ಶ್ರೀ ಮಂಜುನಾಥ (ಚಲನಚಿತ್ರ)
ಶ್ರೀ ಮಂಜುನಾಥ | |
---|---|
ನಿರ್ದೇಶನ | ಕೆ. ರಾಘವೇಂದ್ರ ರಾವ್ |
ನಿರ್ಮಾಪಕ | ಜಯಶ್ರೀ ದೇವಿ |
ಲೇಖಕ | ಕೆ. ರಾಘವೇಂದ್ರ ರಾವ್ |
ಕಥೆ | ಗೌಡ |
ಪಾತ್ರವರ್ಗ | ಚಿರಂಜೀವಿ ಅರ್ಜುನ್ ಸರ್ಜಾ ಮೀನ ಸೌಂದರ್ಯ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಸುಂದರನಾಥ ಸುವರ್ಣ |
ಸಂಕಲನ | ಅರ್. ಜನಾರ್ಧನ್ |
ಸ್ಟುಡಿಯೋ | ಚಿನ್ನಿ ಫ಼ಿಲ್ಮ್ಸ್ |
ಬಿಡುಗಡೆಯಾಗಿದ್ದು | ೨೨ ಜೂನ್ ೨೦೦೧ (ಕನ್ನಡ) ೩೧ ಜುಲೈ ೨೦೦೧(ತೆಲುಗು) |
ಅವಧಿ | ೧೫೨ ನಿಮಿಷಗಳು |
ದೇಶ | ಭಾರತ್ |
ಭಾಷೆ | Kannada Telugu |
ಶ್ರೀ ಮಂಜುನಾಥ ೨೦೦೧ರಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡ ಆಧ್ಯಾತ್ಮಿಕ ಚಲನಚಿತ್ರ. ಈ ಚಿತ್ರವು ಎರಡು ಬಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಪ್ರಖ್ಯಾತ ನಟರಾದಂತ ಚಿರಂಜೀವಿ (ನಟ), ಅರ್ಜುನ್ ಸರ್ಜಾ, ಸೌಂದರ್ಯ (ಚಿತ್ರನಟಿ),ಮೀನ,ಅಂಬರೀಶ್,ಸುಮಲತಾ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಈ ಚಿತ್ರವನ್ನು ಕೆ. ರಾಘವೇಂದ್ರ ಅವರು ನಿರ್ದೇಶಿಸಿದರೆ, ಜಯಶ್ರೀ ದೇವಿ ಅವರು ನಿರ್ಮಿಸಿದ್ದಾರೆ. ಈ ಚಿತ್ರವು ಶಿವ ಭಕ್ತನಾದ ಕೊಟಿ ಲಿಂಗೇಶ್ವರ ದೇವಸ್ಥಾನದ ಖ್ಯಾತಿಯ ಮಂಜುನಾಥನ ಜೀವನದ ಆಧಾರಿತ ಚಿತ್ರ. ನಟರಾದಂತ ದ್ವಾರಕೀಶ್ ಹಾಗು ಮಿಮಿಕ್ರಿ ದಯಾನಂದ್ ಅವರು ನಂದಿ ಹಾಗು ಭೃಂಗಿ ಪಾತ್ರಗಳನ್ನು ಕನ್ನಡದಲ್ಲಿ ಅಭಿನಯಿಸಿದರೆ, ತೆಲುಗುವಿನಲ್ಲಿ ಬ್ರಹ್ಮಾನಂದಂ ಹಾಗು ತನಿಕ್ಕೇಳ ಭರಣಿ ಅವರು ಅಭಿನಯಿಸಿದ್ದಾರೆ. ೨೨ ಜೂನ್ ೨೦೦೧ರಂದು ಕನ್ನಡದಲ್ಲಿ, ೩೧ ಜುಲೈ ೨೦೦೧ರಂದು ತೆಲುಗುವಿನಲ್ಲಿ ಹಾಗು ಆಗಷ್ಟ ೨೦೦೧ರಂದು ತಮಿಳಿನಲ್ಲಿ(ಡಬ್ಬಿಂಗ್) ಬಿಡುಗಡೆಗೊಂಡಿದೆ. ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವೂ(ಕನ್ನಡ ಅವೃತ್ತಿ) ತೆರೆ ಕಂಡಿತು.
