇಟಿಗೆ ಸೂಕ್ತ ಸಮಯವೆನಿಸಿದೆ.

ನಗರದ ವಿವರಣೆ

[ಬದಲಾಯಿಸಿ]
  • ಪೂನಾ ಜಿಲ್ಲೆಯಲ್ಲಿ ಖೇಡ್ ಒಂದು ಆಡಳಿತಾತ್ಮಕ ತಾಲ್ಲೂಕಾಗಿದೆ, ಇದು ಗೋದ್ ಹಾಗು ಭೀಮಾ ನದಿಗಳ ಮೇಲ್ಭಾಗದ ಪ್ರದೇಶಗಳನ್ನು ಒಳಗೊಂಡಿದೆ. ಈ ವಿಭಾಗದ ಅತ್ಯಂತ ಪ್ರಸಿದ್ಧ ಸ್ಥಳವೆಂದರೆ ಭೀಮಾಶಂಕರ ದೇವಾಲಯ, ಇದು ಖೇಡ್ ನ ವಾಯವ್ಯ ದಿಕ್ಕಿಗೆ 50 ಕಿಲೋಮೀಟರ್ ದೂರದಲ್ಲಿರುವ ಭವಗಿರಿ ಹಳ್ಳಿಯಲ್ಲಿ ಸ್ಥಿತವಾಗಿದೆ. ಇದು ಸಹ್ಯಾದ್ರಿ ಪರ್ವತಗಳ ಘಟ್ಟ ಪ್ರದೇಶದಲ್ಲಿ ಪೂನಾದಿಂದ 110 ಕಿಲೋಮೀಟರ್ ಅಂತರದಲ್ಲಿ ನೆಲೆಯಾಗಿದೆ.
  • ಇಲ್ಲಿ ಭೀಮಾಶಂಕರ ವನ್ಯಜೀವಿ ಅಭಯಾರಣ್ಯವೂ ಸಹ ಇದೆ, ಇದು ಮುಂಬಯಿ ಹಾಗು ಪೂನಾದ ನಿವಾಸಿಗಳಿಗೆ ಒಂದು ಜನಪ್ರಿಯ ವಾರಾಂತ್ಯ ತಾಣವೆನಿಸಿದೆ. ರಸ್ತೆ ಮಾರ್ಗವಾಗಿ ಪ್ರಯಾಣಿಸಿದರೆ ಇದು ಸುಮಾರು 130 ಕಿಲೋಮೀಟರ್ ಅಂತರದಲ್ಲಿದೆ ಹಾಗು ಮಂಚಾರ್ ನಿಂದ 62 ಕಿಲೋಮೀಟರ್ ದೂರದಲ್ಲಿದೆ. ಭೀಮಾಶಂಕರವು ಪೂನಾ ಜಿಲ್ಲೆಗೆ ಸೇರುತ್ತದೆ.

(ಪೂನಾದಿಂದ -> ರಾಜ್ ಗುರು ನಗರ -> ಮಂಚಾರ್ -> ಘೋಡೆಗಾಂವ್-> ಭೀಮಾಶಂಕರ್) (ಮುಂಬಯಿನಿಂದ ->ಚಕನ್ [ಪೂನಾ ನಗರದ ಹೊರಭಾಗ] -> ರಾಜ್ ಗುರು ನಗರ (ಖೇಡ್) -> ಮಂಚಾರ್ -> ಘೋಡೆಗಾಂವ್ -> ಭೀಮಾಶಂಕರ್)

ಮುಂಬಯಿನಿಂದ

[ಬದಲಾಯಿಸಿ]
  • ಮುಂಬಯಿನಿಂದ ಪ್ರಯಾಣ ಮಾಡುವವರು, ಪೂನಾ ರಸ್ತೆಯನ್ನು ಹಿಡಿಯಬಹುದು. ದಿಯೋನಾರ್ ಟ್ರ್ಯಾಫಿಕ್ ಜಂಕ್ಷನ್ ನಿಂದ ಸುಮಾರು ೩೧.೦೨ ಕಿಲೋಮೀಟರ್ ದೂರದಲ್ಲಿ ನವಿ ಮುಂಬಯಿ ಹಾಗು ಪನ್ವೇಲ್ ನ್ನು ದಾಟಿ ಮುಂದಕ್ಕೆ ಸಾಗಿದರೆ ಮುಂಬಯಿ ಪೂನಾ ಮೋಟಾರು ದಾರಿಯಿದೆ (NH-೪). ಪನ್ವೇಲ್ ನಿಂದ ೫೨ ಕಿಲೋಮೀಟರ್ ಪ್ರಯಾಣಿಸಿದರೆ ಲೋನಾವಳ ಸಿಗುತ್ತದೆ.
  • ಅಲ್ಲಿಂದ ೫೦ ಕಿಲೋಮೀಟರ್ ದೂರದ NH-೪ನಲ್ಲಿ ವಡ್ಗಾಂವ್ ಇದೆ. ವಡ್ಗಾಂವ್ ನಲ್ಲಿ ರಾಜ್ಯ ಹೆದ್ದಾರಿಯಿಂದ ಎಡಕ್ಕೆ ತಿರುಗಿ ಸುಮಾರು ೧೨ ಕಿಲೋಮೀಟರ್ ದೂರವಿರುವ ಚಕನ್ ನ್ನು ತಲುಪಬಹುದು. ಚಕನ್ ನಲ್ಲಿ, ಮಂಚಾರ್ ಗೆ ಚಲಿಸುವ NH ೫೦ರೆಡೆಗೆ ಚಲಿಸಿದರೆ ಸುಮಾರು ೫೦ ಕಿಲೋಮೀಟರ್ ದೂರದಲ್ಲಿರುವ ಭೀಮಾಶಂಕರವನ್ನು ತಲುಪಬಹುದು

