ವಿಷಯಕ್ಕೆ ಹೋಗು

ಭಜರಂಗಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಜರಂಗಿ (ಚಲನಚಿತ್ರ)
ಭಜರಂಗಿ
ನಿರ್ದೇಶನಎ. ಹರ್ಷ
ನಿರ್ಮಾಪಕನಟರಾಜ್ ಗೌಡ ,ಮಂಜುನಾಥ್ ಗೌಡ
ಪಾತ್ರವರ್ಗಶಿವರಾಜ್ ಕುಮಾರ್ ಐಂದ್ರಿತಾ ರೇ ,ಸಾಧು ಕೋಕಿಲ ,ಬುಲೆಟ್ ಪ್ರಕಾಶ್ ,ರುಕ್ಮಿಣಿ ವಿಜಯ್ ಕುಮಾರ್ ಹಾಗೂ ಶೃತಿ ರಾಜ್
ಸಂಗೀತಅರ್ಜುನ್ ಜನ್ಯ
ಬಿಡುಗಡೆಯಾಗಿದ್ದು2013


ಭಜರಂಗಿ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಲನಚಿತ್ರ.ಇದನ್ನು ಎ. ಹರ್ಷ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐಂದ್ರಿತಾ ರೇ, ಸಾಧು ಕೋಕಿಲ ,ಬುಲೆಟ್ ಪ್ರಕಾಶ್ ,ರುಕ್ಮಿಣಿ ,ವಿಜಯ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.[]

ಚಿತ್ರವು ಡಿಸೆಂಬರ್ ೨೦೧೩ ರಲ್ಲಿ ಬಿಡುಗಡೆ ಆಗಿದೆ.ಶಿವಣ್ಣನಿಗೆ ಇದು ಚಂದವನದಲ್ಲಿ೧೦೫ನೇ ಚಿತ್ರ.ಐಂದ್ರಿತಾ ರೇ ಅವರು ನಾಯಕನಟಿಯಾಗಿ ಅಭಿನಯಸಿರುವ ೨೨ನೇ ಚಿತ್ರ. ಮೈಲಾರಿ ಚಿತ್ರದ ನಂತರದ ಗೆಲುವಿನ ಲಯ ಕಳೆದುಕೊಂಡಿದ್ದ ಶಿವಣ್ಣನಿಗೆ 'ಭಜರಂಗಿ' ಚಲನಚಿತ್ರವು ಬಹುದೊಡ್ಡ ಗೆಲುವು ತಂದುಕೊಟ್ಟಿತು.ಈ ಚಲನಚಿತ್ರವು ಚಿತ್ರವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದಿತ್ತು. 'ಭಜರಂಗಿ' ಚಲನಚಿತ್ರಕ್ಕಾಗಿ ಶಿವರಾಜ್ ಕುಮಾರ್ ರವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು,ದಿನನಿತ್ಯ ಕಠಿಣ ತಾಲೀಮು ನಡೆಸಿ 'ಸಿಕ್ಸ್ ಪ್ಯಾಕ್' ಮಾಡಿಕೊಂಡರು.ಅವರ ಈ ಪರಿಶ್ರಮಕ್ಕಾಗಿ ಇಡಿ ಚಿತ್ರರಂಗವೇ ಅಭಿನಂದಿಸಿತು..


ಧ್ವನಿಮುದ್ರಿಕೆ

[ಬದಲಾಯಿಸಿ]

ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ.

ಸಂ.ಹಾಡುಹಾಡುಗಾರರುಸಮಯ
1."ಬಾಸು ನಂ ಬಾಸು"ಅರ್ಜುನ್ ಜನ್ಯ 
2."ಜೈ ಭಜರಂಗಿ"ಶಂಕರ್ ಮಹಾದೇವನ್ 
3."ಜಿಯಾ ತೇರಿ ಜಿಯಾ ಮೇರಿ"ಕಾರ್ತಿಕ್ 
4."ರೇ ರೇ ಭಜರಂಗಿ"ಕೈಲಾಶ್ ಖೇರ್ 
5."ಶ್ರೀ ಕೃಷ್ಣ"ಅನುರಾಧಾ ಭಟ್  

ನಿರ್ಮಾಣ ಮತ್ತು ಗಳಿಕೆ

[ಬದಲಾಯಿಸಿ]

ಸ್ಯಾಂಡಲ್ ವುಡ್ ನ ಎ.ಆರ್. ರಹಮಾನ್ ಎಂದೇ ಪ್ರಸಿದ್ದಿಯಗಿರುವ ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತವನ್ನು ನಿರ್ದೆಶಿಸಿದ್ದಾರೆ.ಚಿತ್ರದಲ್ಲಿ ಒಟ್ಟು ೫ ಹಾಡುಗಳಿವೆ.ಚಿತ್ರಕ್ಕೆ ಜೈ ಆನಂದ್ ಛಾಯಗ್ರಾಹಕರಾಗಿ ಕೆಲಸವನ್ನು ನಿಭಾಯಿಸಿದ್ದಾರೆ.'ಭಜರಂಗಿ' ಚಿತ್ರದ ಚಿತ್ರೀಕರಣವನ್ನು ಬಹುತೇಕ ಬೆಂಗಳೂರಿನ ಹೆಸರಘಟ್ಟದಲ್ಲಿ ಚಿತ್ರೀಕರಿಸಲಾಗಿದೆ.ಒಟ್ಟು ೨೨೧ ಚಿತ್ರಮಂದಿರಗಳಲ್ಲಿ ತೆರೆಕಂಡ ಭಜರಂಗಿ ಚಿತ್ರವು ತನ್ನ ಮೊದಲ ೨೫ ದಿನಗಳಲ್ಲಿ ೧೨.೫ ಕೋಟಿಯನ್ನು ಗಳಿಸಿ ಚಂದನವನದ ಇತಿಹಾಸದಲ್ಲಿ ಮೊದಲ ೨೫ ದಿನಗಳಲ್ಲಿ ಅತಿ ಹೆಚ್ಚು ಮೊತ್ತವನ್ನು ಗಳಿಸಿದ ಸಿನಿಮಾ ಎಂಬ ಮುನ್ನುಡಿಯನ್ನು ಬರೆಯಿತು. ಈ ಸಿನಿಮಾ ತನ್ನ ಎಲ್ಲಾ ಮೂಲಗಳಿಂದ ೫೪ ಕೋಟಿ ಗಳಿಸಿತು

ಉಲ್ಲೇಖನಗಳು

[ಬದಲಾಯಿಸಿ]
  1. "ಭಜರಂಗಿ ಚಲನಚಿತ್ರ". Archived from the original on 2015-09-07. Retrieved 2017-02-03.