ಹಿನ್ನಲೆ
[ಬದಲಾಯಿಸಿ]ಶ್ರೀ ಶಿವ ಶ್ರೀ ಕೈಲಾಶಗಿರಿಯಲ್ಲಿ ವಾಸಿಸುತ್ತಿದ್ದ ಕಾರಣ, ಅವರು ಲೋಕದ (ಆಯಾಮ) ಅಧಿಪತಿಯಾಗಿದ್ದರಿಂದ ಹಿಮಾಲಯ ಪರ್ವತಗಳ ಆಡಳಿತಗಾರರಾಗಿದ್ದಾರೆ. ಆದ್ದರಿಂದ ಅವನನ್ನು ಮಂಜುನಾಥ ಎಂದು ಕರೆಯಲಾಗುತ್ತದೆ. ಮಂಜುನಾಥವು ಕರ್ನಾಟಕ ರಾಜ್ಯದ ಪುರುಷರ ಮತ್ತು ಮಂಜುಳಾ ಮಹಿಳೆಯರ ಸಾಮಾನ್ಯ ಹೆಸರುಗಳಲ್ಲಿ ಒಂದಾಗಿದೆ. ಈ ಎರಡು ಹೆಸರಿನವರನ್ನು ಸಾಮಾನ್ಯವಾಗಿ "ಮಂಜು" ಎಂಬ ಉಪನಾಮದಿಂದ ಕರೆಯಲಾಗುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅವರು ಶ್ರೀ ಕ್ಷೇತ್ರದ ಧರ್ಮಸ್ಥಳದಲ್ಲಿ ನೆಲೆಸಿದ್ದಾರೆ.
ಕಥಾವಸ್ತು
[ಬದಲಾಯಿಸಿ]ಮಂಜುನಾಥ ( ಅರ್ಜುನ್ ಸರ್ಜಾ ) ಒಬ್ಬ ನಾಸ್ತಿಕ, ಆದರೆ ಅವಶ್ಯಕತೆಯಿರುವ ಇತರರಿಗೆ ಸಹಾಯ ಮಾಡುವ ಒಳ್ಳೆಯ ವ್ಯಕ್ತಿ ಮತ್ತು ಮಂಜುನಾಥ ತನ್ನ ಹೆಸರನ್ನು ಮಂಜುನಾಥ ( ಚಿರಂಜೀವಿ ) ದ್ವೇಷಿಸಿದರೂ ಸಹ, ನಂತರದಲ್ಲಿ ಭಕ್ತನಾಗುತ್ತಾನೆ. ನಾಸ್ತಿಕನಾಗಿರುವುದರಿಂದ, ಮಂಜುನಾಥ ಯಾವಾಗಲೂ ಭಗವಾನ್ ಶಿವನನ್ನು ನಿಂದಿಸುತಿರುತ್ತಾನೆ, ಇದನ್ನು ಶ್ರೀ ನಂದಿ ( ದ್ವಾರಕಿಶ್ ) ಮತ್ತು ಭುಂಗಿ ( ಮಿಮಿಕ್ರಿ ದಯಾನಂದ ) ವೀಕ್ಷಿಸುತ್ತಾರೆ. ಮಂಜುನಾಥ ಕಾತ್ಯಾಯಿಣಿ( ಸೌಂದರ್ಯ ) ದೇವದಾಸಿಯನ್ನಾಗಿಸುವುದನ್ನು ನಿಲ್ಲಿಸಿ ಅವಳನ್ನು ಮದುವೆಯಾಗುತ್ತಾನೆ. ಶೀಘ್ರದಲ್ಲೇ ಅವರು ಮಗನನ್ನು ಪಡೆಯುತ್ತಾರೆ, ಸಿದ್ಧಾರ್ಥ ("ಸಿದ್ದ"), ಅವನು ತನ್ನ ತಾಯಿಯಂತೆ ಶ್ರೀ ಮಂಜುನಾಥ ಸ್ವಾಮಿಯ ಭಕ್ತನಾಗಿರುತ್ತಾನೆ.