ಪೂನಾದಿಂದ

[ಬದಲಾಯಿಸಿ]

ಪೂನಾದಿಂದ ಪ್ರಯಾಣ ಮಾಡುವವರು, ಪೂನಾ-ನಾಸಿಕ್ ಹೆದ್ದಾರಿಯಲ್ಲಿ ಪ್ರಯಾಣಿಸಿ ಭೀಮಾಶಂಕರಕ್ಕೆ ದಾರಿ ಮಾಡಿಕೊಡುವ ಅಡ್ಡರಸ್ತೆಯಲ್ಲಿ ಪ್ರಯಾಣಿಸಬಹುದು. ಪರ್ವತದ ರಸ್ತೆಯು ಬಹಳ ಕಡಿದಾಗಿದೆ. ಪೂನಾದಿಂದ ಈ ಸ್ಥಳವು ಸುಮಾರು ೧೬೦ ಕಿಲೋಮೀಟರ್ ಅಂತರದಲ್ಲಿದೆ. ಭೀಮಾಶಂಕರದಲ್ಲಿ ವಸತಿಯು ಮುಖ್ಯವಾಗಿ ಎರಡು ಬಂಗಲೆಗಳು ಹಾಗು [ಎಂಟು ಹಾಸಿಗೆಗಳ ಸಾಮರ್ಥ್ಯ] ಗುಡಾರಗಳಿಂದ ಕೂಡಿದೆ.

ಪುರಾಣ ಕಥೆ

[ಬದಲಾಯಿಸಿ]
  • ಅನಂತ ಕಾಲದಲ್ಲಿ ಡಾಕಿನಿಯ ದಟ್ಟ ಅರಣ್ಯಗಳಲ್ಲಿ, ಸಹ್ಯಾದ್ರಿಯ ಎತ್ತರವಾದ ಶ್ರೇಣಿಗಳಲ್ಲಿ ಭೀಮ ಎಂಬ ಅಸುರನು ತನ್ನ ತಾಯಿ ಕರ್ಕತಿಯ ಜೊತೆಗೆ ವಾಸವಿದ್ದನು. ಭೀಮನಿಗೆ ಕರುಣೆ ಹಾಗು ದಯೆ ಎಂಬುದೇ ಇರಲಿಲ್ಲ. ಅಂತೆಯೇ ದೇವತೆಗಳು ಹಾಗು ಮನುಷ್ಯರು ಅವನನ್ನು ಕಂಡು ಹೆದರುತ್ತಿದ್ದರು. ಆದರೆ ಅವನಿಗೆ ತನ್ನ ಅಸ್ತಿತ್ವದ ಬಗ್ಗೆ ಕೆಲವು ಪ್ರಶ್ನೆಗಳು ಎದುರಾದವು, ಇದು ಅವನನ್ನು ಸತತವಾಗಿ ಕಾಡ ಹತ್ತಿದವು. ಭೀಮನು ತನ್ನ ಸಂಕಟ ಹಾಗು ಕುತೂಹಲವನ್ನು ಹೆಚ್ಚು ಕಾಲ ತಡೆದುಕೊಳ್ಳಲು ಆಗಲಿಲ್ಲ.
  • ಆಗ ಅವನು ತನ್ನ ಜೀವನದ ರಹಸ್ಯಗಳ ಬಗ್ಗೆ ತಿಳಿಸುವಂತೆ ತನ್ನ ತಾಯಿಯನ್ನು ಕೇಳುತ್ತಾನೆ. ಅವನು ತನ್ನ ತಾಯಿಗೆ ತನ್ನ ತಂದೆಯ ಯಾರೆಂದು ಹಾಗು ತಮ್ಮನ್ನು ಈ ಕಾಡಿನಲ್ಲಿ ಏಕೆ ಬಿಟ್ಟು ಬಿಟ್ಟಿದ್ದಾನೆಂದು ಹೇಳುವಂತೆ ಒತ್ತಾಯಿಸುತ್ತಾನೆ. ಬಹಳ ಸಂಕೋಚ ಹಾಗು ಬಹಳ ಸಮಯಾನಂತರ ಭಯದಿಂದ ಕರ್ಕತಿಯು, ಅವನು ಬಲಿಷ್ಠ ಕುಂಭಕರ್ಣನ ಮಗನೆಂದು ಹೇಳುತ್ತಾಳೆ. ಈತನು ಲಂಕಾಧೀಶ್ವರನಾದ ಶಕ್ತಿಶಾಲಿ ರಾವಣನ ತಮ್ಮನೆಂದು ಹೇಳುತ್ತಾಳೆ.
  • ಭಗವಾನ್ ವಿಷ್ಣುವು ರಾಮನ ಅವತಾರದಲ್ಲಿ ಕುಂಭಕರ್ಣನನ್ನು ಸಂಹರಿಸುತ್ತಾನೆ. ತನ್ನ ಪತಿ ಹಾಗು ಅವನ ತಂದೆಯನ್ನು ಮಹಾ ಯುದ್ಧದಲ್ಲಿ ರಾಮನು ಸಂಹರಿಸಿದನೆಂದು ಕರ್ಕತಿಯು ಭೀಮನಿಗೆ ಹೇಳುತ್ತಾಳೆ. ಇದರಿಂದ ಕೆರಳಿದ ಭೀಮನು ಭಗವಾನ್ ವಿಷ್ಣುವಿನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಶಪಥ ಮಾಡುತ್ತಾನೆ. ಇದನ್ನು ಸಾಧಿಸಲು ಸಲುವಾಗಿ ಭಗವಾನ್ ಬ್ರಹ್ಮನನ್ನು ಸಂತೋಷಪಡಿಸಲು ಅವನು ಒಂದು ಕಠಿಣ ತಪಸ್ಸನ್ನು ಆಚರಿಸುತ್ತಾನೆ.
  • ಕರುಣಾಮಯನಾದ ಸೃಷ್ಟಿಕರ್ತನು ತನ್ನ ಭಕ್ತನ ತಪಸ್ಸಿಗೆ ಮೆಚ್ಚಿ ಅವನಿಗೆ ಅಪಾರವಾದ ಶಕ್ತಿಯನ್ನು ಕರುಣಿಸುತ್ತಾನೆ. ಬ್ರಹ್ಮನು ಈ ಘೋರ ತಪ್ಪನ್ನು ಮಾಡುತ್ತಾನೆ. ಮೂರು ಲೋಕಗಳಲ್ಲಿ ಈ ದುಷ್ಟ ಅಸುರನು ವ್ಯಾಪಕವಾದ ಹಾನಿಯನ್ನು ಉಂಟುಮಾಡುತ್ತಾನೆ. ಅವನು ರಾಜ ಇಂದ್ರನನ್ನು ಪರಾಭವಗೊಳಿಸಿ ಸ್ವರ್ಗವನ್ನು ವಶಪಡಿಸಿಕೊಳ್ಳುತ್ತಾನೆ. ಅವನು ಭಗವಾನ್ ಶಿವನ ಪರಮ ಭಕ್ತನಾದ ಕಾಮಾರೂಪೇಶ್ವರನನ್ನು ಸೋಲಿಸಿ ಅವನನ್ನು ನೆಲಮಾಳಿಗೆಯ ಬಂದಿಖಾನೆಯಲ್ಲಿ ಇಡುತ್ತಾನೆ.