ಮದುವೆಯಾದ ನಂತರ ಮಂಜುನಾಥ ಶ್ರೀ ಮಂಜುನಾಥ ಸ್ವಾಮಿಯ ಅಸ್ತಿತ್ವವನ್ನು ಅರಿತುಕೊಳ್ಳುತ್ತಾನೆ ಮತ್ತು ನಿಧಾನವಾಗಿ ಷ್ರೀ ಮಂಜುನಾಥ ಸ್ವಾಮಿಯ ಮಹಾ ಭಕ್ತನಾಗುತ್ತಾನೆ ಮತ್ತು ಅವನ ಭಕ್ತಿಯಿಂದ ಸ್ಥಳೀಯ ರಾಜ, ಅಂಬಿಕೇಶ್ವರ ಮಹಾರಾಜ ( ಅಂಬರೀಶ್ ) ಸೇರಿದಂತೆ ಪ್ರತಿಯೊಬ್ಬರ ಹೃದಯಗಳನ್ನು ಗೆಲ್ಲುತ್ತಾನೆ.
ಮಂಜುನಾಥ ತಾನು ನಾಸ್ತಿಕನಾಗಿದ್ದ ಸಮಯದಲ್ಲಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತಕ್ಕಾಗಿ ಕೋಟಿ ಲಿಂಗಗಳನ್ನು ಪ್ರತಿಸ್ಥಾಪಿಸಿ ಪೂಜೆ ಸಲ್ಲಿಸುತ್ತನೆ.
ತಾರಾಗಣ
[ಬದಲಾಯಿಸಿ]- ಅಂಬಿಕೇಶ್ವರ ಮಹಾರಾಜರಾರಗಿ ಅಂಬರೀಶ್
- ಸುಮಲತಾ ದೇವಿಯಾಗಿ ಸುಮಲತಾ
- ಶ್ರೀ ಮಂಜುನಾಥ ಸ್ವಾಮಿಯಾಗಿ ಚಿರಂಜೀವಿ
- ಪಾರ್ವತಿ ದೇವಿ ಯಾಗಿ ಮೀನ
- ಮಂಜುನಾಥನಾಗಿ ಅರ್ಜುನ್ ಸರ್ಜಾ
- ಕಾತ್ಯಾಯಣಿಯಾಗಿ ಸೌಂದರ್ಯ
- ನಂದಿಯಾಗಿ ದ್ವಾರಕೀಶ್(ಕನ್ನಡದಲ್ಲಿ) / ಬ್ರಹ್ಮಾನಂದಂ(ತೆಲುಗಿನಲ್ಲಿ)
- ಭೃಂಗಿಯಾಗಿ ಮಿಮಿಕ್ರಿ ದಯಾನಂದ್(ಕನ್ನಡದಲ್ಲಿ) / ತನಿಕ್ಕೇಳ ಭರಣಿ(ತೆಲುಗಿನಲ್ಲಿ)
- ಆನಂದ್
- ಯಮುನ
- ಸುಧಾರಾಣಿ
- ಅಭಿಜಿತ್
- ಕುಮಾರ್ ಗೊವಿಂದ್
- ಚಿ. ಗುರು ದತ್ತ್
- ವಿನೋದ್ ರಾಜ್
ಚಿತ್ರ ತಂಡ
[ಬದಲಾಯಿಸಿ]- ನಿರ್ದೇಶಕ, ಕಥೆ, ಚಿತ್ರಕಥೆ: ಕೆ. ರಾಘವೇಂದ್ರ ರಾವ್
- ನಿರ್ಮಾಪಕ: ಜಯಶ್ರೀ ದೇವಿ
- ಸಂಗೀತ: ಹಂಸಲೇಖಾ
- ಛಾಯಾಗ್ರಹಣ: ಸುಂದರನಾಥ ಸುವರ್ಣ
- ಸಂಪಾದಕ: ಜನಾರ್ಧನ್
- ಕಲಾ ನಿರ್ದೇಶಕ: ಅರುಣ್ ಸಾಗರ್
- ವಿಷುಯಲ್ ಎಫೆಕ್ಟ್ಸ್: ಕಲೈ ಸೆಲ್ವನ್