  • ಅವನು ಋಷಿಗಳೂ ಹಾಗು ಸಾಧುಗಳಿಗೂ ಉಪದ್ರವವನು ನೀಡಲು ಆರಂಭಿಸುತ್ತಾನೆ. ಈ ಎಲ್ಲ ಕೃತ್ಯಗಳು ದೇವತೆಗಳಿಗೆ ಕ್ರೋಧವನ್ನು ಉಂಟುಮಾಡುತ್ತದೆ. ಇವರೆಲ್ಲರೂ ಸೇರಿ ಭಗವಾನ್ ಬ್ರಹ್ಮನೊಂದಿಗೆ ಭಗವಾನ್ ಶಿವನನ್ನು ತಮ್ಮ ರಕ್ಷಣೆ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಭಗವಾನ್ ಶಿವನು ದೇವತೆಗಳನ್ನು ಸಮಾಧಾನಪಡಿಸಿ ಅವರನ್ನು ಈ ಕ್ರೂರ ಅಸುರನಿಂದ ರಕ್ಷಿಸಲು ಒಪ್ಪಿಕೊಳ್ಳುತ್ತಾನೆ. ಮತ್ತೊಂದು ಕಡೆಯಲ್ಲಿ ಭೀಮನು, ಭಗವಾನ್ ಶಿವನ ಬದಲಿಗೆ ತನ್ನನ್ನು ಪೂಜಿಸಬೇಕೆಂದು ಕಾಮಾರೂಪೇಶ್ವರನಿಗೆ ಆದೇಶ ನೀಡುತ್ತಾನೆ.
  • ಕಾಮಾರೂಪೇಶ್ವರನು ಅವನನ್ನು ಪೂಜಿಸಲು ತಿರಸ್ಕರಿಸಿದಾಗ, ಕ್ರೂರ ಭೀಮನು ತನ್ನ ಕತ್ತಿಯನ್ನು ಎತ್ತಿ ಶಿವ ಲಿಂಗವನ್ನು ಹೊಡೆದು ಉರುಳಿಸಲು ಯತ್ನಿಸುತ್ತಾನೆ, ಈ ಲಿಂಗಕ್ಕೆ ಕಾಮಾರೂಪೇಶ್ವರನು ಅಭಿಷೇಕ ಹಾಗು ಪೂಜೆಯನ್ನು ನೆರವೇರಿಸುತ್ತಿರುತ್ತಾನೆ. ಭೀಮನು ತನ್ನ ಕತ್ತಿಯನ್ನು ಎತ್ತುತ್ತಿದ್ದಂತೆ, ಭಗವಾನ್ ಶಿವನು ತನ್ನ ಭವ್ಯ ರೂಪದೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಘೋರ ಯುದ್ಧವು ಆರಂಭವಾಯಿತು. ಆದರೆ ನಂತರದಲ್ಲಿ ನಾರದ ಮಹಾಮುನಿಗಳು ಪ್ರತ್ಯಕ್ಷರಾಗಿ ಈ ಯುದ್ಧವನ್ನು ನಿಲ್ಲಿಸಬೇಕೆಂದು ಭಗವಾನ್ ಶಿವನಲ್ಲಿ ಕೋರಿಕೊಳ್ಳುತ್ತಾರೆ.
  • ನಂತರ ಭಗವಾನ್ ಶಿವನು ಅಸುರನನ್ನು ಸಂಹರಿಸಿ ಉಪದ್ರವವನ್ನು ಕೊನೆಗೊಳಿಸುತ್ತಾನೆ. ಎಲ್ಲ ದೇವತೆಗಳು ಹಾಗು ಮಹಾ ಮುನಿಗಳು ಈ ಸ್ಥಳವನ್ನು ತನ್ನ ನೆಲೆಯನ್ನಾಗಿ ಮಾಡಬೇಕೆಂದು ಕೋರಿಕೊಳ್ಳುತ್ತಾರೆ. ಈ ರೀತಿಯಾಗಿ ಭಗವಾನ್ ಶಿವನು ತನ್ನ ಭೀಮಾಶಂಕರ ಜ್ಯೋತಿರ್ಲಿಂಗದ ರೂಪದಲ್ಲಿ ದರ್ಶನ ನೀಡುತ್ತಾನೆ. ಯುದ್ಧಾನಂತರ ಶಿವನ ದೇಹದಿಂದ ಸುರಿದ ಬೆವರೇ ಭೀಮಾರಥಿ ನದಿಯ ಉಗಮಕ್ಕೆ ಕಾರಣವೆಂದು ನಂಬಲಾಗಿದೆ.

ದೇವಾಲಯ

[ಬದಲಾಯಿಸಿ]
  • ಆದಾಗ್ಯೂ ದೇವಾಲಯದ ಇಂದಿನ ವಿನ್ಯಾಸವು ತುಲನಾತ್ಮಕವಾಗಿ ಇತ್ತೀಚಿಗೆ ನಿರ್ಮಾಣಗೊಂಡಿದ್ದ ಮಾದರಿ ಕಂಡು ಬರುತ್ತದೆ, ಇತಿಹಾಸದಲ್ಲಿ ಉಲ್ಲೇಖವಾದಂತೆ ಭೀಮಾಶಂಕರ ಂ ದೇವಾಲಯವು ೧೩ನೇ ಶತಮಾನದಷ್ಟು ಹಳೆಯದೆನಿಸಿದೆ. ನಾಗರ ಶೈಲಿಯ ವಿನ್ಯಾಸವಾದ ದೇವಾಲಯವು ನಿರಾಡಂಬರವಾಗಿದ್ದರೂ ಆಕರ್ಷಕವಾಗಿರುವುದರ ಜೊತೆಗೆ ೧೮ನೇ ಶತಮಾನದಷ್ಟು ಹಳೆಯದಾಗಿದೆ. ಇಂಡೋ ಆರ್ಯನ್ ಶೈಲಿಯ ವಿನ್ಯಾಸದ ಪ್ರಭಾವಗಳನ್ನು ಕಾಣಬಹುದಾಗಿದೆ.
  • ಪುರಾತನ ದೇಗುಲವನ್ನು ಒಂದು ಸ್ವಯಂಭು ಲಿಂಗದ ಮೇಲೆ ಕೆತ್ತಲಾಗಿತ್ತೆಂದು ನಂಬಲಾಗಿದೆ (ಸ್ವ ಉದ್ಭವವಾದ ಶಿವಲಿಂಗ). ದೇವಾಲಯದಲ್ಲಿ ಲಿಂಗವು ಗರ್ಭಗೃಹ ನೆಲಪಾತಳಿಗೆ ಖಚಿತವಾಗಿ ಮಧ್ಯದಲ್ಲಿರುವುದನ್ನು ಕಾಣಬಹುದು(ಗರ್ಭಗೃಹ). ದೇವತೆಗಳ ಸಂಕೀರ್ಣ ಕೆತ್ತನೆಗಳು ಮಾನವಾಕೃತಿಗಳ ಜೊತೆ ಸೇರಿ ವೈವಿಧ್ಯವನ್ನು ಹೊಂದುವುದರ ಜೊತೆಗೆ ದೇವಾಲಯದ ಕಂಬಗಳು ಹಾಗು ಬಾಗಿಲುಗಳನ್ನು ಅಲಂಕರಿಸಿವೆ. ಸ್ವತಃ ಪುರಾಣದ ದೃಶ್ಯಗಳು ಭವ್ಯವಾದ ಕೆತ್ತನೆಗಳಲ್ಲಿ ಬಿಂಬಿತವಾಗಿವೆ.
  • ದೇವಾಲಯದ ಪ್ರಾಕಾರದೊಳಗೆ ಭಗವಾನ್ ಶನಿ ಮಹಾತ್ಮನಿಗೆ ಅರ್ಪಿತವಾದ ಒಂದು ಸಣ್ಣ ದೇಗುಲವಿದೆ (ಶನೀಶ್ವರನೆಂದೂ ಸಹ ಕರೆಯಲಾಗುತ್ತದೆ). ಭಗವಾನ್ ಶಿವನ ವಾಹನವಾದ ನಂದಿಯ ಮೂರ್ತಿಯನ್ನು ಎಲ್ಲ ದೇವಾಲಯಗಳಲ್ಲಿರುವಂತೆ ಇಲ್ಲೂ ಸಹ ದೇವಾಲಯದ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವು, ಪುರಾಣದಲ್ಲಿ ಶಿವನು ಅಸುರ ತ್ರಿಪುರಾಸುರನನ್ನು ಸಂಹರಿಸಿದ ಕಥೆಯೊಂದಿಗೆ ತಳಕು ಹಾಕಿಕೊಂಡಿದೆ.
  • ತ್ರಿಪುರಾಸುರನು ಹಾರುವ ಕೋಟೆಯಾದ ತ್ರಿಪುರದಿಂದ ಅಜೆಯನೆಂದು ಭಾವಿಸಿದ್ದ. ದೇವತೆಗಳ ಕೋರಿಕೆಯ ಮೇರೆಗೆ, ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಶಿವನು 'ಭೀಮ ಶಂಕರ'ನ ರೂಪದಲ್ಲಿ ನೆಲೆಸಿದ್ದಾನೆಂದು ಹೇಳಲಾಗುತ್ತದೆ, ಅಲ್ಲದೇ ಯುದ್ಧಾನಂತರ ಅವನ ದೇಹದಿಂದ ಸುರಿದ ಬೆವರು ಭೀಮಾರತಿ ನದಿಯ ಉಗಮಕ್ಕೆ ಕಾರಣವೆಂದೂ ಸಹ ಹೇಳಲಾಗುತ್ತದೆ. ದೇವಾಲಯದ ಗೋಪುರ-ಶಿಖರವನ್ನು ನಾನಾ ಫಡ್ನಾವಿಸ್ ನಿರ್ಮಿಸಿದರು.
  • ಮರಾಠ ರಾಜ ಶಿವಾಜಿ ಸಹ ದೇವಾಲಯಕ್ಕೆ ಕೊಡುಗೆಗಳನ್ನು ನೀಡಿದ್ದನೆಂದು ಹೇಳಲಾಗುತ್ತದೆ. ಈತ ಪೂಜಾ ಕೈಂಕರ್ಯಗಳು ಸುಲಭವಾಗಿ ನೆರವೇರುವುದಕ್ಕೆ ಸೌಕರ್ಯಗಳನ್ನು ಮಾಡಿಕೊಟ್ಟಿದ್ದ. ಈ ಪ್ರದೇಶದ ಇತರ ಶಿವ ದೇವಾಲಯಗಳಂತೆ, ಗರ್ಭಗುಡಿಯು ಸ್ವಲ್ಪ ತಗ್ಗಿನ ಮಟ್ಟದಲ್ಲಿದೆ. ಭೀಮಾಶಂಕರ ದೇವಾಲಯದ ಪ್ರಧಾನ ಸಂಕೀರ್ಣದೊಳಗೆ 'ಶನಿ ದೇಗುಲ'ವು ಸ್ಥಾಪಿತವಾಗಿದೆ.
  • 'ಶನಿ' ದೇವಾಲಯದ ಹೊರಭಾಗದಲ್ಲಿರುವ ಎರಡು ಕಂಬಗಳ ನಡುವೆ, ಪುರಾತನವಾದ ಬೃಹತ್ ಪೋರ್ಚುಗೀಸ್ ಕಾಲದ ಘಂಟೆಯನ್ನು ಕಾಣಬಹುದಾಗಿದೆ. ದೇವಾಲಯದ ಹಿಂಭಾಗದಲ್ಲಿ, ನದಿಯ ತಟಕ್ಕೆ ಕೊಂಡೊಯ್ಯುವ ಒಂದು ಸಣ್ಣ ಪಾದಚಾರಿ ಮಾರ್ಗವಿದೆ.