- ಸಾಹಿತ್ಯ: ಹಂಸಲೇಖಾ, ಜೆ.ಕೆ. ಭಾರವಿ, ಜೊನ್ನವಿತುಲ, ಮಹರ್ಷಿ ವೇದ ವ್ಯಾಸ್
- ಹಿನ್ನೆಲೆ ಗಾಯಕರು: ಎಸ್ಪಿ ಬಾಲಸುಬ್ರಹ್ಮಣ್ಯಂ , ಚಿತ್ರ ,ರಮೇಶ್ ಚಂದ್ರ, ಹೇಮಂತ್ ಕುಮಾರ್ , ಶಂಕರ್ ಮಹಾದೇವನ್ , ನಂದಿತಾ ಮತ್ತು ಅನುರಾಧಾ ಶ್ರೀರಾಮ್
- ಪ್ರೊಡಕ್ಷನ್ ಕಂಪನಿ: ಚಿನ್ನಿ ಫಿಲ್ಮ್ಸ್
- ವಿತರಕರು: ಗೀತಾ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್
- ಫೈಟ್ಸ್: ಕೆ. ರವಿ ಕುಮಾರ್
- ಡಿವಿಡಿ ಬಿಡುಗಡೆ: ಕೆಎಡಿ ಮನರಂಜನೆ [೧] [೨]
ಕಿರು ಮಾಹಿತಿ
[ಬದಲಾಯಿಸಿ]. ಕರ್ನಾಟಕದ ಸ್ವಾಮೀಜಿಗಳನ್ನು ಹಾಗು ದಕ್ಷಿಣ ಭಾರತದಲ್ಲಿನ ಆಶ್ರಮಗಳ/ಮಠಗಳಿಂದ ಸ್ವಾಮಿಜಿಗಳಿಗೆ ಶ್ರೀ ಮಂಜುನಾಥ ಚಿತ್ರವನ್ನು ಪ್ರದರ್ಶಿಸಲಾಯಿತು.. ಶ್ರೀ ಮಂಜುನಾಥ ಅರ್ಜುನ್ ಸರ್ಜಾ ಅವರ ೧೦೮ನೇ ಚಿತ್ರವಾಗಿದೆ. ನಿರ್ದೇಶಕ ರಾಜಮೌಳಿ ಚಿತ್ರಕ್ಕಾಗಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಹಾಡುಗಳು
[ಬದಲಾಯಿಸಿ]- "ಆನಂದ್ ಪರಮಾನಂದ"
- "ಆಕಾಶವೆ ಆಕಾರ" / "ಆಕಾಸಮೇ ಆಕಾರಮೈ" (ಶ್ರೀ ಮಂಜುನಾಥ ಚರಿತೆ)
- "ಬ್ರಹ್ಮ ಮುರಾರಿ"
- "ಈ ಪಾಡೆ ಪುಜೇ"
- "ಹೇ ಬಿಂದಿಗೆ"
- "ಯಾವೋನ್ ಕಂಡಾ ನಿನ್ನಾ"
- "ಒಬ್ಬನೇ ಒಬ್ಬನೇ ಮಂಜುನಾಥಾನ್ಬೊನೆ" / "ಓಕ್ಕಡೆ ಒಕ್ಕಡೆ ಮಂಜುನಾಥುಡುಕ್ಕಡೆ"
- "ಒಬ್ಬನೇ ಒಬ್ಬನೇ ಬಿಟ್"
- "ಜೋಗಾಪ್ಪ ಜಂಗಮ್ಮ"
- "ಓಂ ಅಕ್ಷರಾಯ ನಮಃ"
- "ಓಂ ಮಹಾಪ್ರಾಣ ದೀಪಂ"
- "ಶ್ರೀ ಮಂಜುನಾಥ ಥೀಮ್ ಸಂಗೀತ" [೧] [೨]
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Sri Manjunatha on IMDb