ದೇವಾಲಯದಿಂದ ಆಚೆಗೆ ಕಾಲಿಟ್ಟರೆ ಪರಿಶುದ್ಧವಾದ ಕಾಡುಗಳ ಸಮ್ಮೋಹಕ ನೋಟವನ್ನು ಕಾಣಬಹುದು. ಇದನ್ನು ಸಾಂಧರ್ಬಿಕವಾಗಿ ಸುತ್ತಮುತ್ತಲಿನ ಹರಡುವಿಕೆಯಲ್ಲಿ ಕಾಣಬಹುದು.ಇಲ್ಲಿ ಕಂಡು ಬರುವ ಬೃಹತ್ ಕೋಟೆಗಳ ನೋಟವು ನಿಸರ್ಗದ ನೋಟವನ್ನು ಭಂಗಗೊಳಿಸುತ್ತವೆ.

  • ಸಹ್ಯಾದ್ರಿಯ ಶಿಖರಗಳಲ್ಲಿ ಸ್ವತಃ ಇತಿಹಾಸವು ಅನಾವರಣಗೊಳ್ಳುತ್ತದೆ. ಭೀಮಾಶಂಕರ - ಈ ಸ್ಥಳದಲ್ಲಿ ಆಧ್ಯಾತ್ಮಿಕ ವೈಭವವು ನಿಸರ್ಗದ ಭವ್ಯತೆಯೊಂದಿಗೆ ಲೀನವಾಗುತ್ತದೆ. ಇದು ನಿಸ್ಸಂಶಯವಾಗಿ ಯಾತ್ರಿಗಳ ಸ್ವರ್ಗವೆನಿಸಿದೆ. ಪ್ರಧಾನ ದೇವಾಲಯಕ್ಕೆ ಸಮೀಪದಲ್ಲಿ ಇತರ ದೇವಾಲಯಗಳು ಹಾಗು ಪವಿತ್ರ ಸ್ಥಳಗಳಿವೆ. ಭೀಮಾಶಂಕರಕ್ಕೆ ಸಮೀಪದಲ್ಲಿ ಕಮಲಜ ಎಂಬ ಪವಿತ್ರ ಸ್ಥಳವಿದೆ. ಕಮಲಜ ಎಂಬುದು ಪಾರ್ವತಿಯ ಒಂದು ರೂಪವಾಗಿದೆ.
  • ಈಕೆ ತ್ರಿಪುರಾಸುರನ ವಿರುದ್ಧ ನಡೆದ ಯುದ್ಧದಲ್ಲಿ ಶಿವನಿಗೆ ಸಹಾಯ ಮಾಡುತ್ತಾಳೆ. ಬ್ರಹ್ಮನಿಂದ ಕಮಲಜಳು ಆಗಿ ತಾವರೆ ಹೂವಿನಿಂದ ಪೂಜಿಸಲ್ಪಡುತ್ತಾಳೆ. ಅಸುರನ ವಿರುದ್ಧದ ಶಿವನ ಕಾಳಗದಲ್ಲಿ ಸಹಾಯ ಮಾಡಿದ ಶಿವ ಗಣಗಳು, ಶಾಕಿನಿ ಹಾಗು ಡಾಕಿಣಿಯರಿಗೂ ಸಹ ದೇಗುಲಗಳಿವೆ. ಈ ಸ್ಥಳದಲ್ಲಿ ಕೌಶಿಕ ಮಹಾ ಮುನಿಗಳು 'ತಪಸ್ಸನ್ನು' ಮಾಡಿದರೆಂದು ಹೇಳಲಾಗುತ್ತದೆ.
  • ಅವರು ಸ್ನಾನ ಮಾಡುತ್ತಿದ್ದ ಸ್ಥಳಕ್ಕೆ ಮೋಕ್ಷ ಕುಂಡ ತೀರ್ಥವೆಂದು ಹೇಳಲಾಗುತ್ತದೆ. ಇದು ಭೀಮಾಶಂಕರ ದೇವಾಲಯದ ಹಿಂಭಾಗದಲ್ಲಿ ನೆಲೆಯಾಗಿದೆ. ಇಲ್ಲಿ ಸರ್ವತೀರ್ಥ, ಕುಶಾರಣ್ಯ ತೀರ್ಥಗಳು ಇವೆ, ಇಲ್ಲಿಂದ ಭೀಮಾ ನದಿಯು ಪೂರ್ವಾಭಿಮುಖವಾಗಿ ಹರಿಯುತ್ತದೆ, ಹಾಗು ಜಯನಕುಂಡವೂ ಸಹ ಇದೆ.

ಪೂಜೆಯ ವಿವರಣೆ

[ಬದಲಾಯಿಸಿ]

ಪ್ರತಿನಿತ್ಯ ಮೂರು ಯಾಮದಲ್ಲಿ ಪೂಜಾ ಸೇವೆಗಳು ನಡೆಯುತ್ತವೆ. ಮಹಾಶಿವರಾತ್ರಿ ಸಮಯದಲ್ಲಿ ಬೃಹತ್ ಉತ್ಸವಗಳು ಜರುಗುತ್ತವೆ. ಸಾಮಾನ್ಯ ಪೂಜೆ - ರೂ ೨೫; ಅಭಿಷೇಕ ಪೂಜೆ - ರೂ ೫೧; ರುದ್ರಾಭಿಷೇಕ - ರೂ ೧೫೧; ಮಹಾ ಪೂಜೆ - ರೂ ೩೫೧; ಲಘು ರುದ್ರಾಭಿಷೇಕ (೧೧ ಬ್ರಾಹ್ಮಣರನ್ನು ಒಳಗೊಂಡಂತೆ) - ರೂ ೭೫೧ (೧೧ ಬ್ರಾಹ್ಮಣರನ್ನು ಒಳಗೊಂಡಂತೆ)
ಅರುಣ್ ಗಾವಂಡೆ - ೯೪೨೧೦೫೭೭೨೩ ಇವರನ್ನು ಸಂಪರ್ಕಿಸಬಹುದು
ಪೂಜಾ ಸಮಯ:
ಬೆಳಿಗ್ಗೆ - ೪:೩೦ಕ್ಕೆ
ಆರತಿ - ೫:೦೫ಕ್ಕೆ
ಸಾಮಾನ್ಯ ದರ್ಶನ - ಬೆಳಿಗ್ಗೆ ೫:೧೫ ರಿಂದ ೧೧:೩೦ ರವರೆಗೆ.
ಬೆಳಿಗ್ಗೆ ೧೧:೩೦ ರಿಂದ ೧೧:೫೦ರವರೆಗೆ ಯಾವುದೇ ಅಭಿಷೆಕಗಳು ನಡೆಯುವುದಿಲ್ಲ.
ಮಹಾಪೂಜೆ - ೧೨ಕ್ಕೆ.
/ಮಧ್ಯಾಹ್ನ ಮಹಾ ನೈವೇದ್ಯ - ಮಧ್ಯಾಹ್ನ ೧೨:೩೦ಕ್ಕೆ.
ಅಭಿಷೇಕ ಹಾಗು ಸಾಮಾನ್ಯ ಪೂಜೆ - ಮಧ್ಯಾಹ್ನ ೧೨:೩೦ ರಿಂದ ೨:೩೦ರವರೆಗೆ.
ಶೃಂಗಾರ ಪೂಜೆ - ಮಧ್ಯಾಹ್ನ ೨:೪೫ ರಿಂದ ೩:೧೫ರವರೆಗೆ.
'ಆರತಿ - ಮಧ್ಯಾಹ್ನ ೩:೧೫ರಿಂದ ೩:೩೦ರವರೆಗೆ
ಶೃಂಗಾರ ದರ್ಶನ - ಮಧ್ಯಾಹ್ನ ೩:೩೦ ರಿಂದ ೭:೩೦ ರವರೆಗೆ (ಸೋಮವಾರಗಳಂದು ಬೀಳುವ ಪ್ರದೋಷ ಅಥವಾ ಅಮಾವಾಸ್ಯೆ ಅಥವಾ ಗ್ರಹಣ ಅಥವಾ ಮಹಾ ಶಿವ ರಾತ್ರಿಯನ್ನು ಹೊರತುಪಡಿಸಿ. ಕಾರ್ತಿಕ ಮಾಸ, ಶ್ರಾವಣ ಮಾಸದಂದು - ಮುಕುಟ ಹಾಗು ಶೃಂಗಾರ ದರ್ಶನಗಳಿರುವುದಿಲ್ಲ).

  • ಭೀಮಾಶಂಕರಕ್ಕೆ ಸಂಬಂಧಿಸಿದಂತೆ ರುದ್ರಸಂಹಿತ ಶ್ಲೋಕವು, ಡಾಕಿನೆ ಭೀಮಾಶಂಕರಮ್ ಎಂದು ಉಲ್ಲೇಖಿಸುತ್ತದೆ. ಅಸ್ಸಾಂನ ಗುವಾಹತಿಯ ಸಮೀಪವಿರುವ ಭೀಮಾಪುರ ಬೆಟ್ಟದಲ್ಲಿಯೂ ಸಹ ಭೀಮಾಶಂಕರ ದೇವಾಲಯವಿದೆ. ಪುರಾಣದಲ್ಲಿ ಬರುವಂತೆ ಈ ಪ್ರದೇಶದಲ್ಲಿ ವ್ಯಾಪಕವಾಗಿ ಉಪದ್ರವವನ್ನು ಉಂಟುಮಾಡುತ್ತಿದ್ದ ಭೀಮನೆಂಬ ಅಸುರನು, ಶಿವನ ಆರಾಧನೆಯಲ್ಲಿ ತೊಡಗಿದ್ದ ಒಬ್ಬ ರಾಜನನ್ನು ಹತ್ಯೆ ಮಾಡಲು ಯತ್ನಿಸಿ ಶಿವನಿಂದ ಸಂಹರಿಸಲ್ಪಟ್ಟನು.
  • ಈ ಉಲ್ಲೇಖವನ್ನು ಮಹಾಮೃತ್ಯುಂಜಯ ಲಿಂಗದ ಜೊತೆಗೆ ತಪ್ಪಾಗಿ ಅರ್ಥೈಸಿಕೊಳ್ಳಬಾರದು, ಸಾವನ್ನು ತರುವ ಯಮನನ್ನು ಪರಾಭವಗೊಳಿಸಲು ಶಿವನು ಶಿವಲಿಂಗದಿಂದ ಉದ್ಭವಿಸಿದನು. ಶಿವ ಪುರಾಣ ಹಾಗು ಕೋಟಿ ರುದ್ರ ಸಂಹಿತವು ಭೀಮಾಶಂಕರ ದೇವಾಲಯವು ಕಾಮರೂಪ ದೇಶದಲ್ಲಿತ್ತೆಂದು ಉಲ್ಲೇಖಿಸುತ್ತದೆ. ಆದಾಗ್ಯೂ ಸಹ್ಯಾ ಪರ್ವತದ ಬಗೆಗೂ ಸಹ ಉಲ್ಲೇಖವಿದೆ, ಇದರಂತೆ ಶಿವ - ಭೀಮಾಶಂಕರ ಸಹ್ಯಾದ್ರಿ ಪರ್ವತದಲ್ಲಿ ಕಾಣಿಸಿಕೊಂಡಿದ್ದನೆಂದು ಹೇಳಲಾಗುತ್ತದೆ.
  • ನಿತ್ಯವೂ ಮೂರು ಯಾಮದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮಹಾಶಿವರಾತ್ರಿಯ ಸಮಯದಲ್ಲಿ ಬೃಹತ್ ಉತ್ಸವವು ಜರಗುತ್ತದೆ. ಭೀಮಾಶಂಕರಕ್ಕೆ ಸಂಬಂಧಿಸಿದಂತೆ ರುದ್ರಸಂಹಿತ ಶ್ಲೋಕವು, ಡಾಕಿನೆ ಭೀಮಾಶಂಕರಮ್ ಎಂದು ಉಲ್ಲೇಖಿಸುತ್ತದೆ ಎಂಬುದನ್ನು ಗಮನಿಸ ಬಹುದು. ಅಸ್ಸಾಂನಗುವಾಹತಿಯ ಸಮೀಪವಿರುವ ಭೀಮಾಪುರ ಬೆಟ್ಟದಲ್ಲಿಯೂ ಸಹ ಭೀಮಾಶಂಕರ ದೇವಾಲಯವಿದೆ.
  • ಪುರಾಣದಲ್ಲಿ ಬರುವಂತೆ ಈ ಪ್ರದೇಶದಲ್ಲಿ ವ್ಯಾಪಕವಾಗಿ ಉಪದ್ರವವನ್ನು ಉಂಟುಮಾಡುತ್ತಿದ್ದ ಭೀಮನೆಂಬ ಅಸುರನು, ಶಿವನ ಆರಾಧನೆಯಲ್ಲಿ ತೊಡಗಿದ್ದ ಒಬ್ಬ ರಾಜನನ್ನು ಹತ್ಯೆ ಮಾಡಲು ಯತ್ನಿಸಿದಾಗಿ ಶಿವನಿಂದ ಸಂಹರಿಸಲ್ಪಟ್ಟನು. ಸಾವನ್ನು ತರುವ ಯಮನ್ನು ಪರಾಭವಗೊಳಿಸಲು ಶಿವನು ಶಿವಲಿಂಗದಿಂದ ಉದ್ಭವಿಸಿದನೆಂಬ ಇದೆ ರೀತಿಯಾದ ಪುರಾಣವೂ ಸಹ ಇದೆ. ಶಿವ ಪುರಾಣ ಹಾಗು ಕೋಟಿ ರುದ್ರ ಸಂಹಿತವು ಭೀಮಾಶಂಕರ ದೇವಾಲಯವು ಕಾಮರೂಪ ದೇಶದಲ್ಲಿತ್ತೆಂದು ಉಲ್ಲೇಖಿಸುತ್ತದೆ.
  • ಆದಾಗ್ಯೂ ಸಹ್ಯಾ ಪರ್ವತದ ಬಗೆಗೂ ಸಹ ಉಲ್ಲೇಖವಿದೆ, ಇದರಂತೆ ಶಿವ - ಭೀಮಾಶಂಕರ ಸಹ್ಯಾದ್ರಿ ಪರ್ವತದಲ್ಲಿ ಕಾಣಿಸಿಕೊಂಡಿದ್ದನೆಂದು ಹೇಳಲಾಗುತ್ತದೆ. ಉತ್ತರಾಖಂಡದ ನೈನೀತಾಲ್ ಸಮೀಪದ ಕಾಶಿಪುರದಲ್ಲಿಯೂ ಸಹ ಒಂದು ಭೀಮಾಶಂಕರ ದೇವಾಲಯವಿದೆ, ಇದನ್ನು ಪುರಾತನ ಕಾಲದಲ್ಲಿ ಡಾಕಿಣಿ ದೇಶವೆಂದು ಸೂಚಿತವಾಗುತ್ತಿತ್ತು.
  • ಪಾಂಡವ ರಾಜನಾದ ಭೀಮನು ಇಲ್ಲಿನ ಡಾಕಿನಿಯಾಗಿದ್ದ ಹಿಡಂಬೆಯನ್ನು ಮದುವೆಯಾಗಿದ್ದನೆಂದು ಹೇಳಲಾಗುತ್ತದೆ. ಇಲ್ಲೂ ಸಹ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ಭೈರವನಾಥ ಹಾಗು ದೇವಿಯ ದೇಗುಲಗಳಿವೆ ಹಾಗು ಶಿವಗಂಗ ಎಂಬ ಪುಷ್ಕರಣಿಯು ಇದೆ.

ಭೀಮಾಶಂಕರ ದೇವಾಲಯ ಈಗಿನ ಸ್ಥಿತಿ

[ಬದಲಾಯಿಸಿ]
  • ಈ ದೇವಾಲಯವು ಭೀಮಾನದಿಯ ಉಗಮದಲ್ಲಿರುವುದರಿಂದ ಇದಕ್ಕೆ ಭೀಮಾಶಂಕರ ಎಂದು ಹೆಸರು ಬಂದಿದೆ ಎಂದೂ ಹೇಳುತ್ತಾರೆ. ಇಲ್ಲಿಗೆ ಬರುವುದು ಸುಲಭವಲ್ಲ. ವಾಹನಗಳ ವ್ಯವಸ್ಥೆಯೂ ಚೆನ್ನಾಗಿಲ್ಲ. ಶಿವರಾತ್ರಿಯಲ್ಲಿ ಮಾತ್ರ ಹೆಚ್ಚಿನ ವಾಹನ ವ್ಯವಸ್ಥೆ ಇರುತ್ತದೆ. ದೇವಾಲಯ ಬಹಳ ಪುರಾತನವಾಗಿದ್ದು , ಜೀರ್ಣಾವಸ್ಥೆಯನ್ನು ತಲುಪಿದೆ. ಕೆಲವುಕಡೆ ಬೀಳುವ ಸ್ಥಿತಿಯಲ್ಲಿದೆ. ಮಹಾರಾಷ್ತ್ರ ಸರ್ಕಾರ ಮತ್ತು ಕೇಂದ್ರದ ಪ್ರಾಚ್ಯ ಸಂಶೋಧನಾ ಇಲಾಖೆಯವರು ಸೇರಿ ಜೀರ್ಣೋದ್ಧಾರದ ಕೆಲಸವನ್ನು ಕೈಕೊಂಡಿದ್ದಾರೆ.
  • ಮಂದಿರದ ಕೆತ್ತನೆ ಕೆಲಸ ಕಲಾಪೂರ್ಣವಾಗಿದೆ. ಗರ್ಭಗುಡಿಯು ಚಿಕ್ಕದಾಗಿದೆ . ಭೀಮಾಶಂಕರ ಜ್ಯೋತಿ ಲಿಂಗಕ್ಕೆ ಭಕ್ತರೇ ಸ್ವತಹ ಪೂಜೆ ಮಾಡಬಹುದು. ಸಣ್ಣಗಾತ್ರದ ಗೋಲಾಕಾರದ ಲಿಂಗದ ದರ್ಶನದಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ಪ್ರತಿದಿನ ಭಕ್ತರ ಸಂಖ್ಯೆ ಕಡಿಮೆ ಇರುತ್ತದೆ. ಶಿವರಾತ್ರಿಯಲ್ಲಿ ಮಾತ್ರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ .

ಆಧಾರ :

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

19°04′19″N 73°32′09″E / 19.072076°N 73.535807°E / 19.072076; 73.535807

ಆಕರಗಳು

[ಬದಲಾಯಿಸಿ]

ಟೆಂಪ್ಲೇಟು:Jyotirlinga temples